ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಪತ್ನಿಯ ಖಾಸಗಿ ವಿಡಿಯೋ ತೋರಿಸಿ ವೇತನ ನೀಡಲು ಪತ್ನಿಗೆ ಪೀಡಿಸಿದ ಪತಿ!

Posted by Vidyamaana on 2023-10-07 18:09:45 |

Share: | | | | |


ಪತ್ನಿಯ ಖಾಸಗಿ ವಿಡಿಯೋ ತೋರಿಸಿ ವೇತನ ನೀಡಲು ಪತ್ನಿಗೆ ಪೀಡಿಸಿದ ಪತಿ!

ಬೆಂಗಳೂರು: ತನ್ನ ಪತ್ನಿಯ ಖಾಸಗಿ ವಿಡಿಯೋಗಳನ್ನು ಸೆರೆಹಿಡಿದು ಪತಿ ಮಹಾಶಯನೊಬ್ಬ ಪತ್ನಿಯ ಬಳಿ 10 ಲಕ್ಷ ರೂ. ಮತ್ತು ವೇತನವನ್ನು ತನಗೆ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ನಡೆದಿದೆ. 28 ವರ್ಷದ ಮಹಿಳೆ ಈ ಸಂಬಂಧ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪತಿ ಸ್ವರೂಪ್ ಎಂಬಾತನ ವಿರುದ್ಧ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ. ಕಳೆದ ವರ್ಷ ನವಂಬರ್ ನಲ್ಲಷ್ಟೇ ಇಬ್ಬರ ಮದುವೆಯಾಗಿತ್ತು.


ಹನಿಮೂನ್ ಗೆಂದು ಥೈಲ್ಯಾಂಡ್ ಹೋಗಿದ್ದಾಗ ಪತ್ನಿಯ ಖಾಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದ. ಬೆಂಗಳೂರಿಗೆ ವಾಪಸ್ ಆದ ಮೇಲೆ ಪತಿ ನಿರುದ್ಯೋಗಿಯಾಗಿರುವ ವಿಚಾರ ಪತ್ನಿಗೆ ತಿಳಿದುಬಂದಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸರಿಯಾಗಿ ಉತ್ತರ ನೀಡಿರಲಿಲ್ಲ. ಬಳಿಕ ಖಾಸಗಿ ವಿಡಿಯೋ ತೋರಿಸಿ ವೇತನ ಮತ್ತು ತವರು ಮನೆಯಿಂದ 10 ಲಕ್ಷ ರೂ. ತಂದು ಕೊಡದೇ ಇದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

10ನೇ ತರಗತಿ ವಿದ್ಯಾರ್ಥಿನಿ ಮೇಲೆ 9ನೇ ಕ್ಲಾಸ್ ಹುಡುಗನ ಪ್ರೀತಿ: ಲವ್ ನಿರಾಕರಿಸಿದ್ದಕ್ಕೆ ಚಾಕು ಇರಿತ

Posted by Vidyamaana on 2024-02-22 22:15:21 |

Share: | | | | |


10ನೇ ತರಗತಿ ವಿದ್ಯಾರ್ಥಿನಿ ಮೇಲೆ 9ನೇ ಕ್ಲಾಸ್ ಹುಡುಗನ ಪ್ರೀತಿ: ಲವ್ ನಿರಾಕರಿಸಿದ್ದಕ್ಕೆ ಚಾಕು ಇರಿತ

ಕಲಬುರ್ಗಿ: 10ನೇ ತರಗತಿ ಓದುತ್ತಿದ್ದಂತ ವಿದ್ಯಾರ್ಥಿನಿಯನ್ನು 9ನೇ ತರಗತಿ ಓದುತ್ತಿದ್ದಂತ ವಿದ್ಯಾರ್ಥಿಯೊಬ್ಬ ಒನ್ ಸೈಡ್ ಪ್ರೀತಿ ಮಾಡಿದ್ದಾನೆ. ಆದರೇ ಆತನ ಪ್ರೀತಿಯನ್ನು ಅಪ್ರಾಪ್ತ ಬಾಲಕಿ ನಿರಾಕರಿಸಿದ್ದಾಳೆ. ಇಷ್ಟಕ್ಕೇ ಸಿಟ್ಟಾದಂತ ಆತ, ಆಕೆ ತೆರಳುತ್ತಿದ್ದಂತ ಬಸ್ ಹಿಂಬಾಲಿಸಿ ಬೈಕ್ ನಲ್ಲಿ ತೆರಳಿ, ಕೆಳಗೆ ಇಳಿಸಿಕೊಂಡು ಚಾಕುವಿನಿಂದ ಇರಿದಿರುವ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.ಕಲಬುರ್ಗಿ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅಟ್ಟೂರು ಕ್ರಾಸ್ ಬಳಿಯಲ್ಲಿ ಇಂದು ಜಿಲ್ಲೆಯ ಜನತೆ ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ಅಲ್ಲದೇ ಸಿನಿಮೀಯ ರೀತಿಯಲ್ಲಿ ನಡೆದಂತ ಘಟನೆಯಿಂದ ಜನರು ಆಘಾತಗೊಳ್ಳುವಂತೆ ಮಾಡಿದೆ. ಅದೇ 9ನೇ ತರಗತಿಯಲ್ಲಿ ಓದುತ್ತಿದ್ದಂತ ಬಾಲಕ, 10ನೇ ತರಗತಿಯಲ್ಲಿ ಓದುತ್ತಿದ್ದಂತ ಬಾಲಕಿಯನ್ನು ಪ್ರೀತಿಸುವಂತೆ ಮಾಡಿದ ಮನವಿ ನಿರಾಕರಿಸಿದಂತ ನಂತ್ರ ಆದಂತ ಘಟನೆಯಾಗಿದೆ.


9ನೇ ತರಗತಿ ಬಾಲಕ, 10ನೇ ತರಗತಿ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದರೂ, ಆತನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಇಷ್ಟಕ್ಕೇ ಕೋಪಗೊಂಡ ಆ ಅಪ್ರಾಪ್ತ ಬಾಲಕ, ಇಂದು ಶಾಲೆಗೆ ತೆರಳುತ್ತಿದ್ದಂತ ಬಾಲಕಿಯ ಬಸ್ ಅನ್ನು ಬೈಕ್ ನಲ್ಲಿ ಹಿಂಬಾಲಿಸಿ ಲವ್ ಏನು ಬೇಡ. ಬಾ ಮಾತನಾಡುವುದಿದೆ ಎಂಬುದಾಗಿ ಕೆಳಗೆ ಇಳಿಸಿಕೊಂಡಿದ್ದಾನೆ. ಆ ಬಳಿಕ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಬಾಲಕನಿಂದ ಚಾಕು ಇರಿತಕ್ಕೆ ಒಳಗಾದಂತ ಬಾಲಕಿಯನ್ನು ಕೂಡಲೇ ಕಲಬುರ್ಗಿ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ನಕಲಿ ಮಂಗಳಮುಖಿಯ ಬಟ್ಟೆ ಬಿಚ್ಚಿ ಧರ್ಮದೇಟು

Posted by Vidyamaana on 2023-10-15 08:59:07 |

Share: | | | | |


ನಕಲಿ ಮಂಗಳಮುಖಿಯ ಬಟ್ಟೆ ಬಿಚ್ಚಿ ಧರ್ಮದೇಟು

ಅಂಕೋಲಾ: ಯುವತಿಯಂತೆ ವೇಷ ಹಾಕಿಕೊಂಡು, ಜನರ ಮೈ ಮುಟ್ಟಿ, ಅಸಭ್ಯವಾಗಿ ವರ್ತಿಸಿ ಹಣ ಕೇಳುತ್ತಿದ್ದ ವ್ಯಕ್ತಿಯನ್ನು ಅಸಲಿ ಮಂಗಳಮುಖಿಯರು ಹಿಡಿದು ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ.



ಕಾರವಾರ ಹಾಗೂ ಅಂಕೋಲಾ ಪಟ್ಟಣದಲ್ಲಿ ಸೂರಜ್‌ ಎನ್ನುವ ವ್ಯಕ್ತಿ ಮಂಗಳಮುಖೀ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣ ವಸೂಲಿ ಮಾಡುತ್ತಿದ್ದ. ಈ ವಿಷಯವನ್ನು ಅಸಲಿ ಮಂಗಳಮುಖಿಯರ ಅಂತರಂಗ ಸಂಘಟನೆ ಸದಸ್ಯೆ ಆಯಿಷಾ ಹೊನ್ನಾವರ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು.


ಕೂಡಲೇ ಅಂಕೋಲಾ ಹಾಗೂ ಕಾರವಾರದಲ್ಲಿ ಕಾರ್ಯಾಚರಣೆಗೆ ಇಳಿದ ಮಂಗಳಮುಖಿಯರಾದ ಸಂಧ್ಯಾ ಉಡುಪಿ, ಉ.ಕ. ಅಂತರಂಗ ಸಂಘಟನೆ ಉಪಾಧ್ಯಕ್ಷೆ ಆಯಿಷಾ ಹೊನ್ನಾವರ, ಸುಹಾನಾ ಹಾಗೂ ಪಾರ್ವತಿ ಅವರು ಮಂಗಳಮುಖಿ ವೇಷದಲ್ಲಿದ್ದ ಪುರುಷನನ್ನು ಹಿಡಿದಿದ್ದಾರೆ.

ಚೂಡಿದಾರ ಧರಿಸಿ ಹೆಣ್ಣಿನಂತೆ ವಯ್ಯಾರ ಪ್ರದರ್ಶಿಸುತ್ತ ನಾಗರಿಕರಿಂದ ಹಣ ಕೇಳುತ್ತಿದ್ದ ಈತನ ಚೂಡಿದಾರ ಬಿಚ್ಚಿಸಿ ಮಂಗಳಾರತಿ ಮಾಡಿದ್ದಾರೆ. ನಿಜವಾದ ಮಂಗಳಮುಖಿಯರು ನಿಷ್ಠಾವಂತರಿದ್ದಾರೆ. ಆದರೆ ಇಂಥ ನಕಲಿ ಮಂಗಳಮುಖಿ ವೇಷಧಾರಿಗಳಿಂದ ನಿಜವಾದ ಮಂಗಳಮುಖೀಯರು ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ನಾಗರಿಕರು ಆಗ್ರಹಿದ್ದಾರೆ.


ಸದ್ಯ ನವರಾತ್ರಿ ಹಾಗೂ ದೀಪಾವಳಿ ಹಬ್ಬ ಬರುತ್ತಿದ್ದು ಹೊರ ಜಿಲ್ಲೆಯಿಂದ ಕಾರವಾರ ಹಾಗೂ ಅಂಕೋಲಾಕ್ಕೆ ಮಂಗಳಮುಖಿಯರು ಬಂದು ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇಂಥ ಮಂಗಳಮುಖಿಯರಿಗೆ ಅಂಜದೆ, ನಿರ್ಭೀತವಾಗಿ ಪೊಲೀಸ್‌ ಅಥವಾ ಅಂತರಂಗ ಸಂಘಟನೆ ಗಮನಕ್ಕೆ ತನ್ನಿ ಎಂದು ಆಯಿಷಾ ಹೊನ್ನಾವರ ತಿಳಿಸಿದ್ದಾರೆ.ಚೂಡಿದಾರ ಧರಿಸಿ ಮಂಗಳಮುಖಿ ವೇಷ ಹಾಕಿಕೊಂಡು ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಅಸಲಿ ಮುಖವನ್ನು ಬಯಲು ಮಾಡಿದ್ದೇವೆ. ಈ ರೀತಿಯ ಘಟನೆಗಳು ಉ.ಕ. ಜಿಲ್ಲೆಯಲ್ಲಿ ಅನೇಕ ಕಡೆ ಕಂಡು ಬರುತ್ತಿದೆ. ಎಸ್ಪಿ ಅವರು ಈ ಬಗ್ಗೆ ವಿಶೇಷವಾಗಿ ಗಮನಹರಿಸಿ ಕಾರ್ಯಪ್ರವೃತ್ತರಾಗಬೇಕು ಎನ್ನುವುದು ನಮ್ಮ ಆಶಯವಾಗಿದೆ.

-ಆಯಿಷಾ ಹೊನ್ನಾವರ, ಉಪಾಧ್ಯಕ್ಷೆ ಅಂತರಂಗ ಸಂಘಟನೆ

ಪುತ್ತೂರು:ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣ: ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರುಣ್ ಪುತ್ತಿಲ

Posted by Vidyamaana on 2024-08-21 14:01:00 |

Share: | | | | |


ಪುತ್ತೂರು:ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣ: ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಅರುಣ್ ಪುತ್ತಿಲ

ಪುತ್ತೂರು : ಇಲ್ಲಿನ ಕೊಂಬೆಟ್ಟು ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಸುಳ್ಳು ಪ್ರಕರಣ ದಾಖಲಾದ ವಿದ್ಯಾರ್ಥಿಯ ಮನೆಗೆ ಆ.21ರಂದು ಅರುಣ್ ಪುತ್ತಿಲ ಭೇಟಿ ನೀಡಿ ಧೈರ್ಯ ತುಂಬಿದರು.

ವಿದ್ಯಾರ್ಥಿಯ ಮಿತ್ತೂರಿನಲ್ಲಿರುವ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿ ಶಾಲಾ ಚಟುವಟಿಕೆಯಲ್ಲಿ ಮೊದಲಿನಂತೆ ತೊಡಗಿಸಿಕೊಳ್ಳುವಂತೆ ಹೇಳಿದರು. 

ಸುಳ್ಯ :ಲಂಚ ಸ್ವೀಕರಿಸುತ್ತಿದ್ದಾಗ ಸುಳ್ಯ ಆರಂತೋಡು ಗ್ರಾಮದ ವಿಎ - ಮಿಯಾಸಬ್ ಮುಲ್ಲ ಲೋಕಾಯುಕ್ತ ಬಲೆಗೆ

Posted by Vidyamaana on 2023-08-19 09:04:29 |

Share: | | | | |


ಸುಳ್ಯ :ಲಂಚ ಸ್ವೀಕರಿಸುತ್ತಿದ್ದಾಗ ಸುಳ್ಯ ಆರಂತೋಡು ಗ್ರಾಮದ ವಿಎ - ಮಿಯಾಸಬ್ ಮುಲ್ಲ ಲೋಕಾಯುಕ್ತ ಬಲೆಗೆ

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಆರಂತೋಡು ಗ್ರಾಮದ ಗ್ರಾಮ ಅಡಳಿತಾಧಿಕಾರಿ (VA) ಮಿಯಸಾಬ್ ಮುಲ್ಲ ಎಂಬಾತ ಲಂಚ ಪಡೆಯುವಾಗ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.


ಖಾತೆ ಬದಲಾವಣೆಗಾಗಿ ಎನ್.ಓ.ಸಿ ನೀಡಲು ದೂರುದಾರ ಹರಿಪ್ರಸಾದ್ ಎಂಬವರಿಂದ ಮೊದಲು ವಿಎ 8 ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದು ಅದರಂತೆ ಈ ಮೊದಲು 3 ಸಾವಿರ ಮುಂಗಡ ಪಡೆದಿದ್ದರು


ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ದೂರುದಾರ ಹರಿಪ್ರಸಾದ್ ಇಂದು ಉಳಿದ 5 ಸಾವಿರ ನೀಡುವಾಗ ವಿಎ ಲೋಕಾಯುಕ್ತ ಬಲೆಗೆ ಬಿದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಕಾರ್ಯಾಚರಣೆಯಲ್ಲಿ ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಟಿ.ಎ ಸೈಮಾನ್, ಡಿವೈಎಸ್ಪಿ ಚೆಲುವರಾಜ್ ಮತ್ತು ಕಲಾವತಿ, ಇನ್ಸ್‌ಪೆಕ್ಟರ್ ಅಮಾನುಲ್ಲಾ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದಾರೆ.

ಎಚ್ಚರ.! ಇನ್ಮುಂದೆ ವಕೀಲ ರ ಮೇಲೆ ಹಲ್ಲೆ ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್

Posted by Vidyamaana on 2024-06-13 17:25:59 |

Share: | | | | |


ಎಚ್ಚರ.! ಇನ್ಮುಂದೆ ವಕೀಲ ರ ಮೇಲೆ ಹಲ್ಲೆ ಮಾಡಿದ್ರೆ ಜೈಲು ಶಿಕ್ಷೆ  ಫಿಕ್ಸ್

ಬೆಂಗಳೂರು : ರಾಜ್ಯ ಸರ್ಕಾರದಿಂದ ವಕೀಲರಿಗೆ ಭದ್ರತೆ ನೀಡುವ ಸಂಬಂಧ ಮಹತ್ವದ ಕ್ರಮ ವಹಿಸಿದೆ. ಇದಕ್ಕಾಗಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-2023 ಜಾರಿಗೊಳಿಸಿದೆ. ಒಂದು ವೇಳೆ ವಕೀಲರ ಮೇಲೆ ಹಲ್ಲೆ ಮಾಡಿದ್ರೆ ಈ ನಿಯಮದಡಿ ಜೈಲು ಶಿಕ್ಷೆ ಫಿಕ್ಸ್ ಆಗಿದೆ.

ರಾಜ್ಯದಲ್ಲಿ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ - 2023 ಜಾರಿ ಮಾಡಲಾಗಿದೆ. ಈ ನಿಯಮವನ್ನು ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಜಾರಿಗೊಳಿಸಿದೆ.



Leave a Comment: