ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಸುದ್ದಿಗಳು News

Posted by vidyamaana on 2024-07-08 20:09:58 |

Share: | | | | |


ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆ : ದ. ಕ ಜಿಲ್ಲೆಯ ಎಲ್ಲ ಶಾಲೆಗಳಿಗೆ ನಾಳೆ (ಜು 9) ರಜೆ

ಮಂಗಳೂರು: ದ‌.ಕ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆ ಯ ಶಾಲಾ, ಪಿಯು ಕಾಲೇಜಿಗೆ ಜುಲೈ 09ರಂದು ಜಿಲ್ಲಾಡಳಿತ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

ದ. ಕ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ. ಪದವಿ ಪೂರ್ವ ಕಾಲೇಜು, (12 ನೇ ತರಗತಿವರೆಗೆ) ದಿನಾಂಕ: 09/07/224 ರಂದು ರಜೆಯನ್ನು ಘೋಷಿಸಲಾಗಿದೆ.

 Share: | | | | |


ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

Posted by Vidyamaana on 2023-10-21 11:34:00 |

Share: | | | | |


ಬಸವರಾಜ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದರು. ಬೇಗ ಗುಣಮುಖರಾಗುವಂತೆ ಹಾರೈಸಿದರು.



ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ಜತೆಗಿದ್ದರು

ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

Posted by Vidyamaana on 2024-07-23 06:33:29 |

Share: | | | | |


ಜುಂಬಾ ಡ್ಯಾನ್ಸ್‌ ಮಾಡುತ್ತಲೇ ಹೃದಯಾಘಾತಕ್ಕೆ ಖ್ಯಾತ ಉದ್ಯಮಿ ಬಲಿ,ಸಾವಿನ ಕೊನೆ ಕ್ಷಣ ಸೆರೆ!

ಮುಂಬೈ :ಫಿಟ್ನೆಸ್ ಕಾಪಾಡಿಕೊಳ್ಳಲು ಹಲವರು ಜುಂಬಾ ಡ್ಯಾನ್ಸ್ ಮೊರೆ ಹೋಗುತ್ತಾರೆ. ಪ್ರತಿ ದಿನ ಜುಂಬಾ ಡ್ಯಾನ್ಸ್ ಕ್ಲಾಸ್‌ಗೆ ತೆರಳಿ ಬೆವರು ಹರಿಸುತ್ತಾರೆ. ಹೀಗೆ ಮಹಾರಾಷ್ಟ್ರದ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಫಿಟ್ನೆಸ್‌ಗಾಗಿ ಪ್ರತಿ ದಿನ ಜುಂಬಾ ಕ್ಲಾಸ್‌ಗೆ ತೆರಳಿ ಡ್ಯಾನ್ಸ್ ಮಾಡುತ್ತಾ ಬೆವರು ಹರಿಸುತ್ತಾರೆ.

ಇಂದು ಬೆಳಗ್ಗೆ ಜುಂಬಾ ಡ್ಯಾನ್ಸ್ ಮಾಡುತ್ತಿದ್ದಂತೆ ಉದ್ಯಮಿ ಕವಲ್ಜಿತ್ ಸಿಂಗ್ ಬಗ್ಗಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಉದ್ಯಮಿ ಬದುಕುಳಿಯಲಿಲ್ಲ.


ಛತ್ರಪತಿ ಸಂಭಾಜಿನಗರದ ನಿವಾಸಿಯಾಗಿರುವ ಅವಲ್ಜಿತ್ ಸಿಂಗ್ ಬಾಗ್ಗಾ ಪ್ರತಿದಿನ ಜುಂಬಾ ಡ್ಯಾನ್ಸ್ ಮಾಡುತ್ತಾರೆ. ಎಂದಿನಂತೆ ಇಂದೂ ಕೂಡ ಅವಲ್ಜಿತ್ ಸಿಂಗ್ ಬಾಗ್ಗಾ ಜುಂಬಾ ಡ್ಯಾನ್ಸ್‌ಗೆ ತೆರಳಿದ್ದಾರೆ. ಅವಲ್ಜಿತ್ ಸಿಂಗ್ ರೀತಿಯಲ್ಲಿ ಇತರ ಕೆಲವರು ಜುಂಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಜುಂಬಾ ಕ್ಲಾಸ್ ತೆರಳಿ 15 ನಿಮಿಷಗಳ ಕಾಲ ಡ್ಯಾನ್ಸ್ ಮಾಡಿದ್ದಾರೆ. ಹಲವರು ಇದೇ ಕ್ಲಾಸ್‌ನಲ್ಲಿ ಅವಲ್ಜಿತ್ ಸಿಂಗ್ ಜೊತೆ ಡ್ಯಾನ್ಸ್ ಮಾಡಿದ್ದಾರೆ.

ಮನೆ ಮನೆಗೆ ಬಂದು ಅನಿಲ ಸುರಕತೆಯ ತಪಾಸಣೆ ಕಡ್ಡಾಯವಲ್ಲ:ಡಿಸಿ

Posted by Vidyamaana on 2023-08-17 04:48:48 |

Share: | | | | |


ಮನೆ ಮನೆಗೆ ಬಂದು ಅನಿಲ ಸುರಕತೆಯ ತಪಾಸಣೆ ಕಡ್ಡಾಯವಲ್ಲ:ಡಿಸಿ

ಪುತ್ತೂರು:ಎಚ್‌.ಪಿ.ಗ್ಯಾಸ್‌ ಏಜೆನ್ಸಿಗಳಿಂದ ತೈಲಕಂಪೆನಿಯ ನಿರ್ದೇಶಾನುಸಾರ ಅನಿಲ ಸುರಕ್ಷತೆಯ ತಪಾಸಣೆಯನ್ನು ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯಗೊಳಿಸಲಾಗಿದೆ. ಆದರೆ ಗ್ರಾಹಕರ ಮನೆಗೆ ಬಂದು ಅಡುಗೆ ಅನಿಲ ತಪಾಸಣೆ ಕಡ್ಡಾಯವಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟಪಡಿಸಿದ್ದಾರೆ.ಪೆಟ್ರೋಲಿಯಮ್ ಕಂಪೆನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತೆರಳಿ ಅಡುಗೆ ಕೋಣೆಯಲ್ಲಿ ಗ್ಯಾಸ್ ಅನ್ನು ಪರಿಶೀಲಿಸಿ,ಪರಿಶೀಲಿಸಿರುವುದಕ್ಕೆ ಸೇವಾ ಶುಲ್ಕವಾಗಿ ರೂ.236 ಅನ್ನು ತರಬೇಕೆಂದೂ, ರಬ್ಬರ್ ಟ್ಯೂಬ್, ಬದಲಾಯಿಸಬೇಕಾದಲ್ಲಿ ರೂ.190 ಅನ್ನು ನೀಡಬೇಕೆಂಬುದಾಗಿ ತಿಳಿಸಲಾಗಿರುತ್ತದೆ.ಆದರೆ, ಈ ರೀತಿಯ ಅನಿಲ ಸುರಕ್ಷತೆಯ ತಪಾಸಣೆಯು ಗ್ರಾಹಕರಿಗೆ ಕಡ್ಡಾಯವಾಗಿರುವುದಿಲ್ಲ, ಗ್ಯಾಸ್‌ ಏಜೆನ್ಸಿಯವರು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಿ ಗ್ರಾಹಕರು ಬಯಸಿದ್ದೇ ಆದಲ್ಲಿ ಅವರ ಅನುಮತಿ ಮೇರೆಗೆ ಮಾತ್ರ ಗ್ರಾಹಕರ ಮನೆಯೊಳಗೆ ಹೋಗಿ ಅನಿಲ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ.ಸಾರ್ವಜನಿಕರು ತಮ್ಮ ಸುರಕ್ಷತೆಗಾಗಿ ಅಡುಗೆ ಅನಿಲ ತಪಾಸಣೆಯನ್ನು ಕೈಗೊಳ್ಳಬೇಕಾಗಿದ್ದಲ್ಲಿ ತಮ್ಮ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ತಪಾಸಣೆಯನ್ನು ಕೈಗೊಳ್ಳಬಹುದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಷನಲ್ ಬ್ಯಾಂಕ್ ಗಳಿಗ ಆಯ್ತು – ಈಗ ಸಹಕಾರಿ ಬ್ಯಾಂಕ್ ಗಳಿಗೂ ದೋಖಾ..!?

Posted by Vidyamaana on 2023-09-25 12:32:36 |

Share: | | | | |


ನ್ಯಾಷನಲ್ ಬ್ಯಾಂಕ್ ಗಳಿಗ ಆಯ್ತು – ಈಗ ಸಹಕಾರಿ ಬ್ಯಾಂಕ್ ಗಳಿಗೂ ದೋಖಾ..!?

ಬೆಂಗಳೂರು : ದೇಶದ ವಿವಿಧ ನ್ಯಾಷನಲ್ ಬ್ಯಾಂಕ್ ಗಳಲ್ಲಿ ಕೋಟಿ ಕೋಟಿ ಸಾಲ ಪಡೆದಂತ ಅನೇಕರು ದೇಶದಿಂದಲೇ ಪರಾರಿಯಾಗಿದ್ದಾರೆ. ಈಗ ರಾಜ್ಯದ ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿದ್ದಂತ 2,888 ಮಂದಿ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್(DCC) ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕ್ ಗಳಿಂದ 1,404 ಕೋಟಿ ಸಾಲವನ್ನು ಪಡೆದಿದ್ದಂತ 2,888 ಮಂದಿ ಸಾಲ ತೀರಿಸಲು ಆಗದೇ ನಾಪತ್ತೆಯಾಗಿರೋ ಶಾಕಿಂಗ್ ವಿಚಾರ ಬಯಲಾಗಿದೆ.ಇನ್ನೂ ಹೀಗೆ 1,404 ಕೋಟಿ ಸಾಲ ಪಡೆದು ನಾಪತ್ತೆಯಾಗಿರುವಂತ 2,888 ಮಂದಿಯಲ್ಲಿ ಬೆಂಗಳೂರಿನ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಸಹಕಾರಿ ಬ್ಯಾಂಕಿನದ್ದೇ ಸಿಂಹಪಾಲು ಆಗಿದೆ. ಈ ಹಿನ್ನಲೆಯಲ್ಲಿ ಈ ಬ್ಯಾಂಕ್ ಎವರ್ ಗ್ರೀನ್ ಕ್ರೆಡಿಟ್ ಎಂಬುದಾಗಿ ಹಾಗೂ 1,400 ಕೋಟಿ ರೂ.ಸಾಲವನ್ನು ಅನುತ್ಪಾದಕ ಆಸ್ತಿನಷ್ಟವೆಂದೂ ಘೋಷಿಸಿದೆ.


ರಾಜ್ಯದ ಇತರೆ ಸಹಕಾರಿ ಬ್ಯಾಂಕ್ ಗಳಲ್ಲಿ 25 ರಿಂದ 30 ವರ್ಷಗಳಿಂದ ಸಾಲಗಾರರು, ತಾವು ಪಡೆದಿರುವ ಸಾಲ ಪಾವತಿಸದಿರುವ ಪರಿಣಾಮ ಅಸಲುಗಿಂತ ಬಡ್ಡಿಯೇ ಜಾಸ್ತಿಯಾಗಿದೆ. ಕೆಲವರು ತಪ್ಪು ವಿಳಾಸ ಕೊಟ್ಟು ಸಾಲ ಪಡೆದಿದ್ದರೇ, ಕೆಲವರು ಸಾಲ ಪಡೆದು ಅಸಲು, ಬಡ್ಡಿ ಕಟ್ಟದೇ ನಾಪತ್ತೆಯಾಗಿದ್ದಾರೆ.ಅಂದಹಾಗೇ ಬೆಂಗಳೂರಲ್ಲಿ 2,485 ಮಂದಿಯಿಂದ 1,406 ಕೋಟಿ ರೂ, ಮೈಸೂರಲ್ಲಿ 132 ಸಾಲಗಾರರಿಂದ 57 ಲಕ್ಷ, ಬೆಳಗಾವಿ 15 ಮಂದಿಯಿಂದ 41 ಲಕ್ಷ ರೂ ಸೇರಿದಂತೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳಲ್ಲಿ ಒಟ್ಟು 2,632 ಮಂದಿ ಪಟ್ಟಣ ಸಹಕಾರ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದಾರೆ. ಇವರಲ್ಲಿ ಒಟ್ಟಾರೆ 2,888 ಮಂದಿ ಸಾಲವನ್ನು ತೀರಿಸಲಾಗದೇ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.

ಶಬರಿಮಲೆ ಯಾತ್ರೆಗೆ ವೃತ ಕೈಗೊಂಡ ಪಾದ್ರಿ ಚರ್ಚ್ ಪರವಾನಿಗೆ ರಿಟರ್ನ್ ಮಾಡಿದ್ದೇಕೆ?

Posted by Vidyamaana on 2023-09-10 18:31:35 |

Share: | | | | |


ಶಬರಿಮಲೆ ಯಾತ್ರೆಗೆ ವೃತ ಕೈಗೊಂಡ ಪಾದ್ರಿ ಚರ್ಚ್ ಪರವಾನಿಗೆ ರಿಟರ್ನ್ ಮಾಡಿದ್ದೇಕೆ?

ತಿರುವನಂತಪುರಂ: ಪ್ರಸಿದ್ಧ ಧಾರ್ಮಿಕ ಕೇಂದ್ರ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಅನುಸರಿಸಿದ 41 ದಿನಗಳ ವ್ರತವನ್ನು ಕೈಗೊಂಡುದಕ್ಕೆ ಕೇರಳದ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಧಾರ್ಮಿಕ ಸೇವೆಗಳನ್ನು ನಿರ್ವಹಿಸುವುದಕ್ಕಾಗಿ ಚರ್ಚ್ ನೀಡಿದ್ದ ಪರವಾನಗಿಯನ್ನೇ ಹಿಂದಿರುಗಿಸಿ ಸುದ್ದಿಯಾಗಿದ್ದಾರೆ.

ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದಲ್ಲಿ ಪಾದ್ರಿಯಾಗಿರುವ ರೆವ್ ಮನೋಜ್ ಕೆ.ಜಿ. ಅವರು ಈ ತಿಂಗಳ ಕೊನೆಯಲ್ಲಿ ದೇವಾಲಯಕ್ಕೆ ತೀರ್ಥಯಾತ್ರೆಗೆ ಹೋಗುವ ಸಲುವಾಗಿ 41 ದಿನಗಳ ಸಾಂಪ್ರದಾಯಿಕ ವ್ರತವನ್ನು ಆಚರಿಸುತ್ತಿದ್ದಾರೆ. ಚರ್ಚ್‌ಗೆ ಈ ಬಗ್ಗೆ ತಿಳಿದಾಗ, ಇಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪಿಸಿದೆ.


ನಾನು ಕ್ರಿಶ್ಚಿಯನ್ ಸಿದ್ಧಾಂತಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದ್ದೇನೆ ಎಂದು ನನ್ನಿಂದ ವಿವರಣೆಯನ್ನು ಕೇಳಿದರು. ವಿವರಣೆಯನ್ನು ನೀಡುವ ಬದಲು, ನಾನು ಪಾದ್ರಿಯಾದಾಗ ಸ್ವೀಕರಿಸಿದ, ಚರ್ಚ್ ನನಗೆ ನೀಡಿದ ಗುರುತಿನ ಚೀಟಿ ಮತ್ತು ಪರವಾನಗಿಯನ್ನು ಹಿಂದಿರುಗಿಸಿದೆ” ಎಂದು ಮನೋಜ್ ಕೆ.ಜಿ. ಪಿಟಿಐಗೆ ತಿಳಿಸಿದ್ದಾರೆ.


ತಾನು ಮಾಡಿದ್ದು ಆಂಗ್ಲಿಕನ್ ಚರ್ಚ್ ಆಫ್ ಇಂಡಿಯಾದ ನಿಯಮಗಳು ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ನನ್ನ ಕೆಲಸವು ಚರ್ಚ್‌ನ ಸಿದ್ಧಾಂತಗಳನ್ನು ಆಧರಿಸಿಲ್ಲ, ಬದಲಿಗೆ ಅದು “ಲಾರ್ಡ್ಸ್” ಸಿದ್ಧಾಂತಗಳನ್ನು ಆಧರಿಸಿದೆ ಎಂದು ಮನೋಜ್ ಹೇಳಿದ್ದಾರೆ.


“ದೇವರು ಪ್ರತಿಯೊಬ್ಬರನ್ನು ಅವರ ಜಾತಿ, ಮತ, ಧರ್ಮ ಅಥವಾ ನಂಬಿಕೆಗಳನ್ನು ಲೆಕ್ಕಿಸದೆ ಪ್ರೀತಿಸುವಂತೆ ಕೇಳಿಕೊಂಡಿದ್ದಾನೆ. ಇತರರನ್ನು ಪ್ರೀತಿಸುವುದು ಅವರ ಚಟುವಟಿಕೆಗಳಲ್ಲಿ ಸೇರುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ನೀವು ಚರ್ಚ್ ಸಿದ್ಧಾಂತ ಅಥವಾ ದೇವರ ಸಿದ್ಧಾಂತವನ್ನು ಅನುಸರಿಸಲು ಬಯಸುತ್ತೀರಾ ಎಂದು ನಿರ್ಧರಿಸಬಹುದು.ನೀವು ದೇವರನ್ನು ಪ್ರೀತಿಸುತ್ತೀರಾ ಅಥವಾ ಚರ್ಚ್ ಅನ್ನು ಪ್ರೀತಿಸುತ್ತೀರಾ, ನೀವು ನಿರ್ಧರಿಸಬಹುದು. ‘ಚರ್ಚ್’ ಎಂದರೆ ಸಾಂಪ್ರದಾಯಿಕ, ನಿರ್ಮಿತ ಪದ್ಧತಿಗಳು” ಎಂದು 41 ದಿನಗಳ ವ್ರತ ಕೈಗೊಳ್ಳುವ ನಿರ್ಧಾರವನ್ನು ಟೀಕಿಸಿದವರಿಗೆ ಫೇಸ್‌ಬುಕ್‌ನಲ್ಲಿ ಸ್ಪಷ್ಟವಾದ ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ.

ಮನೋಜ್ ಪಾದ್ರಿಯಾಗುವ ಮೊದಲು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು.ಆಧ್ಯಾತ್ಮಿಕ ಬೋಧನೆಗಳಿಗೆ ಅಧಿಕೃತತೆಯನ್ನು ನೀಡುವ ಸಲುವಾಗಿ ಅವರು ಪಾದ್ರಿಯಾದೆ ಎಂದು ಹೇಳಿದರು

ಭೀಕರ ರಸ್ತೆ ಅಪಘಾತ;ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಉದ್ಯಮಿ ಪ್ರಜ್ವಲ್ ನಿಧನ

Posted by Vidyamaana on 2024-06-29 08:45:20 |

Share: | | | | |


ಭೀಕರ ರಸ್ತೆ ಅಪಘಾತ;ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಉದ್ಯಮಿ ಪ್ರಜ್ವಲ್ ನಿಧನ

ಬೆಳ್ತಂಗಡಿ: ಉಜಿರೆ ಮುಖ್ಯದ್ವಾರದಿಂದ ಕಾಲೇಜು ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತದಲ್ಲಿ ಬೆಳ್ತಂಗಡಿ ಪ್ರಜ್ವಲ್ ಕಾಂಪ್ಲೆಕ್ಸ್ ಮಾಲೀಕರ ಪುತ್ರ ಪ್ರಜ್ವಲ್ ನಾಯಕ್ (35) ಮೃತಪಟ್ಟಿದ್ದಾರೆ.ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಕಾಲೇಜು ರಸ್ತೆಯಿಂದ ಬೆಳ್ತಂಗಡಿ ಸಾಗುವ ಮಧ್ಯೆ ಡಿವೈಡರ್ ನ ಬೀದಿ ದೀಪದ ಕಂಬಗಳಿಗೆ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಕಾರು ಮುಂಭಾಗ ನಜ್ಜು ಗುಜ್ಜಾದರೆ, ಒಂದು ವಿದ್ಯುತ್ ಕಂಬ ಬುಡ ಸಮೇತ ಕಿತ್ತು ಬಿದ್ದಿದೆ. ಅಪಘಾತ ರಭಸಕ್ಕೆ ಚಾಲಕ ಪ್ರಜ್ವಲ್ ತಲೆಗೆ ಗಂಭೀರ ಗಾಯವಾಗಿದ್ದು, ಆತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.



Leave a Comment: