ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2024-07-03 18:55:10 | Last Updated by Vidyamaana on 2024-07-03 18:55:10

Share: | | | | |


ಕಾಲೇಜು ವಿದ್ಯಾರ್ಥಿಯಿಂದ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು : ಕಾಲೇಜು ವಿದ್ಯಾರ್ಥಿಯೊಬ್ಬ ಸೆಕ್ಯೂರಿಟಿ ಗಾರ್ಡ್ ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈಕಿಸನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್. ಭಾರ್ಗವ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿದು ಸೆಕ್ಯೂರಿಟಿ ಗಾರ್ಡ್ ನನ್ನು ಹತ್ಯೆ ಮಾಡಿದ್ದಾನೆ.

ಸ್ಥಳದಲ್ಲೇ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.

ಕೊಲೆಗೆ ಕಾರಣವೇನು?


ಇಂದು ಸಿಂಧಿ ಕಾಲೇಜಿನಲ್ಲಿ ಕಾರ್ಯಕ್ರಮ ಇತ್ತು. ಈ ವೇಳೆ ಆರೋಪಿ ವಿದ್ಯಾರ್ಥಿ ಭಾರ್ಗವ್, ಕಾಲೇಜಿಗೆ ಕುಡಿದು ಬಂದಿದ್ದಾನೆ. ಈ ಹಿನ್ನಲೆ ಸೆಕ್ಯೂರಿಟಿಗಾರ್ಡ್, ಭಾರ್ಗವ್​​​ನನ್ನು ಕಾಲೇಜಿನ ಒಳಗೆ ಬಿಡಲು ನಿರಾಕರಿಸಿದ್ದಾರೆ. ಇದರಿಂದ ಸೆಕ್ಯೂರಿಟಿ ಗಾರ್ಡ್​ ಹಾಗೂ ವಿದ್ಯಾರ್ಥಿ ಮಧ್ಯೆ ಗಲಾಟೆ ಆಗಿದೆ. ಬಳಿಕ ಅಂಗಡಿಗೆ ಹೋಗಿ ಚಾಕು ಖರೀದಿಸಿದ್ದ ಭಾರ್ಗವ್, ನೇರವಾಗಿ ಬಂದು ಸೆಕ್ಯೂರಿಟಿ ಗಾರ್ಡ್ ಎದೆಗೆ ಐದಾರು ಬಾರಿ ಇರಿದಿದ್ದಾನೆ. ಅದು ಹೃದಯಕ್ಕೆ ಹೊಕ್ಕು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

 Share: | | | | |


ಹಾಜಿ ಮುಸ್ತಫಾ ಕೆಂಪಿ ಅವರಿಗೆ ಕಾವ್ಯ ನಮನ

Posted by Vidyamaana on 2023-06-27 02:58:33 |

Share: | | | | |


ಹಾಜಿ ಮುಸ್ತಫಾ ಕೆಂಪಿ ಅವರಿಗೆ ಕಾವ್ಯ ನಮನ

*ಅಕ್ಷರ ತರ್ಪಣ*


ಸಣ್ಣ ಪ್ರಾಯ..

ಶತಾಯುಷಿಯ

ಚಿಂತನೆ ಅಭಿಪ್ರಾಯ...


ನಾವು ಮಳೆ ಕಂಡರೆ

ಅವನು ಮೋಡ ಕಾಣುವ..


ನಾಳಿನ ಸಂಗತಿ

ಅರಿಯುವ ಶೀಫ್ರಮತಿ...


ಚಂದದ ನಗು

ಕಣ್ಣೀರು ಅಡಗಿಸುವ ಮಗು...


ಮುಳ್ಳನ್ನು ಮುಳ್ಳಿಂದ 

ತೆಗೆಯುವ ಚಾಕಚಕ್ಯತೆ

ಹೂವ ಮುಡಿಗೇರಿಸುವ ನೈಪುಣ್ಯತೆ...


ಸೌಹಾರ್ದದ ತೇರು

ಕಿಂಚಿತ್ತೂ 

ಅದರಲ್ಲಿ ಇಲ್ಲ ಏರುಪೇರು....


ದುಡ್ಡಿದ್ದರೆ ರಾಜ

ದುಡ್ಡಿಲ್ಲದಿದ್ದರೆ ಮಹಾರಾಜ...


ಪರಿಹಾರವಿಲ್ಲದ ಸಮಸ್ಯೆ ಇಲ್ಲ

ಸಮಸ್ಯೆಗಳು 

ಇವನ ಬಳಿ ನಿಲ್ಲುವುದಿಲ್ಲ...


ಸಂಘರ್ಷ 

ಇವನೆದುರು ಸೋತು

ಸಂಘರ್ಷವೇ ಮರಣದ ಹೇತು...


ಒಡಹುಟ್ಟಿದವನಲ್ಲ

ಆದರೂ ಸಹೋದರ...


ಸಮವಯಸ್ಕನಲ್ಲ

ಆದರೂ ಗೆಳೆಯ...


ಹಿರಿಯನಲ್ಲ

ಆದರೂ ವಿಮರ್ಷಕ....


ಛಲ  ಹೊರತು ಹಠ ಇಲ್ಲ

ಬಲ  ಹೊರತು  ಅಹಂ ಇಲ್ಲ

ಬುದ್ಧಿವಾದ ಹೇಳುವ ಮಾತ್ರವಲ್ಲ

ಬುದ್ದಿವಾದ ಕೇಳುವವ ...


ನಾಳೆ ಕಾಣ ಸಿಗುತ್ತಿ

ಪತ್ರಿಕೆಯೊಂದರ ಒಳಪುಟದಲ್ಲಿ

ಒಂದು ಪಟ ನಾಲ್ಕುಗೆರೆ...

ತಿಂಗಳ ಬಳಿಕ ಪತ್ರಿಕೆ  ಗುಜರಿಗೆ.

ಗುಜರಿಯಿಂದ ದಿನಸಿ ಅಂಗಡಿಗೆ

ಅಲ್ಲಿಂದ ಅದೇ ಪತ್ರಿಕೆಯಲ್ಲಿ

ಕಟ್ಟಿಕೊಟ್ಟ ಸಾಮಾನು

ಪುನ ಅದೇ ಮರಣ ಮನೆಗೆ...


ಬದುಕಿಷ್ಟೇ ಗೆಳೆಯಾ

ಮರೆಯುವರು ,ಎಲ್ಲರೂ ಮರೆಯುವರು

ಎಲ್ಲರನ್ನೂ ಮರೆಯುವರು...

ಇಂದು ನೀನು ಮುಂದೆ

ಮುಂದೆ ನಾನು ನಿನ್ನ ಹಿಂದೆ

ವಿದಾಯದ ವೇಳೆಯಲ್ಲಿ 

ಇದುವೇ  ಮುಸ್ತಾ

ನಿನಗೊಂದು ಕಾವ್ಯ ನಮನ  ಕವನ!


*ಜಮುಕ್ರಿ...*

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

Posted by Vidyamaana on 2024-02-27 08:41:28 |

Share: | | | | |


ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ರಾಜೀನಾಮೆ

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಶೇಖರ್ ಶರ್ಮಾ ರಾಜೀನಾಮೆ ನೀಡಿದ್ದಾರೆ. ಪಿಪಿಬಿಎಲ್ ಮಂಡಳಿಯನ್ನು ಪುನರ್ ರಚಿಸಲಾಗಿದೆ ಎಂದು ಒನ್ 97 ಕಮ್ಯುನಿಕೇಷನ್ಸ್ ಷೇರು ಮಾರುಕಟ್ಟೆ ಮಂಡಳಿಗೆ ಮಾಹಿತಿ ನೀಡಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಅಶೋಕ್ ಕುಮಾರ್ ಗರ್ಗ್ ಮತ್ತು ನಿವೃತ್ತ ಐಎಎಸ್ ರಜನಿ ಸೆಖ್ರಿ ಸಿಬಲ್ ಪಿಪಿಬಿಎಲ್ ಮಂಡಳಿಗೆ ಸೇರಿದ್ದಾರೆ ಎಂದು ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅವರು ಸ್ವತಂತ್ರ ನಿರ್ದೇಶಕರಾಗಿ ಸೇರಿಕೊಂಡಿದ್ದಾರೆ ಎಂದು ತಿಳಿಸಿದೆ.


ಜನವರಿ 31 ರಂದು ಆರ್ಬಿಐ ಪಿಪಿಬಿಎಲ್ ಮೇಲೆ ಪ್ರಮುಖ ವ್ಯವಹಾರ ನಿರ್ಬಂಧಗಳನ್ನು ವಿಧಿಸಿತು. ಇದರಲ್ಲಿ ಫೆಬ್ರವರಿ 29 ರ ನಂತರ ಹೊಸ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಕ್ರೆಡಿಟ್ ವಹಿವಾಟುಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಫೆಬ್ರವರಿ 16 ರಂದು ಗಡುವನ್ನು ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ.

ಮಾ :26 ಪುತ್ತೂರಿಗರ ದಶಕದ ಬೇಡಿಕೆಯಾದ ರೈಲ್ವೆ ಅಂಡರ್‌ಪಾಸ್ ಲೋಕಾರ್ಪಣೆ.

Posted by Vidyamaana on 2023-03-26 04:04:22 |

Share: | | | | |


ಮಾ :26 ಪುತ್ತೂರಿಗರ ದಶಕದ ಬೇಡಿಕೆಯಾದ ರೈಲ್ವೆ ಅಂಡರ್‌ಪಾಸ್ ಲೋಕಾರ್ಪಣೆ.

ಪುತ್ತೂರು: ಮಾ. 26 : ಪುತ್ತೂರಿನ ಜನರ ಬಹು ವರ್ಷದ ಕಾಲದ ಬೇಡಿಕೆಯಾದ ಎಪಿಎಂಸಿ ರಸ್ತೆಯಲ್ಲಿ 14 ಕೋಟಿ ವೆಚ್ಚದಲ್ಲಿ ರೈಲ್ವೆ ಅಂಡರ್‌ಪಾಸ್‌ ನಿರ್ಮಾಣಗೊಂಡಿದೆ. ಇದರ ಲೋಕಾರ್ಪಣಾ ಕಾರ್ಯಕ್ರಮವು ಮಾರ್ಚ್ 26ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ

     ಶಾಸಕ ಸಂಜೀವ ಮಠಂದೂರು, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್. ಅಂಗಾರ, ರೈಲ್ವೆ ಮತ್ತು ಎಪಿಎಂಸಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.4 ತಿಂಗಳ ಹಿಂದೆಯಷ್ಟೇ ಕಾಮಗಾರಿ ಆರಂಭಗೊಂಡಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತ್ವರಿತಗತಿಯಲ್ಲಿ ಅಂಡರ್‌ಪಾಸ್ ನಿರ್ಮಾಣಗೊಂಡಿದೆ. ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ.ಈ ಹಿಂದೆ ಪುತ್ತೂರು ನಗರದಿಂದ ಎಪಿಎಂಸಿ ರಸ್ತೆಯ ಮೂಲಕ ಹೋಗುವ ವಾಹನಗಳು ರೈಲ್ವೆ ಹಳಿಯವರೆಗೆ ಬಂದು ಅಲ್ಲಿಂದ ಹಳಿ ದಾಟಿ ಮುಂದೆ ಸಾಗಬೇಕಿತ್ತು. ಈ ವೇಳೆ ಹಳಿಗಳಲ್ಲಿ ರೈಲು ಸಂಚರಿಸುತ್ತಿದ್ದರೇ ಅಥಾವ ರೈಲು ಬರುವ ಸಂದರ್ಭ ಗೇಟು ಬಂದ್ ಮಾಡಿ ಸಂಪರ್ಕ ರಸ್ತೆಯನ್ನು ಮುಚ್ಚಲಾಗುತಿತ್ತು. ದಟ್ಟ ವಾಹನ ಸಂಚಾರವಿದ್ದ ರಸ್ತೆಯಲ್ಲಿ ಆಳವಡಿಸಲಾಗಿದ್ದ ಈ ವ್ಯವಸ್ಥೆಯಿಂದ ವಾಹನ ಚಾಲಕರಿಗೆ ಬಹಳಷ್ಟು ಸಮಸ್ಯೆಗಳಾಗಿತ್ತು. ಹೀಗಾಗಿ ಇಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು.ಈ ಹಿಂದೆ ಪುತ್ತೂರು ನಗರದಿಂದ ಎಪಿಎಂಸಿ ರಸ್ತೆಯ ಮೂಲಕ ಹೋಗುವ ವಾಹನಗಳು ರೈಲ್ವೆ ಹಳಿಯವರೆಗೆ ಬಂದು ಅಲ್ಲಿಂದ ಹಳಿ ದಾಟಿ ಮುಂದೆ ಸಾಗಬೇಕಿತ್ತು. ಈ ವೇಳೆ ಹಳಿಗಳಲ್ಲಿ ರೈಲು ಸಂಚರಿಸುತ್ತಿದ್ದರೇ ಅಥಾವ ರೈಲು ಬರುವ ಸಂದರ್ಭ ಗೇಟು ಬಂದ್ ಮಾಡಿ ಸಂಪರ್ಕ ರಸ್ತೆಯನ್ನು ಮುಚ್ಚಲಾಗುತಿತ್ತು. ದಟ್ಟ ವಾಹನ ಸಂಚಾರವಿದ್ದ ರಸ್ತೆಯಲ್ಲಿ ಆಳವಡಿಸಲಾಗಿದ್ದ ಈ ವ್ಯವಸ್ಥೆಯಿಂದ ವಾಹನ ಚಾಲಕರಿಗೆ ಬಹಳಷ್ಟು ಸಮಸ್ಯೆಗಳಾಗಿತ್ತು. ಹೀಗಾಗಿ ಇಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿತ್ತು.ಅಂಡರ್ ಪಾಸ್ ಲೋಕಾರ್ಪಣೆಯ ಬಳಿಕ ಈ ಪದ್ಧತಿಗೆ ತಿಲಾಂಜಲಿ ನೀಡಲಾಗುತ್ತಿದ್ದು ಹೊಸ ಸಂಪರ್ಕ ರಸ್ತೆಯಲ್ಲಿ ವಾಹನ ಸಂಚಾರಿಸಲು ಅವಕಾಶ ಕಲ್ಪಿಸಲಾಗುತ್ತದೆ. ರೈಲು ಗೇಟುಗಳ ಪಕ್ಕದಲ್ಲಿ ತಿರುವು ರಸ್ತೆ ನಿರ್ಮಿಸಿದ್ದು ಅದರಲ್ಲಿ ಸುಮಾರು ೫೦೦ ಮೀಟರ್‌ನಷ್ಟು ದೂರ ಅಂಡರ್‌ಪಾಸ್ ಮೂಲಕ ಸಾಗಿ ಮುಖ್ಯ ರಸ್ತೆಯನ್ನು ಸೇರುವಂತೆ ಹೊಸ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ.ಎಪಿಎಂಸಿ ರಸ್ತೆಯ ನೂತನ ಅಂಡರ್‌ಪಾಸ್‌ನ ಎರಡೂ ಪಾರ್ಶ್ವಗಳಿಗೆ ವಿಶಾಲ ರಸ್ತೆ ನಿರ್ಮಿಸಲಾಗಿದೆ. ಪುತ್ತೂರು ಜಿಲ್ಲಾ ಕೇಂದ್ರವಾದರೂ ಆ ಪರಿಸ್ಥಿತಿಗೂ ಈ ರಸ್ತೆ ಸಾಕಾಗುತ್ತದೆ. ಅಂಡರ್‌ಪಾಸ್ ಕೆಳಗೆ ಒಂದು ಮೂಲೆಯಲ್ಲಿ ಒಂದಷ್ಟು ಜಾಗ ಖಾಸಗಿಯವರಿಂದ ಸಿಕ್ಕಿದಲ್ಲಿ ಅಲ್ಲಿ ಇನ್ನಷ್ಟು ಅನುಕೂಲವಾಗಲಿದೆ. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುವ ಬಗ್ಗೆ ನಗರಸಭೆ, ಸಹಾಯಕ ಆಯುಕ್ತರ ಕಚೇರಿ ಮಟ್ಟದಲ್ಲಿ ಚಿಂತನೆಗಳು ನಡೆದಿವೆ ಎಂದು ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಶಾಸಕ ಮಠಂದೂರು ಹೇಳಿದ್ದಾರೆ.

ಸಂಚಾರ ಠಾಣೆಯ ಪೋಲಿಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ – ಸಾವಿಗೆ ಕಾರಣ ನಿಗೂಢ

Posted by Vidyamaana on 2023-09-15 04:39:31 |

Share: | | | | |


ಸಂಚಾರ ಠಾಣೆಯ ಪೋಲಿಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ – ಸಾವಿಗೆ ಕಾರಣ ನಿಗೂಢ

ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೋಲಿಸ್ ಕಾನ್ಸ್‌ಟೇಬಲ್ ಒಬ್ಬರು ಆತ್ಮಹತ್ಯೆಗೈದು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.


ಮೃತ ಪೋಲಿಸ್ ಕಾನ್ಸ್‌ಟೇಬಲ್ ನನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ನ ವೀರಣ್ಣ ಎಂಬವರ ಪುತ್ರ ಮಹೇಶ್ ಸವದತ್ತಿ (31) ಎಂದು ಗುರುತಿಸಲಾಗಿದೆ.


ಮೃತ ಮಹೇಶ್ 23-07-2018 ರಂದು ಪೊಲೀಸ್ ಇಲಾಖೆಗೆ ನೇಮಕಾತಿ ಹೊಂದಿ ಮೂಲ ತರಬೇತಿಯನ್ನು ಹಾಸನ ದಲ್ಲಿ ಪಡೆದು ದಿನಾಂಕ 07-05-2019 ರಂದು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.


ಆದರೆ ಇಂದು ಕಪಿತಾನಿಯೋ ಬಳಿಯ ಸೈಮಾನ್ ಲೈನ್ ನಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌ ಎನ್ನಲಾಗಿದೆ. ಮೃತರ ಪೋಷಕರು ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದು, ಮೃತರ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

Posted by Vidyamaana on 2024-04-19 11:36:09 |

Share: | | | | |


ಗದಗ: ನಗರ ಸಭಾ ಉಪಾಧ್ಯಕ್ಷೆ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಗದಗ: ಬೆಳ್ಳಂಬೆಳಿಗೆ ಬೆಚ್ಚಿಬೀಳಿಸುವ ಸುದ್ದಿ ಹೊರಬಿದ್ದಿದ್ದು, ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಲಗಿದಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ಆಘಾತಕಾರಿ ಘಟನೆ ಗದಗದ ನಗರದ ದಾಸರ ಓಣಿಯಲ್ಲಿ ನಡೆದಿದೆ.

ನಗರ ಸಭೆಯ ಉಪಾಧ್ಯಕ್ಷೆ ಸುನಂದಾ ಬಾಕಳೆಯವರ ಪುತ್ರ ಕಾರ್ತಿಕ್ ಬಾಕಳೆ (27), ಪರಶುರಾಮ (55), ಪರಶುರಾಮ ಪತ್ನಿ ಲಕ್ಷ್ಮೀ (45), ಪುತ್ರಿ ಆಕಾಂಕ್ಷಾ (16) ಕೊಲೆಯಾದವರು.

ಪುತ್ತೂರಿನಲ್ಲಿ ನಾಳೆ ರಮ್ಯ-ನಿಕೇತ್ ರಾಜ್ ಜೋಡಿ ಮಾಡಲಿದೆ ಮೋಡಿ -ಅಶೋಕ್ ರೈ ಪರ ಮತಯಾಚನೆ

Posted by Vidyamaana on 2023-05-07 09:17:33 |

Share: | | | | |


ಪುತ್ತೂರಿನಲ್ಲಿ ನಾಳೆ ರಮ್ಯ-ನಿಕೇತ್ ರಾಜ್ ಜೋಡಿ ಮಾಡಲಿದೆ ಮೋಡಿ -ಅಶೋಕ್ ರೈ ಪರ ಮತಯಾಚನೆ

ಪುತ್ತೂರು: ಖ್ಯಾತ ಚಲನಚಿತ್ರ ನಟಿ ರಮ್ಯ ಮತ್ತು ನಿಕೇತ್ ರಾಜ್ ಮೌರ್ಯ ಅವರು ನಾಳೆ ನಡೆಯುವ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರ ರೋಡ್ ಶೋ ದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 2.30ರಿಂದ ಸಂಜೆ 5ರವರೆಗೆ ಬೋಳುವಾರು ವೃತ್ತದಿಂದ ಆರಂಭಗೊಂಡು ದರ್ಬೆ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಯಲಿದೆ. ಖ್ಯಾತ ಚಲನಚಿತ್ರ ನಟಿ, ರಮ್ಯಾ ಮತ್ತು ಖ್ಯಾತ ವಾಗಿ ನಿಕೇತ್ ರಾಜ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಅಶೋಕ್ ಕುಮಾರ್ ರೈ ಪರ ಮತ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಈಗಾಗಲೇ ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.



Leave a Comment: