ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ವಂದೇ ಭಾರತ್ ರೈಲಿನ ಟಾಯ್ಲೆಟ್ ನಲ್ಲಿ ವ್ಯಕ್ತಿಯ ಕಿತಾಪತಿ ತಂದ ಪಜೀತಿ

Posted by Vidyamaana on 2023-08-10 15:13:43 |

Share: | | | | |


ವಂದೇ ಭಾರತ್ ರೈಲಿನ ಟಾಯ್ಲೆಟ್ ನಲ್ಲಿ ವ್ಯಕ್ತಿಯ ಕಿತಾಪತಿ ತಂದ ಪಜೀತಿ

ವಿಜಯವಾಡ: ಟಿಕೆಟ್ ಇಲ್ಲದೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಟಿಕೆಟ್ ಕಲೆಕ್ಟರ್ ಗಳ ಕಣ್ತಪ್ಪಿಸಲು ಟಾಯ್ಲೆಟ್ ಸೇರಿಕೊಂಡು ಅಲ್ಲಿ ಬಳಿಕ ಸಿಗರೇಟ್ ಸೇದುವ ಮೂಲಕ ಅಧ್ವಾನ ಸೃಷ್ಟಿಸಿದ ಘಟನೆಯೊಂದು ವರದಿಯಾಗಿದೆ.


ತಿರುಪತಿ-ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದ್ದು, ರೈಲಿನ ಬೋಗಿಯ ಟಾಯ್ಲೆಟ್ ನಿಂದ ಹೊಗೆ ಬರುತ್ತಿದ್ದ ಕಾರಣ ಅಪಾಯದ ಕರೆಗಂಟೆ ಬಾರಿಸಿದ ಮತ್ತು ಆಟೋಮ್ಯಾಟಿಕ್ ಬೆಂಕಿ ನಿಯಂತ್ರಕ ವ್ಯವಸ್ಥೆ ಕಾರ್ಯಪ್ರವೃತ್ತಗೊಂಡ ಕಾರಣ ರೈಲು ನಿಲುಗಡೆಗೊಂಡ ಘಟನೆಯೂ ನಡೆದಿರುವುದನ್ನು ರೈಲ್ವೇ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.


ರೈಲು ಸಂಖ್ಯೆ – 20702 ಆಂಧ್ರಪ್ರದೇಶದ ಗುಡೂರು ಮೂಲಕ ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಸಿ-13 ಬೋಗಿಯಲ್ಲಿ ಇದು ನಡೆದಿದೆ. ಟಿಕೆಟ್ ಪಡೆದುಕೊಳ್ಳದ ವ್ಯಕ್ತಿಯೊಬ್ಬ ತಿರುಪತಿಯಲ್ಲಿ ರೈಲನ್ನು ಹತ್ತಿ ಸಿ-13 ಬೋಗಿಯಲ್ಲಿರುವ ಟಾಯ್ಲೆಟ್ ಒಳಹೊಕ್ಕು ಲಾಕ್ ಮಾಡಿಕೊಂಡಿದ್ದಾನೆ.


ಬಳಿಕ, ಅಲ್ಲಿ ಆ ವ್ಯಕ್ತಿ ಧೂಮಪಾನ ಮಾಡಿದ ಕಾರಣ ಟಾಯ್ಲೆಟ್ ಒಳಗಿದ್ದ ಸ್ವಯಂಚಾಲಿತ ಬೆಂಕಿ ನಿಯಂತ್ರಕ ವ್ಯವಸ್ಥೆ ಚಾಲನೆಗೊಂಡಿದೆ ಎಂಬ ಮಾಹಿತಿಯನ್ನು ದಕ್ಷಿಣ ಮಧ್ಯೆ ರೈಲ್ವೇ ವಲಯದ ವಿಜಯವಾಡ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ಮುನ್ನೆಚ್ಚರಿಕೆ ಗಂಟೆ ಬಾರಿಸುತ್ತಿದ್ದಂತೆ ಬೆಂಕಿ ನಿಯಂತ್ರಕದಿಂದ ಅಗ್ನಿ ಶಾಮಕ ಪೌಡರ್ ಬೋಗಿ ತುಂಬೆಲ್ಲಾ ಚಿಮುಕಲಾರಂಭಿಸಿದೆ, ಇದರಿಂದ ಗಾಬರಿಗೊಂಡ ಆ ಬೋಗಿಯಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬಳಿಕ ಅಲ್ಲಿದ್ದ ಎಮರ್ಜೆನ್ಸಿ ಫೋನ್ ಮೂಲಕ ರೈಲಿನ ಗಾರ್ಡಿಗೆ ಮಾಹಿತಿ ನೀಡಿದ್ದಾರೆ. ಬಳಿಕ ರೈಲು ಮನುಬೋಲು ಎಂಬಲ್ಲಿ ನಿಂತಿದೆ.


ತಕ್ಷಣವೇ ಆ ಬೋಗಿಯ ಕಡೆಗೆ ಆಗಮಿಸಿದ ರೈಲ್ವೇ ಪೊಲೀಸರು ಬೆಂಕಿ ನಿಯಂತ್ರಕ ವ್ಯವಸ್ಥೆಯೊಂದಿಗೆ ಬಂದವರೇ ಟಾಯ್ಲೆಟ್ ನ ಕಿಟಕಿ ಮುರಿದು ಒಳನುಗ್ಗಿದಾಗ ಅಸಲೀ ವಿಷಯ ಬೆಳಕಿಗೆ ಬಂದಿದೆ. ಇದೀಗ ಆ ವ್ಯಕ್ತಿಯನ್ನು ರೈಲ್ವೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ರೈಲು ಅಲ್ಲಿಂದ ತನ್ನ ಪ್ರಯಾಣವನ್ನು ಮುಂದುವರೆಸಿದೆ.

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಮುರುಘಾಶ್ರೀ ಗೆ ಜಾಮೀನು

Posted by Vidyamaana on 2023-11-08 18:18:21 |

Share: | | | | |


ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ  ಮುರುಘಾಶ್ರೀ ಗೆ ಜಾಮೀನು

ಬೆಂಗಳೂರು, ನ.8: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶ್ರೀಗೆ ಜಾಮೀನು ಸಿಕ್ಕಿದೆ. ಒಂದು ಪ್ರಕರಣದಲ್ಲಿ ಮಾತ್ರ ಮುರುಘಾ ಶ್ರೀಗೆ ಜಾಮೀನು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಬಿಡುಗಡೆ ಭಾಗ್ಯ ಇಲ್ಲ. ಜಾಮೀನ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ಕೋರ್ಟ್​, ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂದು ಹೇಳುವ ಮೂಲಕ ಚಿತ್ರದುರ್ಗ ಹೋಗದಂತೆ ಷರತ್ತು ವಿಧಿಸಿದೆ. ಮೊದಲು ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಜಾಮೀನು ಲಭ್ಯವಾಗಿದ್ದು, ಪೋಕ್ಸೋ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಅವರು ಜೈಲಿನಲ್ಲಿ ಉಳಿದುಕೊಳ್ಳಲಿದ್ದಾರೆ.


ವಕೀಲರು ಹೇಳಿದ್ದೇನು?


ಈ ಬಗ್ಗೆ ಮಾಹಿತಿ ನೀಡಿರುವ ಮುರುಘಾಶ್ರೀ ಪರ ವಕೀಲಸ್ವಾಮೀನಿ ಗಣೇಶ್, ಏಳು ಷರತ್ತುಗಳ ಮೇಲೆ ಮುರುಘಾಶ್ರೀ ಜಾಮೀನು ಲಭ್ಯವಾಗಿದೆ. ಪಾಸ್‌ಪೋರ್ಟ್ ಸರೆಂಡರ್‌ ಮಾಡಬೇಕು. ವಿಟ್ನೆಸ್ ಗಳ ಮೇಲೆ ಪ್ರಭಾವ ಬೀರಬಾರದು. ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ. ಎರಡು ಲಕ್ಷ ಬಾಂಡ್ ಹಾಗೂ ಇಬ್ಬರು ವ್ಯಕ್ತಿಗಳ ಶ್ಯೂರಿಟಿ ಮೇರೆಗೆ ಜಾಮೀನು ಮಂಜೂರು ಮಾಡಲಾಗಿದೆ ಎಂಬ ವಿವರಿಸಿದ್ದಾರೆ.

ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಮುರುಘಾ ಶ್ರೀ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನಡೆಸಿದ್ದು, ಇದೀಗ ನ್ಯಾಯಾಲಯ ಮುರುಘಾ ಶ್ರೀಗೆ ಜಾಮೀನು  ಮಾಡಿದೆ. 


2022ರ ಸೆಪ್ಟೆಂಬರ್ 1ರಿಂದ ಜೈಲುವಾಸ ಅನುಭವಿಸುತ್ತಿರುವ ಮುರುಘಾ ಶ್ರೀಯ ಜಾಮೀನು ಅರ್ಜಿಯನ್ನು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿತ್ತು. ನಂತರ ಜಾಮೀನಿಗಾಗಿ ಮುರುಘಾ ಶ್ರೀ ಪರ ವಕೀಲರು ಹೈಕೋರ್ಟ್​ ಮೆಟ್ಟಲೇರಿದ್ದರು. ಈ ಜಾಮೀನು ಅರ್ಜಿಯ ತೀರ್ಪನ್ನು ಇಂದು ಕರ್ನಾಟಕ ಹೈಕೋರ್ಟ್ ಪ್ರಕಟಿಸಿದೆ.


ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಮುರುಘಾ ಶ್ರೀ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಕದ ತಟ್ಟಿದ್ದರು. ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿ ನಿಲಯದಲ್ಲಿರುವ ನಮ್ಮನ್ನು ಮುರುಘಾ ಶ್ರೀ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.


ಅಲ್ಲದೇ, ಮುರುಘಾ ಶ್ರೀಗಳಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ನಶೆ ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಿ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.

ಭಾರತ ಸೇರಿ 6 ದೇಶಗಳಿಗೆ ಉಚಿತ ಪ್ರವಾಸಿ ವೀಸಾ ಘೋಷಿಸಿದ ಶ್ರೀಲಂಕಾ

Posted by Vidyamaana on 2023-10-24 20:24:03 |

Share: | | | | |


ಭಾರತ ಸೇರಿ 6 ದೇಶಗಳಿಗೆ ಉಚಿತ ಪ್ರವಾಸಿ ವೀಸಾ ಘೋಷಿಸಿದ ಶ್ರೀಲಂಕಾ

ಕೊಲಂಬೊ: ಭಾರತ, ಚೀನಾ ಹಾಗೂ ರಷ್ಯಾ ಸೇರಿದಂತೆ ಏಳು ದೇಶಗಳ ಪ್ರವಾಸಿಗರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಲಂಕಾ ವಿದೇಶಾಂಗ ಸಚಿವ ಅಲಿ ಸಬ್ರಿ ಅವರು ಮಂಗಳವಾರ ತಿಳಿಸಿದ್ದಾರೆ.



ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಕ್ಷೇತ್ರವನ್ನು ಮರುನಿರ್ಮಾಣ ಮಾಡುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.



ಉಚಿತ ಪ್ರವಾಸಿ ವೀಸಾ ನೀತಿಯನ್ನು ಪ್ರಾಯೋಗಿಕವಾಗಿ ಮಾರ್ಚ್ 31, 2024 ರವರೆಗೆ ಜಾರಿಗೆ ತರಲಾಗುವುದು ಎಂದು ವಿದೇಶಾಂಗ ಸಚಿವ ಸಬ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ವಾಹನ ಸವಾರ ರಿಗೆ ಮಹತ್ವದ ಮಾಹಿತಿ: ಹೀಗಿದೆ ಸಂಚಾರ ನಿಮಯ ಉಲ್ಲಂಘನೆ ಗೆ ವಿಧಿಸುವ ಪರಿಷ್ಕೃತ ದಂಡ ದ ವಿವರ

Posted by Vidyamaana on 2023-07-19 06:24:06 |

Share: | | | | |


ವಾಹನ ಸವಾರ ರಿಗೆ ಮಹತ್ವದ ಮಾಹಿತಿ: ಹೀಗಿದೆ ಸಂಚಾರ ನಿಮಯ ಉಲ್ಲಂಘನೆ ಗೆ ವಿಧಿಸುವ ಪರಿಷ್ಕೃತ ದಂಡ ದ ವಿವರ

ಬೆಂಗಳೂರು : ಭಾರತದಲ್ಲಿ ಯಾವ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಎಷ್ಟು ದಂಡ ಕಟ್ಟಬೇಕಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಮುಖ್ಯ. ಈಗ ವಿವಿಧ ಸಂಚಾರ ನಿಯಮ ಉಲ್ಲಂಘನೆಯ ದಂಡಗಳನ್ನು ಪರಿಷ್ಕರಿಸಲಾಗಿದೆ.ಹಾಗಾದ್ರೆ ಯಾವ ಸಂಚಾರ ನಿಯಮ ಉಲ್ಲಂಘನೆ, ಎಷ್ಟು ದಂಡ ಎನ್ನುವ ಬಗ್ಗೆ ಮುಂದೆ ಓದಿ.


ನೀವು ರಸ್ತೆಗೆ ವಾಹನವನ್ನು ತೆಗೆದುಕೊಂಡಾಗ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದರೊಂದಿಗೆ, ಟ್ರಾಫಿಕ್‌ನಲ್ಲಿ ವಾಹನಗಳು ಸುಗಮವಾಗಿ ಚಲಿಸುತ್ತದೆ. ಟ್ರಾಫಿಕ್ ಸಮಯದಲ್ಲಿ ನಿಮ್ಮ ಸುರಕ್ಷತೆಯು ಹೆಚ್ಚಾಗುತ್ತದೆ ಮತ್ತು ಪೋಲಿಸರಿಂದ ಕಡಿತಗೊಳಿಸಲ್ಪಡುವ ಚಲನ್ ಅನ್ನು ಸಹ ನೀವು ತಪ್ಪಿಸಬಹುದು.


ಸದ್ಯ ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಇದರೊಂದಿಗೆ ಹಲವು ಪ್ರಕರಣಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವ್ಯಕ್ತಿಯೂ ಜೈಲು ಪಾಲಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಯಾವ ಸಂಚಾರಿ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ. ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.


ಭಾರತದಲ್ಲಿ ಯಾವ ಸಂಚಾರಿ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇಲ್ಲಿ ನೀಡಲಿರುವ ಮಾಹಿತಿಯು ಕೇಂದ್ರ ಸರ್ಕಾರ ತಂದಿರುವ ಕಾನೂನನ್ನು ಆಧರಿಸಿದೆ. ಕೆಲವು ರಾಜ್ಯಗಳು ತಮ್ಮ ಸ್ವಂತಕ್ಕೆ ಅನುಗುಣವಾಗಿ ಇವುಗಳಲ್ಲಿ ಬದಲಾವಣೆಗಳನ್ನೂ ಮಾಡಿಕೊಂಡಿವೆ.


ಹೀಗಿದೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಸಂಚಾರಿ ನಿಯಮಗಳ ಪರಿಷ್ಕೃತ ದಂಡದ ವಿವರ


ಅಜಾಗರೂಕತೆ ಚಾಲನೆ - ರೂ.1000

ಅತೀ ವೇಗದ ಚಾಲನೆ - ರೂ.2000

ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದು - ರೂ.1000

ಸಮವಸ್ತ್ರ ಧರಿಸದೇ ಚಾಲನೆ - ರೂ.500

ಡಿಸಿ ಆದೇಶ ಉಲ್ಲಂಘನೆ - ಕೋರ್ಟ್ ಫೈನ್

ಕರ್ಕಶ ಹಾರ್ನ್ - ರೂ.500

ಬಲ್ಬು ಹಾರ್ನ್ ಅಳವಡಿಸದಿರುವುದು - ರೂ.500

ಬ್ರೇಕ್ ಲೈಟ್ ಇಲ್ಲದೇ ಚಾಲನೆ - ರೂ.500

ಅಮಲು ಪದಾರ್ಥ ಸೇವನೆ - ಕೋರ್ಟ್ ಫೈನ್

ಹೆಡ್ ಲೈನ್ ಇಲ್ಲದೇ ವಾಹನ ಚಾಲನೆ - ರೂ.500

ಕಣ್ಣು ಕುಕ್ಕುವ ಹೆಡ್ ಲೈನ್ - ರೂ.500

ಸರಕು ವಾಹನದಲ್ಲಿ ಜನರನ್ನು ಸಾಗಿಸುವುದು - ಕೋರ್ಟ್ ಫೈನ್, ಡಿಎಲ್, ಪರ್ಮಿಟ್, ಆರ್.ಸಿ ಕ್ಯಾನ್ಸಲ್.

ಕ್ಯಾಬೀನ್ ನಲ್ಲಿ ಜನರನ್ನು ಕೂರಿಸಿಕೊಂಡು ಹೋಗುವುದು - ಪ್ರತಿ ವ್ಯಕ್ತಿಗೆ ರೂ.200

ಚಾಲಕ ಹಸಿಮೀನು ಹೇರಿ ವಾಹನ ಸಾಗಿಸುವುದು - ರೂ.500

ಪರವಾನಿಗೆ ನಿಬಂಧನೆ ಉಲ್ಲಂಘನೆ ಮಾಡಿರುವುದು - ಕೋರ್ಟ್ ಫೈನ್

ಪೊಲೀಸ್ ನೋಟಿಸ್ ಗೆ ಸಹಿ ಹಾಕದಿರುವುದು, ಅಸಭ್ಯರೀತಿಯ ವರ್ತನೆ - ರೂ.2000

ವಾಹನವನ್ನು ಬಸ್ಸು ತಂಗುದಾಣದಲ್ಲಿ ನಿಲ್ಲಿಸಿ ನಿಯಮ ಉಲ್ಲಂಘನೆ - ರೂ.1000

ಡಿಎಲ್ ಇಲ್ಲದೇ ವಾಹನ ಚಾಲನೆ - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000

ಡಿಎಲ್ ಪರಿಶೀಲನೆ ತೋರಿಸದೇ ಇರುವುದು - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000.

ಡಿಎಲ್ ಇಲ್ಲದವರಿಗೆ ವಾಹನ ಚಾಲನೆಗೆ ನೀಡಿದ್ದು - ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ರೂ.1000. ಲಘುವಾಹನ ಚಾಲನೆ ರೂ.2000. ಇತರೆ ರೂ.5000.

ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ - ಕೋರ್ಟ್ ಫೈನ್

ಅಪ್ರಾಪ್ತ ವಯಸ್ಸಿನವರಿಗೆ ವಾಹನ ಚಾಲನೆಗೆ ನೀಡಿದ್ದು - ಕೋರ್ಟ್ ಫೈನ್. ಹಾಗೆ 25,000ವರೆಗೆ ದಂಡ ಮತ್ತು 3 ವರ್ಷ ಜೈಲು ಶಿಕ್ಷೆ. ವಾಹನ ನೋಂದಣಿ ರದ್ದು.

ಎಫ್‌ಎ ಬಾಕ್ಸ್ ಅಳವಡಿಸದೇ ಇರುವುದು - ರೂ.500.

ಆರ್ ಸಿ ವಿವರ ಬಾಡಿಗೆಯಲ್ಲಿ ಬರೆಯದೇ ಇರುವುದು - ರೂ.500

ನಂಬರ್ ಪ್ಲೇಟ್ ಇಲ್ಲದೇ, ದೋಷಪೂರಿತ ಬಳಕೆ - ರೂ.500

ಸೈಡ್ ಮಿರರ್ ಇಲ್ಲದಿರುವುದು - ರೂ.500

ಹ್ಯಾಂಡ್ ಬ್ರೇಕ್ ಇಲ್ಲದಿರುವುದು - ರೂ.500

ಖಾಸಗಿ ಕಾರಿನಲ್ಲಿ ಬಾಡಿಗೆ ಮಾಡಿದ್ದು - ಕೋರ್ಟ್ ಫೈನ್.

ದೂರು ಪೆಟ್ಟಿಗೆ ಇಲ್ಲದಿರುವುದು - ರೂ.500

ಅಗ್ನಿ ಶಾಮಕ ಸಾಧನ ಅಳವಡಿಸದಿರುವುದು - ರೂ.500

ದೂಮಪಾನ ಮಾಡುತ್ತ ವಾಹನ ಚಾಲನೆ - ರೂ.500

ಟ್ರಾಫಿಕ್ ಲೈಟ್ ಉಲ್ಲಂಘನೆ - ರೂ.500

ಪೊಲೀಸ್ ಸಿಗ್ನಲ್ ಉಲ್ಲಂಘನೆ - ರೂ.500

ಏಕಮುಖ ರಸ್ತೆಯ ವಿರುದ್ಧ ಚಾಲನೆ - ರೂ.500

ಚಾಲಕ ಬ್ಯಾಡ್ಜ್ ಧರಿಸದ್ದು - ರೂ.500

ಶಿವಮೊಗ್ಗ ಗಲಭೆ ಪೀಡಿತ ಪ್ರದೇಶಕ್ಕೆ ಬಿಜೆಪಿ ಸತ್ಯಶೋಧನಾ ತಂಡ ಭೇಟಿ: ನಳಿನ್ ಕುಮಾರ್

Posted by Vidyamaana on 2023-10-04 20:58:11 |

Share: | | | | |


ಶಿವಮೊಗ್ಗ  ಗಲಭೆ ಪೀಡಿತ ಪ್ರದೇಶಕ್ಕೆ ಬಿಜೆಪಿ ಸತ್ಯಶೋಧನಾ ತಂಡ ಭೇಟಿ: ನಳಿನ್ ಕುಮಾರ್

ಬೆಂಗಳೂರು: ಶಿವಮೊಗ್ಗ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಬಿಜೆಪಿಯು ಪಕ್ಷದ ಹಿರಿಯ ಮುಖಂಡರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯನ್ನು ರಚಿಸಿದೆ. ಗುರುವಾರ ಶಿವಮೊಗ್ಗದ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ತಂಡ ಭೇಟಿ ನೀಡಲಿದೆ.


ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ಸತ್ಯಶೋಧನಾ ತಂಡದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಸಿ.ಎನ್.ಅಶ್ವಥ್ ನಾರಾಯಣ್, ಮಾಜಿ ಸಚಿವ ಆರಗ ಜನೇಂದ್ರ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂ.ಎಲ್.ಸಿ ಎನ್. ರವಿಕುಮಾರ್, ಶಾಸಕ ಚನ್ನಬಸಪ್ಪ, ಎಂಎಲ್ಸಿಗಳಾದ ಎಸ್.ರುದ್ರೇಗೌಡ, ಡಿ ಎಸ್ ಅರುಣ್ ಮತ್ತು ಭಾರತಿ ಶೆಟ್ಟಿ ತಂಡದಲ್ಲಿದ್ದಾರೆ

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ : ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಆದೇಶ

Posted by Vidyamaana on 2023-09-01 09:57:46 |

Share: | | | | |


ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ : ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಆದೇಶ

ಬೆಂಗಳೂರು : ಜೆಡಿಎಸ್​ ಸಂಸದ ಪ್ರಜ್ವಲ್ ರೇವಣ್ಣ ಅವ್ರಿಗೆ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದೆ.ಎ ಮಂಜು, ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆಅಂದ್ಹಾಗೆ, ಪ್ರಜ್ವಲ್ ರೇವಣ್ಣ ಅವ್ರು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಫಿಡವಿಟ್ನಲ್ಲಿ ಘೋಷಿಸಿದ ಆಸ್ತಿ ವಿವರಗಳ ಕುರಿತು ಅಕ್ಷೇಪ ವ್ಯಕ್ತಪಡಿಸಿ ವಕೀಲ ದೇವರಾಜೇಗೌಡ ಎನ್ನುವವವರು, ಪ್ರಜ್ವಲ್ ಆಯ್ಕೆಯನ್ನ ಅಸಿಂಧುಗೊಳಿಸುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಸಧ್ಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರೇವಣ್ಣ ಅವ್ರ ಆಯ್ಕೆಯನ್ನ ಅಸಿಂಧುಗೊಳಿಸಿದೆ. ಅದ್ರಂತೆ, ಸಧ್ಯ ರೇವಣ್ಣ ಪರ ವಕೀಲರು ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ, ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ



Leave a Comment: