ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


ಪಿಲಿ ತುಳು ಚಲನಚಿತ್ರಕ್ಕೆ ನ್ಯಾಯಾಲಯ ತಡೆ

Posted by Vidyamaana on 2023-02-09 16:57:54 |

Share: | | | | |


ಪಿಲಿ ತುಳು ಚಲನಚಿತ್ರಕ್ಕೆ ನ್ಯಾಯಾಲಯ ತಡೆ

ಪುತ್ತೂರು: ಬಹುನಿರೀಕ್ಷಿತ ತುಳು ಚಲನಚಿತ್ರ ಪಿಲಿ ಇನ್ನೇನು ತೆರೆ ಕಾಣಬೇಕು ಎನ್ನುವಾಗಲೇ, ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಸಿನಿಮಾ ವೀಕ್ಷಣೆಗೆ ಕಾದು ಕುಳಿತಿದ್ದ ತುಳು ಸಿನಿ ರಸಿಕರು ಭ್ರಮನಿರಸನಗೊಂಡಿದ್ದಾರೆ.ಕರಾವಳಿಯಾದ್ಯಂತ ನಾಳೆ ಬಿಡುಗಡೆಗೆ ಸಿದ್ಧವಾಗಿರುವ ಪಿಲಿ ತುಳು ಚಿತ್ರ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣದಂತೆ ನ್ಯಾಯಾಲಯದಿಂದ ತಡೆ ನೀಡಲಾಗಿದೆ.

ಮಂಜೀತ್ ನಾಗರಾಜ್ ಎಂಬವರು ಚಿತ್ರ ಮಂದಿರಗಳಲ್ಲಿ 3 ಕೋರಿ ಪ್ರದರ್ಶನ ಕಾಣಲು ತಡೆಯನ್ನು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಮಂಜೀತ್ ನಾಗರಾಜ್ ಪ್ರಕಾರ ಈ ಚಿತ್ರಕ್ಕೆ 40 ಲಕ್ಷ ಬಂಡವಾಳ ಹೂಡಿದ್ದಾರೆ. ಆದರೆ ನಿರ್ಮಾಪಕ ಮಂಜೀತ್ ನಾಗರಾಜ್ ಅವರನ್ನು ಕಡೆಗಣಿಸಿ ಬೇರೆ ನಿರ್ಮಾಪಕರ ಹೆಸರನ್ನು ಬಳಸಿಕೊಂಡು ಚಿತ್ರ ಬಿಡುಗಡೆಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಸಿದ್ಧತೆ

ಇದೀಗ ನಿರ್ಮಾಪಕ ಮಂಜೀಪ್ ಅವರ ಮನವಿ

ಪುರಸ್ಕರಿಸಿದ ನ್ಯಾಯಾಲಯವು

ನಾಳೆ ಬಿಡುಗಡೆಗೊಳ್ಳಲಿರುವ "ಪಿಲಿ" ಚಿತ್ರದ ಪ್ರದರ್ಶನವನ್ನು ತಡೆ ಹಿಡಿದಿದೆ.ಈ ಬಗ್ಗೆ ಮಾಧ್ಯಮೊಂದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಮಂಜೀತ್ ನಾಗರಾಜ್ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಭರತ್ ಭಂಡಾರಿ ಎಂಬಾತ ಚಿತ್ರದ ನಿರ್ಮಾಣಕ್ಕಾಗಿ ನನ್ನಿಂದ 40 ಲಕ್ಷ ಬಂಡವಾಳ ಪಡೆದು ಮೊದಲ ಹಂತದ ಚಿತ್ರೀಕರಣ ಮುಗಿದ ಬಳಿಕ ಹಣ ಪಡೆದು ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು.

ಆದರೀಗ ಬೇರೆ ಯಾವುದೋ ನಿರ್ಮಾಪಕರ ಹೆಸರು ಹಾಕಿಕೊಂಡು ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ನನಗೂ ಹಾಗೂ ಹಣ ಪಡೆದ ಇತರ ಸಹನಿರ್ಮಾಪಕರಿಗೂ ವಂಚಿಸಿದ್ದಾರೆ ಎಂದು ಮಂಜೀತ್ ನಾಗರಾಜ್ ಅವರು ಆರೋಪಿಸಿದ್ದಾರೆ. ಹಾಗೂ ಕೋರ್ಟ್ ನಲ್ಲಿ ಭರತ್ ಭಂಡಾರಿ ವಿರುದ್ಧ ಮತ್ತು ಚಿತ್ರ ಪ್ರದರ್ಶನ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ತಿಳಿಸಿದ್ದಾರೆ.

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ಬಿದ್ದು ಮಹಿಳೆ ಮೃತ್ಯು

Posted by Vidyamaana on 2023-12-07 04:27:34 |

Share: | | | | |


ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರ ಬಿದ್ದು ಮಹಿಳೆ ಮೃತ್ಯು

ವಿಟ್ಲ: ಸಾಲೆತ್ತೂರಿನ ತೋಟವೊಂದರಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಅಡಿಕೆ ಮರ ಮುರಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.


ಗುಲಾಬಿ(48) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.


ಇವರು ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರವೊಂದು ಆಕಸ್ಮಿಕವಾಗಿ ಮುರಿದು ಬಿದಿದ್ದು, ಇದರಿಂದ ತಲೆಗೆ ತೀವ್ರ ಪೆಟ್ಟಾಗಿದೆ. ಮಹಿಳೆಯನ್ನು ಕೂಡಲೇ ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.


ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

ನೆಲ್ಲಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ LKG, UKG ತರಗತಿಗಳ ಉದ್ಘಾಟನೆ.

Posted by Vidyamaana on 2023-03-25 15:43:28 |

Share: | | | | |


ನೆಲ್ಲಿಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ LKG, UKG ತರಗತಿಗಳ ಉದ್ಘಾಟನೆ.

ಪುತ್ತೂರು: ಪುತ್ತೂರು ರೋಟರಿ ಕ್ಲಬ್ ಪುತ್ತೂರು ಸಿಟಿ  ಚರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುವ ನೆಲ್ಲಿಕಟ್ಟೆ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಎಲ್ ಕೆ ಜಿ ಯು ಕೆ ಜಿ ತರಗತಿಗಳ  ಉದ್ಘಾಟನೆ ಮಾ 25 ರಂದು ನಡೆಯಿತು.ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ ಮಾತನಾಡಿ, ರೋಟರಿ ಸಂಘಟನೆ ಉತ್ತಮ  ನಿರ್ಧಾರ ತೆಗೆದುಕೊಂಡು ಎಲ್ ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಿ ಇತಿಹಾಸ ನಿರ್ಮಿಸಲು ಹೊರಟ್ಟಿದಾರೆ. ಮಕ್ಕಳ ಆರೋಗ್ಯದ ಕಾಳಜಿ ಜತೆ ಸರಕಾರಿ ಶಾಲೆಯ ಉಳಿಸುವ ನಿಟ್ಟಿನಲ್ಲಿ ವಿಗೆ 5 ಕೋಟಿ ವೆಚ್ಚದಲ್ಲಿ 111 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ಕುಡಿಯುವ ನೀರಿನ ಘಟಕ ಕೊಡುವ ಕೆಲಸ ಆಗಿದೆ ಎಂದರು.

 ರೋಟರಿ ಸಂಸ್ಥೆಯ ಸದಸ್ಯ ಹಾಗೂ ಎಲ್ ಕೆ ಜಿ,ಯುಕೆಜಿಯತರಗತಿಗಳ ಸಂಚಾಲಕ ಉಲ್ಲಾಸ್ ಪೈ ಮಾತನಾಡಿ ತರಗತಿಯನ್ನು ನಡೆಸಲು ಪುತ್ತೂರು ರೋಟರಿ ಸಿಟಿ ಚಾರಿಟೇಬಲ್ ಟ್ರಸ್ಟ್ ಮುಂದೆ ಬಂದಿರುವುದು ಶ್ಲಾಘನೀಯ ಸರಕಾರಿ ಶಾಲೆಯಗಳ ಅಭಿವೃದ್ಧಿಗೆ ಕೈ ಜೋಡಿಸಿ ಮುಂದಿನ ದಿನಗಳಲ್ಲಿ ಮಾದರಿ ಶಾಲೆ ಆಗಿ ಮಾರ್ಪಾಡು ಮಾಡಲು ಮತ್ತು ದತ್ತು ಸಮಿತಿ ಹಿರಿಯ ವಿದ್ಯಾರ್ಥಿಗಳು ಹಾಗೂ    ವಿದ್ಯಾಭಿಮಾನಿಗಳ ಸಹಕಾರ ಕೋರಿದರು.

ಪುತ್ತೂರು ರೋಟರಿ ಕ್ಲಬ್ ಪುತ್ತೂರು ಸಿಟಿ  ಚರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಜಿ ಸುರೇಂದ್ರ ಕಿಣಿ ಮಾತನಾಡಿ ರೋಟರಿ ಸಂಸ್ಥೆಯು ತನ್ನ ಆದಾಯದ ಒಂದು ಅಂಶವನ್ನು ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗ ಮಾಡುತ್ತಾ ಬಂದಿರುತ್ತದೆ, ಸಂಸ್ಥೆಯು ಪ್ರತಿವರ್ಷ ಉತ್ತಮ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಿ ಇಂದು 150 ವರ್ಷ ಹಳೆಯ ವಿದ್ಯಾಸಂಸ್ಥೆಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಎಲ್ ಕೆ ಜಿ ಯುಕೆಜಿ ತರಗತಿಗಳನ್ನು ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ರೋಟರಿ ಸಿಟಿ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ಹಾಗೂ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ  ಕೋ ಆರ್ಡಿನೇಟರ್   ತನುಜ ಹಾಗೂ ಮುಖ್ಯ ಗುರುಗಗಳಾದ ಯಶೋಧ ಮತ್ತು ಎಸ್ಡಿಎಂಸಿ ಅಧ್ಯಕ್ಷ ಪಂಚಾಕ್ಷರಿ,ನಿವೃತ್ತ ದೈಹಿಕ ಶಿಕ್ಷಕಿ ಮೀನಾಕ್ಷಿ 

ಸಹಾಯಕ ಶಿಕ್ಷಕ ವಿಘ್ನೇಶ್ವರ ಭಟ್, ಅಂಗನವಾಡಿ ಕಾರ್ಯಕರ್ತೆಯರು, ಎಸ್ ಡಿ ಎಮ್ ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವೈದ್ಯಕೀಯ ಶಿಬಿರದ ರೂವಾರಿ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯರಿಗೆ ರಾಷ್ಟ್ರ ಪ್ರಶಸ್ತಿ

Posted by Vidyamaana on 2024-01-26 04:02:27 |

Share: | | | | |


ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವೈದ್ಯಕೀಯ ಶಿಬಿರದ ರೂವಾರಿ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯರಿಗೆ ರಾಷ್ಟ್ರ ಪ್ರಶಸ್ತಿ

ಪುತ್ತೂರು:ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತಿ ತಿಂಗಳು ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರವು ಇದೀಗ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.



ಶಿಬಿರದ ಮೂಲಕ ಮಧುಮೇಹ ತಪಾಸಣೆಯಲ್ಲಿ ನೀಡಿದ ಅದ್ವಿತೀಯ ಸೇವೆ ಹಾಗೂ ಜನರಲ್ಲಿ ಆರೋಗ್ಯ ಜಾಗೃತಿಗಾಗಿ ಈ ಶಿಬಿರದ ರೂವಾರಿಯಾಗಿರುವ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಖ್ಯಾತ ವೈದ್ಯರಾಗಿರುವ ಡಾ.ಸುರೇಶ್ ಪುತ್ತೂರಾಯ ಅವರು ಮಧುಮೇಹ ಜಾಗೃತಿ ಉಪಕ್ರಮ ರಾಷ್ಟ್ರ ಪ್ರಶಸ್ತಿ (Diabetes Awareness Initiative Award- 2024)ಗೆ ಭಾಜನರಾಗಿದ್ದಾರೆ.ಜ.25ರಂದು ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಡಯಾಬಿಟೀಸ್ ಇಂಡಿಯಾ 14ನೇ ವಿಶ್ವ ಸಮ್ಮೇಳನದಲ್ಲಿ ಡಾ.ಸುರೇಶ್ ಪುತ್ತೂರಾಯ ಅವರು ಪ್ರಶಸ್ತಿ ಸ್ವೀಕರಿಸಿದರು.

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ: ಸದಾನಂದ ಗೌಡ

Posted by Vidyamaana on 2024-03-21 11:41:25 |

Share: | | | | |


ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ: ಸದಾನಂದ ಗೌಡ

ಬೆಂಗಳೂರು: ಕಾಂಗ್ರೆಸ್‌ ನಿಂದ ನನಗೆ ಆಹ್ವಾನ ಬಂದಿರುವುದು ನಿಜ. ಆದರೆ ನಾನು, ಕಾಂಗ್ರೆಸ್‌ ಸೇರಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಸ್ಪಷ್ಟಪಡಿಸಿದರು.


ಬೆಂಗಳೂರಿನ ಸಂಜಯ ನಗರ ನಿವಾಸದಲ್ಲಿ ಗುರುವಾರ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ’ ಎಂದು ಹೇಳಿದರು. ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಪಶ್ಚಾತ್ತಾಪ ಅನುಭವಿಸುತ್ತಾರೆ ಎಂದರು

ನ.13 ರೈ ಚಾರಿಟೇಬಲ್ ಟ್ರಸ್ಟ್ ವಾರ್ಷಿಕ ಮಹಾಸಭೆ ಸಮಾವೇಶ

Posted by Vidyamaana on 2023-11-01 15:59:34 |

Share: | | | | |


ನ.13  ರೈ ಚಾರಿಟೇಬಲ್ ಟ್ರಸ್ಟ್  ವಾರ್ಷಿಕ ಮಹಾಸಭೆ ಸಮಾವೇಶ

ಪುತ್ತೂರು: ನವೆಂಬರ್ 13 ರಂದು ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್  ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆಯಲಿರುವ ಟ್ರಸ್ಟಿನ ಮಹಾಸಭೆ ಹಾಗೂ ಟ್ರಸ್ಟಿನ ಫಲಾನುಭವಿಗಳಿಗೆ ವಸ್ತ್ರ ವಿತರಣಾ ಕಾರ್ಯಕ್ರಮ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ‌ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು‌ 50 ಸಾವಿರಕ್ಕೂ‌ಮಿಕ್ಕಿ ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆ ಇದ್ದು‌ ಈಗಾಲಗಲೇ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ ಎಂದು ಟ್ರಸ್ಟಿನ ಅಧ್ಯಕ್ಣರಾದ ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

ಶಾಸಕರ ಸಭಾಭವನದಲ್ಲಿ‌ನಡೆದ ಟ್ರಸ್ಟಿನ ಪ್ರಮುಖರ ಸಭೆಯಲ್ಲಿ ಈ ಮಾಹಿತಿ ನೀಡಿದರು.‌ಸಭೆಯಲ್ಲಿ ಭಾಗವಹಿಸುವ ಎಲ್ಲರಿಗೂ ವಸ್ತ್ರ ವಿತರಣೆ ನಡೆಯಲಿದ್ದು ಅವರ ಜೊತೆ ಸಹಭೋಜನವೂ ನಡೆಯಲಿದೆ. ಗ್ರಾಮ ಗ್ರಾಮಗಳಲ್ಲಿ ಸ್ವಾಗತ ಸಮಿತಿಯನ್ನು‌ರಚಿಸಲಾಗಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು‌ ಭಾಗವಹಿಸುವಂತೆ ಶಾಸಕರು ಮನವಿ ಮಾಡಿದರು. ಸಭೆಯಲ್ಲಿ ಟ್ರಸ್ಟಿನ ಕಾರ್ಯಾಧ್ಯಕ್ಷರಾದ‌ಸುದೇಶ್ ಶೆಟ್ಟಿ.‌ಪ್ರಮಹಖರಾದ ಸುಮಾ ಅಶೋಕ್ ರೈ, ನಿಹಾಲ್ ಶೆಟ್ಟಿ, ರಾಕೇಶ್ ರೈ ಕುದ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.



Leave a Comment: