ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಬೆಂಗಳೂರಲ್ಲಿ ಸ್ಪಾ ಹೆಸರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿ : ಮಾಲೀಕನ ಬಂಧನ

Posted by Vidyamaana on 2024-01-07 10:56:52 |

Share: | | | | |


ಬೆಂಗಳೂರಲ್ಲಿ ಸ್ಪಾ ಹೆಸರಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ದಾಳಿ : ಮಾಲೀಕನ ಬಂಧನ

ಬೆಂಗಳೂರು : ಬೆಂಗಳೂರು ನಗರದ ಓಲ್ಡ್ ಮದ್ರಾಸ್ ರಸ್ತೆಯ ಬಹುಮಹಡಿ ಕಟ್ಟಡದಲ್ಲಿರುವ ನಿರ್ವಾಣ ಸ್ಪಾ ಮೇಲೇ ಸಿಸಿಬಿ ದಾಳಿ ನಡೆಸಿದ್ದರಿಂದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.ಸ್ಪಾ ಮಾಲೀಕ ಅನೀಲ್ ಎಂದು ಹೇಳಲಾಗುತ್ತಿದ್ದು, ಬೇರೆ ರಾಜ್ಯದಿಂದ ಆಗಮಿಸಿ ಇಲ್ಲಿ ಸ್ಪಾ ನಡೆಸುತ್ತಿದ್ದ, ಆದರೆ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದದ್ದು ಬಯಲಾಗಿದೆ.ಆರೋಪಿಯೂ ಹೊರ ರಾಜ್ಯ ವಿದೇಶದ ಯುವತಿಯರನ್ನು ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗುತ್ತಿದೆ.


ಸಿಸಿಬಿ ಮಹಿಳಾ ಸಂರಕ್ಷಣಾ ದಳವು ದಾಳಿ ನಡೆಸಿದ ವೇಳೆ ಒಟ್ಟು 44 ಮಹಿಳೆಯರನ್ನು ಕ್ಷಣೆ ಮಾಡಲಾಗಿದ್ದು 34 ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಹುಮಡಿ ಕಟ್ಟಡದ 1 ಮತ್ತು 6ನೇ ಫ್ಲೋರ್ ನಲ್ಲಿ ಈ ದಂದೆ ನಡೆಯುತ್ತಿತ್ತು.


ಹೊರ ರಾಜ್ಯ ಹಾಗೂ ದೇಶದಿಂದ ಯುವತಿಯರನ್ನು ಕರೆದೊಯ್ದು ಆರೋಪಿ ವೇಶ್ಯಾವಾಟಿಕೆಯಲ್ಲಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದು ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BREAKING: ಹೆಚ್‌.ಡಿ ರೇವಣ್ಣ ಗೆ ಬಿಗ್ ಶಾಕ್: ಮೇ.8ರವರೆಗೆ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

Posted by Vidyamaana on 2024-05-05 20:55:30 |

Share: | | | | |


BREAKING: ಹೆಚ್‌.ಡಿ ರೇವಣ್ಣ ಗೆ ಬಿಗ್ ಶಾಕ್: ಮೇ.8ರವರೆಗೆ SIT ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಬೆಂಗಳೂರು : ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಬಿಗ್ ಶಾಕ್ ಅನ್ನು ಕೋರ್ಟ್ ನೀಡಿದೆ. ಅವರನ್ನು ಮೇ.8ರವರೆಗೆ 3 ದಿನಗಳ ಕಾಲ ಎಸ್‌ಐಟಿ ವಶಕ್ಕೆ ಹೆಚ್ಚಿನ ವಿಚಾರಣೆ ನಡೆಸೋದಕ್ಕೆ ನೀಡಿ, ಕೋರ್ಟ್ ಆದೇಶಿಸಿದೆಇಂದು ಬೌರಿಂಗ್ ಆಸ್ಪತ್ರೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರಿಗೆ ಆರೋಗ್ಯ ತಪಾಸಣೆ ನಡೆಸಿದ ಬಳಿಕ, ಕೋರಮಂಗಲದಲ್ಲಿರುವಂತ 17ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ. 6ರಂದು ದೇವರ ಪ್ರತಿಷ್ಠಾ ವಾರ್ಷಿಕೋತ್ಸವ

Posted by Vidyamaana on 2024-05-05 16:14:09 |

Share: | | | | |


ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ. 6ರಂದು ದೇವರ ಪ್ರತಿಷ್ಠಾ ವಾರ್ಷಿಕೋತ್ಸವ

ಪುತ್ತೂರು: 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ. 6ರಂದು ನಡೆಯಲಿರುವ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಮೇ. 5ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆ ಮತ್ತು ತುಲಾಭಾರ ಸೇವೆ ನಡೆಯಿತು.‌ ಮೇ. 5ರಂದು ಬೆಳಿಗ್ಗೆ ದೇವಳದಲ್ಲಿ ನಿತ್ಯ ಮಹಾಪೂಜೆ ನಡೆಯಿತು. ನಂತರ ಶಾಂತಿನಗರ ಪೂಜಾ ಮೈದಾನದಿಂದ ಭಜನೆಯೊಂದಿಗೆ ಮೆರವಣಿಗೆ ಮೂಲಕ ಸಾಗಿ ದೇವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಿಸಲಾಯಿತು. ಬಳಿಕ ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ ವಿತರಣೆ ನಡೆಯಿತು. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ, ನಿಕಟಪೂರ್ವ ಆಡಳಿತ ಮೊಕ್ತೇಸರ ಯು‌.ಜಿ.ರಾಧ, ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಸಹಿತ ಹಲವರು ಭಾಗವಹಿಸಿದ್ದರು.‌ 

ಸುಳ್ಯ ; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು ಮೂಲದ ವಸಂತ ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ

Posted by Vidyamaana on 2024-02-07 15:51:50 |

Share: | | | | |


ಸುಳ್ಯ ; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುತ್ತೂರು ಮೂಲದ ವಸಂತ ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಸುಳ್ಯ, ಫೆ 07: ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಿಗ್ಗೆ ಸುಳ್ಯದಲ್ಲಿ ಸಂಭವಿಸಿದೆ.


ಪುತ್ತೂರು ತಿಂಗಳಾಡಿಯ ವಸಂತ ಆತ್ಮಹತ್ಯೆಗೈದ ವ್ಯಕ್ತಿ. ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗಾಗಿ ದಾಖಲಾಗಿದ್ದ ಇವರು, ಇಂದು ಮುಂಜಾನೆ ಆರು ಗಂಟೆಗೆ ಆಸ್ಪತ್ರೆಯ ಕಟ್ಟಡದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಇವರು ಪಿಟ್ಸ್ ರೋಗಿಯಾಗಿದ್ದರು ಎಂದು ತಿಳಿದುಬಂದಿದೆ.


ಮೃತರು ಪತ್ನಿ, ಒರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಎದೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಉತ್ತಪ್ಪ ಆತ್ಮಹತ್ಯೆ

Posted by Vidyamaana on 2024-01-04 12:08:49 |

Share: | | | | |


ಎದೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಉತ್ತಪ್ಪ ಆತ್ಮಹತ್ಯೆ

ಬೆಂಗಳೂರು, ಜ.4: ಎದೆಗೆ ಗುಂಡು ಹಾರಿಸಿಕೊಂಡು ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭವಾನಿ ನಗರದಲ್ಲಿ ನಡೆದಿರುವುದು ವರದಿಯಾಗಿದೆ.

ಕೊಡಗು ಮೂಲದ ತಮ್ಮಯ್ಯ ಎಂಬವರ ಪುತ್ರ ವಿಶು ಉತ್ತಪ್ಪ(19) ಆತ್ಮಹತ್ಯೆ ಮಾಡಿಕೊಂಡ .  ಬಿಇ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದರು.


ಖಾಸಗಿ ಕಂಪೆನಿಯೊಂದರಲ್ಲಿ ಭದ್ರತಾ 3 ಸಿಬ್ಬಂದಿಯಾಗಿರುವ ತಂದೆಯ ಗನ್ನಿಂದ ಎದೆಭಾಗಕ್ಕೆ ಗುಂಡು ಹಾರಿಸಿಕೊಂಡು ವಿಶು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ವಿಶು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.


ತಮ್ಮಯ್ಯರ ಕುಟುಂಬ ಕಳೆದ 15 ವರ್ಷಗಳಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿ ನಗರದಲ್ಲಿ ವಾಸವಿದೆ.


ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಪುತ್ತೂರು ವಕೀಲರ ಸಂಘದ ಚುನಾವಣೆ: ಅಧ್ಯಕ್ಷ,ಜಿ.ಜಗನ್ನಾಥ ರೈ ಉಪಾಧ್ಯಕ್ಷ, ಮೋನಪ್ಪ ಎಂ.ಅಳಿಕೆ, ಕಾರ್ಯದರ್ಶಿ ಚಿನ್ಮಯ್ ರೈ,ಕೋಶಾಧಿಕಾರಿಮಹೇಶ್ ಕೆ. ಸವಣೂರು ಆಯ್ಕೆ

Posted by Vidyamaana on 2024-04-06 18:42:37 |

Share: | | | | |


ಪುತ್ತೂರು ವಕೀಲರ ಸಂಘದ ಚುನಾವಣೆ: ಅಧ್ಯಕ್ಷ,ಜಿ.ಜಗನ್ನಾಥ ರೈ  ಉಪಾಧ್ಯಕ್ಷ, ಮೋನಪ್ಪ ಎಂ.ಅಳಿಕೆ, ಕಾರ್ಯದರ್ಶಿ ಚಿನ್ಮಯ್ ರೈ,ಕೋಶಾಧಿಕಾರಿಮಹೇಶ್ ಕೆ. ಸವಣೂರು ಆಯ್ಕೆ

ಪುತ್ತೂರು :ಏ 6 : ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ ಜಿ.ಜಗನ್ನಾಥ ರೈ  ಅವರು ಚುನಾಯಿತರಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಮೋನಪ್ಪ ಎಂ.ಅಳಿಕೆ, ಕಾರ್ಯದರ್ಶಿಯಾಗಿ ಚಿನ್ಮಯ್ ರೈ(ಅವಿರೋಧ ), ಜೊತೆ ಕಾರ್ಯದರ್ಶಿಯಾಗಿ ಮಮತಾ ಸುವರ್ಣ ಹಾಗೂ ಕೋಶಾಧಿಕಾರಿಯಾಗಿ ಮಹೇಶ್ ಕೆ. ಸವಣೂರು  ಚುನಾಯಿತರಾಗಿದ್ದಾರೆ.

ಏ 6ರಂದು ಪುತ್ತೂರು ವಕೀಲರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು . ಬೆಳಿಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ಚುನಾವಣೆ ನಡೆದು ಬಳಿಕ ಮತ ಎಣಿಕೆ ನಡೆದಿತ್ತು.



Leave a Comment: