ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ನವ ವಿವಾಹಿತ ಇನ್ಫೋಸಿಸ್ ಉದ್ಯೋಗಿ ಹರೀಶ್ ಆತ್ಮಹತ್ಯೆ

Posted by Vidyamaana on 2024-06-18 13:28:02 |

Share: | | | | |


ನವ ವಿವಾಹಿತ ಇನ್ಫೋಸಿಸ್ ಉದ್ಯೋಗಿ ಹರೀಶ್ ಆತ್ಮಹತ್ಯೆ

ಕೋಲಾರ : ನವ ವಿವಾಹಿತ ಇನ್ಫೋಸಿಸ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಮೃತ ಯುವಕನನ್ನು ಹರೀಶ್ (28) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳ ಹಿಂದಷ್ಟೇ ದೇವನಹಳ್ಳಿ ಮೂಲದ‌ ಹುಡುಗಿಯೊಂದಿಗೆ ವಿವಾಹ ನಡೆದಿತ್ತು ಎನ್ನಲಾಗಿದೆ.

ಪಿಕಪ್ ಡಿಕ್ಕಿ: ದ್ವಿಚಕ್ರ ಸವಾರ ಅಬೂಬಕ್ಕರ್ ಮೃತ್ಯು

Posted by Vidyamaana on 2023-07-09 11:36:05 |

Share: | | | | |


ಪಿಕಪ್ ಡಿಕ್ಕಿ: ದ್ವಿಚಕ್ರ ಸವಾರ ಅಬೂಬಕ್ಕರ್ ಮೃತ್ಯು

ಬೆಳ್ತಂಗಡಿ : ದ್ವಿಚಕ್ರ ವಾಹನಕ್ಕೆ ಪಿಕಪ್ ಡಿಕ್ಕಿಯಾಗಿ, ಸವಾರ ಮೃತಪಟ್ಟ ಘಟನೆ ಬೆಳ್ತಂಗಡಿಯ ಊರುವಲು ಗ್ರಾಮದ ಕುಪ್ಪೆಟ್ಟಿ ರಸ್ತೆ ಮಜ್ಜೆ ಎಂಬಲ್ಲಿ ನಡೆದಿದೆ.

ಮೃತರನ್ನು ಶುಂಠಿಪಲಿಕೆ ನಿವಾಸಿ ಅಬೂಬಕರ್ ಎಂದು ಗುರುತಿಸಲಾಗಿದೆ. ಮೃತರ ಪತ್ನಿ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ತೀವ್ರತೆಗೆ ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ  ಪುತ್ತೂರು ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ – ಮೂವರು ಆರೋಪಿಗಳ ಬಂಧನ

Posted by Vidyamaana on 2024-03-11 13:33:18 |

Share: | | | | |


ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ – ಮೂವರು ಆರೋಪಿಗಳ ಬಂಧನ

ವಿಟ್ಲ: ಅಡ್ಯನಡ್ಕ ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ ಭೇದಿಸುವಲ್ಲಿ ಪೊಲೀಸರ ವಿಶೇಷ ತಂಡ ಮಹತ್ತರ ಯಶಸ್ಸು ಸಾಧಿಸಿದ್ದು ಪ್ರಮುಖ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.


ವಶಕ್ಕೆ ಪಡೆದ ಆರೋಪಿಗಳಾದ ರಫೀಕ್‌ ಯಾನೆ ಗೂಡಿನ ಬಳಿ ರಫೀಕ್‌ , ಮೂಲತಃ ಸುಳ್ಯದ ಕೊಯಿಲ, ಕಾಸರಗೋಡಿನ ಚೌಕಿ ನಿವಾಸಿ ಖಲಂದರ್‌ ಹಾಗೂ ಬಾಯಾರು ನಿವಾಸಿ ದಯಾನಂದ ಎಂದು ಗುರುತಿಸಲಾಗಿದೆ.

ಫೆಬ್ರವರಿ 7 ರಂದು ರಾತ್ರಿ ಬ್ಯಾಂಕ್ ಕಟ್ಟಡದ ಹಿಂಬದಿ ಕಿಟಕಿಯ ಸರಳುಗಳನ್ನು ತುಂಡರಿಸಿ ಒಳನುಗ್ಗಿದ ಖದೀಮರು ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಹಾಗೂ ಹದಿನಾರು ಲಕ್ಷಕ್ಕೂ ಅಧಿಕ ಮೊತ್ತದ ನಗದು ಹಣ ದರೋಡೆಗೈದಿದ್ದರು.


ಒಟ್ಟು ಈ ಪ್ರಕರಣದಲ್ಲಿ ಐವರು ಆರೋಪಿಗಳಿದ್ದು 3 ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇದೇ ತಂಡ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಕೃತ್ಯ ಎಸಗಿ ತಲೆಮರೆಸಿಕೊಂಡಿದ್ದರು.


ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ಕಳ್ಳತನ ಮಾಡಿದ ಈ ತಂಡ ಹಿಂದಿನ ದಿನ ಬಂದು ಸಂಚು ರೂಪಿಸಿರುತ್ತಾರೆ.ಮರುದಿನ ಬಂದ ಐವರ ತಂಡದಲ್ಲಿ 4 ಜನ ಬ್ಯಾಂಕಿನ ಕಿಟಕಿ ಮುರಿದು ಒಳ ನುಗ್ಗಿ ಕೃತ್ಯ ಎಸಗಿದ್ದಾರೆ. ಒಬ್ಬ ಹೊರಗಡೆಯಿಂದ ಸುಳಿವು ನೀಡುತ್ತಿದ್ದ ಎನ್ನಲಾಗಿದೆ.


ಬಂಧಿಸಿದ ಪ್ರಮುಖ ಆರೋಪಿಗಳಲ್ಲಿ ರಫೀಕ್‌ ಯಾನೆ ಗೂಡಿನ ಬಳಿ ರಫೀಕ್‌ ಈತನ ಮೇಲೆ ದರೋಡೆ, ಕಳ್ಳತನದ ಹಲವಾರು ಪ್ರಕರಣಗಳಿವೆ.ಖಲಂದರ್‌ ಎಂಬಾತನ ಮೇಲೆ ಕಣ್ನೂರು,ಪುತ್ತೂರು,ವಿಟ್ಲ,ಸಂಪ್ಯ ಠಾಣೆಗಳಲ್ಲಿ ಈ ಹಿಂದೆ ಅನೇಕ ಕಳ್ಳತನ ಪ್ರಕರಣಗಳಿವೆ.ಬಾಯಾರು ನಿವಾಸಿ ದಯಾನಂದ ಎಂಬವನು ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದು, ಈತ ಹಣದ ಆಸೆಗೊಸ್ಕರ ಇದೇ ಮೊದಲ ಬಾರಿ ಈ ಖರ್ತನಾಕ್‌ ತಂಡದೊಂದಿಗೆ ಸೇರಿಕೊಂಡು ಸ್ಟ್ರಾಂಗ್ ರೂಮಿನ ಭಾರಿ ಭದ್ರತೆಯ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸುವಲ್ಲಿ ಈತನ ಪ್ರಮುಖ ಪಾತ್ರವಿದೆ.

ದ.ಕ. ಜಿಲ್ಲಾ ಎಸ್ಪಿ ರಿಷ್ಯಂತ್‌ ನೇತೃತ್ವದಲ್ಲಿ ಬೇರೆ ಬೇರೆ ವಿಶೇಷ ತಂಡಗಳನ್ನು ರಚಿಸಿ ಈ ಪ್ರಕರಣವನ್ನು ಬೇಧೀಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪುತ್ತೂರು : ಮದುವೆಗೂ ಮುಂಚೆ ಮತ ಚಲಾಯಿಸಿದ ಮದುಮಗಳು

Posted by Vidyamaana on 2024-04-26 18:30:10 |

Share: | | | | |


ಪುತ್ತೂರು : ಮದುವೆಗೂ ಮುಂಚೆ ಮತ ಚಲಾಯಿಸಿದ ಮದುಮಗಳು

ಪುತ್ತೂರು : ಇಂದು (ಏ.26) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮದುಮಗಳು ಮದುವೆಗೂ ಮುಂಚೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.

BREAKING : ಬಿಜೆಪಿಯ ಅಭ್ಯರ್ಥಿಗಳ 5ನೆ ಪಟ್ಟಿ ಬಿಡುಗಡೆ : ಅನಂತ್ ಕುಮಾರ್ ಹೆಗಡೆ ಬದಲು ಕಾಗೇರಿಗೆ ಮಣೆ ಹಾಕಿದ ಹೈಕಮಾಂಡ್

Posted by Vidyamaana on 2024-03-24 21:28:06 |

Share: | | | | |


BREAKING : ಬಿಜೆಪಿಯ ಅಭ್ಯರ್ಥಿಗಳ 5ನೆ ಪಟ್ಟಿ ಬಿಡುಗಡೆ : ಅನಂತ್ ಕುಮಾರ್ ಹೆಗಡೆ ಬದಲು ಕಾಗೇರಿಗೆ ಮಣೆ ಹಾಕಿದ ಹೈಕಮಾಂಡ್

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ 5ನೇ ಪಟ್ಟಿ ಬಿಡುಗಡೆ ಮಾಡಿದ್ದು ರಾಜ್ಯದ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅನಂತ್ ಕುಮಾರ್ ಹೆಗಡೆ ಬದಲು ಇದೀಗ ಹೈಕಮಾಂಡ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೆಟ್ ನೀಡಿದೆ.ಅಲ್ಲದೆ ಇದೇ ವೇಳೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ ಜಗದೀಶ್ ಶೆಟ್ಟರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಬದಲು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿದೆ. ಅಲ್ಲದೆ ಹೈಕಮಾಂಡ್ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿಯ ಮಾಜಿ ಸಚಿವ ಸುಧಾಕರ್ ಅವರಿಗೆ ಕೂಡ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ.ಬಿಜೆಪಿ 5ನೇ ಪಟ್ಟೆ ಬಿಡುಗಡೆಯಾಗಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು, ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ


1)ಉತ್ತರ ಕನ್ನಡ ಲೋಕಸಭಾ ಕ್ಷೇತ್ರ - ವಿಶ್ವೇಶ್ವರ ಹೆಗಡೆ ಕಾಗೇರಿ

2)ಚಿಕ್ಕಬಳ್ಳಾಪುರ ಕ್ಷೇತ್ರ -ಡಾ. ಕೆ ಸುಧಾಕರ್

3) ಬೆಳಗಾವಿ ಲೋಕಸಭಾ ಕ್ಷೇತ್ರ- ಜಗದೀಶ್ ಶೆಟ್ಟರ್

4). ರಾಯಚೂರು ಲೋಕಸಭಾ ಕ್ಷೇತ್ರ-ರಾಜಾಅಮರೇಶ್ವರ ನಾಯಕಗೆ ಬಿಜೆಪಿ ಟಿಕೇಟ್ ನೀಡಿದೆ.

ಮೂಡುಬಿದಿರೆ: ಅಕ್ಕನ ಗಂಡನಿಂದಲೇ ಕೊಲೆ

Posted by Vidyamaana on 2023-05-11 08:23:14 |

Share: | | | | |


ಮೂಡುಬಿದಿರೆ: ಅಕ್ಕನ ಗಂಡನಿಂದಲೇ ಕೊಲೆ

ಮೂಡುಬಿದಿರೆ: ಅಕ್ಕನ ಗಂಡನೇ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮೇ. 11 ರ ಗುರುವಾರ ಬೆಳಗ್ಗೆ ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆಯಲ್ಲಿ ಸಂಭವಿಸಿದೆ.ಗಂಟಾಲ್ಕಟ್ಟೆ ನಿವಾಸಿ ಮಹಮ್ಮದ್ ಜಮಾಲ್ (40) ಮೃತಪಟ್ಟ ವ್ಯಕ್ತಿಯಾಗಿದ್ದು, ಕೊಲೆ ಮಾಡಿದ ಆರೋಪಿ ಸುಹೈಬ್ ನನ್ನು ಬಂಧಿಸಲಾಗಿದೆ.

ಮಹಮ್ಮದ್ ಜಮಾಲ್ ಅವರ ಅಕ್ಕನ ಗಂಡ ಮಹಮ್ಮದ್ ಸುಹೈಬ್ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಕಾರಣ ತಿಳಿದು ಬಂದಿಲ್ಲ.

ಮೂಲತ: ಚಿಕ್ಕಮಗಳೂರಿನವನಾದ ಸುಹೈಬ್ ಗಂಟಾಲ್ಕಟ್ಟೆಯಲ್ಲಿ ಜಮಾಲ್ ಮನೆಯ ಹತ್ತಿರವೇ ವಾಸವಾಗಿದ್ದು ಕ್ಷುಲ್ಲಕ ಕಾರಣದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.ಮೂಡುಬಿದಿರೆ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆದಿದೆ.



Leave a Comment: