ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಸುದ್ದಿಗಳು News

Posted by vidyamaana on 2024-07-03 19:44:44 |

Share: | | | | |


ಸಿಎಂ ಸಿದ್ದರಾಮಯ್ಯರನ್ನು‌ ಭೇಟಿಯಾದ ಶಾಸಕ ಆಶೋಕ್ ರೈ

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಯವರು ಬುಧವಾರದಂದು ಬೆಂಗಳೂರಿನಲ್ಲಿ ಸಿ ಎಂ‌ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪುತ್ತೂರಿಗೆ‌ಮೆಡಿಕಲ್ ಕಾಲೇಜು ಮತ್ತು ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಮನವಿ ಮಾಡಿದರು.

   ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಶಾಸಕರು ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಡಿಕೆಯನ್ನು ನೆನಪಿಸಿದರು. ಬಜೆಟ್ ನಲ್ಲಿ ಈ ಬಾರಿ ಅನುಮೋದನೆಯಾಗಬೇಕು ಮತ್ತು ತನ್ನ ಕ್ಷೇತ್ರದ ಜನರ ಬಹುಕಾಲದ ಬೇಡಿಕೆಯಾದ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು. ಕಳೆದ ಬಜೆಟ್ ನಲ್ಲಿ ಅನುಮೋದನೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಗ್ಯಾರಂಟಿ ಯೋಜನೆಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ಇರಿಸಿದ ಕಾರಣ ನಾನು ಹೆಚ್ಚು ಒತ್ತಡ ಹಾಕಿರಲಿಲ್ಲ. ಮೆಡಿಕಲ್ ಕಾಲೇಜು ಆಗಬೇಕು‌ಎಂಬುದು‌ ನನ್ನ ಮತ್ತು ನನ್ನ ಕ್ಷೇತ್ರದ ಜನರ ಕನಸಾಗಿದೆ ಅದನ್ನು ನನಸು‌ಮಾಡಿಕೊಡಬೇಕು ಎಂದು ಸಿ ಎಂ ಅವರಲ್ಲಿ ಶಾಸಕರು ವಿನಂತಿಸಿದರು.

ಕಾಲೇಜು‌ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದೂ ಶಾಸಕರು ಸಿಎಂ ಅವರಲ್ಲಿ ತಿಳಿಸಿದರು.

ಹೆಚ್ಚು‌ಅನುದಾನ ಕೊಡಿ

ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳು ಆಗಬೇಕಿದೆ. ರಸ್ತೆ, ಸರಕಾರಿ ಕಟ್ಟಡಗಳು, ಶಾಲಾ ,ಕಾಲೇಜು ಕಟ್ಟಡಗಳು, ತಡೆಗೋಡೆ ,ಬೃಹತ್ ಅಣೆಕಟ್ಟುಗಳು ಸೇರಿದಂತೆ ಕ್ಷೇತ್ರದ ಜನರಿಂದ ದಿನದಿಂದ ದಿನಕ್ಕೆ ಕಾಮಗಾರಿಯ ಬೇಡಿಕೆಗಳು ಬರುತ್ತಿದ್ದು ಈಗ ಬರುತ್ತಿರುವ ಅನುದಾನವನ್ನು ಹೆಚ್ಚು ಪ್ರಮಾಣದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ವರ್ಷಗಳಿಂದ ಇರುವ ಕೆಲವೊಂದು ಕಾಮಗಾರಿ ಬೇಡಿಕೆಗಳಿಗೆ ಅನುದಾನವನ್ನು‌ನೀಡಬೇಕಿದೆ ಈ ಕಾರಣಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಶಾಸಕರು‌ಮನವಿ ಸಲ್ಲಿಸಿದರು.

 Share: | | | | |


ಪುತ್ತೂರು :ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಕಡಬ ಮೂಲದ ಡಾ.ಆದಂ ಅಸೌಖ್ಯದಿಂದ ನಿಧನ

Posted by Vidyamaana on 2024-04-20 19:47:08 |

Share: | | | | |


ಪುತ್ತೂರು :ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಕಡಬ ಮೂಲದ ಡಾ.ಆದಂ ಅಸೌಖ್ಯದಿಂದ ನಿಧನ

ಬೆಳ್ತಂಗಡಿ : ತಲಪಾಡಿ ಕೆ.ಸಿ ರೋಡ್ ನಿವಾಸಿ ಡಾ! ಆದಂ ಉಸ್ಮಾನ್(65) ಅಲ್ಪಕಾಲದ ಅಸೌಖ್ಯದಿಂದ ಎ.20 ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.

ಪುತ್ತೂರು,ಕಡಬ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಸುಮಾರು 14 ವರ್ಷಗಳ ಕಾಲ ಸರಕಾರಿ ಸೇವೆ ಸಲ್ಲಿಸಿ ಕಳೆದ ವರ್ಷ ನಿವೃತ್ತರಾಗಿದ್ದರು.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ

Posted by Vidyamaana on 2024-04-14 20:23:09 |

Share: | | | | |


ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ

ಮಂಗಳೂರು: ಲೋಕಸಭೆ ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ರೋಡ್​ ಶೋ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಬೃಹತ್ ಸಮಾವೇಶ ಮುಗಿಸಿದ ಬಳಿಕ ಪ್ರಧಾನಿ ಮೋದಿ ಮಂಗಳೂರು ತಲುಪಿದರು.

ಪುತ್ತೂರು ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆ

Posted by Vidyamaana on 2023-10-29 15:09:40 |

Share: | | | | |


ಪುತ್ತೂರು ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆ

ಪುತ್ತೂರು: ಪರಿಶಿಷ್ಡ ಪಂಗಡದ ಕುಟುಂಬಗಳ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಮಾಹಿತಿ ಕೊರತೆಯ ಕಾರಣಕ್ಕೆ ಹಲವರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದರು.

ದಲಿತ ಕುಟುಂಬಗಳನ್ನು ಮೇಲಕ್ಕೆತ್ತಲು ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ನಂತರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವ ಕೆಲಸವನ್ನು ಮಾಡಿದೆ. ಪ್ರತೀಯೊಂದು ಕುಟುಂಬವೂ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು. ಮಾಹಿತಿ ಕೊರತೆ ಇದ್ದವರು ಶಾಸಕರ ಕಚೇರಿಯನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬಹುದು ಎಂದು ಹೇಳಿದರು.

ಸಭೆಯಲ್ಲಿ‌ಮಾತನಾಡಿದ ಎಸ್ ಟಿ ಘಟಕದ ಬ್ಲಾಕ್ ಅಧ್ಯಕ್ಷ‌ ಮಹಾಲಿಂಗ ನಾಯ್ಕರವರು ಮಾತನಾಡಿ ಎಸ್ ಟಿ ಕುಟುಂಬದ ಮತ್ತು ಕನ್ವಶರ್ನ್ ಸಮಸ್ಯೆಯ ಬಗ್ಗೆ ಸಭೆಯಲಿ ವಿವರಿಸಿದರು. ಬ್ಲಾಕ್ ಉಪಾಧ್ಯಕ್ಷರಾದ ಮೌರಿಶ್ ಮಸ್ಕರೇನಸ್ ರವರು ವಾಲ್ಮೀಕಿ ಜಯಂತಿ ಬಗ್ಗೆ ಮಾತನಾಡಿದರು.


.ಕಾರ್ಯಕ್ತಮದಲ್ಲಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ, ಪಾಣಾಜೆ ಗ್ರಾಪಂ ಸದಸ್ಯೆ ವಿಮಲಾ, ಎಸ್ ಟಿ ಘಟಕದ ಉಪಾಧ್ಯಕ್ಷ ಸದಾನಂದ ನಾಯ್ಕ, ರಾಮನಾಯ್ಕ, ಯು ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರಸಾದ್ ಪಾಣಾಜೆ, ಗ್ರಾಪಂ ಸದಸ್ಯ ಮಹಾಲಿಂಗ ನಾಯ್ಕ, ಸುಬ್ರಾಯ ನಾಯ್ಕ ನಿಡ್ಪಳ್ಳಿ,ಐತಪ್ಪ ನಾಯ್ಕ ನಿಡ್ಪಳ್ಳಿ, ನಾಗೇಶ್ ನಾಯ್ಕ ನಿಡ್ಪಳ್ಳಿ, ಸೀತಾರಾಮ ನಾಯ್ಕ, ಗೋಪಾಲ ನಾಯ್ಕ ಪಡುಮಲೆ, ಮೋಹಿನಿ ನರಿಮೊಗರು, ಕರುಣಾಕರ ಪಾಂಗಲಾಯಿ, ಗೋವಿಂದ ನಾಯ್ಕ ಮೊಟ್ಟೆತ್ತಡ್ಕ,  ಸವಿತಾ ದೇವಸ್ಯ,ಚಂದ್ರಾವತಿ ಒಳಮೊಗ್ರು,ಮಾದವ ನಾಯ್ಕ ಬೊಳಿಂಜ, ,ಶಶಿಕಲಾ ಬೊಳಿಂಜ, 

ಗಿರಿಧರ್ ಗೌಡ, ಯೋಗೀಶ್ ಸಾಮಾನಿ, ರಾಘವ ಖಂಡಿಗ ಮತ್ತಿತರರು ಉಪಸ್ಥಿತರಿದ್ದರು. 

ಸಂತೋಷ್ ಭಂಡಾರಿ ಚಿಲ್ಮೆತ್ತಾರು ಸ್ವಾಗತಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಘಟಕದ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು

ಭೀಕರ ರಸ್ತೆ ಅಪಘಾತ ; ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಮುಕ್ವೆ ನಿವಾಸಿ ಸಫ್ವಾನ್ ನಿಧನ

Posted by Vidyamaana on 2024-02-22 06:28:44 |

Share: | | | | |


ಭೀಕರ ರಸ್ತೆ ಅಪಘಾತ ; ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಮುಕ್ವೆ ನಿವಾಸಿ ಸಫ್ವಾನ್ ನಿಧನ

ಪುತ್ತೂರು : ಸಂಪ್ಯ ಕಲ್ಲಾರ್ಪೆ ಸಮೀಪ  ಬುಧವಾರ ಸಂಜೆ ಟಿಪ್ಪರ್ ಹಾಗೂ ಬೈಕ್  ಮಧ್ಯೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಮುಕ್ವೆ ನಿವಾಸಿ  ಸಫ್ವಾನ್  ಅವರು ಚಿಕಿತ್ಸೆ ಫಲಕಾರಿಯಾಗದೆ ಫೆ 22 ರಂದು ಬೆಳಗ್ಗೆ ನಿಧಾನರಾದರು.

ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮುಕ್ವೆ ನಿವಾಸಿ ಅಬ್ದುಲ್ಲಾ ರವರ ಮಗ ಸಫ್ವಾನ್ ಗಂಭೀರ ಗಾಯಗೊಂಡಿದ್ದರು ಕೊಡಲೇ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆ ಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ  ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದಾರೆ.

 ಸಂಪ್ಯ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಮ್ಮ ಮೆಟ್ರೋಗೆ ಬಲಿಯಾದ ಯುವಕ ಯಾರು?

Posted by Vidyamaana on 2024-03-21 20:21:00 |

Share: | | | | |


ನಮ್ಮ ಮೆಟ್ರೋಗೆ ಬಲಿಯಾದ ಯುವಕ ಯಾರು?

ಬೆಂಗಳೂರು, (ಮಾರ್ಚ್ 21): ಇತ್ತೀಚೆಗೆ ನಮ್ಮ ಮೆಟ್ರೋ (Namma Metro )ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಈ ಹಿಂದೆ ಮೆಟ್ರೋ ಹಳಿಗೆ ಹಾರಿದ ಪ್ರಕರಣಗಳು ನಡೆದಿದ್ದವು. ಆದ್ರೆ, ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದ್ರೆ, ಇಂದು (ಮಾರ್ಚ್ .21) ಮಧ್ಯಾಹ್ನ 2:10ರ ಸುಮಾರಿಗೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ (Athiguppe Metro) ರೈಲು ಬರುವಾಗ ಯುವಕ ಹಳಿಗೆ ಜಿಗಿದಿದ್ದಾನೆ. ಪರಿಣಾಮ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಿಂದ ಸುಮಾರು ಎಂಟು ಅಡಿ ದೂರದಲ್ಲಿ ಯುವಕನ ದೇಹವನ್ನು ರೈಲು ಎಳೆದೊಯ್ದಿದೆ. ಇದರಿಂದ ಯುವಕನ ದೇಹ ಎರಡು ತುಂಡಾಗಿದೆ. ಸದ್ಯ ಯುವಕನ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಆತ್ಮಹತ್ಯೆ ಮಾಡಿಕೊಂಡ ಯುವಕನನನ್ನು ಧ್ರುವ್ ಟಕ್ಕರ್ ಎಂದು ಗುರುತಿಸಲಾಗಿದ್ದು, ಆತನ ಕುಟುಂಬಕ್ಕೆ ಮತ್ತು ಕಾಲೇಜಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.ಮಟ್ರೋ ರೈಲು ಬರುವ ಹಲವು ನಿಮಿಷಗಳ ಕಾಲ ಮೊದಲೇ ಧ್ರುವ್ ಟಕ್ಕರ್ ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದಿದ್ದ. ನಂತರ ನಿಲ್ದಾಣದ ಬಲ ಭಾಗದ ತುದಿಗೆ ಹೋಗಿ ನಿಂತಿದ್ದ. ಧ್ರುವ್ ಟಕ್ಕರ್ ಜೊತೆಗೆ ಒರ್ವ ಯುವತಿ ಹಾಗೂ ಮತ್ತೊರ್ವ ಯುವಕ ಇದ್ದ. ಹಾಗೇ ಮೂವರು ಮಾತನಾಡುತ್ತಾ ಮಾತನಾಡುತ್ತಾ ನಿಂತಿದ್ದರು. ನಂತರ ರೈಲು ಬರುವ ಸಮಯದಲ್ಲಿ . ಧ್ರುವ್ ಟ್ರಾಕ್ ಮೇಲೆ ಹಾರಿದ್ದಾನೆ. ಜೊತೆಗಿದ್ದವರು ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದ್ರೆ ರೈಲು ಹತ್ತಿರ ಬಂದಾಗ ಸ್ಥಳದಿಂದ ಓಡಿ ಹೋಗಿದ್ದಾರೆ. ಪರಿಣಾಮ ರೈಲು ಸ್ವಲ್ಪ ದೂರ ಎಳೆದೊಯ್ದಿದ್ದು, ರುಂಡ-ಮುಂಡ ಬೇರೆ-ಬೇರೆಯಾಗಿದೆ. ರೈಲಿನ ಕೆಳಗೆ ಸಿಲುಕಿದ್ದ ಮೃತದೇಹವನ್ನು ಹೊರಗೆ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.ಡಿಸಿಪಿ ಎಸ್‌.ಗಿರೀಶ್‌ ಹೇಳಿದ್ದಿಷ್ಟು

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 19 ರಿಂದ 20 ವರ್ಷದ ಹುಡುಗನ ಸಾವಾಗಿದೆ. ಮೃತ ಧ್ರುವ್ ಟಕ್ಕರ್ ಮಹಾರಾಷ್ಟ್ರದ ಮುಂಬೈ ಮೂಲದವನು. ಈತ ನ್ಯಾಷನಲ್ ಲಾ ಕಾಲೇಜ್ ಫಸ್ಟ್ ಇಯರ್ ವಿದ್ಯಾರ್ಥಿ ಎಂದು ಮಾಹಿತಿ ನೀಡಿದರು.

ಸದ್ಯ ವಿದ್ಯಾರ್ಥಿ ಸಾವಿನ ಬಗ್ಗೆ ಕಾಲೇಜು ಮತ್ತು ಆತನ ಕುಟುಂಬಕ್ಕೆ ಪೊಲೀಸರು ಮಾಹಿತಿ ರವಾನಿಸಿದ್ದು, ಧ್ರುವ್ ಟಕ್ಕರ್ ಏಕೆ ಆತ್ಮಹತ್ಯೆ ಮಾಡಿಕೊಂಡ? ಆತ್ಮಹತ್ಯೆಗೆ ಕಾರಣವೇನು? ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನು ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರ ಮತ್ತೆ ಪುನಾರಂಭವಾಗಿದೆ.

ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ - ಸ್ಪಷ್ಠನೆ ನೀಡಿದ ಪೊಲೀಸ್ ಇಲಾಖೆ

Posted by Vidyamaana on 2024-05-17 21:46:48 |

Share: | | | | |


ಮಂಗಳೂರು: ಕರ್ತವ್ಯದಲ್ಲಿದ್ದ ವಾಹನದ ಬಗ್ಗೆ ಸುಳ್ಳು ಸಂದೇಶ ರವಾನಿಸಿದ ಸಾರ್ವಜನಿಕ - ಸ್ಪಷ್ಠನೆ ನೀಡಿದ ಪೊಲೀಸ್ ಇಲಾಖೆ

ಮಂಗಳೂರು : ಕಳೆದ ದಿನ (ಮೇ 16) ಸಂಜೆ ಮಂಗಳೂರು ನಗರದ ಕುಂಟಿಕಾನ ಬಳಿ ಕರ್ತವ್ಯದಲ್ಲಿದ್ದ ಕೆಎ-19-ಜಿ-1023 ನೊಂದಣೆ ಸಂಖ್ಯೆಯ ಹೆದ್ದಾರಿ ಗಸ್ತು ವಾಹನದ ವೀಡಿಯೋ ಚಿತ್ರೀಕರಿಸಿದ ಸಾರ್ವಜನಿಕರೊಬ್ಬರು ಸದ್ರಿ ವಾಹನದ ವಿಮಾ ಅವಧಿಯು ಮುಕ್ತಾಯವಾಗಿರುವುದಾಗಿಯೂ, ಪೊಲೀಸ್ ಇಲಾಖೆಯು ವಿಮಾ ಕಂತು ಪಾವತಿಸದ ವಾಹನಗಳನ್ನು ಬಳಸುತ್ತಿರುವುದಾಗಿಯೂ ಸುಳ್ಳು ಸಂದೇಶವನ್ನು ಸಾರ್ವಜನಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.ಈ ಕುರಿತು ಸ್ಪಷ್ಠನೆ ನೀಡಿರುವ ಪೊಲೀಸ್ ಇಲಾಖೆ, ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳೂ ಕರ್ನಾಟಕ ಗವರ್ನಮೆಂಟ್ ಇನ್ಯುರೆನ್ಸ್ ಡಿಪಾರ್ಟ್‌ಮೆಂಟ್ (ಕೆ.ಜಿ.ಐ.ಡಿ) ವಿಮೆಯನ್ನು ಕಡ್ಡಾಯವಾಗಿ ಹೊಂದಿರುತ್ತದೆ ಹಾಗೂ ಸದರಿ ವಿಮೆಯನ್ನು ಕಾಲ ಕಾಲಕ್ಕೆ ನವೀಕರಿಸಲಾಗಿದೆ.



Leave a Comment: