ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಅಕ್ಟೋಬರ್ 2025 ರಿಂದ ಟ್ರಕ್ ಕ್ಯಾಬಿನ್ ಗೆ ಎಸಿ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

Posted by Vidyamaana on 2023-12-12 11:55:16 |

Share: | | | | |


ಅಕ್ಟೋಬರ್ 2025 ರಿಂದ ಟ್ರಕ್ ಕ್ಯಾಬಿನ್ ಗೆ ಎಸಿ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2025ರ ಅಕ್ಟೋಬರ್ 1ರ ಬಳಿಕ ನಿರ್ಮಾಣವಾಗುವ ಎಲ್ಲಾ ಹೊಸ ಟ್ರಕ್ ಗಳಲ್ಲಿ ಚಾಲಕರಿಗೆ ಹವಾನಿಯಂತ್ರಣ ಕ್ಯಾಬಿನ್ ಗಳನ್ನು ಕಡ್ಡಾಯ ಮಾಡಿ ಅಧಿಸೂಚನೆ ಹೊರಡಿಸಿದೆ.


ಅಕ್ಟೋಬರ್ 1, 2025 ರಂದು ಅಥವಾ ನಂತರ ತಯಾರಿಸಿದ ಎಲ್ಲಾ ವಾಹನಗಳಿಗೆ ಎನ್ 2 ಮತ್ತು ಎನ್ 3 ವರ್ಗದ ಕ್ಯಾಬಿನ್ ಗೆ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಹೇಳಿದೆ. ಈ ಹಿಂದೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಾರಿಗೆ ಸಚಿವ ನಿತಿನ್ ಗಡ್ಕರಿ, ಹಿತದೃಷ್ಟಿಯಿಂದ ಎಸಿ ಕ್ಯಾಬಿನ್ ಕಡ್ಡಾಯಗೊಳಿಸಲಾಗುತ್ತದೆ. ಟ್ರಕ್ ಡ್ರೈವರ್ ಕಂಪಾರ್ಟ್ ಮೆಂಟ್ ಗಳಲ್ಲಿ ಹವಾನಿಯಂತ್ರಿತ ಕಡ್ಡಾಯಗೊಳಿಸುವ ಕಡತಕ್ಕೆ ಸಹಿ ಹಾಕಿದ್ದೇನೆ. ಟ್ರಕ್ ಗಳನ್ನು ಓಡಿಸುವ ಚಾಲಕರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದರು.

ಪುತ್ತೂರು ಮಹಿಳೆಯರಿಬ್ಬರ ಮೇಲೆ ವ್ಯಕ್ತಿಯಿಂದ ಹಲ್ಲೆ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

Posted by Vidyamaana on 2023-08-23 07:32:14 |

Share: | | | | |


ಪುತ್ತೂರು  ಮಹಿಳೆಯರಿಬ್ಬರ ಮೇಲೆ ವ್ಯಕ್ತಿಯಿಂದ ಹಲ್ಲೆ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಪುತ್ತೂರು: ಮಹಿಳೆಯರಿಬ್ಬರ ಮೇಲೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಪುತ್ತೂರು ತಾಲೂಕಿನ ಬಡಗನ್ನೂರು ಎಂಬಲ್ಲಿ ನಡೆದಿದ್ದು, ಹಲ್ಲೆಯಿಂದ ಅಸ್ವಸ್ಥಗೊಂಡ ಮಹಿಳೆಯರಿಬ್ಬರನ್ನು ಪುತ್ತೂರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಡಗನ್ನೂರು ನಿವಾಸಿ ಸುಲೇಖ ಮತ್ತು ಅವರ ಮನೆಗೆ ಕೆಲಸಕ್ಕೆ ಬಂದ ಗಿರಿಜಾ ಹಲ್ಲೆಗೊಳಗಾದವರು. ಸುರೇಶ್ ನಾಯ್ಕ ಎಂಬಾತ ಹಲ್ಲೆ ಮಾಡಿದ ಆರೋಪಿ.

ಮಹಿಳೆಯರಿಬ್ಬರು ಗುಡ್ಡೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸುಲೇಖ ಅವರ ದೂರದ ಸಂಬಂಧಿ ಸುರೇಶ್ ನಾಯ್ಕ ಬಂದು ಸುಲೇಖ ಅವರ ಕುತ್ತಿಗೆ ಬಟ್ಟೆ ಸುತ್ತಿ ಕೊಲೆಗೆ ಯತ್ನಿಸಿದ್ದಾರೆನ್ನಲಾಗಿದೆ. ಇದನ್ನು ನೋಡಿದ ಕೆಲಸಾಕೆ ಗಿರಿಜಾ ಅವರಿಗೂ ಆತ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ಇನ್ನು ಗಾಯಾಳುಗಳಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಮಿತ್ ಶಾ ಮಾತನ್ನೇ ಧಿಕ್ಕರಿಸಿದವನ ಬಂಡವಾಳ ಸದ್ಯವೇ ಹೊರಬೀಳಲಿದೆ: ಪುತ್ತಿಲ ವಿರುದ್ಧ ಪ್ರಭಾಕರ ಭಟ್ ವಾಗ್ದಾಳಿ

Posted by Vidyamaana on 2023-04-27 10:29:53 |

Share: | | | | |


ಅಮಿತ್ ಶಾ ಮಾತನ್ನೇ ಧಿಕ್ಕರಿಸಿದವನ ಬಂಡವಾಳ ಸದ್ಯವೇ ಹೊರಬೀಳಲಿದೆ: ಪುತ್ತಿಲ ವಿರುದ್ಧ ಪ್ರಭಾಕರ ಭಟ್ ವಾಗ್ದಾಳಿ

ಪುತ್ತೂರು: ಹಿಂದುತ್ವದ ಹೆಸರಿನಲ್ಲಿ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿರುವ ಈ ಭಾಗದ ಪ್ರಭಾವಿ ಹಿಂದು ನಾಯಕ ಅರುಣ್ ಕುಮಾರ್ ಪುತ್ತಿಲ ಒಂದೆಡೆ ಗ್ರಾಮಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರೆ ಇನ್ನೊಂದೆಡೆ ಪುತ್ತಿಲ ವಿರುದ್ಧ ಹಿರಿಯ ಹಿಂದು ಮುಖಂಡರು ವಾಗ್ದಾಳಿಗಿಳಿದಿದ್ದಾರೆ. ಗುರುವಾರದ ಅಚ್ಚರಿಯ ಬೆಳವಣಿಗೆಯಲ್ಲಿ ಪುತ್ತೂರು ಭಾಗದ ‘ಹಿಂದು ಹೃದಯ ಸಾಮ್ರಾಟ್’ ಎಂದೇ ಕರೆಯಲ್ಪಡುವ ಡಾ. ಪ್ರಸಾದ್ ಭಂಡಾರಿ ಮತ್ತು ಕರಾವಳಿ ಭಾಗದ ಪ್ರಭಾವಿ ಹಿಂದು ಮುಖಂಡ ಮತ್ತು ಆರೆಸ್ಸೆಸ್ಸಿನ ಹಿರಿಯ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಒಂದೇ ದಿನ ಅರುಣ್ ಕುಮಾರ್ ಪುತ್ತಿಲ ವಿರುದ್ಧ ತಾರಾಮಾರ ವಾಗ್ದಾಳಿ ನಡೆಸಿದ್ದಾರೆ!

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ನೂತನ ಮನೆಯ ಗೃಹಪ್ರವೇಶಕ್ಕೆ ಆಗಮಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್, ‘ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ..?’ ಎಂದು ಪ್ರಶ್ನಿಸಿದ್ದಾರೆ.

ಅರುಣ್ ಕುಮಾರ್ ದೇವಸ್ಥಾನದ ದುಡ್ಡು ಹೊಡೆದಿದ್ದಾನೆ, ಹಿಂದುಗಳ ಮೇಲೆಯೇ ದೌರ್ಜನ್ಯ ನಡೆಸಿದ್ದ. ಗೋ ಸಾಗಾಟ ತಡೆದಾಗ ಇದ್ದ ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲಿ ಅರುಣ್ ಕುಮಾರ್ ಕೂಡಾ ಒಬ್ಬ ಅಷ್ಟೇ. ಆ ವ್ಯಕ್ತಿ ಹಿಂದೂಗಳ ವಿರುದ್ಧವೇ ಹೋರಾಟ ಮಾಡಿರುವಂತದ್ದು, ಆಫಿದಾವಿತ್ ನಲ್ಲಿ ಬರೆದುಕೊಂಡಿದ್ದಾರೆ. ಏನೆಲ್ಲಾ ಪ್ರಕರಣಗಳಿವೆ ಅಂತ ಅದನ್ನು ಸ್ವಲ್ಪ ನೋಡಿ, ಅಂಥವರು ಹಿಂದುತ್ವನಾ..!?? ಹಿಂದೂಗಳಿಗೆ ಹೊಡೆದವರು, ದೇವಸ್ಥಾನದ ಹಣ ಹೊಡೆದವರು, ಒಂದು ಹೆಣ್ಣು ಮಗಳು ಸತ್ತಾಗ ಅದನ್ನು ನೋಡದ ಮಾನವೀಯತೆ ಇಲ್ಲದವರು.., ಯಾರದ್ದೋ ಜಾಗದಲ್ಲಿ ದಾರಿ ಬೇಕು ಎಂದು ಜಗಳ ಮಾಡಿ 307 ಹಾಕಿಸಿಕೊಂಡವರು, ಅವರದ್ದು ಎಂಥಾ ಹಿಂದುತ್ವ..!! ಎಂದು ಕಲ್ಲಡ್ಕ ಭಟ್ ಆಕ್ರೋಶ ಹೊರ ಹಾಕಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವ ಹಿಂದುತ್ವದ ಕಾರ್ಯವೂ ಅವನಿಂದ ನಡೆದಿಲ್ಲ ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವುದಾಗಿ ಹೇಳಿದಾಗಲೂ ಧಿಕ್ಕರಿಸಿದ ವ್ಯಕ್ತಿ ಆತ. ಈ ವಿಚಾರವೆಲ್ಲಾ ಗೊತ್ತಿಲ್ಲದೆ ಕೆಲವು ಕಾರ್ಯಕರ್ತರು ಅವನ ಹಿಂದೆ ಓಡಾಡ್ತಿದ್ದಾರೆ, ಎಲ್ಲಿಗೂ ಶೀಘ್ರದಲ್ಲೇ ಆತನ ಬಂಡವಾಳ ತಿಳಿಯಲಿದೆ ಎಂದು ಭಟ್ ಹೇಳಿದ್ದಾರೆ.

ಒಟ್ಟಿನಲ್ಲಿ ಒಂದೇ ದಿನ ಕರಾವಳಿ ಭಾಗದ ಇಬ್ಬರು ಪ್ರಮುಖ ಮತ್ತು ಹಿರಿಯ ಹಿಂದು ಮುಖಂಡರು ತಮ್ಮ ಶಿಷ್ಯನ ವಿರುದ್ಧವೇ ತಾರಾಮಾರ ವಾಗ್ದಾಳಿ ನಡೆಸಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯವನ್ನುಂಟುಮಾಡಿದ್ದರೆ, ಇದು ಪುತ್ತಿಲ ಅವರ ಶಕ್ತಿ ಕುಂದಿಸಲು ಬಿಜೆಪಿ ನಡೆಸಿರುವ ಮಾಸ್ಟರ್ ಸ್ಟ್ರೋಕ್ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.

ಉಪ್ಪಿನಂಗಡಿ : ಇ-ಸಿಗರೇಟು ಮಾರಾಟ ಮೊಬೈಲ್ ಅಂಗಡಿಗೆ ಪೊಲೀಸ್ ದಾಳಿ .

Posted by Vidyamaana on 2023-02-26 03:09:22 |

Share: | | | | |


ಉಪ್ಪಿನಂಗಡಿ : ಇ-ಸಿಗರೇಟು ಮಾರಾಟ ಮೊಬೈಲ್ ಅಂಗಡಿಗೆ ಪೊಲೀಸ್ ದಾಳಿ .

ಉಪ್ಪಿನಂಗಡಿ: ಇ- ಸಿಗರೇಟ್ ಮಾರಾಟ ಮಾಡುತ್ತಿದ್ದ ಮೊಬೈಲ್ ಅಂಗಡಿಯೊಂದಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮುಕ್ವೆ ಮಣಿಯ ನಿವಾಸಿ ಶೇಖ್ ಹಾರೂನ್ ರವರ ಮಗ ಶೇಖ್ ಶಾಹಿದ್ ನನ್ನು ವಶಕ್ಕೆ ಪಡೆದು ಜಾಮೀನಿನ ಮೂಲಕ ಬಿಡುಗಡೆ ಯಾದ ಘಟನೆ ಫೆ.25 ಶನಿವಾರ ರಾತ್ರಿ ನಡೆದಿದೆ.

ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್‌ನ ಹಿಂಬದಿಯ ಒಳಸಂದಿನಲ್ಲಿರುವ  4 U Best service ಮೊಬೈಲ್‌ ಅಂಗಡಿಯೊಂದರಲ್ಲಿ ಇ- ಸಿಗರೇಟ್ ಮಾರಲಾಗುತ್ತಿದ್ದ ಮಾಹಿತಿ ಪಡೆದ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್‌. ಹಾಗೂ ಉಪ್ಪಿನಂಗಡಿ ಪೊಲೀಸ್‌ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ. ಅವರ ತಂಡ ಮೊಬೈಲ್ ಅಂಗಡಿಯಿಂದ ಇ- ಸಿಗರೇಟ್ ಗೆ ಬಳಸಲಾಗುವ ಅಮಲು ಪದಾರ್ಥ, ಸ್ಟೋಕ್ ಮಾಡಲು ಬೇಕಾದ ಟ್ಯೂಬ್ ಗಳನ್ನು ವಶಕ್ಕೆ ತೆಗೆದುಕೊಂಡಿದೆ. ಯುವ ಜನತೆಯನ್ನು ಆಕರ್ಷಿಸುವ ಇ- ಸಿಗರೇಟ್ ಮಾರಾಟ ಕಾನೂನು ಬಾಹಿರವಾಗಿದ್ದು, ಇದು ರಾಜ್ಯದಲ್ಲೇ ಅಪರೂಪದ ಪ್ರಕರಣವಾಗಿದೆ. ಅಕ್ರಮವಾಗಿ ಮಾರಾಟ ಮಾಡಲು ಇರಿಸಿಕೊಂಡಿದ್ದ  ಸುಮಾರು 52  ನಿಷೇಧಿತ ಇ-ಸಿಗರೇಟ್‌ ಇದ್ದು, ಇವುಗಳ ಅಂದಾಜು ಮೌಲ್ಯ ಒಟ್ಟು 26,000/ ಅಂದಾಜಿಸಲಾಗಿದೆ.ನಿಷೇಧಿತ ಇ- ಸಿಗರೇಟ್ ಮಾರಾಟ ಮಾಡುತ್ತಿದ್ದವನ ಮೇಲೆ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ  ಕಾಯ್ದೆ 2019 ರಂತೆ ಕ್ರಮ ಕೈಗೊಳ್ಳಲಾಗಿದೆ.

ನರೇಂದ್ರ ಮೋದಿ ರೋಡ್ ಶೋ ಗಾಗಿ ಸಿದ್ಧವಾಗಿದೆ 2 ಟನ್‌ ಹೂವಿನ ಎಸಳು

Posted by Vidyamaana on 2024-04-14 13:36:34 |

Share: | | | | |


ನರೇಂದ್ರ ಮೋದಿ ರೋಡ್ ಶೋ ಗಾಗಿ ಸಿದ್ಧವಾಗಿದೆ 2 ಟನ್‌ ಹೂವಿನ ಎಸಳು

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಲಿದ್ದು ರಾತ್ರಿ ಮಂಗಳೂರು ನಗರದಲ್ಲಿ ರೋಡ್ ಶೋ ನಡೆಯಲಿದೆ.

ನರೇಂದ್ರ ಮೋದಿ ರೋಡ್ ಶೋ ಗಾಗಿ ಎರಡು ಟನ್ ಹೂವಿನ ಎಸಳುಗಳನ್ನು ಸಿದ್ಧಪಡಿಸಲಾಗಿದ್ದು, ರೋಡ್ ಶೋ ವೇಳೆ ಪ್ರಧಾನಮಂತ್ರಿ ಸಾಗುವ ಮಾರ್ಗದಲ್ಲಿ ಪುಷ್ಪ ವೃಷ್ಟಿಗಾಗಿ ಎರಡು ಟನ್ ಚೆಂಡು ಹೂವನ್ನು ಕೋಲಾರದಿಂದ ತರಿಸಲಾಗಿದೆ.

ಅಮಿತ್‌ ಶಾ ಭೇಟಿಯಾದ ಹೆಚ್‌ಡಿಕೆ, ಮಂಜುನಾಥ್

Posted by Vidyamaana on 2024-03-17 13:57:09 |

Share: | | | | |


ಅಮಿತ್‌ ಶಾ ಭೇಟಿಯಾದ ಹೆಚ್‌ಡಿಕೆ, ಮಂಜುನಾಥ್

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ (CN Manjunath) ಭೇಟಿಯಾಗಿ ಮಾತುಕತೆ ನಡೆಸಿದರು.ಲೋಕ ಸಭಾ ಚುನಾವಣೆಗೆ ಇನ್ನೇನೂ ಕೆಲವೇ ದಿನಗಳು ಬಾಕಿಯಿದೆ. ಈ ಬೆನ್ನಲ್ಲೇ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಈ ವೇಳೆ ಕೆಲಕಾಲ ಮಾತುಕತೆ ನಡೆಸಿದರು.


ಈ ವೇಳೆ ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಅನಸೂಯ ಮಂಜುನಾಥ್ ಇದ್ದರು.

Recent News


Leave a Comment: