ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಪೊಲೀಸರಿಂದ ಕಿರುಕುಳಕ್ಕೊಳಗಾಗುವ ಬಿಜೆಪಿ ಕಾರ್ಯಕರ್ತರ ಕಾನೂನು ನೆರವಿಗೆ ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್​ ರೂಂ: ವಿಜಯೇಂದ್ರ

Posted by Vidyamaana on 2023-11-26 22:14:31 |

Share: | | | | |


ಪೊಲೀಸರಿಂದ ಕಿರುಕುಳಕ್ಕೊಳಗಾಗುವ ಬಿಜೆಪಿ ಕಾರ್ಯಕರ್ತರ ಕಾನೂನು ನೆರವಿಗೆ ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್​ ರೂಂ: ವಿಜಯೇಂದ್ರ

ಬೆಂಗಳೂರು: ಪೊಲೀಸರ ಕಿರುಕುಳಕ್ಕೊಳಗಾಗುವ ಬಿಜೆಪಿ ಕಾರ್ಯಕರ್ತರ ದೂರು ಸ್ವೀಕರಿಸಲು ಮತ್ತು ಅವರಿಗೆ ಕಾನೂನು ನೆರವು ನೀಡಲು ವಿರೋಧ ಪಕ್ಷ ಬಿಜೆಪಿ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್​ ರೂಂಗಳನ್ನು ತೆರೆಯಲಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.


ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ವಿಜಯೇಂದ್ರ, ಈ ಧೋರಣೆಯ ವಿರುದ್ಧ ಮಾತನಾಡಿದರೆ ಪೊಲೀಸ್ ಮೂಲಕ ಕಿರುಕುಳ ನೀಡಲಾಗುತ್ತೆ ಎಂದಿದ್ದಾರೆ. ಅಂತಹ ಕಾರ್ಯಕರ್ತರಿಗೆ ಬಿಜೆಪಿ ಕಾನೂನು ನೆರವು ನೀಡುತ್ತದೆ ಎಂದು X ಮೂಲಕ ಶಿಕಾರಿಪುರ ಶಾಸಕರೂ ಆದ ವಿಜಯೇಂದ್ರ ತಿಳಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಸೋಷಿಯಲ್ ಮೀಡಿಯಾ ಸೇರಿದಂತೆ ಯಾವುದೇ ವೇದಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆ ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಕಾರ್ಯಕರ್ತರು ಹಿಂದೆ ಸರಿಯುವ ಅಗತ್ಯವಿಲ್ಲ. ನಿಮ್ಮ ನೆರವಿಗೆ ನಾವಿದ್ದೇವೆ ಎಂದೂ ವಿಜಯೇಂದ್ರ ಹೇಳಿದ್ದಾರೆ.


ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಲು ಪೊಲೀಸರಿಗೆ ಅಧಿಕಾರ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿರುವ ನಮ್ಮ ಕಾರ್ಯಕರ್ತರ ಬಂಧುಗಳಿಗೆ ಯಾವುದೇ ತೊಂದರೆ, ಬೆದರಿಕೆ, ಕಿರುಕುಳ ಎದುರಾದರೆ ತಕ್ಷಣವೇ ಪಕ್ಷ ನೆರವಿಗೆ ಬರುತ್ತದೆ ಎಂದು ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ.

ಪುತ್ತೂರಿನ ಶೈಕ್ಷಣಿಕ ಮುಕುಟಕ್ಕೊಂದು ಹೊಸ ಗರಿ – ಸುದಾನ ಪಿ.ಯು ಕಾಲೇಜು ಶುಭಾರಂಭ

Posted by Vidyamaana on 2024-07-29 16:23:07 |

Share: | | | | |


ಪುತ್ತೂರಿನ ಶೈಕ್ಷಣಿಕ ಮುಕುಟಕ್ಕೊಂದು ಹೊಸ ಗರಿ – ಸುದಾನ ಪಿ.ಯು ಕಾಲೇಜು ಶುಭಾರಂಭ

ಪುತ್ತೂರು; ರಸ್ತೆಯಲ್ಲಿ ಪ್ರತಿಭಟನೆ ಮಾಡಿ ಯಾರಿಗೋ ಬೈಯುವುದಕ್ಕೆ ದೇಶಪ್ರೇಮ ಎನ್ನುವುದಿಲ್ಲ. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಮಕ್ಕಳಿಗೆ ಮಾನವೀಯತೆ, ಸಹೋದರತ್ವ ತುಂಬಿದ ಮೌಲ್ಯಾಧಾರಿತ ಶಿಕ್ಷಣ ನೀಡುವುದೇ ನಿಜವಾದ ದೇಶಪ್ರೇಮ ಎಂದು ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

ಪುತ್ತೂರು ನೆಹರುನಗರದ ಸುಧಾನ ವಿದ್ಯಾಸಂಸ್ಥೆಯಲ್ಲಿ ಶನಿವಾರ ನೂತನ ಪದವಿಪೂರ್ವ ಕಾಲೇಜ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಮಾಜದಲ್ಲಿ ಮಂತ್ರಿಗಳು ಬಲಿಷ್ಟರಾದರೆ, ವಿದ್ಯಾರ್ಥಿಗಳಿಂದ ದೇಶ ಬಲಿಷ್ಟವಾಗುತ್ತದೆ. ಬಡತನದಿಂದ ದೂರವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ. ನೀವು ಉತ್ತಮ ಶಿಕ್ಷಣ ಪಡೆದರೆ ನೀವು ಮಾತ್ರವಲ್ಲ ನಿಮ್ಮ ಕುಟುಂಬವೂ ಉನ್ನತ ಸ್ಥಾನ ಪಡೆದುಕೊಳ್ಳುತ್ತದೆ. ಮಕ್ಕಳ ಶೈಕ್ಷಣಿಕ ಸಂತಸದಲ್ಲಿ ತಂದೆತಾಯಿ ಕೂಡಾ ಉತ್ಸಾಹದಿಂದ ಭಾಗವಹಿಸಬೇಕು. ನಮಗೆ ಬೀಚ್, ಉದ್ಯಾನವನ, ಜಾತ್ರೆಗಳಿಗೆ ಮಕ್ಕಳೊಂದಿಗೆ ಹೋಗಲು ಪುರುಸೋತ್ತು ಇರುವುದು ನಿಜವಾದರೆ ಮಕ್ಕಳ ಶಾಲೆಗಳಿಗೆ ತಿಂಗಳಿಗೊಮ್ಮೆ ಭೇಟಿ ನೀಡಲು ಯಾಕೆ ಸಮಯ ಸಿಗುವುದಿಲ್ಲ ಎಂದು ಪೋಷಕರನ್ನು ಪ್ರಶ್ನಿಸಿದ ಅವರು ಶಿಕ್ಷಣದ ಜತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಮಾತ್ರವಲ್ಲ ನಿಮ್ಮ ವ್ಯಕ್ತಿತ್ವವೂ ನಿಮ್ಮ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಭಾರತದಂತಹ ಸಂವಿಧಾನ ಬೇರೆ ಯಾವ ದೇಶಕ್ಕೆ ಹೋದರೂ ಸಿಗುವುದು ಸಾಧ್ಯವಿಲ್ಲ ಎಂದರು.

ಸುಧಾನದಂತಹ ಶಿಕ್ಷಣ ಸಂಸ್ಥೆಗಳಿಂದ ಹೊರಬರುವಾಗ ದೇಶದ ಸಂಪತ್ತುಗಳಾಗಿ ಹೊರಬನ್ನಿ. ನಿಮ್ಮ ಜತೆಗೆ ಮಾನವೀಯತೆ ಇರಲಿ, ತಾಳ್ಮೆ ಇರಲಿ. ನೀವಾಡುವ ಮಾತು ಮಾಡುವ ಕೆಲಸ ದೇಶದ ಹಿತ ಕಾಯುವಿಕೆಗೆ ಪೂರಕವಾಗಬೇಕು. ಯಾವುದೇ ಸಂದರ್ಭದಲ್ಲೂ ಮಾರಕವಾಗಬಾರದು.

ಉತ್ತಮ ರಾಜಕಾರಣಿಗಳಾಗಿ..

ಹೆಣ್ಣುಮಕ್ಕಳಿಗೆ ನಾಯಕತ್ನ ಗುಣ ಹುಟ್ಟು ಕೊಡುಗೆ. ತನ್ನ ಹುಟ್ಟಿದ ಮನೆಯಲ್ಲಿ ಈ ನಾಯಕತ್ವ ಗುಣ ಬೆಳೆಯುತ್ತದೆ. ಪತಿಯ ಮನೆಯಲ್ಲಿ ಈ ಗುಣ ಮತ್ತಷ್ಟು ಮೌಲ್ಯ ಪಡೆದುಕೊಳ್ಳುತ್ತದೆ. ನೀವಿಡುವ ಒಂದು ಚಿಕ್ಕ ಹೆಜ್ಜೆ ಶೈಕ್ಷಣಿಕ ಕ್ರಾಂತಿಯ ದೊಡ್ಡ ಹೆಜ್ಜೆಯಾಗಬೇಕು. ಶೈಕ್ಷಣಿಕ ನೆಲೆಯಿಂದ ಹೊರಬಂದಾಗ ಉತ್ತಮ ವೈದ್ಯ, ವಕೀಲ, ಎಂಜಿನಿಯರ್ ಗಳಾಗಿ, ಜತೆಗೆ ಉತ್ತಮ ರಾಜಕಾರಣಿಗಳಾಗಿ ಯಾಕೆಂದರೆ ಸಮಾಜವನ್ನು ಸುಧಾರಿಸುವ ಕಾರ್ಯ ರಾಜಕಾರಣಿಗಳಿಂದ ಮಾತ್ರ ಸಾಧ್ಯ. ಯುವಜನತೆ ಶಿಕ್ಷಣದ ಜತೆಗೆ ಸಾಹಿತ್ಯದತ್ತ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಯುವ ಜನತೆಯೆ ಕೊರತೆ ಎದ್ದುಕಾಣುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

Posted by Vidyamaana on 2024-04-04 15:56:20 |

Share: | | | | |


ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ನಾಮಪತ್ರ ಸಲ್ಲಿಕೆ

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಗುರುವಾರ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.


ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ ಅವರು ಪೂಜೆ ಸಲ್ಲಿಸಿದರು. ಬಳಿಕ ಬಂಟ್ಸ್ ಹಾಸ್ಟೆಲ್ ನ ಬಿಜೆಪಿ ಚುನಾವಣಾ ಕಚೇರಿಯಿಂದ ಮಂಗಳೂರು ಪುರಭವನವರೆಗೆ ಮೆರವಣಿಯಲ್ಲಿ ಸಾಗಿ ಬಂದರು. ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಿಟ್ಲ : 400ಕೆ.ವಿ ಹೈ ಟೆನ್ಶನ್ ಕಾಮಗಾರಿ ಆರಂಭ

Posted by Vidyamaana on 2023-10-10 15:30:58 |

Share: | | | | |


ವಿಟ್ಲ : 400ಕೆ.ವಿ ಹೈ ಟೆನ್ಶನ್ ಕಾಮಗಾರಿ ಆರಂಭ

ವಿಟ್ಲ : ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈ ಟೆನ್ಶನ್ ಮಾರ್ಗವನ್ನು ಪುಣಚ ಗ್ರಾಮದ ಬೈರಿಕಟ್ಟೆಯಿಂದ ಕಾಮಗಾರಿ ಆರಂಭ ಮಾಡಲು ಮುಂದಾದಾಗ ಪರಿಸರದ ರೈತ ವರ್ಗದವರು ಪ್ರತಿಭಟಿಸಿದ ಘಟನೆ ನಡೆದಿದೆ.

ವಿಷಯ ತಿಳಿದು ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕಾಮಗಾರಿಗಳನ್ನು ನಿಲ್ಲಿಸಬೇಕು ಮತ್ತು ಈ ಭಾಗದ ರೈತರ ಸಭೆ ಕರೆದು ಚರ್ಚಿಸಬೇಕು ಎಂದರು.

ಇದಕ್ಕೆ ಸ್ಪಂದಿಸಿದ ಡಿ.ಸಿಯವರು ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸುವಂತೆ ಬಂಟ್ವಾಳ ತಹಶೀಲ್ದಾರ್ ರವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ವಿಟ್ಲ ಬಿಜೆಪಿ ಪ್ರಮುಖರಾದ ಕರುಣಾಕರ ನಾಯ್ತೊಟ್ಟು,ಪುಣಚ ಪಂಚಾಯತ್ ಸದಸ್ಯರಾದ ಅಶೋಕ್ ಮೂಡಂಬೈಲು, ತೀರ್ಥರಾಮ್, ರೈತ ಮುಖಂಡರಾದ ಸಂಜೀವ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಸಂಸತ್ತಿನಲ್ಲಿ ಭದ್ರತಾ ವೈಫಲ್ಯ: ಮಾಸ್ಟರ್​ ಮೈಂಡ್​ ಲಲಿತ್​ ಝಾ ಬಂಧನ

Posted by Vidyamaana on 2023-12-15 15:05:13 |

Share: | | | | |


ಸಂಸತ್ತಿನಲ್ಲಿ ಭದ್ರತಾ ವೈಫಲ್ಯ: ಮಾಸ್ಟರ್​ ಮೈಂಡ್​ ಲಲಿತ್​ ಝಾ ಬಂಧನ

ನವದೆಹಲಿ: ಸಂಸತ್ತಿನ ಭದ್ರತೆಯಲ್ಲಿ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್​ ಮೈಂಡ್​ ಲಲಿತ್​ ಝಾರನ್ನು ಪೊಲೀಸರು ಬಂಧಿಸಿದ್ದಾರೆ.

ಗುರುವಾರ ತಡರಾತ್ರಿ ಝಾ ಪೊಲೀಸರಿಗೆ ಶರಣಾಗಿದ್ದಾನೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದರು. ಬುಧವಾರ ಮಧ್ಯಾಹ್ನ ಲೋಕಸಭೆಯ ಶೂನ್ಯ ವೇಳೆಯಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಸ್ಮೋಕ್​ ಬಾಂಬ್​ ಎಸೆದಿದ್ದರು, ಇದರಿಂದ ಇಡೀ ಸದನವೇ ದಟ್ಟ ಹೊಗೆಯಿಂದ ಕೂಡಿತ್ತು. ಸಾಗರ್​ ಹಾಗೂ ಮನೋರಂಜನ್ ಎಂಬುವವರನ್ನು ತಕ್ಷಣವೇ ಬಂಧಿಸಲಾಗಿತ್ತು.

ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿಗಳ ಹತ್ಯೆ ಘನಘೋರ ಕೃತ್ಯ

Posted by Vidyamaana on 2023-07-10 16:52:13 |

Share: | | | | |


ಅಹಿಂಸೆಯನ್ನು ಪ್ರತಿಪಾದಿಸುವ ಜೈನ ಮುನಿಗಳ ಹತ್ಯೆ ಘನಘೋರ ಕೃತ್ಯ

ಮಂಗಳೂರು;ಅಹಿಂಸಾ ತತ್ವದ ಜೈನ ಮುನಿ ಧಾರ್ಮಿಕ ಆಚಾರ್ಯ  ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿಗಳ ಬೀಬತ್ಸ  ಹತ್ಯೆಯು ಇಡೀ ಮಾನವ ಕುಲಕ್ಕೆ ಕಪ್ಪು ಚುಕ್ಕೆಯಾಗಿದ್ದು ಇದು ಅಮನವೀಯವೂ  ರಾಕ್ಷಸೀಯವೂ ಆದ ಕೃತ್ಯವಾಗಿದೆ.

ಈ ಕ್ರೂರ ಕೃತ್ಯವೆಸಗಿದ ರಾಕ್ಷಸರನ್ನು ಜಾತಿ ಧರ್ಮದ ಹಂಗಿಗೆ ಒಳಗಾಗದೇ ಮರಣ ದಂಡನೆಯಂತಹ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.

ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಇದರ ಹಿಂದಿರುವ ಎಲ್ಲಾ ಷಡ್ಯಂತ್ರವನ್ನು ಬಯಲಿಗೆಳೆದು ನ್ಯಾಯಯುತವಾದ ತನಿಖೆ ನಡೆಸಿ ಜನರ ಗೊಂದಲವನ್ನು ನಿವಾರಿಸ ಬೇಕಾಗಿದೆ. 

ಇಂತಹ ಕ್ರೂರ ಕೃತ್ಯಗಳಿಂದಾಗಿ ಇಡೀ ದೇಶದ ಮಾನ ಹರಾಜಾಗುತ್ತಿದ್ದು ಇದನ್ನು ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳದೇ ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ನೋಡಿ ಕೊಳ್ಳ ಬೇಕಾದ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳಲು ಪಕ್ಷ ಭೇದ ಮೆರೆತು ಒತ್ತಾಯಿಸ ಬೇಕಿದೆ ಎಂದು ದಾರಿಮಿ ಒಕ್ಕೂಟ ಅಭಿಪ್ರಾಯ ಪಟ್ಟಿದೆ ಎಂದು ಸಮಿತಿಯ ಅಧ್ಯಕ್ಷ ಎಸ್ ಬಿ ದಾರಿಮಿ,ಕಾರ್ಯದರ್ಶಿ ಯುಕೆ ದಾರಿಮಿ,ಕೋಶಾಧಿಕಾರಿ ಹುಸೈನ್ ದಾರಿಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Leave a Comment: