ಉಳಾಯಿಬೆಟ್ಟು ದರೋಡೆ ಪ್ರಕರಣ ; ಕೋಟ್ಯಾನ್ ಲಾರಿ ಚಾಲಕ ವಸಂತ ಸೂತ್ರಧಾರ, ಕೇರಳದ ತಂಡ ಸೇರಿ ಹತ್ತು ಮಂದಿ ಅರೆಸ್ಟ್

ಸುದ್ದಿಗಳು News

Posted by vidyamaana on 2024-07-05 07:31:37 |

Share: | | | | |


ಉಳಾಯಿಬೆಟ್ಟು ದರೋಡೆ ಪ್ರಕರಣ  ; ಕೋಟ್ಯಾನ್ ಲಾರಿ ಚಾಲಕ ವಸಂತ ಸೂತ್ರಧಾರ,  ಕೇರಳದ ತಂಡ ಸೇರಿ ಹತ್ತು ಮಂದಿ ಅರೆಸ್ಟ್

ಮಂಗಳೂರು: ಮಂಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಹೊರವಲಯದ ಪೆರ್ಮಂಕಿ ಪರಿಸರದಲ್ಲಿ ಉದ್ಯಮಿ ಹಾಗೂ ಸಾಮಾಜಿಕ ಮುಖಂಡ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ನಡೆಸಿದ ಆರೋಪದಲ್ಲಿ ಮಂಗಳೂರು ಪೊಲೀಸರು 10 ಮಂದಿಯನ್ನು ಸೆರೆಹಿಡಿದಿದ್ದಾರೆ. ಇವರಲ್ಲಿ ಉದ್ಯಮಿಯ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನೀರಮಾರ್ಗ ಗ್ರಾಮ ನಿವಾಸಿ ವಸಂತಕುಮಾರ್ (42) ಒಳಗೊಂಡಿದ್ದಾನೆ.

ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಬಂಧಿತರನ್ನು ನೀರಮಾರ್ಗದ ವಸಂತಕುಮಾರ್ (42), ನೀರಮಾರ್ಗದ ರಮೇಶ್ (42), ಬಂಟ್ವಾಳದ ಬಾಲಕೃಷ್ಣ ರೇಮಂಡ್ ಡಿಸೋಜಾ (47) ಎಂದು ಗುರುತಿಸಲಾಗಿದೆ. ಕಾಸರಗೋಡಿನಿಂದ (48), ತ್ರಿಶೂರಿನ ಜಾಕೀರ್ ಹುಸೇನ್ (56), ತ್ರಿಶೂರ್‌ನಿಂದ ವಿನೋಜ್ (38), ತ್ರಿಶೂರ್‌ನಿಂದ ಸಜೀಶ್ ಎಂಎಂ (32), ತಿರುವನಂತಪುರದಿಂದ ಬಿಜು ಜಿ (41), ತ್ರಿಶೂರ್‌ನಿಂದ ಸತೀಶ್ ಬಾಬು (44), ಮತ್ತು ಶಿಜೋ ದೇವಸಿ (38) ಇದರಲ್ಲಿ 7 ಮಂದಿ ಕೇರಳ ಮೂಲದವರಾಗಿದ್ದಾರೆ.

ಮಂಗಳೂರು ನಗರದ ಉಳಾಯಿಬೆಟ್ಟು ಪೆರ್ಮಂಕಿ ನಿವಾಸಿ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರು ಜೂನ್ 21ರಂದು ಸಂಜೆ ಸುಮಾರು 7.45ಕ್ಕೆ ಮನೆಯಲ್ಲಿದ್ದ ವೇಳೆ ಸುಮಾರು 10ರಿಂದ 12 ಮಂದಿ ಆರೋಪಿಗಳು ಆಗಮಿಸಿ, ಚೂರಿಯಿಂದ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ನಡೆಸಿ, ನಂತರ, ಅವರ ಪತ್ನಿ ಮತ್ತು ಮಗನನ್ನು ಕಟ್ಟಿಹಾಕಿ, ನಗದು, ಹಣ, ಒಡವೆ ಸೇರಿ ಬೆಲೆಬಾಳುವ ಸೊತ್ತುಗಳನ್ನು ದರೋಡೆ ಮಾಡಿದ್ದರು.


ಘಟನೆಯಲ್ಲಿ ವಸಂತಕುಮಾರ್, ಉದ್ಯಮಿಯ ವ್ಯವಹಾರ ಮತ್ತು ಮನೆಯ ಮಾಹಿತಿಯನ್ನು ಇನ್ನೋರ್ವ ಆರೋಪಿ ರಮೇಶ್ ಪೂಜಾರಿಗೆ ನೀಡಿದ್ದು, ಆರೋಪಿ ರಮೇಶ್ ಪೂಜಾರಿ ಮತ್ತು ರೇಮಂಡ್ ಡಿಸೋಜಾ ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಉದ್ಯಮಿಯ ಮನೆಯ ಹಾಗೂ ವ್ಯವಹಾರದ ಮಾಹಿತಿ ನೀಡಿದ್ದಾರೆ. ಅದರಂತೆ ಬಾಲಕೃಷ್ಣ ಶೆಟ್ಟಿ ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಿ,ಮನೆಯ ಮಾಹಿತಿಯನ್ನು ನೀಡಿ, ಆರೋಪಿಗಳನ್ನು ಮಂಗಳೂರಿಗೆ ಕರೆಯಿಸಿಕೊಂಡು ದರೋಡೆ ನಡೆಸಿದ್ದಾಗಿ ತಿಳಿದುಬಂದಿದೆ ಎಂದು ಕಮೀಷನರ್ ಹೇಳಿದ್ದಾರೆ.ಕೃತ್ಯದಲ್ಲಿ 15ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಕಂಡುಬಂದಿದೆ. ಆರೋಪಿಗಳ ಪೈಕಿ ಬಿಜು ಹಾಗೂ ಸತೀಶ್ ಬಾಬು ಎರಡು ತಂಡ ಗಳನ್ನು ಮಂಗಳೂರಿಗೆ ಕಳಿಸಿ, ದರೋಡೆಗೆ ಸಂಚು ರೂಪಿಸಿ ದರೋಡೆ ಕೃತ್ಯ ನಡೆಸಿದ್ದಾರೆ.

ಮೊದಲೇ ಕೇಸ್ ಇತ್ತು

ಆರೋಪಿಗಳ ಪೈಕಿ ವಸಂತ ಕುಮಾರ್ ವಿರುದ್ಧ 2011ನೇ ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದ್ದರೆ, ಜಾಕೀರ್ ಎಂಬಾತನ ವಿರುದ್ಧ ಕೇರಳದಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಸತೀಶ್ ಬಾಬು ವಿರುದ್ಧ ತ್ರಿಶೂರ್ ಜಿಲ್ಲೆಯಲ್ಲಿ ಶಾಜಿ ಎಂಬಾತನ ಕೊಲೆ ಪ್ರಕರಣ ದಾಖಲಾಗಿದೆ. ಬಿಜು ವಿರುದ್ಧ ಅಬಕಾರಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ಜೂನ್ 21ರಂದು ಎಂಟರಿಂದ ಒಂಬತ್ತು ಮಂದಿ ಮುಸುಕುಧಾರಿಗಳು ಮನೆಗೆ ನುಗ್ಗಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ರವರನ್ನು ಕಟ್ಟಿ ಹಾಕಿ ಥಳಿಸಿದ್ದು ಹಾಗೂ ಪತ್ನಿ, ಮಕ್ಕಳನ್ನು ಬೆದರಿಸಿ 9 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಮನೆಯ ವಾಹನದಲ್ಲೇ ಅಲ್ಪ ದೂರದ ವರೆಗೆ ಪ್ರಯಾಣಿಸಿ ನಂತರ ಅವರ ವಾಹನವನ್ನು ಮಧ್ಯದಲ್ಲೇ ಬಿಟ್ಟು ಇನ್ನೋವಾದಲ್ಲಿ ಪರಾರಿಯಾಗಿದರು. ನಾಲ್ವರು ಸ್ಥಳೀಯ ಆರೋಪಿಗಳಾದ ವಸಂತ್, ರಮೇಶ್, ರೇಮಂಡ್ ಮತ್ತು ಬಾಲಕೃಷ್ಣ ದರೋಡೆಗೆ ಯೋಜನೆ ರೂಪಿಸಿದ್ದರು. ಬಾಲಕೃಷ್ಣ ನಂತರ ಜಾನ್ ಬಾಸ್ಕೋ ನೇತೃತ್ವದ ಕೇರಳ ತಂಡದೊಂದಿಗೆ ಸಂಪರ್ಕ ಹೊಂದಿದ್ದರು.

ಎಂಟು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕೇರಳದ ತಂಡ ಮಂಗಳೂರಿಗೆ ಭೇಟಿ ನೀಡಿದ್ದು, ದರೋಡೆಗೆ ಪ್ರದೇಶದ ಸ್ಕೆಚ್ ಮತ್ತು ನಕ್ಷೆಯನ್ನು ಸಿದ್ಧಪಡಿಸುವಂತೆ ರಮೇಶ್ ಮತ್ತು ವಸಂತ್ ಅವರನ್ನು ಕೇಳಿದ್ದರು ಅದರಂತೆಯೇ ಗುತ್ತಿಗೆದಾರನ ಬಳಿ 100 ರಿಂದ 300 ಕೋಟಿ ರೂ.ಗೂ ಹೆಚ್ಚು ಹಣವಿದೆ ಎಂದು ಸ್ಥಳೀಯ ಆರೋಪಿಗಳು ಕೇರಳ ತಂಡಕ್ಕೆ ತಿಳಿಸಿದ್ದು ಲೂಟಿಹೊಡೆಯಲು ಎಲ್ಲಾ ರೀತಿಯ ಸ್ಕೆಚ್ ತಯಾರಿಸಿದ್ದರು.

ಈ ಪ್ರಕರಣದಲ್ಲಿ ಇನ್ನೂ 4-5 ಮಂದಿಯನ್ನು ಬಂಧಿಸಬೇಕಿದ್ದು 100ರಿಂದ 300 ಕೋಟಿ ಲೂಟಿ ಮಾಡಬಹುದೆಂದು ನಂಬಿಸಿ ಮಾಸ್ಟರ್‌ ಬೆಡ್‌ರೂಮ್‌ನ ಟೈಲ್ಸ್‌ ತೆಗೆಯಲು 20ಕ್ಕೂ ಹೆಚ್ಚು ಗೋಣಿ ಚೀಲಗಳು ಮತ್ತು ಸಲಕರಣೆಗಳನ್ನು ತಂದಿದ್ದರು. ಒಂದೇ ಒಂದು ಸುಳಿವೇ ಇಲ್ಲದ ಕುರುಡು ಪ್ರಕರಣವಾಗಿರುವುದರಿಂದ ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಕಳೆದ 15 ದಿನಗಳಿಂದ ಈ ಪ್ರಕರಣವನ್ನು ಭೇದಿಸಲು ಅವಿರತವಾಗಿ ಶ್ರಮಿಸಿದ ಡಿಸಿಪಿ, ಎಸಿಪಿ ಮತ್ತು ಸಿಸಿಬಿ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

 Share: | | | | |


ಉಳ್ಳಾಲದಿಂದ ಕಾಣೆಯಾದ ಹುಡುಗ ಗೋವಾದಲ್ಲಿ ಪತ್ತೆ

Posted by Vidyamaana on 2023-10-31 07:23:11 |

Share: | | | | |


ಉಳ್ಳಾಲದಿಂದ ಕಾಣೆಯಾದ ಹುಡುಗ ಗೋವಾದಲ್ಲಿ ಪತ್ತೆ

ಮಂಗಳೂರು: ಉಳ್ಳಾಲದ ಮಾಸ್ತಿಕಟ್ಟೆ – ಆಝಾದ್ ನಗರದ ಹುಡುಗನೊಬ್ಬ ಕಾಣೆಯಾಗಿ ದಿನದ ಬಳಿಕ ಪತ್ತೆಯಾದ ಘಟನೆ ನಡೆದಿದೆ.


ಉಳ್ಳಾಲ ಮಾಸ್ತಿ ಕಟ್ಟೆ ಆಝಾದ್ ನಗರದ ಉಸ್ಮಾನ್ ಫಯಾಝ್ ಎಂಬವರ ಮಗ ಸ್ಥಳೀಯ ಶಾಲೆ ಯೊಂದರಲ್ಲಿ 10 ನೇ ತರಗತಿಯಲ್ಲಿ ಕಲಿಸುತ್ತಿರುವ ಮೊಹಮ್ಮದ್ ಹುಝಯ್ಫ್ ಎಂಬ 16 ವರ್ಷದ ಹುಡುಗ ನಿನ್ನೆ ಸಂಜೆಯಿಂದ (28-10-2023) ಕಾಣೆಯಾಗಿದ್ದನು.ಮನೆಯವರು, ಬಂಧುಗಳು ಆತಂಕಕ್ಕೆ ಈಡಾಗಿದ್ದರು. ಇದೀಗ ಆತ ಗೋವಾದಲ್ಲಿ ಸಿಕ್ಕಿದ ಮಾಹಿತಿಯನ್ನು ಬಾಲಕನ ಕುಟುಂಬ ಹಂಚಿಕೊಂಡಿದೆ.


ಮನೆಯಿಂದ ಹೊರ ಹೋದವನು ವಾಪಸ್ ಬರದೇ ಇರುವ ಕಾರಣ ಹುಡುಗನ ಹೆತ್ತವರು ತುಂಬಾ ಆತಂಕ, ಗಾಬರಿಗೊಂಡಿದ್ದರು. ಒಂದು ದಿನದ ಬಳಿಕ ಹುಡುಗ ಪತ್ತೆಯಾಗಿದ್ದು, ನಾಪತ್ತೆಯ ಕಾರಣ ತಿಳಿದುಬಂದಿಲ್ಲ.

ಆ.28 : ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭ

Posted by Vidyamaana on 2023-08-27 02:09:20 |

Share: | | | | |


ಆ.28 : ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ

ಉತ್ಪಾದಕರ ಕಂಪೆನಿ ಹಾಗೂ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಜಂಟಿ ಆಶ್ರಯದಲ್ಲಿ ಉಚಿತ ಕೃಷಿ ಮಾಹಿತಿ ಕಾರ್ಯಾಗಾರ ಹಾಗೂ ಶೇರು ಪ್ರಮಾಣ ಪತ್ರ ವಿತರಣಾ ಸಮಾರಂಭ ಆ.28 ಸೋಮವಾರ ಬೆಳಿಗ್ಗೆ 10 ಗಂಟೆಗೆ ಪುತ್ತೂರು ಜೈನ ಭವನದಲ್ಲಿ ನಡೆಯಲಿದೆ.


ಮುಖ್ಯ ಅತಿಥಿಯಾಗಿ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ಪಾಲ್ಗೊಳ್ಳಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ.ರಶ್ಮಿ ಆರ್. ಮಾಹಿತಿ ನೀಡಲಿದ್ದಾರೆ. ಅತಿಥಿಗಳಾಗಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ವಿಜಯ ಕರ್ನಾಟಕ ಸೂಪರ್ ಸ್ಟಾರ್ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ ಭಾಗವಹಿಸಲಿದ್ದಾರೆ.


ಪುತ್ತೂರು ಮಾನಸಗಂಗಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಎನ್. ಉಪಸ್ಥಿತರಿರುವರು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

SDPI ಅಭ್ಯರ್ಥಿ ಶಾಫಿ ಬೆಳ್ಳಾರೆ ಪರ ಮಹಿಳಾ ಘಟಕದಿಂದ ಮತಯಾಚನೆ

Posted by Vidyamaana on 2023-04-27 15:59:41 |

Share: | | | | |


SDPI ಅಭ್ಯರ್ಥಿ ಶಾಫಿ ಬೆಳ್ಳಾರೆ ಪರ ಮಹಿಳಾ ಘಟಕದಿಂದ ಮತಯಾಚನೆ

ಪುತ್ತೂರು: ಕೂರ್ನಡ್ಕ ಪರಿಸರದಲ್ಲಿ SDPI ಅಭ್ಯರ್ಥಿ ಶಾಫಿ ಬೆಳ್ಳಾರೆ ಪರವಾಗಿ ಮಹಿಳಾ ಘಟಕದಿಂದ ಮತಯಾಚನೆ ನಡೆಯಿತು.

ಪ್ರತಿ ಮನೆಮನೆಗೆ ತೆರಳಿದ ಮಹಿಳಾ ಘಟಕದ ಪ್ರಮುಖರು ಅಭ್ಯರ್ಥಿ ಪರ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು. ಶಾಫಿ ಬೆಳ್ಳಾರೆ ನಿರಪರಾಧಿಯಾಗಿದ್ದು, ಸುಳ್ಳು ಆರೋಪದ ಮೇಲೆ ಜೈಲಿಗಟ್ಟಲಾಗಿದೆ. ಆದ್ದರಿಂದ ನೊಂದವರ ಧ್ವನಿಯಾಗಿ ಮತ ಚಲಾಯಿಸುವಂತೆ ವಿನಂತಿಸಿಕೊಂಡರು.

ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Posted by Vidyamaana on 2023-04-17 09:01:08 |

Share: | | | | |


ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಾರಿನ ಗಾಜು ಹುಡಿ ಮಾಡಿದ ಘಟನೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ನಾಮಪತ್ರ ಸಲ್ಲಿಸಿ ತೆರಳುತ್ತಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದರು.ಉಭಯ ತಂಡದಲ್ಲಿಯೂ ಸಾವಿರಾರು ಕಾರ್ಯಕರ್ತರು ಇದ್ದರು.ಈ ವೇಳೆ ಜೈ ಬಿಜೆಪಿ, ಜೈ ಕಾಂಗ್ರೆಸ್ ಘೋಷಣೆ ಮೊಳಗಿದ್ದು ಪರಸ್ಪರ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ.

ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀಲ್ಸ್ ಮಾಡಿದ್ದ ಆಶಿಕ್ ಪೊಲೀಸ್ ವಶಕ್ಕೆ‌

Posted by Vidyamaana on 2023-08-03 12:40:38 |

Share: | | | | |


ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀಲ್ಸ್ ಮಾಡಿದ್ದ ಆಶಿಕ್  ಪೊಲೀಸ್ ವಶಕ್ಕೆ‌

ಉಡುಪಿ: ಮಣಿಪಾಲ ಡಿಸಿ ಕಚೇರಿ‌ ರಸ್ತೆಯಲ್ಲಿ ರೀಲ್ಸ್ ಶೋಕಿಗಾಗಿ ಯದ್ವಾ ತದ್ವಾ ಸ್ಕೂಟರ್ ಚಲಾಯಿಸಿ ಇತರೆ ವಾಹನ ಸವಾರರಿಗೆ ತೊಂದರೆ ನೀಡಿದ್ದ‌‌ ಯುವಕ ನನ್ನು ಮತ್ತು ಸ್ಕೂಟರ್ ವಶಕ್ಕೆ ಪಡೆದು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪರ್ಕಳ ನಿವಾಸಿ ಆಶಿಕ್(19) ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀಲ್ಸ್ ಮಾಡುತ್ತಿದ್ದ ಯುವಕ.


ಆಶಿಕ್ ಯದ್ವಾ ತದ್ವಾ ಸ್ಕೂಟಿ ಓಡಿಸಿ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಕೂಟಿ ಉಡುಪಿಯ ನೋಂದಣಿ ಸಂಖ್ಯೆ ಹೊಂದಿದ್ದು ವಿಡಿಯೋದಲ್ಲಿ ಮಣಿಪಾಲದ ಡಿಸಿ ಆಫೀಸ್ ರಸ್ತೆ ಹಾಗೂ ಉಡುಪಿಯ ಭಾಗದ ರಸ್ತೆಯಲ್ಲಿ ಯದ್ವಾ ತದ್ವಾವಾಗಿ ಸಂಚರಿಸಿರುವುದು ಕಂಡು ಬಂದಿದೆ. ಒಂದು ಕಡೆ ಹೋಗುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆಯುವ ಸಂದರ್ಭವೂ ಎದುರಾಗಿರುವುದು ವಿಡಿಯೋದಲ್ಲಿ ಕಾಣಬಹುದು.

ರೀಲ್ಸ್‌ ಹುಚ್ಚಿಗೆ ಮತ್ತೊಂದು ಬಲಿ: ರೈಲು ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವು. ಭಯಾನಕ ವಿಡಿಯೋ ಇಲ್ಲಿದೆ ನೋಡಿ

Posted by Vidyamaana on 2023-10-01 15:23:19 |

Share: | | | | |


ರೀಲ್ಸ್‌ ಹುಚ್ಚಿಗೆ ಮತ್ತೊಂದು ಬಲಿ: ರೈಲು ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವು. ಭಯಾನಕ ವಿಡಿಯೋ ಇಲ್ಲಿದೆ ನೋಡಿ

ಭಯಾನಕ ವಿಡಿಯೋ ಇಲ್ಲಿದೆ ನೋಡ


ಉತ್ತರಪ್ರದೇಶ : ರೀಲ್ ವ್ಯಾಮೋಹವು ಮತ್ತೊಂದು ಸಾವಿಗೆ ಕಾರಣವಾದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ರೈಲು ಬರುವುದನ್ನು ಗಮನಿಸದ ಯುವಕನೊಬ್ಬ ರೈಲ್ವೇ ಹಳಿಗಳ ಮೇಲೆ ಅಜಾಗರೂಕತೆಯಿಂದ ರೀಲ್‌ ಮಾಡುವಾಗ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಘಟನೆಯ ಭಯಾನಕ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.14 ವರ್ಷದ ಫರ್ಮಾನ್ ರೈಲ್ವೆ ಹಳಿಗಳ ಮೇಲೆ ನಡೆದು ರೈಲಿಗೆ ಸಿಲುಕಿದ ಕ್ಷಣವನ್ನು ಗೊಂದಲದ ವೀಡಿಯೊ ರೆಕಾರ್ಡ್ ಮಾಡಲಾಗಿದೆಫರ್ಮಾನ್ ರೈಲು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರುವುದನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಕೆಲವೇ ಸೆಕೆಂಡ್‌ನಲ್ಲಿ ಢಿಕ್ಕಿ ಹೊಡೆಯುವುದು ಕಂಡುಬಂದಿದೆ.

Readmore.....

ಭಯಾನಕ ವಿಡಿಯೋ ಇಲ್ಲಿದೆ ನೋಡಿ

ಯುವಕರು ಸಾಮಾಜಿಕ ಮಾಧ್ಯಮದ ಕ್ರೇಜ್‌ಗಾಗಿ ಅಜಾಗರೂಕ ಕೃತ್ಯವನ್ನು ಚಿತ್ರೀಕರಿಸುವುದನ್ನು ತೋರಿಸಿದ ರೀಲ್ ಸೆಕೆಂಡುಗಳ ನಂತರ ತೀವ್ರ ತಿರುವು ಪಡೆದುಕೊಂಡಿತು. ಅವನು ಹಳಿಗಳ ಹತ್ತಿರ ಹೆಜ್ಜೆ ಹಾಕುತ್ತಿದ್ದಂತೆ, ವೇಗವಾಗಿ ಬಂದ ರೈಲು ಅವನಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಅವರ ನಿರ್ಲಕ್ಷ್ಯದ ಕೃತ್ಯದಿಂದಾಗಿ ಅವರು ಸಾರಿಗೆಯಿಂದ ನಾಟಕೀಯವಾಗಿ ಕತ್ತರಿಸಲ್ಪಟ್ಟರು. ಅಪಘಾತದ ವೇಳೆ ಆಘಾತಕ್ಕೊಳಗಾದ ಜಾಗದಲ್ಲಿ ಫರ್ಮಾನ್‌ನ ಸ್ನೇಹಿತ ಎಂದು ಹೇಳಲಾದ ಇನ್ನೊಬ್ಬ ವ್ಯಕ್ತಿಯನ್ನು ವೀಡಿಯೊ ರೆಕಾರ್ಡ್ ಮಾಡಿದೆ.

Recent News


Leave a Comment: