ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಉಪ್ಪಿನಂಗಡಿ: ಮರಬಿದ್ದು ಮನೆಗಳಿಗೆ ಹಾನಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ಕುಮಾರ್ ರೈ

Posted by Vidyamaana on 2023-07-23 09:59:49 |

Share: | | | | |


ಉಪ್ಪಿನಂಗಡಿ: ಮರಬಿದ್ದು  ಮನೆಗಳಿಗೆ ಹಾನಿ ಸ್ಥಳಕ್ಕೆ ಭೇಟಿ ನೀಡಿದ  ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಉಪ್ಪಿನಂಗಡಿ ಗ್ರಾ.ಪಂ ವ್ಯಾಪ್ತಿಯ ಕಜೆಕಾರ್ ಎಸ್ ಸಿ ಕಾಲನಿಯಲ್ಲಿ ಶನಿವಾರ ರಾತ್ರಿ ಮರವೊಂದು ಮನೆಯ ಮೆಲೆ ಬಿದ್ದು ಎರಡೂ ಮನೆಗಳು ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.ಕಾಲನಿ ನಿವಾಸಿಗಳಾದ ಸುಂದರಿ ಹಾಗೂ ಸೇಸಮ್ಮ ಎಂಬವರ ಮನೆ ಹಾನಿಯಾಗಿದೆ. ಮನೆಯೊಳಗೆ ಮನೆ ಮಂದಿ ಇದ್ದರೂ ಯಾವುದೇ ಗಾಯಗಳಾಗಿಲ್ಲ. ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಮನೆಯ ಮಾಡಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಸರಕಾರದಿಂದ ಪರಿಹಾರ ಒದಗಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ ಕೆ ಬಿ, ಉಪ್ಪಿನಂಗಡಿ ಗ್ರಾ.ಪಂ ಪಿಡಿಒ ವಿಲ್ಪಡ್, ಗ್ರಾ.ಪಂ ಸದಸ್ಯ ಯು ಟಿ ತೌಸೀಫ್ ಹಾಗೂ ಉಪ್ಪಿನಂಗಡಿ ಗ್ರಾಮಕರಣಿಕರು ಉಪಸ್ಥಿತರಿದ್ದರು

ವಾಲಿಬಾಲ್ ಪಂದ್ಯ: ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದ ಹನೀನ್

Posted by Vidyamaana on 2023-10-06 16:02:33 |

Share: | | | | |


ವಾಲಿಬಾಲ್ ಪಂದ್ಯ: ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾದ ಹನೀನ್

ಪುತ್ತೂರು: ಮೈಸೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಬೆಥನಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಹನೀನ್ ಆಯ್ಕೆಯಾಗಿದ್ದಾರೆ.

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಹನೀನ್ ಅವರು, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿ ಪಡೆದುಕೊಂಡಿದ್ದರು.

ಇವರು ಇರ್ಶಾದ್ ಮತ್ತು ಸಾಜಿದ ದಂಪತಿ ಪುತ್ರ.

ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆ ಸಾವು ಕಲ್ಲಾಪು ಹೆದ್ದಾರಿಯಲ್ಲಿ ದುರ್ಘಟನೆ

Posted by Vidyamaana on 2023-09-25 16:27:29 |

Share: | | | | |


ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಮಹಿಳೆ ಸಾವು ಕಲ್ಲಾಪು ಹೆದ್ದಾರಿಯಲ್ಲಿ ದುರ್ಘಟನೆ

ಉಳ್ಳಾಲ : ಸ್ಕೂಟರಿನಿಂದ ರಸ್ತೆಗೆಸೆಯಲ್ಪಟ್ಟ ಸಹ ಸವಾರೆ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ರಾ.ಹೆ. 66ರ ಕಲ್ಲಾಪು ನಾಗನಕಟ್ಟೆಯ ಬಳಿ ನಿನ್ನೆ ರಾತ್ರಿ ನಡೆದಿದೆ. 


ಕಾಸರಗೋಡು ಜಿಲ್ಲೆಯ ಮಧೂರು, ಉಳಿಯ ನಿವಾಸಿ ಸುಮ ನಾರಾಯಣ ಗಟ್ಟಿ(51) ಮೃತಪಟ್ಟ ಮಹಿಳೆ. ಸುಮ ಅವರು ನಿನ್ನೆ ಮಧ್ಯಾಹ್ನ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ಕುಟಂಬದ ತರವಾಡು ಮನೆಯಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಯಂಕಾಲ ತಮ್ಮನ‌ ಜತೆ ಸ್ಕೂಟರಿನಲ್ಲಿ ಜಪ್ಪಿನ ಮೊಗರುವಿಗೆ ತೆರಳಿ ಅಸೌಖ್ಯದಿಂದ ಬಳಲುತ್ತಿದ್ದ ದೊಡ್ಡಮ್ಮನ ಆರೋಗ್ಯ ವಿಚಾರಿಸಿ ಹಿಂತಿರುಗುತ್ತಿದ್ದರು. 


ರಾ.ಹೆ.66 ರ ಕಲ್ಲಾಪು ನಾಗನ ಕಟ್ಟೆಯ ಬಳಿ ಭಾನುವಾರ ರಾತ್ರಿ ಸುಮ ಸ್ಕೂಟರಿನಿಂದ ಕೆಳಗೆ ಎಸೆಯಲ್ಪಟ್ಟು ಮೃತ ಪಟ್ಟಿದ್ದಾರೆ. ಸುಮ ಅವರ ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟಿರಬಹುದೆಂದು ಹೇಳಲಾಗುತ್ತಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಮೃತ ಸುಮ ಗಟ್ಟಿ ಅವರು ಮಧೂರಿನ ಗಟ್ಟಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಮೃತರುಪತಿ, ಎರಡು ಹೆಣ್ಣು, ಒಂದು ಗಂಡು ಮಗನನ್ನ ಅಗಲಿದ್ದಾರೆ.

BREAKING: ಸಂಸದ ಪ್ರಜ್ವಲ್ ರೇವಣ್ಣ 6 ದಿನ SIT ಕಸ್ಟಡಿಗೆ.! ನ್ಯಾಯಾಲಯ ಆದೇಶ

Posted by Vidyamaana on 2024-05-31 16:56:09 |

Share: | | | | |


BREAKING: ಸಂಸದ ಪ್ರಜ್ವಲ್ ರೇವಣ್ಣ 6 ದಿನ SIT ಕಸ್ಟಡಿಗೆ.! ನ್ಯಾಯಾಲಯ ಆದೇಶ

ಬೆಂಗಳೂರು : ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಜೆಡಿಎಸ್ ಮುಖಂಡ, ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಬಂಧಿಸಲಾಗಿದೆ

ಹಾಸನದ 33 ವರ್ಷದ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಅವರ ವಿರುದ್ಧದ ಆರೋಪಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಮಾನ ನಿಲ್ದಾಣದಿಂದ ವಶಕ್ಕೆ ತೆಗೆದುಕೊಂಡಿದೆ. ದೇಶವನ್ನು ತೊರೆದ ಸುಮಾರು ಒಂದು ತಿಂಗಳ ನಂತರ ಅವರು ಗುರುವಾರ ಮಧ್ಯರಾತ್ರಿ ಜರ್ಮನಿಯಿಂದ ಭಾರತಕ್ಕೆ ಮರಳಿದರು.

ಕೋರ್ಟ್‌ನಲ್ಲಿ ವಾದ-ಪ್ರತಿ ವಿವಾದ ಆಗಿದ್ದೇನು?

ಈ ನಡುವೆ ಪ್ರಜ್ವಲ್‌ ರೇವಣ್ಣ (Prajwal Revanna) ಅವರನ್ನು ಕೆಲ ನಿಮಿಷಗಳ ಹಿಂದೆ, ಬೆಂಗಳೂರಿನ 42 ನೇ ಎಸಿಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್‌ ಶಿವಕುಮಾರ್‌ ಅವರ ಮುಂದೆ ಹಾಜರು ಪಡಿಸಿದರು, ಈ ವೇಳೆ ಎಸ್‌ಐಟಿ (SIT) ಪರ ಎಸ್‌ಪಿಪಿ ಅಶೋಕ್‌ ನಾಯಕ್‌ ಅವರು ವಾದ ಮಂಡನೆ ಮಾಡಿದರು. 15 ದಿನಗಳ ಕಾಲ ಎಸ್‌ಐಟಿ (SIT) ಕಸ್ಟಡಿಗೆ ನಿಡುವಂತೆ ಮನವಿ ಮಾಡಿದರು,. ಆದರೆ ನ್ಯಾಯಾಧೀಶರು 6 ದಿನಗಳ ಕಾಲ ಎಸ್‌ಐಟಿ(SIT) ಕಸ್ಟಡಿಗೆ ನೀಡಿ ಆದೇಶವನ್ನು ಹೊರಡಿಸಿದರು

ನಿವೃತ್ತ ಶಿಕ್ಷಕ ಚಂದ್ರಶೇಖರ ಕುಂಜತ್ತಾಯ ನಿಧನ

Posted by Vidyamaana on 2024-05-23 09:53:42 |

Share: | | | | |


ನಿವೃತ್ತ ಶಿಕ್ಷಕ  ಚಂದ್ರಶೇಖರ ಕುಂಜತ್ತಾಯ ನಿಧನ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಿವಾಸಿ ಚಂದ್ರಶೇಖರ ಕುಂಜತ್ತಾಯ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು

ಮಾನಕ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ-ಸರ್ವಸುಸಜ್ಜಿತ- ವಿಸ್ತಾರ ಸ್ವರೂಪದ ಹೊಸ ಶೋರೂಂ ಮೇ27ರಂದು ಶುಭಾರಂಭ

Posted by Vidyamaana on 2023-05-26 00:42:54 |

Share: | | | | |


ಮಾನಕ ಜ್ಯುವೆಲ್ಲರ್ಸ್ ನ ಅತ್ಯಾಧುನಿಕ-ಸರ್ವಸುಸಜ್ಜಿತ- ವಿಸ್ತಾರ ಸ್ವರೂಪದ ಹೊಸ ಶೋರೂಂ ಮೇ27ರಂದು ಶುಭಾರಂಭ


ಇವರ ಕುಟುಂಬವೇ ಕಳೆದ ಹಲವಾರು ದಶಕಗಳಿಂದ ಚಿನ್ನದ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಕುಟುಂಬ. ಚಿನ್ನ ಆಭರಣವಾಗಿ ರೂಪುಗೊಳ್ಳುವ ಮೊದಲು ಪರಿಶುದ್ಧತೆಗೊಳಪಡುವ ಒಂದು ಸುದೀರ್ಘ ಪ್ರಾಸೆಸ್ ಇದ್ದು ಈ ಕ್ಲಿಷ್ಟಕರ ಮತ್ತು ಅಷ್ಟೇ ವಿಶ್ವಾಸಾರ್ಹತೆಯನ್ನು ಬಯಸುವ ಒಂದು ಕೆಲಸವನ್ನು ಹಲವಾರು ವರ್ಷಗಳ ಕಾಲ ನಿಷ್ಠೆಯಿಂದ ಮಾಡಿಕೊಂಡು ಬಂದಂತಹ ಪರಿವಾರದ ಹಿನ್ನಲೆ ಆ ಬಳಿಕ ಇಂದಿಗೆ 17 ವರ್ಷಗಳ ಹಿಂದೆ ಚಿನ್ನಾಭರಣಗಳ ರಿಟೇಲ್ ವ್ಯವಹಾರಕ್ಕೆ ಕೈಹಾಕಿ ಅದರಲ್ಲಿ ಇಂದಿನವರೆಗೂ ಗ್ರಾಹಕರ ನಂಬಿಕೆಗೆ ಕುಂದು ಬರದ ರೀತಿಯಲ್ಲಿ ವ್ಯವಹಾರವನ್ನು ನಡೆಸಿಕೊಂಡು ಬಂದಿರುವ ಪುತ್ತೂರಿನ ಹೆಸರಾಂತ ‘ಮಾನಕ ಜ್ಯುವೆಲ್ಲರ್’ ಇದೀಗ ತನ್ನ ವ್ಯವಹಾರ ವ್ಯಾಪ್ತಿಯನ್ನು ವಿಸ್ತರಿಕೊಳ್ಳುವ ಪ್ರಯತ್ನದಲ್ಲಿ ಇದೇ ಮೇ 27ರಂದು ಪುತ್ತೂರು ಮುಖ್ಯರಸ್ತೆಯಲ್ಲಿರುವ ಸಿಪಿಸಿ ಪ್ಲಾಝಾದ ಎದುರುಗಡೆಯಿರುವ ಎಂ.ಎಸ್. ಕಾಂಪ್ಲೆಕ್ಸ್ ನ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ‘ಮಾನಕ’ ಬೆಳೆದುಬಂದ ರೀತಿಯ ಬಗ್ಗೆ ಮತ್ತು ಅವರ ವ್ಯವಹಾರ ವೈಶಿಷ್ಟ್ಯಗಳ ಮೇಲೆ ಬೆಳಕು ಚೆಲ್ಲುವ ವಿಶೇಷ ಪ್ರಯತ್ನ ಈ ಲೇಖನ ಮೂಲಕ ಮಾಡುತ್ತಿದ್ದೇವೆ.

ತಮ್ಮ ತಂದೆಯವರಿಗೆ ಪುತ್ತೂರಿನ ನಂಟು ಮತ್ತು ಇಲ್ಲಿನ ಜನ ಈ ವ್ಯವಹಾರದಲ್ಲಿ ತಮ್ಮ ಮೇಲೆ ತೋರಿಸಿದ ಪ್ರೀತಿ-ವಿಶ್ವಾಸಗಳ ‘ಚಿನ್ನದ ಹಾದಿ’ಯ ಬಗ್ಗೆ ‘ವಿದ್ಯಮಾನ’ಕ್ಕೆ ಸವಿವರವಾದ ಮಾಹಿತಿಯನ್ನು ಕೊಟ್ಟಿದ್ದಾರೆ ಸಂಸ್ಥೆಯ ಮಾಲಕರಾಗಿರುವ ಸಿದ್ಧನಾಥ್ ಮತ್ತು ಅವರ ಸಹೋದರಾಗಿರುವ ಸಹದೇವ್ ಮತ್ತು ಸನತ್ ಕುಮಾರ್. ಬನ್ನಿ ಪುತ್ತೂರಿನ ಚಿನ್ನದ ಉದ್ಯಮಕ್ಕೊಂದು ಹೊಸ ಮಾನವನ್ನು ತಂದುಕೊಟ್ಟ ‘ಮಾನಕ ಜ್ಯುವೆಲ್ಲರ್ಸ್’ನ ಸಾಧನೆಯ ಕಥೆಗೆ ಸ್ವಲ್ಪ ಕಿವಿಯಾಗೋಣ!

ತಮ್ಮ ದೊಡ್ಡಪ್ಪನವರ ಚಿನ್ನ ಪರಿಶುದ್ದೀಕರಣ  ಮಂಗಳೂರಿನಲ್ಲಿದ್ದ ಕಾರಣ ‘ಮಾನಕ ಜ್ಯುವೆಲ್ಲರ್ಸ್’ ಸಂಸ್ಥೆಯ ಮಾಲಕರಾದ ಸಿದ್ಧನಾಥ್ ಅವರ ತಂದೆಯವರಾದ ಶಂಕರ್ ವಿಠೋಬಾ ಕಂದಾಳೆ ಅಥವಾ ಶಂಕರ್ ವಿ.ಕೆ ಅವರು ಮಂಗಳೂರಿಗೆ ಬಂದು ಸೇರಿಕೊಳ್ತಾರೆ. ಆದರೆ ಅಲ್ಲಿಂದ ಅವರು ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕೆಂಬ ಇಚ್ಛೆಯಿಂದ ವಿಜಯವಾಡ, ಕೊಟ್ಟಾಯಂ ಎಲ್ಲ ತಿರುಗಿ ಅಲ್ಲಿ ವ್ಯವಹಾರ ಕೈಹಿಡಿಯದೇ ಇದ್ದಾಗ ವಾಪಾಸು ಮಂಗಳೂರಿಗೆ ಬರ್ತಾರೆ. ಅಲ್ಲಿಂದ ನೇರವಾಗಿ ಸರಿಸುಮಾರು 1970ನೇ ಇಸವಿಯಲ್ಲಿ ಪುತ್ತೂರಿಗೆ ಬಂದಾಗ ಶಂಕರ್ ಅವರನ್ನು ಇಲ್ಲಿನ ಮಹಾಲಿಂಗೇಶ್ವರನೇ ಕರೆದನೋ ಎನ್ನುವಂತೆ ಅವರು ಪುತ್ತೂರಿನಲ್ಲೇ ನೆಲೆನಿಲ್ಲುವಂತ ಸನ್ನಿವೇಶವೊಂದು ಒದಗಿ ಬರುತ್ತದೆ.

ಅದು ಹೇಗಂದ್ರೆ, ಶಂಕರ್ ಅವರು ಪುತ್ತೂರಿಗೆ ಬಂದ ದಿನವೇ ಇಲ್ಲಿನ ಸ್ಥಳೀಯರೊಬ್ಬರು ಶಂಕರ್ ಅವರಿಗೆ ಬೆಂಬಲವಾಗಿ ನಿಲ್ತಾರೆ. ಅಂದ್ರೆ ಪ್ರಾರಂಭದಲ್ಲಿ ಇವರು ಮಾಡ್ತಿದ್ದಿದ್ದು ಚಿನ್ನದ ಶುದ್ಧೀಕರಣದ ಕೆಲಸ. ಈ ಕೆಲಸವನ್ನು ಮಾಡುವ ವೃತ್ತಿಪರರು ಪುತ್ತೂರಿನಲ್ಲಿ ಆ ಸಮಯದಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ಇವರ ತಂದೆಯವರು ಪ್ರಾರಂಭಿಸಿದ ಇಲ್ಲಿನ ಕೋರ್ಟ್ ರೋಡಲ್ಲಿ ಪ್ರಾರಂಭಿಸಿದ ವರ್ಕ್ ಶಾಪೇ ಪುತ್ತೂರಿನಲ್ಲಿ ಪ್ರಪ್ರಥಮ ಚಿನ್ನದ  ಶುದ್ಧೀಕರಣ ಮಾಡುವ ಸಂಸ್ಥೆಯಾಗಿ ಪ್ರಾರಂಭಗೊಳ್ಳುತ್ತದೆ. ಹಾಗೆ ಪ್ರಾರಂಭದ ದಿನಗಳಲ್ಲಿ ಬಾಡಿಗೆ ಶಾಪ್ ನಲ್ಲಿ ಪ್ರಾರಂಭಗೊಂಡ ಈ ಚಿನ್ನದ ಶುದ್ಧೀಕರಣದ ವ್ಯವಹಾರ ಕಷ್ಟದ ಪರಿಸ್ಥಿತಿಯಲ್ಲೇ ಹಲವು ವರ್ಷಗಳ ಕಾಲ ಮುಂದುವರಿಯುತ್ತದೆ.ತಮ್ಮ ನಗುಮೊಗದ ಸೇವೆಯೊಂದಿಗೆ ಕಾಲಮಿತಿಯಲ್ಲಿ ಗ್ರಾಹಕರ ಇಚ್ಛೆಗೆ ತಕ್ಕಂತೆ ಚಿನ್ನದ ಆಭರಣಗಳನ್ನು ನೀಡುವ ಮೂಲಕ ಗ್ರಾಹಕರ ಮನಗೆದ್ದು ಕೇವಲ 18 ವರ್ಷಗಳಲ್ಲಿ ಅಪಾರ ಗ್ರಾಹಕ ಬಂಧುಗಳ ಪ್ರೀತಿಯನ್ನು ಇವರು ಗಳಿಸಿದ್ದಾರೆ.

‘ಹೀಗೆ 1992ನೇ ಇಸವಿವರೆಗೆ ಈ ಉದ್ಯಮವನ್ನೇ ನಾವು ಮುಂದುವರಿಸ್ತಾ ಬಂದೆವು. ಈ ಸಂದರ್ಭದಲ್ಲಿ ನಮಗೆ ನಾವು ನಡೆಸ್ತಿದ್ದ ಈ ಉದ್ಯಮ ಸ್ವಲ್ಪ ಡಲ್ ಆಗ್ತಿದೆ ಅನ್ನಿಸ್ತು. ಅಂದ್ರ ಚಿನ್ನದ ಶುದ್ಧೀಕರಣ  ಉದ್ಯಮದಲ್ಲಿ ನುರಿತ ಕೆಲಸಗಾರರ ಅವಶ್ಯಕತೆ ಇರ್ತದೆ, ಈ ಹಂತದಲ್ಲಿ ಸುಮಾರು ಜನ ಕೆಲಸಗಾರರು ಬಿಟ್ಟು ಹೋಗಿ ಮಾಡ್ತಿದ್ದ ಕಾರಣ ನಮಗೆ ಸ್ವಲ್ಪ ಸಮಸ್ಯೆ ಆಯ್ತು’ ಎಂಬ ವಿಚಾರವನ್ನು ಸಿದ್ಧನಾಥ್ ಅವರು ನೆನಪಿಸಿಕೊಳ್ತಾರೆ.

ಎಸ್ಸೆಸ್ಸೆಲ್ಸಿ ಮುಗಿಸಿ ಕುಟುಂಬಕ್ಕಾಗಿ ಚಿನ್ನದ ಉದ್ಯಮಕ್ಕೆ ಎಂಟ್ರಿ!

‘1992ರಲ್ಲಿ ನಾವು ನಡೆಸ್ತಿದ್ದ ಮುಂಚಿನ ವ್ಯವಹಾರದಲ್ಲಿ ಕೆಲಸಗಾರರ ತೊಂದರೆ ಕಾಣಿಸಿಕೊಂಡಾಗ ಕಲಿಕೆಯಲ್ಲಿ ಮುಂದಿದ್ರೂ ಅನಿವಾರ್ಯವಾಗಿ ಕುಟುಂಬಕ್ಕಾಗಿ ನಾನು ಓದನ್ನು ಮುಂದುವರಿಸಲಾಗದೇ ಈ ಉದ್ಯಮಕ್ಕೆ ಎಂಟ್ರಿ ಕೊಡಬೇಕಾಯ್ತು’ ಎಂದು ಸಿದ್ಧನಾಥ್ ಅವರು ತಾವು ಚಿನ್ನದ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದ ಹಿನ್ನಲೆಯನ್ನು ಸ್ಮರಿಸಿಕೊಳ್ಳುತ್ತಾರೆ. ಹೀಗೆ ಒಮ್ಮೆ ಇಳಿಮುಖವಾಗಿದ್ದ ವ್ಯವಹಾರ ಸಿದ್ಧನಾಥ್ ಪ್ರವೇಶದ ಬಳಿಕ ಪರಿಶ್ರಮದಿಂದ 2000ನೇ ಇಸವಿಯಲ್ಲಿ, ಅಂದರೆ 8 ವರ್ಷಗಳಲ್ಲಿ ಮತ್ತೆ ‘ಪೀಕ್’ ಮಟ್ಟಕ್ಕೆ ಮುಟ್ಟುವಂತಾಯ್ತು ಎಂಬುದನ್ನು ಅವರು ನೆನಪಿಸಿಕೊಳ್ತಾರೆ.

ಮಾನಕ’ ಪ್ರಾರಂಭಗೊಂಡದ್ದೇ ಒಂದು ರೋಚಕ ಕಥೆ!

ಹೌದು, ಈ ಭಾಗದ ಜ್ಯುವೆಲ್ಲರಿಯವರಿಗೆ ಚಿನ್ನಗಳನ್ನು ಶುದ್ಧೀಕರಿಸಿ ಕೊಡುವ ಮತ್ತು ಆಭರಣಗಳ ತಯಾರಿಗಿಂತ ಮುಂಚಿನ ಪ್ರಾಸೆಸ್ ಗಳನ್ನು ಮಾಡಿಕೊಡುವ ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದ ಸಮಯದಲ್ಲೇ ಸಿದ್ಧನಾಥ್ ಅವರು ಚಿನ್ನೋದ್ಯಮ ಮಳಿಗೆಯನ್ನು ಪ್ರಾರಂಭಿಸುವ ಯೋಚನೆಯೊಂದನ್ನು ಮಾಡ್ತಾರೆ. ಚಿನ್ನದ ರಿಟೇಲ್ ವ್ಯವಹಾರಕ್ಕೆ ಇಳಿಯುವುದೋ ಬೇಡವೋ ಎಂಬ ಗೊಂದಲದಲ್ಲೇ ಫೈನಲೀ 2005ರಲ್ಲಿ ಇವರು ಚಿನ್ನದ ರಿಟೇಲ್ ವ್ಯವಹಾರಕ್ಕೆ ಕೈ ಹಾಕುತ್ತಾರೆ! ಹಾಗೆ ತಂದೆಯ ಸಮರ್ಥ ಮಾರ್ಗದರ್ಶನದಲ್ಲಿ ಮತ್ತು ಮುಂದಾಳತ್ವದಲ್ಲಿ ‘ಮಾನಕ’ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡ ಚಿನ್ನೋದ್ಯಮ ಮಳಿಗೆಯ ವ್ಯವಹಾರ ಇವತ್ತು ಪುತ್ತೂರು ಮಾತ್ರವಲ್ಲದೇ ರಾಜ್ಯಾದ್ಯಂತ ಹೆಸರು ಮಾಡುತ್ತಿರುವ ಉದ್ಯಮವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರವೇ ಸರಿ.

ಗ್ರಾಹಕರೊಂದಿಗಿನ ಮುಕ್ತ ವ್ಯವಹಾರವೇ ‘ಮಾನಕ’ದ ಸ್ಪೆಷಾಲಿಟಿ!

‘ಹಿಂದಿನ ವ್ಯವಹಾರದಲ್ಲೇ ನಮಗೆ ಸಾಕಷ್ಟು ಗ್ರಾಹಕ ಸಂಪರ್ಕವಿದ್ದ ಕಾರಣ ನಾವು ‘ಮಾನಕ’ ಪ್ರಾರಂಭಿಸಿದಾಗ ನಮಗೆ ಗ್ರಾಹಕ ಸಂಪರ್ಕ ಬೆಳೆಸಿಕೊಳ್ಳುವುದು ಇನ್ನಷ್ಟು ಸುಲಭವಾಯಿತು. ಗ್ರಾಹಕರೊಂದಿಗೆ ನಾವು ಮುಕ್ತವಾಗಿ ಮಾತನಾಡುವುದೂ ಸಹ ನಮ್ಮ ವ್ಯವಹಾರ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ ಎಂಬುದನ್ನು ಸಿದ್ಧನಾಥ್ ಸಹೋದರರು ಆತ್ಮವಿಶ್ವಾಸದಿಂದ ಹೇಳಿಕೊಳ್ಳುತ್ತಾರೆ. ಕೇವಲ ಒಂದೇ ಮಳಿಗೆಯನ್ನು ಹೊಂದಿದ್ದರೂ ಪುತ್ತೂರು, ವಿಟ್ಲ, ಉಪ್ಪಿನಂಗಡಿ, ಸುಳ್ಯ, ಬೆಳ್ಳಾರೆ ಭಾಗಗಳಿಂದ ಮಾತ್ರವಲ್ಲದೇ ಕರಾವಳಿ ಮತ್ತು ಮಲೆನಾಡಿನ ಭಾಗಗಳ ಗ್ರಾಹಕವರ್ಗವನ್ನು ಹೊಂದಿರುವುದು ‘ಮಾನಕ ಜ್ಯುವೆಲ್ಲರ್ಸ್’ನ ಒಂದು ವಿಶೇಷತೆಯೇ ಸರಿ!

ಕಾಂಪಿಟೇಶನ್ ಎದುರಿಸಿ ವ್ಯವಹಾರದಲ್ಲಿ ಗೆದ್ದ ‘ಮಾನಕ’!

ಪುತ್ತೂರಿನಲ್ಲಿರುವಷ್ಟು ಚಿನ್ನದ ಮಳಿಗೆಗಳು ನಮ್ಮ ಕರಾವಳಿ ಭಾಗದಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ಮಾನಕ ಪ್ರಾರಂಭಗೊಂಡ ಸಂದರ್ಭದಲ್ಲೇ ಪುತ್ತೂರಿನಲ್ಲಿ 70ಕ್ಕೂ ಅಧಿಕ ಚಿನ್ನದ ಮಳಿಗಗೆಳಿದ್ದವು, ಇವೆಲ್ಲದರ ನಡುವೆ ಮಾನಕ ತನ್ನ ಗ್ರಾಹಕ ಸೇವೆ, ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದ ಪ್ರಾರಂಭಗೊಂಡ ಕೆಲವೇ ವರ್ಷಗಳಲ್ಲಿ ಈ ಉದ್ಯಮದಲ್ಲಿ ಹೆಚ್ಚಿನ ಹೆಸರು ಮಾಡಲು ಸಾಧ್ಯವಾಯಿತು. ಸಂಸ್ಥೆಯ ಮಾಲಕರೇ ನೇರವಾಗಿ ಗ್ರಾಹಕರೊಂದಿಗೆ ವ್ಯವಹರಿಸಿ ಗುಣಮಟ್ಟ ಮತ್ತು ಪರಿಶುದ್ಧತೆಯನ್ನು ಖಾತ್ರಿ ಮಾಡಿಕೊಳ್ಳುವುದೂ ಸಹ ಸಂಸ್ಥೆಯ ಯಶಸ್ಸಿಗೆ ಇನ್ನೊಂದು ಕಾರಣವಾಗಿದೆ.

ಮಾನಕ’ವೆಂಬ ಹೊಸ ಪ್ರಯತ್ನಕ್ಕೆ ಪ್ರೋತ್ಸಾಹದ ಸಂಜೀವನಿ ನೀಡಿದ ‘ಸಂಜೀವ ಶೆಟ್ರು’!

ಪುತ್ತೂರಿನಲ್ಲಿ ಪ್ರಾರಂಭಗೊಂಡು ಕರಾವಳಿಯಾದ್ಯಂತ ಜವಳಿ ಉದ್ಯಮದಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿರುವ ಸಂಜೀವ ಶೆಟ್ಟಿ ವಸ್ತ್ರ ಮಳಿಗೆಯ ಹೆಸರನ್ನು ಕೇಳದವರು ಯಾರು? ಇದನ್ನು ಸ್ಥಾಪಿಸಿದ ಸಂಜೀವ ಶೆಟ್ರಿಗೂ ‘ಮಾನಕ ಜ್ಯುವೆಲ್ಲರ್ಸ್’ಗೂ ಒಂದು ಅವಿನಾಭಾವ ಸಂಬಂಧವಿದೆ ಎಂದರೆ ನಂಬಲೇಬೇಕು! ಅಂದು ಮಾನಕ ಜ್ಯುವೆಲ್ಲರ್ಸ್ ಉದ್ಘಾಟನೆಗೆ ಅತಿಥಿಯಾಗಿ ಸಂಜೀವ ಶೆಟ್ರನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ ಅವರು ಸಂತೋಷದಿಂದ್ಲೇ ಆಗಮಿಸಿ ಹೊಸ ಉದ್ಯಮಕ್ಕೆ ಶುಭ ಹಾರೈಸಿದ್ದರು, ಆ ಬಳಿಕ ಪ್ರತೀವರ್ಷ ಮಾನಕಕ್ಕೆ ಬಂದು ಚಿನ್ನವನ್ನು ಖರೀದಿಸಿ ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು. ಅದರಂತೆ ಇದೀಗ ಮಾನಕ ಜ್ಯುವೆಲ್ಲರ್ಸ್ ನ ನೂತನ ಸುಸಜ್ಜಿತ ಮಳಿಗೆಯ ಉದ್ಘಾಟನೆಗೆ ಸಂಜೀವ ಶೆಟ್ರ ಪುತ್ರ ಮತ್ತು ‘ಸಂಜೀವ ಶೆಟ್ಟಿ’ ಸಂಸ್ಥೆಯ ಆಡಳಿತ ನಿರ್ದೇಶಕರಾಗಿರುವ ಗಿರಿಧರ ಶೆಟ್ಟಿ ಅವರನ್ನು ಆಹ್ವಾನಿಸಲಾಗಿದೆ ಆ ಮೂಲಕ ಒಂದು ತಲೆಮಾರಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವುದು ವಿಶೇಷವಾಗಿದೆ.

ತಂದೆಯ ಮಾರ್ಗದರ್ಶನ – ತಾಯಿಯ ಹೆಸರು – ತ್ರಿವಳಿ ಸಹೋದರರ ಪರಿಶ್ರಮವೇ ‘ಮಾನಕ’ದ ಯಶಸ್ಸಿನ ಗುಟ್ಟು!

ಚಿನ್ನ ಪರಿಶುದ್ಧಗೊಳಿಸುವ ವ್ಯವಹಾರದಿಂದ ಚಿನ್ನಾಭರಣಗಳ ರಿಟೇಲ್ ವ್ಯವಹಾರಕ್ಕೆ ಇಳಿದ ಸಂದರ್ಭದಲ್ಲಿ ಸಿದ್ಧನಾಥ್ ಅವರ ತಂದೆ ನೀಡಿದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಇವರಿಗೆ ಎಂದೆಂದೂ ಬೆನ್ನೆಲುಬಾಗಿ ನಿಂತಿದೆ. ಹಾಗೆಯೇ ತಮ್ಮ ತಾಯಿಯ ಹೆಸರಿನಲ್ಲಿ ಪ್ರಾರಂಭಿಸಿದ ರಿಟೇಲ್ ಉದ್ಯಮ ಇಂದು ಇವರ ಕೈಹಿಡಿದು ಮುನ್ನಡೆಸುತ್ತಿದೆ. ಸಿದ್ಧನಾಥ್-ಸಹದೇವ್ ಮತ್ತು ಸನತ್ ಕುಮಾರ್ ಎಂಬ ತ್ರಿವಳಿ ಸಹೋದರರ ಒಮ್ಮತದ ಪರಿಶ್ರಮ ಅವರನ್ನು ಇಂದು ಪುತ್ತೂರಿನ ಸ್ವರ್ಣೋದ್ಯಮದಲ್ಲಿ ಒಂದು ಉನ್ನತವಾದ ಸ್ಥಾನ-ಮಾನಗಳನ್ನು ಹೊಂದುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ಇಂದಿನ ಕಾಲಮಾನ ಮತ್ತು ಹೊಸ ಗ್ರಾಹಕವರ್ಗದ ಅಭಿರುಚಿ ಮತ್ತು ಅಗತ್ಯತೆಗಳಿಗೆ ತಕ್ಕಂತೆ ವಿಸ್ತೃತವಾಗಿರುವ ಸುಸಜ್ಜಿತ ಮಳಿಗೆಯನ್ನು ಪ್ರಾರಂಭಿಸಿದರೂ ತಮ್ಮ ಗ್ರಾಹಕ ವ್ಯವಹಾರ ವಿಧಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ ಮತ್ತು ನಮ್ಮ ಗ್ರಾಹಕರ ಚಿನ್ನಾಭರಣ ಅಗತ್ಯತೆಗಳನ್ನು ನಾವೇ ಖುದ್ದಾಗಿ ವಿಚಾರಿಸಿ ಅವರ ಮನಃತೃಪ್ತಿಪಡಿಸುವಂತ ಗ್ರಾಹಕ ಸೇವೆಯನ್ನು ನೀಡುತ್ತೇವೆ ಎಂಬ ಭರವಸೆಯನ್ನು ಸಂಸ್ಥೆಯ ಮಾಲಕರು ಇದೇ ಸಂದರ್ಭದಲ್ಲಿ ನೀಡಲು ಮರೆಯುವುದಿಲ್ಲ. ನೂತನವಾಗಿ ಪ್ರಾರಂಭಗೊಳ್ಳಲಿರುವ ‘ಮಾನಕ ಜ್ಯುವೆಲ್ಲರ್ಸ್’ನ ಸರ್ವಸುಸಜ್ಜಿತ ಮಳಿಗೆ ಗ್ರಾಹಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಿ ಇವರಿಗೆ ಈ ಉದ್ಯಮದಲ್ಲಿ ಇನ್ನಷ್ಟು ಯಶಸ್ಸು ಸಿಗುವಂತೆ ಮಹಾಲಿಂಗೇಶ್ವರ ದೇವರು ಅನುಗ್ರಹಿಸಲಿ ಎಂಬ ಶುಭಹಾರೈಕೆಗಳು ನಮ್ಮದು.



Leave a Comment: