ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಸುದ್ದಿಗಳು News

Posted by vidyamaana on 2024-07-08 15:11:53 |

Share: | | | | |


ಹೃದಯಾಘಾತದಿಂದ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ವಿಧಿವಶ

ಕಲಬುರಗಿ: ಹೃದಯಾಘಾತವಾದ ಹಿನ್ನೆಲೆಯಲ್ಲಿ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿ (35) ವಿಧಿವಶರಾಗಿದ್ದಾರೆ.

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ವಿರಕ್ತ ಮಠದ್ದಲ್ಲಿ ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಮಹಾಸ್ವಾಮಿಗಳು ಇಹಲೋಕ ತ್ಯಜಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ರಟಕಲ್ ಗ್ರಾಮದಲ್ಲಿ ಧಾರ್ಮಿಕ ವಿಧಿ-ವಿಧಾನದ ಪ್ರಕಾರ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಭಾನುವಾರ ರಟಕಲ್ ಗ್ರಾಮದಲ್ಲಿ ನಡೆದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು.

 Share: | | | | |


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಜ್ಞಾನ ಭಂಡಾರ ದ ಉಡುಗೊರೆ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

Posted by Vidyamaana on 2024-04-03 21:01:49 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಗೆ ಜ್ಞಾನ ಭಂಡಾರ ದ ಉಡುಗೊರೆ ನೀಡಿದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರನ್ನು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ ನೀಡಿ ಆಶೀರ್ವಾದ ಪಡೆದರು.

ಕೊಳ್ತಿಗೆ ವಲಯ ಕಾಂಗ್ರೆಸ್‌ಕಾರ್ಯಕರ್ತರ ಸಭೆ ಶಾಸಕರಿಗೆ ಸನ್ಮಾನ

Posted by Vidyamaana on 2023-09-27 12:27:06 |

Share: | | | | |


ಕೊಳ್ತಿಗೆ ವಲಯ ಕಾಂಗ್ರೆಸ್‌ಕಾರ್ಯಕರ್ತರ ಸಭೆ ಶಾಸಕರಿಗೆ ಸನ್ಮಾನ

ಪುತ್ತೂರು; ನಾವು ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅಚ್ಚೇದಿನ್ ಕೊಡುತ್ತೇವೆ, ಜನರಿಗೆ ನೆಮ್ಮದಿಯ ಜೀವನ ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಜನರ ಖಾತೆಗೆ ನಯಾ ಪೈಸೆ ನೀಡಿಲ್ಲ ಮತ್ತು ನೆಮ್ಮದಿಯ ಜೀವನವನ್ನೂ ನೀಡಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಆರೋಪಿಸಿದರು.

ಕೊಳ್ತಿಗೆ ವಲಯ ಕಾಂಗ್ರೆಸ್ ವತಿಯಿಂದ ಕೊಳ್ತಿಗೆ ಅಂಭೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಚುನಾವಣೆಯ ಸಂದರ್ಬದಲ್ಲಿ ರಾಜ್ಯದ ಜನತೆಗೆ ಕೊಟ್ಟಿದ್ದ ಗ್ಯಾರಂಟಿಯನ್ನು ಕಾಂಗ್ರೆಸ್ ಈಡೇರಿಸಿದೆ. ಜನರ ಖಾತೆಗೆ ಹಣವನ್ನು ನೀಡಿದ್ದೇವೆ, ಅಕ್ಕಿಯನ್ನು ನೀಡಿದ್ದೇವೆ, ಉಚಿತ ಕರೆಂಟ್ , ಮತ್ತು ಗೃಹಲಕ್ಷಿ ಯೋಜನೆಯ ೨ ಸಾವಿರ ಹಣ ಮತ್ತು ಉಚಿತ ಬಸ್ ಪ್ರಯಾಣವನ್ನು ಮಾಡಿದ್ದೇವೆ ಇ|ಂಥಹ ಒಂದೇ ಒಂದು ಕಾರ್ಯಕ್ರಮ ಬಿಜೆಪಿ ನೀಡಿದೆಯಾ? ಎಂದು ಪ್ರಶ್ನಿಸಿದರು. ಬಡವರು ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಚುನಾವಣೆಯ ಸಂದರ್ಬದಲ್ಲಿ ಜನರಲ್ಲಿ ಕೋಮು ಭಾವನೆಯನ್ನು ಬಿತ್ತಿ ಧರ್ಮದ ಆಧಾರದಲ್ಲಿ ಮತ ಪಡೆದು ಅಧಿಕಾರಕ್ಕೇರುವ ಬಿಜೆಪಿ ಬಳಿಕ ಜನರನ್ನು ಮರೆಯುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ, ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಲೇ ಬಿಜೆಪಿ ಗರು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ ಎಂದು ಶಾಸಕರು ತಿಳಿಸಿದರು.


ಎದೆಹುಬ್ಬಿಸಿ ನಡೆಯಿರಿ ಸರಕಾರ ನಮ್ಮದೇ: ಎಂ ಬಿ ವಿಶ್ವನಾಥ ರೈ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಕಿತ್ತು ಎನ್ನುವಷ್ಟರ ಮಟ್ಟಿಗೆ ರಾಜ್ಯದ ಬಿಜೆಪಿ ಅಡಳಿತ ಜನರಿಗೆ ಬೇಡವಾಗಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನ ಸಮಾಧಾನಪಡುವಂತಾಯಿತು, ಪುತ್ತೂರಿನಲ್ಲಿ ನಮ್ಮದೇ ಶಾಸಕರಿದ್ದು ರಾಜ್ಯದಲ್ಲಿ ನಮ್ಮದೇ ಸರಕಾರ ಇದೆ ಇಷ್ಟು ದಿನ ತಲೆಬಾಗಿದ್ದು ಸಾಕು ಇನ್ನು ಎದೆ ಹುಬ್ಬಿಸಿ ನಡೆಯಿರಿ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದರು.

ಪುತ್ತೂರು ಶಾಸಕರಾದ ಅಶೋಕ್ ರೈಯವರು ಪುತ್ತೂರಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಶಾಸಕರ ಕಚೇರಿಗೆ ಬಂದು ಸಾವಿರಾರು ಮಂದಿ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದಾರೆ, ಭರವಸೆ ಮಾತ್ರ ನೀಡದೆ ಕೆಲಸ ಮಾಡಿ ತೋರಿಸುವ ತಾಕತ್ತು ನಮ್ಮ ಶಾಸಕರಿಗೆ ಇದೆ ಎಂಬುದು ಜನರಿಗೆ ಗೊತ್ತಾಗಿದೆ, ಮುಂದಿನ ಐದು ವರ್ಷದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪುತ್ತೂರು ಅಭಿವೃದ್ದಿ ಹೊಂದಲಿದೆ ಎಂದು ಹೇಳಿದರು.


ಪುತ್ತೂರಿಗೂ ಐದು ಗ್ಯಾರಂಟಿ : ಹೇಮನಾಥ ಶೆಟ್ಟಿ

ರಾಜ್ಯದಲ್ಲಿ ಕಾಂಗ್ರೆಸ್ ಜನತೆಗೆ ಐದು ಗ್ಯಾರಂಟಿ ಕೊಟ್ಟಿದ್ದರೆ ಪುತ್ತೂರು ಶಾಸಕರು ಕ್ಷೇತ್ರಕ್ಕೆ ಐದು ಗ್ಯಾರಂಟಿಯನ್ನು ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾಯಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆಎಂಎಫ್ ಸ್ಥಳಾಂತರ, ಕೊಯಿಲ ಜಾನುವಾರು ಕೇಂದ್ರದ ಅಭಿವೃದ್ದಿ ಮತ್ತು ಪುತ್ತೂರು ನಗರದಲ್ಲಿ ಸಮಗ್ರ ಅಭಿವೃದ್ದಿ ಈ ಐದು ಗ್ಯಾರಂಟಿಯನ್ನು ಶಾಸಕರು ನೀಡಿದ್ದಾರೆ. ಇವುಗಳ ಪೈಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ೯೬೦ ಕೋಟಿ ಬಿಡುಗಡೆಯಾಗಿದೆ, ನಗರದ ಚರಂಡಿ ಕಾಮಗಾರಿಗೂ ೫೦೦ ಕೋಟಿ ಬಿಡುಗಡೆಯಾಗಿದೆ, ಕೆಎಂಎಫ್ ಸ್ಥಳಾಂತರಕ್ಕೆ ಜಾಗ ನಿಗಧಿಪಡಿಸಲಾಗಿದೆ, ಜಾನುವಾರು ಕೆಂದ್ರಕ್ಕೂ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದ ಅವರು ಈ ಐದು ಗ್ಯಾರಂಟಿಗಳು ಜಾರಿಯಾದ ಬಳಿಕ ಪುತ್ತೂರಿನ ಚಿತ್ರಣವೇ ಬದಲಾಗಲಿದೆ. ಇಲ್ಲಿನ ಸಾವಿರಾರು ಯುವಕರಿಗೆ ಉದ್ಯೋಗ ದೊರೆಯಲಿದೆ, ಜನರ ಓಡಾಟ ಹೆಚ್ಚಾಗಿ ಪುತ್ತೂರಿನಲ್ಲಿ ವ್ಯಾಪಾರ, ವ್ಯವಹಾರ ಜಾಸ್ತಿಯಗಲಿದ್ದು ಒಟ್ಟಿನಲ್ಲಿ ಮುಂದೆ ಪುತ್ತೂರು ಜನತೆಗೆ ನೆಮ್ಮದಿಯ ದಿನಗಳು ಖಂಡಿತವಾಗಿಯೂ ಬರುತ್ತದೆ ಎಂದು ಹೇಳಿದರು.



ಶಾಸಕರಿಗೆ ಗಟ್ಸ್ ಇದೆ ಎಂಬುದು ಜನತೆಗೆ ಗೊತ್ತಾಗಿದೆ: ಬಡಗನ್ನೂರು

ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಸಕ ಅಶೋಕ್ ರೈ ಯವರಿಗೆ ಗಟ್ಸ್ ಇದೆ ಎಂಬುದು ಜನರಿಗೆ ಗೊತ್ತಾಗಿದೆ ಈ ಕಾರಣಕ್ಕೆ ಅವರು ಹೋದಲ್ಲೆಲ್ಲಾ ಜನ ಸುತ್ತುವರಿಯುತ್ತಾರೆ ಎಂದು ಹೇಳಿದರು. ನುಡಿದಂತೆ ನಡೆಯುವ ಮೂಲಕ ಶಾಸಕರು ಜನ ಮೆಚ್ಚುಗೆ ಗಳಿಸಿದ್ದಾರೆ.ಬಡವರ ಪರ ಅಪಾರ ಕಾಳಜಿ ಇರುವ ಶಾಸಕ ರೈಗಳ ಬಳಿ ನಿತ್ಯವೂ ನೂರಾರು ಸಮಸ್ಯೆಗಳನ್ನು ಹೊತ್ತ ಬಡವರು ಭೇಟಿಯಗಿ ಸಮಸ್ಯೆ ಇತ್ಯರ್ಥಮಾಡಿಕೊಳ್ಳುತ್ತಿದ್ದಾರೆ , ಈ ಹಿಂದೆ ಈ ಪರಿಪಾಟ ಇರಲಿಲ್ಲ ಶಾಸಕರು ಏನೆಲ್ಲಾ ಮಾಡಬಹುದು ಎಂಬುದನ್ನು ಅಶೋಕ್ ರೈ ತೋರಿಸಿಕೊಟ್ಟಿದ್ದಾರೆ. ಜನರ ಪರ ಕೆಲಸ ಮಾಡಲು ಶಾಸಕರಾದವರಿಗೆ ಗಟ್ಸ್ ಬೇಕು ಎಂಬುದು ಜನ ಮಾತನಾಡತೊಡಗಿದ್ದಾರೆ ಎಂದು ಬಡಗನ್ನೂರುರವರು ಹೇಳಿದರು. ಭೃಷ್ಟಾಚಾರ ಮುಕ್ತ ಪುತ್ತೂರನ್ನಾಗಿ ಮಾಡುವಲ್ಲಿ ಅವರ ಶ್ರಮ ಸಫಲವಾಗಲಿದೆ ಎಂದು ಹೇಳಿದರು.



ಕಾಂಗ್ರೆಸ್ಸನ್ನು ಮರೆಯದಿರಿ: ಅಮಲರಾಮಚಂದ್ರ

ಕಳೆದ ಮೂರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಜನತೆಗೆ ನೆಮ್ಮದಿಯ ಜೀವನವನ್ನು ನೀಡಿದೆ, ಎಲ್ಲರ ಖಾತೆಗೂ ಹಣ ಬಂದಿದೆ, ನಾವು ಸುಳ್ಳು ಹೇಳಿ ಮೋಸ ಮಾಡುವವರಲ್ಲ ನಮ್ಮದೇನಿದ್ದರೂ ನುಡಿದಂತೆ ನಡೆಯುವ ಜಾಯಾಮಾನವಾಗಿದ್ದು ನೆಮ್ಮದಿಯ ಬದುಕು ನೀಡಿದ ಕಾಂಗ್ರೆಸ್ಸನ್ನು ಯಾರೂ ಮರೆಯಬಾರದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಅಮಲರಾಮಚಂದ್ರ ಮನವಿ ಮಾಡಿದರು. ಕೊಳ್ತಿಗೆಯಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಕೊಳ್ತಿಗೆಯ ಬಿಜೆಪಿಗರು ಇಲ್ಲಿನ ತಮಿಳು ನಿವಾಸಿಗಳಿಗೆ ತೊಂದರೆ ನೀಡಿದ್ದಾರೆ, ಅವರು ಮನೆ ನಿರ್ಮಾಣ ಮಾಡಲು ಸರಕಾರ ಜಾಗ ಕೊಟ್ಟರೂ ಅಲ್ಲಿ ಮನೆ ನಿರ್ಮಾಣ ಮಾಡಲು ಬಿಜೆಪಿ ಅಡ್ಡಿಪಡಿಸಿತ್ತು, ಶಾಸಕರಾದ ಅಶೋಕ್ ರೈ ಆ ಕುಟುಂಬಗಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು.


 ನಿಗಮ ಕೊಡಿ

ಸಭೆಯಲ್ಲಿ ಮಾತನಾಡಿದ ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷರಾದ ಕೆ ಎಸ್ ಪ್ರಮೋದ್‌ರವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕಾವು ಹೇಮನಾಥ ಶೆಟ್ಟಿಯವರು ಪಕ್ಷಕ್ಕಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದವರು ಅವರಿಗೆ ಸರಕಾರ ಉನ್ನತ ಹುದ್ದೆಯನ್ನು ನೀಡಬೇಕು. ಅರಣ್ಯ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಹೇಳಿದಾಗ ಸಭೆಯಲ್ಲಿದ್ದ ಕಾರ್ಯಕರ್ತರು ಒಕ್ಕೊರಳನಿಂದ ಅನುಮೋದನೆ ಮಾಡಿದರು.

ಶಾಸಕರು ಈ ವಿಚಾರವನ್ನು ಸರಕಾರದ ಗಮನಕ್ಕೆ ತರಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಹೇಮನಾಥ ಶೆಟ್ಟಿಯವರು ಹಿರಿಯರು ಅವರನ್ನು ಬಿಟ್ಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ವಲಯಾಧ್ಯಕ್ಷರಾದ ವೆಂಕಟ್ರಮಣ ಗೌಡ, ಮಾಜಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲರಾಮಚಂದ್ರ, ಪ್ರದೀಪ್‌ಕುಮಾರ್ ಪಾಂಬಾರು,  ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಧರ್ ಪೂಜಾರಿ , ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಮುರಳೀದರ ಎಸ್ ಪಿ, ಗ್ರಾಪಂ ಸದಸ್ಯರುಗಳಖಾದ ಪವನ್ ಡಿ ಜಿ, ಕೊಳ್ತಿಗೆ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ವಸಂತಕುಮಾರ ರೈ ದುಗ್ಗಳ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ, ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಸಾಮಾಜಿಕ ಜಾಲತಾಣದ ಸಿದ್ದಿಕ್ ಸುಲ್ತಾನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಪಾಣಜೆ, ಗ್ರಾಪಂ ಅಧ್ಯಕ್ಷರಾದ ಅಕ್ಕಮ್ಮ, ಕೊಳ್ತಿಗೆ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷೆ ಲಕ್ಷ್ಮಿ ಕೆ ಜಿ

ಗ್ರಾಪಂ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಕಾಂಗ್ರೆಸ್ ಕಾರ್ಯಕರ್ತರು, ಊರವರು, ಅಭಿಮಾನಿಗಳು

ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷರಾದ ಪ್ರಮೋದ್ ಕೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸಭೆಯಲ್ಲಿ ಶಾಸಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿನೋದ್ ರೈ ಕೆಳಗಿನ ಮನೆ ಕಾರ್ಯಕ್ರಮ ನಿರೂಪಿಸಿದರು.

ಕುಡ್ಲದಲ್ಲಿ ನಮೋ ರೋಡ್ ಶೋ – ಪ್ರಧಾನಿ ಗಮನ ಸೆಳೆದ ಕಿರಣ್ ಪೈಂಟಿಂಗ್

Posted by Vidyamaana on 2024-04-16 07:44:30 |

Share: | | | | |


ಕುಡ್ಲದಲ್ಲಿ ನಮೋ ರೋಡ್ ಶೋ – ಪ್ರಧಾನಿ ಗಮನ ಸೆಳೆದ ಕಿರಣ್ ಪೈಂಟಿಂಗ್

ಮಂಗಳೂರು: ಕರಾವಳಿಯ ಯುವಕ ಬಿಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ “ಆಯಿಲ್‌ ಕ್ಯಾನ್ವಾಸ್‌’ ಚಿತ್ರವೊಂದನ್ನು ರವಿವಾರ ಮಂಗಳೂರಿನಲ್ಲಿ ರೋಡ್‌ ಶೋ ನಡೆಸಿದ ಸಂದರ್ಭ ಪ್ರಧಾನಿ ಮೋದಿ ನೆಚ್ಚಿಕೊಂಡು ಸ್ವೀಕರಿಸಿದ್ದಾರೆ.

ತೊಕ್ಕೊಟ್ಟು ಮೂಲದ ಕಲಾವಿದ ಕಿರಣ್‌ ಅವರು 24 ಇಂಚು ಎತ್ತರ ಹಾಗೂ 20 ಇಂಚು ಅಗಲದ ಪ್ರಧಾನಿ ಮೋದಿಯವರ ಚಿತ್ರವನ್ನು ಹಿಡಿದುಕೊಂಡು ಕೊಡಿಯಾಲಬೈಲು ಸಮೀಪ ನಿಂತಿದ್ದರು.

ಕರ್ಮಲ ನಿವಾಸಿ ಅಟೋರಿಕ್ಷಾ ಚಾಲಕ ಪಾಜಪಲ್ಲ ಕರೀಮ್ ನಿಧನ

Posted by Vidyamaana on 2023-10-25 19:31:53 |

Share: | | | | |


ಕರ್ಮಲ ನಿವಾಸಿ ಅಟೋರಿಕ್ಷಾ ಚಾಲಕ ಪಾಜಪಲ್ಲ ಕರೀಮ್ ನಿಧನ

ಪುತ್ತೂರು: ಇಲ್ಲಿನ ಕರ್ಮಲ ನಿವಾಸಿಯಾಗಿದ್ದ ರಿಕ್ಷಾ ಚಾಲಕ ಕರೀಮ್ ಹೃದಯಾಘಾತದಿಂದ ಇಂದು (ಅ.25) ನಿಧರಾಗಿದ್ದಾರೆ.

ಇವರು, ಬನ್ನೂರು ಜಮಾಅತ್ ಗೆ ಒಳಪಟ್ಟ ಮೂಲತಃ ಬೆಳ್ಳಾರೆ ಸಮೀಪದ ಪಾಜಪಲ್ಲ ನಿವಾಸಿಯಾಗಿದ್ದು, ಪ್ರಸ್ತುತ ಬನ್ನೂರು ಸಮೀಪದ ಕರ್ಮಲದಲ್ಲಿ ವಾಸವಾಗಿರುವ ಪುತ್ರ ಜಮೀಲ್, ಪುತ್ರಿ ಹಾಗೂ ಸಹೋದರರನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಯಾತ್ ಹೃದಯಾಘಾತದಿಂದ ನಿಧನ

Posted by Vidyamaana on 2023-05-31 04:25:17 |

Share: | | | | |


ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಸಾಲಿಯಾತ್ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ತಾಲೂಕಿನ ಪ್ರತಿಭೆ ವಿದ್ಯಾರ್ಥಿ ದಿಸೆಯಲ್ಲಿ ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿ, ಉಜಿರೆ ಎಸ್.ಡಿ.ಎಂ. ಕಾಲೇಜು ಹಳೇ ವಿದ್ಯಾರ್ಥಿ ಸಾಲಿಯತ್ (24) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ

ಪಡಂಗಡಿ ಪೊಯ್ಕೆಗುಡ್ಡೆ ನಿವಾಸಿ ಆದಂ ಮತ್ತು ಹವ್ವಮ್ಮ ದಂಪತಿಯ ಪುತ್ರಿಯಾಗಿರುವ ಪ್ರಸ್ತುತ ವಿವಾಹವಾಗಿ ಒಂದು ವರ್ಷವಾಗಿ ಚಿಕ್ಕಮಗಳೂರು ಪತಿ ಮನೆಯಲ್ಲಿದ್ದವರು. ಹೃದಯ ಬೇನೆಯಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಬುಧವಾರ ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ

ಕ್ರೀಡಾ ಪ್ರತಿಭೆ

ಪಡಂಗಡಿಯಲ್ಲಿ ಪ್ರಾಥಮಿಕ, ಎಸ್.ಡಿ.ಎಂ. ಅನುದಾನಿತ ಪ್ರೌಢ ಶಾಲೆ ಉಜಿರೆಯಲ್ಲಿ 9ನೇ ತರಗತಿ, ಮುಂಡಾಜೆಯಲ್ಲಿ 10 ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆದಿದ್ದ ಸಾಲಿಯತ್, ಕ್ರೀಡಾ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆ ತೋರಿದ್ದರು.

ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿಯನ್ನು ಪಡೆದಿದ್ದ ಇವರು, ಮುಂದೆ ಪ್ರೌಢ ಶಿಕ್ಷಣವನ್ನು ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪಡೆಯುತ್ತಿದ್ದ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್. ಅವರ ಗರಡಿಯಲ್ಲಿ ಪಳಗಿ ಅವರು ವಾಲಿಬಾಲ್ ಆಟದಲ್ಲಿ ಅತ್ಯಂತ ಉತ್ಕೃಷ್ಟ ಪ್ರದರ್ಶನ ನೀಡಿ ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡ ದ್ವಿತೀಯ ಸ್ಥಾನ ಗಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.ಮುಂದೆ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಮಾಡುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯಕ್ಕೆ ಬಹುಬೇಡಿಕೆಯ ವಾಲಿಬಾಲ್ ಆಟಗಾರ್ತಿಯಾಗಿ ಜನಮನ್ನಣೆಗಳಿಸಿದ್ದರು.ರಾಷ್ಟ್ರದ ವಾಲಿಬಾಲ್ ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಶನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿರುವುದು ಇವರ ಹಿರಿಮೆಯನ್ನು ಹೆಚ್ಚಿಸಿದೆ.

ಮೃತರು ತಂದೆ, ತಾಯಿ, ಪತಿಯನ್ನು ಅಗಲಿದ್ದಾರೆ.


ಮಂಗಳೂರು : ಕುದ್ರೋಳಿಯಲ್ಲಿ ಇನಾರ ಮೆಡಿಕಲ್ ಶುಭಾರಂಭ

Posted by Vidyamaana on 2023-07-21 01:42:10 |

Share: | | | | |


ಮಂಗಳೂರು : ಕುದ್ರೋಳಿಯಲ್ಲಿ  ಇನಾರ ಮೆಡಿಕಲ್ ಶುಭಾರಂಭ

 ಮಂಗಳೂರಿನ ಹೃದಯ ಭಾಗದಲ್ಲಿರುವ ಕುದ್ರೋಳಿಯ ಜಿ ಟಿ ರಸ್ತೆಯಲ್ಲಿ ನೂತನವಾಗಿ ಆರಂಭಗೊಂಡ ಇನಾರ ಮೆಡಿಕಲ್ ಇದರ ಉದ್ಘಾಟನೆಯನ್ನು ಜು.17 ರಂದು ನಡುಪಳ್ಳಿ ಜುಮಾ ಮಸೀದಿಯ ಖತೀಬರಾದ ಮೌಲಾನ ರಿಯಾಝ್ ಫೈಝಿ ಕಕ್ಕಿಂಜೆ ನೆರವೇರಿಸಿದರು.


ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಮ.ನ.ಪಾ ಸದಸ್ಯರಾದ ಶಂಶುದ್ದೀನ್ ಹೆಚ್.ಬಿ.ಟಿ ,ಎಸ್.ಡಿ.ಪಿ.ಐ ಕುದ್ರೋಳಿ ವಾರ್ಡ್ ಅಧ್ಯಕ್ಷರಾದ ಮುಝೈರ್ ಕುದ್ರೋಳಿ ,ಸಾಮಾಜಿಕ ಕಾರ್ಯಕರ್ತರಾದ ಖಾದರ್ ಇಡ್ಯ ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.


ಇನಾರ ಮೆಡಿಕಲ್ ಮಾಲಕರಾದ ಮುಹಮ್ಮದ್ ಸಮೀರ್ ಸರ್ವರನ್ನು ಸ್ವಾಗತಿಸಿ ನಮ್ಮಲ್ಲಿ ವೈದ್ಯಕೀಯ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ಔಷಧಿಗಳು,ಸುಸಜ್ಜಿತ ವೈದ್ಯಕೀಯ ಸಲಕರಣೆಗಳು ಹಾಗೂ ಇನ್ನಿತರ ವೈದ್ಯಕೀಯ ರಂಗಕ್ಕೆ ಸಂಬಂಧಿಸಿದ  ವಿವಿಧ ಉಪಕರಣಗಳು ನಮ್ಮಲ್ಲಿ ಲಭ್ಯವಿದ್ದು 2 ಕಿ.ಮೀ ಅಂತರದ ಒಳಗೆ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನಗಳನ್ನು ತಲುಪಿಸುವ ಸೇವೆಯು ನೀಡಲಿದ್ದೇವೆ ಎಂದು ತಿಳಿಸಿ ಎಲ್ಲರ ಸಹಕಾರ ಕೋರಿದರು.

Recent News


Leave a Comment: