ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಸುದ್ದಿಗಳು News

Posted by vidyamaana on 2023-06-29 12:19:28 |

Share: | | | | |


ಮೃತಪಟ್ಟ ಗರ್ಭಿಣಿ ಮನೆಗೆ ಭೇಟಿ ನೀಡಿದ ಪುತ್ತಿಲ

ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.


ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು,  ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು. 

ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು.  ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು. 

ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು. 

ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ  ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ  ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ  ಮುಸ್ಲಿಂ ಮಗುವೊಂದು ಮೃತಪಟ್ಟಿದೆ. 

ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.

 Share: | | | | |


40 ವರ್ಷ ಇತಿಹಾಸದ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ಇನ್ನು ನೆನಪು ಮಾತ್ರ!!

Posted by Vidyamaana on 2024-06-25 22:06:47 |

Share: | | | | |


40 ವರ್ಷ ಇತಿಹಾಸದ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ಇನ್ನು ನೆನಪು ಮಾತ್ರ!!

ಪುತ್ತೂರು: ಬೋನಂತಾಯ ಆಸ್ಪತ್ರೆ ಬಳಿ, ಎಸ್.ಪಿ.ಟಿ. ಸೇತುವೆ ಪಕ್ಕದಲ್ಲಿರುವ ನ್ಯೂ ಗಣೇಶ್ ಪ್ರಸಾದ್ ಹೋಟೆಲ್ ತನ್ನ 40 ವರ್ಷಗಳ ಪಯಣವನ್ನು ಕೊನೆಗೊಳಿಸುತ್ತಿದೆ.ಜೂನ್ 28ರ ಬಳಿಕ ಅಂದರೆ ಶುಕ್ರವಾರದ ನಂತರ ಈ ಹೋಟೆಲ್ ಇರುವುದಿಲ್ಲ.

1979ರಲ್ಲಿ ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಳದ ಕೆರೆ ಪಕ್ಕದಲ್ಲಿದ್ದ ದೇವಸ್ಥಾನದ ಕಟ್ಟಡದಲ್ಲಿ ಗಣೇಶ್ ಪ್ರಸಾದ್ ಹೋಟೆಲ್ ಪರಿಚಯಿಸಲ್ಪಟ್ಟಿತು. 1984ರ ಫೆಬ್ರುವರಿ 12ರಂದು ಅಲ್ಲೇ ಎದುರಿನ ಕಟ್ಟಡದಲ್ಲಿ ನ್ಯೂ ಗಣೇಶ್ ಪ್ರಸಾದ್ ಎಂಬ ಹೆಸರಿನಲ್ಲಿ ಹೋಟೆಲ್ ಉದ್ಯಮದ ಇನ್ನೊಂದು ಶಾಖೆಯನ್ನು ತೆರೆಯಲಾಯಿತು.

ಇನ್ನು ಈ ಎಲ್ಲಾ ದಾಖಲಾತಿಗಳನ್ನು ಮಾಡಿಸಲು ಜನನ ಪ್ರಮಾಣ ಪತ್ರ ಇದ್ರೆ ಸಾಕು!

Posted by Vidyamaana on 2023-09-15 11:15:04 |

Share: | | | | |


ಇನ್ನು ಈ ಎಲ್ಲಾ ದಾಖಲಾತಿಗಳನ್ನು ಮಾಡಿಸಲು ಜನನ ಪ್ರಮಾಣ ಪತ್ರ ಇದ್ರೆ ಸಾಕು!

ನವದೆಹಲಿ: ಹಲವು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಮಾಡುವ ತಿದ್ದುಪಡಿ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.

ಇತ್ತಿಚಿಗೆ ಸಂಸತ್‌ನಲ್ಲಿ ಅನುಮೋದನೆಗೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು (Droup

non

i Murmu) ಅಂಕಿತ ಹಾಕಿದ್ದ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಗೃಹ ಇಲಾಖೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಈ ಮಾಹಿತಿ ನೀಡಿದ್ದಾರೆ.


ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಚಾಲನಾ ಪರವಾನಗಿ ನೀಡಿಕೆ, ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಮತ್ತು ವಿವಾಹ ನೋಂದಣಿಯಂತಹ ಹಲವಾರು ಕೆಲಸಗಳು ಮತ್ತು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಲು ಹೊಸ ತಿದ್ದುಪಡಿ ಮಾಡಿದ ಕಾನೂನು ಅನುಕೂಲ ಮಾಡುತ್ತದೆ. ಈ ತಿದ್ದುಪಡಿ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.ಸಂಸತ್ತು ಕಳೆದ ಮಾನ್ಸೂನ್ ಅಧಿವೇಶನದಲ್ಲಿ ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅನ್ನು ಅಂಗೀಕರಿಸಿತ್ತು. ಇದೀಗ ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಸ್ಟ್ 11 ರಂದು ಒಪ್ಪಿಗೆ ನೀಡಿದ್ದಾರೆ. "ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 (2023 ರ 20) ರ ವಿಭಾಗ 1 ರ ಉಪ-ವಿಭಾಗ (2) ರ ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, ಕೇಂದ್ರ ಸರ್ಕಾರವು ಈ ಮೂಲಕ ಅಕ್ಟೋಬರ್ 1, 2023 ರ ದಿನಾಂಕವನ್ನು ನೇಮಿಸುತ್ತದೆ. ಸದರಿ ಕಾಯಿದೆಯ ನಿಬಂಧನೆಗಳು ಜಾರಿಗೆ ಬರುವ ದಿನಾಂಕ" ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಮೃತುಂಜಯ್ ಕುಮಾರ್ ನಾರಾಯಣ್ ಹೊರಡಿಸಿದ ಅಧಿಸೂಚನೆಯಲ್ಲಿ ಹೇಳಲಾಗಿದೆ.


ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ನೀಡಿಕೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಆಧಾರ್ ಸಂಖ್ಯೆ, ಮದುವೆ ನೋಂದಣಿ ಅಥವಾ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮುಂತಾದ ಹಲವಾರು ಉದ್ದೇಶಗಳಿಗಾಗಿ ಜನನ ಪ್ರಮಾಣಪತ್ರವನ್ನು (Birth Certificate) ಒಂದೇ ದಾಖಲೆಯಾಗಿ ಬಳಸಲು ಈ ಕಾನೂನು ಅನುಮತಿಸುತ್ತದೆ. ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ದಾಖಲೆಯನ್ನು ರಚಿಸಲು ಕಾನೂನು ಸಹಾಯ ಮಾಡುತ್ತದೆ. ಇದು ಅಂತಿಮವಾಗಿ ಡಿಜಿಟಲ್ ನೋಂದಣಿ ಮೂಲಕ ಸಮರ್ಥ ಮತ್ತು ಪಾರದರ್ಶಕ ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಪ್ರಯೋಜನಗಳನ್ನು ಖಚಿತಪಡಿಸುತ್ತದೆ.ಇದಲ್ಲದೆ ಮತದಾರ ಪಟ್ಟಿಯೊಂದಿಗೆ ಜನನ/ಮರಣ ಮಾಹಿತಿ ಜೋಡಣೆಯಿಂದ ವೋಟರ್ ಲಿಸ್ಟ್ ಪರಿಷ್ಕರಣೆ ಸ್ವಯಂಚಾಲಿತವಾಗಲಿದೆ.


ಯಾವುದೇ ವ್ಯಕ್ತಿಗೆ 18 ವರ್ಷ ವಯಸ್ಸು ತುಂಬುತ್ತಲೇ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಮಾಡಿಸಿಕೊಳ್ಳುವಂತೆ ಚುನಾವಣಾ ಆಯೋಗದ ಕಡೆಯಿಂದ ಸೂಚನೆ ಬರಲಿದೆ. ಅದೇ ರೀತಿ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ, ಚುನಾವಣಾ ಆಯೋಗವು ತಾನೇ ಆ ವ್ಯಕ್ತಿಯ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲಿದೆ. ಆದರೆ ಇದಕ್ಕೂ ಮುನ್ನ ಆ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 15 ದಿನದೊಳಗೆ ಮರಣದ ವಿಷಯವನ್ನು ದೃಢಪಡಿಸಬೇಕಾಗುತ್ತದೆ.ಯಾವುದೇ ಜನನ ಅಥವಾ ಮರಣದ ನಂತರ ರಿಜಿಸ್ಟ್ರಾರ್‌ಗೆ ವಿಳಂಬವಾದ ಮಾಹಿತಿಯ ಸಂದರ್ಭದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಥವಾ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ನಿಂದ ಅಧಿಕಾರ ಪಡೆದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ನ ಮ್ಯಾಜಿಸ್ಟ್ರೇಟ್ ಅಥವಾ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್‌ ನಿಂದ ಆದೇಶದ ಅಧಿಕಾರವನ್ನು ಬದಲಾಯಿಸಲು ಕಾಯಿದೆ ಒದಗಿಸುತ್ತದೆ.


30 ದಿನಗಳ ನಂತರ ರಿಜಿಸ್ಟ್ರಾರ್‌ಗೆ ಯಾವುದೇ ಜನನ ಅಥವಾ ಮರಣದ ವಿಳಂಬದ ಮಾಹಿತಿಯ ಸಂದರ್ಭದಲ್ಲಿ ನೋಟರಿ ಸಾರ್ವಜನಿಕರ ಮುಂದೆ ಮಾಡಿದ ಅಫಿಡವಿಟ್‌ಗೆ ಬದಲಾಗಿ ಅದು ಸಂಭವಿಸಿದ ಒಂದು ವರ್ಷ ಮತ್ತು ಸ್ವಯಂ-ದೃಢೀಕರಿಸಿದ ದಾಖಲೆಯನ್ನು ಸಲ್ಲಿಸಬಹುದು. ಆದರೆ ಇದು ಅದು ಸಂಭವಿಸಿದ ಒಂದು ವರ್ಷದೊಳಗೆ ಸಲ್ಲಿಸಬೇಕಾಗುತ್ತದೆ.ದತ್ತು ಪಡೆದ, ಅನಾಥ, ಪರಿತ್ಯಕ್ತ, ಶರಣಾದ, ಬಾಡಿಗೆ ಮಗು ಮತ್ತು ಮಗುವಿನ ನೋಂದಣಿ ಪ್ರಕ್ರಿಯೆಯನ್ನು ಏಕ ಪೋಷಕರು ಅಥವಾ ಅವಿವಾಹಿತ ತಾಯಿಗೆ ನೋಂದಾಯಿಸಲು ಶಾಸನವು ಒದಗಿಸುತ್ತದೆ ಮತ್ತು ಎಲ್ಲಾ ವೈದ್ಯಕೀಯ ಸಂಸ್ಥೆಗಳು ಮರಣದ ಕಾರಣದ ಬಗ್ಗೆ ರಿಜಿಸ್ಟ್ರಾರ್‌ಗೆ ಪ್ರಮಾಣಪತ್ರವನ್ನು ನೀಡುವುದನ್ನು ಕಡ್ಡಾಯಗೊಳಿಸುತ್ತದೆ ಮತ್ತು ಹತ್ತಿರದ ಸಂಬಂಧಿಗೆ ಅದೇ ಪ್ರತಿ. ವಿಪತ್ತು ಅಥವಾ ಸಾಂಕ್ರಾಮಿಕ ಸಂದರ್ಭದಲ್ಲಿ ಸಾವಿನ ತ್ವರಿತ ನೋಂದಣಿ ಮತ್ತು ಪ್ರಮಾಣಪತ್ರಗಳ ವಿತರಣೆಗಾಗಿ ವಿಶೇಷ "ಸಬ್-ರಿಜಿಸ್ಟ್ರಾರ್" ಗಳನ್ನು ನೇಮಿಸಲು, ಜನ್ಮ ನೋಂದಣಿಯ ಸಂದರ್ಭದಲ್ಲಿ ಪೋಷಕರು ಮತ್ತು ಮಾಹಿತಿದಾರರ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಇದು ಒದಗಿಸುತ್ತದೆ.

ರಿಜಿಸ್ಟ್ರಾರ್ ಅಥವಾ ಜಿಲ್ಲಾ ರಿಜಿಸ್ಟ್ರಾರ್‌ರ ಯಾವುದೇ ಕ್ರಮ ಅಥವಾ ಆದೇಶದಿಂದ ಬಾಧಿತರಾದ ಸಾಮಾನ್ಯ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವುದನ್ನು ಇದು ಖಚಿತಪಡಿಸುತ್ತದೆ ಮತ್ತು ಕಾಯಿದೆಯಲ್ಲಿ ಒದಗಿಸಲಾದ ದಂಡವನ್ನು ಹೆಚ್ಚಿಸುತ್ತದೆಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದು, ಮೂಲ ಕಾಯಿದೆಯು ಪ್ರಾರಂಭದಿಂದಲೂ ತಿದ್ದುಪಡಿ ಮಾಡಲಾಗಿಲ್ಲ ಮತ್ತು ಅದರ ಕಾರ್ಯಾಚರಣೆಯ ಅವಧಿಯಲ್ಲಿ ಸಾಮಾಜಿಕ ಬದಲಾವಣೆ ಮತ್ತು ತಾಂತ್ರಿಕ ಪ್ರಗತಿಗೆ ಅನುಗುಣವಾಗಿ ಮತ್ತು ಅದನ್ನು ಹೆಚ್ಚು ನಾಗರಿಕ ಸ್ನೇಹಿಯನ್ನಾಗಿ ಮಾಡಲು, ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಹೇಳಿದ್ದರು

ನೈಜೀರಿಯಾದಲ್ಲಿ ಜನಾಂಗೀಯ ಉದ್ವಿಗ್ನತೆ: ಸರಣಿ ದಾಳಿಯಲ್ಲಿ 160ಕ್ಕೂ ಹೆಚ್ಚು ಮಂದಿ ಸಾವು, 300 ಜನರಿಗೆ ಗಾಯ

Posted by Vidyamaana on 2023-12-26 15:02:37 |

Share: | | | | |


ನೈಜೀರಿಯಾದಲ್ಲಿ ಜನಾಂಗೀಯ ಉದ್ವಿಗ್ನತೆ: ಸರಣಿ ದಾಳಿಯಲ್ಲಿ 160ಕ್ಕೂ ಹೆಚ್ಚು ಮಂದಿ ಸಾವು, 300 ಜನರಿಗೆ ಗಾಯ

 ಬೊಕ್ಕೋಸ್: ಮಧ್ಯ ನೈಜೀರಿಯಾದಲ್ಲಿ ಸಶಸ್ತ್ರ ಗುಂಪುಗಳು ಹಳ್ಳಿಗಳ ಮೇಲೆ ಸರಣಿ ದಾಳಿ ನಡೆಸಿದ್ದು, ಈ ವೇಳೆ, ಸುಮಾರು 160 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.ಧಾರ್ಮಿಕ ಮತ್ತು ಜನಾಂಗೀಯ ಉದ್ವಿಗ್ನತೆಗಳಿಂದ ಹಲವಾರು ವರ್ಷಗಳಿಂದ ಪೀಡಿತ ಪ್ರದೇಶದಲ್ಲಿ 16 ಮಂದಿ ಸತ್ತಿದ್ದಾರೆ ಎಂದು ಸೇನೆಯು ಭಾನುವಾರ ಸಂಜೆ ವರದಿ ಮಾಡಿದ ಆರಂಭಿಕ ಅಂಕಿ ಅಂಶದ ನಂತ್ರ, ಈ ಸಾವುಗಳ ಸಂಖ್ಯೆ ಏರಿಕೆಯಾಗಿದೆ.ಶನಿವಾರದ ಈ ಹಗೆತನವು ಸೋಮವಾರದ ಮುಂಜಾನೆಯವರೆಗೆ ಮುಂದುವರಿದಿದ್ದರಿಂದ 113 ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ ಎಂದು ಪ್ರಸ್ಥಭೂಮಿ ರಾಜ್ಯದ ಬೊಕ್ಕೋಸ್‌ನಲ್ಲಿರುವ ಸ್ಥಳೀಯ ಸರ್ಕಾರದ ಮುಖ್ಯಸ್ಥ ಕಸ್ಸಾ ಸೋಮವಾರ ತಿಳಿಸಿದರು.


ಸ್ಥಳೀಯವಾಗಿ ದರೋಡೆಕೋರರು ಎಂದು ಕರೆಯಲ್ಪಡುವ ಮಿಲಿಟರಿ ಗ್ಯಾಂಗ್‌ಗಳು ವಿಭಿನ್ನ ಸಮುದಾಯಗಳ ಮೇಲೆ ಸಂಘಟಿತ ದಾಳಿಗಳನ್ನು ಪ್ರಾರಂಭಿಸಿದವು ಮತ್ತು ಮನೆಗಳನ್ನು ಸುಟ್ಟುಹಾಕಿದವು ಎಂದು ಕಸ್ಸಾ ಹೇಳಿದರು.

ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ರಾಜ್ಯಪಾಲರಾಗಿ ಆಗಿ ನೇಮಕ

Posted by Vidyamaana on 2023-02-12 10:44:47 |

Share: | | | | |


ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ರಾಜ್ಯಪಾಲರಾಗಿ ಆಗಿ ನೇಮಕ

ನವದೆಹಲಿ; ಮೂಡಬಿದರೆ ಮೂಲದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಎಸ್.ಅಬ್ದುಲ್ ನಝೀರ್ ಆಂಧ್ರಪ್ರದೇಶ ಗವರ್ನರ್ ಆಗಿ ನೇಮಕವಾಗಿದ್ದಾರೆ. ಆಂಧ್ರಪ್ರದೇಶದ ಹಾಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್ ಅವರನ್ನು ಛತ್ತೀಸ್‌ಗಢದ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ.ನೇಮಕಾತಿಗೆ ರಾಷ್ಟ್ರಪತಿ ದೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ಎಸ್.ಅಬ್ದುಲ್ ನಜೀರ್ ಅವರು ದಕ್ಷಿಣ ಕನ್ನಡದ ಬೆಳುವಾಯಿ ಮೂಲದವರಾಗಿದ್ದು, ಐತಿಹಾಸಿಕ ಅಯೋಧ್ಯೆ ರಾಮಜನ್ಮ ಭೂಮಿ ತೀರ್ಪು ನೀಡಿದ ಬೆಂಚ್ ಸದಸ್ಯರಾಗಿದ್ದ ಎಸ್.ಅಬ್ದುಲ್ ನಜೀರ್ ಅವರು ಜನವರಿ 14ರಂದು ನಿವೃತ್ತರಾಗಿದ್ದರು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯ ಸಂಕೀರ್ಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜಸ್ಟಿಸ್ ನಜೀರ್ ಅವರು 1958ರ ಜನವರಿ 5ರಂದು ಜನಿಸಿದರು. ಫೆಬ್ರವರಿ 18, 1983 ರಂದು ವಕೀಲರಾಗಿ ನೋಂದಾಯಿಸಿಕೊಂಡರು. ಕರ್ನಾಟಕ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದ ಅವರು 2003ರ ಮೇ 12 ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ಸಮಾಜದ ಶಿಲ್ಪಿಯಾಗಿ ಶಿಕ್ಷಕ - ವಿಶಾಲಾಕ್ಷಿ. ಕೆ. ಶಿಕ್ಷಕರು

Posted by Vidyamaana on 2024-09-05 02:50:40 |

Share: | | | | |


ಸಮಾಜದ ಶಿಲ್ಪಿಯಾಗಿ ಶಿಕ್ಷಕ - ವಿಶಾಲಾಕ್ಷಿ. ಕೆ. ಶಿಕ್ಷಕರು

ಗುರು ಬ್ರಹ್ಮ:ಗುರು ವಿಷ್ಣು: ಗುರು ದೇವೋ ಮಹೇಶ್ವರ: ಗುರು ಸಾಕ್ಷಾತ್ ಪರಬ್ರಹ್ಮ :ತಸ್ಮೈ ಶ್ರೀ ಗುರವೇ ನಮಃ 

   ಅಕ್ಕರೆಯ ತೈಲವನ್ನೆರೆದು ಜ್ಞಾನ ದೀವಿಗೆಯನ್ನು ಬೆಳಗಿ, ನನ್ನ ಜೀವನಕ್ಕೆ ಬೆಳಕು ತೋರಿ, ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟು, ಮತ್ತೆ ಅಕ್ಕರೆಯ ತೈಲವೆರೆಸಿ ,ಕಿರು ಹಣತೆಗಳ ಬೆಳಗಲು ದಾರಿ ತೋರಿದ ಪರಬ್ರಹ್ಮ ಸ್ವರೂಪಿ ನನ್ನೆಲ್ಲ ಗುರುಗಳಿಗೆ ಸಾಷ್ಟಾಂಗ ನಮಿಸುತ್ತ, ಶಿಕ್ಷಕ ವೃತ್ತಿ ಬದುಕಿನ ಧನ್ಯತೆಯ ಅಭಿಮಾನವನ್ನು ಹಂಚಿಕೊಳ್ಳಬಯಸುತ್ತಿರುವೆನು. 

       ವೃತ್ತಿಗಳಲ್ಲಿ ಅತ್ಯಂತ ಗೌರವಾನ್ವಿತ ಮತ್ತು ತೃಪ್ತಿ ನೀಡಬಲ್ಲ ಹೆಮ್ಮೆಯ ವೃತ್ತಿ ಎಂದರೆ, ಅದು ಶಿಕ್ಷಕ ವೃತ್ತಿ ಎಂದರೆ ತಪ್ಪಾಗಲಾರದು. ಏಕೆಂದರೆ ಉಳಿದೆಲ್ಲ ವೃತ್ತಿಗಳಲ್ಲಿರುವವರು ಕೇವಲ ಸಮಾಜದೊಡನೆ ಅಥವಾ ಯಾಂತ್ರಿಕ ಜಗತ್ತಿನಲ್ಲಿ ವ್ಯವಹರಿಸುತ್ತಿದ್ದರೆ, ಶಿಕ್ಷಕರು ಜೀವಂತ ದೇವರುಗಳೆಂಬ ಹೂ ಮನಸಿನ ಮಕ್ಕಳ ಜೊತೆ ಸದಾ ಸಂತೋಷದಿಂದಿರುವವರು. ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರು ಎಂದರೆ ತುಂಬಾ ಭಾಗ್ಯವಂತರು ಎಂದೇ ಹೇಳಬಹುದು. 

     ಸುಮಾರು ಮೂರು ವರ್ಷದ ನಂತರ ಅಮ್ಮನ ಬೆಚ್ಚನೆಯ ಮಡಿಲಿನಿಂದ ಶಾಲೆ ಎನ್ನುವ ಹೊಸ ಪರಿಸರವನ್ನು ಕುತೂಹಲದಿಂದ, ಭಯದಿಂದ ಪ್ರವೇಶಿಸುವ ಮಗುವಿಗೆ ಅಲ್ಲಿನ ಶಿಕ್ಷಕಿಯೇ ಸರ್ವಸ್ವವಾಗಿ ಕಾಣುತ್ತಾಳೆ. ಅದು ತನ್ನ ತಾಯಿ ಸ್ವರೂಪವನ್ನು ಶಿಕ್ಷಕಿಯಲ್ಲಿ ಕಾಣುತ್ತಾ ತಾಯಿಯ ಮಮತೆಯನ್ನು ನಿರೀಕ್ಷಿಸುತ್ತಿರುತ್ತದೆ. ಆ ಸಮಯದಲ್ಲಿ ಶಿಕ್ಷಕರಾದ ನಾವು ಕೊಡುವ ಧೈರ್ಯ ಭರವಸೆ ಪ್ರೀತಿ ಕಾಳಜಿಯು ಮಗು ನಮ್ಮನ್ನು ಸದಾ ಅನುಕರಿಸುವಂತೆ ಮಾಡುತ್ತದೆ. ಒಮ್ಮೆ ಮಕ್ಕಳು ಶಿಕ್ಷಕರಡೆಗೆ ಆಕರ್ಷಿತರಾದರೆ ಮುಂದೆ ಅವರು ಶಿಕ್ಷಕರು ಕಲಿಸುವ ಯಾವುದೇ ವಿಷಯವನ್ನು ತುಂಬಾ ಇಷ್ಟಪಟ್ಟು ಮತ್ತು ಶ್ರದ್ಧೆಯಿಂದ ಕಲಿಯುತ್ತಾರೆ .

     

ಸುಪ್ರೀಂ ಕೋರ್ಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿ

Posted by Vidyamaana on 2023-09-26 09:59:36 |

Share: | | | | |


ಸುಪ್ರೀಂ ಕೋರ್ಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿ

ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನಲ್ಲಿ ವಾಕ್ ಶ್ರವಣ ದೋಷವುಳ್ಳ ಮೂಕ ವಕೀಲೆಯೊಬ್ಬರು ಸಂಕೇತ ಭಾಷೆಯನ್ನು ಬಳಸುವ ಮೂಲಕ ವಾದ ಮಂಡಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸವನ್ನು ದಾಖಲು ಮಾಡಲಾಗಿದೆ.ಹೌದು ಭಾರತದ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರಿದ್ದ ನ್ಯಾಯಪೀಠವು ವರ್ಚುವಲ್ ಆಗಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸಾರಾ ಸನ್ನಿ ಎಂಬ ಮೂಕ ವಕೀಲೆ ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ ಮೂಲಕ ವಾದವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮುಂದೆ ಮಂಡಿಸಿದ್ದಾರೆ.ಸಾರಾ ಅವರ ಸಂಕೇತ ಭಾಷೆಯನ್ನು ಸೌರಭ್ ಅವರು ಬಾಯಿ ಮಾತಿನಲ್ಲಿ ಹೇಳುವ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿಕೊಟ್ಟಿದ್ದಾರೆ. ಈ ಪ್ರಯತ್ನವನ್ನು ಅನೇಕ ಗಣ್ಯರು, ಹಿರಿಯ ವಕೀಲರು ಶ್ಲಾಘಿಸಿದ್ದಾರೆ.


ನಡೆದಿದ್ದೇನು.?


ಅರ್ಜಿಯೊಂದರ ವಿಚಾರಣೆಯ ಆರಂಭದ ವೇಳೆ ವರ್ಚುವಲ್ ವಿಚಾರಣೆಯ ತಾಂತ್ರಿಕ ತಂಡವು ಸಾರಾಗೆ ಸ್ಕ್ರೀನ್ ಮೇಲೆ ಬರಲು ಅನುತಿ ನೀಡದೇ ಕೇವಲ ವ್ಯಾಖ್ಯಾನಕಾರ ಸೌರಭ್ ಗೆ ಅನುಮತಿ ನೀಡಿತು. ಹೀಗಾಗಿ ಮೊದಲಿಗೆ ಸ್ಕ್ರೀನ್ ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡು ಸಾರಾ ತರೆಯ ಹಿಂದೆ ಸಂಜ್ಞೆಯ ಮೂಲಕ ಹೇಳುತ್ತಿದ್ದ ವಿವರವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬಾಯಿ ಮಾತಿನ ಮೂಲಕ ತಿಳಿಸಿದರು.ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರು, ವಕೀಲೆ ಸಾರಾ ಅವರಿಗೂ ಸ್ಕ್ರೀನ್ ಮೇಲೆ ಅವಕಾಶ ನೀಡಿ ಅಂತ ಆದೇಶಿಸಿದರು. ಆಗ ಸಾರಾ ಅವರು ಒಂದು ಸ್ಕ್ರೀನ್ ನಲ್ಲಿ ತಮ್ಮ ಸಂಜ್ಞೆ ವಾದವನ್ನು ಮಂಡಿಸಿದರು. ಅವರ ವ್ಯಾಖ್ಯಾನಕಾರ ಸೌರಭ್, ಅವರ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ನ್ಯಾಯಪೀಠದ ಗಮಕ್ಕೆ ತಿಳಿಸಿದರು.


ನ್ಯಾಯಮೂರ್ತಿ ಚಂದ್ರ ಚೂಡ ಅವರು ಮೊದಲಿನಿಂದಲೂ ನ್ಯಾಯಕ್ಕೆ ಸಮಾನ ನ್ಯಾಯದಾನ ಪ್ರತೀಕರಾಗಿದ್ದಾರೆ. ಇಬ್ಬರು ಅಂಗವಿಕಲ ಬಾಲಕಿಯರ ದತ್ತು ತಂದೆಯೂ ಹೌದು. ವರ್ಷಾರಂಭದಲ್ಲಿ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳ್ನು ತಮ್ಮ ಕಚೇರಿಗೆ ಪ್ರವಾಸಕ್ಕೆಂದು ಕರೆತಂದು ಎಲ್ಲರನ್ನು ಚಕಿತಗೊಳಿಸಿದ್ದರು.


ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ. ಅಲ್ಲಿ ತಮ್ಮ ಕೆಲಸ ಏನು ಎಂಬುದನ್ನು ಅವರು ತಮ್ಮ ಹೆಣ್ಣುಮಕ್ಕಳಿಗೆ ವಿವರಿಸಿದ್ದರು. ಇಂತಹ ಅವರು ದೇಶದ ಇತಿಹಾಸದಲ್ಲಿಇದೇ ಮೊದಲು ಎನ್ನುವಂತೆ ಮೂಕ ವಕೀಲೆಯೊಬ್ಬರಿಗೆ ವಾದ ಮಂಡಿಸೋದಕ್ಕೆ ಅವಕಾಶ ಮಾಡಿಕೊಟ್ಟು, ಹೊಸ ಇತಿಹಾಸವನ್ನು ಇದೀಗ ಬರೆದಿದ್ದಾರೆ.

Recent News


Leave a Comment: