ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಹತ್ರಾಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ; ಸಾವಿನ ಸಂಖ್ಯೆ 122 ಕ್ಕೆ ಏರಿಕೆ.!

Posted by Vidyamaana on 2024-07-02 19:47:54 |

Share: | | | | |


ಹತ್ರಾಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ; ಸಾವಿನ ಸಂಖ್ಯೆ 122 ಕ್ಕೆ ಏರಿಕೆ.!

ಹತ್ರಾಸ್ : ಹತ್ರಾಸ್ನಲ್ಲಿ ಭೋಲೆ ಬಾಬಾ ಸತ್ಸಂಗದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಮೃತಪಟ್ಟವರ ಸಂಖ್ಯೆ 122 ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿದೆ.ಈ ಅವಘಡದಲ್ಲಿ 150 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ತೊಕ್ಕೊಟ್ಟಿನ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ತಡೆಬೇಲಿಯಿಂದ ನದಿಗೆ ಹಾರಿದ ಉದ್ಯಮಿ ಪ್ರಸನ್ನ

Posted by Vidyamaana on 2023-10-30 16:32:20 |

Share: | | | | |


ತೊಕ್ಕೊಟ್ಟಿನ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ತಡೆಬೇಲಿಯಿಂದ ನದಿಗೆ ಹಾರಿದ ಉದ್ಯಮಿ ಪ್ರಸನ್ನ

ಉಳ್ಳಾಲ: ಕಾಫಿಡೇ ಮಾಲೀಕ ಸಿದ್ದಾರ್ಥ ಸಾವಿಗೆ ಶರಣಾದ ಸ್ಥಳದಲ್ಲಿಯೇ ಮತ್ತೊಬ್ಬ ಉದ್ಯಮಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.


ಕಳೆದ ನಾಲ್ಕು ವರ್ಷಗಳ ಹಿಂದೆ ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿ ಪಡೆದ ಉದ್ಯಮಗಳಲ್ಲಿ ಒಂದಾಗಿದ್ದ ಕಾಫಿಡೇ ಮಾಲೀಕ ಸಿದ್ದಾರ್ಥ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಸ್ಥಳದಲ್ಲಿಯೇ ಇಂದು ಮತ್ತೊಬ್ಬ ಉದ್ಯಮಿ ತನ್ನ ಕಾರನ್ನು ನಿಲ್ಲಿಸಿ ನದಿಗೆ ಹಾರಿ ಸಾವಿಗೆ ಶರಣಾಗಿದ್ದಾನೆ. ಕಾಫಿಡೇ ಮಾಲೀಕ ಸಿದ್ದಾರ್ಥ ಅವರ ಆತ್ಮಹತ್ಯೆ ಬೆನ್ನಲ್ಲಿಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಹೆಚ್ಚಾಗಿದ್ದವು. ಈ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯ ಪಕ್ಕದಲ್ಲಿರುವ ಸೇತುವೆಯ ಆಚೆ-ಈಚೆ ಬೇಲಿಯನ್ನು ನಿರ್ಮಾಣ ಮಾಡಲಾಗಿತ್ತು. ತಂತಿ ಬೇಲಿ ಹಾಗೂ ತಡೆಗೋಡೆ ನಿರ್ಮಾಣ ಮಾಡಿದರೂ ಅದನ್ನು ಮುರಿದು ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಸೋಮವಾರ ಬೆಳಗ್ಗೆ ಉದ್ಯಮಿಯೊಬ್ಬ ಉಳ್ಳಾಲದ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಗ ತಂತಿ ಬೇಲಿ ನಿರ್ಮಾಣ ಮಾಡಿದ ನಂತರ ಮೂರು ವರ್ಷಗಳ ಬಳಿಕ ಮತ್ತೆ ನೇತ್ರಾವತಿ ಸೇತುವೆ ಆತ್ಮಹತ್ಯೆ ಘಟನೆ ನಡೆದಿದೆ.




ಚಿಕ್ಕಮಗಳೂರಿನ ಗೋಕುಲ್ ಫಾರ್ಮ್ ನಿವಾಸಿ ಪ್ರಸನ್ನ (37) ಆತ್ಮಹತ್ಯೆ ತೊಕ್ಕೊಟ್ಟಿನಿಂದ ಮಾಡಿಕೊಂಡ ಯುವಕನಾಗಿದ್ದಾನೆ. ಮಂಗಳೂರಿಗೆ ಬರುವ ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 3 ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಮೂರು ವರ್ಷಗಳ ಬಳಿಕ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.

ಪುತ್ತೂರು KSRTCಗೆ ನವ ಚೈತನ್ಯ ನೀಡಿದ ಶಕ್ತಿ ಯೋಜನೆ

Posted by Vidyamaana on 2023-07-11 16:05:00 |

Share: | | | | |


ಪುತ್ತೂರು KSRTCಗೆ ನವ ಚೈತನ್ಯ ನೀಡಿದ ಶಕ್ತಿ ಯೋಜನೆ

ಪುತ್ತೂರು: ಶಕ್ತಿ ಯೋಜನೆ ಕಾರ್ಯರೂಪಕ್ಕೆ ಬಂದ ಮಹಿಳಾ ಪ್ರಯಾಣಿಕರ ಸಂಖ್ಯೆಯಷ್ಟೇ ಹೆಚ್ಚಳಗೊಂಡದ್ದು ಅಲ್ಲ, ಕೆ.ಎಸ್.ಆರ್.ಟಿ.ಸಿ.ಯ ಆದಾಯವೂ ಹೆಚ್ಚಳಗೊಂಡಿದೆ. ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗವೂ ಹಿಂದಿನ ತನ್ನ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಕಳೆದೊಂದು ತಿಂಗಳಿನಲ್ಲಿ ಪಡೆದುಕೊಂಡಿದೆ.

ಸಾವಿರಾರು ಬಸ್ ಪಾಸ್ ನೀಡಿದರೂ, ಲಕ್ಷಾಂತರ ಪ್ರಯಾಣಿಕರು ಓಡಾಡಿದರೂ ಕೆ.ಎಸ್.ಆರ್.ಟಿ.ಸಿ. ಪ್ರತಿವರ್ಷ ನಷ್ಟದಲ್ಲಿಯೇ ಕಾರ್ಯನಿರ್ವಹಿಸುತ್ತಿತ್ತು. ಹಾಗಾಗಿ ಪ್ರತಿವರ್ಷ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಮೇಲೆ ಖರ್ಚು ಸರಿದೂಗಿಸುವ ಒತ್ತಡವೂ ಇತ್ತು. ಆದರೆ ರಾಜ್ಯ ಸರ್ಕಾರ ಚುನಾವಣೆಗೆ ಮೊದಲು ನೀಡಿದ ಭರವಸೆಯಂತೆ, ಶಕ್ತಿ ಯೋಜನೆಯನ್ನು ಜಾರಿಗೆ ತಂದ ಬಳಿಕ ಹಲವು ಬದಲಾವಣೆಗಳಿಗೆ ಕಾರಣವಾಗಿದೆ.

ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಬಸ್ ಟಿಕೇಟ್ ಉಚಿತವಾಗಿ ನೀಡಿದ್ದು, ಇದು ಮಹಿಳಾ ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿಯೇ ಓಡಾಡುವಂತೆ ಮಾಡಿದೆ. ಈ ಹಿಂದೆ ಓಡಾಡುತ್ತಿದ್ದ ಮಹಿಳಾ ಪ್ರಯಾಣಿಕರಿಗಿಂತಲೂ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಸ್ ಪ್ರಯಾಣವನ್ನು ಅವಲಂಭಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ. ಲೆಕ್ಕಾಚಾರದ ಪ್ರಕಾರ ದಿನಕ್ಕೆ ಸರಾಸರಿ 30 ಸಾವಿರದಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.


ಶಕ್ತಿ ಯೋಜನೆ ಮೊದಲು – ನಂತರ:

ಶಕ್ತಿ ಯೋಜನೆಯನ್ನು ಜಾರಿಗೆ ತರುವ ಮೊದಲು ದಿನವೊಂದಕ್ಕೆ ಸರಾಸರಿ 1 ಲಕ್ಷದ 60 ಸಾವಿರದಷ್ಟು ಮಂದಿ ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಈ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ದಿನವೊಂದಕ್ಕೆ 30 ಸಾವಿರದಷ್ಟು ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದು, 1 ಲಕ್ಷದ 90 ಸಾವಿರದಷ್ಟು ಪ್ರಯಾಣಿಕರು ಈಗ ದಿನನಿತ್ಯ ಪ್ರಯಾಣಿಸುತ್ತಿದ್ದಾರೆ. ಅಂದರೆ ದಿನವೊಂದಕ್ಕೆ ಸುಮಾರು 10ರಿಂದ 12 ಲಕ್ಷ ರೂ.ನಷ್ಟು ಆದಾಯ ಹೆಚ್ಚಳಗೊಂಡಿದೆ.


5 ಡಿಪೋ:

ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗದ ಅಡಿಯಲ್ಲಿ 5 ಡಿಪೋಗಳು ಬರುತ್ತವೆ. ಇದರಲ್ಲಿ ಪುತ್ತೂರು ಸೇರಿದಂತೆ, ಬಿ.ಸಿ.ರೋಡ್, ಧರ್ಮಸ್ಥಳ, ಸುಳ್ಯ, ಮಡಿಕೇರಿ ಡಿಪೋಗಳು ಒಳಗೊಂಡಿವೆ. ಈ 5 ಡಿಪೋಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಂಡಿದ್ದು, ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಕೊಂಚ ನಿಟ್ಟುಸಿರುಬಿಡುವಂತೆ ಮಾಡಿದೆ.


ಒಂದು ತಿಂಗಳ ಲೆಕ್ಕಾಚಾರ:

ಶಕ್ತಿ ಯೋಜನೆಯನ್ನು ಜಾರಿಗೆ ತಂದು ಹೆಚ್ಚು – ಕಡಿಮೆ ಒಂದು ತಿಂಗಳಾಗಿದೆ. ಈ ಒಂದು ತಿಂಗಳ ಲೆಕ್ಕಾಚಾರ ಹೀಗಿತ್ತು. ಮುಂದೆ ಹೇಗಿರಬಹುದು ಎನ್ನುವ ಊಹೆ ಇಲ್ಲ. ಆದರೆ ಸಂಸ್ಥೆ ಹೆಚ್ಚಿನ ಆದಾಯವನ್ನು ಪಡೆಯುವಂತಾಗಿರುವುದು ಅಧಿಕಾರಿಗಳಿಗೆ ಸಮಾಧಾನದ ಸಂಗತಿ.


ಕೇಂದ್ರ ಕಚೇರಿಯಿಂದ ಕ್ಲೈಮ್:

ಪ್ರತಿ ತಿಂಗಳ ಲೆಕ್ಕಾಚಾರವನ್ನು ಪುತ್ತೂರು ವಿಭಾಗದಿಂದ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುತ್ತದೆ. ಕೇಂದ್ರ ಕಚೇರಿಯ ಅಧಿಕಾರಿಗಳು ರಾಜ್ಯದ ಒಟ್ಟು ಲೆಕ್ಕಾಚಾರವನ್ನು ತೆಗೆದುಕೊಂಡು, ರಾಜ್ಯ ಸರಕಾರಕ್ಕೆ ಸಲ್ಲಿಸುತ್ತಾರೆ. ಬಳಿಕ ರಾಜ್ಯ ಸರ್ಕಾರ ಆ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಪ್ರತಿ ತಿಂಗಳಿಗೊಮ್ಮೆಯಂತೆ ರಾಜ್ಯ ಸರ್ಕಾರಕ್ಕೆ ಕೆ.ಎಸ್.ಆರ್.ಟಿ.ಸಿ. ಕ್ಲೈಮ್ ಮಾಡಬೇಕಾಗುತ್ತದೆ.


ಲಾಭದಾಯಕವೇ?

ಶಕ್ತಿ ಯೋಜನೆಯನ್ನು ಜಾರಿಗೆ ತಂದ ಬಳಿಕ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಆದಾಯ ಹೆಚ್ಚಳಗೊಂಡಿದ್ದು ನಿಜ. ಆದರೆ ಸಂಸ್ಥೆ ಎಷ್ಟರಮಟ್ಟಿಗೆ ಲಾಭದಾಯಕ ಎನ್ನುವ ಮಾಹಿತಿ ಇನ್ನು ಲಭ್ಯವಾಗಿಲ್ಲ. ಶಕ್ತಿ ಯೋಜನೆಯ ಜಾರಿಯ ಬಳಿಕ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ಸಿನಲ್ಲಿಯೇ ಪ್ರಯಾಣಿಸಲು ಮುಂದೆ ಬಂದಿದ್ದಾರೆ. ಇದು ಒಂದು ರೀತಿಯಲ್ಲಿ ಸಾರಿಗೆ ಬಸ್’ಗಳ ಪ್ರಯಾಣಕ್ಕೆ ಉತ್ತೇಜನ ನೀಡಿದಂತಾಗಿದೆ.


ತಿಂಗಳಿಗೊಮ್ಮೆ ಮಾಹಿತಿ: ಡಿಸಿ ಜಯಕರ ಶೆಟ್ಟಿ

ಶಕ್ತಿ ಯೋಜನೆಯನ್ನು ಜಾರಿಗೆ ತಂದ ಬಳಿಕ ಕೆ.ಎಸ್.ಆರ್.ಟಿ.ಸಿ. ಆದಾಯ ಹೆಚ್ಚಳಗೊಂಡಿದೆ. ಪ್ರತಿ ತಿಂಗಳಿಗೊಮ್ಮೆ ರಾಜ್ಯದ ಪ್ರತಿ ವಿಭಾಗದ ಮಾಹಿತಿಯನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಡಬೇಕು. ಮುಂದಿನ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಇಲ್ಲ.

ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಪುತ್ತೂರು ವಿಭಾಗ, ಕೆ.ಎಸ್.ಆರ್.ಟಿ.ಸಿ.

ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್- ವಿಡಿಯೋ ವೈರಲ್

Posted by Vidyamaana on 2024-01-16 21:29:39 |

Share: | | | | |


ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್- ವಿಡಿಯೋ ವೈರಲ್

ವೈರಲ್ ವೈರಲ್ ವೈರಲ್.... ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ವೈರಲ್ ಆಗಿಬಿಡುತ್ತವೆ. ಹೀಗಾಗಿ ಎಷ್ಟು ಜಾಗ್ರತೆಯಿಂದಿದ್ದರೂ ಕಡಿಮೆನೇ. ಅದರಲ್ಲೂ ಮೈಮರೆತು ವರ್ತಿಸುವ ಕೆಲ ಯುವ ಜೋಡಿಗಳ ವೀಡಿಯೋಗಳಂತೂ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿಬಿಡುತ್ತವೆ.ಹೀಗೊಂದು ವಿಡಿಯೋದಲ್ಲಿ ಯುವ ಜೋಡಿಯೊಂದು ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್ ಮಾಡುವುದು ಕಂಡು ಬಂದಿದೆ

ನಡು ರೋಡಲ್ಲೇ ಚಲಿಸುವ ಗಾಡಿ ಮೇಲೆ ರೊಮ್ಯಾನ್ಸ್- ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ



ಹಿಂಬದಿ ಸವಾರರು ಈ ದೃಶ್ಯವನ್ನು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ಮುಂಬೈನದ್ದು ಎಂದು ಹೇಳಲಾಗಿದೆ. ಇದು ನೋಡುಗರ ಕೋಪವನ್ನು ನೆತ್ತಿಗೇರಿಸಿದೆ. ಮುಂಬೈನ ನಡು ರಸ್ತೆಯಲ್ಲಿ ಯುವ ಜೋಡಿಯೊಂದು ತಮ್ಮ ಸ್ಕೂಟರ್‌ನಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವೈರಲ್ ಆಗಿರುವ ವೀಡಿಯೊ ಬಾಂದ್ರಾ ರಿಕ್ಲಮೇಷನ್ ರಸ್ತೆಯಲ್ಲಿ ಸೆರೆಹಿಡಿದ ದೃಶ್ಯವಾಗಿದೆ. ಈ ವಿಡಿಯೋ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಸ್ಕೂಟಿ ಮೇಲೆ ಕುಳಿತ ಹುಡುಗನ ಮೇಲೆ ಹುಡುಗಿ ಕುಳಿತಿದ್ದಾಳೆ. ಜೊತೆಗೆ ಅವರಿಬ್ಬರು ಶಾಲ್ ಅನ್ನು ಹೊದ್ದುಕೊಂಡಿದ್ದಾರೆ. ಹುಡುಗ ಸ್ಕೂಟಿ ಚಲಾಯಿಸುತ್ತಿದ್ದರೆ ಹುಡುಗಿ ಆತನನ್ನು ಗಟ್ಟಿಯಾಗಿ ಅಪ್ಪಿಕೊಂಡು ಕುಳಿತಿದ್ದಾಳೆ. ಇಬ್ಬರೂ ಶಾಲಿನ ಕೆಳಗೆ ಭಾಗಶಃ ಮರೆಯಾಗಿದ್ದಾರೆ. ಇವರಿಬ್ಬರೂ ಹೆಲ್ಮೆಟ್ ಕೂಡ ಧರಿಸಿಲ್ಲ. ಸಂಚಾರ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡವರು "ಈ ಧೈರ್ಯಶಾಲಿ ಜೋಡಿಯನ್ನು ಬಾಂದ್ರಾ ರಿಕ್ಲಮೇಷನ್‌ನಲ್ಲಿ ಗುರುತಿಸಲಾಯಿತು. ಅವರ ಅಸಾಂಪ್ರದಾಯಿಕ ಸ್ಕೂಟರ್ ರೈಡ್‌ ತಲೆ ತಿರುಗಿಸಿದೆ. @MumbaiPolice ರಸ್ತೆಗಳಲ್ಲಿ ಪ್ರತಿಯೊಬ್ಬರ ಸುರಕ್ಷತೆಯನ್ನು ಕಾಪಾಡಲು ನಿಮ್ಮ ಗಮನವನ್ನು ಇತ್ತ ಹರಿಸುವಂತೆ ವಿನಂತಿಸುತ್ತೇವೆ," ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇನ್ನೂ ಸಹ ಪ್ರಯಾಣಿಕರಿಂದ ರೆಕಾರ್ಡ್ ಮಾಡಿದ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಇದಕ್ಕೆ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಕ್ಷಣದ ಪೊಲೀಸ್ ಮಧ್ಯಸ್ಥಿಕೆಗೆ ಕರೆ ನೀಡಿದ್ದಾರೆ. ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲಟ್‌ನನ್ನೇ ಥಳಿಸಿದ ಪ್ರಯಾಣಿಕ: ವಿಡಿಯೋ ವೈರಲ್ ನೆಟ್ಟಿಗರ ಕಾಮೆಂಟ್ ಹೀಗಿದೆ:- ಇವರು ಇತರ ಸವಾರರ ಪ್ರಾಣಕ್ಕೆ ಕುತ್ತು ತರುತ್ತಾರೆ. ಮುಂಬೈ ಪೊಲೀಸರು ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮುಂಬೈನಲ್ಲಿ ತುಂಬಾ ಚಳಿಯಂತೆ, ಹೀಗಿರುವಾಗ ಮನೆ ಬಿಟ್ಟು ಹೊರಬರಲು ಆಗದವರು ಹೀಗೆ ಮಾಡೋದು ಅನಿಸುತ್ತೆ ಮತ್ತೊಬ್ಬರು ಕುಟುಕಿದ್ದಾರೆ. ಮುಂಬೈನಲ್ಲಿ ಚಳಿ ನಡುವೆ ಹೀಗೂ ಹೊರಬರಬಹುದಾ? ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಚಳಿಗಾಲ ಮುಗಿದ ಬಳಿಕ ಈ ದೃಶ್ಯ ನೋಡಲು ಇನ್ನೂ ಕೆಟ್ಟದಾಗಿರುತ್ತದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಜನನಿಬಿಡ ರಸ್ತೆಯಲ್ಲಿ ಇಂತಹ ಘಟನೆ ದಾಖಲಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ದೆಹಲಿಯ ರಸ್ತೆಗಳಲ್ಲಿ ಸ್ಕೂಟರ್ ಸವಾರಿ ಮಾಡುವಾಗ ಜೋಡಿಯೊಂದು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು.

ದರ್ಗಾದಲ್ಲಿ ಮೌಲ್ವಿಗಳಿಂದ ನವಿಲು ಗರಿ ಬಳಕೆ ವಿಚಾರ: ಬಿ.ಕೆ ಹರಿಪ್ರಸಾದ್ ಹೇಳಿದ್ದೇನು..?

Posted by Vidyamaana on 2023-10-29 11:40:47 |

Share: | | | | |


ದರ್ಗಾದಲ್ಲಿ  ಮೌಲ್ವಿಗಳಿಂದ ನವಿಲು ಗರಿ ಬಳಕೆ ವಿಚಾರ: ಬಿ.ಕೆ ಹರಿಪ್ರಸಾದ್ ಹೇಳಿದ್ದೇನು..?

ಚಿತ್ರದುರ್ಗ: ಈ ಹಿಂದೆ ಪ್ರಧಾನಮಂತ್ರಿಯವರು ನವಿಲು ಗರಿ (Peacock feather) ಧರಿಸಿದ್ದರು, ನವಿಲು ಸಾಕಿದ್ದರು. ಹಾಗೆಂದ ಮಾತ್ರಕ್ಕೆ ಪೊಲೀಸರು (Police) ಅವರನ್ನು ಹಿಡಿದುಕೊಂಡು ಹೋಗಬೇಕಾ? ಫ್ಯಾಷನ್‌ಗಾಗಿ ಹುಲಿ ಉಗುರು ಇತರೆ ವಸ್ತು ಬಳಸುವುದು ಸರಿಯಲ್ಲ, ವನ್ಯಜೀವಿ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿದವರು ಯಾರೇ ಆಗಿರಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Haripras

non

) ಆಗ್ರಹಿಸಿದ್ದಾರೆ.ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಹುಲಿ ಉಗುರು, ಕರಡಿ ಕೂದಲು ಸೇರಿದಂತೆ ಆನೆ ಕೂದಲು, ದಂತ ಹಾಗೂ ಇತರೆ ವಸ್ತುಗಳನ್ನು ಧರಿಸಿ ಕಾಡುಪ್ರಾಣಿಗಳನ್ನು ಅಣಕಿಸುವ ಕಾರ್ಯಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ದರ್ಗಾದಲ್ಲಿ, ಮೌಲ್ವಿಗಳಿಂದ ನವಿಲು ಗರಿ ಬಳಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನ ಮಂತ್ರಿಗಳೂ (Prime Minister) ನವಿಲು ಸಾಕಿದ್ದರು, ನವಿಲು ಗರಿ ಧರಿಸಿದ್ದರು. ಹಾಗಂತ ಪ್ರಧಾನಿಯವರನ್ನ ಪೊಲೀಸರು ಹಿಡಿದುಕೊಂಡು ಹೋಗಬೇಕಾ? ದರ್ಗಾಗಳಲ್ಲಿ ಮೌಲ್ವಿಗಳು ಬಳಸುವ ನವಿಲುಗರಿ ಕೂಡ ನೈಸರ್ಗಿಕವಾಗಿ ಉದುರುತ್ತದೆ. ಒಂದು ವೇಳೆ ನವಿಲನ್ನು ಕೊಂದು ಗರಿ ತಂದಿದ್ದರೆ ಅಂಥವರ ವಿರುದ್ಧವೂ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ.

ಶಾಸಕರ ಇಂದಿನ ಕಾರ್ಯಕ್ರಮ ಆ 7

Posted by Vidyamaana on 2023-08-06 23:16:09 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 7

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 7 ರಂದು

ಮಧ್ಯಾಹ್ನ 2.30ಪೆರುವಾಯಿಯಲ್ಲಿ ಕಾರ್ಯಕರ್ತರ ಸಭೆ


ಸಂಜೆ 4 ಗಂಟೆಗೆ ಕೊಡಿಪ್ಪಾಡಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ

Recent News


Leave a Comment: