ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಸುದ್ದಿಗಳು News

Posted by vidyamaana on 2024-07-23 19:43:42 |

Share: | | | | |


ಅತಿ ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದ ಟ್ಯಾಕ್ಸಿ; ವಿಡಿಯೊ ನೋಡಿ

ಪುಣೆ: ಅತಿ ವೇಗ ಅಪಘಾತಕ್ಕೆ ಕಾರಣವೆಂದು ತಿಳಿದರೂ ಕೂಡ ಕೆಲವು ಚಾಲಕರು ಅವಸರದಲ್ಲಿ ವೇಗವಾಗಿ ವಾಹನ ಚಲಾಯಿಸಿ ಜನರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಎಲ್ಲೆಂದರಲ್ಲಿ ನಿಂತ ಜನರ ಮೇಲೂ ವಾಹನವನ್ನು ಹಾರಿಸಿಕೊಂಡು ಹೋಗುತ್ತಾರೆ. ಇದೀಗ ಅಂತಹದೊಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Hit and Run Case)ಆಗಿದೆ.ಪ್ರಿ-ಚಿಂಚ್ವಾಡ್‍ನಲ್ಲಿ ಅತಿವೇಗವಾಗಿ ಚಲಿಸುತ್ತಿದ್ದ ಟ್ಯಾಕ್ಸಿ ಮಹಿಳೆಗೆ ಡಿಕ್ಕಿ ಹೊಡೆದು ನಂತರ ಚಾಲಕ ಅಪಘಾತದ ಸ್ಥಳದಿಂದ ಓಡಿಹೋದ ಹೊಸ ಹಿಟ್ ಅಂಡ್ ರನ್ ಪ್ರಕರಣ ವರದಿಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪುಣೆಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಪಿಂಪ್ರಿ-ಚಿಂಚ್ವಾಡ್‍ನಲ್ಲಿ ಈ ಘಟನೆ ನಡೆದಿದೆ. ಈ ಹಿಟ್ ಅಂಡ್ ರನ್ ಪ್ರಕರಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೊದಲ್ಲಿ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಸ್ತೆಯಲ್ಲಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಎದುರಿಗೆ ವೇಗವಾಗಿ ಬಂದ ಟ್ಯಾಕ್ಸಿ ಮಹಿಳಾ ಪಾದಚಾರಿಗೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ರಸ್ತೆಯಲ್ಲಿದ್ದ ಇತರ ಜನರು ಆಕೆಯ ಸಹಾಯಕ್ಕಾಗಿ ಓಡಿ ಬರುತ್ತಿರುವುದು ಕಂಡುಬಂದಿದೆ. ಟ್ಯಾಕ್ಸಿಗೆ ಡಿಕ್ಕಿ ಹೊಡೆದ ಮಹಿಳೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ಪಿಂಪ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಪ್ರಕರಣದ ಬಗ್ಗೆ ಪಿಂಪ್ರಿ-ಚಿಂಚ್ವಾಡ್ ಡಿಸಿಪಿ ಶಿವಾಜಿ ಪವಾರ್ ಮಾತನಾಡಿ, ಈ ಅಪಘಾತದಲ್ಲಿ ಸಂತ್ರಸ್ತೆ ರೇಖಾ ಗಾಯಗೊಂಡಿದ್ದಾರೆ. ಈಗ ಅವರ ಆರೋಗ್ಯ ಸ್ಥಿರವಾಗಿದೆ. 24 ವರ್ಷದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಚಾಲಕ ಕುಡಿದಿರಲಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಮಹಾರಾಷ್ಟ್ರದಲ್ಲಿ ವರದಿಯಾದ ಮೊದಲ ಹಿಟ್ ಅಂಡ್ ರನ್ ಪ್ರಕರಣವಲ್ಲ. ಈಗಾಗಲೇ ಹಿಟ್ ಅಂಡ್ ರನ್ ಪ್ರಕರಣ ಮತ್ತೊಂದು ಸುದ್ದಿಯಲ್ಲಿ, ವೇಗವಾಗಿ ಬಂದ ಆಡಿ ಕಾರು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದಿದೆ. ಒಂದು ಆಟೋರಿಕ್ಷಾ ಚಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಅದರಲ್ಲಿದ್ದ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮುಲುಂಡ್ ಪೊಲೀಸರು ಆಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ, ಆದರೆ ಅಪಘಾತದ ನಂತರ ಅದರ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

 Share: | | | | |


ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

Posted by Vidyamaana on 2024-04-21 15:46:43 |

Share: | | | | |


ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ: ಗುಜರಾತ್‌ನ ಗಾಂಧಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ. ಈ ನಡುವೆ ಅವರ ಈ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 36 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ.

ಇದೇ ವೇಳೆ ಅವರು ತಮ್ಮ ಬಳಿಯಲ್ಲಿ ಯಾವುದೇ ಕಾರಿಲ್ಲ ಎಂದು ಹೇಳಿರುವ ಶಾ, ಅವರ ಪತ್ನಿ ಬಳಿ ಇದೆ 31 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. 

ಅಫಿಡವಿಟ್ ಪ್ರಕಾರ, ಶಾ ಮತ್ತು ಅವರ ಪತ್ನಿ ಒಟ್ಟು 65.67 ಕೋಟಿ ರೂ. ಗಮನಾರ್ಹವಾಗಿ, ಇದು 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ವರದಿಯಾದ 30.49 ಕೋಟಿ ರೂ.ಗಿಂತ ಗಮನಾರ್ಹ ಹೆಚ್ಚಳವನ್ನು ಸೂಚಿಸುತ್ತದೆ, ಕಳೆದ ಐದು ವರ್ಷಗಳಲ್ಲಿ ಶೇಕಡಾ 100 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ತೋರಿಸುತ್ತದೆ.

ICC World Cup 2023; ವರ್ಣರಂಜಿತ ಉದ್ಘಾಟನಾ ಸಮಾರಂಭ ರದ್ದು? ಕಾರಣ ಏನು ಗೊತ್ತಾ

Posted by Vidyamaana on 2023-10-03 16:23:15 |

Share: | | | | |


ICC World Cup 2023; ವರ್ಣರಂಜಿತ ಉದ್ಘಾಟನಾ ಸಮಾರಂಭ ರದ್ದು? ಕಾರಣ ಏನು ಗೊತ್ತಾ

ಮುಂಬೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಇನ್ನು ಕೇವಲ ಎರಡು ದಿನಗಳಲ್ಲಿ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಆರಂಭಿಕ ಪಂದ್ಯ ನಡೆಯಲಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ ಬಿಸಿಸಿಐ ನಿರ್ಧರಿಸಿದಂತೆ ಯಾವುದೇ ಉದ್ಘಟನಾ ಸಮಾರಂಭ ನಡೆಯುವುದಿಲ್ಲ ಎಂದು ವರದಿಯಾಗಿದೆ.


ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!

ಏಕದಿನ ವಿಶ್ವಕಪ್‌ ನ ಇತ್ತೀಚಿನ ಹಲವು ಆವೃತ್ತಿಗಳಲ್ಲಿ ಆರಂಭಿಕ ಪಂದ್ಯಕ್ಕೂ ಮುನ್ನ ಯಾವುದೇ ಅಧಿಕೃತ ಉದ್ಘಾಟನಾ ಸಮಾರಂಭ ನಡೆಯದಿರುವುದು ಇದೇ ಮೊದಲು.


ಆರಂಭದಲ್ಲಿ ಮೊದಲ ಪಂದ್ಯಕ್ಕೆ ಒಂದು ದಿನ ಮೊದಲು ಅಂದರೆ ಅಕ್ಟೋಬರ್ 4ರಂದು ಅಹಮದಾಬಾದ್ ನಲ್ಲಿ ಅದ್ದೂರಿ ಓಪನಿಂಗ್ ಸೆರಮನಿ ನಡೆಯಲಿದೆ ಎಂದು ಬಿಸಿಸಿಐ ಯೋಜಿಸಿತ್ತು. ಆದರೆ ಇದೀಗ ಕ್ರಿಕೆಟ್ ನ ಮೆಗಾಕೂಟ ಆರಂಭಕ್ಕೆ ಯಾವುದೇ ಅದ್ದೂರಿ ಕಾರ್ಯಕ್ರಮ ಇರುವುದಿಲ್ಲ ಎಂದು ರೇವ್ ಸ್ಪೋರ್ಟ್ಸ್ ವೆಬ್ ಸೈಟ್ ವರದಿ ಮಾಡಿದೆ.


ರಣವೀರ್ ಸಿಂಗ್, ಅರ್ಜಿತ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್ ಮತ್ತು ಆಶಾ ಭೋಂಸ್ಲೆಯಂತಹ ಪ್ರಸಿದ್ಧ ಬಾಲಿವುಡ್ ಸ್ಟಾರ್ ಗಳನ್ನು ಒಳಗೊಂಡಿರುವ ಈ ಸಮಾರಂಭದಲ್ಲಿ ಪಟಾಕಿ ಮತ್ತು ಲೇಸರ್ ಪ್ರದರ್ಶನವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮದ ನಂತರ ಈ ಕಾರ್ಯಕ್ರಮ ಯೋಜಸಿಲಾಗಿತ್ತು. ಕ್ಯಾಪ್ಟನ್ಸ್ ಡೇ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದ್ದರೂ, ಉದ್ಘಾಟನಾ ಸಮಾರಂಭದ ರದ್ದತಿಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ಘೋಷಣೆಯಾಗಿಲ್ಲ. ಆದರೆ ಕ್ಯಾಪ್ಟನ್ಸ್ ಡೇ ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇಲ್ಲಿ ಎಲ್ಲಾ ಹತ್ತು ತಂಡಗಳ ನಾಯಕರು ಭಾಗವಹಿಸಲಿದ್ದಾರೆ.ಟೂರ್ನಿಯ ಪ್ರಮುಖ ಅಂಶವಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್ ಮೈದಾನದಲ್ಲಿ ನಿಗದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಹೈವೋಲ್ಟೇಜ್ ಪಂದ್ಯಕ್ಕೆ ಮುಂಚಿತವಾಗಿ ಅಹಮದಾಬಾದ್‌ ನಲ್ಲಿ ಸಮಾರಂಭವನ್ನು ಆಯೋಜಿಸಲು ಬಿಸಿಸಿಐ ಯೋಚಿಸುತ್ತಿದೆ ಎಂದು ವರದಿಯಾಗಿದೆ

ಮುಕ್ರಂಪಾಡಿ ಸುಭದ್ರ ಸಭಾಮಂದಿರದಲ್ಲಿ ನಡೆದ ಪ್ರಮುಖರ ಸಭೆ

Posted by Vidyamaana on 2023-05-12 06:50:03 |

Share: | | | | |


ಮುಕ್ರಂಪಾಡಿ ಸುಭದ್ರ ಸಭಾಮಂದಿರದಲ್ಲಿ ನಡೆದ ಪ್ರಮುಖರ ಸಭೆ

ಪುತ್ತೂರು: ಹಿಂದುತ್ವದ ಪರ ಇದ್ದೇವೆ ಎನ್ನುವ ಒಂದೇ ಯೋಚನೆಯೊಂದಿಗೆ ನನ್ನ ಜೊತೆ ಬಂದು ನಿಂತಿದ್ದಾರೆ. ನನ್ನ ಕೊನೆಯ ಉಸಿರು ಇರುವ ತನಕ ನಿಮ್ಮ ಜೊತೆಗೆ ಇರುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಗುರುವಾರ ಸಂಜೆ ಮುಕ್ರಂಪಾಡಿ ಸುಭದ್ರ ಸಭಾಮಂದಿರದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ಮಾತನಾಡಿದರು.

ನಿಶ್ಚಿತವಾಗಿಯೂ ಈ ಬಾರಿಯ ಗೆಲುವು ನಮ್ಮದೇ. ಹಿಂದು ರಾಷ್ಟ್ರದ ಕಲ್ಪನೆಯನ್ನು ನಾವೆಲ್ಲ ಸೇರಿ ಸಾಕಾರಗೊಳಿಸೋಣ. ಸಿದ್ಧಾಂತ, ಬದ್ಧತೆಯ ಆಧಾರದಲ್ಲಿ ಹಿಂದು ಸಮಾಜಕ್ಕೆ ಶಕ್ತಿ ಕೊಡುವ ಕೆಲಸವನ್ನು ನಾವೆಲ್ಲ ಮಾಡೋಣ. ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದರು.

ಧರ್ಮ ಆಧಾರಿತ ರಾಜಕಾರಣವನ್ನು ಮಾಡುತ್ತೇನೆ ಎಂದು ಹೇಳಿದ ಅವರು, ನಾವು, ನಮ್ಮ ಕಾರ್ಯಕರ್ತರು ಹಣದ ವಿಚಾರಕ್ಕೆ, ಅಧಿಕಾರದ ವಿಚಾರಕ್ಕೆ ಮಣಿಯುವುದಿಲ್ಲ. ಯಾವತ್ತಿದ್ದರೂ ಹಿಂದುತ್ವದ ಪರವಾಗಿ ಕೆಲಸ ನಿರ್ವಹಿಸುತ್ತೇವೆ. ಸಂಘರ್ಷಕ್ಕೆ, ಅವಮಾನಗಳಿಗೆ ಉತ್ತರ ಕೊಡುತ್ತೇವೆ. ಕಾರ್ಯಕರ್ತರಿಂದ ದೇವರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿಸಿದ್ದು, ಪಕ್ಷೇತರ ಅಭ್ಯರ್ಥಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದೇನೆ ಎಂದರು.

ಕಳೆದ 20 ದಿನಗಳಿಂದ ಹಗಲು – ರಾತ್ರಿಯ ಪರಿವೇ ಇಲ್ಲದೇ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ. ಯಾರದೇ ಬಲವಂತಕ್ಕೆ ಮಣಿದಿಲ್ಲ. ಒಂದಿಷ್ಟೂ ಕೂಡ ಹಣದ ಮೋಹಕ್ಕೆ ಬಂದಿಲ್ಲ. ಇಂತಹ ಕಾರ್ಯಕರ್ತರೊಂದಿಗೆ ಗೆದ್ದು ಬಂದಾಗ, ಮಹಾಲಿಂಗೇಶ್ವರನ ಮಣ್ಣಿನಲ್ಲಿ ವಿಜಯೋತ್ಸವ ಆಚರಿಸಲಿದ್ದೇವೆ ಎಂದರು.


ಶಾಸಕರಾಗಿ ಆಯ್ಕೆಯಾಗಲಿರುವ ಪುತ್ತಿಲ ಅವರೇ ಎಂದು ಮಾತು ಆರಂಭಿಸಿದ ವೈದ್ಯ ಡಾ. ಸುರೇಶ್ ಪುತ್ತೂರಾಯ, ಅರುಣಣ್ಣನಿಗೆ ಹಾಕದ ಮತ ಯಾಕೆ? ಅಂತಹ ಮತವನ್ನು ಹಾಕಬೇಕೆಂದೇ ಇಲ್ಲ ಎಂದು ಅನೇಕ ಮಂದಿ ಹೇಳುವುದನ್ನು ಕೇಳಿದ್ದೇನೆ. ಪುತ್ತಿಲ ಅವರಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎನ್ನುವುದನ್ನು ಈಗ ನೋಡುವಂತಾಯಿತು ಎಂದರು.


ರಾಜಾರಾಮ್ ಭಟ್ ಮಾತನಾಡಿ, ದೇವದುರ್ಲಭ ಕಾರ್ಯಕರ್ತರು ಎಂಬ ಹೆಸರನ್ನು ಅನೇಕ ಬಾರಿ ಕೇಳಿದ್ದೇವೆ. ಆದರೆ ಅಂತಹ ಕಾರ್ಯಕರ್ತರನ್ನು ಪ್ರತ್ಯಕ್ಷವಾಗಿ ನೋಡುವ ಅನುಭವ ನಮಗಾಗಿದೆ ಎಂದ ಅವರು, ವೇದಿಕೆಯಿಂದಲೇ ಕಾರ್ಯಕರ್ತರಿಗೆ ಅಡ್ಡಬಿದ್ದು ನಮಸ್ಕರಿಸಿದರು.

ಅರುಣ್ ಕುಮಾರ್ ಪುತ್ತಿಲ ಅವರು ವ್ರತನಿಷ್ಠರಾಗಿ, ಬರಿಗಾಲಲ್ಲಿ ಪುತ್ತೂರನ್ನು ಸುತ್ತಿದ್ದಾರೆ. ಅವರ ನಿಷ್ಠೆಗೆ, ಕಾರ್ಯಕರ್ತರ ಪರಿಶ್ರಮದಿಂದಾಗಿ ಅರುಣ್ ಕುಮಾರ್ ಪುತ್ತಿಲ ಅವರು ಜಯಶಾಲಿ ಆಗುತ್ತಾರೆ. ಇನ್ನು ಮಾರ್ಜಿನ್ ಎಷ್ಟು ಎಂದು ನೋಡಲು ಅಷ್ಟೇ ಇರುವುದು ಎಂದರು.

ಹರಿಣಿ ಪುತ್ತೂರಾಯ ಮಾತನಾಡಿ, ಅರುಣಣ್ಣ ಶಾಸಕರಾಗಿ ಆಯ್ಕೆಯಾಗಿ, ರಾಜ್ಯದಲ್ಲಿ ಉತ್ತಮ ಸ್ಥಾನ ಪಡೆಯುವ ಜೊತೆಗೆ ಸಚಿವರಾಗಿ ನೇಮಕರಾಗಲಿ ಎಂದು ಶುಭಹಾರೈಸಿದರು.

ವೇದಿಕೆಯಲ್ಲಿ ಡಾ. ಗಣೇಶ್ ಪ್ರಸಾದ್ ಮುದ್ರಾಜೆ,ಅನಿಲ್ ತೆಂಕಿಲ,ಉದ್ಯಮಿ ರಾಜಶೇಖರ್, ಪ್ರಸನ್ನ ಕುಮಾರ್ ಮಾರ್ತಾ ಉಪಸ್ಥಿತರಿದ್ದರು. ಇದೇ ಸಂದರ್ಭ ಮನೀಷ್ ಕುಲಾಲ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಮಂಗಳೂರು ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕನಿಗೆ ಗಾಯ: ಆಸ್ಪತ್ರೆಗೆ ದಾಖಲು

Posted by Vidyamaana on 2023-10-24 11:56:20 |

Share: | | | | |


ಮಂಗಳೂರು  ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕನಿಗೆ ಗಾಯ: ಆಸ್ಪತ್ರೆಗೆ ದಾಖಲು

ಮಂಗಳೂರು: ಹುಲಿವೇಷ ಕುಣಿತದ ವೇಳೆ ದುರ್ಘಟನೆಯೊಂದು ಸಂಭವಿಸಿದೆ. ಹುಲಿವೇಷ ಕುಣಿತದ ವೇಳೆ ಆಯತಪ್ಪಿ ಬಿದ್ದು ಯುವಕ ಗಾಯಗೊಂಡಿರುವ ಘಟನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ನಡೆದಿದೆ.


ಕುಣಿತದ ವೇಳೆ ಹುಲಿವೇಷಧಾರಿಯೊಬ್ಬರು ರಿವರ್ಸ್ ಪಲ್ಟಿ ಹೊಡೆಯುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾರೆ . ಯುವಕನ ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿ ಗಾಯಗೊಂಡಿದ್ದಾರೆ . ತಕ್ಷಣ ಆಸ್ಪತ್ರೆಗೆ ದಾಖಲಿಸಿ ಯುವಕನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಸಣ್ಣ ಗಾಯಗಳೊಂದಿಗೆ ಯುವಕ ಪ್ರಯಾಪಾಯದಿಂದ ಪಾರಾಗಿದ್ದಾರೆ .

ಉಡುಪಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ

Posted by Vidyamaana on 2023-07-26 07:14:21 |

Share: | | | | |


ಉಡುಪಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ

ಉಡುಪಿ: ನಗರದ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಯುವತಿಯವರ ವಿಡಿಯೋ ಚಿತ್ರೀಕರಿಸಿದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥ ಮೂವರು ವಿದ್ಯಾರ್ಥಿನಿಯರ ವಿರುದ್ಧ ಎಫ್‌ ಐಆರ್‌ ದಾಖಲಿಸಿದ್ದಾರೆ

ವಿಡಿಯೋ ಚಿತ್ರೀಕರಿಸಿದ್ದಾರೆ ಎನ್ನಲಾದ ಶಬನಾಝ್, ಅಲ್ಫೀಯಾ ಮತ್ತು ಅಲೀಮಾ ಅವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಸುಷ್ಮಾ ಜಿ.ಬಿ  ದಾಖಲಿಸಿದ್ದಾರೆ.


ಈ ಸಂಬಂಧ ಕಾಲೇಜು ನಿರ್ದೇಶಕಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮೂವರು ವಿದ್ಯಾರ್ಥಿನಿಯರು ತಪ್ಪು ಒಪ್ಪಿಕೊಂಡಿದ್ದಾರೆ. ಮೂವರನ್ನು ಕೂಡಲೇ ಸಸ್ಪೆಂಡ್ ಮಾಡಿದ್ದೇವೆ. ಸಂತ್ರಸ್ತೆ ಯುವತಿ ಭವಿಷ್ಯದ ದೃಷ್ಟಿಯಿಂದ ದೂರು ಕೊಡಲು ಒಪ್ಪಿಲ್ಲ‌ ಎಂದಿದ್ದರು.


ಈ ಪ್ರಕರಣಕ್ಕೆ ಸಂಬಂಧಿಸಿ ಸ್ವಯಂ ಪ್ರೇರಿತವಾಗಿ ದೂರು ನೀಡಬೇಕು, ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಗ್ರ ತನಿಖೆಗೆ ಆಗ್ರಹ ವ್ಯಕ್ತವಾಧ ಬೆನ್ನಲ್ಲೇ, ಇದೀಗ  ಮಲ್ಪೆ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಿಸಲಾಗಿದೆಈ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಮೂಲಕ ತನಿಖೆ ನಡೆಸಲಾಗುವುದು. ಈ ಘಟನೆಯ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು. ಇದು ಅತೀ ಸೂಕ್ಷ್ಮ ವಿಚಾರವಾಗಿದೆ. ಹೆಣ್ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್‌ ಹೇಳಿದ್ದಾರೆ.

ನಾಪತ್ತೆತೆಯಾಗಿದ್ದ ವಿದ್ಯಾರ್ಥಿ ಮಂಗಳೂರಿನಲ್ಲಿ ಪತ್ತೆ

Posted by Vidyamaana on 2024-01-23 15:50:14 |

Share: | | | | |


ನಾಪತ್ತೆತೆಯಾಗಿದ್ದ ವಿದ್ಯಾರ್ಥಿ ಮಂಗಳೂರಿನಲ್ಲಿ ಪತ್ತೆ


ಸುಳ್ಯ ; ಕಾಣಿಯೂರು ಖಾಸಗಿ   ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಲೋಕನಾಥ್ ಎಂಬವರ ಮಗ ಶ್ರೇಯಸ್   (15 ವ ) ಜ .23 ರಂದು ಬೆಳಿಗ್ಗೆ ನಾಪತ್ತೆಯಾಗಿದ್ದು, ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿದ್ದಾನೆ.

ಬಾಲಕನನ್ನು ಬಂದರು ಪೊಲೀಸರು ಪತ್ತೆ ಹಚ್ಚಿದ್ದು, ಮನೆಯವರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

Recent News


Leave a Comment: