ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ಗದಗ ನಾಲ್ವರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ :ತಂದೆ, ತಾಯಿ ಕೊಲೆಗೆ ಮನೆ ಮಗನಿಂದಲೇ ಸುಪಾರಿ, ಗುರಿ ತಪ್ಪಿ ಸಂಬಂಧಿಕರನ್ನು ಮುಗಿಸಿದ್ದ ಕಿಲ್ಲರ್ ಗ್ಯಾಂಗ್

Posted by Vidyamaana on 2024-04-23 04:50:30 |

Share: | | | | |


ಗದಗ ನಾಲ್ವರ ಹತ್ಯೆ ಪ್ರಕರಣಕ್ಕೆ  ಟ್ವಿಸ್ಟ್ :ತಂದೆ, ತಾಯಿ ಕೊಲೆಗೆ ಮನೆ ಮಗನಿಂದಲೇ ಸುಪಾರಿ, ಗುರಿ ತಪ್ಪಿ ಸಂಬಂಧಿಕರನ್ನು ಮುಗಿಸಿದ್ದ ಕಿಲ್ಲರ್ ಗ್ಯಾಂಗ್

ಗದಗ, ಎ.22: ಇಡೀ ರಾಜ್ಯದ ಜನರನ್ನು ಬೆಚ್ಚಿಬೀಳುವಂತೆ ಮಾಡಿದ್ದ ಗದಗ ಜಿಲ್ಲೆಯ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಪೊಲೀಸರ ವಿಚಾರಣೆಯಲ್ಲಿ ಮನೆಯ ಮಗನೇ ಇಡೀ ಕುಟುಂಬವನ್ನು ಮುಗಿಸಲು ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. 


ಮನೆಯ ಹಿರಿಯ ಮಗನೇ ಆಸ್ತಿ ಮೇಲಿನ ದಾಹದಿಂದ ತನ್ನ ತಂದೆ, ತಾಯಿಯನ್ನು ಕೊಲೆ ಮಾಡಲು ಸುಪಾರಿ ನೀಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಆದರೆ, ಸುಪಾರಿ ಕಿಲ್ಲರ್‌ಗಳ ಎಡವಟ್ಟಿನಿಂದಾಗಿ, ಆ ದಿನ ಮನೆಗೆ ಬಂದು ಉಳಿದುಕೊಂಡಿದ್ದ ಅಮಾಯಕ ನೆಂಟರು ಜೀವ ತೆತ್ತಿದ್ದಾರೆ! 


ಗದಗ ನಗರದ ದಾಸರ ಓಣಿಯಲ್ಲಿ ಎರಡು ದಿನಗಳ ಹಿಂದೆ ನಾಲ್ವರ ಭೀಕರ ಹತ್ಯೆ ನಡೆದಿತ್ತು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಕೊಲೆ ನಡೆದಿತ್ತು. ಬೆಟಗೇರಿ ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಟಾರ್ಗೆಟ್ ಮಾಡಿ ಕೃತ್ಯ ನಡೆದಿತ್ತು. ಆದರೆ ಹಂತಕರು ಮನೆಗೆ ನುಗ್ಗಿ ಮೇಲಿನ ಮಹಡಿಯಲ್ಲಿ ಮಲಗಿದ್ದ ಪ್ರಕಾಶ್ ಅವರ ಕಿರಿಯ ಮಗ ಕಾರ್ತಿಕ್ ಬಾಕಳೆ (28), ಸಂಬಂಧಿಕರಾಗಿ ಮನೆಗೆ ಬಂದಿದ್ದ ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಮತ್ತು ಅವರ ಮಗಳು ಆಕಾಂಕ್ಷಾ (16) ಅವರನ್ನು ಹತ್ಯೆ ಮಾಡಿದ್ದರು. ಮಹಡಿಯಲ್ಲಿ ಸದ್ದು ಕೇಳಿ ಆತಂಕಗೊಂಡ ಪ್ರಕಾಶ್‌ ಬಾಕಳೆ ಪೊಲೀಸರಿಗೆ ಫೋನ್‌ ಮಾಡಿದಾಗ ಕೊಲೆಗಾರರು ಪರಾರಿಯಾಗಿದ್ದರು.

ಕುಡಿದು ತೇಲಾಡಿದ ಉರ್ಫಿ ಜಾವೇದ್‌; ವಿಡಿಯೊ ವೈರಲ್

Posted by Vidyamaana on 2024-07-17 16:19:56 |

Share: | | | | |


ಕುಡಿದು ತೇಲಾಡಿದ ಉರ್ಫಿ ಜಾವೇದ್‌; ವಿಡಿಯೊ ವೈರಲ್

ಬೆಂಗಳೂರು : ನಟಿ ಉರ್ಫಿ ಜಾವೇದ್ (Urfi Javed) ಮತ್ತೆ ಕುಡಿದು ತೇಲಾಡಿರುವ ವಿಡಿಯೊ ವೈರಲ್‌ ಆಗಿದೆ. ಮೂರನೇ ಬಾರಿಗೆ ಉರ್ಫಿ ಈ ರೀತಿ ಕಂಡು ಬಂದಿದ್ದಾರೆ. ಕಾರಿನ ಬಳಿ ಹೋಗಲಾರದೇ ಸ್ನೇಹಿತರ ಸಹಾಯದಿಂದ ನಟಿ ಹೋಗುವುದು ಕಂಡು ಬಂತು. ಹಳದಿ ಬಣ್ಣದ ಮಿನಿ ಡ್ರೆಸ್ ಧರಿಸಿದ್ದರು ಉರ್ಫಿ ಪಬ್‌ನಿಂದ ಹೊರಬಂದ ತಕ್ಷಣ, ಪಾಪರಾಜಿಗಳು ಮತ್ತು ಸ್ಥಳೀಯರು ಉರ್ಫಿಯನ್ನು ಗುಂಪುಗೂಡಿದರು. ಕಾರಿನವರೆಗೆ ನಡೆಯಲು ಪ್ರಯಾಸಪಡುತ್ತಿದ್ದಾಗ, ಅವರ ಸಹೋದರಿ ಉರ್ಫಿಯನ್ನು ಬಿಗಿಯಾಗಿ ಹಿಡಿದುಕೊಂಡು ಜನರಿಗೆ ದಾರಿ ಮಾಡಿಕೊಡುವಂತೆ ಕೇಳುತ್ತಿದ್ದರು. ತುಂಬ ಕುಡಿದ್ದಿದ್ದೇನೆ ಎಂದು ಉರ್ಫಿ ಕೂಡ ಹೋಗಲು ದಾರಿ ಮಾಡಿಕೊಂಡಿ ಎಂದು ವಿನಂತಿಸಿದ್ದಾರೆ.

ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆ ದರೋಡೆ

Posted by Vidyamaana on 2024-02-08 11:26:13 |

Share: | | | | |


ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆ ದರೋಡೆ

ವಿಟ್ಲ : ಬ್ಯಾಂಕ್ ನೊಳಗೆ ನುಗ್ಗಿದ ಖದೀಮರು ಹಣ-ಒಡವೆ ದೋಚಿದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ 8ರಂದು ನಡೆದಿದೆ.

ಗ್ಯಾಸ್ ಕಟ್ಟರ್ ಮೂಲಕ ಬ್ಯಾಂಕ್ ಶಾಖಾ ಕಟ್ಟಡದ ಹಿಂಬದಿಯ ಕಿಟಕಿ ತುಂಡರಿಸಿ  ದರೋಡೆಕೋರರು

 ಒಳನುಗ್ಗಿದ್ದಾರೆನ್ನಲಾಗಿದೆ.ಗ್ಯಾಸ್ ಕಟ್ಟರ್ ಮೂಲಕ ಸೇಫ್ ಲಾಕರ್ ನಲ್ಲಿದ್ದ  ಅಪಾರ ಪ್ರಮಾಣದ ಸೊತ್ತು ದರೋಡೆಕೋರರ ಪಾಲುಗಿದೆ ಎಂದು ತಿಳಿದು ಬಂದಿದೆ


ಸುಮಾರು 20 ವರುಷ ಹಳೆಯ ಕಟ್ಟಡದಲ್ಲಿ ಈ ಬ್ಯಾಂಕ್ ಇದ್ದು, ಬ್ಯಾಂಕ್ ನ ಸುತ್ತಲೂ ಕಾಡು-ಪೊದೆಗಳೆ ಆವರಿಸಿಕೊಂಡಿದೆ. ಯಾವುದೇ ಮುಂಜಾಗ್ರತೆ ಇಲ್ಲದ ಕಟ್ಟಡದಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದು, ಅಜಾಗರೂಕತೆಯೇ ಕಳ್ಳತನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಥಳಕ್ಕೆ ವಿಟ್ಲ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳ ಆಗಮಿಸಿ ತನಿಖೆ ಕೈಗೊಂಡಿದ್ದಾರೆ


ಉಡುಪಿ ; ಮೆನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಗುಂಡಿಕ್ಕಿ ಯುವಕನನ್ನ ಕೊಂದ ದುಷ್ಕರ್ಮಿಗಳು

Posted by Vidyamaana on 2024-03-04 04:38:01 |

Share: | | | | |


ಉಡುಪಿ ; ಮೆನೆಯಲ್ಲಿ ಊಟ ಮಾಡುತ್ತಿದ್ದ ವೇಳೆ ಗುಂಡಿಕ್ಕಿ ಯುವಕನನ್ನ ಕೊಂದ ದುಷ್ಕರ್ಮಿಗಳು

ಉಡುಪಿ, ಮಾ 03: ಯುವಕನನ್ನ ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದ ಘಟನೆ ಬ್ರಹ್ಮಾವರ ಸಮೀಪದ ಬಾರ್ಕೂರಿನಿ ಹನೆಹಳ್ಳಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕೃಷ್ಣ (36) ಎಂದು ಗುರುತಿಸಲಾಗಿದೆ.ಮೃತ ಕೃಷ್ಣ ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದು ಶನಿವಾರ ರಾತ್ರಿ ಮನೆಗೆ ಬಂದಿದ್ದ, ಸುಮಾರು 9.30ರ ಸುಮಾರಿಗೆ ಊಟ ಮಾಡುತ್ತಿರುವಾಗ ಮನೆಗೆ ಎಂಟ್ರಿ ಕೊಟ್ಟ ದುಷ್ಕರ್ಮಿಗಳು ಯುವಕನನ್ನ ಶೂಟೌಟ್ ಮಾಡಿ ಪರಾರಿಯಾಗಿದ್ದಾರೆ. 


ಸ್ಥಳೀಯರಿಗೆ ರಾತ್ರಿ ಫೈರಿಂಗ್ ಶಬ್ದ ಕೇಳಿ ಪಟಾಕಿ ಶಬ್ದ ಇರಬಹುದು ಅನ್ಕೊಂಡು ಸುಮ್ಮನಾಗಿದ್ದಾರೆ. ಆದ್ರೆ ಮುಂಜಾನೆ ಎದ್ದಾಗ ಅದು ಗುಂಡಿನ ಶಬ್ದ ಅಂತ ಗೊತ್ತಾಗಿ ಬೆಚ್ಚಿಬಿದ್ದಿದ್ದಾರ. ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲ ನಡೆಸುತ್ತಿದ್ದು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ

ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ

Posted by Vidyamaana on 2024-02-17 21:49:20 |

Share: | | | | |


ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನ ಕಾಂಗ್ರೆಸ್ ಸಮಾವೇಶದತ್ತ ಬರುವ ವೇಳೆ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಮುಖ್ಯಮಂತ್ರಿ ವಿಮಾನ ನಿಲ್ದಾಣದಿಂದ ಕಾಂಗ್ರೆಸ್ ಸಮಾವೇಶ ನಡೆಯುವ ಸಹ್ಯಾದ್ರಿ ಮೈದಾನಕ್ಕೆ ಬರುವ ವೇಳೆ ಮುತ್ತಿಗೆ ಹಾಕಲು ಬೊಂದೆಲ್ ಬಳಿ ಕಾರ್ಯಕರ್ತರು ಸೇರಿದ್ದರು. 50ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದು ರಸ್ತೆಯಲ್ಲಿ ಮುಖ್ಯಮಂತ್ರಿ ಬರುವಾಗ ಕಪ್ಪು ಪಟ್ಟಿ ಹಿಡಿದು ಪ್ರತಿಭಟನೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ

ಅದು ಪ್ರೀತಿ, ಕಾಮವಲ್ಲ : ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಹೈಕೋರ್ಟ್ ಜಾಮೀನು!

Posted by Vidyamaana on 2024-01-15 09:21:03 |

Share: | | | | |


ಅದು ಪ್ರೀತಿ, ಕಾಮವಲ್ಲ : ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಹೈಕೋರ್ಟ್ ಜಾಮೀನು!

ಮುಂಬೈ : 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ 26 ವರ್ಷದ ವ್ಯಕ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.ಅಮರಾವತಿ ನಿವಾಸಿಯಾಗಿರುವ ಆರೋಪಿ ಮೂರು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವನನ್ನು ಜೈಲಿಗೆ ಹಾಕಲಾಯಿತು.ಲೈಂಗಿಕ ಕಿರುಕುಳದ ಯಾವುದೇ ದೂರು ಇಲ್ಲದೆ ಅವಳು ಆ ವ್ಯಕ್ತಿಯೊಂದಿಗೆ ಹಲವಾರು ಸ್ಥಳಗಳಲ್ಲಿ ವಾಸಿಸಿದ್ದಾಳೆ ಎಂದು ನ್ಯಾಯಾಲಯ ಗಮನಿಸಿದೆ.


ಬಾಲಕಿ ತನ್ನ ಹೇಳಿಕೆಯನ್ನು ಅಧಿಕಾರಿಗೆ ನೀಡಿದ್ದಾಳೆ, ಇದು ಬಾಲಕಿ ಪುಸ್ತಕ ಖರೀದಿಸುವ ನೆಪದಲ್ಲಿ ಆಗಸ್ಟ್ 23, 2020 ರಂದು ಮನೆಯಿಂದ ಹೊರಟು ಸ್ವಯಂಪ್ರೇರಿತವಾಗಿ ಆರೋಪಿಯೊಂದಿಗೆ ವಾಸಿಸಿದ್ದಾಳೆ ಎಂದು ತೋರಿಸುತ್ತದೆ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಗಮನಿಸಿದರು.


ನಾಗ್ಪುರ ಪೀಠದ ನ್ಯಾಯಮೂರ್ತಿ ಜೋಶಿ-ಫಾಲ್ಕೆ ಅವರು ಅರ್ಜಿದಾರ ಆರೋಪಿಗಳೊಂದಿಗೆ ಇದ್ದರು ಮತ್ತು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು. ಲೈಂಗಿಕ ಸಂಬಂಧದ ಘಟನೆಯು ಇಬ್ಬರ ನಡುವಿನ ಆಕರ್ಷಣೆಯಿಂದಾಗಿ ಎಂದು ತೋರುತ್ತದೆ, ಮತ್ತು ಅರ್ಜಿದಾರರು ಕಾಮದಿಂದ ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುವುದಿಲ್ಲ ನ್ಯಾಯಪೀಠ ಅಭಿಪ್ರಾಯಪಟ್ಟಿದೆ



Leave a Comment: