ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಸುದ್ದಿಗಳು News

Posted by vidyamaana on 2024-03-23 15:52:34 | Last Updated by Vidyamaana on 2024-03-23 15:52:34

Share: | | | | |


ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

*💥Whats App Group ಗೆ ಸೇರಲು ಕ್ಲಿಕ್ ಮಾಡಿ

*ಹಣ ತೆಗೆದುಕೊಂಡು ಹೋದ ವಿಚಾರ*:  ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ  ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ  ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


 Share: | | | | |


ಕಾಂಗ್ರೆಸ್ ನಿರ್ನಾಮ ಮಾಡಬೇಕೆಂದ ಶೆಟ್ಟರ್ - ಡಿಕೆಶಿ ಮಾತಲ್ಲೇ ಕೊಟ್ರೂ ಟಕ್ಕರ್

Posted by Vidyamaana on 2024-01-28 17:37:05 |

Share: | | | | |


ಕಾಂಗ್ರೆಸ್ ನಿರ್ನಾಮ ಮಾಡಬೇಕೆಂದ ಶೆಟ್ಟರ್ - ಡಿಕೆಶಿ ಮಾತಲ್ಲೇ ಕೊಟ್ರೂ ಟಕ್ಕರ್

ಬೆಂಗಳೂರು :- ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ಶೆಟ್ಟರ್ ಅವರು ಇಲ್ಲಿದ್ದಾಲೂ ಹಾಗೆಯೇ ಮಾತಾಡುತ್ತಿದ್ದರು, ಬಿಜೆಪಿಯನ್ನು ನಿರ್ನಾಮಗೊಳಿಸಬೇಕು ಅನ್ನುತ್ತಿದ್ದರು ಎಂದು ನಗುತ್ತಾ ಹೇಳಿದರು.ಆರ್ ಅಶೋಕ್ ವಿರೋಧ ಪಕ್ಷದ ನಾಯಕನಾದಾಗ, ಬಿವೈ ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷನಾದಾಗ ಅವರ ಕಟು ಟೀಕೆಗಳನ್ನು ಮಾಡಿದ್ದರು. ವಿಪಕ್ಷ ನಾಯಕನ ಆಯ್ಕೆ ನಡೆಯುವ ಮೊದಲು ಅವರು ಹೊಸ ಸರ್ಕಾರ ರಚನೆನಯಾಗಿ 7 ತಿಂಗಳಾದರೂ ಬಿಜೆಪಿ ನಾಯಕರಿಗೆ ಒಬ್ಬ ವಿರೋಧ ಪಕ್ಷನನ್ನು ಆಯ್ಕೆ ಮಾಡಿವುದು ಸಾಧ್ಯವಾಗಿಲ್ಲ ಅಂತ ಮೂದಲಿಸುತ್ತಿದ್ದರು. ಬಿಜೆಪಿಗೆ ವಾಪಸ್ಸು ಹೋದ ಕೇವಲ ಎರಡ ದಿನಗಳ ಬಳಿಕ ಅಂಥ ಟೀಕೆಗಳನ್ನು ಕಾಂಗ್ರೆಸ್ ಮತ್ತು ಅದರ ನಾಯಕರ ಮಾಡುತ್ತಿದ್ದಾರೆ.ಇವತ್ತು ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಬೇಕು ಅಂದರಂತೆ. ಅದನ್ನು ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದಾಗ, ಶೆಟ್ಟರ್ ಅವರು ಇಲ್ಲಿದ್ದಾಲೂ ಹಾಗೆಯೇ ಮಾತಾಡುತ್ತಿದ್ದರು, ಬಿಜೆಪಿಯನ್ನು ನಿರ್ನಾಮಗೊಳಿಸಬೇಕು ಅನ್ನುತ್ತಿದ್ದರು ಎಂದು ನಗುತ್ತಾ ಹೇಳಿದರು.

ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ಘೋಷಣೆ

Posted by Vidyamaana on 2023-10-09 15:45:30 |

Share: | | | | |


ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ಘೋಷಣೆ

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಪೂರ್ವಭಾಯಿಯಾಗಿ ದೇಶದ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಸೋಮವಾರ ಭಾರತೀಯ ಚುನಾವಣಾ ಆಯೋಗವು ಐದು ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ.



ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.


ಮಿಜೋರಾಂ ವಿಧಾನಸಭೆ ಚುನಾವಣೆಯು ನವೆಂಬರ್ 7ರಂದು ನಡೆಯಲಿದೆ. ಛತ್ತೀಸ್ ಗಡದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನ.7 ಮತ್ತು 17ರಂದು ಮತದಾನ ನಡೆಯಲಿದೆ. ಮಧ್ಯ ಪ್ರದೇಶದಲ್ಲಿ ನ.17, ರಾಜಸ್ಥಾನದಲ್ಲಿ ನ.23ರಂದು ಮತ್ತು ತೆಲಂಗಾಣದಲ್ಲಿ ನ. 30ರಂದು ಮತದಾನ ನಡೆಯಲಿದೆ.


ಎಲ್ಲಾ ಐದು ರಾಜ್ಯಗಳಲ್ಲಿ ಮತ ಎಣಿಕೆಯು ಡಿಸೆಂಬರ್ 3ರಂದು ನಡೆಯಲಿದೆ.

ರಾಜಕೀಯನೇ ಮಾಡ್ತೀನಿ ಅಂದ್ರೆ ನಾನು ಅದಕ್ಕೂ ರೆಡಿ- ಡಿ ಕೆ ಶಿವಕುಮಾರ್ ಹೇಳಿದ್ಯಾರಿಗೆ

Posted by Vidyamaana on 2023-06-05 13:15:27 |

Share: | | | | |


ರಾಜಕೀಯನೇ ಮಾಡ್ತೀನಿ ಅಂದ್ರೆ ನಾನು ಅದಕ್ಕೂ ರೆಡಿ- ಡಿ ಕೆ ಶಿವಕುಮಾರ್ ಹೇಳಿದ್ಯಾರಿಗೆ

ಬೆಂಗಳೂರು :ಜೂನ್‌ 05: ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡೋಣ. ರಾಜಕೀಯನೇ ಮಾಡ್ತೀನಿ ಅಂದ್ರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸರಿ, ಸಂಘರ್ಷಕ್ಕೂ ರೆಡಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಸೋಮವಾರ ವಿಧಾನಸೌಧಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿ ಕುರಿತ ಬೆಂಗಳೂರಿನ ಎಲ್ಲ ಶಾಸಕರು, ಸಂಸದರು, ಎಂಎಲ್ಸಿಗಳ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ನೀವು ಯಾವುದೇ ರಾಜಕೀಯ ಪಕ್ಷದವರು ಆಗಿರಬಹುದು.ಒಟ್ಟಿಗೆ ಕೆಲಸ ಮಾಡೋಣ. ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡೋಣ. ರಾಜಕೀಯನೇ ಮಾಡ್ತೀನಿ ಅಂದ್ರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸರಿ, ಸಂಘರ್ಷಕ್ಕೂ ರೆಡಿ. ಆದರೆ ನನಗೆ ದ್ವೇಷದ ರಾಜಕೀಯ ಬೇಕಿಲ್ಲ. ಅದರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.


ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಸಂಪೂರ್ಣ ಸಹಕಾರ, ಸಲಹೆ ಅಗತ್ಯ. ಚುನಾವಣೆ ರಾಜಕೀಯ ಮುಗೀತು. ಈಗ ರಾಜಕೀಯ ಬೇಡವೆ ಬೇಡ. ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಏನೇ ಇರಬಹುದು. ಅದನ್ನು ಪಕ್ಕಕ್ಕಿಡೋಣ. ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ ಎಂದು ಕೇಳಿದ್ದಾರೆ.


ಮಾಜಿ ಪ್ರಧಾನಿ ವಾಜಪೇಯಿ ಅವರು ಬಹಳ ಹಿಂದೆಯೇ ವಿಶ್ವಮಟ್ಟದಲ್ಲಿ ಬೆಂಗಳೂರು ನಗರದ ಘನತೆ, ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಈಗಿನ ಪ್ರಧಾನಿಯವರೂ ಅದನ್ನು ಬಹಳ ಸಾರಿ ಹೇಳಿದ್ದಾರೆ. ಹೀಗಾಗಿ ನಾವು-ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ, ಹೆಚ್ಚಿಸೋಣ. ಬೆಂಗಳೂರು ನಾಗರಿಕರು ಮೂಲಸೌಕರ್ಯ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಿದ್ದಾರೆ. ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದಾರೆ. ಸಮರ್ಪಕ ನಾಗರಿಕ ಸೌಕರ್ಯ ಪೂರೈಕೆ ನಮ್ಮೆಲ್ಲರ ಕರ್ತವ್ಯ.

ನೀವು ನನಗೆ ಸಲಹೆ ಕೊಡಿ. ನಿರ್ಮಲ ಮನಸ್ಸಿಂದ ತೆಗೆದುಕೊಳ್ಳುತ್ತೇನೆ. ಅನುಷ್ಠಾನಕ್ಕೆ ತರೋಣ. ಬೆಂಗಳೂರು ಗೌರವ ಹೆಚ್ಚಿಸೋಣ. ಬೆಂಗಳೂರಿನ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಪ್ರಮಾಣದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ, ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಆಗುತ್ತಿದೆಯೇ ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ವರದಿ ಕೊಡಬೇಕು.


ದೇಶದ ಅರ್ಥ ವ್ಯವಸ್ಥೆಗೆ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ಕೊಡುಗೆ ಅಪಾರ. ಜಿಎಸ್ಟಿ, ಸೆಸ್, ನಾನಾ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೆಚ್ಚು ಹಣ ಹೋಗುತ್ತದೆ. ರಾಜ್ಯಕ್ಕೆ ಬರಬೇಕಾದ ಪಾಲು ತಂದು ಅಭಿವೃದ್ಧಿ ಮಾಡೋಣ. ಬೆಂಗಳೂರು ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಬಹಳ ಮುಖ್ಯ. ಆದರೆ ಕೆಲವರು ಈ ಬಗ್ಗೆ ಗಮನ ಹರಿಸದೆ, ಅವರವರ ಕಣ್ಣಿನ ನೇರಕ್ಕೆ, ಅವರವರ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ. ಕೆಲವರು ದಿಕ್ಕು ತಪ್ಪಿಸಲು ಯತ್ನಿಸುತ್ತಾರೆ ಎಂದರುನಾವು ಪ್ರತಿಯೊಂದನ್ನೂ ಪರಾಮರ್ಶಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಅಧಿಕಾರಿಗಳು ಆಟ ಆಡಲು ನೋಡಿದರೆ, ದಿಕ್ಕು ತಪ್ಪಿಸಲು ಯತ್ನಿಸಿದರೆ ಸಹಿಸುವುದಿಲ್ಲ. ಅಂತಹವರು ಜಾಗ ಖಾಲಿ ಮಾಡಬೇಕಾಗುತ್ತದೆ. ನಿಮ್ಮ ವೈಯಕ್ತಿಕ ಹಿತ ಪಕ್ಕಕ್ಕಿಡಿ. ನಿಜ ಅರ್ಥದಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತನ್ನಿ. ಹಿಂದಿನ ದಿನಗಳಲ್ಲಿ ಏನಾಯಿತು ಎಂಬ ಬಗ್ಗೆ ಚರ್ಚೆ, ಪರಾಮರ್ಶೆಯಲ್ಲಿ ಸಮಯ ವ್ಯಯಿಸುವುದು ನನಗೆ ಬೇಕಿಲ್ಲ. ಭವಿಷ್ಯದ ಬಗ್ಗೆ ಸಕರಾತ್ಮಕ ಚಿಂತನೆ ಮಾಡೋಣ. ಬೆಂಗಳೂರು ಪರಿವರ್ತನೆ ಮಾಡೋಣ ಎಂದು ಸಭೆಯಲ್ಲಿ ಹೇಳಿದರು.

16ರ ಹುಡುಗನೊಂದಿಗೆ 32 ವರ್ಷದ ಮಹಿಳೆಯ ಲವ್.! ಮಗುವಿಗೆ ತಂದೆಯಾದ ಬಾಲಕ

Posted by Vidyamaana on 2024-01-14 16:08:02 |

Share: | | | | |


16ರ ಹುಡುಗನೊಂದಿಗೆ 32 ವರ್ಷದ ಮಹಿಳೆಯ ಲವ್.!   ಮಗುವಿಗೆ ತಂದೆಯಾದ ಬಾಲಕ

ಲಂಡನ್ : ಎರಡು ಮಕ್ಕಳ ತಾಯಿಯೊಂದಿಗೆ 16 ವರ್ಷದ ಪೋರನಿಗೆ ಲವ್ ಆಗಿದ್ದು, ಸದ್ಯ ಆತ 9 ತಿಂಗಳ ಮಗುವಿನ ತಂದೆಯಾಗಿದ್ದಾನೆ. ಇಂಗ್ಲೆಂಡಿನ ಡರ್ಹಾಮ್ ಸಿಟಿಯ 31 ವರ್ಷದ ಕ್ಯಾಥಲಿನ್ ಮಾರ್ಟಿನಾ ಮತ್ತು 16 ವರ್ಷದ ಜ್ಯಾಕ್ ಕುಸಾಯಿಲ್ ಇಬ್ಬರು ಸಹ ವಯಸ್ಸಿನ ಭೇದ ಮರೆತು ಪ್ರೇಮದ ಬಲೆಯಲ್ಲಿ ಸಿಲುಕಿದ ಜೋಡಿಗಳು.ಮಾರ್ಟಿನಾ ತನ್ನ ಪತಿಯಿಂದ ವಿಚ್ಚೇದನ ಪಡೆದಿದ್ದು, ಆ ವೇಳೆ ಆಕೆ 11 ವರ್ಷದ ಹಾಗು 3 ವರ್ಷದ ಎರಡು ಗಂಡು ಮಕ್ಕಳನ್ನು ಹೊಂದಿದ್ದಳು.ಫೇಸ್‍ಬುಕ್‍ನಲ್ಲಿಲವ್: ಪತಿಯ ವಿಚ್ಚೇದನ ಬಳಿಕ ಮಾರ್ಟಿನಾನಗೆ ಫೇಸ್‍ಬುಕ್‍ನಲ್ಲಿ ಜ್ಯಾಕ್‍ನ ಪರಿಚಯವಾಗಿದೆ. ಫೇಸ್‍ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಚಾಟಿಂಗ್ ಮಾಡುತ್ತ ಸ್ನೇಹಿತರಾಗಿದ್ದಾರೆ. ಒಂದು ದಿನ ಮಾರ್ಟಿನಾ ತನ್ನ ಮನೆಯ ಗಾರ್ಡನ್ ಕೆಲಸಕ್ಕಾಗಿ ಜ್ಯಾಕ್‍ಗೆ ಸಹಾಯ ಕೇಳಿ ಮನೆಗೆ ಬರುವಂತೆ ಹೇಳಿದ್ಳು. ಅಂದು ಇಬ್ಬರೂ ಮೊದಲ ಭೇಟಿಯಾಗಿದ್ದಾರೆ. ಮುಂದೆ ಮಾರ್ಟಿನಾ ಮತ್ತು ಜ್ಯಾಕ್ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ಬದಲಾಗಿತ್ತು.


ಮನೆಯಲ್ಲಿವಿರೋಧ: ಇಬ್ಬರ ಪ್ರೀತಿ ಐದು ತಿಂಗಳ ಆದ್ಮೇಲೆ ಜ್ಯಾಕ್ ತಾಯಿ ಇವರಿಬ್ಬರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಡಿಸಿದ್ದರು. ಜ್ಯಾಕ್ ತಾಯಿಯ ಪ್ರಕಾರ ತಮ್ಮ ಮಗ ಮಾರ್ಟಿನಾಳ ಅರ್ಧ ವಯಸ್ಸಿನವನಾಗಿದ್ದನು. ಈ ಹಿನ್ನೆಲೆಯಲ್ಲಿ ಜ್ಯಾಕ್‍ರ ತಾಯಿ ಇವರಿಬ್ಬರ ಸಂಬಂಧಕ್ಕೆ ವಿರೋಧಿಸಿದ್ದರು. ಕೊನೆಗೆ ಮಾರ್ಟಿನಾ 5 ತಿಂಗಳ ಗರ್ಭೀಣಿ ಎಂದು ತಿಳಿದಾಗ ಜ್ಯಾಕ್ ತಾಯಿ ಒಪ್ಪಿದ್ದಾರೆ. ಜ್ಯಾಕ್ ಈಗ 18 ವರ್ಷದವನಾಗಿದ್ದು, 9 ತಿಂಗಳು ಮಗನ ತಂದೆಯಾಗಿದ್ದಾನೆ.

ಸಾರ್ವಜನಿಕರ ಗಮನಕ್ಕೆ : ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಕಂಡುಬಂದ್ರೆ ಈ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಿ!

Posted by Vidyamaana on 2024-03-17 19:47:44 |

Share: | | | | |


ಸಾರ್ವಜನಿಕರ ಗಮನಕ್ಕೆ : ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಕಂಡುಬಂದ್ರೆ ಈ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಿ!

ಬೆಂಗಳೂರು : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭೆ ಚುನಾವಣೆ ಘೋಷಣೆ ಮಾಡಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅದ್ರಂತೆ, ಏಪ್ರಿಲ್ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದೆ. ಇನ್ನು ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.ಹಾಗಾದರೆ ಮೊದಲ ಹಂತದಲ್ಲಿ ಯಾವ ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ ಯಾವ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.


ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ. ದಕ್ಷಿಣ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆದರೆ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

ಸಿ-ವಿಜಿಲ್‍ನಲ್ಲಿ ದೂರು ಕೊಡಿ:

ಚುನಾವಣಾ ಅಕ್ರಮ, ಎಂ.ಸಿ.ಸಿ. ಉಲ್ಲಂಘನೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಏನೇ ದೂರುಗಳಿದಲ್ಲಿ ಸಿ-ವಿಜಿಲ್ ತಂತ್ರಾಂಶ ಮತ್ತು 1950 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.


ವಿವಿಧ ತಂಡಗಳು ತಪಾಸಣೆ ಸಂದರ್ಭದಲ್ಲಿ ವಶಕ್ಕೆ ಪಡೆಯಲಾದ ಹಣ, ಇತರೆ ಬೆಲೆ ಬಾಳುವ ವಸ್ತುಗಳ ಪರಿಶೀಲನೆಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ನೇತೃತ್ವದಲ್ಲಿ ಕ್ಯಾಶ್ ರಿಡ್ರೆಸಲ್ ಸಮಿತಿ ರಚಿಸಲಾಗಿದೆ.

ಕಾವು : ಪಕ್ಷೇತರ ಅಭ್ಯರ್ಥಿ ಪುತ್ತಿಲ ಪರ ಸಮಾವೇಶ : ಹಲವಾರು ಮಂದಿ ಭಾಗಿ

Posted by Vidyamaana on 2023-05-02 04:31:44 |

Share: | | | | |


ಕಾವು : ಪಕ್ಷೇತರ ಅಭ್ಯರ್ಥಿ ಪುತ್ತಿಲ ಪರ ಸಮಾವೇಶ : ಹಲವಾರು ಮಂದಿ ಭಾಗಿ

ಪುತ್ತೂರು : ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ರವರ ಪರ ಸಮಾವೇಶ ಕಾವು ಪಂಚವಟಿಯಲ್ಲಿ ನಡೆಯಿತುಸಮಾವೇಶದಲ್ಲಿ ಅರುಣ್ ಪುತ್ತಿಲ ರವರ ಪರ ಮತಯಾಚನೆ ಮಾಡಲಾಯಿತು. ವೇದಿಕೆ ಪಕ್ಷೇತರ ಅಭ್ಯರ್ಥಿ ಪುತ್ತಿಲ ಸಹಿತ ಹಲವು ಪ್ರಮುಖರು ಉಪಸ್ಥಿತರಿದ್ದರು.ನೂರಾರು ಮಂದಿ ಕಾರ್ಯಕರ್ತರು, ಮಹಿಳೆಯರು, ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Recent News


Leave a Comment: