ಪರೀಕ್ಷೆಯಲ್ಲಿ ಗೈಡ್ ಇಟ್ಟುಕೊಂಡು ಸಾಮೂಹಿಕ ನಕಲು ಮಾಡಿದ ವಿದ್ಯಾರ್ಥಿಗಳು, ವಿಡಿಯೋ ವೈರಲ್

ಸುದ್ದಿಗಳು News

Posted by vidyamaana on 2024-07-08 08:41:02 |

Share: | | | | |


ಪರೀಕ್ಷೆಯಲ್ಲಿ ಗೈಡ್ ಇಟ್ಟುಕೊಂಡು ಸಾಮೂಹಿಕ ನಕಲು ಮಾಡಿದ ವಿದ್ಯಾರ್ಥಿಗಳು, ವಿಡಿಯೋ ವೈರಲ್

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈಡ್​ ಹಾಗೂ ಪುಸ್ತಕಗಳನ್ನಿಟ್ಟುಕೊಂಡು ಸಾಮೂಹಿಕ ನಕಲು ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೇವಲ ಮಕ್ಕಳಲ್ಲ ಶಿಕ್ಷಕರೂ ಅವರಿಗೆ ನೆರವಾಗುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈಡ್​ ಇಟ್ಟುಕೊಂಡು ಸಾಮೂಹಿಕ ನಕಲು(Mass Cheating) ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಘಟನೆ ಸಿಸಿಟಿವಿಯಲ್ಲಿ ಬಯಲಾಗಿದೆ. ಜುಲೈ 5 ರಂದು ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಎಸ್ ಡಿಎಂ ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಅವರು ತನಿಖೆಗಾಗಿ ಸ್ಥಳಕ್ಕೆ ಬಂದರು ಆದರೆ ಅಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಇದಾದ ಬಳಿಕ ವಿಡಿಯೋವೊಂದು ಹೊರಬಿದ್ದಿದ್ದು, ನಂತರ ವಿಷಯ ಬೆಳಕಿಗೆ ಬಂದಿದೆ.

ಪರೀಕ್ಷಾ ಪತ್ರಿಕೆಗಳಲ್ಲಿನ ಅಕ್ರಮಗಳು ಮತ್ತು ಸೋರಿಕೆಗಳ ಬಗ್ಗೆ ದೇಶದಲ್ಲಿ ಕೋಲಾಹಲವಿದೆ, ಈ ನಡುವೆ ಈ ಘಟನೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ತರಗತಿ ಕೊಠಡಿಯಲ್ಲಿ ಪರೀಕ್ಷೆ ನಡೆಯುವಾಗ ಹಲವು ಮಕ್ಕಳು ಗುಂಪು ಕಟ್ಟಿಕೊಂಡು ಬಹಿರಂಗವಾಗಿ ನಕಲು ಮಾಡುತ್ತಿದ್ದರು. ಅಲ್ಲಿ ಶಿಕ್ಷಕರೂ ಇದ್ದರು. ಆದರೆ ನಕಲು ನಿಲ್ಲಿಸುವ ಬದಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಬಿಎ ಮತ್ತು ಬಿಎಸ್ಸಿ ಪರೀಕ್ಷೆಗಳು ಅಲ್ಲಿ ನಡೆಯುತ್ತಿತ್ತು, ಈ ಪರೀಕ್ಷೆಗಳ ಕೇಂದ್ರವನ್ನು ದಾಮೋಹ್ ಪ್ರದೇಶದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳು ಅದೇ ಶಾಲೆಯ ತರಗತಿ ಕೊಠಡಿಯಲ್ಲಿದೆ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳು ಗೈಡ್​ ಹಾಗೂ ಪುಸ್ತಕಗಳನ್ನು ತೆರೆದು ನಕಲು ಮಾಡುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಎಸ್‌ಡಿಎಂ ಭಿಂಡ್ ಕಲೆಕ್ಟರ್ ಸಂದೀಪ್ ಶ್ರೀವಾಸ್ತವ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರದ ಅಧ್ಯಕ್ಷರು ಹಾಗೂ ಪ್ರಾಂಶುಪಾಲರ ಶಾಮೀಲಾಗಿರುವುದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆಯೂ ಮಾತನಾಡಿದರು. ಇದೀಗ ಆಲಂಪುರದ ಹೈಯರ್ ಸೆಕೆಂಡರಿ ಶಾಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ದುರ್ಗಾಪ್ರಸಾದ್ ಸರಾಫ್, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸ್ವಯಂ ಪ್ರಭಾ ಕಾಲೇಜಿನ ವಿದ್ಯಾರ್ಥಿಗಳೂ ದಾಮೋಹ್ ಕೇಂದ್ರದಲ್ಲಿ ನಕಲು ಮಾಡುತ್ತಿದ್ದು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

 Share: | | | | |


ನಾಳೆ ‘ಸುಭದ್ರ’ದಲ್ಲಿ ‘ಸೀತಾ ಪರಿವಾರ’ – ಪುತ್ತಿಲ ಗೆಲುವಿಗೆ ಬಲ ತುಂಬಲಿರುವ ‘ನಾರಿ ಶಕ್ತಿ’!

Posted by Vidyamaana on 2023-04-27 16:30:04 |

Share: | | | | |


ನಾಳೆ ‘ಸುಭದ್ರ’ದಲ್ಲಿ ‘ಸೀತಾ ಪರಿವಾರ’ – ಪುತ್ತಿಲ ಗೆಲುವಿಗೆ ಬಲ ತುಂಬಲಿರುವ ‘ನಾರಿ ಶಕ್ತಿ’!

ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ಪರವಾಗಿ ಮಹಿಳಾ ಸಮಾವೇಶ ‘ಸೀತಾಪರಿವಾರ’ ಎ.28 ರಂದು ನಡೆಯಲಿದೆ.ಮಹಿಳಾ ಸಮಾವೇಶ ‘ಸೀತಾಪರಿವಾರ’ ಕಾರ್ಯಕ್ರಮವು ಎ.28 ಸಂಜೆ 4 ಗಂಟೆಗೆ ಮುಕ್ರಂಪಾಡಿಯ ಸುಭದ್ರ ಸಭಾಂಗಣದಲ್ಲಿ ನಡೆಯಲಿದೆ.ಹಿಂದುತ್ವದ ಅಡಿಯಲ್ಲಿ ಸುಮಾರು 30 ವರ್ಷಗಳಿಂದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಅರುಣ್ ಕುಮಾರ್ ಪುತ್ತಿಲ ರವರು ಕಾರ್ಯಕರ್ತರ ಅಪೇಕ್ಷೆಯಂತೆ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಅವರ ಗೆಲುವು ರಾಜ್ಯದಲ್ಲಿ ಬಿಜೆಪಿಯ ಗೆಲವುವಾಗಲಿದೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಗೆಲುವು ಆಗಲಿದೆ. ಹಾಗಾಗಿ ಮಹಿಳಾ ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ಅವರಿಗೆ ಬೆಂಬಲ ಸೂಚಿಸಲಿದ್ದಾರೆ. ನಾವೆಲ್ಲ ಒಗ್ಗಟ್ಟಿನಿಂದ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ನಡೆಸುತ್ತಿದ್ದು, ಮಹಿಳಾ ಕಾರ್ಯಕರ್ತರು ‘ಸೀತಾಪರಿವಾರ’ ಎಂಬ ಹೆಸರಿನಡಿಯಲ್ಲಿ ಸಮಾವೇಶ ನಡೆಸಲಿದ್ದಾರೆ.

ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೀತಾ ಪರಿವಾರ ಸಮಾವೇಶದ ಪ್ರಮುಖರಾಗಿರುವ ವಸಂತ ಲಕ್ಷ್ಮೀ ರವರು ಪತ್ರಿಕಾಗೋಷ್ಠಿ ತಿಳಿಸಿದರು.

ಪಂಚೆ ಧರಿಸಿ, ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡವರು ರಾಜ್ಯದಲ್ಲಿ ಬೇರೆ ಯಾರಿದ್ದಾರೆ..? ಸಿದ್ದರಾಮಯ್ಯ ಬಗ್ಗೆ ಬಿಜೆಪಿ ಟೀಕೆ

Posted by Vidyamaana on 2023-09-10 21:47:53 |

Share: | | | | |


ಪಂಚೆ ಧರಿಸಿ, ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡವರು ರಾಜ್ಯದಲ್ಲಿ ಬೇರೆ ಯಾರಿದ್ದಾರೆ..? ಸಿದ್ದರಾಮಯ್ಯ ಬಗ್ಗೆ ಬಿಜೆಪಿ ಟೀಕೆ

ಬೆಂಗಳೂರು : ಒಂದೆಡೆ ಬಿ.ಕೆ.​ಹ​ರಿ​ಪ್ರ​ಸಾದ್‌ ನಿರಂತರ ಟೀಕೆ ಮಾಡುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಅವರೆಲ್ಲಿಯೂ ನನ್ನ ಹೆಸರು ಹೇಳಿ ಟೀಕೆ ಮಾಡಿಲ್ಲ. ಹೀಗಾಗಿ ಅವರ ಹೇಳಿ​ಕೆಗೆ ನಾನು ಪ್ರತಿಕ್ರಿಯೆ ನೀಡಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಈ ರೀತಿಯ ಹೇಳಿಕೆಯನ್ನೇ ಮುಂದಿಟ್ಟು ರಾಜ್ಯ ಬಿಜೆಪಿ ಟೀಕೆ ಮಾಡಿದೆ.


ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದ ಕಾಂಗ್ರೆಸ್  ಸರ್ಕಾರದಲ್ಲಿ ಒಳಜಗಳ ನಿರಂತರವಾಗಿದೆ. "ಅಹಿಂದ" ಹೆಸರಿನಲ್ಲಿ ಕೇವಲ ಒಂದೆರೆಡು ಸಮುದಾಯದವರನ್ನಷ್ಟೇ ಓಲೈಸುತ್ತಾ, ಉಳಿದೆಲ್ಲಾ ಸಮುದಾಯಗಳಿಗೂ ಅನ್ಯಾಯವೆಸಗುವ ಸಿದ್ದರಾಮಯ್ಯ ಅವರ ನೈಜ ರಾಜಕಾರಣವನ್ನು ಅವರದೇ ಪಕ್ಷದ ನಾಯಕರು ಬಹಿರಂಗಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಆಡಳಿತ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಹರಿಪ್ರಸಾದ್‌ರಿಂದ ಹೊರಬಂದ ಸತ್ಯಗಳೇ ಸಾಕ್ಷಿ ಎಂದು ಹೇಳಿದೆ.



"ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ" ಎಂಬ ಗಾದೆ ಮಾತಿದೆ. ಅದು ನಿಮಗೆ ಸರಿಯಾಗಿ ಹೊಂದುತ್ತದೆ ಸಿದ್ದರಾಮಯ್ಯ ಅವರೇ. ಹರಿಪ್ರಸಾದ್ ನನ್ನ ಹೆಸರೇ ಹೇಳಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡುತ್ತೀರಿ. ಹಾಗಾದರೆ, ಪಂಚೆ ಧರಿಸಿ, ದುಬಾರಿ ಹ್ಯುಬ್ಲೋಟ್ ವಾಚ್ ಕಟ್ಟಿಕೊಂಡವರು ರಾಜ್ಯದಲ್ಲಿ ಬೇರೆ ಯಾರಾದರೂ ಇದ್ದಾರಾ..? ಕೊರಟಗೆರೆಯಲ್ಲಿ ಪರಮೇಶ್ವರ್‌ ಅವರನ್ನು ಸೋಲಿಸಿದ್ದು ಯಾರು ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಎಂಬ ಉತ್ತರವನ್ನು ಕೊರಟಗೆರೆಯ ಚಿಕ್ಕ ಬಾಲಕನೂ ನೀಡುತ್ತಾನೆ.


ದೇವರಾಜ ಅರಸು ಬಳಸುತ್ತಿದ್ದ ಕಾರಿನಲ್ಲಿ ಜಾಲಿ ರೈಡ್‌ಗೆ ಹೋಗಿದ್ದು ರಾಹುಲ್ ಗಾಂಧಿಯವರಾ..? ಅಹಿಂದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವವರು ನೀವೇ ತಾನೇ..? ವಂದಿಮಾಗದರು, ಆಸ್ಥಾನ ಕಲಾವಿದರಿಂದ ಸ್ವಯಂಘೋಷಿತ ಸ"ಮಜಾವಾದಿ" ಎಂಬ ಬಿರುದು ಪಡೆದವರು ನೀವೇ ತಾನೇ..? ಬಿ.ಕೆ. ಹರಿಪ್ರಸಾದ್‌ರವರು ಸಿದ್ದರಾಮಯ್ಯರವರನ್ನೇ ಉದ್ದೇಶಿಸಿ ಮಾತನಾಡಿದ್ದು ಎಂಬುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು ಎಂದು ಪ್ರಶ್ನಿಸಿದೆ

ಉದ್ಯಮಿ ಅನ್ಸಾರ್ ಬೆಳ್ಳಾರೆಯವರಿಂದ ಶಾಸಕರಿಗೆ ಅಭಿನಂದನೆ

Posted by Vidyamaana on 2023-08-28 09:55:32 |

Share: | | | | |


ಉದ್ಯಮಿ ಅನ್ಸಾರ್ ಬೆಳ್ಳಾರೆಯವರಿಂದ ಶಾಸಕರಿಗೆ ಅಭಿನಂದನೆ

ಪುತ್ತೂರು: ದುಬಾಯಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ,ಸಮಾಜ ಸೇವಕರಾದ ಅನ್ಸಾರ್ ಬೆಳ್ಳಾರೆಯವರು ಪುತ್ತೂರು ಶಾಸಕರನ್ನು ಅಭಿನಂದಿಸಿದರು.

ಆ.28 ರಂದು ಶಾಸಕರ ಕಚೇರಿಗೆ ಭೇಟಿ ನೀಡಿದ ಅವರು ಅಭಿವೃದ್ದಿ ವಿಚಾರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಲು ಮುಂದಾಗಿರುವ ನೋವು ಸುಳ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಗೂ ಸಹಕಾರ ಮಾಡಬೇಕು ಎಂದು ಶಾಸಕರಲ್ಲಿ‌ಮನವಿ ಮಾಡಿದರು. ಈ ಸಂದರ್ಬದಲ್ಲಿ‌ ಸಲೀಂ ಕೋಡಿಂಬಾಡಿ ಉಪಸ್ಥಿತರಿದ್ದರು.

15 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ದಕ್ಷಿಣ ಕನ್ನಡ ಎಸ್ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ

Posted by Vidyamaana on 2023-06-20 10:36:15 |

Share: | | | | |


15 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ದಕ್ಷಿಣ ಕನ್ನಡ ಎಸ್ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಭರ್ಜರಿ ಸರ್ಜರಿ ಮಾಡಲಾಗಿದ್ದು 15 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹೀಗಾಗಿ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಯಾಗಿ(ಎಸ್‌ಪಿ) ಐಪಿಎಸ್ ಅಧಿಕಾರಿ ಸಿ ಬಿ ರಿಷ್ಯಂತ್ ನೇಮಕ ಮಾಡಲಾಗಿದೆ.ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಕ್ರಮ್ ಅಮತೆ ಅವರು ವೈದ್ಯಕೀಯ ರಜೆಯಲ್ಲಿ ತೆರಳಿದ ಹಿನ್ನಲೆಯಲ್ಲಿ ಸಿ ಬಿ ರಿಷ್ಯಂತ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು.

2013ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದ ರಿಷ್ಯಂತ್ ಅವರು ಈ ಹಿಂದೆ ದಾವಣಗೆರೆಯ ಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು ವಿಧಾನಸಭೆ ಚುನಾವಣೆಗೆ ಮುನ್ನ ಬೆಂಗಳೂರಿನಲ್ಲಿ ನಿಯೋಜನೆಗೊಂಡಿದ್ದರು.

ಬೆಂಗಳೂರಿನವರಾದ ರಿಷ್ಯಂತ್ ಅವರು ಈ ಹಿಂದೆ ದಕ್ಷಿಣ ಕನ್ನಡ, ಮೈಸೂರು, ಬಾಗಲಕೋಟೆ ಮತ್ತು ದಾವಣಗೆರೆಯ ಎಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು ತುಳುಕೂಟದಿಂದ ಪುದ್ವಾರ್ ವಣಸ್ದ ಗಮ್ಮತ್ತ್ ಶಾಸಕರಿಗೆ ಸನ್ಮಾನ

Posted by Vidyamaana on 2023-10-01 17:55:59 |

Share: | | | | |


ಬೆಂಗಳೂರು ತುಳುಕೂಟದಿಂದ ಪುದ್ವಾರ್ ವಣಸ್ದ ಗಮ್ಮತ್ತ್ ಶಾಸಕರಿಗೆ ಸನ್ಮಾನ

ಪುತ್ತೂರು: ತುಳುಕೂಟ ಬೆಂಗಳೂರು ಇವರ ವತಿಯಿಂದ ಬೆಂಗಳೂರು ಅತ್ತಿಗುಪ್ಪೆ ಬಂಟರಭವನದಲ್ಲಿ ನಡೆದ ಪುದ್ವಾರ್ ವಣಸ್ದ ಗಮ್ಮತ್ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರು ಭಾಗವಹಿಸಿದರು.

ತುಳುಕೂಟದ ವತಿಯಿಂದ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಹೊಸ ಅಕ್ಕಿ ಊಟ ಸವಿದು ಪುದ್ವಾರ್ ಕಾರ್ಯಕ್ರಮದಲ್ಲಿ ಜಿಲ್ಲೆಯ ತುಳು ಬಾಂಧವರು ಪುದ್ವಾರ್ ಆಚರಿಸಿದರು.ಕಾರ್ಯಕ್ರಮದಲ್ಲಿ ಬೆಂಗಳೂರು ತುಳುಕೂಟದ ಅಧ್ಯಕ್ಷರಾದ ರಾಜೇಂದ್ರಕುಮಾರ್, ತುಳುಕೂಟದ ಪ್ರಮುಖರಾದ ಸುಂದರ್‌ರಾಜ್ ರೈ, ರವೀಂದ್ರನಾಥ ಮಾರ್ಲ, ಅಜಿತ್ ಹೆಗ್ಡೆ ಜಿ, ಸಹಿತಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪುತ್ತೂರು: ಅ.7ರಂದು ಶೌರ್ಯ ಜಾಗರಣ ರಥಯಾತ್ರೆ ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ

Posted by Vidyamaana on 2023-10-06 15:45:31 |

Share: | | | | |


ಪುತ್ತೂರು: ಅ.7ರಂದು ಶೌರ್ಯ ಜಾಗರಣ ರಥಯಾತ್ರೆ ಕಿಲ್ಲೆ ಮೈದಾನದಲ್ಲಿ ಬೃಹತ್ ಹಿಂದೂ ಶೌರ್ಯ ಸಂಗಮ

ಪುತ್ತೂರು: ವಿಶ್ವ ಹಿಂದೂ ಪರಿಷತಿನ 60ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ ವತಿಯಿಂದ ಶೌರ್ಯ ಜಾಗರಣಾ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮ ಅ. 7ರಂದು ಸಂಜೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಬಜರಂಗದಳ ದಕ್ಷಿಣಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ತಿಳಿಸಿದ್ದಾರೆ.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ದೇಶಾದ್ಯಂತ ಅನೇಕ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಹಿಂದೂ ಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. 60ನೇ ವರ್ಷದ ಷಷ್ಟ್ಯಬ್ಲಿ ಆಚರಣೆ ಅಂಗವಾಗಿ ಇದೀಗ ಬೃಹತ್ ಶೌರ್ಯ ಜಾಗರಣಾ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸನಾತನ ಧರ್ಮವನ್ನು ಈ ಪವಿತ್ರ ಭರತಭೂಮಿಯಲ್ಲಿ ಸಂರಕ್ಷಿಸುವಲ್ಲಿ ಸಾವಿರಾರು ವೀರ ಪರಾಕ್ರಮಿಗಳು ತಮ್ಮ ತ್ಯಾಗ- ಬಲಿದಾನಗಳ ಮೂಲಕ ಹೋರಾಡಿದ್ದಾರೆ. ಸತಾನದ ಧರ್ಮವನ್ನು ಮುಂದಿನ ಪೀಳಿಗೆಗೆ ಉಳಿಸುವ ಬೆಳೆಸುವ ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದ್ದು, ಹಿಂದೂಗಳನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ಸೆ. 25ರಂದು ಚಿತ್ರದುರ್ಗದಿಂದ ರಥಯಾತ್ರೆ ಹೊರಟಿದ್ದು, ಅ. 7ರಂದು ಬೆಳಿಗ್ಗೆ ಸುಬ್ರಹ್ಮಣ್ಯ, ಕಡಬ, ಉಪ್ಪಿನಂಗಡಿ ಮೂಲಕ ಪುತ್ತೂರಿಗೆ ಸಂಜೆ ರಥಯಾತ್ರೆ ಆಗಮಿಸಲಿದೆ. ಈ ಯಾತ್ರೆಯನ್ನು ವಿವಿಧ ಕಡೆಗಳಲ್ಲಿ ಸ್ವಾಗತಿಸಲಾಗುವುದು. ಪುತ್ತೂರಿನಲ್ಲಿ ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಗುವುದು. ಇದರ ಅಂಗವಾಗಿ ಸಂಜೆ 4.30ಕ್ಕೆ ಬೃಹತ್ ಶೋಭಾಯಾತ್ರೆಗೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಚಾಲನೆ ನೀಡಲಾಗುವುದು. ಬಳಿಕ ಮುಖ್ಯರಸ್ತೆಯಾಗಿ ರಥಯಾತ್ರೆ ಚೆಂಡೆ, ಶಂಖನಾದದ ಜತೆಗೆ ಯುವಕರು ಹಲವಾರು ವೀರ ಪರಾಕ್ರಮಿಗಳ ವೇಷವನ್ನು ಧರಿಸಿ ಜತೆಗೂಡಿ ಸಾಗಿಬಂದು ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ಸಂಜೆ 5.30ಕ್ಕೆ ನಡೆಯುವ ಬೃಹತ್ ಹಿಂದೂ ಶೌರ್ಯ ಸಂಗಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೈಷ್ಠ ಪ್ರಚಾರಕ್ ಸು.ರಾಮಣ್ಣ ಅವರು ದಿಕ್ಕೂಚಿ ಭಾಷಣ ಮಾಡುವರು. ವಿಹಿಂಪ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ ಅಧ್ಯಕ್ಷತೆ ವಹಿಸುವರು. ಬಜರಂಗಳದ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಉಪಸ್ಥಿತರಿರುವರು ಎಂದು ವಿವರಿಸಿದರು.


ಸೂಚಿಸಿದಲ್ಲಿ ವಾಹನ ಪಾರ್ಕಿಂಗ್ ಮಾಡುವಂತೆ ಸಂಘಟಕರ ಮನವಿ

 ಹಿಂದೂ ಶೌರ್ಯ ಸಂಗಮ, ಹಿಂದೂ ಶೌರ್ಯ ಜಾಗರಣಾ ರಥಯಾತ್ರೆಗೆ ಆಗಮಿಸುವವರಿಗೆ ವಾಹನ ಪಾರ್ಕ್ ಮಾಡಲು ಸ್ಥಳ ಸೂಚಿಸಲಾಗಿದೆ.


ಪಾಣಾಜೆ, ಕುಂಬ್ರ, ನರಿಮೊಗರು ಭಾಗದಿಂದ ಬರುವ ವಾಹನಗಳು ಮಹಾಲಿಂಗೇಶ್ವರ ದೇವಸ್ಥಾನ ಗದ್ದೆಯಲ್ಲಿ ಮತ್ತು ಉಪ್ಪಿನಂಗಡಿ, ಕಬಕ ಭಾಗದಿಂದ ಬರುವ ವಾಹನಗಳು ಹಾರಾಡಿ ರೈಲ್ವೇ ಸೇತುವೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಹಿಂದೂ ಶೌರ್ಯ ಜಾಗರಣ ರಥ ಯಾತ್ರೆ ಸ್ವಾಗತ ಸಮಿತಿ ವಿನಂತಿಸಿದೆ.


ವಿಶ್ವ ಹಿಂದೂ ಪರಿಷತ್ 60ನೇ ಷಷ್ಟ್ಯಬ್ದದ ಅಂಗವಾಗಿ ನಾಳೆ ಪುತ್ತೂರಿನಲ್ಲಿ ಹಿಂದೂ ಶೌರ್ಯ ಜಾಗರಣ ರಥಯಾತ್ರೆ ಮತ್ತು ಹಿಂದೂ ಶೌರ್ಯ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಹಿಂದು ಬಾಂಧವರು ಸಹಕರಿಸುವಂತೆ ಸ್ವಾಗತ ಸಮಿತಿ ವಿನಂತಿಸಿದೆ.




Leave a Comment: