2ನೇ ರಾಜ್ಯಭಾಷೆಯಾಗಿ ತುಳು ಘೋಷಣೆಗೆ ಯತ್ನ

ಸುದ್ದಿಗಳು News

Posted by vidyamaana on 2024-07-23 07:07:38 |

Share: | | | | |


2ನೇ ರಾಜ್ಯಭಾಷೆಯಾಗಿ ತುಳು ಘೋಷಣೆಗೆ ಯತ್ನ

ಪುತ್ತೂರು: ರಾಜ್ಯದಲ್ಲಿ ತುಳು ಭಾಷೆಯನ್ನು ೨ನೇ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಪ್ರಯತ್ನ ಕೈಗೂಡುವ ವಿಶ್ವಾಸವಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಹಯೋಗದಲ್ಲಿ ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ - ಉಪನ್ಯಾಸ- ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಶ್ಚಿಮ ಬಂಗಾಳ ಸೇರಿದ ಅನೇಕ ರಾಜ್ಯಗಳಲ್ಲಿ ೨ನೇ ರಾಜ್ಯಭಾಷೆ ಘೋಷಣೆ ಸಂದರ್ಭ ಯಾವೆಲ್ಲ ಮಾನದಂಡ ಅನುಸರಿಸಲಾಗಿದೆ ಎಂಬುದರ ಅಧ್ಯಯನ ನಡೆಸಿ ವರದಿ ತಯಾರಿಸಲಾಗಿದೆ. ಇದನ್ನು ಸರಕಾರ ಪರಿಶೀಲಿಸಿ ಶೀಘ್ರದಲ್ಲೇ ತುಳು ಭಾಷೆಯನ್ನು ೨ನೇ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಣೆ ಮಾಡುವ ಸಂಬAಧ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡ ಮೇಲೆ ಗೆಜೆಟ್ ನೋಟಿಫೀಕೇಶನ್ ಹೊರಡಿಸಲಾಗುವುದು. ಅದೇ ರೀತಿ ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸುವ ವಿಚಾರದಲ್ಲೂ ಕೇಂದ್ರದ ಮೇಲೆ ರಾಜ್ಯದಿಂದ ಒತ್ತಡ ತರುವ ಕೆಲಸ ಮಾಡಲಾಗುತ್ತದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಘೋಷಣೆಯ ಆಶಾವಾದ ಇದೆ ಎಂದವರು ಹೇಳಿದರು.

ಸೋಷಿಯಲ್ ಮೀಡಿಯಾದ ಅಬ್ಬರದ ನಡುವೆಯೇ ಜನ ಪತ್ರಿಕೆ ಓದುವುದು ಕಡಿಮೆ ಮಾಡಿಲ್ಲ. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆ ಬೇಕು. ಅದಿರುವ ಕಾರಣವೇ ದಕ್ಷಿಣಕನ್ನಡದ ಪತ್ರಕರ್ತರು ಎಲ್ಲಿ ಹೋದರೂ ಛಾಪು ಮೂಡಿಸುತ್ತಾರೆ ಎಂದು ಹೇಳಿದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಅಭಿವ್ಯಕ್ತಿ ಸ್ವಾತಂತ್ರö್ಯ ಮತ್ತು ಪತ್ರಿಕಾ ಸ್ವಾತಂತ್ರö್ಯ ದಮನ ಮಾಡಲಾಗಿತ್ತು. ಆಗ ಧೀಮಂತ ಪತ್ರಿಕೆಗಳು ಭೂಗತರಾಗಿದ್ದುಕೊಂಡೇ ಪತ್ರಿಕೆ ನಡೆಸಿ ಜನಜಾಗೃತಿ ಮೂಡಿಸಿದ್ದರು. ದೇಶ ಕಟ್ಟುವಲ್ಲಿ ಪತ್ರಿಕೆಗಳ ಪಾತ್ರ ಬಹಳಷ್ಟು ದೊಡ್ಡದು. ಸೋಷಿಯಲ್ ಮೀಡಿಯಾದಿಂದ ಉಪಯೋಗವಿದೆಯಾದರೂ ಅಷ್ಟೇ ಕೆಟ್ಟದೂ ಇದೆ ಎಂದರು.


ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಉಪನ್ಯಾಸ ನೀಡಿದರು. ಮಾಧ್ಯಮ ವರದಿ ಇವತ್ತು ಪ್ರತಿಯೊಬ್ಬರ ಕೈಗೂ ಬಂದಿದೆ. ಜಗತ್ತಿನಲ್ಲಿ ಜೀವರಕ್ಷಕ ಔಷಧಿ ಮೊದಲ ಸ್ಥಾನದಲ್ಲಿದ್ದರೆ, ೨ನೇ ಸ್ಥಾನದಲ್ಲಿ ಮುದ್ರಣ ಮಾಧ್ಯಮಗಳಿವೆ. ಇಷ್ಟಾದರೂ ಮಾಧ್ಯಮಗಳು ಕೆಲವೊಂದು ಅಪವಾದಗಳನ್ನು ಕೂಡ ಎದುರಿಸುತ್ತಿವೆ. ಆರೋಪಿಯೊಬ್ಬನನ್ನು ನ್ಯಾಯಾಲಯ ವಿಚಾರಣೆ ನಡೆಸುವ ಮೊದಲೇ ಮಾಧ್ಯಮಗಳು ವಿಚಾರಣೆ ನಡೆಸಿ ತಪ್ಪಿತಸ್ಥನೆಂದು ಘೋಷಿಸುವುದು ಆತಂಕಕಾರಿ ಬೆಳವಣಿಗೆ. ಅದೇ ರೀತಿ ಪೀತ ಪತ್ರಿಕೋದ್ಯಮದ ಬಗ್ಗೆಯೂ ಜಾಗೃತಿ ಅಗತ್ಯ ಎಂದರು. ಪ್ರತಿಯೊಬ್ಬ ಪತ್ರಕರ್ತರಿಗೂ ವೃತ್ತಿಪರತೆ ಮತ್ತು ನೈತಿಕತೆ ಅಗತ್ಯವಾಗಿ ಬೇಕು ಎಂದವರು ನುಡಿದರು. ಮಾಹಿತಿ ಎಂಬುದು ನೀರಿನ ಥರ. ಕಡಿಮೆಯಾದರೂ ಕಷ್ಟ, ಜಾಸ್ತಿಯಾದರೂ ಕಷ್ಟ. ಇದನ್ನು ಪತ್ರಕರ್ತರು ಅರ್ಥಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.


ಇದೇ ಸಂದರ್ಭದಲ್ಲಿ ಶೇಟ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಕೊಡುಗೆಯಾಗಿ ನೀಡಿದ ಸಿಸಿ ಕ್ಯಾಮೆರಾವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪತ್ರಕರ್ತರಿಗೆ ಹಸ್ತಾಂತರ ಮಾಡಿದರು.


ಪತ್ರಿಕಾ ವಿತರಕರಾದ ವಿಶ್ವನಾಥ್ ಪುತ್ತೂರು ಅವರನ್ನು ಶಾಸಕರು ಪತ್ರಕರ್ತರ ಸಂಘದ ಪರವಾಗಿ ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಾದ ಹಷೇಂದ್ರ ಪ್ರಸಾದ್, ಮಹೇಶ್ ಪ್ರಸಾದ್, ದೀಪ್ತಿ ಭಟ್, ಎ.ಯು. ಅವನೀಶ್ ಕುಮಾರ್, ಸಮ್ಯಕ್, ಸಿಹಾ ಶಮ್ರಾ, ಪುಣ್ಯಶ್ರೀ ಪಿ. ಅವರನ್ನು ಸಂಘದ ಪರವಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಸಿದ್ಧಿಕ್ ನೀರಾಜೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್,ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ,ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವನಿಕೃಷ್ಣ, ಎಸೋಸಿಯೇಶನ್ ಆಫ್ ಸಿವಿಲ್ ಎಂಜಿನಿರ‍್ಸ್ (ಎಸಿಸಿಇ-ಐ) ಪುತ್ತೂರು ಸೆಂಟರ್ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಕೆ.ಕೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುಧಾಕರ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯ ಮೇಘಾ ಪಾಲೆತ್ತಾಡಿ ಮತ್ತು ರೋಟರಿ ಯುವ ಸಂಸ್ಥೆಯ ಕಾರ್ಯದರ್ಶಿ ವಚನಾ ಜಯರಾಂ,ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ, ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ,ಕಾರ್ಯಕಾರಿ ಸಮಿತಿ ಸದಸ್ಯರಾದ ಐ. ಬಿ. ಸಂದೀಪ್,ಕುಮಾರ್,ಪ್ರಸಾದ್ ಬಲ್ನಾಡ್, ಸಂಘದ ಕಾರ್ಯದರ್ಶಿ ಅಜಿತ್ ಕುಮಾರ್, ಸದಸ್ಯರಾದ ಅನಿಶ್ ಕುಮಾರ್ ಮರೀಲ್,ಶರತ್, ರಾಜೇಶ್ ಪಟ್ಟೆ, ಪಾರೂಕ್ ಶೇಕ್ , ಮತ್ತಿತ್ತರರು ಉಪಸ್ಥಿತರಿದ್ದರು.

 Share: | | | | |


ಇಂದು ರಾತ್ರಿ ಸೌದಿಯ ಜಿದ್ದಾದಲ್ಲಿ ಅಮರ್ ಅಕ್ಬರ್ ಅಂತೋನಿ ಟ್ರೋಫಿಯ ಫೈನಲ್ ಪಂದ್ಯ

Posted by Vidyamaana on 2023-09-22 20:06:38 |

Share: | | | | |


ಇಂದು ರಾತ್ರಿ ಸೌದಿಯ ಜಿದ್ದಾದಲ್ಲಿ ಅಮರ್ ಅಕ್ಬರ್ ಅಂತೋನಿ ಟ್ರೋಫಿಯ ಫೈನಲ್ ಪಂದ್ಯ

ಸೌದಿ ಅರೇಬಿಯಾದಲ್ಲಿರುವ ಕ್ಲಾಸಿಕ್ ಫ್ರೆಂಡ್ ಪುತ್ತೂರು, ತುಳುನಾಡು ಕ್ರಿಕೆಟ್ ಅಸೋಸಿಯೇಷನ್, ಸಿಟಿ ಬಾಯ್ಸ್ ಪುತ್ತೂರು ಇದರ ಆಶ್ರಯದಲ್ಲಿ ಅಮರ್ ಅಕ್ಬರ್ ಅಂತೋಣಿ ಸೌಹಾರ್ದ ರೋಲಿಂಗ್ ಟ್ರೋಫಿ ಟಿಪಿಎಲ್ ಸೀಸನ್ -3 ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ ಆಗಸ್ಟ್ 11ರಂದು ಅದ್ದೂರಿಯಿಂದ ಜಿದ್ದಾದಲ್ಲಿ ನಡೆಯಿತು. ಇದರ ಫೈನಲ್ ಪಂದ್ಯ ಇಂದು (ಸೆ. 22) ರಾತ್ರಿ 10 ಗಂಟೆಗೆ ನಡೆಯಲಿದೆ.

ಅಮರ್ ಅಕ್ಬರ್ ಅಂತೋನಿ ರೋಲಿಂಗ್ ಟ್ರೋಫಿ, ಅಮರ್ ಅಕ್ಬರ್ ಅಂತೋನಿ ಲೆಜೆಂಡ್ ಕ್ರಿಕೆಟ್, ಅಮರ್ ಅಕ್ಬರ್ ಅಂತೋನಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟದ ಫೈನಲ್ ಇದಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಜಾವೀದ್ ಮಿಯಾಂದಾದ್ ಶಾಹುಲ್ ಭೂಪಾ ಮೊಹಸೀನ್ ವಾಮಂಜೂರು, ಜಾಸಿಮ್ ಕಲ್ಲಡ್ಕ ನವಾಝ್ ಮಂಗಳ್ ಪೇಟೆ, ಅಲ್ತಾಫ್ ಕುಮಟಾ ಸಮದ್, ಫಯಾಝ್, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ತಂಡದ ಮಾಲಕ ಹುರೈಸ್ ಬಪ್ಪಳಿಗೆ, ಅಧ್ಯಕ್ಷ ಇಫ್ರಾಜ್ ಬೆಳುವಾಯಿ, ಹುರೈಸ್ ಬಪ್ಪಳಿಗೆ, ನೌಚಾ ಮೊಟ್ಟೆತ್ತಡ್ಕ, ಸಿನಾನ್ ಪೆರ್ನೆ ಉಪಸ್ಥಿತರಿದ್ದರು.

ಮೊಹಸಿನ್ ವಾಮಂಜೂರು ಮಾಲಕತ್ವದ ಸನ್ ಮೂನ್ ವಾಮಂಜೂರು, ಸಿಬ್ಬತ್ & ಜಾವೀದ್ ಮಿಯಾಂದಾದ್ ಮಾಲಕತ್ವದ ಜಾಝ ಸ್ಪೋರ್ಟ್ಸ್ ಅಕಾಡೆಮಿ, ಜೈಸನ್ ಡಿಕೋಸ್ಟಾ ಮಾಲಕತ್ವದ ಕುಡ್ಲ ಬುಲ್ಸ್, ಯಾಸಿನ್ ಉಳ್ಳಾಲ ಹಾಗೂ ಇರ್ಷಾದ್  ಮಾಲಕತ್ವದ ನಝರ್ ಗಯ್ಸ್ ಜಿದ್ದಾ ಈ ತಂಡಗಳು ಪಂದ್ಯಾ ಕೂಟದಲ್ಲಿ ಭಾಗವಹಿಸಿದ್ದವು.

ಇದರ ಜೊತೆಗೆ ಲೆಜೆಂಡ್ ಕಪ್ ಓವರ್ ಆರ್ಮ್  ಹಳ್ಳಿ ಹುಡುಗ್ರು ಪ್ಯಾಟೆ ಕಪ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಕೂಡ ನಡೆಯಿತು.

ಅಮರ್ ಅಕ್ಬರ್ ಅಂತೋನಿ ಇದರ ಸ್ಥಾಪಕರಾದ ರಜ್ಹಾಕ್ ಬಿ ಎಚ್ ಬಪ್ಪಳಿಗೆ  ಈ ಪಂದ್ಯಕೂಟಕ್ಕೆ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದರು. ಟಿಪಿಎಲ್ ಸೀಸನ್ 3 ಇದರ ಸಮವಸ್ತ್ರವನ್ನು ಫಯಾಜ್ ಸುದೀರ್ ರೆಂಟಲ್ ಉಡುಗೊರೆಯಾಗಿ ನೀಡಿದರು.

ನೌಷದ್ ಮೊಟ್ಟೆತ್ತಡ್ಕ, ಹುರೈಸ್ ಪುತ್ತೂರು, ಸಿನಾನ್ ಪೆರ್ನೆ, ಇಫ್ರಾಜ್ ಬೆಳುವಾಯಿ, ರಜಾಕ್ ಬಪ್ಪಳಿಗೆ ನೇತೃತ್ವದಲ್ಲಿ ಪಂದ್ಯಕೂಟ ನಡೆಯುತ್ತಿದೆ.

ಕುಂಬೋಳ್ ತಂಙಳ್ ಆಶೀರ್ವಾದ ಪಡೆದ ಪುತ್ತೂರು ಶಾಸಕರು

Posted by Vidyamaana on 2023-05-25 15:29:39 |

Share: | | | | |


ಕುಂಬೋಳ್ ತಂಙಳ್ ಆಶೀರ್ವಾದ ಪಡೆದ ಪುತ್ತೂರು ಶಾಸಕರು

ಪುತ್ತೂರು: ಕುಂಬೋಳ್ ತಂಙಳ್ ಬಗ್ಗೆ ಗೊತ್ತಿಲ್ಲದವರು ಬಹಳ ಅಪರೂಪ. ಅನೇಕ ಪವಾಡಗಳಿಂದ ಜನ ಮಾನಸದಲ್ಲಿ ಪ್ರಚಾರದಲ್ಲಿರುವ ಮತ್ತು ಜಾತಿ,ಮತ, ಧರ್ಮಗಳ ಬೇದವಿಲ್ಲದೆ ಎಲ್ಲರಿಗೂ ಸಾಂತ್ವನ ನೀಡುತ್ತಿರುವ ಕುಂಬೋಳ್ ತರವಾಡಿನ ಶೈಕುನಾ ಕುಂಞಿ ಕೋಯಾ ತಂಙಳ್ ರವರು ಇಂದು ವಿಧಾನ ಸೌಧಕ್ಕೆ ಭೇಟಿ ನೀಡಿದ್ದರು. ಸೀಎಂ, ಡಿಸಿಎಂ ಸಹಿತ ಎಲ್ಲರೂ ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಂಡರು ಮತ್ತು ಅವರಿಂದ ಆಶೀರ್ವಾದವನ್ನು ಪಡೆದರು.ಜೊತೆಗೆ ಪುತ್ತೂರು ಶಾಸಕರಾದ ಅಶೋಕ್ ರೈಯವರು ತಂಙಳ್ ರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಕಿನ್ನಿಗೋಳಿ, ಮೂಡುಬಿದ್ರೆ ಪೇಟೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಭರ್ಜರಿ ಪ್ರಚಾರ

Posted by Vidyamaana on 2024-04-17 04:22:35 |

Share: | | | | |


ಕಿನ್ನಿಗೋಳಿ, ಮೂಡುಬಿದ್ರೆ ಪೇಟೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಭರ್ಜರಿ ಪ್ರಚಾರ

ಮಂಗಳೂರು, ಎ.16: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮೂಲ್ಕಿ- ಮೂಡುಬಿದ್ರೆ ಕ್ಷೇತ್ರದಲ್ಲಿ ಬಿರುಸಿನ ಮತಯಾಚನೆ ನಡೆಸಿದ್ದಾರೆ. ಅಭ್ಯರ್ಥಿಯಾದ ಬಳಿಕ ಚೌಟ ಕ್ಷೇತ್ರದಲ್ಲಿ ನಾಲ್ಕನೇ ಬಾರಿ ಸಂಚಾರ ನಡೆಸಿದ್ದು, ಹಳೆಯಂಗಡಿ, ಕಿನ್ನಿಗೋಳಿ ಪೇಟೆ ಮತ್ತು ಮೂಡುಬಿದ್ರೆ ಪೇಟೆಯಲ್ಲಿ ಉದ್ದಕ್ಕೂ ಸಂಚರಿಸಿ ಅಂಗಡಿ, ಬೀದಿಗಳಲ್ಲಿ ಜನರ ಬಳಿ ಮತಯಾಚನೆ ಮಾಡಿದ್ದಾರೆ.


ಬೆಳಗ್ಗೆ ತೋಕೂರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಬ್ರಿಜೇಶ್ ಚೌಟ, ಬಿಜೆಪಿ ಕಾರ್ಯಕರ್ತರ ಜೊತೆಗೆ ದೇವರಲ್ಲಿ ಪ್ರಾರ್ಥಿಸಿ ಮತಯಾಚನೆಗೆ ತೊಡಗಿದ್ದಾರೆ. ಬಳಿಕ ಹಳೆಯಂಗಡಿ ಮತ್ತು ಕಿನ್ನಿಗೋಳಿ ಪೇಟೆಯಲ್ಲಿ ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಬಿಜೆಪಿ ಪ್ರಮುಖರ ಜೊತೆಗೆ ಸಂಚರಿಸಿದ ಚೌಟರಿಗೆ ಅಪಾರ ಜನಬೆಂಬಲ ವ್ಯಕ್ತವಾಗಿದೆ. ಮತದಾರರು ಕೈಕುಲುಕಿ ಬಿಜೆಪಿ ಮತ್ತು ಮೋದಿಗೆ ಜೈಕಾರ ಕೂಗಿದ್ದಾರೆ. ಇದರ ನಡುವೆ ಬಳ್ಕುಂಜೆ ವಿಠೋಧರ ಮಂದಿರ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಭೇಟಿಯಿತ್ತು ವಿಶೇಷ ಪ್ರಾರ್ಥನೆ ನೆರವೇರಿಸಿದ್ದಾರೆ.

ಭೀಕರ ಅಪಘಾತದಲ್ಲಿ ಲಾಸ್ಯ ನಂದಿತಾ ದುರ್ಮರಣ; 10 ದಿನಗಳ ಹಿಂದೆ ನಡೆದ ಅವಘಡದಲ್ಲಿ ಪಾರಾಗಿದ್ದರು!

Posted by Vidyamaana on 2024-02-24 11:39:31 |

Share: | | | | |


ಭೀಕರ ಅಪಘಾತದಲ್ಲಿ ಲಾಸ್ಯ ನಂದಿತಾ ದುರ್ಮರಣ; 10 ದಿನಗಳ ಹಿಂದೆ ನಡೆದ ಅವಘಡದಲ್ಲಿ ಪಾರಾಗಿದ್ದರು!

ಹೈದರಾಬಾದ್ ಫೆಬ್ರುವರಿ 24: ಹೈದರಾಬಾದ್​​ (Hyderab

non

)ನಲ್ಲಿ ಎಸ್‌ಯುವಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೆಲಂಗಾಣ ಶಾಸಕಿ ಲಾಸ್ಯ ನಂದಿತಾ (Lasya Nanditha) ಸಾವಿಗೀಡಾಗಿದ್ದಾರೆ. 37ರ ಹರೆಯದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕಿ, 10 ದಿನಗಳ ಹಿಂದೆಯಷ್ಟೇ ನರ್ಕಟ್‌ಪಲ್ಲಿಯಲ್ಲಿ ಅಪಘಾತದಲ್ಲಿ ಬದುಕುಳಿದಿದ್ದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಷಣ ಮಾಡುತ್ತಿದ್ದ ರ‍್ಯಾಲಿಗೆ ತೆರಳುತ್ತಿದ್ದ ವೇಳೆ ಪಾನಮತ್ತ ಚಾಲಕನೊಬ್ಬ ಆಕೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಆಕೆಯ ಹೋಮ್ ಗಾರ್ಡ್ ಸಾವಿಗೀಡಾಗಿದ್ದು, ಆಕೆಗೆ ಸಣ್ಣಪುಟ್ಟ ಗಾಯಗಳಾಗಿತ್ತು.ಹೈದರಾಬಾದ್‌ನ ಹೊರ ವರ್ತುಲ ರಸ್ತೆಯಲ್ಲಿ ಆಕೆಯ ವಾಹನ ಮಾರುತಿ ಎಕ್ಸ್‌ಎಲ್ 6 ಚಾಲಕನ ನಿಯಂತ್ರಣ ತಪ್ಪಿ ಲೋಹದ ಡಿವೈಡರ್‌ಗೆ ಡಿಕ್ಕಿ ಹೊಡೆದು ಶುಕ್ರವಾರ ಭೀಕರ ಅಪಘಾತ ಸಂಭವಿಸಿದೆ. ಲಾಸ್ಯ ನಂದಿತಾ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮುಂಜಾನೆ 5.30ಕ್ಕೆ ಈ ಘಟನೆ ನಡೆದಿದೆ.

ಎರಡೂ ಅಪಘಾತಗಳ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


37 ವರ್ಷ ವಯಸ್ಸಿನ ಸಿಕಂದರಾಬಾದ್ ಕಂಟೋನ್ಮೆಂಟ್ (SC) ಶಾಸಕರಾಗಿದ್ದ ಲಾಸ್ಯ ಅವರನ್ನು ಅಪಘಾತ ಸ್ಥಳದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಗೆ ಬರುವಾಗಲೇ ಶಾಸಕಿ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 1986 ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಲಾಸ್ಯ ನಂದಿತಾ ಸುಮಾರು ಒಂದು ದಶಕದ ಹಿಂದೆ ರಾಜಕೀಯಕ್ಕೆ ಕಾಲಿಟ್ಟರು. 2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕಂಟೋನ್ಮೆಂಟ್‌ನಿಂದ ಶಾಸಕರಾಗಿ ಆಯ್ಕೆಯಾಗುವ ಮೊದಲು ಅವರು ಕವಾಡಿಗುಡ ವಾರ್ಡ್‌ನಲ್ಲಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದರು.


ತೆಲಂಗಾಣ ಮುಖ್ಯಮಂತ್ರಿ, ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್, ರಾಜ್ಯ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಮತ್ತು ತೆಲಂಗಾಣದ ಹಲವಾರು ಸಚಿವರು ಮತ್ತು ಮುಖಂಡರು ಯುವ ಶಾಸಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


ಲಾಸ್ಯ ನಂದಿತಾ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ ರೇವಂತ್ ರೆಡ್ಡಿ, ಆಕೆಯ ತಂದೆ ಜಿ ಸಾಯಣ್ಣ ಅವರೊಂದಿಗಿನ ನಿಕಟ ಒಡನಾಟವನ್ನು ಸ್ಮರಿಸಿದರು. ಕಳೆದ ವರ್ಷ ಫೆಬ್ರವರಿಯಲ್ಲಿ ಸಾಯಣ್ಣ ಮೃತಪಟ್ಟಿದ್ದು ಅದೇ ತಿಂಗಳಲ್ಲಿ (ಒಂದು ವರ್ಷದ ಅವಧಿಯಲ್ಲಿ) ಲಾಸ್ಯ ನಂದಿತಾ ಸಾವಿಗೀಡಾಗಿದ್ದಾರೆ.

ಪರಸ್ಪರ ಪ್ರೀತಿಸಿ ದೇವಸ್ಥಾನದಲ್ಲಿ ವಿವಾಹವಾದ ಸಲಿಂಗಿ ಜೋಡಿ

Posted by Vidyamaana on 2024-01-11 16:46:55 |

Share: | | | | |


ಪರಸ್ಪರ ಪ್ರೀತಿಸಿ ದೇವಸ್ಥಾನದಲ್ಲಿ ವಿವಾಹವಾದ ಸಲಿಂಗಿ ಜೋಡಿ

ಲಕ್ನೋ: ಪರಸ್ಪರ ಪ್ರೀತಿಸುತ್ತಿದ್ದ‌ ಸಲಿಂಗಿ ಜೋಡಿ ಸಾಂಪ್ರದಾಯಿಕವಾಗಿ ದೇವಸ್ಥಾನದಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.


ಪಶ್ಚಿಮ ಬಂಗಾಳದ ಮೂಲದ ಜಯಶ್ರೀ ರಾಹುಲ್ (28) ಮತ್ತು ರಾಖಿ ದಾಸ್ (23) ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ದಕ್ಷಿಣ 24 ಪರಗಣ ಜಿಲ್ಲೆಯವರಾದ ಜಯಶ್ರೀ ರಾಹುಲ್‌ ಹಾಗೂ ರಾಖಿ ದಾಸ್ ಡಿಯೋರಿಯಾದಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಜೊತೆಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಪ್ರೀತಿ ಹುಟ್ಟಿತ್ತು.

ಕೆಲವು ದಿನಗಳ ಹಿಂದೆ ದೀರ್ಗೇಶ್ವರನಾಥ ದೇವಸ್ಥಾನದಲ್ಲಿ ಮದುವೆಗೆ ಅನುಮತಿಯನ್ನು ಕೋರಲಾಗಿತ್ತು. ಆದರೆ ದೇವಸ್ಥಾನದಲ್ಲಿ ಅನುಮತಿ ನಿರಾಕರಿಸಿದ್ದರು. ಇದಾದ ಬಳಿಕ ಆರ್ಕೆಸ್ಟ್ರಾ ತಂಡದ ಮಾಲೀಕ ಮನ್ನಾ ಪಾಲ್‌ ಮದುವೆಗೆ ನೋಟರೈಸ್ ಮಾಡಿದ ಅಫಿಡವಿಟ್ ಪಡೆದುಕೊಂಡಿದ್ದಾರೆ.ನೋಟರಿ ಪ್ರಮಾಣ ಪತ್ರವನ್ನು ಪಡೆದುಕೊಂಡ ನಂತರ ಸೋಮವಾರ(ಜ.8 ರಂದು) ಡಿಯೋರಿಯಾದ ಭಟ್ಪರ್ ರಾಣಿಯ ಭಗದಾ ಭವಾನಿ ದೇವಸ್ಥಾನದಲ್ಲಿ ತನ್ನ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ಉಡುಪಿಯಲ್ಲಿ ಪತ್ನಿಯನ್ನು ಕಡಿದು ಕೊಂದು ಹಾಕಿದ ಪತಿ!

Posted by Vidyamaana on 2024-08-23 14:49:57 |

Share: | | | | |


ಉಡುಪಿಯಲ್ಲಿ ಪತ್ನಿಯನ್ನು ಕಡಿದು ಕೊಂದು ಹಾಕಿದ ಪತಿ!

ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ನೆತ್ತರು (Murder Case ) ಹರಿದಿದೆ. ಪತಿಯೇ ತನ್ನ ಪತ್ನಿಯನ್ನು ಕಡಿದು ಕೊಲೆ ಮಾಡಿರುವ ಶಂಕೆ ಇದೆ. ಜಯಶ್ರೀ (28) ಕೊಲೆಯಾದವಳು. ಕಿರಣ್ ಉಪಾಧ್ಯ(30) ಕೊಲೆ ಆರೋಪಿಯಾಗಿದ್ದಾನೆ.ಉಡುಪಿಯಲ್ಲಿ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಾರ್ಕಡ ಕಡಿದ ಹೆದ್ದಾರಿ ಬಳಿ ಘಟನೆ ನಡೆದಿದೆ.

ಈ ಜೋಡಿ ಕಾರ್ಕಡ ಅಂಗನವಾಡಿ ಕೇಂದ್ರದ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಮುಂಜಾನೆ ಪತ್ನಿಯನ್ನು ಕಿರಣ್ ಉಪಾಧ್ಯ ಕೊಲೆ ಮಾಡಿದ್ದ ಎನ್ನುವ ಮಾಹಿತಿ ಇದೆ.

ಶಂಕೆ ಮೇರೆಗೆ ಪತಿ ಕಿರಣ್ ಉಪಾಧ್ಯ ಗುಂಡ್ಮಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು,ಈ ಕುರಿತು ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Recent News


Leave a Comment: