ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಸುದ್ದಿಗಳು News

Posted by vidyamaana on 2024-07-23 18:35:28 |

Share: | | | | |


ಶಿರೂರು ಭೂಕುಸಿತ ದುರಂತ : ಪತ್ತೆಯಾಯ್ತು ಎಂಟನೇ ಮೃತದೇಹ

ಕಾರವಾರ: ಶಿರೂರು ಭೂಕುಸಿತ ಸ್ಥಳದಲ್ಲಿ 8 ದಿವಸದ ಬಳಿಕ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಮೂಲಕ 8ನೇ ಮೃತದೇಹ ಸಿಕ್ಕಂತಾಗಿದೆ. ಈ ನಡುವೆ ಕೇರಳದ ಲಾರಿ ಚಾಲಕ ಅರ್ಜುನ್‌ ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. 

ಮಂಗಳವಾರ ಬೆಳಗ್ಗೆ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆ ಸಣ್ಣಿ ಹನ್ಮಂತ ಗೌಡ (57) ಸಾವನ್ನಪ್ಪಿದ್ದು, ಮೃತದೇಹ ದೊರೆತಿದೆ. ಗಂಗಾವಳಿ ನದಿಯ ಗಂಗೆಕೊಳ್ಳ ಸಮೀಪ ಅವರ ಶವ ಪತ್ತೆಯಾಗಿದೆ. ಶಿರೂರು ಗುಡ್ಡ ಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆ ಕುಸಿತವಾಗಿ ಸಣ್ಣಿ ಹನ್ಮಂತ ಗೌಡ ಅವರು ಕಣ್ಮರೆಯಾಗಿದ್ದರು. ಇನ್ನೂ ಅರ್ಜುನ್‌ ಸಹಿತ ಮೂವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ NDRF, SDRF, ಮಿಲಿಟರಿ ಕಾರ್ಯಪಡೆಯಿಂದ ಶೋಧ ಕಾರ್ಯ ಮುಂದುವರೆದಿದೆ. 

ಕೇರಳ ಮಾಧ್ಯಮಗಳ ಕವರೇಜ್‌ 

ಸದ್ಯ ಕರ್ನಾಟಕದ ಉತ್ತರ ಕನ್ನಡದಲ್ಲಾದ ಭೂಕುಸಿತ ವರದಿಯನ್ನ ಕನ್ನಡಿಗರು ಕೂಡಾ ಮಲಯಾಳಂ ಸುದ್ದಿವಾಹಿನಿಗಳಲ್ಲಿ ವೀಕ್ಷಿಸುವಂತಾಗಿದೆ. ಕೇರಳದ ಪ್ರಮುಖ ರಾಜ್ಯ ಮಟ್ಟದ ವಾಹಿನಿಗಳು ಕಳೆದ 4 ದಿನಗಳಿಂದಲೂ ಉತ್ತರ ಕನ್ನಡದಲ್ಲಿ ಬೀಡುಬಿಟ್ಟಿವೆ. ಅರ್ಜುನ್‌ ಶೋಧ ಕಾರ್ಯಾಚರಣೆಗೆ ಹೆಚ್ಚಿನ ಒತ್ತಡ ಏರುತ್ತಿದೆ. ಜೊತೆಗೆ ಕೇರಳದ ನಾಗರಿಕ ಸುರಕ್ಷತಾ ತಂಡಗಳು ಕೂಡಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಕೇರಳದಿಂದ ಶಿರೂರಿಗೆ ತಂಡವಾಗಿ ಆಗಮಿಸಿವೆ

 Share: | | | | |


ಬೆಂಗಳೂರು ಮಂಗಳೂರು ರೈಲು ಸಂಚಾರ ಸದ್ಯಕ್ಕೆ ಅನುಮಾನ: ರೈಲ್ವೆ ಇಲಾಖೆ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

Posted by Vidyamaana on 2024-07-29 08:30:18 |

Share: | | | | |


ಬೆಂಗಳೂರು ಮಂಗಳೂರು ರೈಲು ಸಂಚಾರ ಸದ್ಯಕ್ಕೆ ಅನುಮಾನ: ರೈಲ್ವೆ ಇಲಾಖೆ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್‌ನ ಎಡಕುಮೇರಿ ಕಡಗರವಳ್ಳಿ ಮಧ್ಯೆ ಭೂಕುಸಿತದಿಂದಾಗಿ 14 ರೈಲುಗಳ ಸಂಚಾರ ರದ್ದಾಗಿದೆ. ಹಳಿ ದುರಸ್ತಿ ಕಾರ್ಯ ಮುಂದುವರಿದಿದ್ದು, ಭಾರಿ ಮಳೆಯಿಂದಾಗಿ ಪುನಃಸ್ಥಾಪನೆ ಕಾಮಗಾರಿ ವಿಳಂಬವಾಗುತ್ತಿದೆ. ಹೀಗಾಗಿ ಆಗಸ್ಟ್ 10ರ ವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಅಸಾಧ್ಯ ಎಂದು ರೈಲ್ವೆ ಮೂಲಗಳು ತಿಳಿಸಿವೆ.ಹಳಿಯ ಕೆಳಭಾಗದಲ್ಲಿ ಮಣ್ಣು ಭಾರಿ ಆಳಕ್ಕೆ ಕುಸಿದಿದ್ದು, ಹಳಿಗೆ ಅಪಾಯ ಎದುರಾಗಿದೆ. ರೈಲ್ವೆ ಸಿಬ್ಬಂದಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯುತ್ತಿರುವ ಜಡಿಮಳೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಈ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಶನಿವಾರ ಹಾಗೂ ಭಾನುವಾರ ಕೂಡ ಹಲವು ರೈಲುಗಳ ಸಂಚಾರ ರದ್ದಾಗಿದ್ದು, ಕೆಲವು ರೈಲುಗಳನ್ನು ಮಾರ್ಗ ಬದಲಾಯಿಸಿ ಕಳುಹಿಸಲಾಗಿವೆ.

ವಿಭಾಗೀಯ ರೈಲ್ವೆ ನಿರ್ವಾಹಕಿ (ಡಿಆರ್​ಎಂ) ಶಿಲ್ಪಿ ಅಗರ್ವಾಲ್ ಮತ್ತು ಹಿರಿಯ ಅಧಿಕಾರಿಗಳು ಎಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ನಡೆಯುತ್ತಿರುವ ಪುನಃಸ್ಥಾಪನೆ ಕಾರ್ಯವನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಟ್ರ್ಯಾಕ್ ಮರುಸ್ಥಾಪಿಸಲು ಪ್ರಗತಿ ಸಾಧಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿದೆ.

ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆ

Posted by Vidyamaana on 2024-07-12 10:23:20 |

Share: | | | | |


ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆತ್ಮಹತ್ಯೆ

ಕೋಲಾರ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಊರ ಹೊರಗಿನ ಮರವೊಂದಕ್ಕೆ ಒಂದೇ ಹಗ್ಗದಲ್ಲಿ ನೇಣುಬಿಗಿದುಕೊಂಡು ತಾಲೂಕಿನ ಕಲ್ವಮಂಜಲಿಗ್ರಾಮದಲ್ಲಿಆತ್ಮಹತ್ಯೆಗೆ ಶರಣಾಗಿದ್ದಾರೆ. ಅನ್ಯೋನ್ಯವಾಗಿದ್ದ ಕುಟುಂಬಕ್ಕೆ ದಿಢೀರ್​ ಏನಾಯ್ತು ಎಂದು ಬಂದಿದ್ದವರು ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದರು.

ಲಕ್ಷ್ಮಣ್​ ಹಾಗೂ ಮಾಲಶ್ರೀ ಕಳೆದ ಹದಿಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಯಿಂದ ಸಂಸಾರ ಮಾಡುತ್ತಿದ್ದ ಅವರಿಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿದ್ದರು. ಪ್ರೀತಿಸಿ ಮದುವೆಯಾಗಿದ್ದ ಕುಟುಂಬ ಕಷ್ಟ ಪಟ್ಟು ದುಡಿಯುತ್ತಿದ್ದರು. ಲಕ್ಷ್ಮಣ್​ ಆಟೋ ಓಡಿಸುತ್ತಿದ್ದರೆ, ಮಾಲಾಶ್ರೀ ಕಲ್ವಮಂಜಲಿ ಗ್ರಾಮದಲ್ಲೇ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು

ಸ್ಕಾರ್ಪಿಯೋ ಅಪಘಾತಕ್ಕೀಡಾಗಿ ಯುವಕ ಮೃತ್ಯು

Posted by Vidyamaana on 2023-09-26 20:28:29 |

Share: | | | | |


ಸ್ಕಾರ್ಪಿಯೋ ಅಪಘಾತಕ್ಕೀಡಾಗಿ ಯುವಕ ಮೃತ್ಯು

ಲಕ್ನೋ, ಸೆ.26: ಐಷಾರಾಮಿ ಕಾರುಗಳ ಬಗ್ಗೆ ತಪ್ಪಾದ ಭರವಸೆಗಳನ್ನು ನೀಡಿ ಮೋಸ ಎಸಗಿದ್ದಾರೆಂದು ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಮತ್ತು ಇತರ 12 ಮಂದಿಯ ವಿರುದ್ಧ ಉತ್ತರ ಪ್ರದೇಶದ ಖಾನ್ ಪುರದಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.


ರಾಜೇಶ್ ಮಿಶ್ರಾ ಎಂಬವರು ದೂರು ನೀಡಿದ್ದು, ತನ್ನ ಮಗ ಡಾ.ಅಪೂರ್ವ ಮಿಶ್ರಾ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಅದಕ್ಕೆ ಕಂಪನಿಯ ನಿರ್ಲಕ್ಷ್ಯ ಕಾರಣ ಎಂದು ದೂರಿನಲ್ಲಿ ಹೇಳಿಕೊಂಡಿದ್ದಾರೆ. ರಾಜೇಶ್ ಮಿಶ್ರಾ ತನ್ನ ಮಗನಿಗೆ 17.40 ಲಕ್ಷ ಮೌಲ್ಯದ ಐಷಾರಾಮಿ ಕಪ್ಪು ಸ್ಕಾರ್ಪಿಯೋ ಕಾರನ್ನು ಗಿಫ್ಟ್ ನೀಡಿದ್ದರು. 2022ರ ಜನವರಿ 14ರಂದು ಮಗ ಮತ್ತು ಆತನ ಸ್ನೇಹಿತರು ಲಕ್ನೋದಿಂದ ಖಾನ್ ಪುರಕ್ಕೆ ಹಿಂತಿರುಗುತ್ತಿದ್ದಾಗ ಮಂಜಿನಲ್ಲಿ ಕಾಣಿಸದೆ ಕಾರು ಅಪಘಾತಕ್ಕೀಡಾಗಿತ್ತು. ಕಾರು ಪಲ್ಟಿ ಹೊಡೆದು ಅದರಲ್ಲಿದ್ದ ತನ್ನ ಏಕೈಕ ಮಗ ಅಪೂರ್ವ ಮಿಶ್ರಾ ಸ್ಥಳದಲ್ಲೇ ಮೃತಪಟ್ಟಿದ್ದ. ಕಾರಿನಲ್ಲಿ ಬೆಲ್ಟ್ ಹಾಕ್ಕೊಂಡಿದ್ದು, ಒಳಗಡೆ ಸೇಫ್ಟಿ ಬ್ಯಾಗ್ ಇದ್ದರೂ ಮಗನ ಜೀವ ಉಳಿಯಲಿಲ್ಲ. ಹೀಗಾಗಿ ಕಾರಿನ ಬಗ್ಗೆ ಕಂಪನಿ ನೀಡಿದ್ದ ಭರವಸೆ ಸುಳ್ಳಾಗಿದೆ. ಸೇಫ್ಟಿ ಇದೆಯೆಂಬ ಕಾರಣಕ್ಕೆ ಈ ಕಾರನ್ನು ಖರೀದಿಸಿದ್ದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


BS6 Mahindra Scorpio: Price, variant-wise features explained


ಕಾರು ಕಂಪೆನಿ ಮತ್ತು ಡೀಲರ್ ಗಳು ಸೇಫ್ಟಿ ಬಗ್ಗೆ ಎಡ್ವರ್ಟೈಸ್ ನೀಡಿದ್ದರಿಂದ ಕಾರು ಖರೀದಿಸಿದ್ದೆ. ಇಲ್ಲದಿದ್ದರೆ ಇಂತಹ ಕಾರು ಖರೀದಿ ಮಾಡುತ್ತಿರಲಿಲ್ಲ. ಅಪಘಾತ ಸಂದರ್ಭದಲ್ಲಿ ಏರ್ ಬ್ಯಾಗ್ ತೆರೆದುಕೊಂಡಿರಲಿಲ್ಲ. ಅದೇ ಕಾರಣದಿಂದ ಮಗನಿಗೆ ತೀವ್ರ ಪೆಟ್ಟಾಗಿತ್ತು. ಕಂಪನಿಯವರು ಸುಳ್ಳು ಭರವಸೆಗಳನ್ನು ನೀಡಿದ್ದಾರೆ ಎಂದು ಖಾನ್ ಪುರದ ಸ್ಥಳೀಯ ಕೋರ್ಟಿನಲ್ಲಿ ರಾಜೇಶ್ ಮಿಶ್ರಾ ದಾವೆ ಹೂಡಿದ್ದರು. ಕೋರ್ಟ್ ಸೂಚನೆಯಂತೆ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಮತ್ತು ಕಂಪನಿಯ ಇತರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.


ಐಪಿಸಿ ಸೆಕ್ಷನ್ 420(ಮೋಸ), 287(ಮೆಶಿನರಿ ವರ್ಕ್ ನಲ್ಲಿ ನಿರ್ಲಕ್ಷ್ಯ ಮಾಡಿರುವುದು), 304-ಎ( ಸಾವಿಗೆ ಕಾರಣವಾಗಿರುವುದು), 504(ಉದ್ದೇಶಪೂರ್ವಕ ಅಗೌರವ ಸೂಚಿಸಿ ಶಾಂತಿ ಭಂಗ), 506 ಮತ್ತು 102 ಬಿ (ಕ್ರಿಮಿನಲ್ ಕೂಟ ರಚನೆ) ಇತ್ಯಾದಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

ಜಮೀನಿನಲ್ಲಿ ಆಡಲು ಹೋಗಿ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು ಸ್ವಾತಿಕ್

Posted by Vidyamaana on 2024-04-04 04:40:04 |

Share: | | | | |


ಜಮೀನಿನಲ್ಲಿ ಆಡಲು ಹೋಗಿ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗು ಸ್ವಾತಿಕ್

ವಿಜಯಪುರ: ಜಿಲ್ಲೆಯಲ್ಲಿ ಎರಡು ವರ್ಷದ ಮಗುವೊಂದು ತೆರೆದ ಕೊಳವೆ ಬಾವಿಗೆ ಬಿದ್ದಿರುವ ಹೃದಯ ವಿದ್ರಾವಕ ಘಟನೆ ಇಂದು ಸಂಜೆ ನಡೆದಿದ್ದು, ಕೊಳವೆ ಬಾವಿಗೆ ಬಿದ್ದಿರುವ ಮಗುವಿನ ರಕ್ಷಣೆಗಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಗುವಿನ ಉಸಿರಾಟಕ್ಕಾಗಿ ಆಕ್ಸಿಜನ್ ಪೂರೈಸಲಾಗಿದೆ.

ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನಲ್ಲಿ ತೆರೆದ ಕೊಳವೆ ಬಾವಿಗೆ ಮಗು ಬಿದ್ದಿದೆ. ಸಾತ್ವಿಕ್ ಮುಜಗೊಂಡ (2) ಅಪಾಯದಲ್ಲಿ ಸಿಲುಕಿರುವ ಮಗು.

ಫಿಲೋಮಿನಾ ಹೈಸ್ಕೂಲ್ TO ಪುತ್ತೂರು ಕ್ಲಬ್ ವರೆಗೆ ನಿಧಿ ಇದೆ!

Posted by Vidyamaana on 2023-10-07 14:55:12 |

Share: | | | | |


ಫಿಲೋಮಿನಾ ಹೈಸ್ಕೂಲ್ TO ಪುತ್ತೂರು ಕ್ಲಬ್ ವರೆಗೆ ನಿಧಿ ಇದೆ!


ಪುತ್ತೂರು:  ಮನೋರಂಜನೆಗಳು ವಿಭಿನ್ನ ರೀತಿಯವು. ರೋಟರಿ ಯುವ ಕ್ಲಬ್ ನಿಂದ ಇದೀಗ ಮೂರನೆ ಬಾರಿ ಟ್ರೆಷರ್ ಹಂಟ್ ಕಾರ್ಯಕ್ರಮ ಹಮ್ಮಿಕೊಂಡಿದೆ ಅಕ್ಟೋಬರ್ 8 ರವಿವಾರದಂದು ನಡೆಯುವ ಈ ಸ್ಫರ್ಧೆ ಸಂತ ಫಿಲೋಮಿನಾ ಹೈಸ್ಕೂಲ್ ಬಳಿ ಆರಂಭಗೊಂಡು ಪುತ್ತೂರು ಕ್ಲಬ್ ನಲ್ಲಿ ಕೊನೆಗೊಳ್ಳಲಿದೆ


ಕುಟುಂಬದ ಸದಸ್ಯರು ಜೊತೆಗೂಡಿ ಭಾಗವಹಿಸಬಹುದಾದ ಆಟದಲ್ಲಿ ಎರಡು ಅಥವಾ ಮೂರು ಸ್ಪರ್ಧಿಗಳು ತಮ್ಮ ಕಾರಿನಲ್ಲಿ ಪ್ರಯಾಣ ಮಾಡುತ್ತಾ ರಸ್ತೆ ನಿಯಮಗಳನ್ನು ಪಾಲಿಸುತ್ತಾ, ಪ್ರಶ್ನೆಗಳಿಗೆ ಉತ್ತರಿಸುತ್ತಾ ಆಡುವ ಆಟವೇ “ಟ್ರೆಷರ್ ಹಂಟ್”. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಕೂಡ ದೊರೆಯಲಿದೆ. ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೆ ರೋಟರಿಯಿಂದ ಪ್ರಮಾಣಪತ್ರ ಸಹ ನೀಡಲಾಗುವುದು.

ಪ್ರತಿಯೊಂದು ತಂಡಕ್ಕೂ ವಿಭಿನ್ನ ರೀತಿಯ ಪ್ರಶ್ನೆ ಪತ್ರಿಕೆಯನ್ನು ನೀಡಿ ಅದರಲ್ಲಿ ನೀಡಿರುವ ಕ್ಲೂ(ಸುಳಿವು)ಗಳನ್ನು ಗಮನಿಸಿ, ಟ್ವಿಸ್ಟ್ ಪ್ರಶ್ನೆಗಳಿಗೆ ಉತ್ತರಿಸುವುದು.ಪ್ರಾಯೋಜಕತ್ವ ನೀಡಿರುವ ಪುತ್ತೂರಿನ ವ್ಯಾಪಾರ ಮಳಿಗೆಗಳಲ್ಲಿ ಟ್ರೆಷರ್ ಅನ್ನು ಸಂಗ್ರಹಿಸುವುದು.ನೀಡಿರುವ ಗಿಫ್ಟ್ ಗಳನ್ನು ಪಡೆದುಕೊಂಡು ಕೊನೆಗೆ ಪುತ್ತೂರು ಕ್ಲಬ್ ನ್ನು ತಲುಪುವುದು. ಸ್ಪರ್ಧೆಯ ಕೊನೆಯಲ್ಲಿ ತೀರ್ಪುಗಾರರು ಪ್ರಶ್ನೆಗಳ ಸರಿ ಉತ್ತರಗಳನ್ನು ಮೌಲ್ಯಮಾಪನ ಮಾಡಿ, ಗರಿಷ್ಟ ಅಂಕಗಳನ್ನು ಪಡೆದವರಿಗೆ ಬಹುಮಾನ ಘೋಷಣೆ ಮಾಡಲಾಗುವುದು. ಈ ವಿಭಿನ್ನ ರೀತಿಯ ಮನೋರಂಜನೆಯ ಆಟದಲ್ಲಿ  ಭಾಗವಹಿಸಲಿಚ್ಛಿಸುವವರು  ವಿನೀತ್ ಶೆಣೈ 9448125671, ನರಸಿಂಹ ಪೈ 9743703147, ಪಶುಪತಿ ಶರ್ಮ 9845522020 ಇವರಲ್ಲಿ ನೋಂದಾಯಿಸಿ ಭಾಗವಹಿಸಬಹುದು

ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : 3 ಮತ್ತು 4ನೇ ಆರೋಪಿ ಪರ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Posted by Vidyamaana on 2024-05-28 14:38:01 |

Share: | | | | |


ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ : 3 ಮತ್ತು 4ನೇ ಆರೋಪಿ ಪರ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಪುತ್ತೂರು : ನೆಹರೂನಗರದಲ್ಲಿ ನಡೆದ ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮತ್ತು 4ನೇ ಆರೋಪಿಗಳಾದ ಮಂಜುನಾಥ್ (ಮಂಜ) ಹಾಗೂ ಕೇಶವ ಪಡೀಲ್ ಇವರ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಲ ದಿನಗಳ ಹಿಂದೆ ಪುತ್ತೂರು‌ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕೃತಗೊಳಿಸಿದ್ದು, ದೂರುದಾರರ ಪರ ಸರ್ಕಾರಿ ಅಭಿಯೋಜಕರಾದ ಜಯಂತಿ ವಾದಮಂಡಿಸಿದ್ದರು

Recent News


Leave a Comment: