ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಸುದ್ದಿಗಳು News

Posted by vidyamaana on 2024-03-23 10:38:46 |

Share: | | | | |


ನಕಲಿ ಚಿನ್ನ ದ ಆಸೆಗೆ ತುಮಕೂರಿನಲ್ಲಿ ಬಲಿಯಾದರೇ ಬೆಳ್ತಂಗಡಿಯ ಮೂವರು?

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ‌ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.

ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 


ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.

 Share: | | | | |


ಬೆಳ್ತಂಗಡಿ : ಸಿಎಎ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

Posted by Vidyamaana on 2024-03-13 11:46:25 |

Share: | | | | |


ಬೆಳ್ತಂಗಡಿ : ಸಿಎಎ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ

*ಬೆಳ್ತಂಗಡಿ (ಮಾ -12):* ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಪಕ್ಷ ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದೆ.

         ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷರಾದ ನವಾಝ್ ಕಟ್ಟೆ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ (2019) ಜಾರಿಗೆ ಬರಲಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಕ್ರಮವನ್ನು ಎಸ್ ಡಿಪಿಐ ತೀವ್ರವಾಗಿ ಖಂಡಿಸುತ್ತದೆ. ಜನರು ಈ ಕಾನೂನನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದರು.

ಚುನಾವಣಾ ಸೋಲಿನ ಭಯ ಮತ್ತು ಸುಪ್ರೀಂ ಕೋರ್ಟ್ ಬಹಿರಂಗಪಡಿಸಿದ ಚುನಾವಣಾ ಬಾಂಡ್ ಗಳಲ್ಲಿನ ಅಕ್ರಮಗಳಿಂದಾಗಿ ಜನರನ್ನು ವಿಭಜಿಸಲು ಮತ್ತು ದೇಶದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಲು ಚುನಾವಣಾ ಘೋಷಣೆ ಮಾಡುತ್ತಿರುವ ಸಮಯದಲ್ಲಿ ಬಿಜೆಪಿ ಸರ್ಕಾರ ಈ ಘೋಷಣೆ ಮಾಡಿದೆ ಎಂದು ಆರೋಪಿಸಿದರು.

        ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಂಜಾಲಕಟ್ಟೆ, ಬಂಗೇರಕಟ್ಟೆ, ಪಣಕಜೆ, ಕಡವಿನ ಬಾಗಿಲು, ಕುದ್ರಡ್ಕ, ಅಂಡೆತಡ್ಕ, ಬಾಜಾರು, ಪೆರಲ್ದರ ಕಟ್ಟೆ, ಲಾಯಿಲ, ಬೆಳ್ತಂಗಡಿ ನಗರ ವ್ಯಾಪ್ತಿಯ ಸಂಜಯನಗರ ಕಡೆಗಳಲ್ಲಿ ಮಂಗಳವಾರ ರಾತ್ರಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಬಿತ್ತಿಪತ್ರ ಪ್ರದರ್ಶನ ಹಾಗೂ CAA ವಿರುದ್ಧ ಘೋಷಣೆ ಕೂಗುವ ಮೂಲಕ ಎಸ್‌ಡಿಪಿಐ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ನಾಗರೀಕರು ಬೀದಿಗೆ ಬಂದು ಪ್ರತಿಭಟನೆ ನಡೆಸಿದರು.

ಕುವೈತ್ ನಲ್ಲಿ ಕೇರಳದ 19 ನರ್ಸ್ ಗಳ ಸಹಿತ 30 ಭಾರತೀಯರು ಅರೆಸ್ಟ್

Posted by Vidyamaana on 2023-09-18 20:02:01 |

Share: | | | | |


ಕುವೈತ್ ನಲ್ಲಿ ಕೇರಳದ 19 ನರ್ಸ್ ಗಳ ಸಹಿತ 30 ಭಾರತೀಯರು ಅರೆಸ್ಟ್

ಕುವೈತ್: ನಗರದ ಮಲಿಯಾದಲ್ಲಿರುವ ಖಾಸಗಿ ಕ್ಲಿನಿಕ್ ಮೇಲೆ ಕುವೈತ್ ಮಾನವ ಸಂಪನ್ಮೂಲ ಸಮಿತಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 19 ಮಂದಿ ಕೇರಳದ ನರ್ಸ್‌ಗಳು ಸೇರಿದಂತೆ 30 ಭಾರತೀಯರು ಕಳೆದ ವಾರ ಜೈಲು ಸೇರಿದ್ದಾರೆ.



ಮಲಯಾಳಿ ನರ್ಸ್‌ಗಳ ಸಂಬಂಧಿಕರ ಪ್ರಕಾರ, ಕುವೈತ್‌ನಲ್ಲಿ ವಿದೇಶಿ ರೆಸಿಡೆನ್ಸಿ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತೀಯರು ಸೇರಿದಂತೆ 60 ಜನರು ದಾಳಿಯ ಸಮಯದಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಕುವೈತ್ ಗೃಹ ಸಚಿವಾಲಯದ ಪ್ರಕಾರ, ದಾದಿಯರು ಕುವೈತ್‌ನಲ್ಲಿ ಕೆಲಸ ಮಾಡಲು ಸೂಕ್ತವಾದ ಪರವಾನಿಗೆ ಗಳನ್ನು ಹೊಂದಿಲ್ಲ ಅಥವಾ ಅಗತ್ಯ ಅರ್ಹತೆಗಳನ್ನು ಹೊಂದಿಲ್ಲ ಎಂದು ಆರೋಪಿಸಿ ಬಂಧಿಸಲಾಗಿದೆ.


ಆದರೆ ಕೇರಳದ ದಾದಿಯರ ಕುಟುಂಬದ ಸದಸ್ಯರು ಅವರು ಅರ್ಹತೆ ಹೊಂದಿದ್ದಾರೆ ಮತ್ತು ಸರಿಯಾದ ಕೆಲಸದ ವೀಸಾ ಮತ್ತು ಪ್ರಾಯೋಜಕತ್ವದೊಂದಿಗೆ ಅಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.ಅವರಲ್ಲಿ ಹಲವರು ಕಳೆದ ಮೂರರಿಂದ 10 ವರ್ಷಗಳಿಂದ ಒಂದೇ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಫಿಲಿಪೈನ್ಸ್, ಈಜಿಪ್ಟ್ ಮತ್ತು ಇರಾನ್‌ನ ಜನರು ಸಹ ಇದೇ ಆರೋಪದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.


ಆಸ್ಪತ್ರೆಯು ಇರಾನ್ ಪ್ರಜೆಯ ಒಡೆತನದಲ್ಲಿದೆ ಮತ್ತು ದಾದಿಯರ ಸಂಬಂಧಿಕರ ಪ್ರಕಾರ, ಮಾಲೀಕರು ಮತ್ತು ಪ್ರಾಯೋಜಕರ ನಡುವಿನ ವಿವಾದವು ದಾಳಿ ಮತ್ತು ಬಂಧನಕ್ಕೆ ಕಾರಣವಾಯಿತು ಎಂದು ಹೇಳುತ್ತಾರೆ.

ಬಂಧಿತ ಮಲಯಾಳಿ ನರ್ಸ್‌ಗಳಲ್ಲಿ ಐವರು ಹಾಲುಣಿಸುವ ತಾಯಂದಿರು. ಜೆಸ್ಸಿನ್ ಅವರಲ್ಲಿ ಒಬ್ಬರು, ಅವರು ಮನೆಯಲ್ಲಿ ಒಂದು ತಿಂಗಳ ಹಸು ಕೂಸು ಇದ್ದಾರೆ. ಹೀಗಾಗಿ ಜೈಲು ಅಧಿಕಾರಿಗಳು ನಿಗದಿತ ಸಮಯದಲ್ಲಿ ಮಗಳಿಗೆ ಹಾಲುಣಿಸಲು ಜೆಸ್ಸಿನ್‌ಗೆ ಅವಕಾಶ ನೀಡಿದ್ದರೂ, ಇದೀಗ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿದೆ. ಕೇರಳದ ಅಡೂರು ಮೂಲದ ನರ್ಸ್ ಪತಿ ಬಿಜೋಯ್ ಕಳೆದ ಆರು ದಿನಗಳಿಂದ ಮಗುವನ್ನು ಜೈಲಿಗೆ ಕರೆದೊಯ್ದಿದ್ದಾರೆ.


ಕುಟುಂಬ ಸದಸ್ಯರ ಪ್ರಕಾರ, ಜೆಸ್ಸಿನ್ ತನ್ನ ಹೆರಿಗೆ ರಜೆಯ ನಂತರ ಮತ್ತೆ ಕರ್ತವ್ಯಕ್ಕೆ ಸೇರಿದ ದಿನವೇ ಬಂಧಿಸಲಾಯಿತು. ಬಿಜೋಯ್ ಮತ್ತು ಜೆಸ್ಸಿನ್ ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಜಾಲಿಬೀಯ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ.


ಬಂಧಿತ ಮಲಯಾಳಿ ನರ್ಸ್‌ಗಳ ಸಂಬಂಧಿಕರು ದಾದಿಯರನ್ನು ಶೀಘ್ರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಾಯಭಾರಿ ಕಚೇರಿಯ ಮಧ್ಯಸ್ಥಿಕೆಯನ್ನು ಕೋರಿದ್ದಾರೆ.

ಪೆರುವಾಯಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Posted by Vidyamaana on 2023-05-01 09:03:11 |

Share: | | | | |


ಪೆರುವಾಯಿಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ಪುತ್ತೂರು: ಬಸವ ವಸತಿ ಸೇರಿದಂತೆ ವಿವಿಧ ಯೋಜನೆಯಡಿ ಗ್ರಾಪಂ ಮೂಲಕ ಗ್ರಾ‌ಮಸ್ಥರಿಗೆ ನೀಡುತ್ತಿದ್ದ ಮನೆಯನ್ನು ರಾಜ್ಯದ ಬಿಜೆಪಿ ಸರಕಾರ ಬಡವನಿಗೆ ನೀಡದೆ ವಂಚಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಮ್ ರೈ ಆರೋಪಿಸಿದರು.

ಬಿಜೆಪಿ ಕಾರ್ಯಕರ್ತರು‌ ಕಾಂಗ್ರೆಸ್ ಬರುವುದಾದರೆ ಸ್ವಾಗತವಿದೆ. ಭಯ ಪಡಬೇಡಿ ನಿಮ್ಮ ಶಾಸಕರಿರುವಾಗಲೇ ನಿಮ್ಮ ಕೆಲಸ ಆಗಲಿಲ್ಲ, ಅಕ್ರಮ ಸಕ್ರಮ ಫೈಲ್ ಮಾಡಿಕೊಡಲಿಲ. ನಾನು ಶಾಸಕನಾದರೆ ಪಕ್ಷ ಬೇದವಿಲದೆ ಎಲ್ಲರಿಗೂ ನೆರವು ನೀಡುತ್ತೇನೆ. ಅಶೋಕ್ ರೈ ಎಂದಿಗೂ ಮೋಸ ಮಾಡುವುದಿಲ್ಲ. ಕೊಟ್ಟ ಮಾತನ್ನು ತಪ್ಪಲಾರೆ ಎಂದು ಹೇಳಿದರು.‌ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅಶೋಕರು ಗೆದ್ದರೆ ಅವರೊಟ್ಟಿಗೆ ಹೋಗಬಹುದು ಎಂದು ಕೆಲವರು ಹೇಳುತ್ತಿದ್ದಾರೆ. ಗೆದ್ದರೆ ಕಾಂಗ್ರೆಸ್ ನಲ್ಲೇ ಇರುವೆ ಎಲ್ಲರ ಸೇವೆ ಮಾಡುವೆ ವಿನ ದುಷ್ಡ ಬುದ್ದಿ ನನಗಿಲ್ಲ. ನನ್ನ ತಂದೆ ಶಾಲೆ ಮೇಸ್ಟ್ರು ಆಗಿದ್ದರು. ಮೇಸ್ಡ್ರ ಮಗ ಯಾರ ಮನಸ್ಸಿಗೂ ನೋವು ಕೊಟ್ಟಿಲ್ಲ‌,ಕೊಡುವುದೂ ಇಲ್ಲ ಎಂದು ಹೇಳಿದರು.

ಬೆಳ್ತಂಗಡಿ : ಉಯ್ಯಾಲೆಯಲ್ಲಿ ಆಡುವಾಗ ಕುತ್ತಿಗೆ ಸಿಲುಕಿ ವಿದ್ಯಾರ್ಥಿ ಶ್ರೀಷಾ ಮೃತ್ಯು

Posted by Vidyamaana on 2023-07-16 15:26:15 |

Share: | | | | |


ಬೆಳ್ತಂಗಡಿ : ಉಯ್ಯಾಲೆಯಲ್ಲಿ ಆಡುವಾಗ ಕುತ್ತಿಗೆ ಸಿಲುಕಿ ವಿದ್ಯಾರ್ಥಿ ಶ್ರೀಷಾ  ಮೃತ್ಯು

ಬೆಳ್ತಂಗಡಿ : ರಜೆ ಇದ್ದ ಕಾರಣ ಮನೆಯಲ್ಲಿ ಸಾರಿಯಲ್ಲಿ ಮಾಡಿದ್ದ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವನ್ನಪ್ಪಿದ ಘಟನೆ ದಿಡುಪೆಯಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಮೊದಲ ಮಗ 8 ನೇ ತರಗತಿ ವಿದ್ಯಾರ್ಥಿ ಶ್ರೀಷಾ (14)  ಮನೆಯ ಅಂಗಳದಲ್ಲಿ ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿ ನೆಲಕ್ಕೆ ಬಿದ್ದಿದ್ದು ತಂಗಿ ನೋಡಿ ತಂದೆಗೆ ಮಾಹಿತಿ ನೀಡಿದ್ದು ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ ಘಟನೆ ಜುಲೈ 16 ರಂದು ಸಂಜೆ ನಡೆದಿದೆ.

ಬಾಲಕನ ಶವ ಶವಪರೀಕ್ಷೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು. ಘಟನೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಧನರಾಜ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ: ಜಿಲ್ಲಾಧಿಕಾರಿ

Posted by Vidyamaana on 2023-07-24 01:17:37 |

Share: | | | | |


ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ: ಜಿಲ್ಲಾಧಿಕಾರಿ

ಮಂಗಳೂರು: ದ.ಕ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಿಸುವ ಅನಿವಾರ್ಯತೆ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲಿನ್ ಹೇಳಿದ್ದಾರೆ.


ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ , ಪುತ್ತೂರು , ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ತಹಸೀಲ್ದಾರ್ ಹಂತದಲ್ಲಿ ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಆಯ್ದ ಶಾಲೆಗಳಿಗೆ ಸ್ಥಳೀಯವಾಗಿ ರಜೆ ಘೋಷಿಸಲು ಆಯಾ ತಾಲೂಕಿನ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಲೋಕಾರ್ಪಣೆ

Posted by Vidyamaana on 2023-03-13 10:37:47 |

Share: | | | | |


ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಲೋಕಾರ್ಪಣೆ

ಬೆಳ್ಳಾರೆ : ದ.ಕ.ಜಿಲ್ಲಾ ಪೊಲೀಸ್ ಘಟಕ ಬೆಳ್ಳಾರೆ ಪೊಲೀಸ್ ಠಾಣಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಮಾ.13 ರಂದು ನಡೆಯಿತು.

      ಮೀನುಗಾರಿಕೆ,ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಿ ಇತ್ತೀಚಿನ ದಿನದಲ್ಲಿ ವಿದ್ಯಾವಂತರು ಜಾಸ್ತಿಯಾದಂತೆ ಅಪರಾಧ ಪ್ರಕರಣಗಳು ಜಾಸ್ತಿಯಾಗುತ್ತಿದೆ.ಪೊಲೀಸ್ ಠಾಣೆಗಳು ಕೂಡ ಜಾಸ್ತಿಯಾಗುತ್ತಿದೆ.ಪ್ರಕರಣಗಳು ಕಮ್ಮಿಯಾಗಬೇಕು.ಪ್ರತಿಯೊಬ್ಬರು ಪ್ರೀತಿ ವಿಶ್ವಾಸದಿಂದ ಬಾಳಬೇಕು.ಪ್ರೀತಿ ವಿಶ್ವಾಸ,ನಂಬಿಕೆ ಇದ್ದರೆ ಸಮಸ್ಯೆ ನಿವಾರಣೆ ಸಾಧ್ಯ ಮತ್ತು 

ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಜನರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಂ ಅಮಟೆ IPS  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡಿಷನಲ್ಲಿ ಎಸ್ಪಿ ಧರ್ಮಪ್ಪ ಹೊಂದಿಸಿದರು. ನಿವೃತ್ತ ಎ ಎಸ್ ಐ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ರವೀಂದ್ರ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.



Leave a Comment: