ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಸುದ್ದಿಗಳು News

Posted by vidyamaana on 2024-03-23 15:52:34 | Last Updated by Vidyamaana on 2024-03-23 15:52:34

Share: | | | | |


ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

*💥Whats App Group ಗೆ ಸೇರಲು ಕ್ಲಿಕ್ ಮಾಡಿ

*ಹಣ ತೆಗೆದುಕೊಂಡು ಹೋದ ವಿಚಾರ*:  ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ  ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ  ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


 Share: | | | | |


ವಿಟ್ಲ : 400ಕೆ.ವಿ ಹೈ ಟೆನ್ಶನ್ ಕಾಮಗಾರಿ ಆರಂಭ

Posted by Vidyamaana on 2023-10-10 15:30:58 |

Share: | | | | |


ವಿಟ್ಲ : 400ಕೆ.ವಿ ಹೈ ಟೆನ್ಶನ್ ಕಾಮಗಾರಿ ಆರಂಭ

ವಿಟ್ಲ : ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈ ಟೆನ್ಶನ್ ಮಾರ್ಗವನ್ನು ಪುಣಚ ಗ್ರಾಮದ ಬೈರಿಕಟ್ಟೆಯಿಂದ ಕಾಮಗಾರಿ ಆರಂಭ ಮಾಡಲು ಮುಂದಾದಾಗ ಪರಿಸರದ ರೈತ ವರ್ಗದವರು ಪ್ರತಿಭಟಿಸಿದ ಘಟನೆ ನಡೆದಿದೆ.

ವಿಷಯ ತಿಳಿದು ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕಾಮಗಾರಿಗಳನ್ನು ನಿಲ್ಲಿಸಬೇಕು ಮತ್ತು ಈ ಭಾಗದ ರೈತರ ಸಭೆ ಕರೆದು ಚರ್ಚಿಸಬೇಕು ಎಂದರು.

ಇದಕ್ಕೆ ಸ್ಪಂದಿಸಿದ ಡಿ.ಸಿಯವರು ಕಾಮಗಾರಿಯನ್ನು ಈ ಕೂಡಲೇ ನಿಲ್ಲಿಸುವಂತೆ ಬಂಟ್ವಾಳ ತಹಶೀಲ್ದಾರ್ ರವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ಮಂಡಲ ಬಿಜೆಪಿ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್,ವಿಟ್ಲ ಬಿಜೆಪಿ ಪ್ರಮುಖರಾದ ಕರುಣಾಕರ ನಾಯ್ತೊಟ್ಟು,ಪುಣಚ ಪಂಚಾಯತ್ ಸದಸ್ಯರಾದ ಅಶೋಕ್ ಮೂಡಂಬೈಲು, ತೀರ್ಥರಾಮ್, ರೈತ ಮುಖಂಡರಾದ ಸಂಜೀವ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಅಜ್ಜಿಕಟ್ಟೆ ರಿಫಾಯಿಯ್ಯ ದಫ್ ಇದರ ನೂತನ ಕಮಿಟಿ ರಚನೆ

Posted by Vidyamaana on 2023-08-19 13:18:46 |

Share: | | | | |


ಅಜ್ಜಿಕಟ್ಟೆ ರಿಫಾಯಿಯ್ಯ ದಫ್ ಇದರ ನೂತನ ಕಮಿಟಿ ರಚನೆ

ಪುತ್ತೂರು: ರಿಫಾಯಿಯ್ಯ ದಫ್ ಕಮೀಟಿ ಅಜ್ಜಿಕಟ್ಟೆ ಇದರ ಸಭೆ ಜೂ.30ರಂದು ನಡೆಯಿತು. ಜಮಾತಿನ ಗೌರವ್ಯಾಧ್ಯಕ್ಷ ಇಬ್ರಾಹಿಂ ಮುಲಾರ್, ಅಧ್ಯಕ್ಷ ಅಬೂಬಕ್ಕರ್ ಮುಲಾರ್ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ವೇದಿಕೆಯಲ್ಲಿ ದಫ್ ಕಮಿಟಿಯ ಅಧ್ಯಕ್ಷ ಸುಲೈಮಾನ್ ಮುಲಾರ್,ಪ್ರಮುಖ ಕಾರ್ಯದರ್ಶಿ ಆಶ್ರಫ್ ಕುರಿಯ ಹಾಗೂ SKSSF ಅಧ್ಯಕ್ಷ ಉಸ್ಮಾನ್ ಅಜ್ಜಿಕಟ್ಟೆ ಉಪಸ್ಥಿತಿಯಲ್ಲಿ 2023..24 ನೇ ಸಾಲಿನ ನೂತನ ಕಮಿಟಿಯನ್ನು ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಹಸೈನಾರ್ ಅಜ್ಜಿಕಟ್ಟೆ, ಉಪಾಧ್ಯಕ್ಷರಾಗಿ ಮುಸ್ತಾಫ ಮುಲಾರ್ ಮತ್ತು ಆಶ್ರಫ್ ಕುರಿಯ, ಪ್ರ. ಕಾರ್ಯದರ್ಶಿಯಾಗಿ ನಿಝರ್ ಅಜ್ಜಿಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಆಸಿಫ್ ಕುರಿಯ ಎ ಆರ್ ಮತ್ತು ಫವಾಜ್ ಕುರಿಯ,ಕೋಶಾಧಿಕಾರಿಯಾಗಿ ರಝಕ್ ಮುಲಾರ್ ಆಯ್ಕೆಯಾದರು. ಸದಸ್ಯರಾಗಿ ಸುಲೈಮಾನ್ ಮುಲಾರ್,ಅಬ್ದುಲ್ ಕುಂಞ ಕುರಿಯ,ಜಬ್ಬಾರ್ ಕುರಿಯ,ಹುಸೈನಾರ್ ಅಜ್ಜಿಕಟ್ಟೆ,ಮಹಮ್ಮದ್ (ಮಮ್ಮು) ಅಜ್ಜಿಕಟ್ಟೆ,ಇಬ್ರಾಹಿಂ ವೆಲ್ಡಿಂಗ್,ಝಾಯಿದ್ ಬೊಲ್ಲಗುಡ್ಡೆ,ಮಜೀದ್ ಕೋಡಿಜಾಲ್ ಆಯ್ಕೆಯಾದರು

ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Posted by Vidyamaana on 2024-02-28 18:02:14 |

Share: | | | | |


ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಪುತ್ತೂರು :ಪುತ್ತೂರಿನ ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ನ ವಿದ್ಯಾಸಂಸ್ಥೆ ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಹಾಗೂ ಡಿಪ್ಲೊಮಾ ಇನ್ ಒಪ್ತಲ್ಮಿಕ್ ಟೆಕ್ನಾಲಜಿ ಕೋರ್ಸ್ ಗೆ ಪಾರಾ ಮೆಡಿಕಲ್ ಬೋರ್ಡ್ ಕರ್ನಾಟಕ ನಡೆಸಿದ  ಅಂತಿಮ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಂಸ್ಥೆಯು 100% ಫಲಿತಾಂಶ ಗಳಿಸಿದೆ.

DMLT ವಿದ್ಯಾರ್ಥಿನಿ ಕು. ಮೇಘ. ಕೆ        ಶೇ. 82.30 ಅಂಕಗಳೊಂದಿಗೆ ಪ್ರಥಮ ಸ್ಥಾನ ಕು.ಮೇಘಶ್ರೀ  ಶೇ.77.10 ಅಂಕಗಳೊಂದಿಗೆ ದ್ವಿತೀಯ ಸ್ಥಾನ     DOT and AT ವಿದ್ಯಾರ್ಥಿನಿ ಕು.ಸಂಜನಾ. ಎಂ ಶೇ. 76.3 ಅಂಕಗಳೊಂದಿಗೆ ಪ್ರಥಮ    ಕು.ಚೈತ್ರ. ಬಿ   ಶೇ.67.30 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ DOT ವಿದ್ಯಾರ್ಥಿನಿ ಕು.ಪವಿತ್ರ. ಕೆ   ಶೇ.80  ಅಂಕಗಳೊಂದಿಗೆ ಪ್ರಥಮ ಸ್ಥಾನ ಕು.ಪೂಜಾ ರೈ. ಎಸ್  ಶೇ.61.80    ಅಂಕಗಳೊಂದಿಗೆ ದ್ವಿತೀಯ ಸ್ಥಾನ   ಪಡೆದಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ  ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಶ್ರಮಿಸುತ್ತಿರುವ   ಉಪನ್ಯಾಸಕರಿಗೆ ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್ ಟ್ರಸ್ಟಿಗಳಾದ ಡಾ. ಸುಧಾ ಎಸ್ ರಾವ್, ಡಾ. ಸ್ಮಿತಾ ಎಸ್ ರಾವ್, ಡಾ. ಅಭೀಶ್ ಹೆಗ್ಡೆ ಹಾಗೂ ಸಂಸ್ಥೆಯ ಪ್ರಾಂಶುಪಾಲ ರಾದ ಶ್ರೀಮತಿ ಪ್ರೀತಾ ಹೆಗ್ಡೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. 

ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಕಳೆದ 10 ವರ್ಷಗಳಿಂದ ಸತತವಾಗಿ ಉತ್ತಮ ಫಲಿತಾಂಶ ಪಡೆಯುತ್ತಿದ್ದು  ಇಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಪ್ರಗತಿ ಹಾಸ್ಪಿಟಲ್ ಎಜುಕೇಷನ್ ಟ್ರಸ್ಟ್ ನ ಮೂಲಕ    ರಾಜೀವ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್  ನಿಂದ ಅಂಗೀಕೃತಗೊಂಡ  ಪುತ್ತೂರು ತಾಲೂಕಿನ ಏಕೈಕ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್   2022 ನೇ  ಸಾಲಿನಿಂದ ಕಾರ್ಯ ನಿರ್ವಹಿಸುತ್ತಿದ್ದು   ಬಿ ಎಸ್ಸಿ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಬಿ ಎಸ್ಸಿ ಆಪರೇಷನ್ ಥಿಯೇಟರ್ ಮತ್ತು  ಅನಸ್ತೇಶಿಯಾ ಟೆಕ್ನಾಲಜಿ , ಬಿಎಸ್ಸಿ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಹಾಗೂ ಬಿಎಸ್ಸಿ ಇನ್ ಎಮರ್ಜೆನ್ಸಿ ಮತ್ತು ಟ್ರಾಮಾ ಕೇರ್  ಟೆಕ್ನಾಲಜಿ ಕೋರ್ಸ್ ಗಳು  ಲಭ್ಯವಿದೆ.

ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಹಿತ ಬಿಜೆಪಿ ನಿಯೋಗ ಭೇಟಿ

Posted by Vidyamaana on 2024-03-19 21:24:11 |

Share: | | | | |


ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸಹಿತ ಬಿಜೆಪಿ ನಿಯೋಗ ಭೇಟಿ

ಪುತ್ತೂರು : ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ಸದಸ್ಯರಾದ ಜಯಾನಂದ ಬಂಗೇರ ರವರ ಮನೆ ಅಂಗಳಕ್ಕೆ ಶಾಸಕರ ಬೆಂಬಲಿಗರು ಅಕ್ರಮವಾಗಿ ಪ್ರವೇಶಿಸಿ, ಮನೆಯವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾನಂದ ಬಂಗೇರ ರವರ ನಿವಾಸಕ್ಕೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ಭೇಟಿ ನೀಡಿದ್ದು, ಧೈರ್ಯ ತುಂಬಿದರು.

ಬಿಜೆಪಿ ಪ್ರಮುಖರಾದ ಆರ್.ಸಿ. ನಾರಾಯಣ್, ಗೋಪಾಲಕೃಷ್ಣ ಹೇರಳೆ, ನಿತೇಶ್ ಶಾಂತಿವನ,ವಿದ್ಯಾ ಆರ್. ಗೌರಿ, ಸಹಜ್ ರೈ ಬಳಜ್ಜ, ಯುವರಾಜ್ ಪೆರಿಯತ್ತೋಡಿ ಸಹಿತ ಹಲವರು ಉಪಸ್ಥಿತರಿದ್ದರು

ಹೈಸ್ಕೂಲ್ ದಿನಗಳಲ್ಲಿ ಪ್ರೀತಿಸಿ ಮದುವೆಯಾದ ದಂಪತಿಗೆ ಜೀವ ಬೆದರಿಕೆ, ಎಸ್ಪಿ ಕಚೇರಿಗೆ ಬಂದ ಜೋಡಿ ಹಕ್ಕಿಗಳು!

Posted by Vidyamaana on 2024-01-29 15:26:03 |

Share: | | | | |


ಹೈಸ್ಕೂಲ್ ದಿನಗಳಲ್ಲಿ ಪ್ರೀತಿಸಿ ಮದುವೆಯಾದ ದಂಪತಿಗೆ ಜೀವ ಬೆದರಿಕೆ, ಎಸ್ಪಿ ಕಚೇರಿಗೆ  ಬಂದ ಜೋಡಿ ಹಕ್ಕಿಗಳು!

ಜೋಡಿ ಹಕ್ಕಿ ಬಳ್ಳಾರಿಯಿಂದ ಆಂದ್ರಕ್ಕೆ ಹೋಗಿ ನರಸಿಂಹ ದೇವಸ್ಥಾನದಲ್ಲಿ ಹಾರ ಬದಲಾಯಿಸಿ ಮದುವೆ ಆಗಿದ್ದಾರೆ. ಹುಡುಗನ ಮನೆಯಲ್ಲಿ ಶಿಲ್ಪಾಳನ್ನ ಸೊಸೆ ಅಂತಾ ಒಪ್ಪಿಕೊಳ್ಳಲು ತಯಾರಿದ್ದಾರೆ. ಆದರೆ ಯುವತಿ ಮನೆಯಲ್ಲಿ ಅಳಿಯನನ್ನ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ಹುಡುಗಿ ಪೋಷಕರಿಂದ ಏನಾದರೂ ಅನಾಹುತ ಆಗಬಹುದು ಅಂತಾ ರಕ್ಷಣೆಗಾಗಿ ಎಸ್ಪಿ ಕಚೇರಿಗೆ ಬಂದಿದ್ದಾರೆ.ಅವರಿಬ್ಬರೂ ಪರಸ್ಪರ ಐದು ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ರು, ಅವರ ಪ್ರೀತಿಗೆ ಮನೆಯಲ್ಲಿ ಒಪ್ಪದ ಕಾರಣ ಮನೆ ಬಿಟ್ಟು ಓಡಿಬಂದು ನರಸಿಂಹ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.. ಮದುವೆಯಾದ ಜೋಡಿಗೀಗ ಮನೆಯವರಿಂದಲೇ ಪ್ರಾಣ ಬೆದರಿಕೆ ಶುರುವಾಗಿದೆ, ಹೀಗಾಗಿ ರಕ್ಷಣೆಗಾಗಿ ಆ ಜೋಡಿ ಠಾಣೆ ಮೆಟ್ಟಿಲು ಏರಿದ್ದಾರೆ… ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.


ಹೌದು ಹೀಗೆ ಮುದ್ದುಮುದ್ದಾಗಿ ಕಾಣುವ ಈ ಜೋಡಿ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ರು, ಒಂದೇ ಜಾತಿಯವರಾದ್ರು ಮನೆಯಲ್ಲಿ ಮದುವೆಗೆ ಒಪ್ಪಿಲ್ಲ, ಹೀಗಾಗಿ ಮನೆ ಬಿಟ್ಟು ಓಡಿ ಬಂದು ಆಂದ್ರದಲ್ಲಿ ನರಸಿಂಹ ದೇವಸ್ಥಾನದ ಮುಂದೆ ಮದುವೆಯಾಗಿದ್ದಾರೆ.. ಮದುವೆಯಾದ ವಿಷಯ ಹುಡಗಿ ಕುಟುಂಬಕ್ಕೆ ತಿಳಿಯುತ್ತಿದ್ದಂತೆ ಹುಡಗನ ಮೇಲೆ ಗರಂ ಆಗಿದ್ದಾರೆ.


ಹೀಗಾಗಿ ಬೆದರಿದ ಈ ಜೋಡಿ ಬಳ್ಳಾರಿ ಎಸ್ಪಿ ಕಚೇರಿಗೆ ಬಂದು ಜೀವ ರಕ್ಷಣೆಗೆ ಮನವಿ ಮಾಡಿದ್ದಾರೆ.. ಎಸ್ ಹೀಗೆ ಕಾಣುವ ಈ ಜೋಡಿ ಹೆಸರು ನಾರಾಯಣ (25) ಮತ್ತು ಶಿಲ್ಪಾ (20) ಅಂತಾ ಯುವಕ ನಾರಾಯಣ ಬಳ್ಳಾರಿ ತಾಲೂಕಿನ ಗೋನಾಳ ಗ್ರಾಮದವನಾದ್ರೆ, ಯುವತಿ ಶಿಲ್ಪಾ ಸಿರಗುಪ್ಪ ತಾಲೂಕಿ‌ನ ಊಳೂರು ಗ್ರಾಮದವಳು.. ಶಿಲ್ಪಾ 9 ನೇ ತರಗತಿ ಇರುವಾಗ ಗೋನಾಳ ಗ್ರಾಮದಲ್ಲಿರುವ ಅವಳ ದೊಡ್ಡಮ್ಮನ ಮನೆಗೆ ಬಂದಿದ್ದಳಂತೆ ಆಗ ನಾರಾಯಣನ ಪರಿಚಯವಾಗಿದೆ.. ಪರಿಚಯ ಪ್ರೇಮಕ್ಕೆ ತಿರುಗಿ ಈಗ ಈ ಜೋಡಿ ಮದುವೆ ಆಗಿದ್ದಾರೆ.. ಯುವಕ ಯುವತಿ ಕುರುಬ ಸಮುದಾಯಕ್ಕೆ ಸೇರಿದ್ದಾರೆ ಯಾವುದೇ ಜಾತಿ ಸಮಸ್ಯೆ ಇಲ್ಲ ಆದರೂ ಮನೆಯಲ್ಲಿ ಒಪ್ಪಿಲ್ಲ ಹೀಗಾಗಿ ಶಿಲ್ಪಾ ಮನೆ ಬಿಟ್ಟು ಬಂದು ಈ ಯುವಕನನ್ನ ಮದುವೆ ಆಗಿದ್ದಾಳೆ.


ಇನ್ನು ಯುವಕ ನಾರಾಯಣ ಬಳ್ಳಾರಿ ಜಿಲ್ಲಾ ಪಂಚಾಯತ್​​ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ.. ನೋಡಲು ಸ್ಮಾಟ್೯ ಆಗಿದ್ದಾನೆ.. ಯುವತಿ ಶಿಲ್ಪಾ ಪಿಯುಸಿ ಮುಗಿಸಿದ್ದಾಳೆ ಇವಳು ಕೂಡ ಸುಂದರವಾಗಿದ್ದಾಳೆ. ಪರಸ್ಪರ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರದಂತ ಪ್ರೀತಿ ಮಾಡಿದ್ದಾರೆ..


ಆದರೆ ಈ ಪ್ರೀತಿಗೆ ಹುಡುಗಿ ಪೋಷಕರು ಒಪ್ಪಿಗೆ ನೀಡಿಲ್ಲ, ಇದಕ್ಕೆ ಕಾರಣ ಅಂದ್ರೆ ಹುಡಗನಿಗೆ ಆಸ್ತಿಯಿಲ್ಲ ಬಡವ ಇದ್ದಾನೆ ಅಂತಾ. ಆದರೆ ಐದು ವರ್ಷದ ಪ್ರೀತಿ ಹೇಗೆ ಬಿಟ್ಟು ಕೊಡುವುದಕ್ಕೆ ಆಗುತ್ತೆ ಅಂತಾ ಶಿಲ್ಪಾ ಜ. 27 ನೇ ತಾರೀಖು ಮನೆ ಬಿಟ್ಟು ಬಂದಿದ್ದಾಳೆ.. ಮನೆ ಬಿಟ್ಟು ಬಂದು ನನ್ನ ಮದುವೆ ಆಗು ಅಂತಾ ನಾರಾಯಣನಿಗೆ ಹೇಳಿದ್ದಾಳೆ.ಆಗ ಇಬ್ಬರು ಬಳ್ಳಾರಿ ಯಿಂದ ಆಂದ್ರಪ್ರದೇಶಕ್ಕೆ ಹೋಗಿ ಅಲ್ಲಿರುವ ನರಸಿಂಹ ದೇವಸ್ಥಾನದ ಮುಂದೆ ಹಾರ ಬದಲಾಯಿಸಿ ಮದುವೆ ಆಗಿದ್ದಾರೆ.. ಹುಡುಗನ ಮನೆಯಲ್ಲಿ ಶಿಲ್ಪಾಳನ್ನ ಸೊಸೆ ಅಂತಾ ಒಪ್ಪಿಕೊಳ್ಳಲು ತಯಾರಿದ್ದಾರೆ. ಆದರೆ ಯುವತಿ ಮನೆಯಲ್ಲಿ ನಾರಾಯಣನನ್ನ ಅಳಿಯ ಅಂತಾ ಒಪ್ಪಿಕೊಳ್ಳುತ್ತಿಲ್ಲ.. ಹೀಗಾಗಿ ಹುಡುಗಿ ಪೋಷಕರಿಂದ ಏನಾದರೂ ಅನಾಹುತ ಆಗ ಬಹುದು ಅಂತಾ ರಕ್ಷಣೆಗಾಗಿ ಎಸ್ಪಿ ಕಚೇರಿಗೆ ಬಂದಿದ್ದಾರೆ.


ಒಟ್ಟಿನಲ್ಲಿ ಐದು ವರ್ಷದಿಂದ ಪ್ರೀತಿ ಪ್ರೇಮದಲ್ಲಿ ಮುಳಗಿದ್ದ ಜೋಡಿ ಮದುವೆ ಆಗಿದ್ದಾರೆ.. ಆದರೆ ಈ ಮದುವೆಗೆ ಹುಡುಗಿ ಪೋಷಕರು ಒಪ್ಪಿಗೆ ನೀಡಿಲ್ಲ.. ಹೀಗಾಗಿ ರಕ್ಷಣೆ ಬೇಕು ಅಂತಾ ಠಾಣೆ ಮೆಟ್ಟಿಲೇರಿದ್ದಾರೆ.. ಇನ್ನಾದರೂ ಎರಡೂ ಕುಟುಂಬಗಳು ಹಗೆ ಸಾಧಿಸದೆ ಈ ಜೋಡಿಯನ್ನ ಒಪ್ಪಿ ಆಶೀರ್ವದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಖಾಸಗಿ ಕ್ಷಣದ ಫೋಟೋ ತೋರಿಸಿ ವೈದ್ಯನಿಂದ ಮಹಿಳೆಗೆ ಬ್ಲ್ಯಾಕ್‌ಮೇಲ್..!

Posted by Vidyamaana on 2024-05-17 08:12:31 |

Share: | | | | |


ಖಾಸಗಿ ಕ್ಷಣದ ಫೋಟೋ ತೋರಿಸಿ ವೈದ್ಯನಿಂದ ಮಹಿಳೆಗೆ ಬ್ಲ್ಯಾಕ್‌ಮೇಲ್..!

ರಾಮನಗರ(ಮೇ.17): ಖಾಸಗಿ ಫೋಟೋ - ವಿಡಿಯೋಗಳನ್ನು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವ ವೈದ್ಯನ ವಿರುದ್ಧ ಮಹಿಳೆಯೊಬ್ಬರು ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ವಿನಾಯಕನಗರ ಬಡಾವಣೆ ನಿವಾಸಿ ಪರಸಪ್ಪ ಖಾಸಗಿ ಫೋಟೋ - ವಿಡಿಯೋಗಳನ್ನು ಇಟ್ಟುಕೊಂಡು ತನ್ನನ್ನು ತೇಜೋವಧೆ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದು, ಆತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಮಹಿಳೆ ಕೋರಿದ್ದಾರೆ.



Leave a Comment: