ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಸುದ್ದಿಗಳು News

Posted by vidyamaana on 2024-07-24 10:52:54 |

Share: | | | | |


ಅಪ್ರಾಪ್ತಗೆ ಲೈಂಗಿಕ ಕಿರುಕುಳ ಆರೋಪ. ಬೆಳಿಯೂರುಕಟ್ಟೆ ನಿವಾಸಿ ಪ್ರಸಾದ್ ಬಂಧನ

ಪುತ್ತೂರು : ಅಪ್ರಾಪ್ತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೆಳಿಯೂರುಕಟ್ಟೆ ನಿವಾಸಿಯೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

ಬೆಳಿಯೂರುಕಟ್ಟೆ ನಿವಾಸಿ ಅಪ್ರಾಪ್ತೆಗೆ ವಿವಾಹಿತ ಪ್ರಸಾದ್ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 Share: | | | | |


ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸುಮಾ

Posted by Vidyamaana on 2023-08-14 03:17:04 |

Share: | | | | |


ಬೆಳ್ತಂಗಡಿ : ಅನಾರೋಗ್ಯದಿಂದ ಬಳಲುತ್ತಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸುಮಾ

ಬೆಳ್ತಂಗಡಿ: ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತಗಾಗಿ ಮೃತಪಟ್ಟ ಘಟನೆ ಆ 13 ರಂದು  ನಡೆದಿದೆ.


ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿ  ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತಪಟ್ಟ ಯುವತಿಯಾಗಿದ್ದಾಳೆ.


ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ವಿದ್ಯಾರ್ಥಿನಿ ಸುಮ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ ಆಗಸ್ಟ್11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ಗುಣಮುಖವಾಗಿರುವ ಕಾರಣ ತನ್ನ ಅಕ್ಕನ ಮನೆ ಬಳ್ಳಮಂಜಕ್ಕೆ ತೆರಳಿದ್ದು. ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಲೋ ಬಿಪಿ ಉಂಟಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ನೈನ್ ಟು ನೈನ್ – ಜಿ.ಎಲ್.ಒನ್ ಮಾಲ್ ನಲ್ಲಿ ಶುಭಾರಂಭಗೊಳ್ಳುತ್ತಿದೆ ಮಂಗಲ್ ಹೈಪರ್ ಮಾರ್ಕೆಟ್

Posted by Vidyamaana on 2024-03-28 11:39:02 |

Share: | | | | |


ನೈನ್ ಟು ನೈನ್ – ಜಿ.ಎಲ್.ಒನ್ ಮಾಲ್ ನಲ್ಲಿ ಶುಭಾರಂಭಗೊಳ್ಳುತ್ತಿದೆ ಮಂಗಲ್ ಹೈಪರ್ ಮಾರ್ಕೆಟ್

ನೈನ್ ಟು ನೈನ್ – ಜಿ.ಎಲ್.ಒನ್ ಮಾಲ್ ನಲ್ಲಿ ಶುಭಾರಂಭಗೊಳ್ಳುತ್ತಿದೆ ‘ಮಂಗಲ್ ಹೈಪರ್ ಮಾರ್ಕೆಟ್’

ಇದು ನಮ್ಮ ಊರಿನ ನಿಮ್ಮ ಅಂಗಡಿ – ಈ ಸುದ್ದಿ ಓದಿದ್ರೆ ನಿಮ್ಗೆ ಗೊತ್ತಾಗುತ್ತರೆ ಎಲ್ಲಾ ವಿದ್ಯಮಾನ!

ವಿಶ್ವಾಸಾರ್ಹ ಸೇವೆ ಮೂಲಕ ಜನರ ಪ್ರೀತಿಗೆ ಪಾತ್ರವಾಗಿರುವ ಮಂಗಲ್ ಸ್ಟೋರ್ಸ್ ನ ಹೊಸ ಸ್ವರೂಪ ‘ಮಂಗಲ್ ಹೈಪರ್ ಮಾರ್ಕೆಟ್’


ಹೈಪರ್ ಮಾರ್ಕೆಟ್ ಗಳು ಇಂದಿನ ಜನರ ದೈನಂದಿನ ಅವಶ್ಯಕತೆಗಳನ್ನು ಪೂರೈಸುವ ಮಳಿಗೆಗಗಳಾಗಿ ಮಾರ್ಪಟ್ಟಿವೆ. ಮಹಾನಗರಗಳಿಗೆ ಸೀಮಿತವಾಗಿದ್ದ ಹೈಪರ್ ಮಾರ್ಕೆಟ್ ಗಳು ಇವತ್ತು ಸಣ್ಣ ನಗರ –ಪಟ್ಟಣಗಳಲ್ಲು ತಲೆ ಎತ್ತಿ ನಿಂತಿದ್ದು ಆ ಭಾಗದ ಗ್ರಾಹಕರ ಖರೀದಿಗೆ ‘ಬಲ’ ತುಂಬುವ ಕೆಲಸವನ್ನು ಮಾಡುತ್ತಿದೆ.

ಆದರೆ ಹೆಚ್ಚಿನ ಹೈಪರ್ ಮಾರ್ಕೆಟ್ ಗಳಿಗೆ ಆ ಊರಿನ ನಂಟು ಇರುವುದಿಲ್ಲ. ಹೆಚ್ಚೆಂದರೆ ಆ ಊರಿನ ಜನರನ್ನು ಕೆಲಸಕ್ಕೆ ಇಟ್ಟುಕೊಳ್ಳಟಬಹುದಷ್ಟೇ, ಆದರೆ ಇದೀಗ ಪುತ್ತೂರಿನಲ್ಲಿ ಎ.01ರಂದು ಇಲ್ಲಿನ ಜಿ.ಎಲ್.ಒನ್ ಮಾಲ್ ನಲ್ಲಿ ಶುಭಾರಂಭಗೊಳ್ಳುತ್ತಿರುವ ಮಂಗಲ್ ಹೈಪರ್ ಮಾರ್ಕೆಟ್ – ನಮ್ಮ ಊರಿನ ನಿಮ್ಮ ಅಂಗಡಿ ಎಂಬ ವಿಶೇಷ ಟೈಟಲ್ ನೊಂದಿಗೆ ಊರಿನ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿ ಶುಭಾರಂಭಗೊಳ್ಳುತ್ತಿದೆ.


 ಎಲ್ಲಾ ದಿನಬಳಕೆ ವಸ್ತುಗಳನ್ನು ಅತ್ಯಂತ ಕಡಿಮೆ ಬೆಲೆಗೆ ಒಂದೇ ಕಡೆ ಖರೀದಿ ಮಾಡಕೆಂದು ಬಯಸುವವರಿಗೆ ಅತ್ಯುತ್ತಮ ತಾಣವೊಂದು ಮುತ್ತಿನ ನಗರಿ ಪುತ್ತೂರಿನ ಹೃದಯಭಾಗದಲ್ಲಿ ಆರಂಭಗೊಳ್ಳುತ್ತಿದೆ.‌ ಹೌದು, ಹಲವು ವರ್ಷಗಳ ಗುಣಮಟ್ಟದ, ವಿಶ್ವಾಸಾರ್ಹ ಸೇವೆಯ ಮೂಲಕ ಪುತ್ತೂರಿಗರ ಮನಗೆದ್ದಿರುವ ಮಂಗಲ್ ಸ್ಟೋರ್ಸ್ ಇದೀಗ ಪುತ್ತೂರಿನ ಜಿ.ಎಲ್.ಒನ್ ಮಾಲ್ ನಲ್ಲಿ ಕಾರ್ಯಾರಂಭ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. 

ಇದೇ ಎ.೧ರಿಂದ ಮಂಗಲ್‌ ಹೈಪರ್‌ ಮಾರ್ಕೆಟ್‌ ಪುತ್ತೂರಿನ ಜಿ.ಎಲ್.ಒನ್ ಮಾಲ್ ನಲ್ಲಿ ತೆರೆದುಕೊಳ್ಳಲಿದೆ. ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್‌ ರವರ ಮಾರ್ಗದರ್ಶನದೊಂದಿಗೆ ಕಳೆದ 20 ವರ್ಷಗಳಿಂದ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಮಂಗಲ್ ಸ್ಟೋರ್ಸ್ ತನ್ನ ಉತ್ಪನ್ನಗಳ ಗುಣಮಟ್ಟ, ಸ್ಪರ್ಧಾತ್ಮಕ ಬೆಲೆಯ ಮೂಲಕ ಜನಪ್ರಿಯತೆ ಗಳಿಸಿದೆ.  ಗ್ರಾಹಕಸ್ನೇಹಿ ಸಿಬ್ಬಂದಿಗಳ ನಗುಮೊಗದ ಸ್ವಾಗತ, ವಿಶ್ವಾಸಾರ್ಹ ಖರೀದಿ, ಸಂತೃಪ್ತಿಯ ಸೇವೆಯಿಂದಾಗಿ ಗ್ರಾಹಕರು ಸಂಸ್ಥೆ ಮೇಲಿಟ್ಟಿರುವ ನಂಬಿಕೆ ಅಚಲವಾಗಿದೆ. ಇದೀಗ ಗ್ರಾಹಕರ  ಹೆಚ್ಚಿನ ಅನುಕೂಲಕ್ಕಾಗಿ ಪುತ್ತೂರು ಪೇಟೆಯ ಹೃದಯಭಾಗದಲ್ಲಿ ಮಂಗಲ್‌ ಹೈಪರ್‌ ಮಾರ್ಕೆಟ್‌ ಅನ್ನು ಪ್ರಾರಂಭಿಸಲಾಗುತ್ತಿದ್ದು, ಗ್ರಾಹಕರಿಗೆ ಅತ್ಯಂತ ಕಡಿಮೆ ದರಗಳಲ್ಲಿ ಗುಣಮಟ್ಟದ ವಸ್ತುಗಳು ದೊರಕಲಿದೆ.

ಏನಿದು ‘ಸರ್ವಮಂಗಲ್‌’..!?

ಯಾವುದೇ ಪೂಜೆ ಇರಲಿ, ಶುಭಸಮಾರಂಭವಿರಲಿ

ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳಿಗಾಗಿ ಹಲವು ಕಡೆ ಹೋಗಬೇಕೆಂದಿಲ್ಲ..! ನಿಮ್ಮ ಅಗತ್ಯದ ದಿನಸಿ ಸಾಮಾಗ್ರಿಗಳು, ತಾಜಾ ತರಕಾರಿಗಳ ಪಟ್ಟಿಯಲ್ಲಿ ಮುಂಗಡವಾಗಿ ನೀಡಿ, ನಿಮ್ಮ ಮನೆಬಾಗಿಲಿಗೆ, ಯಾ ಸಭಾಭವನಕ್ಕೆ ತರಿಸಿಕೊಳ್ಳ ಬಹುದಾದಂತಹ ವಿಶೇಷ ಸೇವೆಯಾಗಿದೆ. ಯಾವುದೇ ಜಂಟಾಟವಿಲ್ಲದೇ, ನಿರಾಳವಾಗಿ ಸಂಭ್ರಮಾಚರಣೆಯನ್ನು ಆನಂದಿಸಬಹುದು..


ದಿನನಿತ್ಯದ ಆವಶ್ಯಕತೆಗಳಿಗೆ ಬೇಕಾಗುವ ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭ್ಯವಿದ್ದು, ಉಚಿತ ಪಾರ್ಕಿಂಗ್‌ನೊಂದಿಗೆ ಆಹ್ಲಾದಕರ ವಾತಾವರಣದಲ್ಲಿ ಆರಾಮವಾಗಿ ಶಾಪಿಂಗ್‌ ಮಾಡಬಹುದಾಗಿದೆ. ಪ್ರೆಸ್ಟೋ ಕಂಪೆನಿಯ ಪ್ರೀಮಿಯಂ ಸ್ವೀಟ್ಸ್‌ಗಳ ವಿಶೇಷ ಕೌಂಟರ್‌ ಕೂಡ ಲಭ್ಯವಿದೆ.

ಮಂಗಲ್‌ ಹೈಪರ್‌ ಮಾರ್ಕೆಟ್‌ ಬೆಳಿಗ್ಗೆ 9ರಿಂದ ರಾತ್ರಿ 9ರ ತನಕ ವಾರದ ಏಳು ದಿನಗಳಲ್ಲೂ ಕಾರ್ಯ ನಿರ್ವಹಿಸಲಿದೆ. ಈ ಮೂಲಕ ಗ್ರಾಹಕರ ನಗುಮೊಗದ ಸೇವೆಗೆ ಸಜ್ಜಾಗಿ ನಿಂತಿದೆ.

ಪುತ್ತೂರು ಕ್ಷೇತ್ರದಿಂದ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿ :ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದಿಂದ ಆಗ್ರಹ

Posted by Vidyamaana on 2023-04-11 03:00:56 |

Share: | | | | |


ಪುತ್ತೂರು ಕ್ಷೇತ್ರದಿಂದ ಗೌಡ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿ :ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದಿಂದ ಆಗ್ರಹ

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ದ.ಕ ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಎರಡು ಸ್ಥಾನಗಳಲ್ಲಿ ಒಕ್ಕಲಿಗ ಗೌಡರಿಗೆ ಪ್ರಾತಿನಿಧ್ಯ ನೀಡಬೇಕು. ಅದರಲ್ಲೂ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಸಮುದಾಯದ ಅಭ್ಯರ್ಥಿಗಳನ್ನು ಪರಿಗಣಿಸಲೇಬೇಕು ಎಂದು ಅವರು ಆಗ್ರಹಿಸಿದರು.

ಪುತ್ತೂರು ಕ್ಷೇತ್ರದಲ್ಲಿ ಶಾಸಕರಾಗಿರುವ ನಮ್ಮ ಸಮುದಾಯದ ಸಮರ್ಥ ನಾಯಕ ಸಂಜೀವ ಮಠಂದೂರು ಅವರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಮಠಂದೂರು ಅವರಿಗೆ ಟಿಕೆಟ್ ದೊರೆಯದಿರಲು ಕಾರಣವೇನುಎಂದು ಅವರು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಸುಮಾರು 3.75 ಲಕ್ಷ ಮತದಾರರಿದ್ದು, ಈ ಪೈಕಿ ಪುತ್ತೂರಿನಲ್ಲಿ ಅತೀ ಹೆಚ್ಚು ಗೌಡ ಸಮುದಾಯದ ಮತದಾರರಿದ್ದಾರೆ. ಆದ್ದರಿ0ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾದರೂ ಒಂದು ಸ್ಥಾನ ನೀಡಬೇಕು ಎಂದು ಈ ಹಿಂದೆಯೇ ವಿವಿಧ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಲಾಗಿತ್ತು.ಆದರೆ ಇತ್ತೀಚಿನ ವರದಿಗಳನ್ನು ಗಮನಿಸಿದಾಗ ಸಮುದಾಯದ ಯಾವೊಬ್ಬ ನಾಯಕರ ಹೆಸರೂ ಪ್ರಸ್ತಾಪವಾಗಿರುವುದು ಕಂಡು ಬಂದಿಲ್ಲ.ಪುತ್ತೂರಿನಲ್ಲಿ ಗೌಡ ಸಮುದಾಯದವರಿಗೆ ಸ್ಥಾನ ಕಲ್ಪಿಸದಿದ್ದಲ್ಲಿ ಮೇ 10ರಂದು ನಡೆಯುವ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ನಿರ್ದೇಶಕ ಪದ್ಮನಾಭ ಗೌಡ, ಗುರುದೇವ್‌ ಯು.ಬಿ. ಉಪಸ್ಥಿತರಿದ್ದರು.

ಪ್ರಾಮಾಣಿಕರಿಗೆ ಇರಿಸು- ಮುರುಸು

ಪಕ್ಷಗಳಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸಂಘಟನೆ ಮಾಡುತ್ತಿರುವವರಿಗೆ ಚುನಾವಣೆ ಸಂದರ್ಭದಲ್ಲಿ ಜಾತಿಯಾಧಾರದ ಮೇಲೆ ಟಿಕೆಟ್ ಕೇಳುವವರಿಂದಾಗಿ ಇರಿಸು ಮುರುಸು ಉಂಟಾಗಿದೆ. ಹಲವು ವರ್ಷಗಳ ಕಾಲ ಪಕ್ಷವನ್ನ ಸಂಘಟನೆ ಮಾಡಿ, ಬಲಿಷ್ಠಗೊಳಿಸಿದ ಕಾರ್ಯಕರ್ತರು ಒಂದೆಡೆ ಟಿಕೆಟ್‌ಗಾಗಿ ನಿಷ್ಠೆಯಿಂದ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ಜಾತಿಯ ಆಧಾರದ ಮೇಲೆ ಒತ್ತಡ ಹೇರುವವರಿಂದಾಗಿ ಪ್ರಾಮಾಣಿಕರಿಗೆ ಬೇಸರ ಉಂಟಾಗಿದೆ.


ನೆಲಮಂಗಲ ಬಳಿ ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ

Posted by Vidyamaana on 2024-05-18 14:55:49 |

Share: | | | | |


ನೆಲಮಂಗಲ ಬಳಿ ಕೆಎಸ್‌ಆರ್‌ಟಿಸಿ ಬಸ್ ಭೀಕರ ಅಪಘಾತ

ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮತ್ತು ನಿರ್ವಾಹಕ ಸೇರಿ 6 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅಡಕಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯಲ್ಲಿ ಘಟನೆ ನಡೆದಿದ್ದು, 4 ಅಡಿ ಎತ್ತರದ ರಸ್ತೆ ವಿಭಜಕವನ್ನು ದಾಟಿ ಎದುರು ರಸ್ತೆಗೆ ಡಿವೈಡರ್‌ ಮೇಲೆ ಬಸ್‌ ಬಂದು ನಿಂತಿದೆ.ಬೆಂಗಳೂರು-ಸೋಮವಾರಪೇಟೆ ಬಸ್ ಅಪಘಾತಕ್ಕೀಡಾಗಿದ್ದು ಮುಂಭಾಗದಲ್ಲಿ ಕುಳಿತಿದ್ದವರಿಗೆ ಗಾಯಗಳಾಗಿದೆ ಎಂದು ವರದಿಗಳು ತಿಳಿಸಿವೆ.

ಮಣಿಪಾಲದ ಅಪಾರ್ಟ್‌ಮೆಂಟಿನಲ್ಲಿ ವೇಶ್ಯಾವಾಟಿಕೆ: ಪಯಾಜ್‌ - ಸಚಿನ್‌ ಪರಾರಿ

Posted by Vidyamaana on 2023-06-01 08:12:26 |

Share: | | | | |


ಮಣಿಪಾಲದ ಅಪಾರ್ಟ್‌ಮೆಂಟಿನಲ್ಲಿ ವೇಶ್ಯಾವಾಟಿಕೆ:  ಪಯಾಜ್‌ - ಸಚಿನ್‌ ಪರಾರಿ

ಉಡುಪಿ: ಮಣಿಪಾಲ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹೆರ್ಗದ ಈಶ್ವರ ನಗರದ ಮಹಾಲಸಾ ಎಮರಾಲ್ಡ್ ಅಪಾರ್ಟ್‌ಮೆಂಟಿನ ಕೊಠಡಿ ಸಂಖ್ಯೆ 302ರಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಲಾಗಿದೆ.ವೇಶ್ಯಾವಟಿಕೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ವಿಚಾರಿಸಿ ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೈತಿಕ ಚಟುವಟಿಕೆ ಮಾಡಲು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಕೊಠಡಿಗಳನ್ನು ಒದಗಿಸಿದ ಆರೋಪಿಗಳಾದ ಪಯಾಜ್‌ ಮತ್ತು ಸಚಿನ್‌ ದಾಳಿಯ ಸಮಯ ಸ್ಥಳದಿಂದ ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರ ಇಂದಿನ ಕಾರ್ಯಕ್ರಮ ಆ 27

Posted by Vidyamaana on 2023-08-26 23:18:35 |

Share: | | | | |


ಶಾಸಕರ ಇಂದಿನ ಕಾರ್ಯಕ್ರಮ ಆ 27

ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 27 ರಂದು

ಬೆಳಿಗ್ಗೆ 10 ಕ್ಕೆತುಳು ಅಪ್ಪೆ ಕೂಟದ ವತಿಯಿಂದ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ತುಳು ಕಾರ್ಯಕ್ರಮ

11 ಗಂಟೆಗೆ ಮುರದಲ್ಲಿ‌ಶಿವ ಸದನ‌ಲೋಕಾರ್ಪಣೆ

12 ಗಂಟೆಗೆ ಬಿರ್ವೆರ್ ಸಂಘದಿಂದ ಕೆಸರುಗೊಬ್ಬು‌ ಮಂಜಲ್ಪಡ್ಪುವಿನಲ್ಲಿ

Recent News


Leave a Comment: