ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ರೆಸ್ಕ್ಯೂ ಇಂಡಿಯಾ ರಾಷ್ಟ್ರಮಟ್ಟದ 18ನೇ ಜೀವರಕ್ಷಕ ಈಜು ಪಂದ್ಯಾಟ ಲಿಖಿತ್ ರಾಮಚಂದ್ರಗೆ 4 ಚಿನ್ನ 1 ಬೆಳ್ಳಿ ಪದಕ

Posted by Vidyamaana on 2023-06-12 23:16:21 |

Share: | | | | |


ರೆಸ್ಕ್ಯೂ ಇಂಡಿಯಾ ರಾಷ್ಟ್ರಮಟ್ಟದ 18ನೇ ಜೀವರಕ್ಷಕ ಈಜು ಪಂದ್ಯಾಟ ಲಿಖಿತ್ ರಾಮಚಂದ್ರಗೆ 4 ಚಿನ್ನ 1 ಬೆಳ್ಳಿ ಪದಕ

ಪುತ್ತೂರು: ಬೆಂಗಳೂರಿನ ವಿಲನ್ ಗಾರ್ಡನ್‌ನಲ್ಲಿರುವ ರೇ-ಸೆಂಟರ್ ಈಜುಕೊಳದಲ್ಲಿ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ರೆಸ್ಕ್ಯೂಇಂಡಿಯಾ-2023 ಹೆಸರಿನಲ್ಲಿ ನಡೆದ ರಾಷ್ಟ್ರಮಟ್ಟದ 18ನೇ ರಾಷ್ಟ್ರೀಯ ಜೀವರಕ್ಷಕ ಈಜು ಪಂದ್ಯಾಟದಲ್ಲಿ ಲಿಖಿತ್ ರಾಮಚಂದ್ರ ಭಾಗವಹಿಸಿ 4 ಚಿನ್ನ ಮತ್ತು 1 ಬೆಳ್ಳಿ ಪದಕವನ್ನು ಪಡೆದಿರುತ್ತಾರೆ.

ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲಾ 7ನೇ ತರಗತಿ ವಿದ್ಯಾರ್ಥಿಯಾಗಿರುವ, ಇಲ್ಲಿನ ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನದ ಈಜುಕೊಳದಲ್ಲಿ ಈಜು ತರಬೇತುದಾರರಾದ ಪಾರ್ಥ ವಾರಣಾಸಿಯವರ ನಿರ್ದೇಶನದಲ್ಲಿ ಜೀವ ರಕ್ಷಕ ಈಜು ತರಬೇತುದಾರ ರೋಹಿತ್ ರವರಿಂದ ಜೀವರಕ್ಷಕ ಈಜು ಮತ್ತುದೀಕ್ಷಿತ್ ಇಮಂದ ಕಳೆದ 8 ವರ್ಷಗಳಿಂದ ಇವರು ಈಜು ತರಬೇತಿ ಪಡೆಯುತ್ತಿದ್ದಾರೆ.

ವೈಯುಕ್ತಿಕ ಪ೦ದ್ಯಾಟಗಳಾದ 100ಮೀ ಟೊ ಎಫ್ ಫಿನ್ಸ್‌ನಲ್ಲಿ ಚಿನ್ನದ ಪದಕ, 50ಮೀ ಮ್ಯಾನಿಕನ್ ಕ್ಯಾರಿನಲ್ಲಿ ಚಿನ್ನದ ಪದಕ, 50ಮೀ ಫ್ರೀ ಸ್ಟೈಲ್ ಎಫ್ ಫಿನ್ಸ್‌ನಲ್ಲಿ ಬೆಳ್ಳಿ ಪದಕ, ಕರ್ನಾಟಕ ಟೀಮ್ ನಲ್ಲಿ 4x50 ಮೀ ಮೆತ್ತೆ ರಿಲೇ ಯಲ್ಲಿ ಚಿನ್ನದ ಪದಕ, 4x50 ಮೀ ಮಿಕ್ಸ್‌ಡ್ ರಿಲೇಯಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಇವರು ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ. ಮತ್ತು ದರ್ಬೆ ದೀಪ ಬ್ಯೂಟಿಪಾರ್ಲರ್ ಮಾಲಕಿ ದೀಪಾ ದಂಪತಿ ಪುತ್ರ,

ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ ಆಫ್ ಇಂಡಿಯಾ ಮತ್ತು ಇಂಟರ್ನಾಷನಲ್ ಲೈಫ್ ಸೇವಿಂಗ್ ವತಿಯಿಂದ ಈ ಸ್ಪರ್ಧೆ ಆಯೋಜಿಸಲಾಗಿದ್ದು ಇಟಲಿಯ ಜೀವರಕ್ಷಕ ಈಜು ತರಬೇತುದಾರರಾದ ಲೊರೆಂಝೇ ಬರೇಲಿ ಇವರು ಮುಖ್ಯ ತೀರ್ಪುಗಾರರಾಗಿದ್ದರು. ಪುತ್ತೂರು ಅಕ್ವಾಟಕ ಕ್ಲಬ್ ನ ಜೀವರಶಕ ಈಜು ತರಬೇತುದಾರರಾದ ರೋಹಿತ್‌ ಪಿ ಈ ಪಂದ್ಯಾಟದಲ್ಲಿ ತೀರ್ಪುಗಾರರಾಗಿದ್ದರು.

BIGG NEWS:ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ

Posted by Vidyamaana on 2024-05-18 15:10:08 |

Share: | | | | |


BIGG NEWS:ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ

ಕಾರವಾರ: ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ ನೀಡಿದ್ದಾರೆ. ಮೆಣಸಿನಪುಡಿಗೆ ಬಳಸುವ ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಕಂಡು ಬಂದಿದೆ. ಮಸಲಾ ಪದಾರ್ಥದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಕೇವಲ ಶೇ.0.01ರಷ್ಟು ಇರಬೇಕು.ಆದರೆ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿದ್ದು ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿರುವ ಹಿನ್ನಲೆಯಲ್ಲಿ ಇದರ ಬಳಕೆಯನ್ನು ಕೂಡಲೇ ನಿಲ್ಲಿಸುವಂತೆ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಮನವಿ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ದುಡ್ಡಲ್ಲಿ ಮೊಬೈಲ್ ಖರೀದಿಸಿದ ಹಾವೇರಿಯ ಮಹಿಳೆ

Posted by Vidyamaana on 2024-04-29 14:57:20 |

Share: | | | | |


ಗೃಹಲಕ್ಷ್ಮಿ ಯೋಜನೆ ದುಡ್ಡಲ್ಲಿ ಮೊಬೈಲ್ ಖರೀದಿಸಿದ ಹಾವೇರಿಯ ಮಹಿಳೆ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಮಹಿಳೆಯೊಬ್ಬರು ಮೊಬೈಲ್ ಖರೀದಿಸಿದ್ದು, ವಾಲ್ಪೇಪರ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೋಟೋ ಹಾಕಿಕೊಂಡು ಸಂತಸ ವ್ಯಕ್ತಪಡಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ಥಕತೆಯ ಮನೋಭಾವ ವ್ಯಕ್ತಪಡಿಸಿದ್ದಾರೆ.

ಹಾವೇರಿ ಕಾಂಗ್ರೆಸ್ ಸಮಾವೇಶದಲ್ಲಿ ಮಹಿಳೆಯೊಬ್ಬರು ತಾವು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ಕೂಡಿಟ್ಟು ಮೊಬೈಲ್ ಖರೀದಿ ಮಾಡಿರುವುದಾಗಿ ಹೇಳಿಕೊಂಡಿದ್ದು, ಮೊಬೈಲ್ ವಾಲ್ ಪೇಪರ್ ನಲ್ಲಿ ಸಿಎಂ ಹಾಕಿಕೊಂಡಿರುವುದನ್ನು ತೋರಿಸಿದ್ದಾರೆ. ಈ ಕುರಿತ ಫೋಟೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ

ಜಯ ಗಳಿಸುತ್ತೀರಿ ಎಂದು ಅಶೋಕ್ ರೈಗೆ ಹಾರೈಸಿದ್ದ ಉಸ್ತಾದ್

Posted by Vidyamaana on 2023-05-16 12:41:12 |

Share: | | | | |


ಜಯ ಗಳಿಸುತ್ತೀರಿ ಎಂದು ಅಶೋಕ್ ರೈಗೆ ಹಾರೈಸಿದ್ದ ಉಸ್ತಾದ್

      ನೀವು ಚುನಾವಣೆಯಲ್ಲಿ ಜಯ ಗಳಿಸುತ್ತೀರಿ ಎಂದು ಅಶೋಕ್ ಕುಮಾರ್ ರೈ ಅವರಿಗೆ ಹಾರೈಸಿ, ಭವಿಷ್ಯ ನುಡಿದಿದ್ದ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ಅವರಿಗೆ ಅಶೋಕ್ ಕುಮಾರ್ ರೈ ಅವರ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಆಗಲೇ ಇಲ್ಲ.ಮಲೇಷಿಯಾದ ದೊರೆಗೆ ರಾಜಗುರುವಿನಂತಿದ್ದವರು. ಸಿಂಗಾಪುರ, ದುಬೈ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಆಧ್ಯಾತ್ಮಿಕ ಸಭೆ ನಡೆಸಿದ ಮೇರು ವ್ಯಕ್ತಿತ್ವದ ಹಿರಿಯ ವಿದ್ವಾಂಸ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ.

     ದೇಶ – ವಿದೇಶಗಳಲ್ಲಿ ಖ್ಯಾತರಾದ ಇವರು ಪುತ್ತೂರಿನ ಕಬಕ ನಿವಾಸಿ. ತನ್ನ 61ನೇ ಇಳಿ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಹೀಗೆ ನಮ್ಮೆಲ್ಲರನ್ನು ಅಗಲುವ ಮುನ್ನ, ವಿಸ್ಮಯವೊಂದಕ್ಕೆ ನಿದರ್ಶನ ನೀಡಿಯೇ ಹೊರಟು ಹೋದರು - ಅದು ಅಶೋಕ್ ಕುಮಾರ್ ರೈ ಅವರ ಗೆಲುವು.

ಏಪ್ರಿಲ್ 27 ರಂದು ಅಶೋಕ್ ಕುಮಾರ್ ರೈ ಅವರು ಉಸ್ತಾದ್ ಅವರ ಆಶೀರ್ವಾದ ಪಡೆದಿದ್ದರು. ಮೇ 3 ರಂದು ಮೌಲಾನಾ ಅಬ್ದುಲ್ ರಝಾಕ್ ಹಾಜಿ  ಅವರು ಇಹಲೋಕ ತ್ಯಜಿಸಿದರು. ಅಶೋಕ್ ರೈ ಗೆಲುವಿಗೆ ಹಾರೈಸಿ, ತನಗೇನು ಗೊತ್ತೇ ಇಲ್ಲ ಎಂಬಂತೆ ಹೊರಟು ಹೋದರು. ನಿಷ್ಕಲ್ಮಶ, ನಿಷ್ಕಪಟ ಮನಸ್ಸಿನ ಉಸ್ತಾದ್ ಅವರು ಸಮಾಜಕ್ಕೆ ಆದರ್ಶ ಹಾಗೂ ಮಾದರಿ ಪುರುಷ.

ಹಾಗೆ ನೋಡಿದರೆ ಅಶೋಕ್ ಕುಮಾರ್ ರೈ ಅವರ ಗೆಲುವು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಲಭದ ತುತ್ತಾಗಿರಲಿಲ್ಲ. ಟಿಕೇಟ್ ಪಡೆದುಕೊಳ್ಳುವುದೋ, ಸಾಧ್ಯವೇ ಇಲ್ಲದ ಮಾತು. ಪ್ರಬಲ ಪೈಪೋಟಿ, ಬಿಜೆಪಿಯಿಂದ ಬಂದವರು ಎಂಬ ವಕ್ರದೃಷ್ಟಿಯ ನಡುವೆಯೇ ಟಿಕೇಟ್ ಗಿಟ್ಟಿಸಿಯೇ ಬಿಟ್ಟರು. ಅಷ್ಟರಲ್ಲಿ ಚುನಾವಣೆಯೂ ಘೋಷಣೆಯಾಗಿತ್ತು. ಬಿಜೆಪಿಯೊಳಗೇ ಅಸಮಾಧಾನದ ಕಿಚ್ಚು ಹೊಗೆಯಾಡತೊಡಗಿತು. ಇದು ಅಶೋಕ್ ಕುಮಾರ್ ರೈ ಅವರಿಗೆ ವರದಾನವಾಯಿತು. ಹಿಂದಿನ ಅವಧಿಗಿಂತ ಕಡಿಮೆ ಮತ, ಪಕ್ಷೇತರ ಅಭ್ಯರ್ಥಿಯ ಟೈಟ್ ಪೈಟ್ ನಡುವೆ ಜಯಭೇರಿ ಬಾರಿಸಿಯೇ ಬಿಟ್ಟರು. ಅಂದರೆ ಟಿಕೇಟ್ ಪಡೆದುಕೊಳ್ಳುವುದರಿಂದ ಹಿಡಿದು ಗೆಲ್ಲುವವರೆಗಿನ ಎಡರು – ತೊಡರುಗಳನ್ನು ಅಶೋಕ್ ರೈ ಅವರು ದಾಟಿಕೊಂಡು, ಜಯಿಸಿಕೊಂಡೇ ಬಂದರು. ಆದರೆ ದುರಾದೃಷ್ಟ ನೋಡಿ, ಅವರ ಗೆಲುವಿನ ವಿಜಯೋತ್ಸವ ನೋಡಲು ಉಸ್ತಾದರೇ ಇಲ್ಲದಾದರು.

ಕೊಡುಗೈ ದಾನಿಯಾಗಿ, ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ಅವರು, ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿಯ ಗೌರವಾಧ್ಯಕ್ಷರಾಗಿ, 10 ವರ್ಷ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎನ್ನುವುದು ಸ್ಮರಣಾರ್ಹ.

ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರಿಗೆ ನಡೆಯುವ ಮನೆ ಮತಧಾನದ ದಿನಾಂಕ ಬದಲು ಇಲ್ಲಿದೆ ಬದಲಾದ ದಿನಾಂಕ

Posted by Vidyamaana on 2024-04-13 13:43:08 |

Share: | | | | |


ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರಿಗೆ ನಡೆಯುವ ಮನೆ ಮತಧಾನದ ದಿನಾಂಕ ಬದಲು ಇಲ್ಲಿದೆ ಬದಲಾದ ದಿನಾಂಕ

ಪುತ್ತೂರು: ಹಿರಿಯ ನಾಗರೀಕರಿಗೆ ಹಾಗೂ ಅಂಗವಿಕಲರಿಗೆ ನಡೆಯುವ ಮನೆ ಮತಧಾನ ಪ್ರಕ್ರಿಯೆ ಏ.೧೪ರಂದು ಸೌರ ಯುಗಾದಿ (ವಿಷು ಹಬ್ಬ) ಇರುವ ಹಿನ್ನಲೆಯಲ್ಲಿ ಏ.೧೪ರ ಬದಲಾಗಿ ಏ.೧೫ರಂದು ಪ್ರಾರಂಭವಾಗಿ, ೧೭ರವರೆಗೆ ನಡೆಯಲಿದೆ. 

ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜೂನ್ 17) ವಿದ್ಯುತ್ ನಿಲುಗಡೆ

Posted by Vidyamaana on 2023-06-16 23:14:10 |

Share: | | | | |


ಮೆಸ್ಕಾಂ ತುರ್ತು ಕಾಮಗಾರಿ: ಇಂದು (ಜೂನ್ 17) ವಿದ್ಯುತ್ ನಿಲುಗಡೆ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಕಬಕ, ಕೆದಿಲ ಮತ್ತು ನಗರ ಫೀಡರ್‌ನಲ್ಲಿ ಜೂ.17ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 2ರ ವರೆಗೆ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆ.ವಿ ಮತ್ತೂರು ವಿದ್ಯುತ್‌ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್‌ ಸರಬರಾಜಾಗುವ ನಗರ, ಕಬಕ, ಕೊಡಿಪ್ಪಾಡಿ, ಬನ್ನೂರು, ಬಲ್ನಾಡು, ನವನಗರ, ವಿವೇಕಾನಂದ ಕಾಲೇಜು ಪರಿಸರ, ಪಡ್ಡಾಯೂರು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ, ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Recent News


Leave a Comment: