ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಸುದ್ದಿಗಳು News

Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34

Share: | | | | |


ಕಾರು ಡಿಕ್ಕಿ: ಯುಕೆಜಿ ವಿದ್ಯಾರ್ಥಿ ಮಹಮ್ಮದ್ ಆದಿಲ್ ಮೃತ್ಯು

ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ‌. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.

ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

 Share: | | | | |


ನೌಕಾಪಡೆ ಕಮಾಂಡೋ ಗಳಿಂದ ಅಪಹರಣಕ್ಕೊಳಗಾದ ಹಡಗಿನಲ್ಲಿದ್ದ ಎಲ್ಲ15 ಭಾರತೀಯರ ರಕ್ಷಣೆ

Posted by Vidyamaana on 2024-01-05 20:36:21 |

Share: | | | | |


ನೌಕಾಪಡೆ ಕಮಾಂಡೋ ಗಳಿಂದ ಅಪಹರಣಕ್ಕೊಳಗಾದ ಹಡಗಿನಲ್ಲಿದ್ದ ಎಲ್ಲ15 ಭಾರತೀಯರ ರಕ್ಷಣೆ

ವದೆಹಲಿ: ಅರೇಬಿಯನ್ ಸಮುದ್ರದಲ್ಲಿ ಅಪಹರಣಕ್ಕೊಳಗಾದ ಹಡಗಿನಿಂದ ಎಲ್ಲಾ 15 ಭಾರತೀಯರನ್ನು ಭಾರತೀಯ ನೌಕಾಪಡೆಯ ಕಮಾಂಡೋಗಳು ರಕ್ಷಿಸಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ, ಯುದ್ಧನೌಕೆ ಐಎನ್‌ಎಸ್ ಚೆನ್ನೈ ಸೊಮಾಲಿ ಕರಾವಳಿಯಲ್ಲಿ ಅಪಹರಣಕ್ಕೊಳಗಾದ ಹಡಗು ಎಂವಿ ಲೀಲಾ ನಾರ್ಫೋಕ್ನ್ನ ಸಮೀಪಿಸುತ್ತಿತ್ತು ಮತ್ತು ಅಪಹರಣಕ್ಕೊಳಗಾದ ಹಡಗನ್ನ ಬಿಡುಗಡೆ ಮಾಡುವಂತೆ ಭಾರತೀಯ ನೌಕಾಪಡೆ ಕಡಲ್ಗಳ್ಳರಿಗೆ ಎಚ್ಚರಿಕೆ ನೀಡಿತು.ಹಡಗಿನಲ್ಲಿದ್ದ ಭಾರತೀಯ ತಂಡ ಸುರಕ್ಷಿತವಾಗಿದೆ ಮತ್ತು ದರೋಡೆಕೋರರು ನೇರವಾಗಿ ಕೇಳದಿದ್ದರೆ, ಮೆರೈನ್ ಕಮಾಂಡೋ ಮಾರ್ಕೋಸ್ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.


ಸರಕು ಹಡಗು ಎಂವಿ ಲೀಲಾ ನಾರ್ಫೋಕ್ ಅನ್ನು ನಿನ್ನೆ ಸಂಜೆ ಸೊಮಾಲಿಯಾ ಕರಾವಳಿಯಲ್ಲಿ ಅಪಹರಿಸಲಾಗಿದೆ. ಇದ್ರಲ್ಲಿ 15 ಭಾರತೀಯರಿದ್ದರು.


ಹಡಗಿನಲ್ಲಿ ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಇದ್ದರು.!

ಅರೇಬಿಯನ್ ಸಮುದ್ರದಲ್ಲಿ ಈ ಕಡಲ ಘಟನೆಗೆ ಭಾರತೀಯ ನೌಕಾಪಡೆ ತ್ವರಿತವಾಗಿ ಪ್ರತಿಕ್ರಿಯಿಸಿದೆ, ಇದರಲ್ಲಿ ಲೈಬೀರಿಯನ್ ಧ್ವಜ ಹೊಂದಿರುವ ಹಡಗನ್ನು ಅಪಹರಿಸುವ ಪ್ರಯತ್ನ ನಡೆದಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ಸುಮಾರು ಐದರಿಂದ ಆರು ಅಪರಿಚಿತ ಸಶಸ್ತ್ರ ವ್ಯಕ್ತಿಗಳು ಹಡಗನ್ನು ಹತ್ತಿದ್ದಾರೆ ಎಂದು ಹಡಗು ಯುಕೆಎಂಟಿಒ ಪೋರ್ಟಲ್ಗೆ ಸಂದೇಶ ಕಳುಹಿಸಿದೆ ಎಂದು ಅವರು ಹೇಳಿದರು.

ನಿಮ್ಮ ಫ್ರೀ ಯುನಿಟ್ ಲೆಕ್ಕಾಚಾರ ಹೇಗೆ? – ಇಲ್ಲಿದೆ ಮಾಹಿತಿ

Posted by Vidyamaana on 2023-06-03 06:25:59 |

Share: | | | | |


ನಿಮ್ಮ ಫ್ರೀ ಯುನಿಟ್ ಲೆಕ್ಕಾಚಾರ ಹೇಗೆ? – ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ‘ಗ್ಯಾರಂಟಿ’ ಆಶ್ವಾಸನೆಗಳನ್ನು ಹಂತಹಂತವಾಗಿ ಜಾರಿಗೊಳಿಸುವ ನಿರ್ಧಾರವನ್ನು ಮಾಡಿದೆ. ಈ ಐದು ಗ್ಯಾರಂಟಿಗಳ ಪೈಕಿ ಇದೀಗ ಹೆಚ್ಚು ಚರ್ಚೆಗೆ ಒಳಗಾಗಿರುವುದು 200 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ. ಇದರ ಲೆಕ್ಕಾಚಾರ ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಈ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಮುಂದುವರೆದಿದೆ.


ಆದರೆ ನಿನ್ನೆ (ಜೂ.03) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿರುವ ಪ್ರಕಾರ, ಪ್ರತೀ ತಿಂಗಳು ವಿದ್ಯುತ್ ಬಳಕೆದಾರರು 200 ಯುನಿಟ್ ವರೆಗೆ ಬಳಸುವ ವಿದ್ಯುತ್ ಗೆ ಬಿಲ್ ಕಟ್ಟಬೇಕಾಗಿಲ್ಲ ಎನ್ನುವುದು ಸಂಪೂರ್ಣ ಸತ್ಯವಲ್ಲ! ಆದರೆ ಇದು ಪೂರ್ತಿ ಸುಳ್ಳೂ ಅಲ್ಲ! ಇಲ್ಲಿ ಸರಕಾರ ಒಂದು ಬುದ್ದಿವಂತಿಕೆಯನ್ನು ಬಳಸಿದೆ. ಒಂದು ಕುಟುಂಬ ಕಳೆದ 12 ತಿಂಗಳಿನಲ್ಲಿ ಎಷ್ಟು ವಿದ್ಯುತ್ ಬಳಸಿದೆ ಎಂದು ಸರಾಸರಿ ಲೆಕ್ಕ ತೆಗೆದು ಅವರ ಮೇಲೆ 10% ಯುನಿಟ್ ಸೇರಿಸಿ ಆ ಕುಟುಂಬದ ಕಟ್ ಆಫ್ ಯುನಿಟನ್ನು ಫಿಕ್ಸ್ ಮಾಡಲಾಗುತ್ತದೆ. ಆ ಯುನಿಟ್ ಆಧಾರದಲ್ಲಿ ಆ ಕುಟುಂಬಕ್ಕೆ ಜುಲೈ ತಿಂಗಳ ಬಿಲ್ಲಿನಿಂದ ಪ್ರಾರಂಭಗೊಳ್ಳುವಂತೆ ಆಗಸ್ಟ್ ತಿಂಗಳಿನಿಂದ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡಲಾಗುತ್ತದೆ.

*ಇದಕ್ಕೊಂದು ಉದಾಹರಣೆ ಲೆಕ್ಕ ಇಲ್ಲಿದೆ ನೋಡಿ..*

ಈ ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಯೂನಿಟ್ ಗಳನ್ನು ಒಟ್ಟಾಗಿ ಕೂಡಿಸಿ, ಅದನ್ನು 12 ರಿಂದ ಬಾಗಿಸಿ ಮತ್ತೆ 1.1 ರಿಂದ ಗುಣಿಸಿದಾಗ ಬರುವ ಮೊತ್ತದ ಒಳಗೆ ಈಗಿನ ನಿಮ್ಮ ಉಚಿತ ವಿದ್ಯುತ್ ಬಳಕೆಯ ಯೂನಿಟ್ ಇರತಕ್ಕದ್ದು. ಮತ್ತೆ ಅದು 200 ಯೂನಿಟ್ ಗಳನ್ನು ಮೀರಿರಬಾರದು.


*ಇದನ್ನು ಈ ಕೆಳಗಿನ ಉದಾಹರಣೆ ಮೂಲಕ ವಿವರಿಸಲಾಗಿದೆ:*

 ಸಾಮಾನ್ಯ ಮಧ್ಯಮ ಕುಟುಂಬದ ಉದಾಹರಣೆ 

ತಿಂಗಳು 1 -  180 ಯೂನಿಟ್ 

ತಿಂಗಳು 2 -  185 ಯೂನಿಟ್

ತಿಂಗಳು 3 -  185 ಯೂನಿಟ್

ತಿಂಗಳು 4 -  180 ಯೂನಿಟ್

ತಿಂಗಳು 5 -  185 ಯೂನಿಟ್

ತಿಂಗಳು 6 -  175 ಯೂನಿಟ್

ತಿಂಗಳು 7 -  180 ಯೂನಿಟ್ 

ತಿಂಗಳು 8 -  185 ಯೂನಿಟ್

ತಿಂಗಳು 9 -  185 ಯೂನಿಟ್

ತಿಂಗಳು 10 - 178 ಯೂನಿಟ್

ತಿಂಗಳು 11 - 180 ಯೂನಿಟ್

ತಿಂಗಳು 12 - 175 ಯೂನಿಟ್

ಒಟ್ಟು 2173 ಯೂನಿಟ್ಗಳು.

ಸರಾಸರಿ ಅಂದರೆ 2173/12= 181 ಯೂನಿಟ್ಗಳು. 10% ಹೆಚ್ಚವರಿ ಅಂದರೆ 181*1.1= 191 ಯೂನಿಟ್ಗಳು. ಹೀಗಿದ್ದಲ್ಲಿ ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಲು ಅರ್ಹರು..

ಬಡ ಕುಟುಂಬದ ಉದಾಹರಣೆ

ತಿಂಗಳು 1 -  70 ಯೂನಿಟ್ 

ತಿಂಗಳು 2 -  80 ಯೂನಿಟ್

ತಿಂಗಳು 3 -  60 ಯೂನಿಟ್

ತಿಂಗಳು 4 -  55 ಯೂನಿಟ್

ತಿಂಗಳು 5 -  65 ಯೂನಿಟ್

ತಿಂಗಳು 6 -  70 ಯೂನಿಟ್

ತಿಂಗಳು 7 -  85 ಯೂನಿಟ್ 

ತಿಂಗಳು 8 -  55 ಯೂನಿಟ್

ತಿಂಗಳು 9 -  70 ಯೂನಿಟ್

ತಿಂಗಳು 10 - 75 ಯೂನಿಟ್

ತಿಂಗಳು 11 - 80 ಯೂನಿಟ್

ತಿಂಗಳು 12 - 55 ಯೂನಿಟ್

ಒಟ್ಟು 820 ಯೂನಿಟ್ಗಳು.

ಸರಾಸರಿ ಅಂದರೆ 820/12= 68.3 ಯೂನಿಟ್ಗಳು. 10% ಹೆಚ್ಚವರಿ ಅಂದರೆ 68.3*1.1= 75 ಯೂನಿಟ್ಗಳು. ಹೀಗಿದ್ದಲ್ಲಿ ನೀವು 75 ಯೂನಿಟ್ ಉಚಿತ ವಿದ್ಯುತ್ ಬಳಸಲು ಮಾತ್ರ ಅರ್ಹರು. ನೀವು 200 ಯೂನಿಟ್ ಬಳಸುವಂತಿಲ್ಲ. 75 ಯೂನಿಟ್ ಗಿಂತ ಜಾಸ್ತಿ ಬಳಸಿದ್ದಲ್ಲಿ ಬಿಲ್ ಕಟ್ಟತಕ್ಕದ್ದು.

ಇದನ್ನು ಕ್ರಿಕೆಟ್ ನಲ್ಲಿ ಬಳಸುವ ಡಕ್ ವರ್ತ್ ಲೂಯಿಸ್ ನಿಯಮಕ್ಕೆ ಅನ್ವಯಿಸಿಕೊಳ್ಳಬಹುದೇನೋ. ಒಟ್ಟಿನಲ್ಲಿ ಈ ಲೆಕ್ಕಾಚಾರವವನ್ನು ಅರ್ಥಮಾಡಿಕೊಳ್ಳದೇ, ನಮಗೆ 200 ಯುನಿಟ್ ಫ್ರೀ ಎಂದು ಒಟ್ರಾಶಿ ಕರೆಂಟ್ ಯೂಸ್ ಮಾಡಿದ್ರೆ ನಿಮ್ಗೆ ‘ಶಾಕ್’ ಹೊಡೆಯೋದಂತೂ ಗ್ಯಾರಂಟಿ!

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 68 ನೇ ಕನ್ನಡ ರಾಜ್ಯೋತ್ಸವ

Posted by Vidyamaana on 2023-11-02 08:23:17 |

Share: | | | | |


ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ 68 ನೇ ಕನ್ನಡ ರಾಜ್ಯೋತ್ಸವ

ಪುತ್ತೂರು: ಕರ್ನಾಟಕ ಮರು ನಾಮಕರಣಗೊಂಡು 50ನೇ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ಭುವನೇಶ್ವರಿ ಮೆರವಣಿಗೆಯೊಂದಿಗೆ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಬುಧವಾರ ಆಚರಿಸಲಾಯಿತು.

ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಧೈಯ ವಾಕ್ಯದೊಂದಿಗೆ ನಡೆದ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಶಾಸಕ ಅಶೋಕ್ ಕುಮಾರ್ ರೈ ದರ್ಬೆ ವೃತ್ತದ ಬಳಿ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು. ಬಳಿಕ ಮೆರವಣಿಗೆ ಮುಖ್ಯರಸ್ತೆಯಲ್ಲಿ ಸಾಗಿ ಕೊರ್ಟ್‌ ರಸ್ತೆ ಮೂಲಕ ಪುರಭವನಕ್ಕೆ ತೆರಳಿತು. ಕಿಲ್ಲೆ ಮೈದಾನದಲ್ಲಿರುವ ಮಂಗಲ್ ಪಾಂಡೆ ಚೌಕಿಯಲ್ಲಿ ಸಹಾಯಕ ಕಮೀಷನರ್ ಗಿರೀಶ್ ನಂದನ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಶಾಸಕ ಅಶೋಕ್ ಕುಮಾರ್ ರೈ ಕನ್ನಡ ಧ್ವಜಾರೋಹಣ ಮಾಡಿದರು.


ಬಳಿಕ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ 10 ಮಂದಿ ವಿವಿಧ ಕ್ಷೇತ್ರದ ಸಾಧಕರಾದ ಹಿರಿಯ ಪ್ರಸೂತಿ ತಜ್ಞ ಡಾ.ಸುಬ್ರಾಯ ಭಟ್ (ವೈದ್ಯಕೀಯ), ಎ.ಪಿ.ನಾರಾಯಣ ಮರಿಕೆ (ಕೃಷಿ), ನಿರ್ಮಲಾ ಸುರತ್ಕಲ್ (ಸಾಹಿತ್ಯ), ನಾರಾಯಣ ಕೆ. (ಶಿಕ್ಷಣ), ದಯಾನಂದ ರೈ ಕೋರ್ಮಂಡ (ಕ್ರೀಡೆ), ಸುಂದರ ರೈ ಮಂದಾರ (ರಂಗಭೂಮಿ), ರೆ.ವಿಜಯ ಹಾರ್ವಿನ್ (ಶಿಕ್ಷಣ ಸಮನ್ವಯ), ಡಾ.ಅಜಯ್ (ಸಮಾಜ ಸೇವೆ), ನಾರಾಯಣ ಕುಂಬ್ರ (ಸಾಹಿತ್ಯ ಸಂಘಟನೆ), ಸಿದ್ದಿಕ್ ನಿರಾಜೆ (ಪತ್ರಿಕೋದ್ಯಮ) ಅವರನ್ನು ಕನ್ನಡ ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಬಳಿಕ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಕನ್ನಡಕ್ಕಾಗಿ ನೀಡಿದ ಪೂರ್ವಜರ ಕೊಡುಗೆ ಅಪಾರವಾಗಿದ್ದು, ಅದನ್ನು ನೆನಪಿಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ರಾಜ್ಯೋತ್ಸವದ ಮೂಲಕ ಕನ್ನಡ ಭಾಷೆಯ ಅಭಿಮಾನ, ಪ್ರೀತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದರು.ವೇದಿಕೆಯಲ್ಲಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ತಹಶೀಲ್ದಾರ್ ಶಿವಶಂಕರ ಜೆ., ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಉಪಸ್ಥಿತರಿದ್ದರು.


ಪವಿತ್ರಾ ರೂಪೇಶ್, ಸುಚಿತ್ರಾ ಹೊಳ್ಳ ಮತ್ತು ಬಳಗದವರು ಐದು ಕನ್ನಡದ ಹಾಡುಗಳನ್ನು ಪ್ರಸ್ತುತಪಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಸ್ವಾಗತಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

ಮದ್ವೆಯಾದ 9 ತಿಂಗಳಿಗೆ ಕ್ರಿಮಿನಾಶಕ ಸೇವಿಸಿ ಪತ್ನಿ ಸಾವು: ಆಕೆಯ ಸಮಾಧಿ ಬಳಿ ವಿಷ ಕುಡಿದ ಗಂಡ

Posted by Vidyamaana on 2024-01-28 15:33:22 |

Share: | | | | |


ಮದ್ವೆಯಾದ 9 ತಿಂಗಳಿಗೆ ಕ್ರಿಮಿನಾಶಕ ಸೇವಿಸಿ ಪತ್ನಿ ಸಾವು: ಆಕೆಯ ಸಮಾಧಿ ಬಳಿ ವಿಷ ಕುಡಿದ ಗಂಡ

ಹೈದರಾಬಾದ್​: ನವವಿವಾಹಿತೆಯೊಬ್ಬಳು ಕ್ರಿಮಿನಾಶಕ ಸೇವಿಸಿ ಸಾವಿಗೆ ಶರಣಾದ ಸುದ್ದಿ ಕೇಳಿ ಆಕೆಯ ಗಂಡನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ತೆಲಂಗಾಣದ ಆದಿಲಬಾದ್​ನಲ್ಲಿ ನಡೆದಿದೆ.ಮೃತ ನವದಂಪತಿಯನ್ನು ವಿಜಯ್​ (28) ಮತ್ತು ಪಲ್ಲವಿ (20) ಎಂದು ಗುರುತಿಸಲಾಗಿದೆ.ಕ್ರಿಮಿನಾಶಕ ಸೇವಿಸಿದ್ದ ಪಲ್ಲವಿಯನ್ನು ಆದಿಲಬಾದ್​ನಲ್ಲಿರುವ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್​)ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.


ಆದಿಲಬಾದ್​ ಪೊಲೀಸರ ಪ್ರಕಾರ ಪಲ್ಲವಿ, ಶುಕ್ರವಾರ ಕ್ರಿಮಿನಾಶಕ ಸೇವನೆ ಮಾಡಿದ್ದಳು. ಶನಿವಾರ ಬೆಳಗ್ಗೆ ಅಸುನೀಗಿದ್ದಾಳೆ. ಸಾವಿನ ಸುದ್ದಿ ಕೇಳಿದ ವಿಜಯ್​, ಎಲ್ಲರ ನಿಂದನೆಗೆ ಗುರಿಯಾಗಬೇಕಾಗುತ್ತದೆ ಎಂದು ಹೆದರಿ, ಕೀಟನಾಶಕ ಸೇವಿಸಿ ಮಣ್ಣು ಮಾಡುವ ಜಾಗಕ್ಕೆ ತೆರಳಿ ಪತ್ನಿಯ ಬಳಿಯಲ್ಲೇ ಕೊನೆಯುಸಿರೆಳೆದಿದ್ದಾನೆ. ಇಬ್ಬರು ಕಳೆದ ವರ್ಷ ಮೇ 23ರಂದು ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದರು.


ದಂಪತಿ ನಡುವೆ ಯಾವುದೇ ಕಲಹವಾಗಲಿ ಅಥವಾ ಭಿನ್ನಾಭಿಪ್ರಾಯವಾಗಲಿ ಇರಲಿಲ್ಲ. ಇಬ್ಬರು ಸುಂದರ ಜೀವನವನ್ನು ಸಾಗಿಸುತ್ತಿದ್ದರು. ಪಲ್ಲವಿಗೆ ಗಂಡನ ಮನೆ ಕೊಲ್ಹಾರಿಯಲ್ಲಿ ವಾಸಿಸಲು ಆಸಕ್ತಿ ಇರಲಿಲ್ಲ.ಹೀಗಾಗಿ ಮನೆಯಿಂದ ದೂರ ಉಳಿದಿದ್ದಳು. ಶುಕ್ರವಾರ ಆಕೆಯನ್ನು ಆಕೆಯ ಸಹೋದರ ಕೊಲ್ಹಾರಿಗೆ ಡ್ರಾಪ್ ಮಾಡಿದ್ದ. ಈ ವೇಳೆ ಕೀಟನಾಶಕ ಬಾಟಲಿ ತೆಗೆದುಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.


ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬನೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು: ಕಾಂಗ್ರೆಸ್ ಟ್ವೀಟ್

Posted by Vidyamaana on 2023-07-03 08:51:08 |

Share: | | | | |


66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬನೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು: ಕಾಂಗ್ರೆಸ್ ಟ್ವೀಟ್

ಬೆಂಗಳೂರು: ಸರ್ಕಾರ ರಚನೆ ಆಯ್ತು, ನಮ್ಮ ಸರ್ಕಾರ ಟೆಕಾಫ್ ಆಗಿ ಹಲವು ದಿನಗಳಾಯ್ತು, ನಮ್ಮ ಗ್ಯಾರಂಟಿ ಯೋಜನೆಗಳ ಜಾರಿಯೂ ಆಯ್ತು, ಡಿಯುರ್ ಬಿಜೆಪಿ, ಸದನವೂ ಪ್ರಾರಂಭವಾಯ್ತು. ಎಲ್ಲಿ ನಿಮ್ಮ ವಿರೋಧ ಪಕ್ಷದ ನಾಯಕ? ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಗ್ಯಾರಂಟಿಯನ್ನೂ ಕೊಡಲಾಗುತ್ತಿಲ್ಲ ಎಂದರೆ ಎಂತಹ ಹಿನಾಯ ಸ್ಥಿತಿಯಲ್ಲಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬನೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ಕರ್ನಾಟಕದದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ ಗೌರವಿಸುತ್ತಿಲ್ಲ ಎಂದಿದೆ.ಬಿಜೆಪಿಗೆ ವಿರೋಧ ಪಕ್ಷದ ನಾಯಕನ ‘ಗ್ಯಾರಂಟಿ’ಯೂ ಇಲ್ಲ! ವಿರೋಧ ಪಕ್ಷದ ನಾಯಕನಿಲ್ಲದೆ ಸದನ ಕಲಾಪ ನಡೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆ. ಈ ಕಪ್ಪು ಚುಕ್ಕೆಯನ್ನಿಟ್ಟಿದ್ದು ಬಿಜೆಪಿ. ವಿರೋಧ ಪಕ್ಷದ ನಾಯಕನ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ಫಿಕ್ಸ್ ಮಾಡಲಾಗಿತ್ತು, ವಿರೋಧ ಪಕ್ಷದ ನಾಯಕನ ಹುದ್ದೆ ಎಷ್ಟಕ್ಕೆ ಬಿಕರಿಯಾಗುತ್ತಿದೆ? ಆ ಚೌಕಾಶಿ ವ್ಯವಹಾರಕ್ಕಾಗಿಯೇ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆಯೇ? ಇದಕ್ಕೆ ಬಿಜೆಪಿಯೇ ಉತ್ತರಿಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ

ಉಪ್ಪಿನಂಗಡಿ ಮೂಲದ ಟೂರ್ ಏಜೆನ್ಸಿಯಿಂದ ವಂಚನೆ ಆರೋಪ : ಪ್ರಶ್ನಿಸಿದ್ದಕ್ಕೆ ಹಲ್ಲೆ ; ಠಾಣೆಗೆ ದೂರು

Posted by Vidyamaana on 2024-06-30 12:26:53 |

Share: | | | | |


ಉಪ್ಪಿನಂಗಡಿ ಮೂಲದ ಟೂರ್ ಏಜೆನ್ಸಿಯಿಂದ ವಂಚನೆ ಆರೋಪ  : ಪ್ರಶ್ನಿಸಿದ್ದಕ್ಕೆ ಹಲ್ಲೆ ; ಠಾಣೆಗೆ ದೂರು

ಉಪ್ಪಿನಂಗಡಿ ಮೂಲದ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್‌ ಏಜೆನ್ಸಿ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದ್ದು, ಟೂರ್ ಏಜನ್ಸಿ ಅಜ್ಮೀರ್ ಯಾತ್ರೆಗೆ ಕರೆದುಕೊಂಡು ಹೋಗಿ ಹಣ ವಂಚಿಸಿದೆ ಎಂದು ಯಾತ್ರಾರ್ಥಿ ಕುಟುಂಬವೊಂದು ಬೆಂಗಳೂರಿನ ಪದ್ಮನಾಭನಗರ ಪೊಲೀಸ್‌ ಠಾಣೆಗೆ ದೂರು ನೀಡಿದೆ.

ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿಯ ಫಾರೂಕ್ ಎಂಬವರಿಗೆ ಸೇರಿದ ಈ ಟೂರ್ ಏಜೆನ್ಸಿ ಮೂಲಕ ಆತೂರು ಮೂಲದ ಮಹಮ್ಮದ್‌ ತ್ವಾಹ ಮತ್ತು ಕುಟುಂಬಸ್ಥರು ಸೇರಿ ಒಟ್ಟು 60 ಯಾತ್ರಿಕರಿದ್ದ ತಂಡ ಅಜ್ಮೀರ್ ಯಾತ್ರೆಗೆ ತೆರಳಿತ್ತು. ಫಾರೂಕ್ ಅವರ ಟೂ‌ರ್ ಏಜೆನ್ಸಿ ಮೂಲಕ ಬೆಂಗಳೂರಿನಿಂದ ಅಜ್ಮೀರ್ ಗೆ ತಂಡ ತೆರಳಿತ್ತು. 60 ಸಾವಿರದ ಪ್ಯಾಕೇಜ್ ಮೂಲಕ ಅಜ್ಮೀರ್ ಯಾತ್ರೆಗೆ ತೆರಳಿದ್ದರು. ಆದರೆ ಅಜ್ಮೀರ್ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಮಹಮ್ಮದ್ ತ್ವಾಹ ಫ್ಯಾಮಿಲಿ ಅವರಲ್ಲಿ ಟೂ‌ರ್ ಏಜೆನ್ಸಿ ಸಿಬ್ಬಂದಿ ಹೆಚ್ಚುವರಿ ಹಣ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.



Leave a Comment: