ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಸುದ್ದಿಗಳು News

Posted by vidyamaana on 2024-07-03 19:23:39 |

Share: | | | | |


ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಶಾಸಕರಿಂದ ರೂ.೫೦ ಸಾವಿರ ಸಹಾಯಧನ

ಪುತ್ತೂರು: ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಸೇವಾಂಜಲಿ ಟ್ರಸ್ಟ್ ಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ರೂ. ೫೦ ಸಾವಿರ ಸಹಾಯಧನವನ್ನು ನೀಡಿದರು. ಮಂಗಳೂರು ಕೇಂದ್ರ ಕಚೇರಿಯನ್ನು ಹೊಂದಿರುವ ಈ ಟ್ರಸ್ಟ್ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಈ ಟ್ರಸ್ಟ್‌ನಲ್ಲಿ ಸದಸ್ಯರಾಗಿರುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ದಿ ಟ್ರಸ್ಟ್ ಇದಾಗಿರುತ್ತದೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಜಿಲ್ಲಾಧ್ಯಕ್ಷೆ ತಾರಾಬಲ್ಲಾಲ್, ಪುತ್ತೂರು ತಾಲೂಕು ಅಧ್ಯಕ್ಷೆ ಕಮಲ, ತಾಲೂಕು ಕಾರ್ಯದರ್ಶಿ ಪುಷ್ಪಾವತಿ, ಸೇವಾಂಜಲಿ ಟ್ರಸ್ಟ್ ಉಪಾಧ್ಯಕ್ಷೆ ಅರುಣಾ ಡಿ, ನಿರ್ದೇಶಕಿ ಮೀನಾಕ್ಷಿ ಉಪಸ್ಥಿತರಿದ್ದರು.

 Share: | | | | |


ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ

Posted by Vidyamaana on 2024-03-27 12:26:28 |

Share: | | | | |


ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟಿಸಿದ ಮಾಜಿ ಸಚಿವ ರಮಾನಾಥ ರೈ

ಬೆಳ್ತಂಗಡಿ: ಕಾಂಗ್ರೆಸ್ನ ಲೋಕಸಭಾ ಚುನಾವಣಾ ಕಚೇರಿಯನ್ನು ಬೆಳ್ತಂಗಡಿ ಹೇರಾಜೆ ಕಾಂಪ್ಲೆಕ್ಸ್ನಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಚುನಾವಣಾ ಉಸ್ತುವಾರಿ ರಮಾನಾಥ ರೈ ಉದ್ಘಾಟಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ನಗರ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಬೆಳ್ತಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡ, ಬೆಳ್ತಂಗಡಿ ಚುನಾವಣಾ ಉಸ್ತುವಾರಿಗಳಾದ ಧರ್ಣೇಂದ್ರ ಕುಮಾರ್, ರಜತ್ ಗೌಡ, ಸುಭಾಶ್ ರೈ, ಮಾಲಾಡಿ ಗ್ರಾಪಂ ಅಧ್ಯಕ್ಷ ಪುನೀತ್ ಕುಮಾರ್ ಮಾಲಾಡಿ, ವೇಣೂರು ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್,  ಶೇಖರ್ ಕುಕ್ಯಾಡಿ, ಮನೋಹರ್ ಇಳಂತಿಲ, ಪದ್ಮನಾಭ ಸಾಲ್ಯಾನ್ ಮಾಲಾಡಿ ಸೇರಿದಂತೆ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕೇಳಿದಾಗ ಇಲ್ಲ ಅನ್ನಲು ಮನಸ್ಸು ಒಪ್ಪಲಿಲ್ಲ: ಮನಕಲಕುವಂತಿದೆ ಶಕೀಲಾರ ಅಸಲಿ ಲವ್​ಸ್ಟೋರಿ

Posted by Vidyamaana on 2024-01-02 18:29:32 |

Share: | | | | |


ಕೇಳಿದಾಗ ಇಲ್ಲ ಅನ್ನಲು ಮನಸ್ಸು ಒಪ್ಪಲಿಲ್ಲ: ಮನಕಲಕುವಂತಿದೆ ಶಕೀಲಾರ ಅಸಲಿ ಲವ್​ಸ್ಟೋರಿ

ನಟಿ ಶಕೀಲಾ ಬಗ್ಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. 1990ರ ದಶಕದ ಬಹುತೇಕರಿಗೆ ಶಕೀಲಾ ಪರಿಚಯ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು.ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್​ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು. ಅಲ್ಲದೆ, ಶಕೀಲಾ ನಿರಂತರವಾಗಿ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸಿದ್ದರಿಂದ ಕೇರಳ ಸಿನಿಮಾ ಕ್ಷೇತ್ರದಿಂದಲೇ ಅವರನ್ನು ಬ್ಯಾನ್​ ಮಾಡಲಾಯಿತು. ಬಳಿಕ ಮಲಯಾಳಂ ಸಿನಿಮಾ ಇಂಡಸ್ಟ್ರಿ ಬಿಟ್ಟು ತಮಿಳುನಾಡಿಗೆ ಬಂದು ನೆಲೆಸಿದರು.


ತಮಿಳುನಾಡಿಗೆ ಬಂದು ನೆಲೆಸಿದ ಬಳಿಕ ನೀಲಿ ಸಿನಿಮಾಗಳ ನಟನೆಯಿಂದ ದೂರ ಉಳಿದ ಶಕೀಲಾ ತಮಗೆ ಸಿಕ್ಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಾ ಬಂದರು. ಜಯಂ, ಅಳಗಿಯ ತಮಿಳ್​ ಮಗನ್ ಸೇರಿದಂತೆ ಕೆಲವು ತಮಿಳು ಸಿನಿಮಾಗಳಲ್ಲಿಯೂ ಶಕೀಲಾ ನಟಿಸಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ. ಕನ್ನಡದ ಬಿಗ್​ಬಾಸ್​ ಶೋನಲ್ಲೂ ಭಾಗಿಯಾಗಿದ್ದರು.ಸಾಕಷ್ಟು ಸಿನಿಮಾ ಅವಕಾಶಗಳು ಕೂಡ ಶಕೀಲಾರನ್ನು ಅರಸಿ ಬರುತ್ತಿವೆ.


ತಾಜಾ ಸಂಗತಿ ಏನೆಂದರೆ, ಶಕೀಲಾ ಅವರು ತಮ್ಮ ಲವ್​ಸ್ಟೋರಿಯನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಬಹುಕಾಲದ ಬಾಯ್​ಫ್ರೆಂಡ್​ ಬೇರೊಬ್ಬಳನ್ನು ಮದುವೆಯಾಗಿರುವ​ ಬಗ್ಗೆ ತಮಿಳಿನ ಆನ್​​ಲೈನ್​ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.


ನಾನೊಬ್ಬಳು ಮುಸ್ಲಿಂ ಮತ್ತು ನನ್ನ ಬಾಯ್​ಫ್ರೆಂಡ್​ ಹಿಂದು. ನಮ್ಮಿಬ್ಬರ ಪ್ರೀತಿಯ ವಿಚಾರವಾಗಿ ಕುಟುಂಬಗಳ ನಡುವೆ ತುಂಬಾ ಸಮಸ್ಯೆಗಳಿದ್ದವು. ನಮ್ಮ ಮದುವೆ ನಡೆದರೆ ಖಂಡಿತವಾಗಿ ಅಹಿತಕರ ಘಟನೆ ನಡೆಯುತ್ತದೆ ಎಂಬುದು ಮೊದಲೇ ತಿಳಿದಿತ್ತು. ಇದೇ ಸಂದರ್ಭದಲ್ಲಿ ಬೇರೊಬ್ಬಳನ್ನು ವರಿಸುವಂತೆ ನನ್ನ ಬಾಯ್​ಫ್ರೆಂಡ್​​ಗೆ ಕುಟುಂಬದಿಂದ ತುಂಬಾ ಒತ್ತಾಯವಿತ್ತು. ಈ ವಿಚಾರವನ್ನು ಆತ ನನಗೆ ತಿಳಿಸಿದಾಗ, ಬೇಡ ಅನ್ನಲು ಮನಸ್ಸು ಒಪ್ಪಲಿಲ್ಲ.ಹೀಗಾಗಿ ನಾನು ಬೇರೆ ಮದುವೆ ಮಾಡಿಕೊಳ್ಳುವಂತೆ ಸಮ್ಮತಿಸಿದೆ. ಏಕೆಂದರೆ, ನಾವು ಇಷ್ಟಪಡುವವರ ಮನಸ್ಸನ್ನು ನೋಯಿಸಲು ನನಗೆ ಇಷ್ಟವಿರಲಿಲ್ಲ. ಪ್ರತಿ ಸಮಯದಲ್ಲೂ ಆತ ಖುಷಿಯಾಗಿರಬೇಕೆಂದು ನಾನು ಬಯಸಿದೆ. ನಾನು ಆತನ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಬಹಿರಂಗಪಡಿಸಿದರೆ ತುಂಬಾ ತೊಂದರೆಗಳಾಗುತ್ತವೆ ಮತ್ತು ಆತನ ವೈವಾಹಿಕ ಜೀವನಕ್ಕೆ ಸಮಸ್ಯೆಯಾಗುತ್ತದೆ ಎಂದು ಶಕೀಲಾ ಹೇಳಿದ್ದಾರೆ.


ಇದೇ ಸಂದರ್ಭದಲ್ಲಿ ಶಕೀಲಾ ಅವರು ತನ್ನ ಮೊದಲ ಸಂಬಂಧದ ಬಗ್ಗೆಯೂ ಮಾತನಾಡಿದರು. 11ನೇ ವಯಸ್ಸಿನಲ್ಲಿ ಸಂಭವಿಸಿದ ಸಂಗತಿ ಇದು. ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ನನ್ನ ನೆರೆಹೊರೆಯವನಾಗಿದ್ದನು. ಅವನ ಹೆಸರು ಸುರೇಶ್ ರೆಡ್ಡಿ. ಇದು ಪ್ರೀತಿಯೋ? ಅಥವಾ ಇಲ್ಲವೋ? ನನಗೆ ಗೊತ್ತಿಲ್ಲ, ಆದರೆ ಅದು ಸಂಭವಿಸಿತು ಎಂದಿದ್ದಾರೆ.

ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ! ಬಿದ್ದು..ಬಿದ್ದು ನಕ್ಕ ಜನ..!

Posted by Vidyamaana on 2024-05-19 09:34:54 |

Share: | | | | |


ಬೆಂಕಿ ಆರಿಸಲು ಬಂದ ಅಗ್ನಿಶಾಮಕ ವಾಹನದಲ್ಲೇ ನೀರಿಲ್ಲ! ಬಿದ್ದು..ಬಿದ್ದು ನಕ್ಕ ಜನ..!

ಉಡುಪಿ, ಮೇ 18: ಬೆಂಕಿ ಆರಿಸಲು ಬಂದ ಅಗ್ನಿಶಾಮಕ ದಳದ ವಾಹನದಲ್ಲಿ ನೀರಿಲ್ಲದೇ ಕಟ್ಟಡ ಸುಟ್ಟು ಹೋದ ಘಟನೆ ಆದಿ ಉಡುಪಿ ಬಳಿ ನಡೆದಿದೆ. ಈ ವಿಚಾರ ವೈರಲ್‌ ಆಗಿದ್ದು, ಘಟನೆ ಬಗ್ಗೆ ತಿಳಿದ ಕೆಲವರು ಅಗ್ನಿಶಾಮಕ ದಳ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶಗೊಂಡಿದ್ದರೆ, ಇನ್ನೂ ಕೆಲವರು ಬಿದ್ದು ಬಿದ್ದು ನಕ್ಕಿದ್ದಾರೆ.

ಆದಿ ಉಡುಪಿ ಬಳಿ ಬಳಿಯ ಹೋಟೆಲ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳೀಯರು ಬ್ರಹ್ಮಗಿರಿಯಲ್ಲಿರುವ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರ್ಧಗಂಟೆಯ ಬಳಿಕ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ವಾಹನ ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ತಯಾರಿ ನಡೆಸುವಾಗ ವಾಹನದಲ್ಲಿ ನೀರಿಲ್ಲ ಎನ್ನುವುದು ತಿಳಿದು ಬಂದಿದೆ

ಪುತ್ತೂರು: ಪ್ರಯಾಣಿಕರ ಓವರ್ ಲೋಡ್ - ಬಸ್ ಓಡಿಸಲು ನಿರಾಕರಿಸಿದ ಕೆಎಸ್ ಆರ್ ಟಿಸಿ ಚಾಲಕ

Posted by Vidyamaana on 2023-10-29 15:35:36 |

Share: | | | | |


ಪುತ್ತೂರು: ಪ್ರಯಾಣಿಕರ ಓವರ್ ಲೋಡ್ - ಬಸ್ ಓಡಿಸಲು ನಿರಾಕರಿಸಿದ ಕೆಎಸ್ ಆರ್ ಟಿಸಿ ಚಾಲಕ

ಪುತ್ತೂರು : ಪ್ರಯಾಣಿಕರ ಓವರ್  ಲೋಡ್‌ಗೆ ಭಯಗೊಂಡು ಕೆಎಸ್ಆರ್ ಟಿಸಿ  ಬಸ್ ಓಡಿಸಲು ನಿರಾಕರಿಸಿದ ಚಾಲಕ ಘಟನೆ ಕಡಬದಿಂದ ಪುತ್ತೂರಿಗೆ ತೆರಳುವ ಬಸ್‌ ನಲ್ಲಿ ನಡೆದಿದೆ.

ಬಸ್ ಅಲಂಕಾರ್ ತಲುಪಿದಾಗ 130 ಮಂದಿ ಬಸ್ ಹತ್ತಿದ್ದರು. ಇದು ವಾಹನದ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಾಗಿತ್ತು. ಅರ್ಧದಷ್ಟು ಪ್ರಯಾಣಿಕರು ಇಳಿಯಬೇಕು ಇಲ್ಲದಿದ್ದರೆ ಬಸ್ ಓಡಿಸಲು ಹೋಗುವುದಿಲ್ಲ ಎಂದು ಚಾಲಕ ಹೇಳಿದರು.


ಇತ್ತೀಚೆಗೆ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಪುತ್ತೂರಿಗೆ ಹೋಗುವ ಬೆಳಗ್ಗಿನ ಸಂಚಾರಿಸುವ ಒಂದು ಬಸ್ಸನ್ನು ನಿಲ್ಲಿಸಲಾಗಿತ್ತು. ಈ ಹಿನ್ನಲೆ ಬೆಳಗ್ಗಿನ ಆರಂಭದ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಓವರ್ ಲೋಡ್

ಆಗುತ್ತಿತ್ತು. ಇದರಿಂದ ಇತ್ತೀಚೆಗೆ ಬಸ್ ನ ಟಯರ್ ಬ್ಲಾಸ್ಟ್ ಆದ ಘಟನೆ ನಡೆದಿತ್ತು. ಹೀಗಾಗಿ ಬಸ್ ಚಾಲಕನಿಗೆ 5,000 ದಂಡ ಕೂಡ ವಿಧಿಸಲಾಗಿತ್ತು. ಇತ್ತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ ಹಾಕುವಂತೆ ಜನರು ವಿನಂತಿಸಿದರು ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಪ್ರಯಾಣಿಕರ ಆರೋಪ.


ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ 7.30 ಕ್ಕೆ ಬಸ್ಸು ಹೊರಟರೆ ಮತ್ತೆ 8.40 ರ ನಂತರವೇ ಕಡಬದಿಂದ ಈ ಮಾರ್ಗವಾಗಿ ಬಸ್ ತೆರಳುತ್ತದೆ. ಪರಿಣಾಮ 7.30 ರ ಬಸ್ಸು ಆಲಂಕಾರು ತಲುಪುವಾಗ ಜನರಿಂದ ತುಂಬಿಹೋಗಿರುತ್ತದೆ. ಇನ್ನು ಈ ಬಸ್ಸಿನಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿವಿಧ ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಇತರ ಪ್ರಯಾಣಿಕರೆಂದು ಸುಮಾರು 150 ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಹೀಗಾಗಿ ಚಾಲಕ ಅಪಾಯ ಸಂಭವಿಸಬಹುದು ಎಂದು ಬಸ್ ಟಯರ್ ದುರ್ಬಲವಾಗಿದೆ ನಾನು ಇನ್ನು ಮುಂದೆ ಬಸ್ಸು ಓಡಿಸುವುದಿಲ್ಲ ನಿಲ್ಲಿಸಲಾಯಿತು.


ಬಳಿಕ ಪ್ರಯಾಣಿಕ ಒಬ್ಬ ಡಿಪೋಗೆ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ಚಾಲಕ ಬಸ್‌ ಓಡಿಸಲು ಮುಂದಾದ . ಆದರೆ ಕಡಬದಿಂದ ಶಾಂತಿಮುಗೇರು ಮಾರ್ಗವಾಗಿ ಹೋಗುವ ಬಸ್ಸಿನ ಸೇವೆಯನ್ನು ಕಡಿತಗೊಳಿಸಿರುವುದೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮಂಗಳೂರಿನಲ್ಲಿ 5ನೇ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ

Posted by Vidyamaana on 2023-04-27 14:40:44 |

Share: | | | | |


ಮಂಗಳೂರಿನಲ್ಲಿ 5ನೇ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ

ಮಂಗಳೂರು: ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮುಂದುವರಿದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ಐದನೇ ಗ್ಯಾರಂಟಿಯನ್ನು ಎ.27ರಂದು ಘೋಷಣೆ ಮಾಡಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೊದಲ ದಿನದಿಂದಲೇ ಮಹಿಳೆಯರಿಗೆ ಸರಕಾರಿ ಬಸ್ಸಲ್ಲಿ ಉಚಿತ ಪ್ರಯಾಣದ ಗ್ಯಾರಂಟಿ ಘೋಷಣೆ ಮಾಡಿದ್ದಾರೆ.ಮಂಗಳೂರು ನಗರದ ಹೊರವಲಯದ ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಚುನಾವಣ ಪ್ರಚಾರದ ಬಹಿರಂಗ ಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ.

BIG NEWS: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಎಂಬ ಸುದ್ದಿ ಸುಳ್ಳು : ಪರೀಕ್ಷಾ ಮಂಡಳಿ ಸ್ಪಷ್ಟನೆ

Posted by Vidyamaana on 2024-04-03 08:35:16 |

Share: | | | | |


BIG NEWS: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಎಂಬ ಸುದ್ದಿ ಸುಳ್ಳು : ಪರೀಕ್ಷಾ ಮಂಡಳಿ ಸ್ಪಷ್ಟನೆ

ಬೆಂಗಳೂರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವ ಸಂಬಂಧ ಏಪ್ರಿಲ್ 3 ರ ಇಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ಆಯೋಜಿಸಿದೆ ಎಂದು ಹಬ್ಬಿರುವ ಮಾಹಿತಿ ಸುಳ್ಳು ಎಂದು ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಸ್ಪಷ್ಟಪಡಿಸಿದ್ದಾರೆ.ಕಿಡಿಗೇಡಿಗಳು ಮಂಡಳಿ ಹೆಸರಿನಲ್ಲಿ ನಕಲಿ ಪತ್ರಿಕಾ ಹೇಳಿಕೆಯನ್ನು ಸೃಷ್ಟಿಸಿ ಸಾಮಾಜಕ ಜಾಲತಾಣದಲ್ಲಿ ಹರಿಬಿಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಮಂಡಳಿಯಿಂದ ಅಂತಹ ಯಾವುದೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದು ಹೇಳಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ಫಲಿತಾಂಶ ಪ್ರಕಟಣೆಗೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.



Leave a Comment: