ಪುತ್ತೂರು :ಭೀಕರ ಅಪಘಾತ - 10 ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿ

ಸುದ್ದಿಗಳು News

Posted by vidyamaana on 2024-05-27 18:41:30 |

Share: | | | | |


ಪುತ್ತೂರು :ಭೀಕರ ಅಪಘಾತ - 10 ಕ್ಕೂ  ಹೆಚ್ಚು ವಾಹನಗಳು ಪುಡಿ ಪುಡಿ

ಪುತ್ತೂರು : ಪುತ್ತೂರಿನ ಹೊರ ವಲಯದ ಸಂಟ್ಯಾರಿನಲ್ಲಿ ಭೀಕರ ಅಪಘಾತ ನಡೆದು 10ಕ್ಕೂ ಹೆಚ್ಚು ವಾಹನಗಳು ಪುಡಿ ಪುಡಿಯಾದ ಘಟನೆ ಮೇ.27ರಂದು ಸಂಜೆ ನಡೆದಿದೆ. 

ಪಾಣಾಜೆ - ಸಂಟ್ಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ ನಿಲ್ಲಿಸಿದ್ದ ಹತ್ತಕ್ಕೂ ಹೆಚ್ಚು ಬೈಕ್ ಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ. 


ಪಾಣಾಜೆ ಕಡೆಯಿಂದ ಅತೀ ವೇಗದಲ್ಲಿ ಬರುತಿದ್ದ ಕಾರೊಂದು  ಈ ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದೆ. ಸಂಟ್ಯಾರ್ ಜಂಕ್ಷನ್ ನಲ್ಲಿ   ವಾಹನ ನಿಲ್ಲಿಸಿ ಬಸ್ ನಲ್ಲಿ ಉದ್ಯೋಗಕ್ಕೆ ತೆರಳುವವರ 10 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಪುಡಿ ಪುಡಿಯಾಗಿ ಚೆಲ್ಲಪಿಲ್ಲಿಯಾಗಿದೆ.

 Share: | | | | |


ಸುಳ್ಯ : ಶಾಲಾ ಆವರಣದಲ್ಲಿ ಕೊಲೆ ಪ್ರಕರಣ; ಆರೋಪಿ ಕಡಬ ಮೂಲದ ಉದಯ ಕುಮಾರ ಬಂಧನ

Posted by Vidyamaana on 2024-06-18 16:47:47 |

Share: | | | | |


 ಸುಳ್ಯ : ಶಾಲಾ ಆವರಣದಲ್ಲಿ ಕೊಲೆ ಪ್ರಕರಣ; ಆರೋಪಿ ಕಡಬ ಮೂಲದ ಉದಯ ಕುಮಾರ ಬಂಧನ

ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲ ಶಾಲಾ ಜಗಲಿಯಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಡಬ ತಾಲೂಕಿನ ಎಡಮಂಗಲದ ಉದಯ ಕುಮಾರ್ ನಾಯ್ಕ್ (35) ಬಂಧಿತ ಆರೋಪಿ.ರವಿವಾರ ರಾತ್ರಿ ವಿರಾಜಪೇಟೆಯ ವಸಂತ (45) ಎಂಬ ವ್ಯಕ್ತಿಯ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿತ್ತು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಉದಯ ಕುಮಾರ್ ಗೆ ಬಾರೊಂದರಲ್ಲಿ ವಸಂತ ಎಂಬಾತನ ಪರಿಚಯವಾಗಿದ್ದು, ರವಿವಾರ ರಾತ್ರಿ ಕಾಂತಮಂಗಲಕ್ಕೆ ಅಟೋ ರಿಕ್ಷಾದಲ್ಲಿ ಬಂದು ಶಾಲಾ ಜಗಲಿಯಲ್ಲಿ ಮಲಗಿದ್ದರು. ವಸಂತ ಎಂಬವರ ಬಳಿ 800

ಉಡುಪಿ: ಕಚ್ಚಾ ಬಾಂಬ್ ತಯಾರಿಸುತ್ತಿದ್ದ ಇಬ್ಬರ ಬಂಧನ

Posted by Vidyamaana on 2023-10-15 16:19:02 |

Share: | | | | |


ಉಡುಪಿ: ಕಚ್ಚಾ ಬಾಂಬ್ ತಯಾರಿಸುತ್ತಿದ್ದ ಇಬ್ಬರ ಬಂಧನ

ಉಡುಪಿ :   ಉಡುಪಿ ಜಿಲ್ಲೆಯ ಹೆಗ್ಗುಂಜೆ ಗ್ರಾಮದ ಮಂದಾರ್ತಿ ಬಳಿಯ ಹಾಡಿಯಲ್ಲಿ ಹಂದಿ ಬೇಟೆಗಾಗಿ ಇಡಲಾದ ಕಚ್ಚಾ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಚೆನ್ನಗಿರಿ ಮೂಲದ ಕಾಶಿನಾಥ ಜೆ.ಎಸ್.(30), ಶಿವಮೊಗ್ಗ ಜಿಲ್ಲೆಯ ಸದಾಶಿವಪುರದ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿ ಯಹೋ ಶಿವು(25) ಬಂಧಿತ ಆರೋಪಿಗಳು. ಇವರು ಕಚ್ಚಾ ಬಾಂಬ್ ಸಾಗಾಟಕ್ಕೆ ಬಳಸಿದ 15 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಹಾಗೂ ಎರಡು ಮೊಬೈಲ್ ಮತ್ತು 10 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅ.12ರಂದು ಕಾಡು ಹಂದಿ ಬೇಟೆಗಾಗಿ ಇಡಲಾದ ಕಚ್ಚಾ ಬಾಂಬ್ ಕಚ್ಚಿದ ಪರಿಣಾಮ ಸುಧೀರ್ ಪೂಜಾರಿ ಎಂಬವರ ಸಾಕು ನಾಯಿ ಸಾವನ್ನಪ್ಪಿದ್ದು, ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಕ್ರಮ ಸ್ಫೋಟಕ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. ಬಂಧಿತ ಇಬ್ಬರು ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಇನ್ನಿತರ ಕಡೆ ಸ್ಥಳೀಯವಾಗಿ ಸಿಗುವ ಸ್ಫೋಟಕ ರಾಸಾಯನಿಕ ವಸ್ತುಗಳನ್ನು ಬಳಸಿ ಕಚ್ಚಾ ಬಾಂಬ್‌ಗಳನ್ನು ತಯಾರಿಸುತ್ತಿದ್ದು, ಅದನ್ನು ಶಿವಮೊಗ್ಗ, ಉಡುಪಿ ಮತ್ತು ದಾವಣಗೆರೆ ಭಾಗಗಳಲ್ಲಿ ಕಾಡು ಹಂದಿಗಳ ಬೇಟೆಗೆ(ಶಿಕಾರಿಗೆ) ಬಳಕೆ ಮಾಡುತ್ತಿ ದ್ದಾರೆನ್ನಲಾಗಿದೆ. ಬೇಟೆಯಾಡಿದ ಕಾಡು ಹಂದಿಯ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. ಈ ಹಿಂದೆ ಬ್ರಹ್ಮಾವರ ಮತ್ತು ಕೋಟ ಭಾಗದಲ್ಲಿ ಕಚ್ಚಾ ಬಾಂಬ್ ಬಳಸಿ ಕಾಡುಹಂದಿ ಶಿಕಾರಿ ಮಾಡಿರುವ ಸಂಶಯವಿರುವ ಕಾರಣ ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಬಿಜೆಪಿ ಗೆಲುವಿನ ಆಶೆಗೆ ಬಲ ತುಂಬಿದ ಯೋಗಿ ಭೇಟಿ

Posted by Vidyamaana on 2023-05-06 10:27:51 |

Share: | | | | |


ಪುತ್ತೂರಿನಲ್ಲಿ ಬಿಜೆಪಿ ಗೆಲುವಿನ ಆಶೆಗೆ ಬಲ ತುಂಬಿದ ಯೋಗಿ ಭೇಟಿ

ಪುತ್ತೂರು : ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ ಆಗಮಿಸಿದ್ದು, ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ದೇವಸ್ಥಾನದ ಬಳಿಯಿಂದ ರೋಡ್‌ ಶೋ ಆರಂಭಗೊಳಿಸಿದರು.ಮೊಟ್ಟೆತ್ತಡ್ಕ ಹೆಲಿಪ್ಯಾಡ್‌ ನಿಂದ ವಾಹನದ ಮೂಲಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಯೋಗಿ ಆದಿತ್ಯನಾಥ್‌ ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ದೇವಳದ ಬಳಿ ಮತ್ತು ರಸ್ತೆ ಇಕ್ಕೆಲಗಳಲ್ಲಿ ಯೋಗಿ ನೋಡಲು ಜನ ಸಲು ಗಟ್ಟಿ ನಿಂತಿದ್ದು, ಯೋಗಿ ಜನತೆಯತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ

ರಂಚಿತಾ ಆತ್ಮಹತ್ಯೆ

Posted by Vidyamaana on 2024-03-20 19:44:20 |

Share: | | | | |


ರಂಚಿತಾ ಆತ್ಮಹತ್ಯೆ

ಹೊಳಲ್ಕೆರೆ: ಬೆಟ್ಟಿಂಗ್ ದಂಧೆ ಮೋಸಕ್ಕೆ ಸಿಲುಕಿದ್ದ ಗಂಡನಿಗೆ ಸಾಲಗಾರರು ನೀಡುತ್ತಿದ್ದ ಹಿಂಸೆಗೆ ಬೇಸತ್ತು ಪತ್ನಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ.ಪಟ್ಟಣದಲ್ಲಿ ಶಿವಮೊಗ್ಗ ರಸ್ತೆಯ ಬಸವ ಲೇಔಟ್ ನಿವಾಸಿ ರಂಚಿತಾ (23) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಬೆಟ್ಟಿಂಗ್ ದಂಧೆಗೆ ಪ್ರೇರಣೆ ನೀಡಿ ಸಾಲ ಕೊಟ್ಟವರ ಕಾಟ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನಲೆಯಲ್ಲಿ ತೀವ್ರ ಮನನೊಂದ ಮಗಳು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ರಂಚಿತಾ ತಂದೆ ವೆಂಕಟೇಶ್ ಅವರು ಹೊಳಲ್ಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಂಚಿತಾ ಐದು ವರ್ಷಗಳ ಹಿಂದೆ ಪಟ್ಟಣದ ಮುಖಂಡ ಬಾಲು ಪ್ರಕಾಶ ಹಾಗೂ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಚಂದ್ರಕಲಾ ದಂಪತಿಯ ಪುತ್ರನಾದ ಇಂಜಿನಿಯರ್ ವೃತ್ತಿ ಮಾಡಿಕೊಂಡಿದ್ದ ದರ್ಶನ್ ಬಾಲು ನನ್ನು ವಿವಾಹವಾಗಿದ್ದು, ನಾಲ್ಕು ವರ್ಷ ಗಂಡು ಮಗುವಿದೆ.

ಹೊಳಲ್ಕೆರೆ ಪಟ್ಟಣದ ನಿವಾಸಿಗಳಾದ ಗಿರೀಶ್, ರಾಘು, ಚಿತ್ರದುರ್ಗ ಸುದೀಪ್, ತಿಪ್ಪೇಸ್ವಾಮಿ, ವೆಂಕಟೇಶ್, ಗುರು, ವಾಗೀಶ್, ರಾಕೇಶ್, ಪಾವಗಡದ ಪೊತರೆಡ್ಡಿ, ಅಜ್ಜಂಪುರ ಕಂಟ್ರಾಕ್ಟರ್ ಹೊನ್ನಪ್ಪ, ಹಿರಿಯೂರು  ಮಹಾಂತೇಶ್, ಕಂಟ್ರಾಕ್ಟರ್ ಜಗನ್ನಾಥಶಿರಾ ಮತ್ತಿತರರು ಆಳಿಯ ದರ್ಶನ್ ಇವರಿಗೆ ಐಪಿಎಲ್ ಬೆಟ್ಟಿಂಗ್ ನಿಂದ ಕೋಟಿ ಕೋಟಿ ಸಂಪಾದಿಸಬಹುದು ಎಂದು ಪುಸಲಾಯಿಸಿದ್ದು, ಹಣವಿಲ್ಲ ಎಂದು ಹೇಳಿದರೂ ಖಾಲಿ ಚೆಕ್ ಪಡೆದು ಬೆಟ್ಟಿಂಗ್ ಗೆ ಹಣ ಕಟ್ಟಿಸಿದ್ದಾರೆ. ದಂಧೆಯಲ್ಲಿ ಸೊಲಾದ ಬಳಿಕ ಹಣಕೊಡದಿದ್ದರೆ ಚೆಕ್ ಗಳನ್ನು ಕೋರ್ಟಿಗೆ ಹಾಕಿ ಜೈಲಿಗೆ ಕಳುಸಿವುದಾಗಿ ಬೇದರಿಸಿದ್ದಾರೆ. ಹಣವನ್ನು ದರ್ಶನ್ ತಂದೆ ಪ್ರಕಾಶ್ ಅವರು ತೀರಿಸುವ ಭರವಸೆ ನೀಡಿದ್ದರೂ, ಪದೆಪದೆ ಮನೆಗೆ ಪೋನ್ ಮಾಡಿ, ಬೆದರಿಕೆ ಹಾಕಿ, ಮಾನಸಿಕ ಕಿರಿಕುಳ, ಹಿಂಸೆ ನೀಡಿದ್ದು, ಇದನ್ನು ಸಹಿಸಿಕೊಳ್ಳದೆ ಮಗಳು ರಂಚಿತಾ ಸೋಮವಾರ ಸಂಜೆ ಮನೆಯಲ್ಲಿ ನೇಣುಹಾಕಿಕೊಂಡಿದ್ದಾಳೆ. ನಾವು ತತ್ ಕ್ಷಣವೇ ನೋಡಿ ಅಸ್ಪತ್ಸೆಗೆ ಕರೆದುಕೊಂಡು ಹೋದರೂ ಫಲಕಾರಿಯಾಗಿಲ್ಲ. ನಮ್ಮ ಮಗಳ ಸಾವಿಗೆ ಬೆಟ್ಟಿಂಗ್ ದಂಧೆದಾರರೆ ಕಾರಣವಾಗಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಂಚಿತಾ ತಂದೆ ವೆಂಕಟೇಶ್ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಈ ಸಂಬಂಧ ಶಿವ ಮತ್ತು ಗಿರೀಶ್ ಎಂಬವರನ್ನು ಬಂಧಿಸಲಾಗಿದೆ ಎಂದು ಪಿಎಸ್‌ಐ ಸುರೇಶ್ ತಿಳಿಸಿದ್ದಾರೆ.

ಪೋಷಕರೇ ಮಗಳ ಮದುವೆ ಸಮಯಕ್ಕೆ 25 ಲಕ್ಷ ಪಡೆಯಲು ಸುಕನ್ಯಾ ಯೋಜನೆ ಯಲ್ಲಿ ತಿಂಗಳಿಗೆ ಎಷ್ಟು ಠೇವಣಿ ಮಾಡ್ಬೇಕು ಗೊತ್ತಾ.?

Posted by Vidyamaana on 2023-10-13 17:34:48 |

Share: | | | | |


ಪೋಷಕರೇ ಮಗಳ ಮದುವೆ ಸಮಯಕ್ಕೆ 25 ಲಕ್ಷ ಪಡೆಯಲು ಸುಕನ್ಯಾ ಯೋಜನೆ ಯಲ್ಲಿ ತಿಂಗಳಿಗೆ ಎಷ್ಟು ಠೇವಣಿ ಮಾಡ್ಬೇಕು ಗೊತ್ತಾ.?

ನವದೆಹಲಿ : ಕೇಂದ್ರ ಸರ್ಕಾರ ಹಲವು ಆಕರ್ಷಕ ಠೇವಣಿ ಯೋಜನೆಗಳನ್ನ ಪರಿಚಯಿಸುತ್ತಿದೆ. ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆಯ ಅಂಗವಾಗಿ ಕೇಂದ್ರ ಸರ್ಕಾರ ತಂದಿರುವ ಸುಕನ್ಯಾ ನಾಮೃದ್ಧಿ ಯೋಜನೆ ಯೋಜನೆ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುದನ್ನ ಬಿಡಿಸಿ ಹೇಳಬೇಕಾಗಿಲ್ಲ.ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಮಯದಲ್ಲಿ ಆದಾಯವನ್ನ ಪಡೆಯಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಭಾಗವಾಗಿ, ಗ್ರಾಹಕರು 15 ವರ್ಷಗಳವರೆಗೆ ಪಾವತಿಸಬೇಕು ಮತ್ತು 21 ವರ್ಷಗಳ ಅವಧಿಯ ನಂತರ ಹಣವನ್ನು ಪಡೆಯಬೇಕು.


ಹತ್ತನೇ ವಯಸ್ಸಿನಲ್ಲಿ ಮಗು ಈ ಯೋಜನೆಗೆ ಸೇರಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ತೆರೆಯಬಹುದು. ಈ ಖಾತೆಯನ್ನು ತೆರೆಯಲು ಐಡಿ, ವಿಳಾಸ ಪುರಾವೆ, ಜನ್ಮ ಪ್ರಮಾಣಪತ್ರ, ಹೆಣ್ಣು ಮಗು ಮತ್ತು ಆಕೆಯ ತಂದೆಯ ಭಾವಚಿತ್ರಗಳು, ಆಧಾರ್ ಕಾರ್ಡ್ ಅಗತ್ಯವಿದೆ. ಮತ್ತು ಈ ಯೋಜನೆಯಲ್ಲಿ ಕನಿಷ್ಠ ಖಾತೆ ಮೊತ್ತ ರೂ. 250 ಠೇವಣಿ ಇಡಬಹುದು ಮತ್ತು ತೆರೆಯಬಹುದು. ಗರಿಷ್ಠ ರೂ. 1.50 ಲಕ್ಷ ಠೇವಣಿ ಇಡಬಹುದು. ಖಾತೆ ತೆರೆದ ದಿನಾಂಕದಿಂದ 15 ವರ್ಷಗಳವರೆಗೆ ಹಣವನ್ನು ಠೇವಣಿ ಇಡಬೇಕು. ಅದರ ನಂತರ, ಆರು ವರ್ಷಗಳ ನಂತರ, ಅಂದರೆ 21 ವರ್ಷಗಳನಂತರ, ಪ್ರಬುದ್ಧತೆ ಬರುತ್ತದೆ. ಈ ಆರು ವರ್ಷಗಳವರೆಗೆ ಯಾವುದೇ ಠೇವಣಿ ಅಗತ್ಯವಿಲ್ಲ.


ಖಾತೆಯನ್ನು ತೆರೆದ ನಂತರ, ಯಾವುದೇ ಕಾರಣಕ್ಕೂ ಹಣವನ್ನು ಠೇವಣಿ ಮಾಡದಿದ್ದರೆ, ಖಾತೆಯು ಡೀಫಾಲ್ಟ್ ಆಗಿ ಹೋಗುತ್ತದೆ. ಖಾತೆಯನ್ನು ಪುನಃ ಸಕ್ರಿಯಗೊಳಿಸುವ ಸಂದರ್ಭದಲ್ಲಿ, ರೂ. 50 ದಂಡ ಮತ್ತು ಖಾತೆಯನ್ನು ಪುನಃ ತೆರೆಯಿರಿ. ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳ ಒಳಗೆ ಮತ್ತೆ ತೆರೆಯಬಹುದು. ಏತನ್ಮಧ್ಯೆ, ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯ ಮೂಲಕ ಮಗುವಿಗೆ ಮದುವೆ ಆಗುವ ವೇಳೆಗೆ ಅಥವಾ ಶಿಕ್ಷಣ ಪೂರ್ಣಗೊಳ್ಳುವ ವೇಳೆಗೆ ರೂ. ಈಗ ನೀವು 25 ಲಕ್ಷಗಳನ್ನು ಪಡೆಯಲು ತಿಂಗಳಿಗೆ ಎಷ್ಟು ಹಣವನ್ನು ಠೇವಣಿ ಮಾಡಬೇಕು ಎಂದು ಕಂಡುಹಿಡಿಯೋಣ.


ಉದಾಹರಣೆಗೆ, ನಿಮ್ಮ ಮಗುವಿಗೆ ಪ್ರಸ್ತುತ 5 ವರ್ಷವಯಸ್ಸಾಗಿದೆ ಎಂದು ಭಾವಿಸೋಣ. ಪ್ರಸ್ತುತ ಈ ಯೋಜನೆಯ ಬಡ್ಡಿ ದರವು ಶೇಕಡಾ 8 ರಷ್ಟಿದೆ. ಈ ಲೆಕ್ಕಾಚಾರದಲ್ಲಿ ವರ್ಷಕ್ಕೆ ರೂ. 55,700 ಪಾವತಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ರೂ. 25 ಲಕ್ಷ ಕೈಗೆ ಬರುತ್ತದೆ. ಅಂದರೆ ತಿಂಗಳಿಗೆ ರೂ. ಮಗಳ ಮದುವೆ ಸಮಯದಲ್ಲಿ 4,641 ರೂ. 25 ಲಕ್ಷ ವಾಪಸ್ ಪಡೆಯಬಹುದು. ಮತ್ತು ಈ ಯೋಜನೆಯ ಮೂಲಕ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಪ್ರಕಾರ, ನೀವು ರೂ. 1.50 ಲಕ್ಷ ತೆರಿಗೆ ವಿನಾಯಿತಿ ಪಡೆಯಬಹುದು. ಠೇವಣಿಯ ಮೇಲೆ ಗಳಿಸಿದ ಬಡ್ಡಿಗೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ. ವಾರ್ಷಿಕ ಆಧಾರದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಮೆಚ್ಯೂರಿಟಿಯ ನಂತರ ನೀವು ಪಡೆಯುವ ಬಡ್ಡಿ ಕೂಡ ತೆರಿಗೆ ಮುಕ್ತವಾಗಿರುತ್ತದೆ.

ನಟ ಯಶ್ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಹೋಗುವಾಗ ಮತ್ತೊಂದು ದುರ್ಘಟನೆ! ಯುವಕನ ಸ್ಥಿತಿ ಗಂಭೀರ

Posted by Vidyamaana on 2024-01-08 22:14:52 |

Share: | | | | |


ನಟ ಯಶ್ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಹೋಗುವಾಗ ಮತ್ತೊಂದು ದುರ್ಘಟನೆ! ಯುವಕನ ಸ್ಥಿತಿ ಗಂಭೀರ

ಗದಗ, ಜ.8: ರಾಕಿಂಗ್ ಸ್ಟಾರ್ ಯಶ್ (Yash) ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಮೃತಪಟ್ಟ ಘಟನೆಯ ಬೆನ್ನಲ್ಲೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಯಶ್ ಗಾಯಾಳುಗಳ ಆರೋಗ್ಯ ವಿಚಾರಿಸಿದ ವಾಪಸ್ ಆಗುತ್ತಿದ್ದಾಗ ಪೊಲೀಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾದ ಘಟನೆ ನಡೆದಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ.


ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ಮೃತಪಟ್ಟ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮಕ್ಕೆ ಭೇಟಿ ನೀಡಿದ ನಂತರ ಹುಬ್ಬಳ್ಳಿಯ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳು ಆರೋಗ್ಯ ವಿಚಾರಿಸಿ ಯಶ್ ಹಿಂದಿರುಗುವಾಗ ಪೊಲೀಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ.ಗದಗ ಮುಳುಗುಂದ ರಸ್ತೆಯಲ್ಲಿ ಯಶ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಸವಾರನನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ, ಗಾಯಾಳು ಯುವಕನ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಗಾಯಾಳುವನ್ನು ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿಖಿಲ್ (32) ಎಂದು ಗುರುತಿಸಲಾಗಿದೆ.

Recent News


Leave a Comment: