ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ದೇವಳದೊಳಗೆ ಅನ್ಯಧರ್ಮೀಯ ವ್ಯಕ್ತಿಯಿಂದ ವೀಡಿಯೋ: ಆರೋಪ

Posted by Vidyamaana on 2023-06-26 16:23:44 |

Share: | | | | |


ದೇವಳದೊಳಗೆ ಅನ್ಯಧರ್ಮೀಯ ವ್ಯಕ್ತಿಯಿಂದ ವೀಡಿಯೋ: ಆರೋಪ

ಪುತ್ತೂರು: ಹಿಂದೂ ದೇವಸ್ಥಾನದ ಒಳಗೆ ಅನ್ಯಮತೀಯ  ವ್ಯಕ್ತಿ ಯಿಂದ ದೇವಸ್ಥಾನದ ಒಳಗೆ ಕ್ಯಾಮರಾ ಬಳಕೆ ನಿಷೇಧವಾಗಿದ್ದರೂ ಭಾವಚಿತ್ರ ತೆಗೆಯುತ್ತಿರುವುದು ಭಕ್ತರ ಗಮನಕ್ಕೆ ಬಂದಿದ್ದು ಪುತ್ತಿಲ ಪರಿವಾರ ತೀವ್ರವಾಗಿ ಖಂಡಿಸಿದೆ.

ಭಾವಚಿತ್ರ ತೆಗೆದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆಗೆ ಕಾರಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯಾದರೆ ದೇವಸ್ಥಾನದ ಆಡಳಿತ ಮಂಡಳಿ ನೇರ ಹೊಣೆಯಾಗಿರುತ್ತದೆ ಎಂದು ತಿಳಿಸಿದೆ.

ದೇವಸ್ಥಾನದಲ್ಲಿನ ಹಾಗೂ ಭಕ್ತರ ನಂಬಿಕೆಗೆ ಧಕ್ಕೆಯಾದಲ್ಲಿ ಪುತ್ತಿಲ ಪರಿವಾರದಿಂದ ತೀವ್ರ ಹೋರಾಟ ನಡೆಸಲಾಗುವುದು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತಿಲ ಪರಿವಾರ ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿದೆ ಈ ವೇಳೆ ಪುತ್ತಿಲ ಪರಿವಾರದ ನಗರಾಧ್ಯಕ್ಷರಾದ ಅನಿಲ್ ತೆಂಕಿಲ, ಪುತ್ತಿಲ ಪರಿವಾರ ಪುತ್ತೂರು ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲು, ಪುತ್ತಿಲ ಪರಿವಾರದ ಪ್ರಮುಖರಾದ ಪ್ರವೀಣ್ ತಿಂಗಳಾಡಿ, ಪ್ರವೀಣ್ ಶೆಟ್ಟಿ, ರೂಪೇಶ್ ನಾಯ್ಕ್, ಮನೀಶ್, ಕೆ.ಪಿ. ಶೆಟ್ಟಿ  ಮಹಬಲ ಉಪಸ್ಥಿತರಿದ್ದರು.

ಲೈವ್‌ ರಿಪೋರ್ಟ್‌ ನೀಡುವಾಗಲೇ ವರದಿಗಾರ್ತಿ ಹಿಂದೆ ಬಾಂಬ್‌ ಸ್ಪೋಟ: ವಿಡಿಯೋ ವೈರಲ್

Posted by Vidyamaana on 2023-10-08 15:29:00 |

Share: | | | | |


ಲೈವ್‌ ರಿಪೋರ್ಟ್‌ ನೀಡುವಾಗಲೇ ವರದಿಗಾರ್ತಿ ಹಿಂದೆ ಬಾಂಬ್‌ ಸ್ಪೋಟ: ವಿಡಿಯೋ ವೈರಲ್

ಗಾಜಾಪಟ್ಟಿ: ಇಸ್ರೇಲ್‌ ಪಡೆ ಹಾಗೂ ಹಮಾಸ್‌ ನಡುವಿನ ಸಂಘರ್ಷದಿಂದ ಜರ್ಝರಿತವಾಗಿರುವ ಗಾಜಾ ಪಟ್ಟಿಯಲ್ಲಿ ಅಲ್‌ -ಜಝೀರಾ ವರದಿಗಾರ್ತಿ ಲೈವ್‌ ರಿಪೋರ್ಟಿಂಗ್‌ ಮಾಡುತ್ತಿರುವಾಗಲೇ ಆಕೆಯ ಹಿಂದೆ ಇರುವ ಕಟ್ಟಡದ ಮೇಲೆ ಬಾಂಬ್‌ ದಾಳಿ ನಡೆದಿದೆ.

ಲೈವ್‌ ರಿಪೋರ್ಟ್‌ ನೀಡುವಾಗಲೇ ವರದಿಗಾರ್ತಿ ಹಿಂದೆ ಬಾಂಬ್‌ ಸ್ಪೋಟ: ವಿಡಿಯೋ ವೈರಲ್


ಆಕೆಯ ಹಿಂದಿರುವ ಬಹು ಮಹಡಿ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.ಅಲ್‌ ಜಝೀರಾ ವರದಿಗಾರ್ತಿ ಸಂಘರ್ಷಮಯ ನೆಲದಲ್ಲಿ ನಿಂತು ವರದಿಯನ್ನು ಮಾಡುತ್ತಿದ್ದರು. ಈ ವೇಳೆ ಬಾಂಬ್‌ ಸ್ಪೋಟ ನಡೆದಿದೆ. ವರದಿಗಾರ್ತಿ ಆತಂಕದಿಂದ ಕಿರುಚಿದ್ದು, ಆಕೆಯನ್ನು ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ನಿರೂಪಕ ಸೂಚಿಸಿದ್ದಾನೆ.


ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ: ಡಾ. ಜೆ ಸಿ ಅಡಿಗ


BREAKING : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 10 ಜನರು ಅರೆಸ್ಟ್ : ಪೊಲೀಸ್ ಆಯುಕ್ತ ದಯಾನಂದ್‌ ಸ್ಪಷ್ಟನೆ

Posted by Vidyamaana on 2024-06-11 11:27:24 |

Share: | | | | |


BREAKING : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 10 ಜನರು ಅರೆಸ್ಟ್ : ಪೊಲೀಸ್ ಆಯುಕ್ತ ದಯಾನಂದ್‌ ಸ್ಪಷ್ಟನೆ

ಬೆಂಗಳೂರು  : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ದಯಾನಂದ್‌ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ದಯಾನಂದ್, ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬವರ ಕೊಲೆ ಕೇಸ್‌ನಲ್ಲಿ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.


ಎರಡು ದಿನಗಳ ಹಿಂದೆ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಅಪರಿಚಿತ ಮೃತ ದೇಹ ಸಿಕ್ಕಿತ್ತು. ಈ ಹಿನ್ನೆಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಇದೇ ಪ್ರಕರಣ ಸಂಬಂಧ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಸೋಶಿಯಲ್‌ ಮೀಡಿಯಾದಲ್ಲಿ ಪವಿತ್ರಗೌಡಗೆ ಅಶ್ಲೀಲವಾಗಿ ಪದೇಪದೇ ಮೆಸೇಜ್‌ ಮಾಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಸಿಟ್ಟಿಗೆದ್ದ ನಟ ದರ್ಶನ್‌ ಸೇರಿದಂತೆ ಇತರ ಗೆಳೆಯರು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆಸಿಕೊಂಡಿದ್ದರು. ನಟ ದರ್ಶನ್‌ ಸೇರಿ ಹಲವರು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮೂರಿಯಲ್ಲಿ ಎಸೆಯಲಾಗಿದೆ ಎಂದು ಹೇಳಲಾಗಿದೆ. ಜೂನ್‌ 8 ರಂದು ಕೊಲೆ ಮಾಡಿ ಶವವನ್ನು ಮೂರಿಯಲ್ಲಿ ಎಸೆಯಲಾಗಿತ್ತು.

ಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

Posted by Vidyamaana on 2023-06-21 05:10:54 |

Share: | | | | |


ಬೆಳ್ತಂಗಡಿ : ಸರಕಾರಿ ಬಸ್ - ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸಾವು

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲೇ ಸಾವನ್ನಪ್ಪಿದ ಘಟನೆ ಜೂ 20 ಬೆಳಿಗ್ಗೆ ಗರ್ಡಾಡಿ ಬಳಿ ನಡೆದಿದೆ.ಪಡಂಗಡಿ ಸಮೀಪದ ಒಡಿಲು ಎಂಬಲ್ಲಿಯ ದಿಕ್ಷೀತ್ ತನ್ನ ಹುಟ್ಟು ಹಬ್ಬದ ಪ್ರಯುಕ್ತ ವೇಣೂರು ದೇವಸ್ಥಾನಕ್ಕೆ ಹೋಗಿ ಹಿಂದಿರುಗುತ್ತಿದ್ದಾಗ ಧರ್ಮಸ್ಥಳದಿಂದ ಹುಬ್ಬಳ್ಳಿಗೆ ತೆರಳುತಿದ್ದ ಬಸ್ ಗರ್ಡಾಡಿ ಬಳಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಕಳೆದ ಕೆಲವು ಸಮಯಗಳ ಹಿಂದೆ ಇದೇ ಜಾಗದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

BREAKING : ಪೋಕೋ ಪ್ರಕರಣದಲ್ಲಿ ಬಿಎಸ್‌ವೈಗೆ ಬಂಧನದ ಭೀತಿ : ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ಕೋರ್ಟ್

Posted by Vidyamaana on 2024-06-13 17:16:18 |

Share: | | | | |


BREAKING : ಪೋಕೋ ಪ್ರಕರಣದಲ್ಲಿ ಬಿಎಸ್‌ವೈಗೆ ಬಂಧನದ ಭೀತಿ : ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ಕೋರ್ಟ್

ಬೆಂಗಳೂರು : ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಇದೀಗ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ ಬೆಂಗಳೂರಿನ ಒಂದನೇ ತ್ವರಿತಗತಿ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ.

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ ಎಸಗಿದ ಆರೋಪದಡಿ ಬಿಎಸ್ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾರ್ಚ್​ ತಿಂಗಳಲ್ಲಿ ಎಫ್​ಐಆರ್ ದಾಖಲಾಗಿತ್ತು.

ಸಂಪ್ಯ : ರಿಕ್ಷಾ ತಂಗುದಾಣಕ್ಕೆ ಶಾಸಕರಿಂದ ಅನುದಾನ: ಚಾಲಕರ ಹರ್ಷ

Posted by Vidyamaana on 2024-01-04 21:42:43 |

Share: | | | | |


ಸಂಪ್ಯ : ರಿಕ್ಷಾ ತಂಗುದಾಣಕ್ಕೆ ಶಾಸಕರಿಂದ ಅನುದಾನ: ಚಾಲಕರ ಹರ್ಷ

ಪುತ್ತೂರು: ಸಂಪ್ಯ ಠಾಣೆಯ ಮುಂಭಾಗದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣಕ್ಕೆ ಶಾಸಕರಾದ ಅಶೋಕ್ ರೈ ಯವರು ರೂ 5 ಲಕ್ಷ ಅನುದಾನ ಮೀಸಲಿರಿಸಿದ್ದು ಶಾಸಕರರಿಗೆ ಚಾಲಕರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ರಿಕ್ಷಾ ತಂಗುದಾಣ ನಿರ್ಮಾಣವಾಗಬೇಕೆಂಬ ಬೇಡಿಕೆ ಈ ಬಾರಿ ಈಡೇರಿದೆ ಎಂದು ಚಾಲಕರು ಹರ್ಷ ವ್ಯಕ್ತಪಡಿಸಿದರು.

ಆಟೋ ಚಾಲಕ ಮಾಲಕರ ಸಂಘ ಸಂಪ್ಯ ಹಾಗೂ ಗೆಳೆಯರ ಬಳಗ ಸಂಪ್ಯ ಇದರ ಸಭೆಯು ಸಂಪ್ಯದಲ್ಲಿ ನಡೆಯಿತು.‌ಸಭೆಯಲ್ಲಿಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಶೋಕ್,ಸಲಾಂ ಸಂಪ್ಯ, ರಾಮಕೃಷ್ಣ ಕೊಟ್ಟಾರ್,ಶಾಂತಪ್ಪ, ವಿಠಲ. ಲಿಂಗಪ್ಪ ಗೌಡ,ಖಾದರ್, ದೀಕ್ಷಿತ್, ಕರೀಂ ಶರೀಫ್, ಸದಾಶಿವ,ಹರೀಶ್ ಬಾರಿಕೆ,ನಾರಾಯಣ,ಸುರೇಶ್ ಒಊಜಾರಿ,ರಮೇಶ್ ಬಾರಿಕೆ,ಪ್ರಶಾಂತ್ ರೈ,ಇಸ್ಮಾಯಿಲ್ ವಾಗ್ಳೆ,ಮಂಜಪ್ಪ ಗೌಡ,ಮೊಯಿದಿನ್ ಅರಫಾ,ನಾರಾಯಣ ತಿಂಗಳಾಡಿ ಮತ್ತಿತರರು ಉಪಸ್ಥಿತರಿದ್ದರು.



Leave a Comment: