ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಸುದ್ದಿಗಳು News

Posted by vidyamaana on 2024-07-25 09:34:49 |

Share: | | | | |


ಪಿಜಿ ಯುವತಿಯ ಬರ್ಬರ ಹತ್ಯೆ ಕೇಸ್‌ಗೆ ಟ್ವಿಸ್ಟ್

ಬೆಂಗಳೂರು : ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದ್ದು, ಈ ಬಗ್ಗೆ ಪೊಲೀಸರು ಮಹತ್ವದ ಮಾಹಿತಿ ನೀಡಿದ್ದಾರೆ. ಮೃತ ಯುವತಿಯನ್ನು ಬಿಹಾರದ ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯತಮನೇ ಕೊಲೆಗಾರ ಎಂದು ಪೊಲೀಸರು ತಿಳಿಸಿದ್ದಾರೆ .

ಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ.

ಪಿಜಿಯ ಸಿಸಿಟಿವಿ ಎಲ್ಲವನ್ನು ಕೂಡ ಪರಿಶೀಲನೆ ನಡೆಸಿದ್ದೇವೆ. ಪಿಜಿಯ ನಿರ್ಲಕ್ಷ್ಯತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿ ಪತ್ತೆಗಾಗಿ ಪೊಲೀಸರ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ ಎಂದಿದ್ದಾರೆ

 Share: | | | | |


ಮಂಗಳೂರು: ನ.16 ರಂದು ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ ನ ಬೆಳ್ಳಿ ಹಬ್ಬದ ಲೋಗೋ ಬಿಡುಗಡೆ

Posted by Vidyamaana on 2023-11-15 13:38:06 |

Share: | | | | |


ಮಂಗಳೂರು: ನ.16 ರಂದು ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ ನ ಬೆಳ್ಳಿ ಹಬ್ಬದ ಲೋಗೋ ಬಿಡುಗಡೆ

ಮಂಗಳೂರು: 25ನೇ ವಾರ್ಷಿಕೋತ್ಸವದ ಪ್ರಯುಕ್ತ ನ.16ರಿಂದ 26ರವರೆಗೆ ನಗರದ ಕಂಕನಾಡಿಯಲ್ಲಿರುವ ಚಿನ್ನಾಭರಣ ಮಳಿಗೆಯಾದ ಸಿಟಿಗೋಲ್ಡ್ ಆ್ಯಂಡ್ ಡೈಮಂಡ್ಸ್ನಲ್ಲಿ ಆ್ಯಂಟಿಕ್ ಫೆಸ್ಟ್ ನಡೆಯಲಿದೆ.


ನ.16ರ ಸಂಜೆ 4ಕ್ಕೆ ಸಂಸ್ಥೆಯ ಬೆಳ್ಳಿಹಬ್ಬದ ಲೋಗೋ ಅನಾವರಣಗೊಳ್ಳಲಿದೆ. ಆ್ಯಂಟಿಕ್ ಫೆಸ್ಟ್ ಕಾರ್ಯಕ್ರಮವನ್ನು ತುಳು ಚಿತ್ರ ನಟ ಹಾಗು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅತಿಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ರಾಮಯ್ಯ, ಉಳ್ಳಾಲ ಸೈಯದ್ ಮದನಿ ದರ್ಗಾ ಮತ್ತು ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಚಾರ್ಮಾಡಿ ಹಸನಬ್ಬ, ಮೀಫ್ ಸಂಸ್ಥೆಯ ಪರವಾಗಿ ಅಧ್ಯಕ್ಷ ಮೂಸಬ್ಬ ಬ್ಯಾರಿ ಹಾಗು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿ ಪೊಸವಣಿಕೆ ಅವರನ್ನು ಸನ್ಮಾನಿಸಲಾಗುವುದು.

ಸಿಟಿ ಗೋಲ್ಡ್ ಸಂಸ್ಥೆಯ 25ನೇ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರಿಗೆ ಚಿನ್ನಾಭರಣ ಖರೀದಿಯ ಮೇಕಿಂಗ್ ಚಾರ್ಜ್ ಮೇಲೆ ಶೇ.55ರಷ್ಟು ಹಾಗೂ ವಜ್ರಾಭರಣ ಖರೀದಿಯ ವಜ್ರದ ಮೌಲ್ಯದ ಮೇಲೆ ಶೇ 30ರಷ್ಟು ವಿನಾಯಿತಿ ನೀಡಲಾಗುವುದು.

ಪ್ರತಿ ಖರೀದಿಯ ಗ್ರಾಹಕರಿಗೆ ಸ್ಕ್ರ್ಯಾಚ್ ಆ್ಯಂಡ್ ವಿನ್ ಕೂಪನ್ ವಿತರಿಸಲಾಗುವುದು. ವಿಜೇತರಿಗೆ ಚಿನ್ನದ ನಾಣ್ಯ ಹಾಗು ಇತರೆ ಉಡುಗೊರೆಗಳು ನೀಡಲಾಗುವುದು. ಮದುವೆ ಖರೀದಿಯಲ್ಲಿನ ಪ್ರತಿ ಗ್ರಾಹಕರಿಗೂ ಕೂಪನ್ ವಿತರಿಸಲಾಗುವುದು. ವಿಜೇತ 5 ಜೋಡಿ ನವ ದಂಪತಿಗೆ ಮಲೇಷ್ಯಾ ಪ್ರವಾಸ ಕೈಗೊಳ್ಳುವ ಅವಕಾಶ ದೊರೆಯಲಿದೆ.

ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್ ಬೆಳ್ಳಿ ಹಬ್ಬ ಸಮಾರಂಭ

Posted by Vidyamaana on 2023-12-25 08:50:42 |

Share: | | | | |


ಸಂಪ್ಯ ಆನಂದಾಶ್ರಮ ಸೇವಾ ಟ್ರಸ್ಟ್  ಬೆಳ್ಳಿ ಹಬ್ಬ ಸಮಾರಂಭ

ಪುತ್ತೂರು:  ಮಕ್ಕಳಿಗೆ ಕೇವಲ ಲೌಕಿಕ ಶಿಕ್ಷಣವನ್ನು ಮಾತ್ರ ಕೊಡಬೇಡಿ ಅದರ ಜೊತೆಗೆ ನಮ್ಮ ಸಂಸ್ಕಾರ ಶಿಕ್ಷಣವನ್ನು ಕೊಡಿಸಿ, ಮನುಷ್ಯ ಜೀವವನ್ನು ಪ್ರೀತಿಸಲು ಇಲ್ಲದೇ ಇದ್ದರೆ ಮುದಿ ಪ್ರಾಯದಲ್ಲಿ ಆಶ್ರಮದಲ್ಲಿ ದಿನ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಜೈನರಭವನದಲ್ಲಿ ನಡೆದ ಸಂಪ್ಯ ಆನಂದಾಶ್ರಮ ಇದರ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದರು.


ಒಂದು ದೇಶದಲ್ಲಿ ಆಶ್ರಮದ ಸಂಖ್ಯೆ ಅಧಿಕವಾಗುತ್ತಲೇ ಇದ್ದರೆ ಅಲ್ಲಿ ಸಂಸ್ಕಾರ ಇರುವ ಮಕ್ಕಳಿಲ್ಲ ಎಂದು ನಾವು ಭಾವಿಸಬೇಕು. ಹೆತ್ತು ಹೊತ್ತು , ಕಷ್ಟಪಟ್ಟು ಸಾಕಿದ ಮಕ್ಕಳು ಒಂದು ಹಂತಕ್ಕೆ ಬೆಳೆದಾಗ ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸಿ ಯಾವುದೋ ದೇಶದಲ್ಲಿ ಸೆಟ್ಲ್ ಆಗಿ ಬಿಡುತ್ತಾರೆ. ಮುದಿ ಪ್ರಾಯದಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಕಾಲ ಕಳೆಯಬೇಕಾದ ಹಿರಿಯ ಜೀವಗಳು ಆಶ್ರಮದ ಕಿಟಕಿಯ ಸರಳುಗಳನ್ನು ಎಣಿಸಿ ದಿನ ದೂಡಬೇಕಾದ ಅನಿವಾರ್ಯತೆ ಯಾವ ತಂದೆ ತಾಯಿಗಳಿಗೂ ಬಾರದಿರಲಿ. ನಾವು ನಮ್ಮ ದೇಹದ ಶಕ್ತಿ ಕಳೆದುಕೊಂಡಾಗ ನಮಗೆ ಮಕ್ಕಳು ಆಶ್ರಯ ಕೊಡಬೇಕಾದರೆ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಆಚಾರ , ವಿಚಾರ , ಕುಟುಂಬ ಸಂಬಂದಗಳನ್ನು ಕಲಿಸಿಕೊಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಷ್ಟವನ್ನು ಎದುರಿಸಬೇಕಾಗಿ ಬರಬಹುದು. ಸಂಪತ್ತು ಶಾಸ್ವತವಲ್ಲ, ಸಂಪತ್ತಿನಿಂದ ಎಲ್ಲವೂ ದೊರೆಯುವುದಿಲ್ಲ. ವಯಸ್ಸಾಗುವ ಕಾಲದಲ್ಲಿ ಮಕ್ಕಳು ನಮ್ಮ ಬಳಿ ಇದ್ದರೆ ಅದುವೇ ನಮಗೆ ದೊಡ್ಡ ಸಂಪತ್ತು ಎಂದು ನಾವು ಪ್ರತೀಯೊಬ್ಬರೂ ತಿಳಿದುಕೊಳ್ಳಬೇಕಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಅ 09

Posted by Vidyamaana on 2023-10-09 08:41:10 |

Share: | | | | |


ಪುತ್ತೂರು : ಶಾಸಕರ ಇಂದಿನ ಕಾರ್ಯಕ್ರಮ ಅ 09

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಅಕ್ಟೋಬರ್ 07 ರಂದು


*ಬೆಳಿಗ್ಗೆ 10 ಗಂಟೆಗೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಂಗಳೂರು ಕಂಬಳದ ಯಶಸ್ವಿಗೆ ಪ್ರಾರ್ಥನೆ*


*ಬೆಳಿಗ್ಗೆ 11ವಿಟ್ಲ ಐಟಿಐ ಯಲ್ಲಿಮೆಡಿಕಲ್ ಕ್ಯಾಂಪ್ ಮತ್ತು ಶಾಸಕರಿಗೆ ಸನ್ಮಾನ*


*ಸಂಜೆ 3 ಗಂಟೆಗೆ ಪುತ್ತೂರು ಮಹಾಲಿಂಗೇಶ್ವರ ಐಟಿಐ  ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ*


ಉಳಿದಂತೆ ಖಾಸಗಿ ಕಾರ್ಯಕ್ರಮಗಳು  ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ

ರೀಲ್ಸ್ ಮಾಡುತ್ತಲೇ ವಿಧವೆಯಾದ ಮಹಿಳೆ, ಸಾಯುವ ಮುನ್ನ ಪತಿ ಹೇಳಿದ್ದಿಷ್ಟು!

Posted by Vidyamaana on 2024-04-08 20:33:06 |

Share: | | | | |


ರೀಲ್ಸ್ ಮಾಡುತ್ತಲೇ ವಿಧವೆಯಾದ ಮಹಿಳೆ, ಸಾಯುವ ಮುನ್ನ ಪತಿ ಹೇಳಿದ್ದಿಷ್ಟು!

     ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಲೇ ಇರುತ್ತದೆ. ಈ ಜಗಳದಿಂದಾಗಿ ಸಂಬಂಧದಲ್ಲಿ ಮಾಧುರ್ಯ ಉಳಿಯುತ್ತದೆ. ಜಗಳಗಳ ನಂತರ ದಂಪತಿಗಳ ನಡುವೆ ಸಮನ್ವಯವಾದಾಗ, ಪ್ರೀತಿಯು ಮೊದಲಿಗಿಂತ ಹೆಚ್ಚು ಹೆಚ್ಚಾಗುತ್ತದೆ. ಆದರೆ ಅನೇಕ ಬಾರಿ ಈ ಕದನಗಳು ಅದ್ಯಾವ ಅತಿರೇಕಕ್ಕೆ ತಲುಪುತ್ತವೆ ಎಂದರೆ, ಅದರ ಫಲಿತಾಂಶವು ಊಹಿಸಲೂ ಸಾಧ್ಯವಿಲ್ಲ.ರಾಜಸ್ಥಾನದ ಅಲ್ವಾರ್​ನಲ್ಲಿ ಕೌಟುಂಬಿಕ ಕಲಹದಿಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆ ವ್ಯಕ್ತಿ ಅಳುತ್ತಾ ಹೆಂಡತಿಯನ್ನು ಬಿಟ್ಟು ಹೋಗಿದ್ದ.


ರೈನಿ ಪೊಲೀಸ್ ಠಾಣೆ ವ್ಯಾಪ್ತಿಯ ನಂಗಲ್ ಬಸ್ ಗ್ರಾಮದಲ್ಲಿ ವಾಸಿಸುತ್ತಿದ್ದ ಸಿದ್ಧಾರ್ಥ್ ವೃತ್ತಿಯಲ್ಲಿ ಸರ್ಕಾರಿ ನೌಕರನಾಗಿದ್ದ. ಆತನ ಪತ್ನಿ ಮಾಯಾ ಅವರು ರೀಲ್‌ಗಳನ್ನು ಮಾಡುವುದನ್ನು ಇಷ್ಟಪಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಪತ್ನಿಯ ಈ ಹವ್ಯಾಸದಿಂದ ಸಿದ್ಧಾರ್ಥ್ ತುಂಬಾ ನೊಂದುಕೊಂಡಿದ್ದ. ರೀಲ್‌ಗಳನ್ನು ಮಾಡದಂತೆ ಅವನು ತನ್ನ ಹೆಂಡತಿಯನ್ನು ಅನೇಕ ಬಾರಿ ಕೇಳಿಕೊಂಡಿದ್ದ. ಆದರೆ ಪ್ರತಿದಿನ ಪತ್ನಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುತ್ತಲೇ ಇದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಕೊನೆಗೆ ಇದೆಲ್ಲದರಿಂದ ಬೇಸತ್ತು ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಟ್ವಾಳ:ಸರಕಾರಿ ಆಸ್ಪತ್ರೆ ಪಕ್ಕವೇ ರೋಗ ಉತ್ಪಾದನಾ ಘಟಕ

Posted by Vidyamaana on 2023-03-23 07:40:43 |

Share: | | | | |


ಬಂಟ್ವಾಳ:ಸರಕಾರಿ ಆಸ್ಪತ್ರೆ ಪಕ್ಕವೇ ರೋಗ ಉತ್ಪಾದನಾ ಘಟಕ

ಬಂಟ್ವಾಳ: ಆಸ್ಪತ್ರೆಗಳಿರುವುದು ಜನರ ಆರೋಗ್ಯ ಕಾಪಾಡಲು. ಆದರೆ ಇಂತಹ ಆಸ್ಪತ್ರೆಗಳ ಪಕ್ಕವೇ ಸೊಳ್ಳೆ ಉತ್ಪಾದನಾ ತಾಣ ಇದ್ದರೆ? ಅಲ್ಲೇ ರೋಗ ಬರಿಸಿ, ನೇರವಾಗಿ ಆಸ್ಪತ್ರೆ ದಾರಿ ತೋರಿಸುವುದೇ?

ಇದು ಬಂಟ್ವಾಳ ಸರಕಾರಿ ಆಸ್ಪತ್ರೆಯ ಕಥೆ. ತಾಲೂಕು ಆಸ್ಪತ್ರೆ ಬಹಳ ಸುವ್ಯವಸ್ಥಿತವಾಗಿ ಕೆಲಸ ನಿರ್ವಹಿಸುತ್ತಿದೆ. ಆದರೆ ಆಸ್ಪತ್ರೆಯ ಪಕ್ಕದಲ್ಲಿ ಸೊಳ್ಳೆ ಉತ್ಪತ್ತಿ ಮಾಡಿ, ರೋಗ ಪಸರಿಸುವ ಚರಂಡಿಯೊಂದಿದೆ. ಇದು ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಂತಿದೆ.


ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ಮುಂಭಾಗ ಮುಖ್ಯರಸ್ತೆ ಹಾದು ಹೋಗುತ್ತದೆ. ಈ ಮುಖ್ಯರಸ್ತೆಯ ಇನ್ನೊಂದು ಮಗ್ಗುಲಲ್ಲಿ ಈ ಚರಂಡಿ ಇದೆ. ಪೇಟೆ ಬೆಳೆದಂತೆ ಚರಂಡಿಗಳು ದುಸ್ಥಿತಿಯನ್ನು ತಲುಪುವುದು ಸಾಮಾನ್ಯ. ಆದರೆ ಆಸ್ಪತ್ರೆ ಪಕ್ಕದಲ್ಲೇ ಹೀಗಿದ್ದರೆ…?


ರೋಗವನ್ನು ಶಮನ ಮಾಡಬೇಕಾದ ಮಹತ್ತರ ಜವಾಬ್ದಾರಿಯನ್ನು ಆಸ್ಪತ್ರೆಗಳು ನಿರ್ವಹಿಸುತ್ತವೆ. ಅದೇ ಆಸ್ಪತ್ರೆಗಳಿಗೆ ಬಂದವರು ರೋಗವನ್ನು ಹೊತ್ತು ಕೊಂಡೊಯ್ದರೆ! ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗದೇ? ಆಸ್ಪತ್ರೆ ಸುವ್ಯವಸ್ಥಿತವಾಗಿ ಇರಬೇಕು ಎಂದು ಬಯಸುವುದು ಎಷ್ಟು ಸರಿಯೋ, ಅದೇ ರೀತಿ ಆಸ್ಪತ್ರೆಯ ಸುತ್ತಮುತ್ತಲ ಪರಿಸರವನ್ನು ಜಾಗೃತೆಯಿಂದ ಕಾಪಾಡಬೇಕಾದ ಜವಾಬ್ದಾರಿ ಸ್ಥಳೀಯಾಡಳಿತಕ್ಕಿದೆಯಲ್ಲವೇ?

ನಗರಸಭೆ ಬೈ ಎಲೆಕ್ಷನ್ - ಬಿಜೆಪಿ ಅಭ್ಯರ್ಥಿಗಳ ಜೊತೆ ಕಾಣಿಸಿಕೊಂಡ ಡಾ. ಸುರೇಶ್ ಪುತ್ತೂರಾಯರು

Posted by Vidyamaana on 2023-12-15 15:30:12 |

Share: | | | | |


ನಗರಸಭೆ ಬೈ ಎಲೆಕ್ಷನ್ - ಬಿಜೆಪಿ ಅಭ್ಯರ್ಥಿಗಳ ಜೊತೆ ಕಾಣಿಸಿಕೊಂಡ ಡಾ. ಸುರೇಶ್ ಪುತ್ತೂರಾಯರು

ಪುತ್ತೂರು : ನಗರ ಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಹೆಸರು ಈಗಾಗಲೇ ಘೋಷಣೆಯಾಗಿದ್ದು, ಇಂದು ನಾಮಪತ್ರ ಸಲ್ಲಿಕೆ ನಡೆಯಲಿದೆ.ಈ ಹಿನ್ನೆಲೆ ಅಭ್ಯರ್ಥಿಗಳು ಹಾಗೂ ಪಕ್ಷದ ಪ್ರಮುಖರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.ಮಾಜಿ ಶಾಸಕ ಸಂಜೀವ ಮಠಂದೂರು, ಜೀವಂಧರ್ ಜೈನ್ ಸಹಿತ ಹಲವು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.


ಅರುಣ್ ಕುಮಾರ್ ಪುತ್ತಿಲ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆಗೆ ಇಳಿದ ಸಂದರ್ಭದಲ್ಲಿ ಅವರ ಜತೆಗೆ ಪ್ರಮುಖ ನಾಯಕರಾಗಿ ಕಾಣಿಸಿಕೊಂಡಿದ್ದ ಸುರೇಶ್ ಪುತ್ತೂರಾಯ ಅವರು ದಿಢೀರ್ ಆಗಿ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ 


ಬಿಜೆಪಿಯಿಂದ ವಾರ್ಡ್ 1ರ ಅಭ್ಯರ್ಥಿಯಾಗಿ ಸುನೀತಾ ಹಾಗೂ ವಾರ್ಡ್ 11ರ ಅಭ್ಯರ್ಥಿಯಾಗಿ ರಮೇಶ್ ರೈ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.


ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.


ಡಿ.8 ರಂದು ಜಿಲ್ಲಾಧಿಕಾರಿಗಳು ಅದಿಸೂಚನೆ ಪ್ರಕಟಗೊಳಿಸಲಿದ್ದು, ಅದೇ ದಿನ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಡಿ.15 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಡಿ.16ರಂದು ನಾಮಪತ್ರ ಪರಿಶೀಲನೆ, ಡಿ.18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.


ಡಿ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಅವಶ್ಯವಿದ್ದರೆ ಡಿ.29ರಂದು ಮರು‌ಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.

Recent News


Leave a Comment: