ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ದೂಮಡ್ಕದಲ್ಲಿ ೨೭ ನೇ ವರ್ಷದ ಮೊಸರುಕುಡಿಕೆ ಉತ್ಸವಕ್ಕೆ ಶಾಸಕರಿಂದ ಚಾಲನೆ

Posted by Vidyamaana on 2023-09-06 16:32:38 |

Share: | | | | |


ದೂಮಡ್ಕದಲ್ಲಿ ೨೭ ನೇ ವರ್ಷದ ಮೊಸರುಕುಡಿಕೆ ಉತ್ಸವಕ್ಕೆ ಶಾಸಕರಿಂದ ಚಾಲನೆ

ಪುತ್ತೂರು: ನಮಗೆ ಕಷ್ಟ ಬಂದಾಗ, ಜೀವನದಲ್ಲಿ ಸೋತಾಗ ನಮಗೆ ದೇವರ ನೆನಪಾಗುತ್ತದೆ, ನಾವು ದೇವರಿರುವ ಜಾಗವನ್ನು ಹುಡುಕಿಕೊಂಡು ಹೋಗುತ್ತೇವೆ, ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ , ಹಬ್ಬ ಹರಿದಿನಗಳಲ್ಲೂ ನಾವು ದೇವರ ಬಳಿ ಹೋಗುತ್ತೇವೆ ಆದರೆ ನಮ್ಮ ಮನೆಯೊಳಗೇ ಇರುವ ತಂದೆ ತಾಯಿ ಎಂಬ ದೇವರನ್ನು ಮರೆತುಬಿಡುತ್ತೇವೆ, ತಂದೆ ತಾಯಿಯ ಮನಸ್ಸಿಗೆ ನೋವು ಮಾಡಿದವನಿಗೆ ದೇವರ ಆಶೀರ್ವಾದ ಎಂದಿಗೂ ಲಭಿಸುವುದಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ದೂಮಡ್ಕದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ ೨೭ ನೇ ವರ್ಷದ ಮೊಸರುಕುಡಿಕೆ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ಆಶೀರ್ವಾದವನ್ನು ನಾವು ಮೊದಲು ಪಡೆಯಬೇಕು, ಜೀವ ಇರುವಾಗ ನಾವು ಅವರ ಚಾಕರಿಯನ್ನು ಮಾಡಬೇಕು. ಮುದಿ ಪ್ರಾಯದಲ್ಲಿ ಅವರನ್ನು ಆಶ್ರಮಕ್ಕೆ ಸೇರಿಸುವ ಸಂಸ್ಕಾರ ನಮ್ಮದಲ್ಲ ನಾವು ತಂದೆ ತಾಯಿಯನ್ನು ಎಲ್ಲಿಯತನಕ ಮನಸಾರೆ ಪ್ರೀತಿಸುವುದಿಲ್ಲವೋ ಅಲ್ಲಿಯವರೆಗೆ ನವು ಜೀವನದಲ್ಲಿ ಉದ್ದಾರ ಆಗುವುದೇ ಇಲ್ಲ ಎಂದು ಹೇಳಿದ ಶಾಸಕರು ನಮಗೆ ದೇವರು ಒಲಿಯಬೇಕಾದರೆ ಮೊದಲು ಜನ್ಮ ಕೊಟ್ಟ ದೇವರನ್ನು ಮನೆಯಲ್ಲೇ ಪೂಜಿಸಬೇಕು ಎಂದು ಹೇಳಿದರು. ನಾವು ಕಷ್ಟ ಬಂದಾಗ ಪ್ರಶ್ನೆ ಕೇಳಲು ಹೋಗುತ್ತೇವೆ, ನಮಗೆ ಯಾರಾದರೂ ಏನಾದರು ಮಾಡಿದ್ದಾರ ಎಂದು ಕೇಳಲು ಹೋಗುತ್ತೇವೆ ಅವರ ಬಳಿ ಹೋಗುವ ಬದಲು ತಂದೆ ತಾಯಿಯನ್ನು ಗೌರವಿಸಿ ಅಷ್ಟೇ ಸಾಕು ನಮಗೆ ದೇವರು ಎಲ್ಲವನ್ನೂ ಕೊಡುತ್ತಾನೆ ಎಂದು ಹೇಳಿದರು.ವೇದಿಕೆಯಲ್ಲಿ ಬೈಲಾಡಿ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಘಾಟೆ, ಬೈಲಾಡಿ ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ ಬ್ಥರಮಜಲು, ದೂಮಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಗಣೇಶ್ ರೈ, ದೂಮಡ್ಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷರಾದ ಶೀನಪ್ಪ ನಾಯ್ಕ, ಬೆಟ್ಟಂಪಾಡಿ ಗ್ರಾಪಂ ಸದಸ್ಯ ನವೀನ್ ರೈ, ಮಹಾಲಿಂಗ ನಾಯ್ಕ, ಬೆಳಿಯೂರುಕಟ್ಟೆ ಸರಕರಿ ಪಪೂ ಕಾಲೇಜು ಪ್ರಾಂಶುಪಾಲರಾದ ಹರಿಪ್ರಕಾಶ್ ಬೈಲಾಡಿ ಮೊದಲಾದವರು ಉಪಸ್ತಿತರಿದ್ದರು.

ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿ ಬೆದರಿಕೆ

Posted by Vidyamaana on 2023-08-25 08:59:25 |

Share: | | | | |


ಬುದ್ದಿ ಹೇಳಿದ್ದಕ್ಕೆ ಶಿಕ್ಷಕನಿಗೆ ಮಾರಕಾಸ್ತ್ರ ಹಿಡಿದು ವಿದ್ಯಾರ್ಥಿ ಬೆದರಿಕೆ

ಮಂಡ್ಯ: ತರಗತಿಗೆ ಹಾಜರಾಗದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ ವಿದ್ಯಾರ್ಥಿಯೊಬ್ಬ ಶಿಕ್ಷಕರ ಎದುರು ಲಾಂಗ್ ಝಳಪಿಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ.

ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಬಗ್ಗೆ ಉಪನ್ಯಾಸಕರೊಬ್ಬರು ತಿಳುವಳಿಕೆ ಹೇಳುವಂತೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ತಲವಾರು ಹಿಡಿದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಹಾಕುತ್ತಿರುವ ವೀಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಶೇಖರ್ ಕೋಟ್ಯಾನ್ ವಿರುದ್ಧ ವಂಚನೆ ಆರೋಪ

Posted by Vidyamaana on 2023-09-29 15:19:39 |

Share: | | | | |


ರಾಜಶೇಖರ್ ಕೋಟ್ಯಾನ್ ವಿರುದ್ಧ ವಂಚನೆ ಆರೋಪ

ಪುತ್ತೂರು : ರಾಜಶೇಖರ್ ಕೋಟ್ಯಾನ್ ಎಂಬವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಆರೋಪಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಪುತ್ತಿಲ ಪರಿವಾರ ಸ್ಪಷ್ಟೀಕರಣ ನೀಡಿದೆ.


2023ರ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಒತ್ತಾಯದಂತೆ ಪಕ್ಷೇತರರಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರು ಸ್ಪರ್ಧಿಸಿದರು.


ಚುನಾವಣೆಯ ಸಂದರ್ಭ ಕೇವಲ 20 ದಿನದಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ತಾಲೂಕು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ದುಡಿದಿರುವವರಲ್ಲಿ ನೇರಳಕಟ್ಟೆಯ ರಾಜಶೇಖರ್ ಕೋಟ್ಯಾನ್ ಕೂಡ ಓರ್ವರು.


ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜಶೇಖರ್ ಕೋಟ್ಯಾನ್ ವಿರುದ್ಧ ಕೆಲವು ಆರೋಪಗಳು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ವಿಷಯ ಕರ್ನಾಟಕದ ಹಗರಿಬೊಮ್ಮನಹಳ್ಳಿಯ ಕ್ಷೇತ್ರದ ರಾಷ್ಟ್ರೀಯ ಪಕ್ಷದ ಟಿಕೇಟ್ ವಿಷಯದಲ್ಲಿ ನಾಯಕರ ನಡುವೆ ಚುನಾವಣಾ ಪೂರ್ವ ವ್ಯವಹಾರವಾಗಿದ್ದು, ಆ ಆರೋಪದಲ್ಲಿ ಪುತ್ತಿಲ ಪರಿವಾರದ ಹೆಸರು ಪ್ರಸ್ತಾಪವಾಗಿರುವುದರಿಂದ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಬಂದ ದೂರಿನ ಪ್ರತಿಯಲ್ಲಿಯೂ ಪುತ್ತಿಲ ಪರಿವಾರದ ಬಗ್ಗೆ ಉಲ್ಲೇಖವಿಲ್ಲ. ಅವರ ವೈಯಕ್ತಿಕ ವ್ಯವಹಾರಕ್ಕೂ ನಮ್ಮ ಪುತ್ತಿಲ ಪರಿವಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪುತ್ತಿಲ ಪರಿವಾರ ತಿಳಿಸಿದೆ.

ಹತ್ರಾಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ; ಸಾವಿನ ಸಂಖ್ಯೆ 122 ಕ್ಕೆ ಏರಿಕೆ.!

Posted by Vidyamaana on 2024-07-02 19:47:54 |

Share: | | | | |


ಹತ್ರಾಸ್ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ; ಸಾವಿನ ಸಂಖ್ಯೆ 122 ಕ್ಕೆ ಏರಿಕೆ.!

ಹತ್ರಾಸ್ : ಹತ್ರಾಸ್ನಲ್ಲಿ ಭೋಲೆ ಬಾಬಾ ಸತ್ಸಂಗದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಮೃತಪಟ್ಟವರ ಸಂಖ್ಯೆ 122 ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿದೆ.ಈ ಅವಘಡದಲ್ಲಿ 150 ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು, ಅನೇಕರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಅಪಘಾತ : ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ್ಯು

Posted by Vidyamaana on 2024-05-30 16:54:25 |

Share: | | | | |


ಬೆಂಗಳೂರಿನಲ್ಲಿ ಅಪಘಾತ :  ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ್ಯು

ನೆಲ್ಯಾಡಿ : ಬೆಂಗಳೂರಿನ ನೆಲಮಂಗಲದಲ್ಲಿ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿ ನೆಲ್ಯಾಡಿ ಎಂಜಿರ ಪರಕ್ಕಳದ ಯುವಕ ಮೃತಪಟ್ಟ ಬಗ್ಗೆ ವರದಿಯಾಗಿದೆ.

ನೆಲ್ಯಾಡಿ ಎಂಜಿರ ಪರಕ್ಕಳ ನಿವಾಸಿ ಸ್ಕೇರಿಯಾ ಎಂಬವರ ಪುತ್ರ, ನರ್ಸಿಂಗ್ ವಿದ್ಯಾರ್ಥಿ ಥೋಮಸ್ ಮೃತ ಯುವಕ.

ವಿಟ್ಲ : ಪ್ರೀತಿ ಮಾಡಿ ಕೈಕೊಟ್ಟವನ ಮನೆ ಮುಂದೆ ಧರಣಿ ಯುವತಿಯ ಪ್ರತಿಭಟನೆ

Posted by Vidyamaana on 2024-02-06 22:12:23 |

Share: | | | | |


ವಿಟ್ಲ : ಪ್ರೀತಿ ಮಾಡಿ ಕೈಕೊಟ್ಟವನ ಮನೆ ಮುಂದೆ ಧರಣಿ ಯುವತಿಯ ಪ್ರತಿಭಟನೆ

ವಿಟ್ಲ :ಪ್ರೀತಿಸುವ ನಾಟಕವಾಡಿ ಕೈಕೊಟ್ಟಿರುವ ಯುವಕನ ಮನೆ ಮುಂದೆ ಯುವತಿಯೊಬ್ಬಳು. ಮೊಕ್ಕಾಂ ಹೂಡಿ ನಿರಶನ ನಡೆಸಿದ ವಿಚಿತ್ರ ಹಾಗೂ ಅಪರೂಪದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ 6 ರಂದು ಸಂಜೆ ನಡೆದಿದೆ. ಯುವತಿಯನ್ನು ಮನವೊಲಿಸಲು ವಿಫಲರಾದ ಪೊಲೀಸರು ರಾತ್ರಿ ವೇಳೆ ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ ಎಂದು ತಿಳಿದು ಬಂದಿದೆ.ಉತ್ತರ ಭಾರತ ಮೂಲದ ಯುವತಿ ಬೆಂಗಳೂರಿನಲ್ಲಿ ಬ್ಯೂಟಿ ಪಾರ್ಲರ್  ಸಂಸ್ಥೆಯೂಂದನ್ನು ನಡೆಸುತ್ತಿದ್ದು, ಅಲ್ಲಿ ಆಕೆಗೆ ಅಡ್ಯನಡ್ಕದ ಯುವಕನೂಬ್ಬನ ಪರಿಚಯವಾಗಿದೆ. ಯುವಕ ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಉದ್ಯೋಗಿಯಾಗಿದ್ದಾನೆ ಎನ್ನಲಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಮುಂದಿನ ದಿನಗಳಲ್ಲಿ ಅವರಿಬ್ಬರ ಮಧ್ಯೆ ಹಣಕಾಸಿನ ವಹಿವಾಟು ನಡೆದಿದೆ ಎಂದು ಹೇಳಲಾಗುತ್ತಿದೆ.


ಇಂದು ಸಂಜೆ ಅಡ್ಯನಡ್ಕದ ಯುವಕನ ಮನೆ ಬಳಿ ಬಂದ ಸಂತ್ರಸ್ತ ಯುವತಿ ಪ್ರೀತಿಯ ನಾಟಕವಾಡಿ ಯುವಕ ಹಣ ಪಡೆದಿದ್ದಾನೆ. ಈಗ ಹಣವು ವಾಪಸ್ಸು ನೀಡದೆ, ವಿವಾಹವು ಆಗದೇ ಯುವಕ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಎದುರು ಕೂತು ಪ್ರತಿಭಟನೆ ನಡೆಸಿದ್ದಾಳೆ.ಯುವಕ ಹಾಗೂ ಯುವತಿ ಭಿನ್ನ ಕೋಮಿಗೆ ಸೇರಿದವರೆಂದು ಮಾಹಿತಿ ಹಬ್ಬಿದ ಹಿನ್ನಲೆಯಲ್ಲಿ, ಅಡ್ಯನಡ್ಕ ಪೇಟೆಯಲ್ಲಿ ಎರಡು ಕೋಮಿನವರು ಜಮಾಯಿಸಿದ್ದರು.ಯುವಕನ ಊರವರು ಯುವತಿಗಾದ ಹಣಕಾಸಿನ ನಷ್ಟವನ್ನು ಭರಿಸಿ ಕೊಡುವುದಾಗಿ ಹೇಳಿದರೂ ಒಪ್ಪದ ಯುವತಿ ಯುವಕನೇ ಬೇಕೆಂದು ಪಟ್ಟು ಹಿಡಿದಿರುವುದಾಗಿ ಮೂಲಗಳು ತಿಳಿಸಿವೆ. ಬಳಿಕ ರಾತ್ರಿ ಆಕೆಯನ್ನು. ಪೊಲೀಸರು ವಿಟ್ಲ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

Recent News


Leave a Comment: