ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಸುದ್ದಿಗಳು News

Posted by vidyamaana on 2024-07-25 06:35:41 |

Share: | | | | |


ಕಾಲೇಜು ಶುಲ್ಕ ಹಣದಲ್ಲಿ ದಂಡ ಕಟ್ಟಿದ ಯುವಕ.! PSI ಮಾಡಿದ್ದೇನು ಗೊತ್ತಾ..?

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ ನಗರದ ಕಂಠಿ ಸರ್ಕಲ್ ಬಳಿ ತ್ರಿಬಲ್ ರೈಡ್ ನಲ್ಲಿ ಬಂದ ಯುವಕರಿಗೆ ಪಿಎಸ್ ಐ ಬುದ್ದಿವಾದ ಹೇಳಿದ ಘಟನೆ ನಡೆದಿದೆ. ತ್ರಿಬಲ್ ರೈಡ್ ಮೂಲಕ ಕಾಲೇಜ್ ಅಡ್ಮಿಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ಇಳಕಲ್ ನಗರ ಠಾಣಾ ಮಹಿಳಾ ಪಿಎಸ್‌ಐ ಎಸ್.ಆರ್.ನಾಯಕ್ ಎಂಬವರು ಬಾಲಕನಿಗೆ ದಂಡ ಕಟ್ಟುವಂತೆ ಒತ್ತಾಯಿಸಿದ್ದರು.

ಆದ್ರೆ, ಕಣ್ಣೀರಿಟ್ಟ ಬಾಲಕ, ನನ್ನ ಬಳಿ ಹಣವಿಲ್ಲ ಆದರೆ, ಕಾಲೇಜು ಶುಲ್ಕ ಕಟ್ಟಲೆಂದು ಇಟ್ಟುಕೊಂಡಿರುವ ದುಡ್ಡಿದೆ ಅಷ್ಟೇ. ಅದನ್ನೇ ತಗೆದುಕೊಳ್ಳಿ ಎಂದು ಅಳುತ್ತ ದುಡ್ಡು ಕೊಟ್ಟಿದ್ದಾನೆ.

ಬಾಲಕನ ಹೇಳಿಕೆಯನ್ನು ಪರಿಶೀಲಿಸಿದ ಬಳಿಕ ಮಹಿಳಾ ಪಿಎಸ್‌ಐ ಅಪ್ಪಿಕೊಂಡು ಸಾಂತ್ವನ ತಿಳಿಸಿ, ತಮ್ಮ ಬಳಿಯಿದ್ದ ದಂಡದ ಹಣವನ್ನು ವಾಪಸ್ ಕೊಟ್ಟು, ಧೈರ್ಯ ತುಂಬಿದ್ದಾರೆ. ಪೋಷಕರು ಮಕ್ಕಳಿಗೆ ಬೈಕ್, ಸ್ಕೂಟರ್ ಕೊಡುವ ಮುನ್ನ ಹತ್ತು ಬಾರಿ ಎಚ್ಚರ ವಹಿಸಿ ಎಂದು ಮಹಿಳಾ ಪಿಎಸ್‌ಐ ಹೇಳಿದ್ದಾರೆ.

 Share: | | | | |


ಮಗಳ ಮೇಲೆ ಆಸೆ, ಅತ್ತೆ ಮೇಲೆ ಪ್ರೀತಿ; ರಾತ್ರಿ ಚಕ್ಕಂದವಾಡ್ತಿದ್ದಾಗ ಗ್ರಾಮಸ್ಥರ ಕೈಗೇ ಸಿಕ್ಕಿಬಿದ್ದ ಅತ್ತೆ-ಅಳಿಯ!

Posted by Vidyamaana on 2023-12-17 12:35:50 |

Share: | | | | |


ಮಗಳ ಮೇಲೆ ಆಸೆ, ಅತ್ತೆ ಮೇಲೆ ಪ್ರೀತಿ; ರಾತ್ರಿ ಚಕ್ಕಂದವಾಡ್ತಿದ್ದಾಗ ಗ್ರಾಮಸ್ಥರ ಕೈಗೇ ಸಿಕ್ಕಿಬಿದ್ದ ಅತ್ತೆ-ಅಳಿಯ!

ಬಿಹಾರ: ಅತ್ತೆಯಂದಿರ ಪಾಲಿಗೆ ಅಳಿಯ ಅಂದ್ರೆ ಮಗನ ಸಮಾನ ಅಂತಾರೆ. ಆದ್ರೆ ಇಲ್ಲಿ ಮಾತ್ರ ಅತ್ತೆ, ತನ್ನ ಅಳಿಯನನ್ನು ನೋಡಿ ನೀನೇ ನನ್ನ ನಲ್ಲ ಅಂತಿದ್ದಾಳೆ. ಅಳಿಯನೂ ಅಷ್ಟೆ. ಅತ್ತೇನೆ ನನ್ನ ಜೀವ, ಜೀವನ ಎಂದು ಹಿಂದೆ ಬಿದ್ದಿದ್ದಾನೆ. ತನ್ನ ಸ್ವಂತ ಅತ್ತೆಯನ್ನೇ ಗೆಳತಿಯಾಗಿ ಮಾಡಿಕೊಂಡಿದ್ದಾನೆ.ಬಿಹಾರದಲ್ಲಿ ಅತ್ತೆ-ಅಳಿಯನ ಪ್ರೀತಿಯ ಸುದ್ದಿ ಪೊಲೀಸ್ ಠಾಣೆಯ ವರೆಗೂ ತಲುಪಿದೆ.


ಮದುವೆಗೂ (Marriage) ಮುನ್ನ ವ್ಯಕ್ತಿ ತನ್ನ ಅತ್ತೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಅಲ್ಲಿ ಅವನು ತನ್ನ ಸೋದರ ಸಂಬಂಧಿಯ ವಿಧವೆ ಅತ್ತೆಯೊಂದಿಗೆ ಪ್ರೀತಿ ಯಲ್ಲಿ ಸಿಲುಕಿದ್ದಾನೆ. ನಂತರ ಇಬ್ಬರೂ ರಹಸ್ಯವಾಗಿ ಭೇಟಿಯಾಗಲು ಪ್ರಾರಂಭಿಸಿದ್ದಾರೆ. ಬಿಹಾರದ ಜಮುಯಿಯಲ್ಲಿ ಈ ಘಟನೆ ನಡೆದಿರೋದಾಗಿ ವರದಿಯಾಗಿದೆ. ಅಳಿಯ ಮತ್ತು ಅತ್ತೆ ಪರಸ್ಪರ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಆಗಾಗ ರಹಸ್ಯವಾಗಿ ಭೇಟಿಯಾಗುತ್ತಿದ್ದರು.ರಾತ್ರಿ ಭೇಟಿ ಮಾಡುವಾಗ ಸಿಕ್ಕಿಬಿದ್ದ ಅತ್ತೆ-ಅಳಿಯ, ಗ್ರಾಮಸ್ಥರಿಂದ ಥಳಿತ

ಆದರೆ ಇತ್ತೀಚಿಗೆ ಅಳಿಯ ರಾತ್ರಿಯಲ್ಲಿ ತನ್ನ ಅತ್ತೆಯನ್ನು ಭೇಟಿಯಾಗಲು ಹೋಗಿದ್ದು, ಇಬ್ಬರೂ ಮೈ ಮರೆತು ಚಕ್ಕಂದವಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಅಳಿಯನನ್ನು ತೀವ್ರವಾಗಿ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣವು ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹನ್ಸ್ದಿಹ್ ಗ್ರಾಮಕ್ಕೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.


ಬಂಕಾ ಜಿಲ್ಲೆಯ ಧೋರೈಯಾ ಗ್ರಾಮದ ನಿವಾಸಿ ಚಂದನ್ ಗೋಸ್ವಾಮಿ ಅವರ ಅತ್ತಿಗೆ ಹನ್ಸ್ದಿಹ್ ಗ್ರಾಮದಲ್ಲಿದ್ದಾರೆ. ಅವರ ಸೋದರ ಸಂಬಂಧಿ ವಿಧವೆ ಅತ್ತೆ ಕೂಡ ಅಲ್ಲಿ ವಾಸಿಸುತ್ತಿದ್ದಾರೆ. ಅತ್ತೆಯ ಮನೆಗೆ ಹೋಗುವಾಗ ಚಂದನ್‌ಗೆ ಆಕೆಯ ಮೇಲೆ ಪ್ರೀತಿಯಾಗಿದೆ. ಇಲ್ಲಿಂದ ಇಬ್ಬರ ನಡುವೆ ಲವ್ ಸ್ಟೋರಿ ಶುರುವಾಗಿದೆ. ಇದಾದ ನಂತರ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಅತ್ತೆಯನ್ನು ಭೇಟಿಯಾಗಲು ಚಂದನ್‌, ಆಗಾಗ ಹನ್ಸ್ದಿಹ್ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಪೊಲೀಸರು ತನಿಖೆ (Enquiry) ನಡೆಸುತ್ತಿದ್ದಾರೆ.

ಅಪರಾಧ ತಡೆ ಮಾಸಾಚಾರಣೆ, ಜಾಗೃತಿ ಜಾಥಾ | ರೋಟರಿ, ಇಂಟರ್ಯಾಕ್ಟ್, ಪೊಲೀಸ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯಿಂದ ಜಾಥಾ

Posted by Vidyamaana on 2022-12-29 06:41:59 |

Share: | | | | |


ಅಪರಾಧ ತಡೆ ಮಾಸಾಚಾರಣೆ, ಜಾಗೃತಿ ಜಾಥಾ | ರೋಟರಿ, ಇಂಟರ್ಯಾಕ್ಟ್, ಪೊಲೀಸ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯಿಂದ ಜಾಥಾ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ, ಇಂಟರ್ಯಾಕ್ಟ್ ಕ್ಲಬ್ ರಾಮಕೃಷ್ಣ ಯುವ, ದ.ಕ. ಜಿಲ್ಲಾ ಪೊಲೀಸ್, ಪುತ್ತೂರು ನಗರ ಪೊಲೀಸ್ ಠಾಣೆ, ಪುತ್ತೂರು ಸಂಚಾರ ಪೊಲೀಸ್ ಠಾಣೆ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳೊಂದಿಗೆ ಡಿ. 28ರಂದು ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ ನಡೆಯಿತು.


ಕೊಂಬೆಟ್ಟಿನಿಂದ ಆರಂಭಗೊಂಡ ಜಾಗೃತಿ ಜಾಥಾ, ಗಾಂಧಿಕಟ್ಟೆಯಲ್ಲಿ ಸಮಾರೋಪಗೊಂಡಿತು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇ ರಾಜಧಾನಿ ಅಬುಧಾಬಿಗೆ ಪ್ರತಿದಿನ ನೇರ ವಿಮಾನ ಆರಂಭ

Posted by Vidyamaana on 2024-08-11 23:16:37 |

Share: | | | | |


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇ ರಾಜಧಾನಿ ಅಬುಧಾಬಿಗೆ ಪ್ರತಿದಿನ ನೇರ ವಿಮಾನ ಆರಂಭ

ಮಂಗಳೂರು, ಆಗಸ್ಟ್ 11: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯುಎಇ ರಾಜಧಾನಿ ಅಬುಧಾಬಿಗೆ ಇಂಡಿಗೋ ಸಂಸ್ಥೆ ಪ್ರತಿದಿನ ನೇರ ವಿಮಾನ ಹಾರಾಟ ಆರಂಭಿಸಿದೆ. 


ಆಗಸ್ಟ್ 9 ರಿಂದ ಇಂಡಿಗೋದಿಂದ ಪ್ರತಿದಿನ ವಿಮಾನ ಹಾರಾಟ ಇರಲಿದೆ. ದುಬೈ ನಂತರ ಮಂಗಳೂರಿನಿಂದ ಪ್ರತಿದಿನ ವಿಮಾನ ಸಂಚಾರದ ಎರಡನೇ ಸಾಗರೋತ್ತರ ತಾಣ ಇದಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಸ್ತುತ ಎಂಟು ಮಧ್ಯಪ್ರಾಚ್ಯ ಸ್ಥಳಗಳಿಗೆ ಮತ್ತು ಆರು ದೇಶೀಯ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. 

ಅಬುಧಾಬಿ ನೇರ ವಿಮಾನದ ಉದ್ಘಾಟನಾ ಯಾನದಲ್ಲಿ ತನ್ನ ತಾಯಿಯೊಂದಿಗೆ ಚೆಕ್-ಇನ್ ಮಾಡಿದ ಮೊದಲ ಫ್ಲೈಯರ್ ನಂದಿಕಾ ಉಡಾವಣಾ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದರು. ಮಂಗಳೂರು ವಿಮಾನ ನಿಲ್ದಾಣ ಮತ್ತು ಏರ್ಲೈನ್ಸ್ ತಂಡದೊಂದಿಗೆ ಸಾಂಪ್ರದಾಯಿಕ ದೀಪವನ್ನು ಬೆಳಗಿಸುವ ಅವಕಾಶವನ್ನು ನಂದಿಕಾ ಪಡೆದರು. ಮೊದಲ ಬೋರ್ಡಿಂಗ್ ಪಾಸ್ ಮತ್ತು ಏರ್ಲೈನ್​​ ಬ್ಯಾಗ್ ಅನ್ನು ಆಕೆ ಪಡೆದರು.

ಪುತ್ತೂರು ಶಾಸಕರು ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಿದ್ದಾರೆ: ಬಡಗನ್ನೂರು

Posted by Vidyamaana on 2023-05-19 06:25:18 |

Share: | | | | |


ಪುತ್ತೂರು ಶಾಸಕರು ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಿದ್ದಾರೆ: ಬಡಗನ್ನೂರು

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್‌ಕುಮಾರ್ ರೈಯವರು ಸಮರ್ಥ, ಪ್ರಾಮಾಣಿಕ, ಅಬಿವೃದ್ದಿಪರ ಶಾಸಕರಾಗಿದ್ದು ಪಕ್ಕದ ಬೆಳ್ತಂಗಡಿಯನ್ನೂ ಕಂಟ್ರೋಲ್ ಮಾಡುವಷ್ಟು ಶಕ್ತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮಹಮ್ಮದ್ ಬಡಗನ್ನೂರು ಹೇಳಿದರು.

ಪುತ್ತೂರಿಗೆ ಬಂದಿದ್ದ ಬೆಳ್ತಂಗಡಿ ಶಾಸಕರಾದ ಹರೀಶ್‌ಪೂಂಜಾರವರು ನಿಮಗೆ ಶಾಸಕರಿಲ್ಲದ ಕೊರಗು ಬೇಡ ನಾನೇ ನಿಮ್ಮ ಶಾಸಕರಂತೆ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಹಮ್ಮದ್ ಬಡಗನ್ನೂರು ಬೆಳ್ತಂಗಡಿಯಲ್ಲಿ ನೊಂದವರ ಪರವಾಗಿ, ಅಶಕ್ತರ ಪರವಾಗಿ, ಅನ್ಯಾಯಕ್ಕೊಳಗಾದವರ ಪರವಾಗಿ ನಮ್ಮ ಶಾಸಕರಾದ ಅಶೋಕ್ ರೈ ಕೆಲಸ ಮಾಡಲಿದ್ದು ಅವರಿಗೆ ಅಷ್ಟು ಸಾಮರ್ಥ್ಯ ಇದೆ ಎಂದು ಹೇಳಿದರು.ಚುನಾವಣೆಗೆ ಮೊದಲು ಆರಂಭಗೊಂಡ ಇವರೊಳಗಿನ ಯುದ್ದ ಚುನಾವಣೆ ಮುಗಿದ ಬಳಿಕ ಇನ್ನಷ್ಟು ಗಂಭೀರಾವಸ್ಥೆಗೆ ತಲುಪಿದೆ. ಅವರವರೇ ಹೊಡೆದಾಡಿಕೊಂಡು, ಬೈದಾಡಿಕೊಂಡು ಅದನ್ನು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ , ಇವೆಲ್ಲವನ್ನೂ ಜನ ಹತ್ತಿರದಿಂದ ಗಮನಿಸುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಯೇ ಇಷ್ಟು ದಿನ ಇಲ್ಲಿನ ಜನರನ್ನು ಮಂಗ ಮಾಡುತ್ತಿದ್ದರು ಈಗ ಅದೆಲ್ಲವೂ ಒಂದೊಂದಾಗಿ ಬಯಲಾಗುತ್ತಿದೆ ಎಂದು ಲೇವಡಿ ಮಾಡಿದರು. ಪುತ್ತೂರಿನಿಂದ ಆರಂಭಗೊಂಡ ಇವರ ಈ ಗುಂಪುಗಾರಿಕೆ ಮುಂದಿನ ದಿನಗಳಲ್ಲಿ ರಾಜ್ಯಮಟ್ಟಕ್ಕೂ ವಿಸ್ತರಣೆಪಡೆದುಕೊಳ್ಳಬಹುದು. ಜನರ ಭಾವನೆಯನ್ನು ಕೆರಳಿಸಿ ಅಧಿಕಾರ ಪಡೆಯುತ್ತಿದ್ದ ಬಿಜೆಪಿಗೆ ಈ ಬಾರಿ ಜನರ ಶಾಪ ತಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಬಡ ಜನರಿಗೆ ನ್ಯಾಯ ಸಿಕ್ಕಿದಂತಾಗಿದೆ. ಸೋಲಿನಿಂದ ದೃತಿಗೆಟ್ಟ ಬಿಜೆಪಿ ಶಾಸಕರು ಪುತ್ತೂರಿಗೆ ಬಂದು ನಾನೇ ನಿಮ್ಮ ಶಾಸಕ ಎಂದು ಹೇಳುತ್ತಿರುವುದು ಅವರ ಹತಾಶಾ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಬೆಳ್ತಂಗಡಿ ಜನತೆಗೆ ತೊಂದರೆಯಾದಲ್ಲಿ, ಅನ್ಯಾಯವಾದಲ್ಲಿ ಪುತ್ತೂರು ಶಸಕರು ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂದು ಬಡಗನ್ನೂರು ಹೇಳಿದರು.

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

Posted by Vidyamaana on 2024-04-16 13:37:56 |

Share: | | | | |


ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು.

ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಪ್ರಚಾರ ಕಾರ್ಯಕ್ಕೆ ಮುಂದಾದ ಪದ್ಮರಾಜ್ ಆರ್. ಪೂಜಾರಿ ಅವರು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ರೋಡ್ ಶೋ ಆರಂಭಿಸಿದರು. ಪುತ್ತೂರು ಪೇಡೆಯಾದ್ಯಂತ ಸಂಚರಿಸಿದ ರೋಡ್ ಶೋ, ವಿಟ್ಲ ಬಸ್ ನಿಲ್ದಾಣದಲ್ಲಿ ಸಮಾಪನಗೊಂಡಿತು. ಬಳಿಕ ವಿಟ್ಲ ಸಂತೆ ಮಾರುಕಟ್ಟೆಗೆ ತೆರಳಿ ಮತ ಯಾಚನೆ ನಡೆಸಿದರು.

ರೋಡ್ ಶೋ ಉದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಭ್ಯರ್ಥಿಗೆ ಸಾಥ್ ನೀಡಿದರು.



ಪೋಷಕರೇ ಮಗಳ ಮದುವೆ ಸಮಯಕ್ಕೆ 25 ಲಕ್ಷ ಪಡೆಯಲು ಸುಕನ್ಯಾ ಯೋಜನೆ ಯಲ್ಲಿ ತಿಂಗಳಿಗೆ ಎಷ್ಟು ಠೇವಣಿ ಮಾಡ್ಬೇಕು ಗೊತ್ತಾ.?

Posted by Vidyamaana on 2023-10-13 17:34:48 |

Share: | | | | |


ಪೋಷಕರೇ ಮಗಳ ಮದುವೆ ಸಮಯಕ್ಕೆ 25 ಲಕ್ಷ ಪಡೆಯಲು ಸುಕನ್ಯಾ ಯೋಜನೆ ಯಲ್ಲಿ ತಿಂಗಳಿಗೆ ಎಷ್ಟು ಠೇವಣಿ ಮಾಡ್ಬೇಕು ಗೊತ್ತಾ.?

ನವದೆಹಲಿ : ಕೇಂದ್ರ ಸರ್ಕಾರ ಹಲವು ಆಕರ್ಷಕ ಠೇವಣಿ ಯೋಜನೆಗಳನ್ನ ಪರಿಚಯಿಸುತ್ತಿದೆ. ಬೇಟಿ ಬಚಾವೋ ಬೇಟಿ ಪಡಾವೋ ಘೋಷಣೆಯ ಅಂಗವಾಗಿ ಕೇಂದ್ರ ಸರ್ಕಾರ ತಂದಿರುವ ಸುಕನ್ಯಾ ನಾಮೃದ್ಧಿ ಯೋಜನೆ ಯೋಜನೆ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬುದನ್ನ ಬಿಡಿಸಿ ಹೇಳಬೇಕಾಗಿಲ್ಲ.ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಯ ಸಮಯದಲ್ಲಿ ಆದಾಯವನ್ನ ಪಡೆಯಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯ ಭಾಗವಾಗಿ, ಗ್ರಾಹಕರು 15 ವರ್ಷಗಳವರೆಗೆ ಪಾವತಿಸಬೇಕು ಮತ್ತು 21 ವರ್ಷಗಳ ಅವಧಿಯ ನಂತರ ಹಣವನ್ನು ಪಡೆಯಬೇಕು.


ಹತ್ತನೇ ವಯಸ್ಸಿನಲ್ಲಿ ಮಗು ಈ ಯೋಜನೆಗೆ ಸೇರಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ತೆರೆಯಬಹುದು. ಈ ಖಾತೆಯನ್ನು ತೆರೆಯಲು ಐಡಿ, ವಿಳಾಸ ಪುರಾವೆ, ಜನ್ಮ ಪ್ರಮಾಣಪತ್ರ, ಹೆಣ್ಣು ಮಗು ಮತ್ತು ಆಕೆಯ ತಂದೆಯ ಭಾವಚಿತ್ರಗಳು, ಆಧಾರ್ ಕಾರ್ಡ್ ಅಗತ್ಯವಿದೆ. ಮತ್ತು ಈ ಯೋಜನೆಯಲ್ಲಿ ಕನಿಷ್ಠ ಖಾತೆ ಮೊತ್ತ ರೂ. 250 ಠೇವಣಿ ಇಡಬಹುದು ಮತ್ತು ತೆರೆಯಬಹುದು. ಗರಿಷ್ಠ ರೂ. 1.50 ಲಕ್ಷ ಠೇವಣಿ ಇಡಬಹುದು. ಖಾತೆ ತೆರೆದ ದಿನಾಂಕದಿಂದ 15 ವರ್ಷಗಳವರೆಗೆ ಹಣವನ್ನು ಠೇವಣಿ ಇಡಬೇಕು. ಅದರ ನಂತರ, ಆರು ವರ್ಷಗಳ ನಂತರ, ಅಂದರೆ 21 ವರ್ಷಗಳನಂತರ, ಪ್ರಬುದ್ಧತೆ ಬರುತ್ತದೆ. ಈ ಆರು ವರ್ಷಗಳವರೆಗೆ ಯಾವುದೇ ಠೇವಣಿ ಅಗತ್ಯವಿಲ್ಲ.


ಖಾತೆಯನ್ನು ತೆರೆದ ನಂತರ, ಯಾವುದೇ ಕಾರಣಕ್ಕೂ ಹಣವನ್ನು ಠೇವಣಿ ಮಾಡದಿದ್ದರೆ, ಖಾತೆಯು ಡೀಫಾಲ್ಟ್ ಆಗಿ ಹೋಗುತ್ತದೆ. ಖಾತೆಯನ್ನು ಪುನಃ ಸಕ್ರಿಯಗೊಳಿಸುವ ಸಂದರ್ಭದಲ್ಲಿ, ರೂ. 50 ದಂಡ ಮತ್ತು ಖಾತೆಯನ್ನು ಪುನಃ ತೆರೆಯಿರಿ. ಖಾತೆಯನ್ನು ತೆರೆದ ದಿನಾಂಕದಿಂದ 15 ವರ್ಷಗಳ ಒಳಗೆ ಮತ್ತೆ ತೆರೆಯಬಹುದು. ಏತನ್ಮಧ್ಯೆ, ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯ ಮೂಲಕ ಮಗುವಿಗೆ ಮದುವೆ ಆಗುವ ವೇಳೆಗೆ ಅಥವಾ ಶಿಕ್ಷಣ ಪೂರ್ಣಗೊಳ್ಳುವ ವೇಳೆಗೆ ರೂ. ಈಗ ನೀವು 25 ಲಕ್ಷಗಳನ್ನು ಪಡೆಯಲು ತಿಂಗಳಿಗೆ ಎಷ್ಟು ಹಣವನ್ನು ಠೇವಣಿ ಮಾಡಬೇಕು ಎಂದು ಕಂಡುಹಿಡಿಯೋಣ.


ಉದಾಹರಣೆಗೆ, ನಿಮ್ಮ ಮಗುವಿಗೆ ಪ್ರಸ್ತುತ 5 ವರ್ಷವಯಸ್ಸಾಗಿದೆ ಎಂದು ಭಾವಿಸೋಣ. ಪ್ರಸ್ತುತ ಈ ಯೋಜನೆಯ ಬಡ್ಡಿ ದರವು ಶೇಕಡಾ 8 ರಷ್ಟಿದೆ. ಈ ಲೆಕ್ಕಾಚಾರದಲ್ಲಿ ವರ್ಷಕ್ಕೆ ರೂ. 55,700 ಪಾವತಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ರೂ. 25 ಲಕ್ಷ ಕೈಗೆ ಬರುತ್ತದೆ. ಅಂದರೆ ತಿಂಗಳಿಗೆ ರೂ. ಮಗಳ ಮದುವೆ ಸಮಯದಲ್ಲಿ 4,641 ರೂ. 25 ಲಕ್ಷ ವಾಪಸ್ ಪಡೆಯಬಹುದು. ಮತ್ತು ಈ ಯೋಜನೆಯ ಮೂಲಕ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಪ್ರಕಾರ, ನೀವು ರೂ. 1.50 ಲಕ್ಷ ತೆರಿಗೆ ವಿನಾಯಿತಿ ಪಡೆಯಬಹುದು. ಠೇವಣಿಯ ಮೇಲೆ ಗಳಿಸಿದ ಬಡ್ಡಿಗೆ ನೀವು ತೆರಿಗೆ ಪಾವತಿಸಬೇಕಾಗಿಲ್ಲ. ವಾರ್ಷಿಕ ಆಧಾರದ ಮೇಲೆ ಬಡ್ಡಿಯನ್ನು ಪಾವತಿಸಲಾಗುತ್ತದೆ. ಮೆಚ್ಯೂರಿಟಿಯ ನಂತರ ನೀವು ಪಡೆಯುವ ಬಡ್ಡಿ ಕೂಡ ತೆರಿಗೆ ಮುಕ್ತವಾಗಿರುತ್ತದೆ.

Recent News


Leave a Comment: