ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಇಸ್ರೇಲ್ ದೇಶಕ್ಕೆ ಯಾವುದೇ ಸಾಮಗ್ರಿ ನೀಡಬೇಡಿ ತೈಲ ಸೇರಿ ಎಲ್ಲವನ್ನೂ ಬಹಿಷ್ಕರಿಸಿ ; ಮುಸ್ಲಿಂ ರಾಷ್ಟ್ರಗಳಿಗೆ ಇರಾನ್‌ ಕರೆ

Posted by Vidyamaana on 2023-11-02 15:24:44 |

Share: | | | | |


ಇಸ್ರೇಲ್ ದೇಶಕ್ಕೆ ಯಾವುದೇ ಸಾಮಗ್ರಿ ನೀಡಬೇಡಿ  ತೈಲ ಸೇರಿ ಎಲ್ಲವನ್ನೂ ಬಹಿಷ್ಕರಿಸಿ ; ಮುಸ್ಲಿಂ ರಾಷ್ಟ್ರಗಳಿಗೆ ಇರಾನ್‌ ಕರೆ

ನವದೆಹಲಿ, ನ.2: ಇಸ್ರೇಲ್ ದೇಶಕ್ಕೆ ತೈಲ, ಆಹಾರ ಸೇರಿದಂತೆ ಯಾವುದೇ ಸಾಮಗ್ರಿಗಳನ್ನು ನೀಡಬೇಡಿ. ಆ ದೇಶಕ್ಕೆ ರಫ್ತು ಮಾಡುವುದನ್ನೇ ನಿಲ್ಲಿಸಿ ಎಂದು ಮುಸ್ಲಿಂ ರಾಷ್ಟ್ರಗಳಿಗೆ ಇರಾನ್‌ ದೇಶದ ಮುಸ್ಲಿಂ ನಾಯಕ ಅಯತೊಲ್ಲಾ ಅಲಿ ಖಮೇನಿ ಹೇಳಿದ್ದಾರೆ. ಅಲ್ಲದೆ, ಗಾಜಾ ಪಟ್ಟಿ ಮೇಲೆ ಇಸ್ರೇಲ್ ವಾಯುಪಡೆ ನಡೆಸುತ್ತಿರುವ ಬಾಂಬ್ ದಾಳಿ ನಿಲ್ಲಿಸಲು ಒತ್ತಾಯಿಸಬೇಕು ಎಂದಿದ್ದಾರೆ. 


ಇಸ್ರೇಲ್ ದೇಶವು ಪ್ಯಾಲೆಸ್ತೀನ್ ಭಾಗವಾಗಿರುವ ಗಾಜಾ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಇದು ಈ ಕೂಡಲೇ ನಿಲ್ಲಬೇಕು. ಯಹೂದಿ ರಾಷ್ಟ್ರಕ್ಕೆ ಮುಸ್ಲಿಂ ದೇಶಗಳಿಂದ ರಫ್ತಾಗುತ್ತಿರುವ ತೈಲ ಉತ್ಪನ್ನಗಳು ಹಾಗೂ ಆಹಾರ ಉತ್ಪನ್ನಗಳ ಸರಬರಾಜು ನಿಲ್ಲಬೇಕು ಎಂದು ಅಯತೊಲ್ಲಾ ಅಲಿ ಖಮೇನಿ ಆಗ್ರಹಿಸಿದ್ದಾರೆ. ಇರಾನ್‌ನ ಸರ್ಕಾರಿ ಮಾಧ್ಯಮದಲ್ಲಿ ಖಮೇನಿ ಭಾಷಣ ಪ್ರಸಾರವಾಗಿದೆ. ಈ ಭಾಷಣದಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿಶ್ವದೆಲ್ಲೆಡೆಯ ಇಸ್ಲಾಂ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ. 


 ಇರಾನ್ ಬೆಂಬಲಿತ ಹಮಾಸ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಒಮ್ಮೆಲೇ ದಾಳಿ ನಡೆಸಿದ್ದರು. ಜಲ, ನೆಲ, ವಾಯು ಮಾರ್ಗದಲ್ಲಿ ಇಸ್ರೇಲ್‌ಗೆ ಲಗ್ಗೆ ಇಟ್ಟಿದ್ದ ಉಗ್ರರು, 1,400ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳನ್ನು ಕೊಂದು ಹಾಕಿದ್ದರು. ಅಷ್ಟೇ ಅಲ್ಲ, 200ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳು ಹಾಗೂ ವಿದೇಶೀಯರನ್ನು ಒತ್ತೆಯಾಳನ್ನಾಗಿಸಿ ಗಾಜಾ ಪಟ್ಟಿಗೆ ಕರೆದೊಯ್ದಿದ್ದು ಸುರಂಗದಲ್ಲಿ ಅಡಗಿಸಿಟ್ಟಿದ್ದಾರೆ. ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಈವರೆಗೆ 8 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಹಮಾಸ್ ಕಡೆಯವರು ಹೇಳುತ್ತಿದ್ದಾರೆ

ಬೆಂಗಳೂರು ಕಂಬಳ: ಓಟದಲ್ಲಿ ಚಿನ್ನದ ಪದಕ ಗೆದ್ದ ಕಾಂತಾರ ಕೋಣಗಳು

Posted by Vidyamaana on 2023-11-26 19:39:25 |

Share: | | | | |


ಬೆಂಗಳೂರು ಕಂಬಳ: ಓಟದಲ್ಲಿ ಚಿನ್ನದ ಪದಕ ಗೆದ್ದ ಕಾಂತಾರ ಕೋಣಗಳು

ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಚಿನ್ನದ ಪದಕ ಗೆದ್ದಿವೆ. ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳಿಗೆ ಚಿನ್ನದ ಪದಕ ಗೆದ್ದಿವೆ.ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು ಇಂದು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟವನ್ನು ಅಲ್ಲಿ ನೆರೆದಿದ್ದವರು ಕಣ್ತುಂಬಿಕೊಂಡರು.ಅರಮನೆ ಮೈದಾನದಲ್ಲಿ ನಿರ್ಮಿಸಿರುವ ರಾಜ-ಮಹಾರಾಜ ಕೆರೆಯಲ್ಲಿ ಬೆಂಗಳೂರು ಕಂಬಳದ ಮೊದಲ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಅಪ್ಪು, ಕಿಟ್ಟು ಜೋಡಿ ಕೋಣಗಳು ಇತಿಹಾಸ ಬರೆದಿವೆ.ಏಳು ಬಲಿಷ್ಠ ಕೋಣಗಳ ಹಿಂದಿಕ್ಕಿದ ಕಾಂತಾರ ಜೋಡಿ ಕೋಣವು ಒಂದು ಲಕ್ಷ ನಗದು ಹಾಗೂ 16 ಗ್ರಾಂ ಚಿನ್ನ ತನ್ನದಾಗಿಸಿಕೊಂಡಿತು

ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು

Posted by Vidyamaana on 2023-06-09 02:59:27 |

Share: | | | | |


ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು

ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೈಲೂರು ಪರಶುರಾಮ ಥೀಮ್ ಪಾರ್ಕ್ ಬಳಿ ನಡೆದಿದೆ. ನೆಲ್ಲಿಗುಡ್ಡೆ ನಿವಾಸಿ ಕಾರ್ತಿಕ್ (23) ಮೃತ ದುರ್ದೈವಿ.

ಕಾರ್ತಿಕ್ ಬೈಲೂರಿನಿಂದ ಹೋಗುತ್ತಿದ್ದಾಗ ಕಾರ್ಕಳದಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಬಸ್ ಢಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡ ಕಾರ್ತಿಕ್ ಅವರು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತ ಕಾರ್ತಿಕ್ ಪತ್ನಿ ಹಾಗೂ 10 ತಿಂಗಳ ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಎದ್ದೆದ್ದು ನಿಂತು ಮಾತಾಡಿದ್ರೆ ನಿಮ್ಮನ್ನ ವಿಪಕ್ಷ ನಾಯಕ ಮಾಡುತ್ತಾರೆ ಅಂದುಕೊಂಡಿದ್ದೀರಾ? ಯತ್ನಾಳ್​ ಕಾಲೆಳೆದ ಸಿಎಂ

Posted by Vidyamaana on 2023-07-05 09:09:59 |

Share: | | | | |


ಎದ್ದೆದ್ದು ನಿಂತು ಮಾತಾಡಿದ್ರೆ ನಿಮ್ಮನ್ನ ವಿಪಕ್ಷ ನಾಯಕ ಮಾಡುತ್ತಾರೆ ಅಂದುಕೊಂಡಿದ್ದೀರಾ? ಯತ್ನಾಳ್​ ಕಾಲೆಳೆದ ಸಿಎಂ

ಬೆಂಗಳೂರು: ವಿರೋಧ ಪಕ್ಷದ ನಾಯಕನಿಲ್ಲದೇ ವಿಧಾಸಭೆ ಅಧಿವೇಶನ ನಡೆಯುತ್ತಿದ್ದು, ಇದಕ್ಕೆ ಮಾತಿನಲ್ಲೇ ಆಡಳಿತರೂಢ ಕಾಂಗ್ರೆಸ್ ನಾಯಕರು, ಬಿಜೆಪಿ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಅದರಂತೆ ಇಂದು (ಜುಲೈ 05) ಸದನದಲ್ಲಿ ಎದ್ದೆದ್ದು ಮಾತನಾಡುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ನಿಮ್ಮನ್ನು ವಿಪಕ್ಷ ನಾಯಕನಾಗಿ ಮಾಡುತ್ತಾರೆ ಅಂದುಕೊಂಡಿದ್ದೀರಾ ಎಂದು ಕಾಲೆಳೆದರು. ನಿಲುವಳಿ ಪ್ರಸ್ತಾವ ಮಂಡನೆ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವೇಳೆ ಮಧ್ಯೆ ಪ್ರವೇಶದ ಸಿಎಂ ಸಿದ್ದರಾಮಯ್ಯ, ನಿಮ್ಮನ್ನು ವಿಪಕ್ಷ‌ ನಾಯಕರಾಗಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಇಲ್ಲಿ ಎದ್ದೆದ್ದು ನಿಂತು ಮಾತಾಡಿದ್ರೆ ನಿಮ್ಮನ್ನು ವಿಪಕ್ಷ ನಾಯಕ ಮಾಡುತ್ತಾರೆ ಅಂತಾ ಅಂದುಕೊಂಡಿದ್ದೀರಾ? ಎಂದು ಟಾಂಗ್ ಕೊಟ್ಟರು.ಸದನ ಶುರುವಾಗಿ 3 ದಿನ ಆದರೂ ವಿಪಕ್ಷ ನಾಯಕ ಆಯ್ಕೆಯಾಗಿಲ್ಲ. ಇಲ್ಲಿ ಬಂದು ಬುರುಡೆ ಹೊಡೆಯುತ್ತಿದ್ದೀರಿ. ಅಶೋಕ್ ಮಾತಾಡುವುದು ನೋಡಿದರೆ ಮಹಿಳೆಯರಿಗೆ ಫ್ರೀ ಕೊಟ್ಟಿರುವುದನ್ನೇ ವಿರೋಧಿಸುತ್ತಿರುವಂತೆ ಕಾಣುತ್ತಿದೆ ಎಂದು ಶಾಸಕ ಯತ್ನಾಳ್​, ಅಶೋಕ್​ಗೆ ಕಿಚಾಯಿಸಿದರು.ಐದೂ ಗ್ಯಾರಂಟಿ ಪ್ರಸಕ್ತ ಆರ್ಥಿಕ ವರ್ಷದೊಳಗೆ ಜಾರಿ ಮಾಡುತ್ತೇವೆ. ಬಿಜೆಪಿಯವರು ಪ್ರಸ್ತಾಪಿಸಿರುವ ವಿಷಯಗಳು ಗವರ್ನರ್​ ಭಾಷಣದಲ್ಲಿದೆ. ಗವರ್ನರ್​ ಭಾಷಣದ ಮೇಲೆ ಚರ್ಚೆ ವೇಳೆ ಬಿಜೆಪಿಯವರು ಪ್ರಸ್ತಾಪಿಸಲಿ. ಹಾಗಾಗಿ ಬಿಜೆಪಿಯವರ ನಿಲುವಳಿ ಸೂಚನೆ ಮೇಲೆ ಚರ್ಚೆ ಅಗತ್ಯವಿಲ್ಲ ವಿಪಕ್ಷದವರಿಂದ ಈಗ ಚರ್ಚೆ ಬೇಡ. ಪ್ರಾಥಮಿಕ ಪ್ರಸ್ತಾವಕ್ಕಷ್ಟೇ ಅವರನ್ನು ಸೀಮಿತ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರು ಸ್ಪೀಕರ್​ ಯು.ಟಿ.ಖಾದರ್​ಗೆ ಆಗ್ರಹಿಸಿದರು.

ದೇವಾಲಯದ ಅರ್ಚಕನ ಅಪಹರಿಸಲು ಯತ್ನಿಸಿದ ದುಷ್ಕರ್ಮಿಗಳು ಆಘಾತಕಾರಿ ವಿಡಿಯೋ ನೋಡಿ

Posted by Vidyamaana on 2023-10-22 15:59:15 |

Share: | | | | |


ದೇವಾಲಯದ ಅರ್ಚಕನ ಅಪಹರಿಸಲು ಯತ್ನಿಸಿದ ದುಷ್ಕರ್ಮಿಗಳು  ಆಘಾತಕಾರಿ ವಿಡಿಯೋ ನೋಡಿ

ಲಕ್ನೋ : ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಕೆಲವು ಗೂಂಡಾಗಳು ಅರ್ಚಕರೊಬ್ಬರನ್ನ ಥಳಿಸಿ ನಂತರ ದೇವಾಲಯದಿಂದ ಅಪಹರಿಸಲು ಪ್ರಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ದೇವಾಲಯದ ಅರ್ಚಕನ ಅಪಹರಿಸಲು ಯತ್ನಿಸಿದ ದುಷ್ಕರ್ಮಿಗಳು, ಆಘಾತಕಾರಿ ವಿಡಿಯೋ ನೋಡಿ

ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.ನಿಲ್ಲಿಸಿದ್ದ ಕಾರಿನಲ್ಲಿ ಅರ್ಚಕನನ್ನ ಸಾಗಿಸುವುದು ಅವರ ಯೋಜನೆಯಾಗಿತ್ತು. ಆದಾಗ್ಯೂ, ಗದ್ದಲದಿಂದಾಗಿ ಜನಸಂದಣಿ ಜಮಾಯಿಸಿದ ನಂತರ ಗೂಂಡಾಗಳು ಅರ್ಚಕರನ್ನ ಬಿಟ್ಟು ಸ್ಥಳದಿಂದ ಪಲಾಯನ ಮಾಡಬೇಕಾಯಿತು.

ನಿಧನ

Posted by Vidyamaana on 2024-01-09 07:34:05 |

Share: | | | | |


 ನಿಧನ

ಪುತ್ತೂರು: ಬಡಕ್ಕೋಡಿ ಸಮೀಪದ ಕೊಂಬಳ್ಳಿ ನಿವಾಸಿ ಉಮ್ಮರ್ (34.ವ) 

ಅಲ್ಪಕಾಲದ ಅಸೌಖ್ಯದಿಂದ ಜ.9ರಂದು ಸ್ವಗೃಹದಲ್ಲಿ ನಿಧಾನರಾದರು.


 ಮೃತರು ಪತ್ನಿ ಮತ್ತು ಮಗು, ತಂದೆ, ಸಹೋದರ ಹಾಗೂ ಸಹೋದರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



Leave a Comment: