ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಸುದ್ದಿಗಳು News

Posted by vidyamaana on 2024-07-24 19:54:18 |

Share: | | | | |


ಶಿರೂರು ಗುಡ್ಡ ಕುಸಿತ ಪ್ರಕರಣ : ನಾಪತ್ತೆಯಾಗಿದ್ದ ಲಾರಿ ಪತ್ತೆ, ಚಾಲಕ ಅರ್ಜುನನಿಗೆ ಮುಂದುವರೆದ ಶೋಧ ಕಾರ್ಯ!

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ.

ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಲಾರಿ ಪತ್ತೆಯಾದ ಸ್ಥಳಕ್ಕೆ ಡಿಸಿ ಲಕ್ಷ್ಮಿಪ್ರಿಯ ಭೇಟಿ ನೀಡಿದ್ದಾರೆ. ಕಾರವಾರದ ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣದ ಬಗ್ಗೆ ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ

 Share: | | | | |


ಪಕ್ಷ ಬದಿಗಿಟ್ಟು ಪದ್ಮರಾಜ್, ಕೋಟ, ಗೀತಾರನ್ನು ಗೆಲ್ಲಿಸುವ: ಸತ್ಯಜಿತ್ ಸುರತ್ಕಲ್

Posted by Vidyamaana on 2024-04-01 19:50:03 |

Share: | | | | |


ಪಕ್ಷ ಬದಿಗಿಟ್ಟು ಪದ್ಮರಾಜ್, ಕೋಟ, ಗೀತಾರನ್ನು ಗೆಲ್ಲಿಸುವ: ಸತ್ಯಜಿತ್ ಸುರತ್ಕಲ್

ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದ.ಕನ್ನಡದಲ್ಲಿ ಪದ್ಮರಾಜ್, ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ ಕುಮಾರ್ ಅವರನ್ನು ನಾರಾಯಣಗುರು ವಿಚಾರ ವೇದಿಕೆ ಬೆಂಬಲಿಸಲಿದೆ ಎಂದು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ ಅವರಿಗೆ ಪಿಡ್ಸ್ ಇಲ್ಲ - ಆರೋಗ್ಯ ಸ್ಥಿರವಾಗಿದೆ: ವೈದ್ಯೆ ಡಾ.ಅಸೀಮಾ ಬಾನು

Posted by Vidyamaana on 2023-09-15 15:35:48 |

Share: | | | | |


ಚೈತ್ರಾ ಕುಂದಾಪುರ ಅವರಿಗೆ ಪಿಡ್ಸ್ ಇಲ್ಲ - ಆರೋಗ್ಯ ಸ್ಥಿರವಾಗಿದೆ: ವೈದ್ಯೆ ಡಾ.ಅಸೀಮಾ ಬಾನು

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಅವರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾಗಲೇ ಬಾಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದರು. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚೈತ್ರಾ ಅವರಿಗೆ ಪಿಡ್ಸ್ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.



ಚೈತ್ರಾ ಕುಂದಾಪುರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆ ವೈದ್ಯೆ ಡಾ.ಅಸೀಮಾ ಬಾನು, ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಚೈತ್ರಾ ಕುಂದಾಪುರ ಸಿಟಿ ಸ್ಕ್ಯಾನ್, ಇಸಿಜಿ ರಿಪೋರ್ಟ್ ನಾರ್ಮಲ್ ಇದೆ. ಚೈತ್ರಾ ಕುಂದಾಪುರಗೆ ನಡೆಸಿದ ಎಲ್ಲಾ ಟೆಸ್ಟ್ ನಲ್ಲೂ ನಾರ್ಮಲ್ ಇದೆ. ಅವರನ್ನು ಆಸ್ಪತ್ರೆಗೆ ಕರೆತಂದಾಗ ಮೂರ್ಛೆ ರೋಗ ಇರಲಿಲ್ಲ. ಸದ್ಯ ಐಸಿಯುನಲ್ಲಿ ಚೈತ್ರಾ ಕುಂದಾಪುರಗೆ ಚಿಕಿತ್ಸೆ ಮುಂದುವರಿಸಿದ್ದೇವೆ ಎಂದರು.

ಅಸ್ಸಾಂ ವಿಧಾನಸಭೆ ಶುಕ್ರವಾರ 2 ಗಂಟೆಗಳ ನಮಾಝ್ ವಿರಾಮ ರದ್ದು: ಸಿಎಂ ಹಿಮಂತ ಬಿಸ್ವಾ ಶರ್ಮಾ

Posted by Vidyamaana on 2024-08-30 21:38:37 |

Share: | | | | |


ಅಸ್ಸಾಂ ವಿಧಾನಸಭೆ ಶುಕ್ರವಾರ 2 ಗಂಟೆಗಳ ನಮಾಝ್ ವಿರಾಮ ರದ್ದು: ಸಿಎಂ ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ಶುಕ್ರವಾರದಂದು ಎರಡು ಗಂಟೆಗಳ ನಮಾಝ್ ವಿರಾಮವನ್ನು ರದ್ದುಗೊಳಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಅಸ್ಸಾಂ ವಿಧಾನಸಭೆಯಲ್ಲಿ ಶುಕ್ರವಾರ ಘೋಷಿಸಿದ್ದಾರೆ.

ತಾಳಿ ಕಟ್ಟುವ ವೇಳೆ ನನಗೆ ಮದುವೆ ಬೇಡ ಎಂದು ಹಸೆಮಣೆಯಿಂದ ಮೇಲೆದ್ದ ವಧು ದಿವ್ಯಾ

Posted by Vidyamaana on 2023-08-27 12:54:47 |

Share: | | | | |


ತಾಳಿ ಕಟ್ಟುವ ವೇಳೆ ನನಗೆ ಮದುವೆ ಬೇಡ  ಎಂದು ಹಸೆಮಣೆಯಿಂದ ಮೇಲೆದ್ದ ವಧು ದಿವ್ಯಾ

ತುಮಕೂರು: ಮದುವೆ ನಡೆಯುತ್ತಿದ್ದ ವೇಳೆ ವರ ವಧುವಿಗೆ ತಾಳಿ ಕಟ್ಟುವ ಸಂದರ್ಭದಲ್ಲಿ ವಧು ನನಗೆ ಮದುವೆ ಬೇಡ ಎಂದು ಹಸೆಮಣೆಯಿಂದ  ಮೇಲೆದ್ದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಕೋಳಾಲ ಗ್ರಾಮದಲ್ಲಿ ಆ.27ರ ಭಾನುವಾರ ನಡೆದಿದೆ.ಸಾಲಾ ಸೋಲಾ ಮಾಡಿ ಮದುವೆಯ ಸಿದ್ಧತೆ ಮಾಡಿ ನೆಂಟರಿಷ್ಟರು, ಬಂಧು ಬಳಗ  ಎಲ್ಲಾ ಸೇರಿ ಕಳೆದ ರಾತ್ರಿಯಿಂದ ಆರತಕ್ಷತೆ, ಮದುವೆಯ ವಿವಿಧ ಶಾಸ್ತ್ರಗಳು ಸರಗಾವಾಗಿ ನಡೆದಿದ್ದು ಭಾನುವಾರ  ಬೆಳಗ್ಗೆ ಮದುವೆಯ ಮಂಟಪದಲ್ಲಿ ವರ ವಧುವಿಗೆ ಮಾಂಗಲ್ಯ ಧಾರಣೆ ಮಾಡುವ ವೇಳೆ ನನಗೆ ಈ ಮದುವೆಯೇ ಬೇಡ ಎಂದು ವಧು ಮದುವೆ ಮಂಟಪದಿಂದ ಹೊರ ನಡೆದಿದ್ದಾರೆ.


ತಾಳಿ ಕಟ್ಟೋ ವೇಳೆ ಹಸೆ‌ಮಣೆಯಿಂದ ವಧು ಎದ್ದು ಹೊರನಡೆದ ಹಿನ್ನೆಲೆ ಮದುವೆ ಅರ್ಧಕ್ಕೆ ಮುರಿದು ಬಿದ್ದಿದೆ ಮದುವೆ.


ಮದುವೆ ಬೇಡ ಎಂದು ಮೇಲೆದ್ದ ವಧು ದಿವ್ಯಾ


ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಹೀಗಾಗಿ ಮದುವೆ ಬೇಡ ಎಂದು ವಧು ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಕೋಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಈ ಘಟನೆ ನಡೆದಿದೆ.



ರಾತ್ರಿ ರಿಸೆಪ್ಷನ್ ನಲ್ಲಿ ಹುಡುಗ ವೆಂಕಟೇಶ್ ನೊಂದಿಗೆ ದಿವ್ಯ ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಭಾನುವಾರ ವೆಂಕಟೇಶ್ ಎಂಬವರ ಜೊತೆ ದಿವ್ಯ ಮದುವೆ ನಡೆಯುತ್ತಿದ್ದು, ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ದಿವ್ಯಾ ಹೇಳಿದ್ದಾರೆ.


ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು  ಗೋವಿಂದರಾಜು ಪುತ್ರ ವೆಂಕಟೇಶ್ ಅವರ ವಿವಾಹ ಸಮಾರಂಭವು ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಂಜನಮ್ಮ ನರಸಿಂಹಮೂರ್ತಿ ಪುತ್ರಿ ದಿವ್ಯಾ ನಡುವೆ ಮದುವೆ ನಡೆಯುತ್ತಿತ್ತು.


ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿದೆ. ಎರಡು ಕಡೆಯವರಿಂದ ಮಾತಿನ ಚಕಮಕಿ ನಡೆದಿದ್ದು, ಕೋಳಾಲ‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಹುಡುಗನ ಕಡೆಯವರಿಂದ ಆಕ್ರೋಶ  ವ್ಯಕ್ತವಾಗಿದೆ. ಹುಡುಗಿ ಬೇರೆಯವರನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಗೊತ್ತಿದ್ದರೂ ಪೋಷಕರು ಈ ಮದುವೆ ನಿಶ್ಚಯ ಮಾಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಝೊಹರಾ ನಾಪತ್ತೆ

Posted by Vidyamaana on 2024-07-19 14:20:32 |

Share: | | | | |


ಝೊಹರಾ ನಾಪತ್ತೆ

ಬಜ್ಪೆ, ಜು.19: ಆಧಾರ್ ಕಾರ್ಡ್ ತಿದ್ದುಪಡಿಗೆಂದು ಮನೆಯಿಂದ ಹೊರಟಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಜ್ಪೆ ಕಿನ್ನಿಕಂಬಳ ಮೂಡುಪೆರಾರ ನಿವಾಸಿ ಉಸ್ಮಾನ್ ಎಂಬವರ ಪತ್ನಿ ಫಾತಿಮಾ ಝೊಹರಾ(43) ನಾಪತ್ತೆಯಾದವರು.

ಪುತ್ತೂರು : ಕೆಮ್ಮಾಯಿ ಬಳಿ ಬೈಕ್ ಅಪಘಾತ

Posted by Vidyamaana on 2023-07-23 15:25:03 |

Share: | | | | |


ಪುತ್ತೂರು : ಕೆಮ್ಮಾಯಿ ಬಳಿ ಬೈಕ್ ಅಪಘಾತ

ಪುತ್ತೂರು : ಬೈಕ್ ಅಪಘಾತವಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.


ಸೇಡಿಯಾಪು ನಿವಾಸಿ ಚೈತ್ರೇಶ್ ಯಾನೆ ಚರಣ್ (19) ಮೃತ ಬೈಕ್ ಸವಾರ.ಕೆಮ್ಮಾಯಿ ಪೆಟ್ರೋಲ್ ಬಂಕ್ ಬಳಿ ಬೈಕ್ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.


ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.ಟರ್ನ್ ಮಾಡುವ ವೇಳೆ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

Recent News


Leave a Comment: