ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಸುದ್ದಿಗಳು News

Posted by vidyamaana on 2024-07-03 11:16:18 |

Share: | | | | |


ವಿ.ಹಿಂ.ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿ ನೇಮಕ

ಪುತ್ತೂರು : ವಿಶ್ವ ಹಿಂದೂ ಪರಿಷದ್ ನ ಪುತ್ತೂರು ನಗರ ಘಟಕದ ಅಧ್ಯಕ್ಷರಾಗಿ ಎಸ್.ದಾಮೋದರ ಪಾಟಾಳಿಯವರನ್ನು ನೇಮಕ ಮಾಡಲಾಗಿದೆ.ವಿಶ್ವ ಹಿಂದೂ ಪರಿಷದ್ ನ ಜಿಲ್ಲೆಯ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಘೋಷಿಸಿದರು.

ವಿಶ್ವ ಹಿಂದೂ ಪರಿದ್ ನ ಜಿಲ್ಲಾ ಉಪಾಧ್ಯಕ್ಷ ಸತೀಶ್ ಬಿ.ಎಸ್., ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

 Share: | | | | |


ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀಲ್ಸ್ ಮಾಡಿದ್ದ ಆಶಿಕ್ ಪೊಲೀಸ್ ವಶಕ್ಕೆ‌

Posted by Vidyamaana on 2023-08-03 12:40:38 |

Share: | | | | |


ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀಲ್ಸ್ ಮಾಡಿದ್ದ ಆಶಿಕ್  ಪೊಲೀಸ್ ವಶಕ್ಕೆ‌

ಉಡುಪಿ: ಮಣಿಪಾಲ ಡಿಸಿ ಕಚೇರಿ‌ ರಸ್ತೆಯಲ್ಲಿ ರೀಲ್ಸ್ ಶೋಕಿಗಾಗಿ ಯದ್ವಾ ತದ್ವಾ ಸ್ಕೂಟರ್ ಚಲಾಯಿಸಿ ಇತರೆ ವಾಹನ ಸವಾರರಿಗೆ ತೊಂದರೆ ನೀಡಿದ್ದ‌‌ ಯುವಕ ನನ್ನು ಮತ್ತು ಸ್ಕೂಟರ್ ವಶಕ್ಕೆ ಪಡೆದು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪರ್ಕಳ ನಿವಾಸಿ ಆಶಿಕ್(19) ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀಲ್ಸ್ ಮಾಡುತ್ತಿದ್ದ ಯುವಕ.


ಆಶಿಕ್ ಯದ್ವಾ ತದ್ವಾ ಸ್ಕೂಟಿ ಓಡಿಸಿ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಕೂಟಿ ಉಡುಪಿಯ ನೋಂದಣಿ ಸಂಖ್ಯೆ ಹೊಂದಿದ್ದು ವಿಡಿಯೋದಲ್ಲಿ ಮಣಿಪಾಲದ ಡಿಸಿ ಆಫೀಸ್ ರಸ್ತೆ ಹಾಗೂ ಉಡುಪಿಯ ಭಾಗದ ರಸ್ತೆಯಲ್ಲಿ ಯದ್ವಾ ತದ್ವಾವಾಗಿ ಸಂಚರಿಸಿರುವುದು ಕಂಡು ಬಂದಿದೆ. ಒಂದು ಕಡೆ ಹೋಗುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆಯುವ ಸಂದರ್ಭವೂ ಎದುರಾಗಿರುವುದು ವಿಡಿಯೋದಲ್ಲಿ ಕಾಣಬಹುದು.

ಸುಬ್ರಹ್ಮಣ್ಯ : ಕಾರಿನಿಂದ ಚಿನ್ನ ಕಳವು ಪ್ರಕರಣ : ಆರೋಪಿ ಹೊನ್ನವಳ್ಳಿ ಮೂಲದ ಪ್ರಭಾಕರ್ ಪೊಲೀಸ್ ವಶಕ್ಕೆ

Posted by Vidyamaana on 2023-10-11 15:14:04 |

Share: | | | | |


ಸುಬ್ರಹ್ಮಣ್ಯ : ಕಾರಿನಿಂದ ಚಿನ್ನ ಕಳವು ಪ್ರಕರಣ : ಆರೋಪಿ ಹೊನ್ನವಳ್ಳಿ ಮೂಲದ ಪ್ರಭಾಕರ್ ಪೊಲೀಸ್ ವಶಕ್ಕೆ

ಸುಬ್ರಹ್ಮಣ್ಯ : ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದು ಚಿನ್ನ ಕಳವು ಮಾಡಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ.


ಹೊನ್ನವಳ್ಳಿ ಮೂಲದ ಪ್ರಭಾಕರ್ (35) ಬಂಧಿತ ಆರೋಪಿ.


ಈತ ಸುಬ್ರಹ್ಮಣ್ಯ ಪಾರ್ಕಿಂಗ್ ಸ್ಥಳದಲ್ಲಿ ಕಾರಿನ ಗಾಜು ಒಡೆದು ಚಿನ್ನವನ್ನು ಕದ್ದಿದ್ದು, ಈತನನ್ನು ಸುಬ್ರಹ್ಮಣ್ಯ ರೈಲು ನಿಲ್ದಾಣ ಬಳಿ ಬಂಧಿಸಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.


ಈತನ ಖತರ್ನಾಕ್ ಖದೀಮನಾಗಿದ್ದು, 15 ದಿನದ ಹಿಂದೆ ಧರ್ಮಸ್ಥಳದಲ್ಲಿ 40 ಗ್ರಾಂ ಚಿನ್ನವನ್ನು ಇದೇ ಮಾದರಿಯಲ್ಲಿ ಕದ್ದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರ ಮುಂದೆ ಒಪ್ಪಿಕೊಂಡಿರುತ್ತಾನೆ.


ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಕಾರ್ತಿಕ ಅವರ ನೇತೃತ್ವದಲ್ಲಿ ಮುರಳಿಧರ್ (ತನಿಖೆ ) ಹಾಗೂ ಎರಡು ತಂಡ ರಚಿಸಲಾಗಿತ್ತು. ಸಿಬ್ಬಂದಿಗಳಾದ ಕರುಣಾಕರ, ಮಹೇಶ್, ಕುಮಾರ್, ಆನಂದ್, ವಿಠ್ಠಲ್ ಬಸವರಾಜ್, ರೋಹಿತ್, ಕೃಷ್ಣ ಭಾಗಿಯಾಗಿದ್ದರು.

ತುಂಡುಡುಗೆ ಧರಿಸುತ್ತಿದ್ದಾಳೆ ಎಂಬ ಕೋಪಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

Posted by Vidyamaana on 2023-12-31 16:41:49 |

Share: | | | | |


ತುಂಡುಡುಗೆ ಧರಿಸುತ್ತಿದ್ದಾಳೆ ಎಂಬ ಕೋಪಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

ಹಾಸನ: ಬಟ್ಟೆ ಧರಿಸುವ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಕಲಹ ನಡೆದಿದೆ. ಈ ವೇಳೆ ಪತಿಯೇ ಪತ್ನಿಯನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ (Hassan) ಜಿಲ್ಲೆ ಅರಸೀಕೆರೆ (Arsikere) ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿ ಮೂಲದ ಜ್ಯೋತಿ (22) ಕೊಲೆಯಾದ ಮಹಿಳೆ, ರಾಂಪುರ ಗ್ರಾಮದ ನಿವಾಸಿ ಜೀವನ್ (25) ಪತ್ನಿ ಕೊಲೆಗೈದ ಆರೋಪಿ.ಜೀವನ್‌, ಜ್ಯೋತಿ ಈ ಹಿಂದೆ ಗಾರ್ಮೆಂಟ್ಸ್‌ನಲ್ಲಿ ಪರಸ್ಪರ ಕೆಲಸ ಮಾಡುತ್ತಿದ್ದಾಗಲೇ ಪ್ರೀತಿಸಿ ಮದುವೆ ಯಾಗಿದ್ದರು (Love Marriage). ಕಳೆದ 6 ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದಾ ಮಾಡ್ರನ್‌ ಡ್ರೆಸ್‌ ಧರಿಸುತ್ತಿದ್ದ ಜ್ಯೋತಿ ಬೋಲ್ಡ್‌ ಆಗಿ ಇರುತ್ತಿದ್ದರು. ಇದೇ ಕಾರಣಕ್ಕೆ ಪತಿ ಜೀವನ್‌ ಕೋಪಗೊಂಡಿದ್ದ, ಅನುಮಾನ ಪಟ್ಟು ಜಗಳವಾಡಿದ್ದ.


ಶನಿವಾರ ಸಂಜೆಯು ಸಹ ಮಾಡ್ರನ್‌ ಡ್ರೆಸ್‌ ಹಾಕಿಕೊಂಡು ಜ್ಯೋತಿ ಹೊರಗೆ ಹೊರಟಿದ್ದಳು. ಆಗಲೂ ಜೀವನ್‌ ವಿರೋಧಿಸಿದ್ದ, ಕೊನೆಗೆ ಬೈಕ್‌ನಲ್ಲಿ ಡ್ರಾಪ್‌ ಕೊಡುವುದಾಗಿ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದ ಜೀವನ್‌ ಚಾಕುವಿನಿಂದ ಕುತ್ತಿಗೆ ಕೊಯ್ದು ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ಎಸ್ಕೇಪ್‌ ಆಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಸೀಕೆರೆ ತಾಲೂಕಿನ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೈಸ್ವಾಲ್ ಹೊಸ ದಾಖಲೆ ; ಕೆಕೆಆರ್ ವಿರುದ್ಧ ರಾಜಸ್ಥಾನಕ್ಕೆ ಅತ್ಯಮೋಘ ಜಯ

Posted by Vidyamaana on 2023-05-11 20:26:54 |

Share: | | | | |


 ಜೈಸ್ವಾಲ್ ಹೊಸ ದಾಖಲೆ ; ಕೆಕೆಆರ್ ವಿರುದ್ಧ ರಾಜಸ್ಥಾನಕ್ಕೆ ಅತ್ಯಮೋಘ ಜಯ

ಕೋಲ್ಕತಾ: ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 9 ವಿಕೆಟಿಗಳಿಂದ ಅಮೋಘ ಗೆಲುವು ಸಾಧಿಸಿತು.ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು. ವೆಂಕಟೇಶ್ ಅಯ್ಯರ್ 57 ರನ್ ಗರಿಷ್ಠ ಸ್ಕೋರ್ ಮಾಡಿದರು. ಜೇಸನ್ ರಾಯ್ 10, ಗುರ್ಬಾಜ್ 18, ನಾಯಕ ನಿತೀಶ್ ರಾಣಾ 22, ರಸೆಲ್ 10, ರಿಂಕು ಸಿಂಗ್ 16 ರನ್ ಗಳಿಸಿ ಔಟಾದರು. ತಂಡ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಬ್ಯಾಟ್ಸ್ ಮ್ಯಾನ್ ಗಳು ನಿರೀಕ್ಷಿತ ಆಟ ತೋರಲಿಲ್ಲ. ಆರ್ ಆರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 4 ವಿಕೆಟ್ ಕಬಳಿಸಿದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್(187) ಪಡೆದ ಬೌಲರ್ ಆಗಿದ್ದಾರೆ. ಡ್ವೇನ್ ಬ್ರಾವೋ 183 ವಿಕೆಟ್ ಕಬಳಿಸಿ ಅಗ್ರಣಿಯಾಗಿದ್ದರು.ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಅವರ ಭರ್ಜರಿ ಸಾಥ್ ನಿಂದಾಗಿ ಅಮೋಘ ಜಯ ಸಾಧಿಸಿತು. 13.1 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು.

ಜೈಸ್ವಾಲ್ ಐಪಿಎಲ್‌ನಲ್ಲಿ ಅತಿ ವೇಗದ ಐವತ್ತು ರನ್ ಗಳಿಸಿದ ದಾಖಲೆ ಮಾಡಿದರು. ಕೆ ಎಲ್ ರಾಹುಲ್ ಮತ್ತು ಪ್ಯಾಟ್ ಕಮಿನ್ಸ್ ಅವರು ಈ ಹಿಂದೆ 14  ಎಸೆತಗಳಲ್ಲಿ ಸ್ಪೋಟಕ ಅರ್ಧ ಶತಕಗಳನ್ನು ಸಿಡಿಸಿದ್ದರು.ಕೇವಲ 13 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜೈಸ್ವಾಲ್ 47ಎಸೆತಗಳಿಂದ 98 ರನ್ ಗಳಿಸಿ ಅಜೇಯರಾಗಿ ಉಳಿದರು.13 ಬೌಂಡರಿ ಮತ್ತು 5 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ಸಂಜು ಸ್ಯಾಮ್ಸನ್ ಔಟಾಗದೆ 29 ಎಸೆತಗಳಿಂದ 48 ರನ್ ಗಳಿಸಿ ಅಜೇಯರಾಗಿ ಉಳಿದರು 2 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಅವರ ಇನ್ನಿಂಗ್ಸ್ ನಲ್ಲಿ ಒಳಗೊಂಡಿತ್ತು.

ಆರ್ಯಾಪು ಗ್ರಾಪಂ: ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರು ಕಾಂಗ್ರೆಸ್ ಸೇರ್ಪಡೆ

Posted by Vidyamaana on 2023-08-14 08:59:16 |

Share: | | | | |


ಆರ್ಯಾಪು ಗ್ರಾಪಂ: ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರು ಕಾಂಗ್ರೆಸ್ ಸೇರ್ಪಡೆ

ಪುತ್ತೂರು: ಆರ್ಯಾಪು ಗ್ರಾಪಂನ ಇಬ್ಬರು ಗ್ರಾಪಂ ಸದಸ್ಯರು ಶಾಸಕರಾದ ಅಶೋಕ್ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ   ಎಂ ಬಿ ವಿಶ್ವನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಣಕ್ಕೆ ಅಧಿಕೃತ ಸೇರ್ಪಡೆಯಾದರು. ಆರ್ಯಾಪು ಮೂರನೇ ವಾರ್ಡಿನ ಬಿಜೆಪಿ ಬೆಂಬಲಿತ ಸದಸ್ಯರಾದ ಪವಿತ್ರ ರೈ ಹಾಗೂ ಪೂರ್ಣಿಮಾ ರೈ ಕಾಂಗ್ರೆಸ್ ಸೇರಿದ ಗ್ರಾಪಂ ಸದಸ್ಯರು. ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಬೆನ್ನಲ್ಲೇ ಬಿಜೆಪಿ ಸದಸ್ಯರಿಬ್ಬರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. 

ಶಾಸಕರಾದ ಅಶೋಕ್ ರೈ ,ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಯವರು ಪಕ್ಷದ ದ್ವಜ ನೀಡಿ ಇಬ್ನರನ್ನೂ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಈ ವೇಳೆ ಮಾತನಾಡಿದ ಶಾಸಕರು ಪಕ್ಷದ ಸಿದ್ದಾಂತ ಹಾಗೂ ಅಭಿವೃದ್ದಿ ಕಾರ್ಯಗಳನ್ನು‌ಮೆಚ್ಚಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಅವರಿಬ್ ರನ್ನೂ ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅವರ ವಾರ್ಡಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯಲಿದೆ ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ ಪಕ್ಷದ ಸಿದ್ದಾಂತ ಹಾಗೂ ನಮ್ಮ ಶಾಸಕರ ಅಭಿವೃದ್ದಿ ಕೆಲಸಗಳನ್ನು‌ಮೆಚ್ಚಿ ನಮ್ಮ ಜೊತೆ ಸೇರಿಕೊಂಡಿದ್ದಾರೆ.ಮುಂದಿನ ದಿನಗಳಲ್ಲಿ ಆರ್ಯಾಪು ಗ್ರಾಪಂ ನಲ್ಲಿ ಅಭಿವೃದ್ದಿ ಪರ್ವ ಆರಂಭವಾಗಲಿದೆ ಎಂದು ಹೇಳಿದರು.



ನಮ್ಮನ್ನು ಕಡೆಗಣಿಸಿದ್ದಾರೆ,ಪಕ್ಷದಲ್ಲಿ ಗೌರವ ಇಲ್ಲ


ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಇಬ್ಬರು ಗ್ರಾಪಂ ಸದಸ್ಯರು ಮಾತನಾಡಿ ನಾವು ಕಳೆದ 20 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಬಿಜೆಪಿಗಾಗಿ ಕೆಲಸ ಮಾಡಿದ್ದೆವು. ಪಕ್ಷದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಮತ್ತು ಕಾರ್ಯಕರ್ತರಿಗೆ ಗೌರವ ಇಲ್ಲ. ಅಭಿವೃದ್ದಿ ಕೆಲಸಗಳನ್ನು ಮಾಡುವಲ್ಲಿ ಬಿಜೆಪಿ ಹಿಂದೆ ಇದೆ. ಪುತ್ತೂರು ಶಾಸಕರ ಬಡವರ ಪರ ಇರುವ ಕಾಳಜಿ ಮತ್ತು ಅವರ ಅಭಿವೃದ್ದಿ ಯೋಜನೆಗಳು, ಕಾಂಗ್ರೆಸ್ ಸರಕಾರದ ಬಡವರ ಗ್ಯಾರಂಟಿ ಯೋಜನೆಗಳು ನಮ್ಮನ್ನು ಕಾಂಗ್ರೆಸ್ ಸೇರುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಸಾಮಾಜಿಕ ಜಾಲತಾಣದ ಬ್ಲಾಕ್ ಘಟಕದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಫೆ 06: ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಲೇಸರ್ ಸ್ಟೋನ್ ಕ್ಯಾಂಪ್

Posted by Vidyamaana on 2024-02-05 15:54:33 |

Share: | | | | |


ಫೆ 06: ಬೊಳುವಾರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಲೇಸರ್ ಸ್ಟೋನ್ ಕ್ಯಾಂಪ್

ಪುತ್ತೂರು: ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ.6ರಂದು ಸಾಯಂಕಾಲ 5.30ರಿಂದ ಉಚಿತ ಲೇಸರ್ ಸ್ಟೋನ್ ಕ್ಯಾಂಪ್ ನಡೆಯಲಿದೆ.


ಖ್ಯಾತ ಮೂತ್ರಶಾಸ್ತ್ರಜ್ಞ ಡಾ. ಅಭೀಷ್ ಹೆಗ್ಡೆರವರು ತಪಾಸಣೆ ನಡೆಸಲಿದ್ದಾರೆ. ಈ ಆನ್ ಲೈನ್ ನ್ಯೂಸ್ ಸಂದರ್ಭದಲ್ಲಿ ಎಲ್ಲಾ ರೀತಿಯ ಮೂತ್ರ ಕಲ್ಲಿನ ಮತ್ತು ಪ್ರಾಸ್ಟೇಟ್‌ನ ಲೇಸರ್ ಚಿಕಿತ್ಸೆಗೆ ಸಂಬಂದಪಟ್ಟ ತಪಾಸಣೆ ನಡೆಯಲಿದೆ.


ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ನೋಂದಾವಣೆಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449991115, 9188656671ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



Leave a Comment: