ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಸುದ್ದಿಗಳು News

Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23

Share: | | | | |


ನೆಟ್ಟೇ ಕಮ್ಮಿ ಆಪುಂಡು ನನ ಬರೋಡ್ಚಿ.. ಎಂದು ಹೇಳಿ ಮದ್ದು ಕೊಡ್ತಿದ್ದ ನರಸಿಂಹ ಭಟ್ ರಿಟೈರ್ಡ್

ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”

ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.

ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.

ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.

ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!

ಡಾ. ಶಿವರಾಮ ಭಟ್ ಗುರು:

ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ‌. ಶಿವರಾಮ ಭಟ್ ಎಂದು ನಂಬಿದ್ದರು.

ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!

ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.

 Share: | | | | |


ವಿರಾಟ್ ಕೊಹ್ಲಿ ಮನೆಗೆ ಜ್ಯೂನಿಯರ್ ವಿರಾಟ್ ಆಗಮನ

Posted by Vidyamaana on 2024-02-21 07:25:10 |

Share: | | | | |


ವಿರಾಟ್ ಕೊಹ್ಲಿ ಮನೆಗೆ ಜ್ಯೂನಿಯರ್ ವಿರಾಟ್ ಆಗಮನ

ವಿರುಷ್ಕಾ ದಂಪತಿ ಪುತ್ರ ‘ಅಕಾಯ್‌’ ಹೆಸರಿನ ಅರ್ಥವೇನು ಗೊತ್ತಾ?

ಮುಂಬೈ: ಟೀಂ ಇಂಡಿಯಾ (Team India) ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಅವರ ಮನೆಗೆ ಮತ್ತೊಬ್ಬ ಅತಿಥಿಯ ಆಗಮನವಾಗಿದೆ. ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಗಂಡು ಮಗುವಿಗೆ (Boy Baby) ಜನ್ಮ ನೀಡಿದ್ದಾರೆ.

ಅನುಷ್ಕಾ ಶರ್ಮಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಫೆ.15 ರಂದು ವಿರುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿಯನ್ನು ಮಂಗಳವಾರ (ಫೆ.20) ಹಂಚಿಕೊಂಡಿದ್ದಾರೆ. ವಮಿಕಾಳ ತಮ್ಮನನ್ನು ಈ ಜಗತ್ತಿಗೆ ಸ್ವಾಗತಿಸಿದ್ದೇವೆ ಎಂದು ಎಲ್ಲರಿಗೂ ತಿಳಿಸಲು ಸಂತೋಷವಾಗುತ್ತಿದೆ. ಈ ಸಂತಸದ ಸಮಯದಲ್ಲಿ ನಿಮ್ಮ ಆಶೀರ್ವಾದ ಮತ್ತು ಶುಭಹಾರೈಕೆಗಳನ್ನು ಬಯಸುತ್ತೇವೆ. ಈ ಸಮಯದಲ್ಲಿ ನಮ್ಮ ಗೌಪತ್ಯೆಯನ್ನು ಗೌರವಿಸಲು ವಿನಂತಿಸುತ್ತೇನೆ ಎಂದು ನಟಿ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಮಗುವಿಗೆ ಈಗಾಗಲೇ ‘ಅಕಾಯ್‌’ ಎಂದು ಹೆಸರಿಟ್ಟಿದ್ದಾರೆ. ಕೊಹ್ಲಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.


ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್‌-ಭಾರತ ಟೆಸ್ಟ್‌ ಸರಣಿ ನಡೆಯುತ್ತಿದೆ. ಐದು ಸರಣಿಯಲ್ಲಿ ಈಗಾಗಲೇ ಮೂರು ಪಂದ್ಯಗಳು ನಡೆದಿವೆ. ಭಾರತ 3-2 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಸರಣಿ ಕೈವಶಕ್ಕೆ ಇನ್ನೊಂದೇ ಹೆಜ್ಜೆ ಬಾಕಿಯಿದೆ. ಟೆಸ್ಟ್‌ ಸರಣಿಗೆ ವಿರಾಟ್‌ ಕೊಹ್ಲಿ ಅಲಭ್ಯರಾಗಿದ್ದಾರೆ.


ಅಕಾಯ್‌ ಅಂದ್ರೇನು: ವಿರುಷ್ಕಾ ದಂಪತಿ ಮಗುವಿನ ಹೆಸರು ‘ಅಕಾಯ್‌’ ಅಕಾಯ್’ (Akaay) ಎಂಬ ವಿಶಿಷ್ಟ ಮತ್ತು ವಿಶೇಷ ಹೆಸರಿನ ಸುತ್ತ ಈಗ ಚರ್ಚೆ ನಡೆಯುತ್ತಿದೆ. ಅಕಾಯ್ ಎಂಬುದು ಹಿಂದಿ ಪದ ‘ಕಾಯ’ದಿಂದ ಬಂದಿದೆ. ಇದರ ಅರ್ಥ ‘ದೇಹ’. ಅಕಾಯ್ ಎಂದರೆ, ದೈಹಿಕ ಶಕ್ತಿಗಿಂತ ಮಿಗಿಲಾದವನು. ಟರ್ಕಿಶ್ ಮೂಲದಲ್ಲಿ, ‘ಅಕಾಯ್’ ಪದಕ್ಕೆ ‘ಹೊಳೆಯುವ ಚಂದ್ರ’ ಎಂದರ್ಥ.ಮಗುವಿಗೆ ಹೆಸರಿಡಲು ಯಾವ ಮೂಲದಿಂದ ಈ ಪದವನ್ನು ತೆಗೆದುಕೊಳ್ಳಲಾಗಿದೆ ಎಂಬುದನ್ನು ವಿರುಷ್ಕಾ ದಂಪತಿ ಇನ್ನೂ ಖಚಿತಪಡಿಸಿಲ್ಲ. ವಿರಾಟ್‌ ದಂಪತಿ ಮಗುವಿನ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು, ಸೆಲೆಬ್ರಿಟಿಗಳು, ಕ್ರಿಕೆಟ್‌ ತಾರೆಯರು ಶುಭಹಾರೈಸಿದ್ದಾರೆ.

ಜಾತ್ರೋತ್ಸವದಲ್ಲಿ ಸುಡು ಮದ್ದು ಪ್ರದರ್ಶನ, ರಥೋತ್ಸವ ಸಮಯ ಮೀರದಂತೆ ನಡೆಸುವಂತೆ ಮಹಾಲಿಂಗೇಶ್ವರ ಭಕ್ತಾದಿಗಳಿಂದ ಸಹಾಯಕ ಆಯುಕ್ತರಿಗೆ ಮನವಿ

Posted by Vidyamaana on 2024-04-13 13:24:48 |

Share: | | | | |


ಜಾತ್ರೋತ್ಸವದಲ್ಲಿ ಸುಡು ಮದ್ದು ಪ್ರದರ್ಶನ, ರಥೋತ್ಸವ ಸಮಯ ಮೀರದಂತೆ ನಡೆಸುವಂತೆ ಮಹಾಲಿಂಗೇಶ್ವರ ಭಕ್ತಾದಿಗಳಿಂದ ಸಹಾಯಕ ಆಯುಕ್ತರಿಗೆ ಮನವಿ

ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಧರ್ಭದಲ್ಲಿ ಅಂಗಡಿ, ಸಂತೆ ಇತ್ಯಾದಿಗಳನ್ನು ವ್ಯವಸ್ಥಿತವಾಗಿ ಆಯೋಜಿಸುವುದು, ಸುಡುಮದ್ದು ಪ್ರದರ್ಶನ ಮತ್ತು ರಥೋತ್ಸವವನ್ನು ನಿಶ್ಚಿತ ಸಮಯದಲ್ಲಿ ನಡೆಸುವಂತೆ ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಾದಿಗಳು ಏ.೧೨ರಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ರಥೋತ್ಸವದ ದಿನ ಶ್ರೀ ದೇವರು ರಥಾರೋಹಣದ ವೀಕ್ಷಣೆಗೆ ಭಕ್ತಾದಿಗಳಿಗೆ ಅನುಕೂಲವಾಗುವಂತೆ ರಥಬೀದಿಯಿಂದ ಕನಿಷ್ಠ ೭೫-೮೦ಮೀಟರ್ ದೂರದಲ್ಲಿ ವ್ಯಾಪಾರ ಮಳಿಗೆಗಳನ್ನು ಅಳವಡಿಸುವುದು. ಸುಡುಮದ್ದು ಪ್ರದರ್ಶನವನ್ನು ಸಾಕಷ್ಟು ದೂರದ ಸುರಕ್ಷಿತ ಪ್ರದೇಶದಲ್ಲಿ ವ್ಯವಸ್ಥೆಗೊಳಿಸುವುದು, ರಥೋತ್ಸವವನ್ನು ಮುಹೂರ್ತ ಸಮಯ ಮೀರದಂತೆ ಹಾಗೂ ವಿಳಂಭವಾಗದಂತೆ ಸಮಯ ನಿಗದಿಪಡಿಸುವುದು.

ಪುತ್ತೂರು : ಅಪ್ರಾಪ್ತ ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

Posted by Vidyamaana on 2024-01-28 05:12:54 |

Share: | | | | |


ಪುತ್ತೂರು : ಅಪ್ರಾಪ್ತ  ಬಾಲಕಿಯ ಮೇಲೆ ಕಿರುಕುಳ ಆರೋಪ -ಕಡಬ ಮೂಲದ ಶಾಕಿರ್ ಪೊಲೀಸ್ ವಶಕ್ಕೆ

ಪುತ್ತೂರು:  ಯುವಕನೊಬ್ಬ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಘಟನೆ ಪುತ್ತೂರು ನಗರದಲ್ಲಿ ಜ 27ರ ತಡ ರಾತ್ರಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಡಬ ಮೂಲದ ಶಾಕೀರ್ ವಶದಲ್ಲಿರುವ ವ್ಯಕ್ತಿ. ಪುತ್ತೂರು ಮೂಲದ ಅಪ್ರಾಪ್ತ ಬಾಲಕಿ, ಪುತ್ತೂರು  ದಾರಿ ಮಧ್ಯೆ ಆರೊಪಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ.ಆರೋಪಿಯನ್ನು ತಮ್ಮವಶಕ್ಕೆ ನೀಡಬೇಕೆಂದು ತಂಡವೊಂದು ಠಾಣೆಯ ಮುಂದೆ ಜಮಾಯಿಸಿತ್ತು. ಉದ್ರಿಕ್ತರನ್ನು ಪುತ್ತಿಲ ಪರಿವಾರ ಸಂಸ್ಥಾಪಕ ಅರುಣ್‌ ಕುಮಾರ ಪುತ್ತಿಲ ಸಮಾಧಾನಗೊಳಿಸಿದರು. ಆರೊಪಿಯ ವಿರುದ್ದ ಪೊಕ್ಕೋ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರ ಎಚ್ಚರಿಕೆಯ ನಡುವೆಯೂ ಜಲಪಾತದಲ್ಲಿ ಮೋಜಿನಾಟ

Posted by Vidyamaana on 2024-07-12 10:38:14 |

Share: | | | | |


ಪೊಲೀಸರ ಎಚ್ಚರಿಕೆಯ ನಡುವೆಯೂ ಜಲಪಾತದಲ್ಲಿ ಮೋಜಿನಾಟ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಳಿಯ ನಿಷೇಧಿತ ಫಾಲ್ಸ್ ಒಂದರ ಬಳಿ ಪ್ರವಾಸಕ್ಕೆ ಬಂದಿದ್ದ ಯುವಕರು ಹುಚ್ಚಾಟ ಮಾಡಿದ್ದು, ಬಣಕಲ್ ಪೊಲೀಸರು ಯುವಕರ ಬಟ್ಟೆ ಹೊತ್ತೊಯ್ದು ಬುದ್ಧಿ ಕಲಿಸಿದ್ದಾರೆ.ಜಲಪಾತದ ಬಳಿ ಇರುವ ಸೂಚನಾ ಫಲಕಗಳನ್ನೂ ಲೆಕ್ಕಿಸದೇ ಯುವಕರು ಅಪಾಯಕಾರಿ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು.

ಈ ವೇಳೆ ಪೊಲೀಸರು ಎಚ್ಚರಿಕೆ ಕೊಟ್ಟರು ಯುವಕರು ಮಾತು ಕೇಳದ ಕಾರಣ ಬಟ್ಟೆಯನ್ನು ಕೊಂಡೊಯ್ದು ಗಸ್ತು ವಾಹನದಲ್ಲಿ ತುಂಬಿದ್ದಾರೆ. ಈ ವೇಳೆ ಯುವಕರು ಬರಿ ಚಡ್ಡಿಯಲ್ಲೇ ಪೊಲೀಸರ ಹಿಂದೆ ಸರ್.. ಬಟ್ಟೆ ಕೊಡಿ ಎಂದು ಓಡಿದ್ದಾರೆ.

ಇಂದು ಪುತ್ತೂರಿಗೆ ಅಣ್ಣಾಮಲೈ

Posted by Vidyamaana on 2023-04-29 02:42:29 |

Share: | | | | |


ಇಂದು ಪುತ್ತೂರಿಗೆ  ಅಣ್ಣಾಮಲೈ

ಪುತ್ತೂರು:ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಕರ್ನಾಟಕ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಅವರು ಏ.29ರಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಗಂಟೆ 11.30ಕ್ಕೆ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ ಗಂಟೆ 3ಕ್ಕೆ ಕಾವು ಜನಮಂಗಲದಲ್ಲಿ ಕಾರ್ಯಕರ್ತರೊಂದಿಗೆ ಸ೦ವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ ಗಂಟೆ 6ಕ್ಕೆ ವಿಟ್ಲದಲ್ಲಿ ರೋಡ್ ಶೋ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ತಿಳಿಸಿದೆ.

ಕಳೆಂಜ ದೇಂತಡ್ಕ ವಿಷ್ಣುಮೂರ್ತಿ ದೇವರ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು

Posted by Vidyamaana on 2023-10-18 10:53:44 |

Share: | | | | |


ಕಳೆಂಜ ದೇಂತಡ್ಕ ವಿಷ್ಣುಮೂರ್ತಿ ದೇವರ ಚಿನ್ನಾಭರಣ ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು

ಉಪ್ಪಿನಂಗಡಿ: ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಬ್ರಹ್ಮಕಲಶೋತ್ಸದ ವೇಳೆ ಪೆರ್ನೆಯ ಕಳೆಂಜ ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ ಬೆನ್ನಿಗೆಯೇ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ನಾಪತ್ತೆಯಾದ ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾಗಿರುವ ಘಟನೆ ವರದಿಯಾಗಿದೆ.


ಕಳೆದ ಡಿಸೆಂಬರ್‌ನಲ್ಲಿ ಈ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ಸಮಯದಲ್ಲಿ ದೇವರಿಗೆ ಭಕ್ತಾದಿಯೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋ ಮಾಲೆಯನ್ನು ಸಮರ್ಪಿಸಿದ್ದರು. ಈ ಮಾಲೆ ಹಾಗೂ ಈ ಹಿಂದೆ ರಾಮದಾಸ್ ರೈ ಎಂಬವರು ಸಮರ್ಪಿಸಿದ ಎರಡು ಪವನಿನ ಚಿನ್ನದ ಸರ ದೇವಾಲಯದಲ್ಲಿದ್ದು ಆದಿತ್ಯವಾರದಂದು ಆಡಳಿತಾಧಿಕಾರಿಯ ಸಮ್ಮುಖದಲ್ಲಿ ನಡೆದ ಪರಿಶೀಲನೆಯ ವೇಳೆ ಆಭರಣಗಳು ನಾಪತ್ತೆಯಾಗಿರುವ ವಿಚಾರವು ಬೆಳಕಿಗೆ ಬಂದಿತ್ತು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್. ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬಂದಿಸಿ ಶಂಕಿತರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ ದೇವಳದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟುರವರು ಚಿನ್ನಾಭರಣದೊಂದಿಗೆ ಮಂಗಳವಾರ ಪೊಲೀಸ್ ಠಾಣೆಗೆ ಹಾಜರಾಗಿದ್ದರು. ಅವರು ಚಿನ್ನಾಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ  ಅಡಮಾನ ಇರಿಸಿ ಹಣ ಪಡೆದಿದ್ದು ಅಲ್ಲಿಂದ ಆಭರಣವನ್ನು ಬಿಡಿಸಿಕೊಂಡು ನೇರವಾಗಿ ಠಾಣೆಗೆ ಬಂದಿದ್ದರು. ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಅವರನ್ನು ವಶಕ್ಕೆ ಪಡೆದುಕೊಂಡು ದೇವಾಲಯದಲ್ಲಿ ಮಹಜರು ನಡೆಸಿ ಇಲಾಖಾ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಈ ಮಧ್ಯೆ ದೇವಾಲಯದಲ್ಲಿ ಇತ್ತೆನ್ನಲಾದ ಈ ಹಿಂದಿನ ದೇವಾಲಯದ ಪುನರ್ ನಿರ್ಮಾತೃ ದಿ. ರಾಮದಾಸ್ ರೈ ಎಂಬವರು ನೀಡಿದ್ದ 2 ಪವನ್ ತೂಕದ ಚಿನ್ನದ ಸರ ಇನ್ನೂ ನಾಪತ್ತೆಯಾಗಿದ್ದು, ಅದರ ಬಗ್ಗೆಯೂ ತನಿಖೆ ಮುಂದುವರೆದಿದೆ.

Recent News


Leave a Comment: