ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಜಯ ಗಳಿಸುತ್ತೀರಿ ಎಂದು ಅಶೋಕ್ ರೈಗೆ ಹಾರೈಸಿದ್ದ ಉಸ್ತಾದ್

Posted by Vidyamaana on 2023-05-16 12:41:12 |

Share: | | | | |


ಜಯ ಗಳಿಸುತ್ತೀರಿ ಎಂದು ಅಶೋಕ್ ರೈಗೆ ಹಾರೈಸಿದ್ದ ಉಸ್ತಾದ್

      ನೀವು ಚುನಾವಣೆಯಲ್ಲಿ ಜಯ ಗಳಿಸುತ್ತೀರಿ ಎಂದು ಅಶೋಕ್ ಕುಮಾರ್ ರೈ ಅವರಿಗೆ ಹಾರೈಸಿ, ಭವಿಷ್ಯ ನುಡಿದಿದ್ದ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ಅವರಿಗೆ ಅಶೋಕ್ ಕುಮಾರ್ ರೈ ಅವರ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಆಗಲೇ ಇಲ್ಲ.ಮಲೇಷಿಯಾದ ದೊರೆಗೆ ರಾಜಗುರುವಿನಂತಿದ್ದವರು. ಸಿಂಗಾಪುರ, ದುಬೈ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಆಧ್ಯಾತ್ಮಿಕ ಸಭೆ ನಡೆಸಿದ ಮೇರು ವ್ಯಕ್ತಿತ್ವದ ಹಿರಿಯ ವಿದ್ವಾಂಸ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ.

     ದೇಶ – ವಿದೇಶಗಳಲ್ಲಿ ಖ್ಯಾತರಾದ ಇವರು ಪುತ್ತೂರಿನ ಕಬಕ ನಿವಾಸಿ. ತನ್ನ 61ನೇ ಇಳಿ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದಾರೆ. ಹೀಗೆ ನಮ್ಮೆಲ್ಲರನ್ನು ಅಗಲುವ ಮುನ್ನ, ವಿಸ್ಮಯವೊಂದಕ್ಕೆ ನಿದರ್ಶನ ನೀಡಿಯೇ ಹೊರಟು ಹೋದರು - ಅದು ಅಶೋಕ್ ಕುಮಾರ್ ರೈ ಅವರ ಗೆಲುವು.

ಏಪ್ರಿಲ್ 27 ರಂದು ಅಶೋಕ್ ಕುಮಾರ್ ರೈ ಅವರು ಉಸ್ತಾದ್ ಅವರ ಆಶೀರ್ವಾದ ಪಡೆದಿದ್ದರು. ಮೇ 3 ರಂದು ಮೌಲಾನಾ ಅಬ್ದುಲ್ ರಝಾಕ್ ಹಾಜಿ  ಅವರು ಇಹಲೋಕ ತ್ಯಜಿಸಿದರು. ಅಶೋಕ್ ರೈ ಗೆಲುವಿಗೆ ಹಾರೈಸಿ, ತನಗೇನು ಗೊತ್ತೇ ಇಲ್ಲ ಎಂಬಂತೆ ಹೊರಟು ಹೋದರು. ನಿಷ್ಕಲ್ಮಶ, ನಿಷ್ಕಪಟ ಮನಸ್ಸಿನ ಉಸ್ತಾದ್ ಅವರು ಸಮಾಜಕ್ಕೆ ಆದರ್ಶ ಹಾಗೂ ಮಾದರಿ ಪುರುಷ.

ಹಾಗೆ ನೋಡಿದರೆ ಅಶೋಕ್ ಕುಮಾರ್ ರೈ ಅವರ ಗೆಲುವು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಲಭದ ತುತ್ತಾಗಿರಲಿಲ್ಲ. ಟಿಕೇಟ್ ಪಡೆದುಕೊಳ್ಳುವುದೋ, ಸಾಧ್ಯವೇ ಇಲ್ಲದ ಮಾತು. ಪ್ರಬಲ ಪೈಪೋಟಿ, ಬಿಜೆಪಿಯಿಂದ ಬಂದವರು ಎಂಬ ವಕ್ರದೃಷ್ಟಿಯ ನಡುವೆಯೇ ಟಿಕೇಟ್ ಗಿಟ್ಟಿಸಿಯೇ ಬಿಟ್ಟರು. ಅಷ್ಟರಲ್ಲಿ ಚುನಾವಣೆಯೂ ಘೋಷಣೆಯಾಗಿತ್ತು. ಬಿಜೆಪಿಯೊಳಗೇ ಅಸಮಾಧಾನದ ಕಿಚ್ಚು ಹೊಗೆಯಾಡತೊಡಗಿತು. ಇದು ಅಶೋಕ್ ಕುಮಾರ್ ರೈ ಅವರಿಗೆ ವರದಾನವಾಯಿತು. ಹಿಂದಿನ ಅವಧಿಗಿಂತ ಕಡಿಮೆ ಮತ, ಪಕ್ಷೇತರ ಅಭ್ಯರ್ಥಿಯ ಟೈಟ್ ಪೈಟ್ ನಡುವೆ ಜಯಭೇರಿ ಬಾರಿಸಿಯೇ ಬಿಟ್ಟರು. ಅಂದರೆ ಟಿಕೇಟ್ ಪಡೆದುಕೊಳ್ಳುವುದರಿಂದ ಹಿಡಿದು ಗೆಲ್ಲುವವರೆಗಿನ ಎಡರು – ತೊಡರುಗಳನ್ನು ಅಶೋಕ್ ರೈ ಅವರು ದಾಟಿಕೊಂಡು, ಜಯಿಸಿಕೊಂಡೇ ಬಂದರು. ಆದರೆ ದುರಾದೃಷ್ಟ ನೋಡಿ, ಅವರ ಗೆಲುವಿನ ವಿಜಯೋತ್ಸವ ನೋಡಲು ಉಸ್ತಾದರೇ ಇಲ್ಲದಾದರು.

ಕೊಡುಗೈ ದಾನಿಯಾಗಿ, ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದ ಮೌಲಾನಾ ಅಬ್ದುಲ್ ರಝಾಕ್ ಹಾಜಿ ಮಲೇಷಿಯಾ ಅವರು, ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿಯ ಗೌರವಾಧ್ಯಕ್ಷರಾಗಿ, 10 ವರ್ಷ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎನ್ನುವುದು ಸ್ಮರಣಾರ್ಹ.

ಮಂಗಳೂರು ವಿವಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಗೆ ಹಿಂದೂ ಮುಖಂಡ ಅತಿಥಿ ಹಿನ್ನೆಲೆ

Posted by Vidyamaana on 2023-06-23 04:48:48 |

Share: | | | | |


ಮಂಗಳೂರು ವಿವಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಗೆ ಹಿಂದೂ ಮುಖಂಡ ಅತಿಥಿ ಹಿನ್ನೆಲೆ

ಮಂಗಳೂರು; ವಿವಿ ಕಾಲೇಜು ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ ಅತಿಥಿಯಾಗಿದ್ದಕ್ಕೆ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರತಿಭಾ ದಿನಾಚರಣೆ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎನ್ನಲಾಗಿದೆ.


ಮಂಗಳೂರಿನ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಜೂ.23 ರಂದು ಪ್ರತಿಭಾ ದಿನಾಚರಣೆ ಹಾಗೂ ಜೂ.24ರಂದು ಕಾಲೇಜು ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಪ್ರತಿಭಾ ದಿನಾಚರಣೆ ಕಾರ್ಯಕ್ರಮಕ್ಕೆ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮುಖ್ಯ ಅತಿಥಿಯಾಗಿ ಆಗಮಿಸುವವರಿದ್ದರು. ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಸಂಘದಿಂದ ಶ್ರೀಕಾಂತ್ ಶೆಟ್ಟಿಗೆ ಆಹ್ವಾನ ನೀಡಲಾಗಿತ್ತು.


 ಶ್ರೀಕಾಂತ್ ಶೆಟ್ಟಿಗೆ ಆಹ್ವಾನ ನೀಡಿದ್ದಕ್ಕೆ ಎನ್‌ಎಸ್ ಯುಐ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾಲೇಜಿನಲ್ಲಿ ಕೋಮು ವಿಷಬೀಜ ಭಿತ್ತಲು ಯತ್ನ ಎಂದು ಆರೋಪಿಸಿ ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡಲ್ಲ ಎಂದು ಎಬಿವಿಪಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ಮಂಗಳೂರು ಕಮಿಷನರ್ ಹಾಗೂ ಕಾಲೇಜು ಪ್ರಾಂಶುಪಾಲರಿಗೂ ಎನ್ಎಸ್ ಯುಐ ದೂರು ನೀಡಿದ್ದು, ಶ್ರೀಕಾಂತ್ ಶೆಟ್ಟಿ ಅತಿಥಿಯಾದ್ರೆ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿತ್ತು.ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವನಿಯೋಗ ಮಂಗಳೂರು ಕಮಿಷನರ್ ಭೇಟಿಯಾಗಿ ಮನವಿ ಸಲ್ಲಿಸಿತ್ತು. ಕೋಮು ಭಾವನೆ ಕೆರಳಿಸುವ ವ್ಯಕ್ತಿಗಳಿಗೆ ಸರ್ಕಾರಿ ಕಾಲೇಜು ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಕೋಮು ಭಾವನೆ ಕೆರಳಿಸುವ ಕಾರ್ಯ ಇವರಿಂದ ಆಗುತ್ತದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತರಲಾಗಿದೆ ಎಂದಿತ್ತು. ಆದರೆ ಕಾಲೇಜು ಆಡಳಿತ ಕಾರ್ಯಕ್ರಮ ಮುಂದೂಡಿದೆ.

ವಿವಾದದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ವಿವಿ ಕಾಲೇಜು ಆಡಳಿತ ಕಾರ್ಯಕ್ರಮ ಮುಂದೂಡಿದೆ. ನಾಳೆ ನಡೆಯಬೇಕಿದ್ದ ಪ್ರತಿಭಾ ದಿನಾಚರಣೆ ಹಾಗೂ ಶನಿವಾರದ ಕಾಲೇಜು ವಾರ್ಷಿಕೋತ್ಸವ ಮುಂದೂಡಿಕೆ ಮಾಡಿದೆ. ನಾಳೆ ಎಂದಿನಂತೆ ತರಗತಿ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ಬಂಟ್ವಾಳ: ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

Posted by Vidyamaana on 2024-06-27 12:14:19 |

Share: | | | | |


ಬಂಟ್ವಾಳ: ಕಿಟಕಿ ಸರಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

ಬಂಟ್ವಾಳ : ಯುವಕನೋರ್ವ ಮನೆಯ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ನರಿಕೊಂಬು ಎಂಬಲ್ಲಿ ನಡೆದಿದೆ.ಬಂಟ್ವಾಳ ನಿವಾಸಿ ಶೇಖರ ಪೂಜಾರಿ ಅವರ ಎರಡನೇ ಮಗ ರಮೇಶ್ (22) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ.

ರಮೇಶ್ ಯಾವುದೋ ವಿಷ ಪದಾರ್ಥ ಸೇವಿಸಿ ಬಳಿಕ ಕಿಟಕಿಗೆ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

Posted by Vidyamaana on 2024-07-22 23:30:36 |

Share: | | | | |


ಪುತ್ತೂರು: ಲಾರಿ ಟಯರ್ ಜೋಡಣೆ ವೇಳೆ ಅಪಘಾತ- ಟಯರ್‌ ಸಮೇತ ಎಸೆಯಲ್ಪಟ್ಟ   ಕರಾಯ ಜನತಾ ಕಾಲೋನಿ ರಶೀದ್ ಗಂಭೀರ

ಪುತ್ತೂರು: ಲಾರಿಯೊಂದರ ಟಯರ್ ಜೋಡಣೆ ವೇಳೆ ಟಯ‌ರ್ ರಿಂಗ್ ಚಿಮ್ಮಿ ಟಯರ್ ಸಮೇತ ಎಸೆಯಲ್ಪಟ್ಟ ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡ ಘಟನೆ ಪುತ್ತೂರು ಪರ್ಲಡ್ಕ ಗೋಳಿಕಟ್ಟೆ ಮಸೀದಿ ಬಳಿ ಜು.22ರಂದು ರಾತ್ರಿ ನಡೆದಿದೆ.

ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ದಂಡ

Posted by Vidyamaana on 2023-08-01 09:37:27 |

Share: | | | | |


ನೋ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ದಂಡ

ಪುತ್ತೂರು: ಇಲ್ಲಿನ ksrtc ಬಸ್ ನಿಲ್ದಾಣ ಮುಂಭಾಗ ನಿಲ್ಲಿಸುತ್ತಿದ್ದ ವಾಹನಗಳಿಗೆ‌ ಸಂಚಾರಿ ಠಾಣೆ ಎಸ್.ಐ. ಉದಯರವಿ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿ, ದಂಡ ವಿಧಿಸಿದ್ದಾರೆ.

ಬಸ್ ನಿಲ್ದಾಣಕ್ಕೆ ಕೋಟಿ - ಚೆನ್ನಯ ಹೆಸರು ನಾಮಕರಣ ಮಾಡುವ ದಿನದಂದು ಬಸ್ ನಿಲ್ದಾಣ ಮುಂಭಾಗ ಬ್ಯಾರಿಕೇಡ್ ಹಾಕಲಾಗಿತ್ತು. ಇದರಿಂದಾಗಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆತರುವ ವಾಹನಗಳು ರಸ್ತೆಯಲ್ಲೇ ನಿಲ್ಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದರ ಜೊತೆಗೆ ಬಸ್ ನಿಲ್ದಾಣದ ಮುಂಭಾಗದ ನೋ ಪಾರ್ಕಿಂಗ್ ಜಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ, ತೆರಳುತ್ತಿದ್ದರು. ಇದು ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ಬಸ್ ನಿಲ್ದಾಣ ಮುಂಭಾಗ ಪ್ರತಿದಿನ ಸಮಸ್ಯೆಗೆ ಕಾರಣವಾಗಿತ್ತು. ಕೆಲ ದಿನಗಳ ಹಿಂದೆ ಅಪಘಾತ ಸಂಭವಿಸಿದ ನಿದರ್ಶನವೂ ಇದೆ.

ಈ ಎಲ್ಲಾ ಕಾರಣಗಳಿಂದ ಕಾರ್ಯಾಚರಣೆ ನಡೆಸಿದ ಸಂಚಾರಿ ಠಾಣೆ ಪೊಲೀಸರು, ನಿಲ್ದಾಣದ ಮಿಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಮೇಲೆ ದಂಡ ವಿಧಿಸಿದ್ದಾರೆ.

Ksrtc ಬಸ್ ನಿಲ್ದಾಣ ಮುಂಭಾಗ ನಿರಂತರವಾಗಿ ಟ್ರಾಫಿಕ್ ದಟ್ಟಣೆ ಉಂಟಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು. ಇದನ್ನು ವಿದ್ಯಮಾನ ಹಲವು ಬಾರಿ ವರದಿ ಮಾಡಿ, ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಜೊತೆಗೆ, ವಾಣಿಜ್ಯ ಕೈಗಾರಿಕಾ ಸಂಘವೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿತ್ತು.

ನೋ ಪಾರ್ಕಿಂಗ್ ಪ್ರದೇಶ:

ಬಸ್ ನಿಲ್ದಾಣ ಮುಂಭಾಗದ ಪ್ರದೇಶ ನೋ ಪಾರ್ಕಿಂಗ್‌ ಏರಿಯಾ. ಇಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಇದು ಮುಂದುವರಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಶಾಸಕರ ಇಂದಿನ ಕಾರ್ಯಕ್ರಮ ಆ 5

Posted by Vidyamaana on 2023-08-04 23:22:01 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 5

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 5 ರಂದು

ಬೆಳಿಗ್ಗೆ 10 to 2.30 ರವರೆಗೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

(ಬೆಳಿಗ್ಗೆ  11 ಗಂಟೆಗೆ ಬ್ರಹ್ಮಶ್ರೀ ಸಭಾಭವನದಲ್ಲಿ ದಿ. ಸಂಸದ ದ್ರುವನಾರಾಯಣ ಸ್ಮರಣಾರ್ಥ ನಡೆಯುವ ರಕ್ತದಾನ ಶಿಬಿರದಲ್ಲಿ ಭಾಗವಹಿಸುವರು)

ಸಂಜೆ 3 ಗಂಟೆಗೆ ತಾಲೂಕು ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಪೂರ್ವ ಭಾವಿ ಸಭೆ

ಸಂಜೆ 4 ಗಂಟೆಗೆ ಈಶ್ವರಮಂಗಲದಲ್ಲಿ ಕರ್ನಾಟಕ‌ಮುಸ್ಲಿಂ ಜಮಾತ್ ಪ್ರತಿನಿಧಿ ಸಭೆಯಲ್ಲಿ  ಭಾಗವಹಿಸಲಿದ್ದಾರೆ



Leave a Comment: