ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಸೆ 10 : ಬೆಂಗಳೂರಲ್ಲಿ ಎಸ್ಸೆಸ್ಸಫ್ ಗೋಲ್ಡನ್ ಫಿಫ್ಟಿ ಸಮಾವೇಶ

Posted by Vidyamaana on 2023-09-09 19:25:42 |

Share: | | | | |


ಸೆ 10 : ಬೆಂಗಳೂರಲ್ಲಿ ಎಸ್ಸೆಸ್ಸಫ್ ಗೋಲ್ಡನ್ ಫಿಫ್ಟಿ ಸಮಾವೇಶ

ಪುತ್ತೂರು : ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ( ಎಸ್ಸೆಸ್ಸಫ್ ) ಇದರ ಐವತ್ತನೇ ವರ್ಷಾಚರಣೆಯ ಪ್ರಯುಕ್ತ ಗೋಲ್ಡನ್ ಫಿಫ್ಟಿ ಸಮಾವೇಶವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿದೆ.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ನಾಯಕರು, ಚಿಂತಕರು ಭಾಗವಹಿಸಲಿದ್ದಾರೆ.

ಈ ಸಮಾವೇಶದಲ್ಲಿ ಪುತ್ತೂರು ತಾಲ್ಲೂಕಿನಿಂದ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಮುಸ್ಲಿಂ ಜಮಾಅತ್, ಎಸ್‌ವೈಎಸ್ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಗೋಲ್ಡನ್ ಫಿಫ್ಟಿ ಸಮಾವೇಶದ ಸಮಾರೋಪ ಸಮಾರಂಭ ನವಂಬರ್ 23,24,25 ರಂದು ಮುಂಬೈಯ ಏಕತಾ ಮೈದಾನದಲ್ಲಿ ನಡೆಯಲಿದೆ ಎಂದು ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ನಾಯಕರು ತಿಳಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಮಳೆಗೆ ಮತ್ತೊಂದು ಬಲಿ: ವಿದ್ಯುತ್‌ ಪ್ರವಹಿಸಿ ಯುವತಿ ದುರ್ಮರಣ

Posted by Vidyamaana on 2024-06-27 22:16:16 |

Share: | | | | |


ದಕ್ಷಿಣ ಕನ್ನಡದಲ್ಲಿ ಮಳೆಗೆ ಮತ್ತೊಂದು ಬಲಿ: ವಿದ್ಯುತ್‌ ಪ್ರವಹಿಸಿ ಯುವತಿ ದುರ್ಮರಣ

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಮಳೆಯಿಂದಾಗಿ ಮತ್ತೊಂದು ಬಲಿಯಾಗಿದೆ. ಕಂಬವನ್ನು ಮುಟ್ಟಿದ ಪರಿಣಾಮ, ವಿದ್ಯುತ್ ಪ್ರವಹಿಸಿ ಯುವತಿಯೊಬ್ಬಳು ದುರ್ಮರಣ ಹೊಂದಿರೋದಾಗಿ ತಿಳಿದು ಬಂದಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ಮಳೆಗೆ ಬರ್ಗುಲಾ ನಿವಾಸಿ ಪ್ರತೀಕ್ಷಾ ಶೆಟ್ಟಿ(20) ಸಾವನ್ನಪ್ಪಿದ್ದಾರೆ.

BREAKING : ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್ ಬೆನ್ನಲ್ಲೇ ಪವಿತ್ರ ಗೌಡ ಅರೆಸ್ಟ್

Posted by Vidyamaana on 2024-06-11 11:37:30 |

Share: | | | | |


BREAKING : ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್ ಬೆನ್ನಲ್ಲೇ ಪವಿತ್ರ ಗೌಡ ಅರೆಸ್ಟ್

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.

ಇದೀಗ ಪವಿತ್ರಗೌಡರನ್ನು ವಶಕ್ಕೆ ಪಡೆಯಲಾಗಿದೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರ್‌ .ಆರ್.‌ ನಗರ ಪೊಲೀಸರು ಇದೀಗ ಪವಿತ್ರಗೌಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಸೋಶಿಯಲ್‌ ಮೀಡಿಯಾದಲ್ಲಿ ಪವಿತ್ರಗೌಡಗೆ ಅಶ್ಲೀಲವಾಗಿ ಪದೇಪದೇ ಮೆಸೇಜ್‌ ಮಾಡುತ್ತಿದ್ದ ಎನ್ನಲಾಗಿದ್ದು, ಇದರಿಂದ ಸಿಟ್ಟಿಗೆದ್ದ ನಟ ದರ್ಶನ್‌ ಸೇರಿದಂತೆ ಇತರ ಗೆಳೆಯರು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕರೆಸಿಕೊಂಡಿದ್ದರು. ನಟ ದರ್ಶನ್‌ ಸೇರಿ ಹಲವರು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮೂರಿಯಲ್ಲಿ ಎಸೆಯಲಾಗಿದೆ ಎಂದು ಹೇಳಲಾಗಿದೆ. ಜೂನ್‌ 8 ರಂದು ಕೊಲೆ ಮಾಡಿ ಶವವನ್ನು ಮೂರಿಯಲ್ಲಿ ಎಸೆಯಲಾಗಿತ್ತು. ಜೂನ್‌ 9 ರಂದು ಶವವನ್ನು ನಾಯಿಗಳು ಎಳೆದಾಡುತ್ತಿದ್ದಾಗ ಶವ ಪತ್ತೆಯಾಗಿದೆ.

ನಟ ದರ್ಶನ್‌ ಸೇರಿ ಹಲವರು ರೇಣುಕಾಸ್ವಾಮಿ ಅವರ ಮರ್ಮಾಂಗಕ್ಕೆ ಹೊಡೆದು, ಒದ್ದು ಹಲ್ಲೆ ನಡೆಸಿದ್ದರು. ಕೊಲೆ ಮಾಡಿದ ಆರೋಪಿಗಳ ಜತೆ ದರ್ಶನ್‌ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಈಗ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ: ಕರಿಮಣಿ ಸರ ಕಳ್ಳತನ-ತಮಿಳುನಾಡು ಮೂಲದ ಇಬ್ಬರು ಕಳ್ಳಿಯರ ಬಂಧನ

Posted by Vidyamaana on 2023-12-21 11:45:36 |

Share: | | | | |


ಬೆಳ್ತಂಗಡಿ: ಕರಿಮಣಿ ಸರ ಕಳ್ಳತನ-ತಮಿಳುನಾಡು ಮೂಲದ ಇಬ್ಬರು ಕಳ್ಳಿಯರ ಬಂಧನ

ಬೆಳ್ತಂಗಡಿ: ಉದ್ಯೋಗಿಯೊಬ್ಬರು ಸರಕಾರಿ ಬಸ್‌ ಹತ್ತುವ ವೇಳೆ ಕರಿಮಣಿ ಸರ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮೂಲದ ಇಬ್ಬರು ಕಳ್ಳಿಯರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.ತಮಿಳುನಾಡು ತಿರುಪುರ್‌ ಜಲ್ಲೆಯ ಮೋಹಿನಿ ಯಾನೆ ಮಾರಿಮುತ್ತು (35) ಮತ್ತು ದಿವ್ಯಾ ಯಾನೆ ಕಾಮಾಚಿ (30) ಬಂಧಿತ ಆರೋಪಿಗಳು.


ಡಿ. 12ರಂದು ಸರಕಾರಿ ಉದ್ಯೋಗಿ ವಾರಿಜಾ ಅವರು ಧರಿಸಿದ್ದ 24 ಗ್ರಾಂ ತೂಕದ ಚಿನ್ನದ ಕರಿಮಣಿ ಸರವು ಸರಕಾರಿ ಬಸ್‌ ಹತ್ತುವ ವೇಳೆ ಕಳ್ಳತನವಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.


ವಾರಿಜಾ ಅವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದೀಗ ಬೆಳ್ತಂಗಡಿ ಉಪ ನಿರೀಕ್ಷಕ ಚಂದ್ರಶೇಖರ್‌ ಮತ್ತು ಅವರ್ ತಂಡ ಖಚಿತ ಮಾಹಿತಿ ಮೇರೆಗೆ ತಮಿಳುನಾಡು ಮೂಲದ ಇಬ್ಬರು ಕಳ್ಳಿಯರನ್ನು ಡಿ. 20ರಂದು ಧರ್ಮಸ್ಥಳ ಕೆಎಸ್ ಆರ್ ಟಿಸಿ ಬಸ್‌ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ ಕರಿಮಣಿ ಸರವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.


ಆರೋಪಿಗಳಿಬ್ಬರ ಮೇಲೆ ಈ ಹಿಂದೆ ಬೆಳ್ತಂಗಡಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿವೆ. ಇನ್ನು ಆರೋಪಿಗಳು ವಿಚಾರಣೆ ವೇಳೆ ಮೂಲ್ಕಿ ಮತ್ತು ಬೆಳ್ತಂಗಡಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.


ಆರೋಪಿಗಳನ್ನು ಡಿ. 20 ನ್ಯಾಯಾಧೀಶರ ಬಳಿ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಏಷ್ಯಾ ಇಂಟರ‍್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೊಳ್ತಿಗೆಯ ಮಹೇಶ್ ಡಿಗೆ ಡಾಕ್ಟರೇಟ್

Posted by Vidyamaana on 2024-01-31 15:46:15 |

Share: | | | | |


ಏಷ್ಯಾ ಇಂಟರ‍್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ  ಕೆಪಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕೊಳ್ತಿಗೆಯ ಮಹೇಶ್ ಡಿಗೆ ಡಾಕ್ಟರೇಟ್

ಚಿತ್ರ ಡಾ. ಮಹೇಶ್ ಡಿ ಕೊಳ್ತಿಗೆ


ಪುತ್ತೂರು: ಕೆಪಿಜೆಪಿ ( ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಸಂಸ್ಥಾಪಕ ಮತ್ತು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಪುತ್ತೂರು ತಾಲೂಕು ಕೊಳ್ತಿಗೆ ನಿವಾಸಿ ಮಹೇಶ್ ಡಿ ಅವರಿಗೆ ಏಷ್ಯಾ ಇಂಟರ‍್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.


  ಸ್ವಾಮಿ ವಿವೇಕಾನಂದ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಇವರು ಮಲೆನಾಡು  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುತ್ತೂರು ಹೋಬಳಿ ಕೊಳ್ತಿಗೆ ಗ್ರಾಮದ ಸಣ್ಣ ರೈತ ಕೃಷಿ ಭೂಮಿಕ ಜಮೀನುದಾರ ತಂದೆ ದುಗ್ಗಪ್ಪ ಗೌಡ  ತಾಯಿ ನೀಲಮ್ಮ ದಂಪತಿಗೆ ೯ ಜನ ಮಕ್ಕಳಲ್ಲಿ ೫ ಗಂಡು ಮಕ್ಕಳು ನಾಲ್ಕು ಹೆಣ್ಣು ಮಕ್ಕಳು ಎಂಟನೇಯವರಾಗಿ ೧೯೬೯ರಲ್ಲಿ ಜನಿಸಿದ ಮಹೇಶ್ ಡಿ. ವಿದ್ಯಾಭ್ಯಾಸದಲ್ಲಿ ಹತ್ತನೇ ತರಗತಿ  ಓದಿದ್ದು ತಮ್ಮ ಹದಿನಾರನೇ ವಯಸ್ಸಿಗೆ ೧೯೮೬ರಲ್ಲಿ ಬೆಂಗಳೂರಿನ ಹೆಗ್ಗನಹಳ್ಳಿ ಗೆ ಬಂಧು ನೆಲೆಯೂರಿ ಸಣ್ಣ ಕೈಗಾರಿಕೆ ಕಂಪನಿಯಲ್ಲಿ ಕೆಲಸ ಮಾಡುತ್ತಾ ಬೆಳೆಯುತ್ತಾ ತನ್ನದೇ ಆದ ಸಣ್ಣ ಕಂಪನಿ ಫ್ಯಾಬ್ರಿಕೇಷನ್, ಪ್ಲಾಸ್ಟಿಕ್ ಕೋಟಿಂಗ್ ಮತ್ತು ಪೌಡರ್ ಕೋಟರ್ ಫ್ಯಾಕ್ಟರಿ ಮಾಡಿಕೊಂಡು ನೂರಾರು ಕಾರ್ಮಿಕರಿಗೆ ಆಶ್ರಯದಾತರಾಗಿದ್ದು ಜೊತೆಗೆ ಸ್ವಾಮಿ ವಿವೇಕಾನಂದ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್ , ಕೆಂಪೇಗೌಡ ಯುವಕರ ಸಂಘ ರಚಿಸಿ, ಜೊತೆಗೆ ೨೦೧೭ರಲ್ಲಿ ರಾಜಕೀಯ ಪಕ್ಷ   (ಕೆಪಿಜೆಪಿ ) ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪನೆ ಮಾಡಿ ೨೦೧೮ ರಾಜ್ಯದಲ್ಲಿ ವಿಧಾನಸಭೆಗೆ ೪೫ ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ದಾವಣಗೆರೆ ಜಿಲ್ಲೆ ರಾಣೆಬೆನ್ನೂರ ತಾಲೂಕಿನ ಆರ್. ಶಂಕರ್ ವರನ್ನು  ಗೆಲ್ಲಿಸಿ, ಕರ್ನಾಟಕ ರಾಜ್ಯದಲ್ಲಿ ಹೊಸ ಪಕ್ಷವು,ಮೊದಲ ಬಾರಿಗೆ ಶಾಸಕರಾಗಿ ಸಚಿವರನ್ನಾಗಿ ಮಾಡಿದ್ದು ಇತಿಹಾಸವೇ ಸರಿ. ಕಾಂಗ್ರೆಸ್ಸಿನ  ಹಾಗೂ ಕುಮಾರಸ್ವಾಮಿಯ ಜೆ.ಡಿ ಎಸ್. ಸಮ್ಮಿಶ್ರ ಸರ್ಕಾರದ ಕ್ಯಾಬಿನೆಟ್ ನಲ್ಲಿ ಅರಣ್ಯ ಸಚಿವರನ್ನಾಗಿ ನಂತರ ಬಿಜೆಪಿಯ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಪೌರಾಡಳಿತ ಸಚಿವರಾಗಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ . ಹಾಗೆ ೨೦೧೮ ರಲ್ಲಿ ರಾಣಿಬೆನ್ನೂರು ನಗರಸಭೆಯಲ್ಲಿ ಹತ್ತು ಜನ ಕೌನ್ಸಿಲರ್ಗಳಾಗಿ ಆಯ್ಕೆಯಾಗುವಲ್ಲಿ ಮಹೇಶ್ ಡಿ ಅವರ ಪಾತ್ರ ಮಹತ್ತರವಾದದ್ದು.


 ನಿರಂತರ ೩೫ ವರ್ಷದಿಂದ ಬಡ ಕಾರ್ಮಿಕರಿಗೆ ಬಡ ಮಕ್ಕಳ ಶಿಕ್ಷಣಕ್ಕಾಗಿ ಸಹಾಯ ಮಾಡುತ್ತಾ ಸೇವೆ ಮಾಡುತ್ತಿರುವದು ಒಂದು ಕಡೆ ಆದರೆ  ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಆಧ್ಯಾತ್ಮಿಕವಾಗಿ  ಇವರ ಸೇವೆ ಅಪಾರ.


  ಇವರ ಸೇವೆಯನ್ನು ಗುರುತಿಸಿ ಬೆಂಗಳೂರಿನ ಹಲವಾರು ಸಂಘ ಸಂಸ್ಥೆಯಿಂದ "ಪುತ್ತೂರಿನ ಮುತ್ತು" ಎಂಬ ಬಿರುದು ನೀಡಿದ್ದಾರೆ. ಜೊತೆಗೆ ಹಲವಾರು ಸಂಘ-ಸಂಸ್ಥೆ ಶಿಕ್ಷಣ ಸಂಸ್ಥೆ ಸಾಮಾಜಿಕವಾಗಿ ರಾಜಕೀಯವಾಗಿ ಬಿರುದುಗಳು  ಲಭಿಸಿದೆ.


 ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರೂ ಇವರು ಮಾಡಿರುವ ಸಮಾಜ ಸೇವೆಗಳು: ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ  ವಿದ್ಯಾರ್ಥಿನಿಯರಿಗೆ ಧನ ಸಹಾಯ


 ಹೆಣ್ಮಕ್ಕಳಿಗೆ ಸೀರೆ  ಬಟ್ಟೆ ಬಾಗಿನ ಸೀಮಂತ ಕಾರ್ಯಕ್ರಮಗಳು, ವೃದ್ಧೆ , ವೃದ್ಧರಿಗೆ ಬಟ್ಟೆ ಕಂಬಳಿ ಬೆಡ್ ಶೀಟ್ ಕೈಕೊಲು ಧಾರ್ಮಿಕ ದೇವಸ್ಥಾನದ ಪ್ರವಾಸ, ಸ್ವಚ್ಛ ಭಾರತ ಆಂದೋಲನ ಹಮ್ಮಿಕೊಂಡು ೪೦೦೦ ಜನರ ಮನೆಗಳಿಗೆ ಒಣ ಮತ್ತು ಹಸಿ ಕಸದ ಡಸ್ಟ್ ಪಿನ್ ವಿತರಣೆ,ಹೆಗ್ಗೆನಹಳ್ಳಿಯ ಮಾರಮ್ಮ ದೇವಿ ಗೆ ಉತ್ಸವ ಮೂರ್ತಿ  ಕೊಡುಗೆ, ಅಕ್ಕ ಪಕ್ಕದ ೪೦ ಶಾಲೆಗಳಿಗೆ ಪ್ರತಿಭಾ ಪುರಸ್ಕಾರ .


, ಪ್ರತಿವರ್ಷ ಜನವರಿ ೧೨ರಂದು ವಿವೇಕಾನಂದ ಜಯಂತಿಗೆ ಬೆಂಗಳೂರು ನಗರದ ಗೋಲೃರಹಟ್ಟಿಯಲ್ಲಿರುವ ಗಾಂಧಿ ವೃದ್ಧಾಶ್ರಮ ಮತ್ತು ಇತರ ಆಶ್ರಮಗಳಿಗೆ ಹಣ್ಣು ಹಂಪಲ ಅಕ್ಕಿ ವಿತರಣೆ.


, ಟ್ರಸ್ಟಿನಿಂದ ಅಪರಾಧ ತಡೆ ಬಗ್ಗೆ ೨೫೦೦೦ ಜಾಗೃತಿ ಪುಸ್ತಕ ವಿತರಣೆ, ಎಪ್ಪತ್ತು ಜನ ಬಡ ಮಕ್ಕಳಿಗೆ ಉಚಿತ ಬೋಧನಾ ಕೇಂದ್ರ ,ಮುಸಲ್ಮಾನರಿಗೆ ದರ್ಗಾ ಪ್ರವಾಸ ಕ್ರಿಸ್ಟಿ ಯನ್ನರಿಗೆ  ಚರ್ಚ್ ಪ್ರವಾಸ ..


,ಸಂಘದ ವಾರ್ಸಿಹೋತ್ಸವಕ್ಕೆ  ಸಾಂಸ್ಕೃತಿಕ ಕಾರ್ಯಕ್ರಮ  ಬಡ ಜನರಿಗೆ ವಾಕಿಂಗ್ ಸ್ಟಿಕ್ , ಸ್ಪೆಕ್ಸ್, ಆರೋಗ್ಯ ಶಿಬಿರ, ಬಡ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಡಿಕ್ಷನರಿ ವಿತರಣೆ, ಕೋವಿಡ್ ಸಮಯದಲ್ಲಿ ಹುಟ್ಟು ಊರಾದ ಕೊಳ್ತಿಗೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ವಾಸವಿರುವ ಬೆಂಗಳೂರಿನ ಬಡ ಸಂಸಾರಕ್ಕೆ ರೇಷನ್ ಕಿಟ್ , ಔಷಧಿ ಹಾಗೂ ಕೊರೊನದಿಂದ ಬಲಿಯಾದ ಕುಟುಂಬಗಳಿಗೆ ತಲಾ  ಇಪ್ಪತ್ತು ಸಾವಿರ ಸಹಾಯಧನ,ಕೊರನಾದಲ್ಲಿ ಪೊಲೀಸ್ ಠಾಣೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಸೇರಿದಂತೆ ೨೦೦೬ರಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಜಲ ಪ್ರವಾಹ ಮತ್ತು ಮಡಿಕೇರಿಯಲ್ಲಿ ನಡೆದ ಭೀಕರ ಭೂಕಂಪದಲ್ಲಿ ನಿರಾಶ್ರಿತರಿಗೆ ಬಟ್ಟೆ ದವಸ ಧಾನ್ಯಗಳನ್ನು ಲಾರಿ ಟ್ರಕ್ ಗಳಿಂದ ಪ್ರವಾಸ ಮಾಡಿ ವಿತರಣೆ ಸೇರಿ ಇವರು ಮಡಿರುವ ಸಮಾಜ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಮರ ಕಡಿಯುವಾಗ ಮೈ ಮೇಲೆ ಮರ ಬಿದ್ದು ರಾಮಣ್ಣ ಗೌಡ ಮೃತ್ಯು

Posted by Vidyamaana on 2023-09-23 15:19:22 |

Share: | | | | |


ಮರ ಕಡಿಯುವಾಗ ಮೈ ಮೇಲೆ ಮರ ಬಿದ್ದು ರಾಮಣ್ಣ ಗೌಡ ಮೃತ್ಯು

ಬೆಳ್ತಂಗಡಿ : ಮನೆಯ ಪಕ್ಕದಲ್ಲಿದ್ದ ಮರ ಕಡಿಯುವ ಸಂಧರ್ಭದಲ್ಲಿ ಆಕಸ್ಮಿಕವಾಗಿ ಮರ ವ್ಯಕ್ತಿಯ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆರಿಯದಲ್ಲಿ ಸ.23 ರಂದು ಬೆಳಗ್ಗೆ 10-30ಕ್ಕೆ ನಡೆದಿದೆ.


ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಮಂಜಲ್ಪಳಿಕೆ ನಿವಾಸಿ ರಾಮಣ್ಣ ಗೌಡ(58) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.ತಕ್ಷಣ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರೂ ಪ್ರಯೋಜವಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಅನಿಲ್ ಕುಮಾರ್ ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹವನ್ನು ಬೆಳ್ತಂಗಡಿ ಶವಗಾರಕ್ಕೆ ಸಾಗಿಸಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Leave a Comment: