ಉಪ್ಪಿನಂಗಡಿ : ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಚಿತ್ರೀಕರಣ :ಪೆರಿಯಡ್ಕ ನಿವಾಸಿ ರೆಹಮಾನ್ ಪೊಲೀಸ್ ವಶಕ್ಕೆ

ಸುದ್ದಿಗಳು News

Posted by vidyamaana on 2024-07-22 17:34:57 |

Share: | | | | |


ಉಪ್ಪಿನಂಗಡಿ : ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ಚಿತ್ರೀಕರಣ :ಪೆರಿಯಡ್ಕ ನಿವಾಸಿ ರೆಹಮಾನ್ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ: ಹಿಂದೂ ಯುವತಿ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ರಹಿಮಾನ್ ಎಂಬಾತನ ಸ್ಥಳೀಯರು ಪೊಲೀಸರಿಗೆ ಹಿಡಿದು ಕೊಟ್ಟ ಘಟನೆ ಜು.21ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಿದ್ದ ರಹಿಮಾನ್ ನನ್ನು ಸ್ಥಳೀಯರು ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ ಅರುಣ್ ಕುಮಾರ್ ಪುತ್ತಿಲ, ಆರೋಪಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸಿಸಿಟಿವಿಗೆ ಒತ್ತಾಯ: ಈಗಾಗಲೇ ಉಪ್ಪಿನಂಗಡಿಯಲ್ಲಿ ಹಿಂದೂಗಳನ್ನು ಕೇಂದ್ರೀಕರಿಸಿ ಹಲವು ಘಟನೆಗಳು ನಡೆದಿದ್ದು, 2ವರ್ಷದ ಹಿಂದೆ ಮೀನು ಅಂಗಡಿಗೆ ಬೆಂಕಿ ಹಾಕಿದ್ದು ಇನ್ನೂ ಪತ್ತೆಯಾಗಿಲ್ಲ.

ಈ ಘಟನೆಯಲ್ಲಿ ಆರೋಪಿಯನ್ನು ಊರಾವರೇ ಹಿಡಿದುಕೊಟ್ಟಿದ್ದಾರೆ. ಪೆರಿಯಡ್ಕ ಜಂಕ್ವನ್ ನಲ್ಲಿ ಪೊಲೀಸ್ ಇಲಾಖೆಯ ಸಿಸಿಟಿವಿ ಅಗತ್ಯತೆ ಇದೆ ಎಂದು ಠಾಣಾಧಿಕಾರಿಯಲ್ಲಿ ಮನವಿ ಮಾಡಿದರು.

 Share: | | | | |


ಬೈಕ್ ನಲ್ಲಿ ಬಂದು ಮೊಬೈಲ್ ರಾಬರಿ: ಇಬ್ಬರು ಖತರ್ನಾಕ್ ಕಳ್ಳರು ಅರೆಸ್ಟ್!

Posted by Vidyamaana on 2024-02-28 11:06:18 |

Share: | | | | |


ಬೈಕ್ ನಲ್ಲಿ ಬಂದು ಮೊಬೈಲ್ ರಾಬರಿ: ಇಬ್ಬರು ಖತರ್ನಾಕ್ ಕಳ್ಳರು ಅರೆಸ್ಟ್!

ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದೆ..ಕಳ್ಳರ ಕಾಟಕ್ಕೆ ಜನ ಫೋನ್ ನಲ್ಲಿ ಮಾತಾಡೋಕು ಹೆದರೊ ಪರಿಸ್ಥಿತಿ ನಿರ್ಮಾಣ ಆಗಿದೆ..ಬೈಕ್‌ ನಲ್ಲಿ ಬರೊ ಆಸಾಮಿಗಳು ಕ್ಷಣ ಮಾತ್ರದಲ್ಲಿ ಮೊಬೈಲ್ ಕಸಿದು ಪರಾರಿ ಆಗ್ತಿದ್ದಾರೆ..ಇದು ಒಂದು ಕಡೆ ಆದ್ರೆ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿರುವ ಮೊಬೈಲ್ ಕದ್ದು ಹಣ ದೋಚ್ತಿದ್ದ ಖದೀಮ ಕೂಡ ಲಾಕ್ ಆಗಿದ್ದಾನೆ.ರಸ್ತೆಯಲ್ಲಿ ಮೊಬೈಲ್ ಹಿಡಿದು ನಿಂತ್ರೆ ನಿಮ್ಮ ಮೊಬೈಲ್ ನಿಮ್ಮ ಕೈನಲ್ಲಿ ಇರೋದೆ ಇಲ್ಲ..ಕ್ಷಣಮಾತ್ರದಲ್ಲಿ ಕಂಡವರ ಪಾಲಾಗಿಬಿಡತ್ತೆ…ಇಲ್ಲಾಗಿರೋದು ಕೂಡ ಅದೇ..ನೋಡಿ ರಸ್ತೆ ಬದಿ ಮೊಬೈಲ್ ಹಿಡಿದು ನಿಂತಿದ್ದ ವ್ಯಕ್ತಿಯ ಮೊಬೈಲ್ ಅನ್ನು ಬೈಕ್ ನಲ್ಲಿ ಬರೊ‌ ಆಸಾಮಿಗಳು ಅದ್ಹೇಗೆ ಕಿತ್ತು ಪರಾರಿ ಆಗ್ತಾರೆ ಅಂತಾ..ಇಂತಹ ಗ್ಯಾಂಗ್ ಬೆಂಗಳೂರಿನಾದ್ಯಂತ ಆಯಕ್ಟಿವ್ ಆಗಿದ್ದ ಸಾರ್ವಜನಿಕರು ಭಯದಲ್ಲೇ ಮೊಬೈಲ್ ಹಿಡಿದು ಓಡಾಡೊ ಪರಿಸ್ಥಿತಿ ನಿರ್ಮಾಣ ಆಗಿದೆ.ಹೌದು ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು..ರಂಗನಾಥ್ ಮತ್ತು ಗಿರೀಶ್…ಇವ್ರು ಸಾಮಾನ್ಯದವ್ರಲ್ಲ..ಮೊಬೈಲ್ ನಲ್ಲಿ ಬೆಂಗಳೂರಿನ ರಸ್ತೆ ರಸ್ತೆಗಳಲ್ಲಿ ರೌಂಡ್ಸ್ ಹಾಕ್ತಾರೆ…ರಸ್ತೆ ಬದಿಯಲ್ಲಿ ಮೊಬೈಲ್ ಕೈನಲ್ಲಿ ಹಿಡಿದು ನಿಂತಿರೋರನ್ನೆ ಟಾರ್ಗೆಟ್ ಮಾಡ್ತಾರೆ..ಅವ್ರ ಗಮನ ಸ್ವಲ್ಪ ಅತ್ತ ಇತ್ತ ಹೋದ್ರೆ ಸಾಕು..ಕೈನಲ್ಲಿದ್ದ ಮೊಬೈಲ್ ಕಸಿದು ಪರಾರಿ ಆಗ್ತಿದ್ರು..ಸದ್ಯ ಅದೇ ಖದೀಮರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ..ಬಂಧಿತರಿಂದ 20 ಲಕ್ಷ ಮೌಲ್ಯದ 68 ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ


ಇನ್ನು ಮೊಬೈಲ್ ಕಸಿದು ಪರಾರಿ ಆಗೋರ ಕಥೆ ಇದಾದ್ರೆ..ಮಹಿಳೆಯರ ವ್ಯಾನಿಟಿ‌ ಬ್ಯಾಗ್ ನಿಂದ ಮೊಬೈಲ್ ಕದ್ದು ಅವರ ಖಾತೆಯಲ್ಲಿರುವ ಹಣವನ್ನ ವರ್ಗಾವಣೆ ಮಾಡಿಕೊಳ್ತಿದ್ದ ಆರೋಪಿಯ ಹೆಡೆಮುರಿ ಕಟ್ಟಲಾಗಿದೆ..ರಾಮಮೂರ್ತಿನಗರ ಪೊಲೀಸರು ವಿಘ್ನೇಶ್ ಎಂಬ ಮೊಬೈಲ್ ಕಳ್ಳತನ ಮಾಡ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ‌.ಬಂಧಿತನಿಂದ 8 ಲಕ್ಷ ಮೌಲ್ಯದ 38 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ..ಆರೋಪಿಯು ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಹೊಂಚು ಹಾಕಿ ನಿಲ್ತಿದ್ದ.ಬಸ್ ಹತ್ತುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಹಿಂದಿನಿಂದ ಬಸ್ ಹತ್ತುವ ನೆಪದಲ್ಲಿ ವ್ಯಾನಿಟಿ ಬ್ಯಾಗ್ ನ ಜಿಪ್ ತೆಗೆದು ಮೊಬೈಲ್ ಫೋನ್ ಕಳ್ಳತನ ಮಾಡ್ತಿದ್ದ..ಮೊಬೈಲ್ ಫೋನ್ ನಲ್ಲಿ ಇರ್ತಿದ್ದ ಸಿಮ್ ಕಾರ್ಡ್ ಬೇರೊಂದು ಮೊಬೈಲ್ ಫೋನ್ ಗೆ ಹಾಕಿ ಫೋನ್ ಪೇ,ಗೂಗಲ್‌ಪೇ,ಪಿನ್ ಕೋಡ್ ಬದಲಿಸ್ತಿದ್ದ.ನಂತರ ಅವುಗಳ ಮೂಲಕ ಕಳವು ಮಾಡಿದ್ದ ಮೊಬೈಲ್ ನಂಬರ್ ಲಿಂಕ್ ಹೊಂದಿರುವ ಬ್ಯಾಂಕ್ ಗಳಲ್ಲಿರುವ ಹಣವನ್ನು ಬೇರೊಂದು ಪರಿಚಯಸ್ಥರ ಅಕೌಂಟ್ ಗೆ ವರ್ಗಾವಣೆ ಮಾಡಿ ನಂತರ ಆ ಹಣವನ್ನು ಪಡೆದುಕೊಳ್ತಿದ್ದ‌.ಸದ್ಯ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ

ಅಝಾನ್ ಕುರಿತು ಅವಹೇಳನ: ಎಸ್.ಡಿ.ಪಿ.ಐ. ಪ್ರತಿಭಟನೆ

Posted by Vidyamaana on 2023-03-17 16:44:03 |

Share: | | | | |


ಅಝಾನ್  ಕುರಿತು ಅವಹೇಳನ: ಎಸ್.ಡಿ.ಪಿ.ಐ. ಪ್ರತಿಭಟನೆ

ಪುತ್ತೂರು: ಅಝಾನ್  ಕುರಿತು ಅವಹೇಳನವಾಗಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ ಶುಕ್ರವಾರ ಸಂಜೆ ತಾಲೂಕು ಆಡಳಿತ ಸೌಧದ ಬಳಿಯ ಅಮರ್ ಜವಾನ್ ಸ್ಮಾರಕದ ಬಳಿ ನಡೆಯಿತು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿನ್ ಮಾತನಾಡಿ, ಎಸ್‌ಡಿಪಿಐ ಪಕ್ಷದವರಿಗೆ ಹಿಂದೂ, ಮುಸ್ಲಿಂ, ಬೌದ್ಧ, ಕ್ರಿಶ್ಚಿಯನ್ ಎಲ್ಲರೂ ಒಂದೇ. ನಮಗೇ ಬೇಕಾದ್ದು ಮನುಷ್ಯ ಜಾತಿ ಹೊರತು ಧರ್ಮ ಅಲ್ಲ. ಈ ನಿಟ್ಟಿನಲ್ಲಿ ಬಿಜೆಪಿಯವರು ದ್ವೇಷವನ್ನು ಬಿಟ್ಟುಬಿಡಿ ಎಂದು ಹೇಳಿದ ಅವರು, ಸಾರೆ ಜಹಾಂಸೆ ಅಚ್ಚಾ, ಕ್ವಿಟ್ ಇಂಡಿಯಾ ಮುಂತಾದ ನಾಮಾಂಕಿತವನ್ನು ನೀಡಿದ್ದು ಮುಸ್ಲಿಮರು. ಇಂತಹಾ ಮುಸ್ಲಿಮರು ಆರಾಧಿಸುವ ಅಲ್ಲಾಹುವಿನ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿಯ ಈಶ್ವರಪ್ಪ ಅವರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಅವರ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸುವಂತೆ ಒತ್ತಾಯಿಸಿದರು.

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬಯ ಮಾತನಾಡಿ, ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ದೊಂಬಿ ಗಲಭೆಗಳು ಜಾಸ್ತಿಯಾಗಿದೆ. ಇದನ್ನು ಕಂಡು ಪೊಲೀಸ್ ಇಲಾಖೆ ಕೈಕಟ್ಟಿ ಕುಳಿತಿದ್ದು, ಯಾವುದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇದೀಗ ಇಸ್ಲಾಂನ ಪವಿತ್ರ ಆರಾಧಕ ಅಲ್ಲಾಹು ಕುರಿತು ಅವಹೇಳನಕಾರಿಯಾಗಿ ಮಾತನಾಡಿದರೂ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು, ಸಂಘ ಪರಿವಾರವನ್ನು ಓಲೈಸಲು ಅವರ ಪರವಾಗಿ ಮಾತನಾಡಿದ ಯು.ಟಿ.ಖಾದರ್ ಮಾತಿನಲ್ಲಿ ಬಿಗಿ ಹಿಡಿದು ಮಾತಾಡಲಿ ಎಂದು ಎಚ್ಚರಿಕೆ ನೀಡಿದರು.

ಸುಳ್ಯ- ಪಾಣತ್ತೂರು ರಸ್ತೆಯಲ್ಲಿ ಗುಡ್ಡ ಕುಸಿತ

Posted by Vidyamaana on 2023-07-06 11:57:42 |

Share: | | | | |


ಸುಳ್ಯ- ಪಾಣತ್ತೂರು ರಸ್ತೆಯಲ್ಲಿ ಗುಡ್ಡ ಕುಸಿತ

ಸುಳ್ಯ: ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸುವ ಕಲ್ಲಪಳ್ಳಿಯಲ್ಲಿ ಗುಡ್ಡದಿಂದ ಮಣ್ಣು ಕುಸಿದು ರಸ್ತೆ ಸಂಚಾರದಲ್ಲಿ ತಡೆ ಉಂಟಾಗಿರುವುದಾಗಿ ಘಟನೆ ಜು ೬ ರಂದು ಸಂಭವಿಸಿದೆ.

 ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಸ್ಥಳೀಯರು ಸೇರಿ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಇನ್ನೂ ಮಳೆ ಮುಂದುವರಿದರೆ ಗುಡ್ಡ ಇನ್ನಷ್ಟು ಕುಸಿಯುವ ಅಪಾಯ ಎದುರಾಗಿದ್ದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಎಚ್ಚರಿಕೆಯಿಂದ ಪ್ರಯಾಣಿಸಬೇಕು ಎಂದು ತಿಳಿಸಲಾಗಿದೆ .

Miss World 2024; ಜೆಕ್‌ ಗಣರಾಜ್ಯದ ಚೆಲುವೆ ಕ್ರಿಸ್ಟಿನಾ ಸಿಸ್ಕೋವಾಗೆ ಪ್ರಶಸ್ತಿ ಮಂಗಳೂರು ಮೂಲದ ಸಿನಿ ಶೆಟ್ಟಿಗೆ ತಪ್ಪಿದ ಪಟ್ಟ

Posted by Vidyamaana on 2024-03-10 08:38:57 |

Share: | | | | |


Miss World 2024; ಜೆಕ್‌ ಗಣರಾಜ್ಯದ ಚೆಲುವೆ ಕ್ರಿಸ್ಟಿನಾ ಸಿಸ್ಕೋವಾಗೆ ಪ್ರಶಸ್ತಿ ಮಂಗಳೂರು ಮೂಲದ ಸಿನಿ ಶೆಟ್ಟಿಗೆ ತಪ್ಪಿದ ಪಟ್ಟ

ಮುಂಬೈ: ಮುಂಬೈನಲ್ಲಿ ಶನಿವಾರ ನಡೆದ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಜೆಕ್‌ ಗಣರಾಜ್ಯದ ಕ್ರಿಸ್ಟಿನಾ ಸಿಸ್ಕೋವಾ ಪಟ್ಟ ಗೆದ್ದುಕೊಂಡರು.


28 ವರ್ಷಗಳ ನಂತರ ಭಾರತದಲ್ಲಿ ಈ ಸ್ಪರ್ಧೆ ನಡೆದಿದ್ದು, ಕ್ರಿಸ್ಟಿನಾ 111 ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಗೆಲುವು ಸಾಧಿಸಿದ್ದಾರೆ. ಪೊಲೆಂಡ್‌ ಮೂಲದ 2022ನೇ ಸಾಲಿನ ವಿಶ್ವ ಸುಂದರಿ ಕರೋಲಿನಾ ಬಿಲಾವೆಸ್ಕಾ ಅವರು ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟವನ್ನು ತೊಡಿಸಿದ್ದಾರೆ.

ಈ ಸಂದರ್ಭದಲ್ಲಿ ಜೆಕ್‌ ಸುಂದರಿ ಕ್ರಿಸ್ಟಿನಾ ಸಿಸ್ಕೋವಾ ಸಂತಸದ ಕಂಬನಿಗರೆದು ಹರ್ಷ ವ್ಯಕ್ತ ಪಡಿಸಿದ್ದಾರೆ.

ಸಿನಿ ಶೆಟ್ಟಿಗೆ ತಪ್ಪಿದ ಪಟ್ಟ:

ಪ್ರಶಸ್ತಿ ಗೆಲ್ಲಲು ಕರ್ನಾಟಕ ಮೂಲದ ಸಿನಿ ಶೆಟ್ಟಿ ವಿಫ‌ಲರಾಗಿದ್ದಾರೆ. ಅಂತಿಮ ಸುತ್ತಿನವರೆಗೂ ತೇರ್ಗಡೆಯಾಗುತ್ತಾ ಬಂದ ಅವರು, ಅಗ್ರ 8ರ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕೊನೆಗೆ ನಾಲ್ವರ ಆಯ್ಕೆ ವೇಳೆ ಸಿನಿ ಶೆಟ್ಟಿ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು.

ಸೈಲೆಂಟಾಗಿ ಕೊಠಡಿಗೆ ಪ್ರವೇಶಿಸಲೆತ್ನಿಸಿದ ಅಜಿತ್ ರೈಯನ್ನು ತಡೆದ ಕಾರ್ಯಕರ್ತರು

Posted by Vidyamaana on 2023-05-19 13:11:41 |

Share: | | | | |


ಸೈಲೆಂಟಾಗಿ ಕೊಠಡಿಗೆ ಪ್ರವೇಶಿಸಲೆತ್ನಿಸಿದ ಅಜಿತ್ ರೈಯನ್ನು  ತಡೆದ ಕಾರ್ಯಕರ್ತರು

ಪುತ್ತೂರು: ತಾಲೂಕು ಮತ್ತು ಜಿಲ್ಲೆಯ ಕೆಲ ಬಿಜೆಪಿ ಮುಖಂಡರ ಸ್ಥಿತಿ ಇದೀಗ ‘ಮಾಡಿದ್ದುಣ್ಣೋ ಮಹರಾಯ’ ಎಂಬಂತಾಗಿದೆ. ಟಿಕೆಟ್ ವಿಚಾರದಲ್ಲಿ ಹಿಂದು ಕಾರ್ಯಕರ್ತರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಲ್ಲಿಂದ ಹಿಡಿದು ಬಿಜೆಪಿ ನಾಯಕರಿಬ್ಬರ ಬಗ್ಗೆ ಅವಹೇಳನಕಾರಿ ಬ್ಯಾನರ್ ಪ್ರಕರಣದಲ್ಲಿ ಪೊಲೀಸ್ ದೌರ್ಜನ್ಯಕ್ಕೊಳಗಾ ವಿಚಾರದವರೆಗೆ ಇಲ್ಲಿನ ಬಿಜೆಪಿ ನಾಯಕರ ವರ್ತನೆ ಈ ಭಾಗದ ಹಿಂದು ಕಾರ್ಯಕರ್ತರನ್ನು ಕೆರಳಿಸಿಬಿಟ್ಟಿದೆ.

ಇದಕ್ಕೆ ಸಾಕ್ಷಿಯೆಂಬಂತೆ ಇಂದು ಬಿಜೆಪಿ ಶಾಸಕ ಮತ್ತು ಮಾಜಿ ಕೇಂದ್ರ ಸಚಿವರಾಗಿದ್ದ ಬಸವನ ಗೌಡ ಪಾಟೀಲ ಯತ್ನಾಳ ಅವರು ಪುತ್ತೂರಿಗೆ ಭೇಟಿ ನೀಡಿ ಪೊಲೀಸ್ ದೌರ್ಜನ್ಯದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಯುವಕರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಯತ್ನಾಳ ಅವರ ಜೊತೆ ಯುವಕರಿದ್ದ ವಾರ್ಡ್ ಗೆ ಪ್ರವೇಶಿಸಲೆತ್ನಿಸಿದ  ಅಜಿತ್ ರೈ ಅವರಿಗೆ ಸ್ಥಳದಲ್ಲಿದ್ದ ಹಿಂದು ಯುವಕರು ಪ್ರವೇಶ ನಿರಾಕರಿಸಿದ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಅರುಣ್ ಕುಮಾರ್ ಪುತ್ತಿಲ ಮತ್ತು ಇನ್ನುಳಿದವರೊಂದಿಗೆ ಯತ್ನಾಳ್ ಅವರು ಯುವಕರಿದ್ದ ಕೊಠಡಿ ಪ್ರವೇಶಿಸುತ್ತಿದ್ದಂತೆ ಅವರ ಹಿಂದೆ ‘ಸೈಲೆಂಟಾ’ಗಿ ಕೊಠಡಿಗೆ ಪ್ರವೇಶಿಸಲೆತ್ನಿಸಿದ ಅಜಿತ್ ರೈಯನ್ನು ಕೊಠಡಿ ಒಳಗಿದ್ದ ಹಿಂದು ಕಾರ್ಯಕರ್ತರು ‘ಪಿದಾಯಿ ಪೋಲೆ…’ ಎಂದು ಅಕ್ಷರಶಃ ತಳ್ಳಿ ಹೊರಹಾಕುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗುತ್ತಿದೆ. ಇದು ಈ ಭಾಗದಲ್ಲಿ ಹಿಂದು ಕಾರ್ಯಕರ್ತ ಅದೆಷ್ಟು ಸಿಟ್ಟುಗೊಂಡಿದ್ದಾನೆ ಎನ್ನುವುದರ ರಿಫ್ಲೆಕ್ಷನ್ ಆಗಿದೆ ಎಂದು ಇದೀಗ ಜನರಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಿನ್ನೆಯೇ ಅಸ್ಪತ್ರೆಗೆ ಭೇಟಿ ನೀಡಬೇಕಿತ್ತು ಆದರೆ ಅವರು ಕೊನೇ ಕ್ಷಣದಲ್ಲಿ ತಮ್ಮ ಭೇಟಿಯನ್ನು ರದ್ದುಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕ್ಷೇತ್ರದ ಮಾಜಿ ಶಾಸಕರೂ ಸಹ ಇನ್ನೂ ಆಸ್ಪತ್ರೆಗೆ ಭೇಟಿ ನೀಡದಿರುವುದೂ ಸಹ ಈ ಪ್ರಕರಣದಲ್ಲಿ ಅವರ ಪಾತ್ರದ ಕುರಿತು ಸಂಶಯಗಳು ಏಳುವಂತೆ ಮಾಡಿದೆ.

ಪಾಲ್ತಾಡಿ ಬಳಿ ಮದುವೆ ಟೆಂಪೋ ಪಲ್ಟಿ :ಬೆಳ್ಳಾರೆಯಿಂದ ಈಶ್ವರಮಂಗಲ ಕಡೆ ತೆರಳುತ್ತಿದ್ದ ಟೆಂಪೋ

Posted by Vidyamaana on 2023-10-22 21:58:27 |

Share: | | | | |


ಪಾಲ್ತಾಡಿ ಬಳಿ  ಮದುವೆ ಟೆಂಪೋ ಪಲ್ಟಿ :ಬೆಳ್ಳಾರೆಯಿಂದ ಈಶ್ವರಮಂಗಲ ಕಡೆ ತೆರಳುತ್ತಿದ್ದ ಟೆಂಪೋ

ಪುತ್ತೂರು: ಬೆಳ್ಳಾರೆಯಿಂದ ಪುತ್ತೂರು ಈಶ್ವರಮಂಗಲ ಕಡೆಗೆ ತೆರಳುತ್ತಿದ್ದ ಮದುವೆಯ ಟೆಂಪೋ ಪಾಲ್ತಾಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ   ಪಲ್ಟಿಯಾದ ಘಟನೆ ಅ 22 ರಂದು ಆದಿತ್ಯವಾರ ದಂದು  ಸಂಜೆ ನಡೆದಿದೆ.

💥ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ ಪಾಲ್ತಾಡಿ ಬಳಿ ಮದುವೆ ಟೆಂಪೋ ಪಲ್ಟಿ ವಿಡಿಯೋ


ಘಟನೆಯಲ್ಲಿ ಈಶ್ವರಮಂಗಲ ಮೂಲದ ವರನ ಕಡೆಯ ಸಂಬಂಧಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಟೆಂಪೋದಲ್ಲಿ ಹೆಚ್ಚಿನವರು ಮಹಿಳೆಯರಿದ್ದು ಪುತ್ತೂರು ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆ ತರಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.


ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.



Leave a Comment: