ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಸುದ್ದಿಗಳು News

Posted by vidyamaana on 2024-07-08 14:36:42 |

Share: | | | | |


ಹಾಸ್ಟೆಲ್‌ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ನರ್ಸಿಂಗ್ ವಿದ್ಯಾರ್ಥಿನಿ ದಿಯಾ

ಬೆಂಗಳೂರು : ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ದಿಯಾ ಮಂಡೋಲ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ.ದಿಯಾ ಮಂಡೋಲ್ ಪಶ್ಚಿಮ ಬಂಗಾಳ‌ ಮೂಲದವಳಾಗಿದ್ದು, ಮದರ್ ಥೆರೆಸಾ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು.

ಮೂರು ದಿನಗಳ ಹಿಂದೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ದಿಯಾ ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಾಸ್ಟೆಲ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಪಾಠಿಗಳು ರೂಮಿಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

 Share: | | | | |


ಹಾರೂನ್ ಹಾಜಿ ಪುರುಷರಕಟ್ಟೆ ನಿಧನ

Posted by Vidyamaana on 2024-02-29 18:58:56 |

Share: | | | | |


ಹಾರೂನ್ ಹಾಜಿ ಪುರುಷರಕಟ್ಟೆ ನಿಧನ

ಪುತ್ತೂರು :ಇಲ್ಲಿನ ಪುರುಷರಕಟ್ಟೆ ನಿವಾಸಿ ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದ ಸ್ಥಾಪಕಾಧ್ಯಕ್ಷ  ಮರೀಲ್ ದಿ.ಮೂಸಾ ಹಾಜಿಯವರ ಮಗ ಹಾರೂನ್ ಪುರುಷರಕಟ್ಟೆ (65ವರ್ಷ )ಅಲ್ಪ ಕಾಲದ ಸೌಖ್ಯದಿಂದ  ಫೆ 29 ರಂದು ಸ್ವಗೃಹದಲ್ಲಿ ನಿಧಾನರಾದರು.


ಮೃತರು ಪುರುಷರಕಟ್ಟೆ ಹಿಮಾಯತ್ತುಲ್ ಇಸ್ಲಾಂ ಮದ್ರಸದಲ್ಲಿ ಸುದೀರ್ಘ 20 ವರ್ಷಕ್ಕಿಂತ ಅಧಿಕ ವರ್ಷ ಅಧ್ಯಕ್ಷರಾಗಿ, ಮುಕ್ವೆ ರೆಹ್ಮನಿಯ ಜುಮಾ ಮಸೀದಿಯ ಕಾರ್ಯದರ್ಶಿ ಮತ್ತು ಮುಕ್ವೆ ದರ್ಗಾ ಶರೀಪ್ ಇದರ ಊರೂಸ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪತ್ನಿ, ಮಗಳು, ಅಳಿಯ ಹಾರಾಡಿಯ ಇಂಜಿನಿಯರ್ ಆತೀಶ್,ಸಹೋದರರಾದ  ಅದಂಕುಂಞ, ಶೇಕಾಲಿ,ಮತ್ತು ಇಸ್ಮಾಯಿಲ್  ರವರನ್ನು ಅಗಲಿದ್ದಾರೆ.

ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್‌ ಸಿಬ್ಬಂದಿಯ ಕಳ್ಳಾಟ ಬಯಲು

Posted by Vidyamaana on 2024-07-17 12:54:11 |

Share: | | | | |


ಹಣ ಹಾಕದೆಯೇ ಎಟಿಎಂ ಕಳ್ಳತನವೆಂದು ದೂರು: ಬೆಡ್ ಶೀಟ್ ಹಾಕ್ಕೊಂಡು ಬಂದಿದ್ದ ಬ್ಯಾಂಕ್‌ ಸಿಬ್ಬಂದಿಯ ಕಳ್ಳಾಟ ಬಯಲು

ಬೆಂಗಳೂರು, ಜು.16: ಬೆಡ್ ಶೀಟ್ ಹಾಕಿಕೊಂಡು ಬಂದು ಬೆಂಗಳೂರಿನ ಬೆಳ್ಳಂದೂರು(Bellandur) ಎಟಿಎಂ ಕಳ್ಳತನ ಮಾಡಿದ್ದ ಕೇಸ್​ಗೆ ಮೇಜರ್ ಟ್ವಿಸ್ಟ್‌ ಸಿಕ್ಕಿದೆ. ಹೌದು, ಪೊಲೀಸರ ತ‌ನಿಖೆಯಲ್ಲಿ 16.5 ಲಕ್ಷ ರೂ. ಹಣ ಕಳ್ಳತನ ಆಗಿದೆ ಎಂದು ದೂರು ಕೊಟ್ಟ ಬ್ಯಾಂಕ್ ಸಿಬ್ಬಂದಿಯ ಕಳ್ಳಾಟ ಬೆಳಕಿಗೆ ಬಂದಿದೆ. ಹಣ ಹಾಕದೆಯೇ ಎಟಿಎಂನಲ್ಲಿ ಕಳ್ಳತನ ಆಗಿದೆ ಎಂದು ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದ. ತನಿಖೆ ಕೈಗೊಂಡ ಪೊಲಿಸರು, ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದ ವೇಳೆ ಏಜೆನ್ಸಿಯವರು ಸಿಕ್ಕಿಬಿದ್ದಿದ್ದಾರೆ.

ಐವರನ್ನು ಬಂಧಿಸಿದ ಬೆಳ್ಳಂದೂರು ಪೊಲೀಸರು

ಇದುವರೆಗೂ ಐವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಫೀಲ್ಡ್ ಆಪರೇಷನ್ ಮ್ಯಾನೇಜರ್ ಪ್ರತಾಪ್, ಎಟಿಎಂ ಆಫಿಸರ್ ಪವನ್ ಕಲ್ಯಾಣ್(28), ಸೆಕ್ಯೂರ್ ವ್ಯಾಲ್ಯೂ ಕಂಪನಿ ಬೆಂಗಳೂರು ನಗರ ಎಟಿಎಂ ಇನ್ ಚಾರ್ಜ್ ಧರ್ಮೇಂದ್ರ(52),

ಸೆಕ್ಯೂರ್ ವ್ಯಾಲ್ಯೂ ಕಂಪನಿ ಮಡಿವಾಳ ಏರಿಯಾ ಬ್ರಾಂಚ್ ಹೆಡ್ ರಾಘವೇಂದ್ರ ( 36) , ಸೆಕ್ಯೂರ್ ವ್ಯಾಲ್ಯೂ ಕಂಪನಿ ಅಸ್ಸಿಸ್ಟೆಂಟ್ ಮ್ಯಾನೇಜರ್ ಮಹೇಶ್(30) ಎಂಬುವವರು ಬಂಧಿತ ಆರೋಪಿಗಳು.

ಬೆಂಗಳೂರು ಕಂಬಳ ಕರೆ ವೀಕ್ಷಿಸಿದ ಸಚಿವ ದಿನೇಶ್‌ ಗುಂಡೂರಾವ್

Posted by Vidyamaana on 2023-11-03 17:29:34 |

Share: | | | | |


ಬೆಂಗಳೂರು ಕಂಬಳ ಕರೆ ವೀಕ್ಷಿಸಿದ ಸಚಿವ ದಿನೇಶ್‌ ಗುಂಡೂರಾವ್

ಬೆಂಗಳೂರು : ಅರಮನೆ ಮೈದಾನದಲ್ಲಿ ನ.24,25,26 ರಂದು ನಡೆಯಲಿರುವ ಬೆಂಗಳೂರು ಕಂಬಳದ ಕರೆ ನಿರ್ಮಾಣ ಕಾಮಗಾರಿಯನ್ನು ದ ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ವೀಕ್ಷಣೆ ಮಾಡಿದರು.


ಶುಕ್ರವಾರ ಮಧ್ಯಾಹ್ನ ಅರಮನೆ ಮೈದಾನಕ್ಕೆ ಭೇಟಿ ನೀಡಿದ ಅವರು ಕರೆ ವೀಕ್ಷಣೆ ಮಾಡಿ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರು, ಪುತ್ತೂರು ಶಾಸಕರಾದ ಅಶೋಕ್ ರೈ ಜೊತೆ ಚರ್ಚೆ ನಡೆಸಿದರು.


ಕಂಬಳ ವೀಕ್ಷಣೆಗೆ ಲಕ್ಷಾಂತರ ಮಂದಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಲ್ಲಿ ನಡೆಯುತ್ತಿರುವ ಇತರೆ ಕಾಮಗಾರಿಗಳನ್ನು ಸಚಿವರು ಪರಿಶೀಲನೆ ಮಾಡಿದರು.


ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ, ಪ್ರಮುಖರಾದ ಗುಣರಂಜನ್ ಶೆಟ್ಟಿ, ಮುರಳೀಧರ್ ರೈ ಮಠಂತಬೆಟ್ಟು ಸೇರಿದಂತೆ ಕಂಬಳ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.

ಟೈಲರ್‌ ಜತ್ತಪ್ಪ ಗೌಡ ನಿಧನ.

Posted by Vidyamaana on 2023-06-05 01:21:48 |

Share: | | | | |


ಟೈಲರ್‌ ಜತ್ತಪ್ಪ ಗೌಡ ನಿಧನ.

ಪುತ್ತೂರು: ನೈತ್ತಾಡಿ ನಿವಾಸಿ ಮುಕ್ವೆಯಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದ ಜತ್ತಪ್ಪ ಗೌಡ(57ವ.)ರವರು ಜೂ.4ರಂದು ಮಂಗಳೂರು ಆಸತ್ರೆಯಲ್ಲಿ ನಿಧನರಾದರು.

ನೈತ್ತಾಡಿ ನಿವಾಸಿ ಗಣೇಶ್ ನೈತ್ತಾಡಿ ಅವರ ಸಹೋದರರಾಗಿರುವ ಜತ್ತಪ್ಪ ಗೌಡ ಅವರು ಇತ್ತೀಚೆಗೆ ಮನೆಯಲ್ಲಿ ಕುಸಿದು ಬಿದಿದ್ದರು. ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಟೈಲರ್ ವೃತ್ತಿ ಮಾಡಿಕೊಂಡಿದ್ದ ಜತ್ತಪ್ಪ ಗೌಡ ಅವರು ಕೋವಿಡ್ ಬಳಿಕ ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು. ಮೃತರು ತಾಯಿ ದುಗ್ಗಮ್ಮ, ಪತ್ನಿ ಬೇಬಿ, ಇಬ್ಬರು ಪುತ್ರರು, ಸಹೋದರ ಗಣೇಶ್‌ ನೈತಾಡಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ: ಪ್ರಮುಖ 3 ಆರೋಪಿಗಳಿಗೆ ಜಾಮೀನು

Posted by Vidyamaana on 2024-03-17 07:48:18 |

Share: | | | | |


ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ: ಪ್ರಮುಖ 3 ಆರೋಪಿಗಳಿಗೆ ಜಾಮೀನು

ಮಂಗಳೂರು: 2022 ಜುಲೈ 28ರಂದು ಸುರತ್ಕಲ್‌ನಲ್ಲಿ ಮೊಹಮ್ಮದ್ ಫಾಝಿಲ್ ಹತ್ಯೆ ನಡೆಸಿದ ಪ್ರಮುಖ 3 ಆರೋಪಿಗಳಿಗೆ ಜಾಮೀನು ಮಂಜೂರು ಆಗಿದೆ.


ಸುರತ್ಕಲ್ ಮಂಗಳಪೇಟೆಯ ಮೊಹಮ್ಮದ್ ಫಾಝಿಲ್ ಹತ್ಯೆಯ A1 ಆರೋಪಿ ಸುಹಾಸ್ ಶೆಟ್ಟಿ, A2 ಆರೋಪಿ ಅಭಿಷೇಕ್, A3 ಆರೋಪಿ ನೇಪಾಳಿ ಗಣೇಶ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ.


ಫಾಝಿಲ್ ಹತ್ಯೆಯಲ್ಲಿ ಒಟ್ಟು 8 ಪ್ರಮುಖ ಆರೋಪಿಗಳ ಬಂಧನವಾಗಿತ್ತು. ಐವರು ಆರೋಪಿಗಳು ಈಗಾಗಲೇ ಜಾಮೀನಿನಲ್ಲಿ ಹೊರ ಬಂದಿದ್ದಾರೆ. ಇದೀಗ ಮೂವರು ಪ್ರಮುಖ ಆರೋಪಿಗಳಿಗೆ ಜಾಮೀನು ಆಗಿದೆ. ಈ ಮೂಲಕ‌ ಫಾಝಿಲ್ ಹತ್ಯೆಯ ಎಲ್ಲ ಆರೋಪಿಗಳೂ ಬಂಧಮುಕ್ತರಾದಂತಾಗಿದೆ.


2022 ಜುಲೈ 28ರಂದು ರಾತ್ರಿ ಮಂಗಳೂರು ಬಳಿಯ ಸುರತ್ಕಲ್‍ನಲ್ಲಿ ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮೊಹಮ್ಮದ್ ಫಾಜಿಲ್ (23)ನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ದಾಳಿ ಮಾಡಿ ಪರಾರಿಯಾಗಿದ್ದರು. ಗ್ಯಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಫಾಝಿಲ್ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಫಾಝಿಲ್ ಕೊನೆಯುಸಿರೆಳೆದಿದ್ದರು.

ಕ್ರಿಕೆಟ್ ಜಗತ್ತಿನ ಆಲ್ ರೌಂಡರ್ ಹೀತ್ ಸ್ಟ್ರೀಕ್ ಇನ್ನಿಲ್ಲ

Posted by Vidyamaana on 2023-09-03 09:58:29 |

Share: | | | | |


ಕ್ರಿಕೆಟ್ ಜಗತ್ತಿನ ಆಲ್ ರೌಂಡರ್ ಹೀತ್ ಸ್ಟ್ರೀಕ್ ಇನ್ನಿಲ್ಲ

ಹರಾರೆ: ಜಿಂಬಾಬ್ವೆ ತಂಡದ ಮಾಜಿ ನಾಯಕ, ದಿಗ್ಗಜ ಆಲೌ ರೌಂಡರ್ ಹೀತ್ ಸ್ಟ್ರೀಕ್ ಅವರು ಇಂದು (ಸೆ.03) ಕೊನೆಯುಸಿರೆಳೆದಿದ್ದಾರೆ. ಹಲವು ಕಾಲದಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದ ಸ್ಟ್ರೀಕ್ ಇಂದು ಅಸುನೀಗಿದ್ದಾರೆ ಎಂದು ವರದಿ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಹೀತ್ ಸ್ಟ್ರೀಕ್ ಅವರು ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. ಬಳಿಕ ಮಾಜಿ ಜಿಂಬಾಬ್ವೆ ಆಟಗಾರ ಹೆನ್ರಿ ಒಲಾಂಗ ಅವರು ಸ್ಪಷ್ಟನೆ ನೀಡಿ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ ಇದೀಗ ಸ್ಟ್ರೀಕ್ ನಿಧನದ ಸುದ್ದಿಯನ್ನು ಅವರ ಪತ್ನಿಯೇ ಖಚಿತಪಡಿಸಿದ್ದಾರೆ.


ಈ ಸುದ್ದಿಯನ್ನು ಖಚಿತಪಡಿಸಲು ಪತ್ನಿ ನಾಡಿನ್ ಸ್ಟ್ರೀಕ್ ತಮ್ಮ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.


“ಈ ಮುಂಜಾನೆ, 3 ನೇ ಸೆಪ್ಟೆಂಬರ್ 2023 ರ ಭಾನುವಾರದಂದು, ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ, ತಮ್ಮ ಮನೆಯಿಂದ ದೇವತೆಗಳ ಜೊತೆಯಲ್ಲಿರಲು ಕೊಂಡೊಯ್ಯಲ್ಪಟ್ಟರು. ಅಲ್ಲಿ ಅವರು ತಮ್ಮ ಕೊನೆಯ ದಿನಗಳನ್ನು ಕಳೆಯಲು ಬಯಸಿದ್ದರು. ಅವರು ಏಕಾಂಗಿಯಾಗಿ ಹೋಗಲಿಲ್ಲ, ಅವರು ಪ್ರೀತಿ ಮತ್ತು ಶಾಂತಿಯಿಂದ ಆವರಿಸಿದದ್ದರು” ಎಂದು ಅವರು ಬರೆದಿದ್ದಾರೆ

.ಸ್ಟ್ರೀಕ್ ಜಿಂಬಾಬ್ವೆ ಅವರ ಆಡಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. 65 ಟೆಸ್ಟ್‌ಗಳು ಮತ್ತು 189 ಏಕದಿನ ಪಂದ್ಯಗಳಲ್ಲಿ, ಸ್ಟ್ರೀಕ್ 455 ವಿಕೆಟ್‌ ಗಳನ್ನು ಪಡೆದಿದ್ದಾರೆ. 23 ಬಾರಿ ನಾಲ್ಕು-ವಿಕೆಟ್‌ ಗಳ ಮತ್ತು ಎಂಟು ಐದು-ವಿಕೆಟ್‌ ಗಳ ಗೊಂಚಲು ಪಡೆದ ಸಾಧನೆ ಅವರದ್ದು.


ಬ್ಯಾಟಿಂಗ್ ನಲ್ಲೂ ಪ್ರದರ್ಶನ ತೋರಿದ್ದ ಸ್ಟ್ರೀಕ್ ಟೆಸ್ಟ್ ಮತ್ತು ಏಕದಿನಗಳಲ್ಲಿ ಕ್ರಮವಾಗಿ 1990 ಮತ್ತು 2943 ರನ್ ಗಳಿಸಿದರು. ಅವರು ಒಂದು ಶತಕ ಮತ್ತು 24 ಅರ್ಧ ಶತಕಗಳನ್ನು ಬಾರಿಸಿದ್ದಾರೆ.


1993 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಸ್ಟ್ರೀಕ್ ಅವರು 2005 ರವರೆಗೆ ಆಡಿದರು. ಜಿಂಬಾಬ್ವೆಗಾಗಿ ಅವರ ಕೊನೆಯ ಮತ್ತು ಅಂತಿಮ ಅಂತಾರಾಷ್ಟ್ರೀಯ ಪ್ರದರ್ಶನವು ಸೆಪ್ಟೆಂಬರ್ 2005 ರಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್‌ ನಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನಡೆದಿತ್ತು.



Leave a Comment: