ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಸ್ನೇಹಿತರ ಬೆಟ್ಟಿಂಗ್ - ಯುವತಿಯ ಹಿಂಭಾಗ ಟಚ್ ಮಾಡಿದ ಪೋಲಿ ಇದೀಗ ಪೊಲೀಸರ ಅತಿಥಿ!

Posted by Vidyamaana on 2024-01-31 20:32:27 |

Share: | | | | |


ಸ್ನೇಹಿತರ ಬೆಟ್ಟಿಂಗ್ - ಯುವತಿಯ ಹಿಂಭಾಗ ಟಚ್ ಮಾಡಿದ ಪೋಲಿ ಇದೀಗ ಪೊಲೀಸರ ಅತಿಥಿ!

ಬೆಂಗಳೂರು :ಇತ್ತೀಚೆಗೆ ನಮ್ಮೂರ ಹೋಟೆಲ್‌ನಲ್ಲಿ ನಿಂತಿದ್ದ ಯುವತಿಗೆ ಅಲ್ಲೇ ಇದ್ದ ಯುವಕನೋರ್ವ ಯುವತಿಯ ಹಿಂದಿನ ಭಾಗಕ್ಕೆ ಬೇಕಂತಲೇ ಟಚ್‌ ಮಾಡಿ ಕೀಟಲೆ ಮಾಡಿ ಅಲ್ಲಿಂದ ಎಸ್ಕೇಪ್‌ ಆಗಿದ್ದ. ಈ ಕುರಿತು ಯುವತಿಯ ಪೋಷಕರು ನೀಡಿದ ದೂರಿಯನನ್ವಯ ವಿಜಯನಗರ ಪೊಲೀಸರು ಕೇಸು ದಾಖಲಿಸಿದ್ದು, ಇದೀಗ ಆರೋಪಿ ಚಂದನ್‌ ಎಂಬಾತನನ್ನು ಬಂಧಿಸಿದ್ದಾರೆ.


ಡಿ.30 ರಂದು ಸಂಜೆ 7.30ರ ಸುಮಾರಿಗೆ ಸ್ನೇಹಿತೆಯೊಂದಿಗೆ ನಮ್ಮೂರ ಹೋಟೆಲ್‌ಗೆ ತಿಂಡಿ ತಿನ್ನಲೆಂದು ಯುವತಿ ಬಂದಿದ್ದು, ಆಕೆಯನ್ನು ಕಂಡ ಯುವಕ ಬೇಕೆಂತಲೇ ಆಕೆಯ ಸೊಂಟದ ಹಿಂಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಕೂಡಲೇ ಯುವತಿ ತರಾಟೆ ತೆಗೆದುಕೊಂಡಾಗ ಅಲ್ಲಿಂದ ಓಡಿ ಹೋಗಿದ್ದ. ಈ ಘಟನೆ ಸಂಬಂಧ ವೀಡಿಯೋ ಜ.18 ರಂದು ವೈರಲ್‌ ಆಗಿತ್ತು. ಯುವತಿ ಪೋಷಕರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಕಾಮುಕ ಚಂದನ್‌ನನ್ನು ಬಂಧಿಸಿದ್ದಾರೆ.


ಗ್ಯಾಸ್‌ ಸಿಲಿಂಡರ್‌ ಡೆಲಿವರಿ ಕೆಲಸ ಮಾಡುವ ವೃತ್ತಿ ಮಾಡಿಕೊಂಡಿದ್ದ ಆರೋಪಿ ಚಂದನ್‌, ಹಂಪಿನಗರ ನಿವಾಸಿ. ಘಟನೆ ನಡೆದ ದಿನ ಸ್ನೇಹಿತರೊಂದಿಗೆ ಸಿನಿಮಾ ನೋಡಿಕೊಂಡು ಬಂದ ಚಂದನ್‌ ಭರ್ಜರಿ ಪಾರ್ಟಿ, ಕಂಠ ಪೂರ್ತಿ ಕುಡಿದು ಊಟಕ್ಕೆ ಎಂದು ವಿಜಯನಗರ ಹೋಟೆಲ್‌ಗೆ ಬಂದಿದ್ದ. ಊಟ ಮುಗಿಸಿ ಹೋಟೆಲ್‌ ಹೊರಗೆ ಚಂದನ್‌ ಗ್ಯಾಂಗ್‌ ಮಾತಾಡಿಕೊಂಡು ನಿಂತಿದ್ದರು.


ಈ ಸಂದರ್ಭದಲ್ಲಿ ಯುವತಿ ಅಲ್ಲಿಗೆ ಬಂದಿದ್ದಾಳೆ. ಇದನ್ನು ಕಂಡ ಸ್ನೇಹಿತನೋರ್ವ ಆಕೆಯನ್ನು ಮುಟ್ಟಿದರೆ ಐದು ಸಾವಿರ ಕೊಡುತ್ತೀನಿ ಎಂದು ಚಂದನ್‌ಗೆ ಹೇಳಿದ್ದಾನೆ. ಅಷ್ಟಕ್ಕೇ ಚಂದನ್‌ ಕುಡಿದ ಅಮಲಿನಲ್ಲಿ ಹಿಂಬದಿಯಿಂದ ಹೋಗಿ ಯುವತಿಗೆ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿ ಕಾಲ್ಕಿತ್ತಿದ್ದ. ನಂತರ ಯುವತಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಳು. ಇದೀಗ ಪೊಲೀಸರು ಆರೋಪಿ ಚಂದನ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಪುತ್ತೂರು: ಅಮಿತ್ ಶಾ ಭೇಟಿ ಹಿನ್ನೆಲೆ: ಹನುಮಗಿರಿ ದೇವಸ್ಥಾನದ ಸುತ್ತಮುತ್ತ ಹೈ ಅಲರ್ಟ್

Posted by Vidyamaana on 2023-02-10 10:09:02 |

Share: | | | | |


ಪುತ್ತೂರು: ಅಮಿತ್ ಶಾ ಭೇಟಿ ಹಿನ್ನೆಲೆ: ಹನುಮಗಿರಿ ದೇವಸ್ಥಾನದ ಸುತ್ತಮುತ್ತ ಹೈ ಅಲರ್ಟ್

ಪುತ್ತೂರು: ನಾಳೆ ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಹಾಗೇ ಪುತ್ತೂರಿನ ಹನುಮಗಿರಿಯ ದೇಗುಲಕ್ಕೆ ಅಮಿತ್ ಶಾ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಓರ್ವ ಎಸ್‌ಪಿ, ಐವರು ಡಿವೈಎಸ್‌ಪಿ, 10 ಇನ್ಸ್ಪೆಕ್ಟರ್‌ಗಳು ಸೇರಿದಂತೆ 500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ತೆಂಗಿನ ಮರದಿಂದ ಬಿದ್ದು ಧರ್ಮಸ್ಥಳ ಮೂಲದ ವಿಶ್ವಾಂಬರನ್ ಮೃತ್ಯು

Posted by Vidyamaana on 2024-01-22 21:17:53 |

Share: | | | | |


ತೆಂಗಿನ ಮರದಿಂದ ಬಿದ್ದು  ಧರ್ಮಸ್ಥಳ ಮೂಲದ ವಿಶ್ವಾಂಬರನ್ ಮೃತ್ಯು

ಉಳ್ಳಾಲ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನೇತ್ರಾವತಿ ನದಿ ಸಮೀಪದ ಸೋಮನಾಥ ಉಳಿಯ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.


ಮೂಲತ: ಧರ್ಮಸ್ಥಳ ಪುದುವೆಟ್ಟು ನಿವಾಸಿ ಸದ್ಯ ಸಂತೋಷ ನಗರ ದಲ್ಲಿ ನೆಲೆಸಿರುವ ವಿಶ್ವಾಂಬರನ್ (58) ಮೃತಪಟ್ಟವರು.ಎಂದಿನಂತೆ ಇಂದು ಬೆಳಿಗ್ಗೆ ತಾನು ಗುತ್ತಿಗೆ ವಹಿಸಿಕೊಂಡ ಕುತ್ತಾರು ಸೋಮನಾಥ ಉಳಿಯ ಸಮೀಪದ ತೆಂಗಿನಮರಕ್ಕೆ ಹತ್ತಿದ್ದವರು ಕಾಲುಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕೊಣಾಜೆ ಮೂರ್ತೆದಾರರ ಸಂಘದ ನಿರ್ದೇಶಕರಾಗಿದ್ದ ಇವರು, ಮೂರು ತಿಂಗಳ ಹಿಂದಷ್ಟೇ ರಾಜೀನಾಮೆ ನೀಡಿ ಸದಸ್ಯರಾಗಿ ಮುಂದುವರಿದಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದಾನ ಸಮೂಹ ವಿದ್ಯಾಸಂಸ್ಥೆಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Posted by Vidyamaana on 2024-08-15 23:20:49 |

Share: | | | | |


ಸುದಾನ ಸಮೂಹ ವಿದ್ಯಾಸಂಸ್ಥೆಯಲ್ಲಿ  78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆ ಮತ್ತು ಪದವಿಪೂರ್ವ ವಿಭಾಗವು ಜೊತೆಗೂಡಿ ಆಗಸ್ಟ್ 15ರಂದು ಸ್ವಾತಂತ್ರೋತ್ಸವವನ್ನು ಅದ್ದೂರಿಯಾಗಿ ಆಚರಿಸಿತು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಉಜಿರೆ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕಿ ಹರಿಣಿ ಪುತ್ತೂರಾಯ ಧ್ವಜಾರೋಹಣವನ್ನು ಮಾಡಿ ಮಾತನಾಡಿ ಭಾರತದ ಸ್ವಾತಂತ್ರ್ಯಕ್ಕೋಸ್ಕರ ಹುತಾತ್ಮರಾದ ದೇಶಪ್ರೇಮಿಗಳಿಗೆ

ಗೌರವ ನಮನವನ್ನು ಸಲ್ಲಿಸುವುದರ ಜೊತೆಗೆ ಈ ದೇಶದ ಏಕತೆ ಮತ್ತು ರಕ್ಷಣೆಯನ್ನು ಕಾಪಾಡುವಲ್ಲಿ ನಮಗಿರುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.ಮುಂದಿನ ಪ್ರಜೆಗಳಾಗಿ ಬೆಳೆವ ಮಕ್ಕಳು ವಿಕಸಿತ ಭಾರತವನ್ನು ನಿರ್ಮಿಸುವುದಕ್ಕೆ ಪ್ರತಿಜ್ಞಾಬದ್ಧರಾಗಬೇಕು ಎಂದು ನುಡಿದರು. 78ನೇ ವರ್ಷದ ಸ್ವಾತಂತ್ರೋತ್ಸವವನ್ನು  ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಭಾರತಕ್ಕಾಗಿ  ನಾವೇನು ಮಾಡಬೇಕು ಎನ್ನುವುದರ ಬಗ್ಗೆ ಯೋಚಿಸಬೇಕು.ಪ್ರತಿಯೊಬ್ಬ ಪ್ರಜೆಯೂ ಪ್ರಜ್ಞಾವಂತನಾಗುವ ಮೂಲಕದೇಶಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು Banks ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುಪ್ರೀತ್ ಅವರು ಕರೆ ನೀಡಿದರು

ರಾಜಕೀಯ ಸಂಚಲನಕ್ಕೆ ಕಾರಣವಾಯ್ತು ರಾಜಕಾರಣಿಯೊಂದಿಗಿನ ಮಹಿಳೆಯ ಫೊಟೋ: ದೂರು

Posted by Vidyamaana on 2023-04-06 06:28:39 |

Share: | | | | |


ರಾಜಕೀಯ ಸಂಚಲನಕ್ಕೆ ಕಾರಣವಾಯ್ತು ರಾಜಕಾರಣಿಯೊಂದಿಗಿನ ಮಹಿಳೆಯ ಫೊಟೋ: ದೂರು

ಉಪ್ಪಿನಂಗಡಿ : ಮಹಿಳೆಯೋರ್ವರು ಪ್ರತಿಷ್ಠಿತ ರಾಜಕಾರಣಿ ಹಾಗೂ ಜನಪ್ರತಿನಿಧಿಯ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಮಹಿಳೆಯು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈ ಹಿಂದೆ ರಾಜಕೀಯದಲ್ಲಿ ಸಕ್ರಿಯವಾಗಿದ್ದ ನೆಕ್ಕಿಲಾಡಿ ಸಮೀಪದ ಮಹಿಳೆ ಎ.5 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ದೂರು ಸ್ವೀಕರಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಪೋಟೊವನ್ನು ನಕಲು ಮಾಡಲಾಗಿದೆಯೋ ಎಂಬ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಫೋಟೊಗಳು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಯ ಮೇಲೆ ಈ ಫೋಟೋಗಳು ಪರಿಣಾಮ ಬೀರುವ ಸಾಧ್ಯತೆಯಿದೆಯೆಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ

ಅಮಿತ್ ಶಾ ಮಾತನ್ನೇ ಧಿಕ್ಕರಿಸಿದವನ ಬಂಡವಾಳ ಸದ್ಯವೇ ಹೊರಬೀಳಲಿದೆ: ಪುತ್ತಿಲ ವಿರುದ್ಧ ಪ್ರಭಾಕರ ಭಟ್ ವಾಗ್ದಾಳಿ

Posted by Vidyamaana on 2023-04-27 10:29:53 |

Share: | | | | |


ಅಮಿತ್ ಶಾ ಮಾತನ್ನೇ ಧಿಕ್ಕರಿಸಿದವನ ಬಂಡವಾಳ ಸದ್ಯವೇ ಹೊರಬೀಳಲಿದೆ: ಪುತ್ತಿಲ ವಿರುದ್ಧ ಪ್ರಭಾಕರ ಭಟ್ ವಾಗ್ದಾಳಿ

ಪುತ್ತೂರು: ಹಿಂದುತ್ವದ ಹೆಸರಿನಲ್ಲಿ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿಸಿರುವ ಈ ಭಾಗದ ಪ್ರಭಾವಿ ಹಿಂದು ನಾಯಕ ಅರುಣ್ ಕುಮಾರ್ ಪುತ್ತಿಲ ಒಂದೆಡೆ ಗ್ರಾಮಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರೆ ಇನ್ನೊಂದೆಡೆ ಪುತ್ತಿಲ ವಿರುದ್ಧ ಹಿರಿಯ ಹಿಂದು ಮುಖಂಡರು ವಾಗ್ದಾಳಿಗಿಳಿದಿದ್ದಾರೆ. ಗುರುವಾರದ ಅಚ್ಚರಿಯ ಬೆಳವಣಿಗೆಯಲ್ಲಿ ಪುತ್ತೂರು ಭಾಗದ ‘ಹಿಂದು ಹೃದಯ ಸಾಮ್ರಾಟ್’ ಎಂದೇ ಕರೆಯಲ್ಪಡುವ ಡಾ. ಪ್ರಸಾದ್ ಭಂಡಾರಿ ಮತ್ತು ಕರಾವಳಿ ಭಾಗದ ಪ್ರಭಾವಿ ಹಿಂದು ಮುಖಂಡ ಮತ್ತು ಆರೆಸ್ಸೆಸ್ಸಿನ ಹಿರಿಯ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಒಂದೇ ದಿನ ಅರುಣ್ ಕುಮಾರ್ ಪುತ್ತಿಲ ವಿರುದ್ಧ ತಾರಾಮಾರ ವಾಗ್ದಾಳಿ ನಡೆಸಿದ್ದಾರೆ!

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ನೂತನ ಮನೆಯ ಗೃಹಪ್ರವೇಶಕ್ಕೆ ಆಗಮಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್, ‘ಅರುಣ್ ಪುತ್ತಿಲ ಯಾವ ಸೀಮೆಯ ಹಿಂದುತ್ವವಾದಿ..?’ ಎಂದು ಪ್ರಶ್ನಿಸಿದ್ದಾರೆ.

ಅರುಣ್ ಕುಮಾರ್ ದೇವಸ್ಥಾನದ ದುಡ್ಡು ಹೊಡೆದಿದ್ದಾನೆ, ಹಿಂದುಗಳ ಮೇಲೆಯೇ ದೌರ್ಜನ್ಯ ನಡೆಸಿದ್ದ. ಗೋ ಸಾಗಾಟ ತಡೆದಾಗ ಇದ್ದ ಹಿಂದೂ ಸಂಘಟನೆಯ ಕಾರ್ಯಕರ್ತರಲ್ಲಿ ಅರುಣ್ ಕುಮಾರ್ ಕೂಡಾ ಒಬ್ಬ ಅಷ್ಟೇ. ಆ ವ್ಯಕ್ತಿ ಹಿಂದೂಗಳ ವಿರುದ್ಧವೇ ಹೋರಾಟ ಮಾಡಿರುವಂತದ್ದು, ಆಫಿದಾವಿತ್ ನಲ್ಲಿ ಬರೆದುಕೊಂಡಿದ್ದಾರೆ. ಏನೆಲ್ಲಾ ಪ್ರಕರಣಗಳಿವೆ ಅಂತ ಅದನ್ನು ಸ್ವಲ್ಪ ನೋಡಿ, ಅಂಥವರು ಹಿಂದುತ್ವನಾ..!?? ಹಿಂದೂಗಳಿಗೆ ಹೊಡೆದವರು, ದೇವಸ್ಥಾನದ ಹಣ ಹೊಡೆದವರು, ಒಂದು ಹೆಣ್ಣು ಮಗಳು ಸತ್ತಾಗ ಅದನ್ನು ನೋಡದ ಮಾನವೀಯತೆ ಇಲ್ಲದವರು.., ಯಾರದ್ದೋ ಜಾಗದಲ್ಲಿ ದಾರಿ ಬೇಕು ಎಂದು ಜಗಳ ಮಾಡಿ 307 ಹಾಕಿಸಿಕೊಂಡವರು, ಅವರದ್ದು ಎಂಥಾ ಹಿಂದುತ್ವ..!! ಎಂದು ಕಲ್ಲಡ್ಕ ಭಟ್ ಆಕ್ರೋಶ ಹೊರ ಹಾಕಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವ ಹಿಂದುತ್ವದ ಕಾರ್ಯವೂ ಅವನಿಂದ ನಡೆದಿಲ್ಲ ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವುದಾಗಿ ಹೇಳಿದಾಗಲೂ ಧಿಕ್ಕರಿಸಿದ ವ್ಯಕ್ತಿ ಆತ. ಈ ವಿಚಾರವೆಲ್ಲಾ ಗೊತ್ತಿಲ್ಲದೆ ಕೆಲವು ಕಾರ್ಯಕರ್ತರು ಅವನ ಹಿಂದೆ ಓಡಾಡ್ತಿದ್ದಾರೆ, ಎಲ್ಲಿಗೂ ಶೀಘ್ರದಲ್ಲೇ ಆತನ ಬಂಡವಾಳ ತಿಳಿಯಲಿದೆ ಎಂದು ಭಟ್ ಹೇಳಿದ್ದಾರೆ.

ಒಟ್ಟಿನಲ್ಲಿ ಒಂದೇ ದಿನ ಕರಾವಳಿ ಭಾಗದ ಇಬ್ಬರು ಪ್ರಮುಖ ಮತ್ತು ಹಿರಿಯ ಹಿಂದು ಮುಖಂಡರು ತಮ್ಮ ಶಿಷ್ಯನ ವಿರುದ್ಧವೇ ತಾರಾಮಾರ ವಾಗ್ದಾಳಿ ನಡೆಸಿರುವುದು ಸಾರ್ವಜನಿಕರಲ್ಲಿ ಆಶ್ಚರ್ಯವನ್ನುಂಟುಮಾಡಿದ್ದರೆ, ಇದು ಪುತ್ತಿಲ ಅವರ ಶಕ್ತಿ ಕುಂದಿಸಲು ಬಿಜೆಪಿ ನಡೆಸಿರುವ ಮಾಸ್ಟರ್ ಸ್ಟ್ರೋಕ್ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.

Recent News


Leave a Comment: