ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ನಾಳೆ (ಜು.26) ಪುತ್ತೂರು ಸಹಿತ - ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ - ರಜೆ ಘೋಷಣೆ!!!

Posted by Vidyamaana on 2023-07-25 13:41:53 |

Share: | | | | |


ನಾಳೆ (ಜು.26) ಪುತ್ತೂರು ಸಹಿತ - ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ - ರಜೆ ಘೋಷಣೆ!!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುತ್ತೈ ಮುಗಿಲನ್ ಆದೇಶಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಬಿಜೆಪಿ ಕೇರಳ ಸಹ ಉಸ್ತುವಾರಿ ಹೊಣೆ ವಹಿಸಿಕೊಂಡ ನಳೀನ್ ಕುಮಾರ್ ಕಟೀಲ್

Posted by Vidyamaana on 2024-03-31 14:29:49 |

Share: | | | | |


ಲೋಕಸಭಾ ಚುನಾವಣೆಗೆ ಬಿಜೆಪಿ ಕೇರಳ ಸಹ ಉಸ್ತುವಾರಿ ಹೊಣೆ ವಹಿಸಿಕೊಂಡ ನಳೀನ್ ಕುಮಾರ್ ಕಟೀಲ್

ಕಾಸರಗೋಡು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಚುನಾವಣಾ ಸಹ-ಉಸ್ತುವಾರಿಯಾಗಿ ನೇಮಕಗೊಂಡಿರುವ ಸಂಸದ ನಳೀನ್ ಕುಮಾರ್ ಕಟೀಲ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ ನಲ್ಲಿದ್ದ ಅಭಿಮನ್ಯು ಪೊಲೀಸ್ ವಶಕ್ಕೆ

Posted by Vidyamaana on 2023-08-18 03:53:12 |

Share: | | | | |


ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ ನಲ್ಲಿದ್ದ  ಅಭಿಮನ್ಯು ಪೊಲೀಸ್ ವಶಕ್ಕೆ

ಕೊಚ್ಚಿ : ಮಹಿಳೆಯಂತೆ ಬುರ್ಖಾ ಧರಿಸಿ ಮಹಿಳೆಯರ ವಾಶ್‌ರೂಮ್‌ನಿಂದ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ 23 ವರ್ಷದ ಯುವಕನನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಸಂಜೆ ಪ್ರಸಿದ್ಧ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಅಭಿಮನ್ಯು ಎಂದು ಗುರುತಿಸಲಾಗಿದ್ದು, ರೊಬೊಟಿಕ್ಸ್ ಎಂಜಿನಿಯರಿಂಗ್ ಪದವೀಧರನಾಗಿದ್ದು, ಕೊಚ್ಚಿಯಲ್ಲಿ ಕೆಲಸ ಮಾಡುತ್ತಿದ್ದ.


14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಪ್ರಕಾರ, ಮಾಲ್‌ನಲ್ಲಿರುವ ಮಹಿಳಾ ವಾಶ್‌ರೂಮ್‌ಗೆ ಪ್ರವೇಶಿಸಿ, ತನ್ನ ಫೋನ್ ಅನ್ನು ಬಾಕ್ಸ್‌ನಲ್ಲಿ ಇರಿಸಿ ಮತ್ತು ವಿಡಿಯೋ ರೆಕಾರ್ಡ್ ಮಾಡಲು ಬಾಗಿಲಿನ ಬಳಿ ಇರಿಸಿದ್ದ. ಆತನ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಪೊಲೀಸರು ಅಭಿಮನ್ಯುವಿನ ಫೋನ್ ಮತ್ತು ಬುರ್ಖಾವನ್ನು ವಶಪಡಿಸಿಕೊಂಡಿದ್ದಾರೆ. ಈತ ಈ ಹಿಂದೆ ಇಂತಹ ಕೃತ್ಯಗಳಲ್ಲಿ ತೊಡಗಿದ್ದಾನಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಏಷ್ಯಾ ಕಪ್ : ನೇಪಾಲದ ಎದುರು ಭಾರಿ ಜಯದೊಂದಿಗೆ ಶುಭಾರಂಭ ಮಾಡಿದ ಪಾಕ್

Posted by Vidyamaana on 2023-08-30 23:15:16 |

Share: | | | | |


ಏಷ್ಯಾ ಕಪ್ : ನೇಪಾಲದ ಎದುರು ಭಾರಿ ಜಯದೊಂದಿಗೆ ಶುಭಾರಂಭ ಮಾಡಿದ ಪಾಕ್

ಮುಲ್ತಾನ್‌ : ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ಥಾನ ತಂಡ ನೇಪಾಲದ ವಿರುದ್ಧ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.



ಪಾಕಿಸ್ಥಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಕ್ 6 ವಿಕೆಟ್ ನಷ್ಟಕ್ಕೆ 342 ರನ್ ಕಲೆಹಾಕಿ ಭರ್ಜರಿ ಮೊತ್ತವನ್ನು ನೇಪಾಲ ತಂಡದ ಮುಂದಿಟ್ಟಿತು. ನೇಪಾಲ ಪಾಕ್ ಬಿಗಿದಾಳಿಗೆ ಸಿಲುಕಿ 23.4 ಓವರ್ ಗಳಲ್ಲಿ 104 ರನ್ ಗಳಿಗೆ ಆಲೌಟಾಯಿತು. ಪಾಕಿಸ್ಥಾನ 238 ರನ್ ಗಳ ಭಾರಿ ಜಯ ಸಾಧಿಸಿತು. ಶಾದಾಬ್ ಖಾನ್ 4 ವಿಕೆಟ್ ಪಡೆದರು. ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು.


ನೇಪಾಲ ಪರ ಆರಿಫ್ ಶೇಖ್ 26 ಮತ್ತು ಸೋಂಪಾಲ್ ಕಾಮಿ 28 ರನ್ ಹೊರತು ಪಡಿಸಿ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ.


ಪಾಕಿಸ್ಥಾನ 25 ರನ್ ಆಗುವಷ್ಟರಲ್ಲಿ ಮೊದಲ 2 ವಿಕೆಟ್ ಕಳೆದುಕೊಂಡಿತು.ಫಖರ್ ಜಮಾನ್ 14, ಇಮಾಮ್-ಉಲ್-ಹಕ್ 5 ರನ್ ಗಳಿಸಿದ್ದ ವೇಳೆ ರನೌಟಾದರು.ಆ ಬಳಿಕ ಬಂದ ಏಕದಿನ ಕ್ರಿಕೆಟ್ ನ ನಂಬರ್ ಒನ್ ಬ್ಯಾಟ್ಸ್ ಮ್ಯಾನ್ ಬಾಬರ್ ಅಜಂ ಅಬ್ಬರಿಸಿದರು. ತಾಳ್ಮೆಯ ಆಟವಾಡಿ ಶತಕ ಪೂರ್ತಿಗೊಳಿಸಿದರು.151(131 ಎಸೆತ) ರನ್ ಗಳಿಸಿದ್ದ ವೇಳೆ ಕೊನೆಯಲ್ಲಿ ಔಟಾದರು. ಬಾಬರ್ ರೊಂದಿಗೆ ಉತ್ತಮ ಆಟವಾಡುತ್ತಿದ್ದ ಮೊಹಮ್ಮದ್ ರಿಜ್ವಾನ್ ವಿಲಕ್ಷಣ ರನೌಟ್ (ದೀಪೇಂದ್ರ ಸಿಂಗ್) ಆದರು. ಅವರು 44 ರನ್ ಗಳಿಸಿದ್ದರು. ಆಬಳಿಕ ಬಾಬರ್ ಅವರಿಗೆ ಸಾಥ್ ನೀಡಿದ ಇಫ್ತಿಕಾರ್ ಅಹ್ಮದ್ ಔಟಾಗದೆ 109 ರನ್ ಗಳಿಸಿದರು. ಸ್ಪೋಟಕ ಶತಕ ಸಿಡಿಸಿದ ಅವರು ಒಟ್ಟು 71 ಎಸೆತಗಳಲ್ಲಿ 109 ರನ್ ಗಳಿಸಿದರು

ಸೆ.02(ಶನಿವಾರ) ರಂದು ಭಾರತದ ವಿರುದ್ಧ ಪಾಕಿಸ್ಥಾನ ಏಷ್ಯಾ ಕಪ್ ನ ಎ ಗುಂಪಿನ 3 ನೇ ಪಂದ್ಯವನ್ನು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ,ಪಲ್ಲೆಕೆಲೆಯಲ್ಲಿ ಆಡಲಿದೆ.

ಗ್ರಾಮೀಣ ರೈತ ಮಹಿಳೆಯರಿಗೆ ನಾಟಿಕೋಳಿ ಮರಿ ಉಚಿತ ವಿತರಣೆ

Posted by Vidyamaana on 2022-12-15 14:01:10 |

Share: | | | | |


ಗ್ರಾಮೀಣ ರೈತ ಮಹಿಳೆಯರಿಗೆ ನಾಟಿಕೋಳಿ ಮರಿ ಉಚಿತ ವಿತರಣೆ

ಪುತ್ತೂರು: ಪೌಷ್ಠಿಕತೆ ಹಾಗೂ ರುಚಿಯ ಜತೆಗೆ ರೋಗ ನಿರೋಧಕ ಶಕ್ತಿ ಹೊಂದಿರುವ ನಾಟಿ ಕೋಳಿ ಮರಿಗಳನ್ನು ಸಾಕುವ ಉದ್ದೇಶದಿಂದ ರಾಜ್ಯ ಸರಕಾರದ ಕುಕ್ಕುಟ ಮಹಾ ಮಂಡಳಿ ನಿಗಮ ಬೆಂಗಳೂರು ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ಗ್ರಾಮೀಣ ಭಾಗದ ಅರ್ಹ ರೈತ ಮಹಿಳೆಯರಿಗೆ ಉಚಿತ ನಾಟಿ ಕೋಳಿ ಮರಿಗಳನ್ನು ಪುತ್ತೂರು ಪಶುಸಂಗೋಪನಾ ಇಲಾಖೆಯ ಕಚೇರಿಯಲ್ಲಿ ಉಚಿತವಾಗಿ ವಿತರಿಸಲಾಯಿತು.

ನಾಟಿ ಕೋಳಿ ಮರಿ ವಿತರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಗ್ರಾಮೀಣ ಭಾಗದ ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪಶುಸಂಗೋಪನಾ ಇಲಾಖೆಯಿಂದ ಉಚಿತವಾಗಿ ನಾಟಿಕೋಳಿ ಮರಿಗಳನ್ನು ವಿತರಿಸಲಾಗುತ್ತಿದೆ. ನೂರಿನ್ನೂರು ಕೋಳಿಮರಿಗಳನ್ನು ಸಾಕಿಕೊಂಡು, ಜೀವನವನ್ನು ಸುಗಮವಾಗಿ ಸಾಗಿಸಬಹುದು ಎಂದು ಹೇಳಿದರು.

ರೈತ ಮಹಿಳೆಯರ ಆದಾಯ ಹೆಚ್ಚಿಸುವ ನಿಟ್ಟನಲ್ಲಿ ಸರಕಾರ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರಲ್ಲಿ ಇದು ಕೂಡ ಒಂದು. ಐವತ್ತು ಸಾವಿರ ಕೋಳಿಮರಿಗಳನ್ನು ಸಾಕಿಕೊಂಡು, ಕುಕ್ಕುಟೋದ್ಯಮ ನಡೆಸುವ ಉದ್ಯಮಿಗಳನ್ನು ನಾವು ಕಾಣುತ್ತೇವೆ. ಆದರೆ ನೂರಿನ್ನೂರು ನಾಟಿ ಕೋಳಿ ಮರಿಗಳನ್ನು ಸಾಕಿಕೊಂಡು ಉದ್ಯಮ ನಡೆಸುತ್ತಾ, ಉತ್ತಮ ಜೀವನ ಸಾಗಿಸಬಹುದು ಎಂದು ಅವರು ಹೇಳಿದರು.

ಮೈಸೂರು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ ನಿಗಮದ ಜಾನುವಾರು ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ, ಕಚೇರಿ ಸಿಬ್ಬಂದಿ ಅಮೃತ್ ಉಪಸ್ಥಿತರಿದ್ದರು.

ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಸ್ವಾಗತಿಸಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಶಿವಪ್ರಸಾದ್ ವಂದಿಸಿದರು.


ಕಲಿತದ್ದು SSLC – ಪೋಸು ಕೊಟ್ಟಿದ್ದು MBBS ಡಾಕ್ಟರ್ ಎಂದು

Posted by Vidyamaana on 2023-12-02 17:41:05 |

Share: | | | | |


ಕಲಿತದ್ದು SSLC – ಪೋಸು ಕೊಟ್ಟಿದ್ದು MBBS ಡಾಕ್ಟರ್ ಎಂದು

ಬೆಂಗಳೂರು : ರಾಜಧಾನಿಯಲ್ಲಿ ಪತ್ತೆಯಾದ ಅತಿ ದೊಡ್ಡ ಹಸುಗೂಸು ಮಾರಾಟ ಹಗರಣದಲ್ಲಿ (Child Tr

non

e) ಈಗಾಗಲೇ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ, ಅವರಲ್ಲಿ ಒಬ್ಬ ನಕಲಿ ವೈದ್ಯನೂ (Fake Doctor) ಇದ್ದಾನೆ. ಅವನೇ ಕೆವಿನ್‌ ಅಲಿಯಾಸ್‌ ಕರಣ್‌.


ಬಡ ಕುಟುಂಬಗಳ ಗರ್ಭಿಣಿಯರನ್ನು ಮೊದಲೇ ಗೊತ್ತು ಮಾಡಿಕೊಂಡು ಅವರಿಗೆ ಹಣದ ಆಮಿಷ ಒಡ್ಡಿ, ಹೆರಿಗೆಯಾಗುತ್ತಿದ್ದಂತೆಯೇ ಮಗುವನ್ನು ಬೇರೆಯವರಿಗೆ ಮಾರಾಟ ಮಾಡುವ ಜಾಲ ಇದಾಗಿದೆ.ಐವಿಎಫ್‌ ನಂಥ ಕೃತಕ ಗರ್ಭಧಾರಣಾ ವಿಧಾನದ ಮೂಲಕವೂ ಮಕ್ಕಳನ್ನು ಸೃಷ್ಟಿಸಿ ಮಾರಾಟ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಸುಹಾಸಿನಿ, ಶರಣ್ಯ, ಹೇಮಲತಾ, ಮಹಾಲಕ್ಷ್ಮಿ, ಗೋಮತಿ, ರಾಧಾಮಣಿ ಮೊದಲ ಹಂತದಲ್ಲಿ ಬಂಧಿತರಾದರೆ ಬಳಿಕ ಕೆವಿನ್‌ ಅಲಿಯಾಸ್‌ ಮತ್ತು ರಮ್ಯ ಎಂಬವರನ್ನು ಬಂಧಿಸಲಾಗಿತ್ತು.ಎರಡನೇ ಹಂತದಲ್ಲಿ ಸಿಕ್ಕಿಬಿದ್ದಿರುವ ಕೆವಿನ್‌ ಅಲಿಯಾಸ್‌ ಕರಣ್‌ ಒಬ್ಬ ನಕಲಿ ವೈದ್ಯ. ಅವನು ಓದಿದ್ದು ಬರೀ ಎಸ್‌ಎಸ್‌ಎಲ್‌ಸಿ. ಆದರೆ, ತಾನೊಬ್ಬ ಡಾಕ್ಟರ್‌ ಎಂದು ಪೋಸ್‌ ಕೊಟ್ಟು ಶಾಪ್‌ ಇಟ್ಟುಕೊಂಡಿದ್ದ. ಅವನ ಶೈಲಿ ನೋಡಿದರೆ ಥೇಟ್‌ ಮುನ್ನಾ ಭಾಯ್‌ ಎಂಬಿಬಿಎಸ್‌ ಥರಾನೇ ಇದ್ದಾನೆ.


ಡಾ. ಕೆವಿನ್‌ ಅಲಿಯಾಸ್‌ ಕರಣ್‌ನ ಶಾಪ್‌ ಇರುವುದು ರಾಜಾಜಿ ನಗರದಲ್ಲಿ. ಅವನು ಆ ಭಾಗದಲ್ಲಿ ದೊಡ್ಡ ಡಾಕ್ಟರ್‌ ನಂತೆ ಪೋಸು ಕೊಡುತ್ತಿದ್ದ. ಪೊಲೀಸರಿಗೆ ಆತನೂ ಹಸುಗೂಸು ಮಾರಾಟ ಜಾಲದಲ್ಲಿ ಭಾಗಿಯಾಗಿರುವ ಮಾಹಿತಿ ಸಿಗುತ್ತಿದ್ದಂತೆಯೇ ಆತನನ್ನು ಬಂಧಿಸಿದ್ದಾರೆ.


ವಿಚಾರಣೆಯ ವೇಳೆ ಆತನ ನಿಜವಾದ ಮುಖ ಬಯಲಾಗಿದೆ. ಅಸಲಿಗೆ ಅವನು ಎಂಬಿಬಿಎಸ್‌ ಓದೇ ಇಲ್ಲ. ನೀನು ಡಾಕ್ಟರ್‌ ಅಲ್ವಾ? ಎಲ್ಲಿದೆ ಸರ್ಟಿಫಿಕೇಟ್‌ ಎಂದು ಕೇಳಿದರೆ ಥರ್ಡ್‌ ಇಯರ್‌ ಆಗಿದೆ. ಈಗಲೂ ಕಲೀತಾ ಇದೇನೆ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ನಿಜವೆಂದರೆ, ಅವನು ಎಂಬಿಬಿಎಸ್‌ ಕಲಿತದ್ದೂ ಇಲ್ಲ, ವಿದ್ಯಾರ್ಥಿಯೂ ಅಲ್ಲ. ಅವನು ಓದಿದ್ದು ಬರೀ ಎಸ್‌ಎಸ್‌ಎಲ್‌ಸಿ ಮಾತ್ರ. ಅದೂ ಕೂಡಾ ಹೈಸ್ಕೂಲ್‌ಗೆ ಹೋಗಿ ಕಲಿತದ್ದೂ ಅಲ್ಲ ಅವನು ಓದಿದ್ದು ಬರೀ ಎಸ್‌ಎಸ್‌ಎಲ್‌ಸಿ ಮಾತ್ರ. ಅದೂ ಕೂಡಾ ಹೈಸ್ಕೂಲ್‌ಗೆ ಹೋಗಿ ಕಲಿತದ್ದೂ ಅಲ್ಲ. ಅವನು ಕರೆಸ್ಪಾಂಡೆನ್ಸ್‌ ನಲ್ಲಿ ಎಸ್ಸೆಸ್ಸೆಲ್ಸಿ ಮಾಡಿದ್ದು!


ಹಾಗಿದ್ದರೆ ಅವನು ಡಾಕ್ಟರ್‌ ಆಗಿದ್ದು ಹೇಗೆ?


ಎಸ್ಸೆಸ್ಸೆಲ್ಸಿಯನ್ನು ಹೇಗೋ ಪಾಸ್‌ ಮಾಡಿಕೊಂಡಿದ್ದ ಆತ ಬಳಿಕ ವಿಜಯನಗರದಲ್ಲಿ ಡಾಕ್ಟರ್ ಒಬ್ಬರ ಬಳಿ ಕಂಪೌಂಡರ್‌ ಕೆಲಸ ಮಾಡುತ್ತಿದ್ದ. ಈ ವೇಳೆ ಜ್ವರ ಕೆಮ್ಮು ನೆಗಡಿ, ಮೈ ಕೈ ನೋವು ಹೀಗೆ ಸಣ್ಣಪುಟ್ಟ ರೋಗಗಳಿಗೆ ಯಾವ ಮಾತ್ರೆ ನೀಡ್ತಾರೆ ಅಂತಾ ತಿಳ್ಕೊಂಡಿದ್ದ. ಅಸಲಿಗೆ ಡಾಕ್ಟರ್‌ ಬರೆದುಕೊಡುತ್ತಿದ್ದ ಮಾತ್ರೆಗಳನ್ನು ಇವನೇ ರೋಗಿಗಳಿಗೆ ನೀಡುತ್ತಿದ್ದ. ಬುದ್ಧಿವಂತನಾಗಿದ್ದ ಆತನಿಗೆ ಸಾಮಾನ್ಯ ಸಣ್ಣ ಪುಟ್ಟ ರೋಗಗಳಿಗೆ ಯಾವ ಔಷಧ ಕೊಡಬಹುದು ಎಂಬುದನ್ನು ನೋಡಿ ನೋಡಿಯೇ ಅರ್ಥ ಮಾಡಿಕೊಂಡಿದ್ದ.


ಅಲ್ಲಿ ಕೆಲಸ ಮಾಡಿಕೊಂಡಿದ್ದ ಆತ ಕೆಲವು ಸಮಯದಲ್ಲಿ ಕೆಲಸ ಬಿಟ್ಟಿದ್ದ. ಅಲ್ಲಿ ಕೆಲಸ ಬಿಟ್ಟವನೇ ನೇರವಾಗಿ ರಾಜಾಜಿ ನಗರದಲ್ಲಿ ಕ್ಲಿನಿಕ್ ಇಟ್ಟಿದ್ದ. ರೋಗಿಗಳು ಕೂಡಾ ನಿಜವಾದ ಡಾಕ್ಟರ್ ಇರಬಹುದು ಅಂತಾ ಚೆಕ್ ಮಾಡಿಸಿಕೊಳ್ತಿದ್ದರು.


ಕೇವಲ 100 ರೂ. ಪಡೆದು ಪರೀಕ್ಷೆ ಮಾಡಿ ಔಷಧ ಚೀಟಿ ಕೊಡುತ್ತಿದ್ದ ಆತನ ಬಗ್ಗೆ ಪ್ರದೇಶದಲ್ಲಿ ಒಳ್ಳೆಯ ಮಾತೇ ಇತ್ತು. ಯಾಕೆಂದರೆ, ಆತ ಕೊಡುತ್ತಿದ್ದುದು ಬರೀ ಜ್ವರ ಮತ್ತು ಶೀತಕ್ಕೆ ಮಾತ್ರ ಔಷಧ. ಮೈಕೈ ನೋವಿಗೆ ಪೇನ್‌ ಕಿಲ್ಲರ್‌ ಕೊಡ್ತಿದ್ದ.!


ಸಿಸಿಬಿ ವಿಚಾರಣೆಯಲ್ಲಿ ನಕಲಿ ಡಾಕ್ಟರ್ ನ ಅಸಲಿ ಮುಖ ಅನಾವರಣವಾಗಿದ್ದು, ಇದೀಗ ಆತನ ಬಂಧನದ ಜತೆಗೆ ಕ್ಲಿನಿಕ್‌ನ್ನು ಕೂಡಾ ಸೀಜ್‌ ಮಾಡಿದ್ದಾರೆ.

Recent News


Leave a Comment: