ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ಸುದ್ದಿಗಳು News

Posted by vidyamaana on 2023-07-14 03:02:36 | Last Updated by Vidyamaana on 2023-09-05 09:08:10

Share: | | | | |


ಚಾಲಕನ ನಿಯಂತ್ರಣ ತಪ್ಪಿ ಮನೆ ಮೇಲೆ ಬಿದ್ದ ಪಿಕಪ್ ವಾಹನ

ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

 Share: | | | | |


ಬೆಳ್ತಂಗಡಿ: ಅಕ್ರಮ ಮರ ಸಾಗಾಟ ಪ್ರಕರಣ; ಅರಣ್ಯಾಧಿಕಾರಿ ಅಮಾನತು

Posted by Vidyamaana on 2023-07-05 12:04:29 |

Share: | | | | |


ಬೆಳ್ತಂಗಡಿ: ಅಕ್ರಮ ಮರ ಸಾಗಾಟ ಪ್ರಕರಣ; ಅರಣ್ಯಾಧಿಕಾರಿ ಅಮಾನತು

ಬೆಳ್ತಂಗಡಿ: ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರನ್ನು ಕೆಲಸದಿಂದ ಅಮಾನತು ಗೊಳಿಸಿ ಪ್ರಧಾನ ಮುಖ್ಯವಾರಣ್ಯ ಸಾಮರಕ್ಷಣಾಧಿಕಾರಿ ಆದೇಶ ಹೊರಡಿಸಿರುವ ಬಗ್ಗೆ ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಕಲಂಜ ಗ್ರಾಮದಲ್ಲಿ ನಡೆದಿದ್ದ ಮರಗಳ ಅಕ್ರಮ ಕಳ್ಳ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಕ್ರಮ ಕೈಗೊಂಡಿದೆ. ಕಲ್ಮಂಜ ಗ್ರಾಮದಲ್ಲಿ 2.5ಎಕ್ರೆ ಪ್ರದೇಶದಲ್ಲಿನ ಮರಗಳನ್ನು ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಕಡಿಯಲಾಗಿತ್ತು ಆದರೆ ಇಲಾಖೆ ಕಾನುನಿನ ಅಡಿಯಲ್ಲಿ ಕ್ರಮ ಕೈಗೊಳ್ಳದೆ ಸೊತ್ತುಗಳನ್ನು ಸಾಗಾಟ ಮಾಡಲು ಅವಕಾಶ ಮಾಡಿಕೊಟ್ಟು ಮರಗಳ್ಳರೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪ ತ್ಯಾಗರಾಜ್ ಅವರ ಮೇಲಿತ್ತು.ಈ ಹಿನ್ನಲೆಯಲ್ಲಿ ಇಲಾಖಾ ತನಿಖೆ ನಡೆಸಲಾಗಿತ್ತು.ಇದೀಗ ತ್ಯಾಗರಾಜ್ ಅವರನ್ನು ಅಮಾನತು ಗೊಳಿಸಿ ಆದೆಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ವಿವಾದಗಳಿಗೆ ಕಾರಣವಾಗಿದ್ದ ಕಲಂಜದ ಅಕ್ರಮ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಅಧಿಕಾರಿಯ ತಲೆದಂಡವಾಗಿದೆ.

ಲಕ್ಷಾಂತರ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ಅರಣ್ಯ ದಳದ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಹಾಗೂ ಇತರರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಗಲೇ ಇಲಾಖಾ ತನಿಖೆ ಆರಂಭವಾಗಿತ್ತು. ಆದರೆ ಅಧ ಮುಂದುವರಿದ ಭಾಗವಾಗಿ ದಾಳಿ ನಡೆಸಿದ್ದ ಸಂದ್ಯಾ ಅವರನ್ನು ಬೀದರಿಗೆ ವರಗಗಾವಣೆ ಮಾಡಿ ಆದೇಶಬಂದ ಹಿನ್ನಲೆಯಲ್ಲಿ ಭಾರೀ ರಾಜಕೀಯ ವಿವಾದಗಳು ಸೃಷ್ಟಿಯಾಗಿದ್ದವು. ಅಲ್ಲದೆ ತನಿಖೆ ನಡೆಸಿದ ಹಿರಿಯ ಅಧಿಕಾರಿಗಳು ಕೆಳ ಹಂತದ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು.

ತ್ಯಾಗರಾಜ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇದೀಗ ತ್ಯಾಗರಾಜ್ ಅವರ ವಿರುದ್ಧ ಇದೇ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ

7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?

Posted by Vidyamaana on 2023-08-20 10:29:32 |

Share: | | | | |


7 ನವಜಾತ ಶಿಶುಗಳನ್ನು ಕೊಂದ ನರ್ಸ್​; ವೈದ್ಯನ ಜತೆಗಿನ ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?

ಲಂಡನ್‌: ಬ್ರಿಟನ್ನಿನ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ​ಒಬ್ಬಳು ಅಕ್ರಮ ಸಂಬಂಧ, ವಿಕೃತ ಸಂತೋಷಕ್ಕಾಗಿ ಏಳು ನವಜಾತ ಶಿಶುಗಳನ್ನು ಕೊಂದು, ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ ನರ್ಸ್​​ಗೆ ಕೋರ್ಟ್​​​ ಶಿಕ್ಷೆ ಪ್ರಕಟಿಸಿದೆ.ಬ್ರಿಟನ್‌ನ ಆಸ್ಪತ್ರೆಯೊಂದರ ನವಜಾತ ಶಿಶು ಘಟಕದಲ್ಲಿ ಒಂದು ವರ್ಷದ ಅವಧಿಯಲ್ಲಿ ಏಳು ಮಕ್ಕಳನ್ನು ಕೊಂದಿದ್ದಲ್ಲದೆ, ಇನ್ನೂ ಆರು ಮಕ್ಕಳ ಕೊಲೆಗೆ ಪ್ರಯತ್ನ ನಡೆಸಿದ್ದ ಪ್ರಕರಣದಲ್ಲಿ ನರ್ಸ್ ಒಬ್ಬಳನ್ನು ತಪ್ಪಿತಸ್ಥೆ ಎಂದು ಕೋರ್ಟ್ ಪ್ರಕಟಿಸಿದೆ.ನಡೆದಿದ್ದೇನು?: 2015 ಹಾಗೂ 2016ರ ನಡುವೆ ಇಂಗ್ಲೆಂಡ್‌ನ ಕೌಂಟೆಸ್‌ ಚೆಸ್ಟರ್‌ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ನಿಗೂಢ ಸರಣಿ ಸಾವು ಸಂಭವಿಸಿತ್ತು. ಈ ಸಂಬಂಧ 2018ರಲ್ಲಿ ಲೂಸಿ ವಿರುದ್ಧ ದೂರು ದಾಖಲಾಗಿತ್ತು.


ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿರುವ ಬಗ್ಗೆ ಆಡಳಿತ ಮಂಡಳಿ ಸಭೆ ನಡೆಸಿದಾಗ ಅಲ್ಲಿನ ಮಕ್ಕಳ ವೈದ್ಯರಲ್ಲಿ ಒಬ್ಬರಾದ ಭಾರತೀಯ ಮೂಲದ ಡಾ.ರವಿ ಜಯರಾಮ್‌ ಎಂಬುವರು ಲೂಸಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸ್‌ ತನಿಖೆಯಲ್ಲೂ ಆಕೆಯ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿಯು ಡಾ.ರವಿ ಅವರ ಹೇಳಿಕೆಯನ್ನು ಆಕ್ಷೇಪಿಸಿ, ಕಿಲ್ಲರ್‌ ನರ್ಸ್‌ ಬಳಿಯೇ ಕ್ಷಮೆ ಕೇಳುವಂತೆ ಅವರಿಗೆ ಸೂಚಿಸಿತ್ತು.ಆದರೆ ನವಜಾತ ಶಿಶುಗಳ ಸಾವಿನ ಪ್ರರಣದ ಬೆನ್ನು ಹತ್ತಿದ್ದ ಪೊಲೀಸರ ಬಲೆಗೆ ಬಿದ್ದವಳೆ ಬ್ರಿಟನ್‌ನ ಚೆಸ್ಟರ್ ಹಾಸ್ಪಿಟಲ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಲೂಸಿ ಲೆಟ್ಬಿ ಎಂಬಾಕೆ. ಬಳಿಕ ಪೊಲೀಸರು ತನಿಖೆ ನಡೆಸಿದಾಗ ನರ್ಸ್‌ ಮನೆಯಲ್ಲಿ ಆಕೆ ಬರೆದಿಟ್ಟಿದ್ದ ನೋಟ್‌ಗಳು ಪತ್ತೆಯಾಗಿದ್ದವು. ಈ ಮೂಲವನ್ನಿಟ್ಟುಕೊಂಡು ತನಿಖೆ ಕೈಗೊಂಡರು.


ಅಕ್ಟೋಬರ್‌ನಿಂದಲೂ ಉತ್ತರ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ನಡೆಸಿ ಕೋರ್ಟ್​​ ಲೂಶಿಯಾ ದೋಷಿ ಎಂದು ತೀರ್ಪು ನೀಡಿದೆ. ಆದರೆ ತನಿಖೆಯಲ್ಲಿ ಹಾಗೂ ಕೋರ್ಚ್‌ನಲ್ಲಿ ಆಕೆ ತಾನು ಯಾರನ್ನೂ ಕೊಂದಿಲ್ಲ ಎಂದೇ ವಾದಿಸಿದ್ದಳು. ಹೀಗಾಗಿ ಸರಣಿ ಶಿಶುಗಳ ಹತ್ಯೆಯ ಕಾರಣ ಇನ್ನೂ ನಿಗೂಢವಾಗಿದೆ. ಆದರೆ ಮೃತ ಶಿಶುಗಳ ಪೋಷಕರು ಹಾಗೂ ವಕೀಲರು ಆಕೆಯ ಕ್ರೂರ ಕೃತ್ಯದ ಕುರಿತಾಗಿ ಕೆಲವು ಕೆಲವು ಮಾಹಿತಿಯನ್ನು ನೀಡಿದ್ದಾರೆಮಕ್ಕಳನ್ನು ಕ್ರೂರವಾಗಿ ಕೊಲ್ಲುತ್ತಿದ್ದಳು:

ನವಜಾತ ಶಿಶುಗಳ ರಕ್ತನಾಳಕ್ಕೆ ಖಾಲಿ ಇಂಜೆಕ್ಷನ್‌ ಚುಚ್ಚಿ ಅಥವಾ ಇನ್ಸುಲಿನ್‌ ಓವರ್‌ಡೋಸ್‌ ನೀಡಿ ಅಥವಾ ಹೊಟ್ಟೆಗೆ ನ್ಯಾಸೋಗ್ಯಾಸ್ಟ್ರಿಕ್‌ ಟ್ಯೂಬ್‌ ಮೂಲಕ ಹಾಲು ಅಥವಾ ಗಾಳಿಯನ್ನು ತುಂಬಿ ಲೂಸಿ ಕ್ರೂರವಾಗಿ ಕೊಲ್ಲುತ್ತಿದ್ದಳು. ತಾನು ನರ್ಸ್‌ ಆಗಿದ್ದ ಆಸ್ಪತ್ರೆಯಲ್ಲಿ ಲೂಸಿ ಐದು ಗಂಡು ಶಿಶು, ಎರಡು ಹೆಣ್ಣು ಶಿಶುಗಳನ್ನು ಕೊಂದಿದ್ದಾಳೆ. ಇನ್ನೂ ಆರು ಶಿಶುಗಳನ್ನು ಕೊಲ್ಲಲು ಯತ್ನಿಸಿದ್ದಾಳೆ.


ಅಕ್ರಮ ಸಂಬಂಧ ಕೊಲೆಗೆ ಕಾರಣವಾಗಿತ್ತಾ?: ಲೂಸಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವಿವಾಹಿತ ವೈದ್ಯರೊಂದಿಗೆ ಲೂಸಿ ಅಕ್ರಮ ಸಂಬಂಧ ಹೊಂದಿದ್ದಳು, ಶಿಶುಗಳು ಗಂಭೀರ ಸ್ಥಿತಿಯಲ್ಲಿದ್ದಾಗ ಕರೆಸುತ್ತಿದ್ದರಂತೆ. ಶಿಶುವಿಗೆ ಆರೋಗ್ಯ ಸಮಸ್ಯೆಯಾದಾಗ ಆ ವೈದ್ಯರನ್ನು ಆಕೆಯನ್ನು ಕರೆಯಬೇಕಿತ್ತು. ಆಗ ವೈದ್ಯನ ಗಮನ ಸೆಳೆಯುವುದಕ್ಕಾಗಿ ಶಿಶುಗಳನ್ನು ಕೊಲ್ಲುತ್ತಿದ್ದಳು ಎನ್ನಲಾಗಿದೆ. ಇದೇ ಕಾರಣಕ್ಕೆ ನರ್ಸ್ ವಿವಾಹಿತ ವೈದ್ಯನನ್ನ ನೋಡುವ ಸಲುವಾಗಿ ಈ ರೀತಿ ಕೃತ್ಯ ಎಸಗಿದ್ದಾಳೆ ಎಂದು ಆರೋಪ ಮಾಡಲಾಗಿದೆಶಿಶು ಸಾವನ್ನಪ್ಪಿದ ಬಳಿಕ ವಾರ್ಡ್‌ನಲ್ಲಿ ಪೋಷಕರು ಅಳುವುದನ್ನು ನೋಡಿ ಲೂಸಿ ವಿಕೃತ ಸಂತೋಷ ಅನುಭವಿಸುತ್ತಿದ್ದಳು. ಶಿಶುಗಳಿಗೆ ಇಂಜೆಕ್ಷನ್‌ ಚುಚ್ಚಿದ ಬೇರೆ ನರ್ಸ್‌ಗಳನ್ನು ಕರೆದುಕೊಂಡು ಬಂದು ಈ ಮಗು ಸಾಯುತ್ತದೆ ಎಂದು ಹೇಳುವ ಮೂಲಕ ತನಗೆ ಎಲ್ಲವೂ ಮೊದಲೇ ತಿಳಿಯುತ್ತದೆ ಎಂದು ಆಕೆಗೆ ಬಿಂಬಿಸುತ್ತಿದ್ದಳು.

ಬೊಳುವಾರಿನಲ್ಲಿ ನೆಲಕ್ಕುರುಳಿದ ಬೃಹತ್ ಮಾವಿನ ಮರ

Posted by Vidyamaana on 2024-04-27 21:58:21 |

Share: | | | | |


ಬೊಳುವಾರಿನಲ್ಲಿ ನೆಲಕ್ಕುರುಳಿದ ಬೃಹತ್ ಮಾವಿನ ಮರ

ಪುತ್ತೂರು: ಪುತ್ತೂರು ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರಿ ಗಾತ್ರದ ಮಾವಿನ ಮರವೊಂದು ಧರಶಾಯಿಯಾದ ಘಟನೆ ಎ.27ರಂದು ನಡೆದಿದ್ದು, ಘಟನಾ ಸ್ಥಳಕ್ಮೆ ಶಾಸಕರು‌ಭೇಟಿ ನೀಡಿ ಪರಿಶೀಲನೆ ನಡೆಸಿದ್ದು‌ಮರ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.

 ಬಿದ್ದ ಮರದಲ್ಲಿದ್ದ ಮಾವಿನ ಕಾಯಿ ಕೊಯ್ಯಲು ಜನ ಮುಗಿ ಬಿದ್ದಿದ್ದಾರೆ.ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲೇ ಹಲವು ವರ್ಷಗಳಿಂದ ಇದ್ದ ಮಾವಿನ ಮರವೊಂದು ಸಂಜೆ ವೇಳೆ ಆಕಸ್ಮಿಕವಾಗಿ ಧರಶಾಯಿಯಾಗಿದೆ.

ಮರ್ಧಾಳ ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಘೋಷಣೆ ಕೂಗಿದ ಪ್ರಕರಣ

Posted by Vidyamaana on 2023-09-25 18:02:25 |

Share: | | | | |


ಮರ್ಧಾಳ ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಘೋಷಣೆ ಕೂಗಿದ ಪ್ರಕರಣ

ಕಡಬ: ರಾತ್ರಿ ವೇಳೆ ಬೈಕ್ ನಲ್ಲಿ ಆಗಮಿಸಿದ ಕಿಡಿಗೇಡಿಗಳಿಬ್ಬರು ಮಸೀದಿಯ ಕಾಂಪೌಂಡ್ ಒಳಗೆ ನುಗ್ಗಿ ಜೈಶ್ರೀರಾಂ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.



ಬಂಧಿತ ಆರೋಪಿಯನ್ನು ಬಿಳಿನೆಲೆ ಸೂಡ್ಲು ನಿವಾಸಿ ಕೀರ್ತನ್ (25) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ಕೈಕಂಬ ನಡ್ತೋಟ ನಿವಾಸಿ ಸಚಿನ್ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.



ರವಿವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕಡಬ ಠಾಣಾ ವ್ಯಾಪ್ತಿಯ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಕಾಂಪೌಂಡ್ ಒಳಗೆ ಬೈಕಿನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಮಸೀದಿಯ ವರಾಂಡದಲ್ಲಿ ಬೈಕನ್ನು ಹಿಂತಿರುಗಿಸಿ ತೆರಳಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜೈಶ್ರೀರಾಂ ಘೋಷಣೆ ಕೂಗಿದ್ದಾರೆ ಎನ್ನಲಾಗಿದ್ದು, ಮಸೀದಿಯಲ್ಲಿದ್ದ ಧರ್ಮಗುರುಗಳನ್ನು ಕಂಡು ತಕ್ಷಣವೇ ಹಿಂತಿರುಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಸುಳ್ಯ : ಕಾರು ಡಿಯೋ ನಡುವೆ ಮುಖಾಮುಖಿ ಡಿಕ್ಕಿ ನಜ್ಜು ಗುಜ್ಜಾದ ದ್ವಿಚಕ್ರ ವಾಹನ!

Posted by Vidyamaana on 2023-02-19 09:58:08 |

Share: | | | | |


ಸುಳ್ಯ : ಕಾರು ಡಿಯೋ ನಡುವೆ ಮುಖಾಮುಖಿ ಡಿಕ್ಕಿ ನಜ್ಜು ಗುಜ್ಜಾದ ದ್ವಿಚಕ್ರ ವಾಹನ!

 ಸುಳ್ಯ :ಕಾರು ಮತ್ತು ಡಿಯೋ ಮುಖಾಮುಖಿ ಡಿಕ್ಕಿಯಾದ ಘಟನೆ ಫೆ .19 ಭಾನುವಾರ ಸುಳ್ಯದ ಕೋಲ್ಚಾರ್ ಸಮೀಪ ಸಂಭವಿಸಿದ್ದು ಇಬ್ಬರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.

ಕೋಲ್ಚಾರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರಿಗೆ ಸ್ಕೂಟರ್ ಡಿಕ್ಕಿಯಾದ ಪರಿಣಾಮ , ಸ್ಕೂಟರ್ ಸಂಪೂರ್ಣ ನಜ್ಜು-ಗುಜ್ಜಾಗಿದೆ. ಇಬ್ಬರು ದ್ವಿಚಕ್ರ ಸವಾರರಾದ ಜತೀನ್ ಮತ್ತು ಮೋಹನ್ ಇವರಿಗೆ ಗಾಯಗಳಾದ ಬಗ್ಗೆ ವರದಿಯಾಗಿದೆ.

ಗಾಯಾಳುಗಳನ್ನು ಕೊಲ್ಲಮೊಗ್ರದ ಸತೀಶ್ ಮತ್ತು ಸಹೋದರರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಶರಣಾದ ಹೋಟೆಲ್ ಮ್ಯಾನೇಜ‌ರ್ ಸನ್ನಿಧಿ

Posted by Vidyamaana on 2024-08-03 14:21:27 |

Share: | | | | |


ಆತ್ಮಹತ್ಯೆಗೆ ಶರಣಾದ ಹೋಟೆಲ್ ಮ್ಯಾನೇಜ‌ರ್ ಸನ್ನಿಧಿ

ಬೆಂಗಳೂರು : ನೆಲಮಂಗಲದ ಶ್ರೀನಂದಿ ವೈಭವ್ ಹೋಟೆಲ್ ಮ್ಯಾನೇಜರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸನ್ನಿಧಿ(24) ಮೃತ ವ್ಯಕ್ತಿ. ಹೋಟೆಲ್ ಪಕ್ಕದ ಜಾಗದಲ್ಲಿ ಕಬ್ಬಿಣದ ಆಯಂಗಲ್​ಗೆ ಸ್ಕ್ರೀನ್ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

Recent News


Leave a Comment: