ಹತ್ತೂರ ಒಡೆಯನ ನೆಲಕ್ಕೆ ಕಾಲಿಟ್ಟ MRPL ತೆಂಕಿಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

ಸುದ್ದಿಗಳು News

Posted by vidyamaana on 2024-07-23 21:30:52 |

Share: | | | | |


ಹತ್ತೂರ ಒಡೆಯನ ನೆಲಕ್ಕೆ ಕಾಲಿಟ್ಟ MRPL ತೆಂಕಿಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಶುಭಾರಂಭ

ಪುತ್ತೂರು: ಪೆಟ್ರೋಲಿಯಂ ಉತ್ಪನ್ನಗಳ ತಯಾರಿಕಾ ಸಂಸ್ಥೆ ಒ.ಎನ್.ಜಿ.ಸಿ.ಯ ಅಂಗ ಸಂಸ್ಥೆಯಾಗಿರುವ ಎಂ.ಆರ್.ಪಿ.ಎಲ್.ನ ಹೈಕ್ಯೂ ರಿಟೇಲ್ ಔಟ್ ಲೆಟ್ ಮಹೇಶ್ವರ ಪೆಟ್ರೋಲಿಯಂ ಜು.21ರಂದು ಮಾಣಿ-ಮೈಸೂರು ರಾಷ್ಟಿಯ ಹೆದ್ದಾರಿಯ ಪುತ್ತೂರಿನ ಬೈಪಾಸ್ ರಸ್ತೆಯ ತೆಂಕಿಲದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಶುಭಾರಂಭ ಗೊಂಡಿತ್ತು . ಸಭಾ ಕಾರ್ಯಕ್ರಮಕ್ಕೂ ಮೊದಲು ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸಂಸ್ಥೆಯ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸವಣೂರು ವಿದ್ಯಾಸಂಸ್ಥೆಗಳ ಸಂಚಾಲಕರಾಗಿರುವ ಸವಣೂರು ಸೀತಾರಾಮ ರೈ, ಸ್ಥಳೀಯ ನಗರ ಸಭಾ ಸದಸ್ಯೆ ಯಶೋಧಾ ಪೂಜಾರಿ ಮತ್ತು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಪೆಟ್ರೋಲ್ ಹಾಕುವ ಯಂತ್ರಗಳ ರಿಬ್ಬನ್ ಕತ್ತರಿಸುವ ಮೂಲಕ ಸಾಂಕೇತಿಕವಾಗಿ ತೈಲ ತುಂಬುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿರುವ ವಾಮನ್ ಪೈ ಅವರು ಉಚಿತ ನೈಟ್ರೋಜನ್ ಪೂರೈಕ್ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಬಳಿಕ, ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯ ಪ್ರಾಂಶುಪಾಲೆ ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಪ್ರಾರಂಭ ಗೊಂಡಿತ್ತು . ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಕಿನಾರ ಅವರು ಅತಿಥಿ ಗಣ್ಯರನ್ನು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆಯ ಕಾರ್ಯಾಚರಣೆಗೆ ಅಧಿಕೃತ ಚಾಲನೆಯನ್ನು ನೀಡಿದರು.

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕರಾಗಿರುವ ಗಣೇಶ್ ಭಟ್ ಅವರು ಮಾತನಾಡಿ, ತಲಪಾಡಿಯ ದುರ್ಗಾಪರಮೇಶ್ವರಿ ದೇವರು ಈ ಸಂಸ್ಥೆಯ ಮಾಲಕರಾಗಿರುವ ಶಿವಪ್ರಸಾದ್ ಶೆಟ್ಟಿ ಅವರಿಗೆ ಕುಲದೇವರಾಗಿರುವ ಕಾರಣ ತಲಪಾಡಿ ಕ್ಷೇತ್ರöಕ್ಕೂ ಪುತ್ತೂರಿಗೂ ವಿಶೇಷ ನಂಟಿದೆ ಎಂದು ಹೇಳಿದರು. ಶಿವಪ್ರಸಾದ್ ಶೆಟ್ಟಿ ಅವರು ದೈವಭಕ್ತರಾಗಿದ್ದು ಅವರ ಸತ್ಕರ್ಮ ಮತ್ತು ದೇವರ ಮೇಲೆ ಅವರಿಟ್ಟ ಭಕ್ತಿ ಹಾಗೂ ಗುರು-ಹಿರಿಯರ ಮೇಲಿನ ಗೌರವ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ದೈವ-ದೇವರ ಅನುಗ್ರಹದೊಂದಿಗೆ ಈ ನೂತನ ಸಂಸ್ಥೆಯು ಉತ್ತಮ ಸೇವೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿ ಇನ್ನಷ್ಟು ಹೆಸರುವಾಸಿಯಾಗಲಿ ಎಂದು ಅವರು ಶುಭಾಶೀರ್ವಾದ ನೀಡಿದರು.

Additional Image

ದ.ಕ. ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಭಗವಂತನನ್ನು ತೋರಿಸುವವ ಗುರು, ಜ್ಞಾನವನ್ನು ಕೊಡುವವ ಗುರು ಎಂಬ ಮಾತನ್ನು ನಮ್ಮ ಹಿರಿಯತು ಹೇಳಿದ್ದಾರೆ. ಅಂತಹ ಗುರುವಿನ ಪ್ರೇರಣೆ ಇರತಕ್ಕಂತಹ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಪುಣ್ಯಸಂದರ್ಭವಾಗಿರುವ ಈ ಗುರುಪೂರ್ಣಮಿಯ ದಿನದಂದು ಈ ಪುತ್ತೂರಿನ ಪುಣ್ಯ ನೆಲದಲ್ಲಿ ಮಹೇಶ್ವರ ಪೆಟ್ರೋಲಿಯಂ ಸಂಸ್ಥೆ ಉದ್ಘಾಟನೆಗೊಂಡಿರುವುದು ಈ ಸಂಸ್ಥೆಗೆ ಗುರುಹಿರಿಯರ ಆಶೀರ್ವಾದ ಇದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದರು. ಈ ಸಂಸ್ಥೆಯು ಎಂ.ಆರ್.ಪಿ.ಎಲ್.ನ ಒಂದಹ ಅತ್ಯುನ್ನತ ಸಂಸ್ಥೆಯಾಗಿ ಬೆಳೆಯುತ್ತದೆ, ಮಾತ್ರವಲ್ಲದೇ ಶಿವಪ್ರಸಾದ್ ಶೆಟ್ಟಿ ಅವರು ಓರ್ವ ಯಸಸ್ವಿ ಪೆಟ್ರೋಲಿಯಂ ಉದ್ಯಮಿಯಾಗಿ ಬೆಳೆಯುತ್ತಾರೆ ಎಂಬ ವಿಶ್ವಾಸವನ್ನು ಕಟೀಲ್ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಶಿವಪ್ರಸಾದ್ ಅವರು ಭೂವ್ಯವಹಾರದಲ್ಲಿ ಓರ್ವ ಯಶಸ್ವಿ ಉದ್ಯಮಿಯಾಗಿ ಪುತ್ತೂರಿನ ಮಟ್ಟಿಗೆ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಶ್ರೀಮಂತಿಕೆ ಬಂದಾಗ ಕೆಲವರಿಗೆ ಎಲ್ಲವೂ ಮರೀತದೆ, ಆದರೆ ಶಿವಪ್ರಸಾದ್ ಅವರು ತಮ್ಮಲ್ಲಿರುವ ಹೃದಯ ಶ್ರೀಮಂತಿಕೆಯಿAದ ತಮ್ಮ ವ್ಯವಹಾರದ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಶಿವಪ್ರಸಾದ್ ಅವರು ಓರ್ವ ಧಾರ್ಮಿಕ ಮನೋಭಾವದ ವ್ಯಕ್ತಿ ಎಂಬುದಕ್ಕೆ ಉದಾಹರಣೆಯಾಗಿ, ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಸಂದರ್ಭದಲ್ಲಿ ಒಂದು ಗುಡಿ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ತನ್ನದು ಎಂದು ಮಾತುಕೊಟ್ಟು ಅದರಂತೆ ನಡೆದುಕೊಂಡ ವಿಚಾರವನ್ನು ಕಟೀಲ್ ಅವರು ಸಭೆಯ ಮುಂದೆ ಬಿಚ್ಚಿಟ್ಟರು. ತೈಲೋದ್ಯಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು ಎಂ.ಆರ್.ಪಿ.ಎಲ್, ಭಾರತ್ ಪೆಟ್ರೋಲಿಯಂ ಸಹಿತ ಎಲ್ಲಾ ಸಂಸ್ಥೆಗಳೂ ಸ್ಪರ್ಧಾತ್ಮಕ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇದು ಈ ಕ್ಷೇತ್ರದಲ್ಲಿ ಅಪರಿಮಿತ ಅವಕಾಶಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಪುತ್ತೂರು ಪರಿಸರದಲ್ಲಿ ಎಂ.ಆರ್.ಪಿ.ಎಲ್.ನ ಪ್ರಥಮ ಔಟ್ ಲೆಟ್ ಪ್ರಾರಂಭಿಸುವ ಅವಕಾಶ ಶಿವಪ್ರಸಾದ್ ಅವರಿಗೆ ಸಿಕ್ಕಿರುವುದಕ್ಕೆ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಮತ್ತು ಈ ಉದ್ಯಮದಲ್ಲಿ ಶಿವಪ್ರಸಾದ್ ಅವರಿಗೆ ಯಶಸ್ಸು ಲಭಿಸಲಿ ಎಂಬ ಸದಾಶಯದ ನುಡಿಗಳನ್ನು ನಳಿನ್ ಕುಮಾರ್ ಕಟೀಲ್ ನೀಡಿದರು. 

Additional Image


Additional Image

ವ್ಯಕ್ತಿಯೊಬ್ಬರು ಉದ್ಯಮದಲ್ಲಿ ಬೆಳೆದರೂ ಕೂಡ ಹೇಗೆ ತನ್ನ ಪಾಡಿಗೆ ತನ್ನ ವ್ಯವಹಾರವನ್ನು ನಡೆಸಿಕೊಂಡು ಸಾಮಾಜಿಕವಾಗಿಯೂ, ಧಾರ್ಮಿಕವಾಗಿಯೂ ತನ್ನನ್ನು ತೊಡಗಿಸಕೊಳ್ಳುತ್ತಾರೆ ಎಂಬುದಕ್ಕೆ ಶಿವಪ್ರಸಾದ್ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು. ಕಳೆದ ಸಲ ಮಹಾಲಿಂಗೇಶ್ವರ ದೇವರಿಗೆ ಒಂದಷ್ಟು ಜನರ ಸಹಕಾರದೊಂದಿಗೆ ಬಂಗಾರದ ಮಾಲೆಯನ್ನು ಒಪ್ಪಿಸುವಲ್ಲಿ ಮುಂದಾಳತ್ವವನ್ನು ಶಿವಪ್ರಸಾದ್ ಅವರು ವಹಿಸಿಕೊಂಡಿರುವುದು ಅವರಲ್ಲಿರುವ ಧಾರ್ಮಿಲ ಪ್ರಜ್ಞೆಗೆ ಸಾಕ್ಷಿ ಎಂಬ ವಿಚಾರವನ್ನು ಶಾಸಕರು ಈ ಸಂದರ್ಬದಲ್ಲಿ ವಿಶೇಷವಾಗಿ ಶ್ಲಾಘಿಸಿದರು.

 Share: | | | | |


ದಕ್ಷಿಣಕನ್ನಡ ಜಿಲ್ಲೆಗೆ ಸೇರಿದಂತೆ ರಾಜ್ಯ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ

Posted by Vidyamaana on 2024-01-15 04:50:45 |

Share: | | | | |


ದಕ್ಷಿಣಕನ್ನಡ ಜಿಲ್ಲೆಗೆ ಸೇರಿದಂತೆ ರಾಜ್ಯ ಬಿಜೆಪಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ

ಮಂಗಳೂರು, ಜ.15: ರಾಜ್ಯದಲ್ಲಿ ಪಕ್ಷದ 39 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಮಾಡಿದ್ದಾರೆ. 


ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಸತೀಶ್ ಕುಂಪಲ, ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿ ಕಿಶೋರ್ ಕುಂದಾಪುರ ಅವರನ್ನು ಆಯ್ಕೆ ಮಾಡಲಾಗಿದೆ.ಶಿವಮೊಗ್ಗ - ಟಿಡಿ ಮೇಘರಾಜ್, ಉತ್ತರ ಕನ್ನಡ - ಎನ್.ಎಸ್ ಹೆಗಡೆ, ಕೊಡಗು - ರವಿ ಕಾಳಪ್ಪ , ಹಾಸನ - ಸಿದ್ದೇಶ್ ನಾಗೇಂದ್ರ, ಬೆಂಗಳೂರು ದಕ್ಷಿಣ- ಸಿಕೆ ರಾಮಮೂರ್ತಿ ಹೀಗೆ ಎಲ್ಲ ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ

ಸುಳ್ಳು ಭರವಸೆಯನ್ನು ಕೊಡುವುದಿಲ್ಲ. ಕೊಟ್ಟ ಮಾತಿಗೆ ತಪ್ಪಲಾರೆ: ಅಶೋಕ್ ರೈ

Posted by Vidyamaana on 2023-05-04 11:51:21 |

Share: | | | | |


ಸುಳ್ಳು ಭರವಸೆಯನ್ನು ಕೊಡುವುದಿಲ್ಲ. ಕೊಟ್ಟ ಮಾತಿಗೆ ತಪ್ಪಲಾರೆ: ಅಶೋಕ್ ರೈ

ಪುತ್ತೂರು: ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ ವೋಟು ಸಿಗಬೇಕು ಎಂದು ಜನತೆಗೆ ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಮತ್ತು ಮಾತು ಕೊಟ್ಟಿದ್ದರೆ ಅದಕ್ಕೆ ತಪ್ಪಿ ನಡೆಯಲಾರೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಹೇಳಿದರು.

ನಿಮ್ಮ ಫ್ರೀ ಯುನಿಟ್ ಲೆಕ್ಕಾಚಾರ ಹೇಗೆ? – ಇಲ್ಲಿದೆ ಮಾಹಿತಿ

Posted by Vidyamaana on 2023-06-03 06:25:59 |

Share: | | | | |


ನಿಮ್ಮ ಫ್ರೀ ಯುನಿಟ್ ಲೆಕ್ಕಾಚಾರ ಹೇಗೆ? – ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ‘ಗ್ಯಾರಂಟಿ’ ಆಶ್ವಾಸನೆಗಳನ್ನು ಹಂತಹಂತವಾಗಿ ಜಾರಿಗೊಳಿಸುವ ನಿರ್ಧಾರವನ್ನು ಮಾಡಿದೆ. ಈ ಐದು ಗ್ಯಾರಂಟಿಗಳ ಪೈಕಿ ಇದೀಗ ಹೆಚ್ಚು ಚರ್ಚೆಗೆ ಒಳಗಾಗಿರುವುದು 200 ಯುನಿಟ್ ಉಚಿತ ವಿದ್ಯುತ್ ಸೌಲಭ್ಯ. ಇದರ ಲೆಕ್ಕಾಚಾರ ಇನ್ನೂ ಸ್ಪಷ್ಟವಾಗಿಲ್ಲದ ಕಾರಣ ಈ ವಿಚಾರದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಮುಂದುವರೆದಿದೆ.


ಆದರೆ ನಿನ್ನೆ (ಜೂ.03) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿರುವ ಪ್ರಕಾರ, ಪ್ರತೀ ತಿಂಗಳು ವಿದ್ಯುತ್ ಬಳಕೆದಾರರು 200 ಯುನಿಟ್ ವರೆಗೆ ಬಳಸುವ ವಿದ್ಯುತ್ ಗೆ ಬಿಲ್ ಕಟ್ಟಬೇಕಾಗಿಲ್ಲ ಎನ್ನುವುದು ಸಂಪೂರ್ಣ ಸತ್ಯವಲ್ಲ! ಆದರೆ ಇದು ಪೂರ್ತಿ ಸುಳ್ಳೂ ಅಲ್ಲ! ಇಲ್ಲಿ ಸರಕಾರ ಒಂದು ಬುದ್ದಿವಂತಿಕೆಯನ್ನು ಬಳಸಿದೆ. ಒಂದು ಕುಟುಂಬ ಕಳೆದ 12 ತಿಂಗಳಿನಲ್ಲಿ ಎಷ್ಟು ವಿದ್ಯುತ್ ಬಳಸಿದೆ ಎಂದು ಸರಾಸರಿ ಲೆಕ್ಕ ತೆಗೆದು ಅವರ ಮೇಲೆ 10% ಯುನಿಟ್ ಸೇರಿಸಿ ಆ ಕುಟುಂಬದ ಕಟ್ ಆಫ್ ಯುನಿಟನ್ನು ಫಿಕ್ಸ್ ಮಾಡಲಾಗುತ್ತದೆ. ಆ ಯುನಿಟ್ ಆಧಾರದಲ್ಲಿ ಆ ಕುಟುಂಬಕ್ಕೆ ಜುಲೈ ತಿಂಗಳ ಬಿಲ್ಲಿನಿಂದ ಪ್ರಾರಂಭಗೊಳ್ಳುವಂತೆ ಆಗಸ್ಟ್ ತಿಂಗಳಿನಿಂದ ಉಚಿತ ವಿದ್ಯುತ್ ಸೌಲಭ್ಯವನ್ನು ನೀಡಲಾಗುತ್ತದೆ.

*ಇದಕ್ಕೊಂದು ಉದಾಹರಣೆ ಲೆಕ್ಕ ಇಲ್ಲಿದೆ ನೋಡಿ..*

ಈ ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಯೂನಿಟ್ ಗಳನ್ನು ಒಟ್ಟಾಗಿ ಕೂಡಿಸಿ, ಅದನ್ನು 12 ರಿಂದ ಬಾಗಿಸಿ ಮತ್ತೆ 1.1 ರಿಂದ ಗುಣಿಸಿದಾಗ ಬರುವ ಮೊತ್ತದ ಒಳಗೆ ಈಗಿನ ನಿಮ್ಮ ಉಚಿತ ವಿದ್ಯುತ್ ಬಳಕೆಯ ಯೂನಿಟ್ ಇರತಕ್ಕದ್ದು. ಮತ್ತೆ ಅದು 200 ಯೂನಿಟ್ ಗಳನ್ನು ಮೀರಿರಬಾರದು.


*ಇದನ್ನು ಈ ಕೆಳಗಿನ ಉದಾಹರಣೆ ಮೂಲಕ ವಿವರಿಸಲಾಗಿದೆ:*

 ಸಾಮಾನ್ಯ ಮಧ್ಯಮ ಕುಟುಂಬದ ಉದಾಹರಣೆ 

ತಿಂಗಳು 1 -  180 ಯೂನಿಟ್ 

ತಿಂಗಳು 2 -  185 ಯೂನಿಟ್

ತಿಂಗಳು 3 -  185 ಯೂನಿಟ್

ತಿಂಗಳು 4 -  180 ಯೂನಿಟ್

ತಿಂಗಳು 5 -  185 ಯೂನಿಟ್

ತಿಂಗಳು 6 -  175 ಯೂನಿಟ್

ತಿಂಗಳು 7 -  180 ಯೂನಿಟ್ 

ತಿಂಗಳು 8 -  185 ಯೂನಿಟ್

ತಿಂಗಳು 9 -  185 ಯೂನಿಟ್

ತಿಂಗಳು 10 - 178 ಯೂನಿಟ್

ತಿಂಗಳು 11 - 180 ಯೂನಿಟ್

ತಿಂಗಳು 12 - 175 ಯೂನಿಟ್

ಒಟ್ಟು 2173 ಯೂನಿಟ್ಗಳು.

ಸರಾಸರಿ ಅಂದರೆ 2173/12= 181 ಯೂನಿಟ್ಗಳು. 10% ಹೆಚ್ಚವರಿ ಅಂದರೆ 181*1.1= 191 ಯೂನಿಟ್ಗಳು. ಹೀಗಿದ್ದಲ್ಲಿ ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಲು ಅರ್ಹರು..

ಬಡ ಕುಟುಂಬದ ಉದಾಹರಣೆ

ತಿಂಗಳು 1 -  70 ಯೂನಿಟ್ 

ತಿಂಗಳು 2 -  80 ಯೂನಿಟ್

ತಿಂಗಳು 3 -  60 ಯೂನಿಟ್

ತಿಂಗಳು 4 -  55 ಯೂನಿಟ್

ತಿಂಗಳು 5 -  65 ಯೂನಿಟ್

ತಿಂಗಳು 6 -  70 ಯೂನಿಟ್

ತಿಂಗಳು 7 -  85 ಯೂನಿಟ್ 

ತಿಂಗಳು 8 -  55 ಯೂನಿಟ್

ತಿಂಗಳು 9 -  70 ಯೂನಿಟ್

ತಿಂಗಳು 10 - 75 ಯೂನಿಟ್

ತಿಂಗಳು 11 - 80 ಯೂನಿಟ್

ತಿಂಗಳು 12 - 55 ಯೂನಿಟ್

ಒಟ್ಟು 820 ಯೂನಿಟ್ಗಳು.

ಸರಾಸರಿ ಅಂದರೆ 820/12= 68.3 ಯೂನಿಟ್ಗಳು. 10% ಹೆಚ್ಚವರಿ ಅಂದರೆ 68.3*1.1= 75 ಯೂನಿಟ್ಗಳು. ಹೀಗಿದ್ದಲ್ಲಿ ನೀವು 75 ಯೂನಿಟ್ ಉಚಿತ ವಿದ್ಯುತ್ ಬಳಸಲು ಮಾತ್ರ ಅರ್ಹರು. ನೀವು 200 ಯೂನಿಟ್ ಬಳಸುವಂತಿಲ್ಲ. 75 ಯೂನಿಟ್ ಗಿಂತ ಜಾಸ್ತಿ ಬಳಸಿದ್ದಲ್ಲಿ ಬಿಲ್ ಕಟ್ಟತಕ್ಕದ್ದು.

ಇದನ್ನು ಕ್ರಿಕೆಟ್ ನಲ್ಲಿ ಬಳಸುವ ಡಕ್ ವರ್ತ್ ಲೂಯಿಸ್ ನಿಯಮಕ್ಕೆ ಅನ್ವಯಿಸಿಕೊಳ್ಳಬಹುದೇನೋ. ಒಟ್ಟಿನಲ್ಲಿ ಈ ಲೆಕ್ಕಾಚಾರವವನ್ನು ಅರ್ಥಮಾಡಿಕೊಳ್ಳದೇ, ನಮಗೆ 200 ಯುನಿಟ್ ಫ್ರೀ ಎಂದು ಒಟ್ರಾಶಿ ಕರೆಂಟ್ ಯೂಸ್ ಮಾಡಿದ್ರೆ ನಿಮ್ಗೆ ‘ಶಾಕ್’ ಹೊಡೆಯೋದಂತೂ ಗ್ಯಾರಂಟಿ!

BREAKING : ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ : ಲ್ಯಾಬ್ ರಿಪೋರ್ಟ್‌ ಬಿಡುಗಡೆ ಮಾಡಿದ ಆಹಾರ ಇಲಾಖೆ

Posted by Vidyamaana on 2024-07-31 20:48:56 |

Share: | | | | |


BREAKING : ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಆರೋಪ : ಲ್ಯಾಬ್ ರಿಪೋರ್ಟ್‌ ಬಿಡುಗಡೆ ಮಾಡಿದ ಆಹಾರ ಇಲಾಖೆ

ಬೆಂಗಳೂರು : ಕುರಿ ಮಾಂಸದ ಜೊತೆ ನಾಯಿ ಮಾಂಸ ಬೆರೆಸಿದ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಲ್ಯಾಬ್ ರಿಪೋರ್ಟ್ ನಲ್ಲಿ ಮೇಕೆ ಮಾಂಸ ಅನ್ನೋದು ಇದೀಗ ದೃಢವಾಗಿದೆ. ಈ ಕುರಿತು ಆಹಾರ ಇಲಾಖೆಯು ಮಾಂಸದ ಸ್ಯಾಂಪಲ್ ಟೆಸ್ಟಿಂಗ್ ವರದಿಯನ್ನು ಪ್ರಕಟಿಸಿದೆ.

ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.ಈ ಹಿನ್ನೆಲೆಯಲ್ಲಿ ಮಾಂಸ ವಶಕ್ಕೆ ಪಡೆದು ಪರಿಶೀಲನೆ ಮಾಡಿದ ಆಹಾರ ಸುರಕ್ಷತಾ ಇಲಾಖೆಯು ಎಲ್ಲ ಬಾಕ್ಸ್‌ನಲ್ಲಿರುವುದು ಕುರಿ ಮಾಂಸ ಎಂದು ಪರೀಕ್ಷಾ ವರದಿ ನೀಡಿದೆ.

ಬೆಳ್ತಂಗಡಿ : ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಪ್ರಕರಣ

Posted by Vidyamaana on 2023-06-14 10:03:17 |

Share: | | | | |


ಬೆಳ್ತಂಗಡಿ : ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರದಲ್ಲಿ ಜಾತಿ ನಿಂದನೆ, ಹಲ್ಲೆ ಪ್ರಕರಣ

ಬೆಳ್ತಂಗಡಿ: ವಾಟ್ಸಾಪ್ ಸ್ಟೇಟಸ್ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಪ್ರಕರಣದ ಆರೋಪಿಗಳ ಮಂಗಳೂರು ಜಿಲ್ಲಾ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ರಂಜಿತ್ ಮದ್ದಡ್ಕ(30) ಮತ್ತು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಉಮೇಶ್ ಕುಲಾಲ್(35) ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಮಂಗಳೂರು ಜಿಲ್ಲಾ ನ್ಯಾಯಾಲಯದ ಮುಂದೆ ಜೂನ್ 13 ರಂದು ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಬ್ಬರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು. ಇಬ್ಬರು ಆರೋಪಿಗಳನ್ನು ಮಂಗಳೂರು ಸಬ್ ಜೈಲಿಗೆ ಕಳುಹಿಸಲಾಗಿದೆ.ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ಕೆಂಬರ್ಜೆಯ ಶೇಖರ ನಾಯ್ಕ ಎಂಬವರ ಪುತ್ರ ಯಶವಂತ ನಾಯ್ಕ (19ವ)ರವರು ನೀಡಿದ ದೂರಿನಂತೆ ಬೆಳ್ತಂಗಡಿ ಮಂಡಲ ಬಿಜೆಪಿ

ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ರಂಜಿತ್ ಮದಡ್ಕ ಮತ್ತಿತರರ ವಿರುದ್ಧ ಮೇ.29 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 504, 506, 323 ಜೊತೆಗೆ 34 ಐಪಿಸಿ ಮತ್ತು ಕಲಂ 3(1)(S) ಎಸ್.ಸಿ/ ಎಸ್.ಟಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಾಕ್ಟೀಸ್‌ಗೆ ಚಕ್ಕರ್ ಹಾಕಿ ಟೀಚರ್ ಜೊತೆ ಸೆಕ್ಸ್, ಆಯಪ್ ಮೂಲಕ ಮಗನ ಸರಸ ಪತ್ತೆ ಹಚ್ಚಿದ ತಾಯಿ!

Posted by Vidyamaana on 2023-12-17 12:32:49 |

Share: | | | | |


ಪ್ರಾಕ್ಟೀಸ್‌ಗೆ ಚಕ್ಕರ್ ಹಾಕಿ ಟೀಚರ್ ಜೊತೆ ಸೆಕ್ಸ್, ಆಯಪ್ ಮೂಲಕ ಮಗನ ಸರಸ ಪತ್ತೆ ಹಚ್ಚಿದ ತಾಯಿ!

ವಶಿಂಗ್ಟನ್(ಡಿ.17) ರಗ್ಬಿ ಆಟಗಾರನಾಗಬೇಕೆಂಬ ಮಗನ ಆಸೆಯನ್ನು ಈಡೇರಿಸಲು ತಾಯಿ ಈಡೇರಿಸಲು ಮುಂದಾಗಿದ್ದಾಳೆ. ಇದಕ್ಕಾಗಿ ಖ್ಯಾತ ರಗ್ಬಿ ಕ್ಲಬ್‌ಗೆ ದುಬಾರಿ ಫೀಸ್ ನೀಡಿ ಸೇರಿಸಲಾಗಿತ್ತು. 18 ವರ್ಷದ ಮಗ ಆರಂಭದಲ್ಲಿ ರಗ್ಬೀ ಅಭ್ಯಾಸಕ್ಕೆ ತೆರಳುತ್ತಿದ್ದ. ಆದರೆ ಬರುಬರುತ್ತಾ ಮನಗ ರಗ್ಬೀ ಆಟ ಮೈದಾನದ ಬದಲು ಬೇರೆಡೆ ತಿರುಗಿತ್ತು.,ತನ್ನ 26 ವರ್ಷದ ಹೈಸ್ಕೂಲ್ ಟೀಚರ್ ಜೊತೆ ಕಾಮಕ್ರೀಡೆಯಲ್ಲಿ ಪುತ್ರನ ಆಟ ನಿರಂತರವಾಗಿತ್ತು. ಪ್ರತಿ ದಿನ ಕೋಚ್ ದೂರು ಸ್ವೀಕರಿಸುತ್ತಿದ್ದ ತಾಯಿ ಮಗನ ಅಸಲಿ ಕತೆ ಪತ್ತೆ ಹಚ್ಚಲು ಕುಟುಂಬ ಅಭಿವೃದ್ಧಿಪಡಿಸಿದ ಆಯಪ್ ಬಳಸಿದ್ದಾರೆ. ಬಳಿಕ ಟೀಚರ್ ಜೊತೆ ಕಾಮಕ್ರೀಡೆಯಲ್ಲಿ ತೊಡಗಿದ್ದ ವೇಳೆಯೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೀಗ ಪೊಲೀಸ್ ಪ್ರಕರಣ ದಾಖಲಾಗಿದ್ದು, ಟೀಚರ್‌ಗೆ ಸಂಕಷ್ಟ ಹೆಚ್ಚಾಗಿದೆ.ಅಮೆರಿಕದ ವಾಶಿಂಗ್ಟನ್‌ನಲ್ಲಿ ಈ ಘಟನೆ ನಡೆದಿದೆ.


18 ವರ್ಷದ ಪುತ್ರ ಕಾಡಿ ಬೇಡಿ ರಗ್ಬಿ ಆಟಕ್ಕೆ ಸೇರಿಕೊಂಡಿದ್ದ. ದುಬಾರಿ ಫೀಸ್ ಹೊಂದಿಸುವುದು ತಾಯಿಗೆ ಪ್ರಯಾಸದ ಕೆಲಸವಾಗಿತ್ತು. ಆದರೆ ಅಮೆರಿಕ ಸೇರಿದಂತೆ ಯೂರೋಪ್‌ನಲ್ಲಿ ರಗ್ಬಿ ಕ್ರೀಡೆಗಿರುವ ಪ್ರಾಮುಖ್ಯತೆ, ವೃತ್ತಿಪರ ರಗ್ಬಿಯಲ್ಲಿ ತೊಡಗಿಸಿಕೊಂಡರೆ ಪುತ್ರನ ಲೈಫ್ ಸೆಟ್ಲ್ ಎಂದು ತಾಯಿ ಭಾವಿಸಿದ್ದಾಳೆ. ಹೀಗಾಗಿ ಫೀಸ್ ನೀಡಿ ರಗ್ಬಿ ಕ್ಲಬ್‌ಗೆ ಸೇರಿಸಿದ್ದಾಳೆ.ಆರಂಭಿಕ ದಿನದಲ್ಲಿ ಪ್ರತಿ ದಿನ ಸಂಜೆ ರಗ್ಬಿ ಅಭ್ಯಾಸಕ್ಕೆ ತೆರಳುತ್ತಿದ್ದ ಪುತ್ರ, ಬಳಿಕ ಒಂದೊಂದು ದಿನ ನಾಪತ್ತೆಯಾಗುತ್ತಿದ್ದ. ಬರುಬರುತ್ತಾ ಅಭ್ಯಾಸಕ್ಕೆ ಚಕ್ಕರ್ ಹಾಕುವುದು ನಿರಂತರವಾಗಿತ್ತು. ಹೀಗಾಗಿ ರಗ್ಬಿ ಕೋಚ್ ನೇರವಾಗಿ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆರಂಭಿಕ ದಿನಗಳಲ್ಲಿ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳದ ತಾಯಿ, ಪದೇ ಪದೇ ದೂರು ಕೇಳಿಬಂದಾಗ ಪುತ್ರ ಅಭ್ಯಾಸಕ್ಕೆಂದು ತೆರಳಿ ಎಲ್ಲಿಗೆ ಹೋಗುತ್ತಿದ್ದಾನೆ ಅನ್ನೋದು ಪತ್ತೆ ಹಚ್ಚಲು ಮುಂದಾಗಿದ್ದಾರೆ.


ಪತ್ತೆ ಹಚ್ಚುವ ಕಾರ್ಯಕ್ಕೆ ಕುಟುಂಬ 2008ರಲ್ಲಿ ಅಭಿವೃದ್ಧಿಪಡಿಸಿದ ಆಯಪ್ ನೆರವು ಪಡೆದಿದ್ದಾಳೆ.2008ರಲ್ಲಿ ಈ ಕುಟುಂಬದ ಸಾಫ್ಟ್‌ವೇರ್ ಎಂಜಿನಿಯರ್ಸ್ ಕುಟುಂಬಸ್ಥರಿಗೆ ಆಯಪ್ ಅಭಿವೃದ್ಧಿಪಡಿಸಲಾಗಿತ್ತು. ಈ ಆಯಪ್ ಮೂಲಕ ಕುಟುಂಬದ ಸದಸ್ಯರು ಎಲ್ಲಿದ್ದಾರೆ ಅನ್ನೋ ಮಾಹಿತಿ ನಿಖರವಾಗಿ ಹೇಳಲಿದೆ. ಇಷ್ಟೇ ಅಲ್ಲ ಕುಟುಂಬದ ಜೊತೆಗೆ ಸಂಪರ್ಕ, ಮೆಸೆಜ್ ,ಡೇಟಾ ಶೇರಿಂಗ್, ಫೈಲ್ಟ್ರಾನ್ಸ್‌ಫರ್ ಸೇರಿದಂತೆ ಹಲವು ಇತರ ಫೀಚರ್ಸ್ ಕೂಡ ಪರಿಚಯಿಸಲಾಗಿತ್ತು.


ಈ ಆಯಪ್ ಬಳಸಿ ಪುತ್ರ ಎಲ್ಲಿದ್ದಾನೆ ಅನ್ನೋ ಲೋಕೇಶನ್ ಪತ್ತೆ ಹಚ್ಚಿದ್ದಾರೆ. ಪುತ್ರನ ಲೋಕೇಶನ್ ಪಾರ್ಕ್ ರೋಡ್ ಎಂದು ತೋರಿಸಿತ್ತು. ತಕ್ಷಣವೇ ಪಾರ್ಕ್ ರೋಡ್‌ಗೆ ತೆರಳಿದ ತಾಯಿಗೆ ಆಘಾತವಾಗಿದೆ. ಪಾರ್ಕ್ ರೋಡ್ ಬಳಿ ನಿಲ್ಲಿಸಿದ ಕಾರಿನಲ್ಲಿ 26 ವರ್ಷದ ಸೌಥ್‌ಮೆಕ್ಲೆನಬರ್ಗ್ ಹೈಸ್ಕೂಲ್ ಟೀಚರ್ ಗೆಬ್ರಿಯೆಲಾ ಕಾರ್ತಾಯ ನ್ಯೂಫೆಲ್ಡ್ ಜೊತೆ ಸೆಕ್ಸ್‌ನಲ್ಲಿ ತೊಡಗಿಕೊಂಡಿದ್ದ. ರೆಡ್‌ಹ್ಯಾಂಡ್ ಆಗಿ ಪುತ್ರನ ಹಿಡಿದ ತಾಯಿ, ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿಕ್ಷಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತರನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿರುವ ಸೇರಿದಂತೆ ಇತರ ಎರಡು ಕೇಸು ದಾಖಲಾಗಿದೆ. ಇತ್ತ ಪುತ್ರನಿಗೆ ಕೌನ್ಸಿಲಿಂಗ್ ನೀಡಲಾಗುತ್ತಿದೆ.

Recent News


Leave a Comment: