ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಾಯಘಾತದಿಂದ ನಿಧನ

ಸುದ್ದಿಗಳು News

Posted by vidyamaana on 2024-07-05 17:20:19 |

Share: | | | | |


ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಾಯಘಾತದಿಂದ ನಿಧನ

ಪುತ್ತೂರು: ಖ್ಯಾತ ಯಕ್ಷಗಾನ ಕಲಾವಿದರಾಗಿದ್ದಂತ ಕುಂಬ್ಳೆ ಶ್ರೀಧರ ರಾವ್ ಅವರು ಇಂದು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿರುವುದಾಗಿ ತಿಳಿದು ಬಂದಿದೆ.

ಇಂದು ನೆಕ್ಕಿಲಾಡಿ ಗ್ರಾಮದ ಶಾಂತಿನಗರದ ಸಮೀಪದಲ್ಲಿನ ಬೇರಿಕೆ ನಿವಾಸಿಯಾಗಿದ್ದಂತ ಶ್ರೀಧರ ರಾವ್ ಅವರಿಗೆ ಇಂದು ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು.

ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದ್ರೇ ಚಿಕಿತ್ಸೆ ಫಲಿಸದೇ ಅವರು ಇಂದು ನಿಧನರಾಗಿದ್ದಾರೆ.

ಮೃತರು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಪತ್ನಿ ಸುಲೋಚನಾ, ಪುತ್ರರಾದ ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್ ಮತ್ತು ದೇವಿಪ್ರಸಾದ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

 Share: | | | | |


ಪಾಟ್ರಕೋಡಿ ಜುಮಾ ಮಸೀದಿಯಲ್ಲೊಂದು ಸೌಹಾರ್ದ ಇಫ್ತಾರ್ ಕೂಟ- ಇದರ ಹಿಂದಿದೆ ಒಂದು ರೀಸನ್

Posted by Vidyamaana on 2024-03-26 08:11:30 |

Share: | | | | |


ಪಾಟ್ರಕೋಡಿ ಜುಮಾ ಮಸೀದಿಯಲ್ಲೊಂದು ಸೌಹಾರ್ದ ಇಫ್ತಾರ್ ಕೂಟ- ಇದರ ಹಿಂದಿದೆ ಒಂದು ರೀಸನ್

ಬಂಟ್ವಾಳ : ಈ ನೆಲದ ಸಾಮರಸ್ಯ ಸೌಹಾರ್ದತೆಯ ಪರಂಪರೆಗೆ ಸಾಕ್ಷಿಯಾಗಬಲ್ಲ ವಿನೂತನ ಕಾರ್ಯಕ್ರಮವೊಂದು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪಾಟ್ರಕೋಡಿ ಜುಮಾ ಮಸೀದಿ ವಠಾರದಲ್ಲಿ ಭಾನುವಾರ ನಡೆಯಿತು.

     ಬಂಟ್ವಾಳ ತಾಲೂಕಿನ ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹಿಂದು - ಮುಸ್ಲಿಂ - ಕ್ರೈಸ್ತ ಧರ್ಮದ ನೂರಾರು ಮಂದಿ ಕೂಡುವಿಕಯ ಸೌಹಾರ್ದ ಇಫ್ತಾರ್ ಸಂಗಮ ಇಲ್ಲಿನ ಶಾಂತಿ ಸೌಹಾರ್ದತೆಗೆ ಸಾಕ್ಷಿಯಾಯಿತು.

     ಪರಸ್ಪರ ಮತಭೇದ ಮರೆತು ನಾವೆಲ್ಲರೂ ಒಂದೇ ತತ್ವ-ಸತ್ಯ ಸಾರಲು ಮಸೀದಿ - ದೈವಸ್ಥಾನ ಪ್ರಮುಖರು ಮುಂದಾಗಿರುವುದು 

ನಿಜಕ್ಕೂ ಇದೊಂದು ಅಪರೂಪದ ಕಾರ್ಯಕ್ರಮ. ಹಿಂದು ಮತ್ತು ಮುಸ್ಲಿಂ ಭಾಂದವರ ಅಪೂರ್ವ ಸಂಗಮ. ಕೋಮುಭಾವನೆ ಕೆರಳಿಸಿ, ಮತೀಯ ಸಂಘರ್ಷ ಸೃಷ್ಠಿಸಿ ಸಮಾಜ ಒಡೆಯುವ ಶಕ್ತಿಗಳ ನಡುವೆ ಇಂತಹ ಕಾರ್ಯಕ್ರಮಗಳು ಅನಿವಾರ್ಯವೇ ಸರಿ.

    ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಬರುವ ಸಂದರ್ಭ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಂ ಭಾಂದವರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಶರಬತ್ತು ಹಂಚಿ ಹೊರೆ ಕಾಣಿಕೆ ನೀಡುವ ಮೂಲಕ ಮೆರವಣಿಗೆಯ ಯಶಸ್ವಿಗೆ ಸಹಕರಿಸಿ ಸಾಮರಸ್ಯ ಮೆರೆದಿದ್ದರು. ಅಲ್ಲದೆ ಮುಸ್ಲಿಂ ಮುಖಂಡರು ಅಲ್ಲಲ್ಲಿ ಬ್ರಹ್ಮ ಕಲಶೋತ್ಸವಕ್ಕೆ ಶುಭ ಕೋರಿ ಬ್ಯಾನರ್ ಅಳವಡಿಸಿದ್ದರು. 


    ಈ ಸೌಹಾರ್ದತೆಯ ವಾತಾವರಣ, ಮಾನವೀಯತೆ, ಬಂಧುತ್ವವನ್ನು ಕಂಡ ದೈವಸ್ಥಾನದ ಆಡಳಿತ ಸಮಿತಿಯವರು ಮುಸ್ಲಿಂ ಭಾಂದವರ ಮನೆ ಮನೆಗೆ ಹೋಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದರು. 

ಇದರಿಂದ ಪ್ರೇರಿತರಾದ ಮುಸ್ಲಿಂ ಭಾಂದವರೂ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯತೆಯ ವಾತಾವರಣ ಸೃಷ್ಠಿಯಾಗಿತ್ತು. ಇಂತಹ ಸೌಹಾರ್ದತೆಯ ವಾತಾವರಣ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಮೆರೆದ ಸಾಮರಸ್ಯದ ಸವಿನೆನಪು  ಶಾಶ್ವತವಾಗಿರಿಸಬೇಕು ಎಂಬ ದೃಷ್ಠಿಯಿಂದ ಇದೀಗ ದೈವಸ್ಥಾನದ ಆಡಳಿತ ಸಮಿತಿಯವರು ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಪರಸ್ಪರ ಮಾನವೀಯತೆಯ ಸಂದೇಶ ಸಾರಿದ್ದಾರೆ.  ದೈವಸ್ಥಾನ ಮತ್ತು ಮಸೀದಿಯ ಈ ಕಾರ್ಯ ಇತರೆಡೆಗಳಿಗೆ ಮಾದರಿಯಾಗಿದೆ.


    ಈ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಸೀದಿ ಖತೀಬ್ ಖಲಂದರ್ ಶಾಫಿ ಬಾಖವಿ, ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಅದ್ಯಕ್ಷ ಕೃಷ್ಣ ಭಟ್, ಉಪಾಧ್ಯಕ್ಷ ಪರಮೇಶ್ವರ ನಾವಡ, ಕೋಶಾಧಿಕಾರಿ ಚೆನ್ನಪ್ಪ ಗೌಡ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ಕಾರ್ಯದರ್ಶಿ ಚರಣ್ ಕುಲಾಲ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಜಿ ಆದಂ ಕುಂಞಿ,  ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಉಮೇಶ್ ಮುರುವ, ಮಾಜಿ ಸದಸ್ಯ ರಾಬರ್ಟ್ ಲಸ್ರಾದೋ, ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ, ಮಸೀದಿ ಕೋಶಾಧಿಕಾರಿ ಹಮೀದ್ ಹಾಜಿ ಕೋಡಿ, ಪೂರ್ವಾದ್ಯಕ್ಷರುಗಳಾದ ಮುಹಮ್ಮದ್ ಮಾಸ್ಟರ್, ಕೆ.ಎಸ್. ಯೂಸುಫ್, ಉಮ್ಮರ್ ಹಾಜಿ ಕರಿಮಜಲು, ಪ್ರಮುಖರಾದ ವಿಶ್ವನಾಥ ಶೆಟ್ಟಿ, ಬಾಲಕೃಷ್ಣ ಗೌಡ, ಚೆನ್ನಪ್ಪ ಕಂಪ, ಮಸೀದಿ ಆಡಳಿತ ಸಮಿತಿ ಸದಸ್ಯರು, ಗೌಸಿಯಾ ಯಂಗ್ ಮೆನ್ಸ್ ನಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.


    ಇದೇ ವೇಳೆ ಮಸೀದಿ ವತಿಯಿಂದ ದೈವಸ್ಥಾನದ ಅದ್ಯಕ್ಷ ಸಹಿತ ಪ್ರಮುಖರನ್ನು ಸನ್ಮಾನಿಸಲಾಯಿತು. ಅದೇ ರೀತಿ ದೈವಸ್ಥಾನದ ವತಿಯಿಂದ ಮಸೀದಿ ಅಧ್ಯಕ್ಷ, ಕಾರ್ಯದರ್ಶಿ, ಖತೀಬರ ಸಹಿತ ದೈವಸ್ಥಾನಕ್ಕೆ ಸ್ಥಳದಾನ ಮಾಡಿದ ದಿ. ಪಕ್ರಬ್ಬ ಹಾಜಿ ಅವರ ಪುತ್ರ ಹಮೀದ್ ಹಾಜಿ, ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಉಚಿತವಾಗಿ ಆಟೋ ಸೇವೆಯನ್ನು ನೀಡಿದ ರಿಕ್ಷಾ ಚಾಲಕ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು.

ಮಸೀದಿ ಅಧ್ಯಕ್ಷ ಬಾತಿಶ್ ಪಾಟ್ರಕೋಡಿ ಸ್ವಾಗತಿಸಿ, ಕಾರ್ಯದರ್ಶಿ ತಶ್ರೀಫ್ ವಂದಿಸಿದರು. ಕೆ.ಎ.ಶರೀಫ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು

ಆಸ್ಪತ್ರೆಯಲ್ಲಿ ದೈಹಿಕ ಸಂಪರ್ಕ ನಡೆಸುವುದನ್ನು ನೋಡಿದ ಅಪ್ರಾಪ್ತೆ ಮೇಲೆ ಅತ್ಯಾಚಾರ

Posted by Vidyamaana on 2023-08-18 06:30:23 |

Share: | | | | |


ಆಸ್ಪತ್ರೆಯಲ್ಲಿ ದೈಹಿಕ ಸಂಪರ್ಕ ನಡೆಸುವುದನ್ನು ನೋಡಿದ ಅಪ್ರಾಪ್ತೆ ಮೇಲೆ ಅತ್ಯಾಚಾರ

ಮಂಗಳೂರು: ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದರೂ, ಆಕೆಯ ಸೆಕ್ಸ್ ದಾಹ ತೀರಿಸಲು ಗಂಡನ ಸ್ನೇಹಿತನೇ ಮುಂದಾಗಿದ್ದ. ಈ ವೇಳೆ, ಸಂಬಂಧಿಕಳೂ ಆಗಿರುವ ಅಪ್ರಾಪ್ತ ಬುದ್ಧಿಮಾಂದ್ಯ ಹುಡುಗಿಯೊಬ್ಬಳು ನೋಡಬಾರದ ಭಂಗಿಯಲ್ಲಿ ನೋಡಿದಳೆಂದು ಆಕೆಯನ್ನೂ ಆಸ್ಪತ್ರೆ ಕೊಠಡಿಯಲ್ಲೇ ಅತ್ಯಾಚಾರಗೈದ ಘಟನೆ ನಡೆದಿದ್ದು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಮಹಿಳೆ ಮತ್ತು ಆಕೆಯ ದಾಹ ತೀರಿಸಿದ ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. 


ಕುಲಶೇಖರದ ಮನ್ಸೂರ್ ಅಹ್ಮದ್ ಬಾಬಾ ಶೇಖ್ ಮತ್ತು ಆತನ ಪರಿಚಯದ ಸ್ನೇಹಿತ ಬಿಹಾರ ಮೂಲದ ಮುಂಬೈಯಲ್ಲಿ ವಾಸವಿರುವ ಅಬ್ದುಲ್ ಹಲೀಂ ಆಗಸ್ಟ್ 10ರಂದು ಬೈಕಿನಲ್ಲಿ ಕಾಸರಗೋಡಿಗೆ ಹೋಗಿ ಹಿಂತಿರುಗುತ್ತಿದ್ದಾಗ ಮಂಜೇಶ್ವರದ ಹೊಸಂಗಡಿ ಬಳಿ ಅಪಘಾತಕ್ಕೀಡಾಗಿದ್ದರು. ಗಾಯಗೊಂಡ ಇಬ್ಬರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.‌ಇಬ್ಬರು ಕೂಡ ಒಂದೇ ಕೊಠಡಿಯಲ್ಲಿ ರೂಮ್ ಪಡೆದಿದ್ದು ನಡುವೆ ಸ್ಕ್ರೀನ್ ಹಾಕಿ ಉಳಿದುಕೊಂಡಿದ್ದರು. ಈ ವೇಳೆ, ಮನ್ಸೂರ್ ಅಹ್ಮದ್ ಅವರ ಅಕ್ಕ ತನ್ನ ಇಬ್ಬರು ಹೆಣ್ಮಕ್ಕಳೊಂದಿಗೆ ಬಂದಿದ್ದರು. ಆನಂತರ, ಭಿನ್ನ ಸಾಮರ್ಥ್ಯದ ಅಪ್ರಾಪ್ತ ಮಗಳನ್ನು ಆಸ್ಪತ್ರೆಯಲ್ಲಿ ತಮ್ಮನ ಹೆಂಡತಿ ಶಮೀನಾ ಬಾನು ಜೊತೆ ಬಿಟ್ಟು ಮಂಜೇಶ್ವರ ಪೊಲೀಸ್ ಠಾಣೆಗೆ ಅಪಘಾತದ ಬಗ್ಗೆ ವಿಚಾರಿಸಲು ತೆರಳಿದ್ದರು. 


ಈ ವೇಳೆ, ಶಮೀನಾ ಬಾನು ಮತ್ತು ಆಕೆಯ ಗಂಡನ ಸ್ನೇಹಿತ ಅಬ್ದುಲ್  ಹಲೀಂ  ಸೆಕ್ಸ್ ನಲ್ಲಿ ತೊಡಗಿಸಿದ್ದರು. ಇದನ್ನು ಅಪ್ರಾಪ್ತ ಹುಡುಗಿ ನೋಡಿ ಮುಜುಗರ ಪಟ್ಟಿದ್ದಳು. ಅದನ್ನು ಗಮನಿಸಿದ ಶಮೀನಾ ಬಾನು ಆಕೆಯನ್ನು ಕರೆದು ಬೆಡ್ ನಲ್ಲಿ ಕೂರಿಸಿದ್ದು ಸ್ನೇಹಿತ ಅಬ್ದುಲ್ ಸಲೀಂ ಎದೆಯ ಭಾಗವನ್ನು ಮುಟ್ಟಿ ಲೈ‌ಂಗಿಕ ಕಿರುಕುಳ ನೀಡಿದ್ದಾನೆ‌. ಆದರೆ ಹುಡುಗಿ ವಿರೋಧಿಸಿ ಹೊರಗೆ ಹೋಗಲೆತ್ನಿಸಿದ್ದು ಶಮೀನಾ ಬಾನು ಅವಳನ್ನು ಹಿಡಿದಿಟ್ಟು ಸ್ನೇಹಿತ ಅಬ್ದುಲ್   ಹಲೀಂ    ನಲ್ಲಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿಸಿದ್ದಾಳೆ. 


ಈ ಬಗ್ಗೆ ವಿಚಾರ ತಿಳಿದ ಅಪ್ರಾಪ್ತ ಹುಡುಗಿಯ ತಾಯಿ ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿತ ತಮ್ಮನ ಹೆಂಡತಿ ಶಮೀನಾ ಬಾನು (22) ವನ್ನು ಪೊಲೀಸರು ಆಗಸ್ಟ್ 16ರಂದು ಬಂಧಿಸಿದ್ದು ಜೈಲಿಗೆ ತಳ್ಳಿದ್ದಾರೆ. ಇದೇ ವೇಳೆ, ಆರೋಪಿ ಅಬ್ದುಲ್   ಹಲೀಂ   (37) ತಪ್ಪಿಸಿಕೊಳ್ಳಲು ಯತ್ನಿಸಿದ್ದು ಗೋವಾ ಮೂಲಕ ಮುಂಬೈಗೆ ತೆರಳುತ್ತಿದ್ದಾನೆಂಬ ಮಾಹಿತಿ ಪಡೆದ ಮಂಗಳೂರು ಪೊಲೀಸರು ಮಡಗಾಂವ್ ಪೊಲೀಸರ ಮೂಲಕ ಆಗಸ್ಟ್ 17ರಂದು ದಸ್ತಗಿರಿ ಮಾಡಿಸಿದ್ದಾರೆ.

ಹಾರಾಡಿ : ಚಾಲಕನ ನಿಯಂತ್ರಣ ಕಳೆದುಕೊಂಡ ರಿಕ್ಷಾ: ಆ್ಯಕ್ಟಿವ್ ಸವಾರನಿಗೆ ಗಾಯ!

Posted by Vidyamaana on 2024-05-31 20:08:32 |

Share: | | | | |


ಹಾರಾಡಿ : ಚಾಲಕನ ನಿಯಂತ್ರಣ ಕಳೆದುಕೊಂಡ ರಿಕ್ಷಾ: ಆ್ಯಕ್ಟಿವ್ ಸವಾರನಿಗೆ ಗಾಯ!


ಪುತ್ತೂರು: ರಿಕ್ಷಾವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಹೋಗುತ್ತಿದ್ದ ಆ್ಯಕ್ಟೀವಾಗೆ ಡಿಕ್ಕಿ‌ ಹೊಡೆದ ಘಟನೆ ಪಡೀಲ್ ಹಾರಾಡಿ ಶಾಲಾ ಎದುರು ಶುಕ್ರವಾರ ಸಂಜೆ ನಡೆದಿದೆ.

ಆ್ಯಕ್ಟೀವಾ (KA 19 HN 1431) ಸವಾರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ (KA21 A 6438) ನಜ್ಜುಗುಜ್ಜಾಗಿದೆ.

ಬನ್ನೂರು : ಧರೆ ಕುಸಿತ ಮನೆ ಹಾನಿ ಘಟನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಪ್ರಸನ್ನ ಶೆಟ್ಟಿ ಸಿಝ್ಲರ್ ಭೇಟಿ

Posted by Vidyamaana on 2024-06-27 11:47:40 |

Share: | | | | |


ಬನ್ನೂರು : ಧರೆ ಕುಸಿತ ಮನೆ ಹಾನಿ ಘಟನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಪ್ರಸನ್ನ ಶೆಟ್ಟಿ ಸಿಝ್ಲರ್ ಭೇಟಿ

ಪುತ್ತೂರು; ಬನ್ನೂರು ಜೈನರ ಗುರಿಯಲ್ಲಿ ಧರೆ ಕುಸಿದು ಮನೆ ಹಾನಿಗೊಂಡು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ಗುರುವಾರ ನಡೆದಿದ್ದು ಘಟನಾ ಸ್ಥಳಕ್ಮೆ ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಶೆಟ್ಟಿ ಸಿಝ್ಲರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕರ ಸೂಚನೆಯ‌ಮೇರೆಗೆ ಪ್ರಸನ್ನ ಅವರು ಭೇಟಿ ನೀಡಿದ್ದು ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದು ಶಾಸಕರು ಬೆಂಗಳೂರಿಂದ ಆಗಮಿಸಿದ ತಕ್ಷಣ



ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ತುಮಕೂರಿನಲ್ಲಿ ಗೃಹಸಚಿವರನ್ನು ಭೇಟಿಯಾದ ರಕ್ಷಿತ್ ಶಿವರಾಂ

Posted by Vidyamaana on 2024-03-24 22:08:55 |

Share: | | | | |


ತುಮಕೂರು: ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ತುಮಕೂರಿನಲ್ಲಿ ಗೃಹಸಚಿವರನ್ನು ಭೇಟಿಯಾದ ರಕ್ಷಿತ್ ಶಿವರಾಂ

ಬೆಳ್ತಂಗಡಿ : ಮೂವರು ಬೆಳ್ತಂಗಡಿ ತಾಲೂಕಿನವರು ಕಾರಿನಲ್ಲಿ ತುಮಕೂರಿಗೆ ಹೋಗಿ ಅಲ್ಲಿ ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಗೃಹಸಚಿವ ಪರಮೇಶ್ವರ್ ಅವರ ನಿವಾಸದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮಾ.24 ರಂದು ಸಂಜೆ ಭೇಟಿ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸೂಚಿಸಲು ಮನವಿ ಮಾಡಿದರು.ಅದಲ್ಲದೆ ಮೃತದೇಹದ ಡಿಎನ್ಎ ಪರೀಕ್ಷೆ ಮಾಡಿ ಕುಟುಂಬಕ್ಕೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲು ಮನವಿ ಮಾಡಿದರು. ಈ ವೇಳೆ ತುಮಕೂರು ಪೊಲೀಸ್ ಅಧಿಕಾರಿಯನ್ನು ಗೃಹ ಸಚಿವರು‌ ಕರೆ ಮಾಡಿ ಕರೆಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಪೊಲೀಸ್ ಅಧಿಕಾರಿ ಪ್ರಕರಣದ ಎಲ್ಲಾ ಮಾಹಿತಿಯನ್ನು ವಿವರಿಸಿದ್ದು. ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು. ಇನ್ನೂ ಎರಡು ದಿನದಲ್ಲಿ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಡಿ ತಿಳಿಸಲಾಗುವುದು ಎಂದು ಹೇಳಿದರು.

ತುಮಕೂರು ಎಡಿಷನ್ ಎಸ್ಪಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ವೇಳೆ ದ.ಕ.ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡೀಸ್ ಮತ್ತು  ಬೆಳ್ತಂಗಡಿ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಹಕಿಂ ಕೊಕ್ಕಡ ಜೊತೆಯಲ್ಲಿದ್ದರು.

ಇಂದು (ಜೂ 18) ಶಾಸಕ ಅಶೋಕ್ ಕುಮಾರ್ ರೈರವರಿಗೆ ಹುಟ್ಟೂರ ಸನ್ಮಾನ

Posted by Vidyamaana on 2023-06-18 03:26:18 |

Share: | | | | |


ಇಂದು (ಜೂ 18) ಶಾಸಕ ಅಶೋಕ್ ಕುಮಾರ್ ರೈರವರಿಗೆ  ಹುಟ್ಟೂರ ಸನ್ಮಾನ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈರವರಿಗೆ ಹೂಟ್ಟೂರ ಸನ್ಮಾನ ಕಾರ್ಯಕ್ರಮ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ ಜೂ.18ರಂದು ಸಂಜೆ 6.30ಕ್ಕೆ ಜರಗಲಿದೆ. ಈ ಸಂದರ್ಭದಲ್ಲಿ ಶ್ರೀಮಹಿಷಮರ್ದಿನಿ ದೇವರಿಗೆ ವಿಶೇಷ ಪೂಜೆ ನಡೆಯಲಿದ್ದು ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ವ್ಯವಸ್ಥೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

Recent News


Leave a Comment: