ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಸುದ್ದಿಗಳು News

Posted by vidyamaana on 2024-07-25 12:27:06 |

Share: | | | | |


ಜೋಕಟ್ಟೆ: ಮನೆ ಮೇಲೆ ತಡೆಗೋಡೆ ಕುಸಿತ; ಬಾಲಕ ಮೃತ್ಯು

ಪಣಂಬೂರು: ಇಲ್ಲಿನ ಜೋಕಟ್ಟೆ ಗ್ರಾಮ ಪಂಚಾಯತ್ ಗುಡ್ಡೆ ಎಂಬಲ್ಲಿ ಮನೆಯ ಮೇಲೆ� ತಡೆಗೋಡೆ ಕುಸಿದು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬುಧವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ‌.ಮುಲ್ಕಿ ಕೊಲ್ನಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಮೃತ ಯುವಕ. ಜೋಕಟ್ಟೆಯಲ್ಲಿರುವ ತನ್ನ ದೊಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್, ಇಲ್ಲಿಯೇ ಉಳಿದುಕೊಂಡಿದ್ದ.

ಮನೆಯಲ್ಲಿ ಶೈಲೇಶ್ ರವರ ದೊಡ್ಡಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಮತ್ತು ಮಗು ಸಾಕ್ಷಿ ಮನೆಯ ಒಂದು ಕೋಣೆಯಲ್ಲಿ ಮಲಗಿದ್ದು, ಶೈಲೇಶ್ ಇನ್ನೊಂದು ಕಡೆ ಮಲಗಿದ್ದ. ತಡೆಗೋಡೆ ಕುಸಿದು ಹಂಚಿನ ಮನೆಯ ಮೇಲೆ ಬಿದ್ದಿದ್ದರಿಂದ ಅಲ್ಲಿ ಮಲಗಿದ್ದ ಶೈಲೇಶ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಇತರ ಮೂರು ಜನರಲ್ಲಿ ಸವಿತಾ ಅವರಿಗೆ ಸಣ್ಣ ಗಾಯವಾಗಿದ್ದು‌, ಚಿಕಿತ್ಸೆ ಪಡೆದಿದ್ದಾರೆ‌ ಎಂದು ತಿಳಿದು ಬಂದಿದೆ.

ಶೈಲೇಶ್ ಅವರ ಮೃತದೇಹವನ್ನು ನಗರದ ಎ.ಜೆ.ಆಸ್ಪತ್ರೆಯ ಶವಗಾರದಲ್ಲಿಡಲಾಗಿದ್ದು, ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 Share: | | | | |


7ಲಕ್ಷ ರೂ.ಮೊತ್ತದ ಚೆಕ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

Posted by Vidyamaana on 2023-09-24 07:31:17 |

Share: | | | | |


7ಲಕ್ಷ ರೂ.ಮೊತ್ತದ ಚೆಕ್ ಮರಳಿಸಿ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ಮಣಿಪಾಲ: ಆಟೊ ರಿಕ್ಷಾದಲ್ಲಿ ಮರೆತು ಬಿಟ್ಟು ಹೋದ 7ಲಕ್ಷ ರೂ. ಮೊತ್ತದ ಚೆಕ್‌ ಹಾಗೂ ದಾಖಲೆ ಪತ್ರವನ್ನು ರಿಕ್ಷಾ ಚಾಲಕ ವಾರಸುದಾರರಿಗೆ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.


ಕುಂದಾಪುರ ನಿವಾಸಿ ಅನಂತ ದೇವಾಡಿಗ ಎಂಬವರು ಸೆ.18ರಂದು ಮಣಿಪಾಲ ರಿಕ್ಷಾ ನಿಲ್ದಾಣದಿಂದ ಸತೀಶ್ ಎಂಬವರ ರಿಕ್ಷಾದಲ್ಲಿ ಮಣಿಪಾಲದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿದ್ದರು. ಈ ವೇಳೆ ಅವರು ತಮ್ಮ ಕೈಯಲ್ಲಿದ್ದ ಚೆಕ್‌ ಹಾಗೂ ದಾಖಲಾತಿಗಳನ್ನು ರಿಕ್ಷಾದಲ್ಲಿಯೇ ಬಿಟ್ಟು ಹೋಗಿದ್ದರು. ಬಾಡಿಗೆ ಮುಗಿಸಿ ಮಣಿಪಾಲಕ್ಕೆ ಬಂದ ರಿಕ್ಷಾದಲ್ಲಿ ದಾಖಲಾತಿ ಬಿಟ್ಟು ಹೋಗಿ ರುವುದು ಸತೀಶ್ ಅವರ ಗಮನಕ್ಕೆ ಬಂತು.


ಈ ವಿಚಾರವನ್ನು ಸತೀಶ್, ತಮ್ಮ ಸಂಘದ ಅಧ್ಯಕ್ಷ ವಿಜಯ್ ಪುತ್ರನ್ ಹಿರೇಬೆಟ್ಟು ಅವರಿಗೆ ತಿಳಿಸಿದರು. ಬಳಿಕ ವಾರಸುದಾರರನ್ನು ಪತ್ತೆ ಹಚ್ಚ ಲಾಯಿತು.


ಮಣಿಪಾಲ ಪೊಲೀಸ್‌ ನಿರೀಕ್ಷಕ ದೇವರಾಜ್ ಹಾಗೂ ಎಸ್ಥೆಗಳಾದ ಅಕ್ಷಯ ಕುಮಾರಿ, ರಾಘವೇಂದ್ರ ಹಾಗೂ ಮನೋಹರ್ ಕುಮಾರ್‌ ಮೂಲಕ ಚೆಕ್‌ ಹಾಗೂ ದಾಖಲಾತಿಗಳನ್ನು ಹಸ್ತಾಂತರಿಸಲಾಯಿತು.

Mahindra Thar: ಬಿಡುಗಡೆಗೆ ಇನ್ನಷ್ಟು ದಿನ ಬಾಕಿ.. ಹೊಸ ಮಹೀಂದ್ರಾ ಥಾರ್ 5-ಡೋರ್ ವೈಶಿಷ್ಟ್ಯ ಹೇಗಿದೆ ಗೊತ್ತಾ?

Posted by Vidyamaana on 2023-09-17 13:15:25 |

Share: | | | | |


Mahindra Thar: ಬಿಡುಗಡೆಗೆ ಇನ್ನಷ್ಟು ದಿನ ಬಾಕಿ.. ಹೊಸ ಮಹೀಂದ್ರಾ ಥಾರ್ 5-ಡೋರ್ ವೈಶಿಷ್ಟ್ಯ ಹೇಗಿದೆ ಗೊತ್ತಾ?

ಆಫ್-ರೋಡಿಂಗ್ ಚಾಲನೆಯನ್ನು ಇಷ್ಟಪಡುವವರಿಗೆ ನಿಮಿಷ್ಟದ ಕಾರು ಯಾವುದೇ ಎಂದು ಕೇಳಿದರೆ, ಅವರಿಂದ ಬರುವ ಒಂದೇ ಉತ್ತರ ಮಹೀಂದ್ರಾ ಥಾರ್ (Mahindra Thar) ಎಂದು. ಅಷ್ಟರಮಟ್ಟಿಗೆ ಜನಪ್ರಿಯವಾಗಿದೆ. ಸದ್ಯ, ಕಂಪನಿಯು ಈ ಎಸ್‌ಯುವಿಯನ್ನು 5 ಡೋರ್ ಆಯ್ಕೆಯಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಇತ್ತೀಚೆಗೆ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ.ಈ ವೇಳೆ, ಸೆರೆಹಿಡದ ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದ್ದು, ಅದರಲ್ಲಿ ಒಳಭಾಗದಲ್ಲಿ ವೈಶಿಷ್ಟ್ಯಗಳನ್ನು ನೋಡಬಹುದು. ಪ್ರಸ್ತುತ ಖರೀದಿಗೆ ದೊರೆಯುವ 3 ಡೋರ್ ಥಾರ್ ಎಸ್‌ಯುವಿಗೆ ಹೋಲಿಸಿದರೆ, 5 ಡೋರ್ ಥಾರ್ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಮುಖ್ಯವಾಗಿ, ದೊಡ್ಡದಾದ 12.3 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ ಅನ್ನು ಹೊಂದಿದೆ.


ಮುಂಬರುವ ಮಹೀಂದ್ರಾ ಥಾರ್ 5 - ಡೋರ್, ನವೀನ ಸ್ಟೀರಿಂಗ್ ವೀಲ್ ಪಡೆದಿದೆ. ಇದು, XUV700ಗೆ ಹೋಲಿಕೆಯಾಗುತ್ತದೆ. ಜೊತೆಗೆ ವೃತ್ತಾಕಾರದ ಎಸಿ ವೆಂಟ್ಸ್ ಅನ್ನು ಹೊಂದಿದೆ. ಇದರೊಟ್ಟಿಗೆ ಆರ್ಮ್‌ರೆಸ್ಟ್ ಇದ್ದು, ಹಳೆಯ ಕಾರುಗಳಂತೆ ಡೋರ್ ಪ್ಯಾಡ್‌ಗಳಲ್ಲಿ ವಿಂಡೋ ಸ್ವಿಚ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಈ ಮೂಲಕ ಹೊಸ 5 - ಡೋರ್ ಎಸ್‌ಯುವಿ, ಕ್ಯಾಬಿನ್ ಒಳಭಾಗದಲ್ಲಿ ಅತ್ಯಾಧುನಿಕ ವಿನ್ಯಾಸವನ್ನು ಪಡೆದಿದೆ.ಹೊಸ ಥಾರ್ ಇನ್ನೂ ಯಾವ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ನೋಡುವುದಾದರೆ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, ವೈರ್‌ಲೆಸ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಆಟೋ ಡಿಮ್ಮಿಂಗ್ ಐಆರ್‌ವಿಎಂ, ಆಟೋ ಹೆಡ್‌ಲ್ಯಾಂಪ್ಸ್ ಮತ್ತು ಸೆನ್ಸಿಂಗ್ ವೈಪರ್ಸ್ ಅನ್ನು ಪಡೆದಿರುವ ನೀರಿಕ್ಷೆಯಿದೆ.


ಹೊಸ ಮಹೀಂದ್ರಾ ಥಾರ್ 5 - ಡೋರ್, ಎರಡು ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಅವುಗಳೆಂದರೆ, 2.0 - ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2 - ಲೀಟರ್ ಡೀಸೆಲ್ ಎಂಜಿನ್. ಕ್ರಮವಾಗಿ, 150 bhp ಪವರ್, 320 Nm ಪೀಕ್ ಟಾರ್ಕ್, 130 bhp ಗರಿಷ್ಠ ಪವರ್ 300 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಬಹುದು. ಕಂಪನಿಯು ಈವರೆಗೆ ಈ ಎಸ್‌ಯುವಿ ಬೆಲೆಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.ಪ್ರಸ್ತುತ, ದೇಶದಲ್ಲಿ 3 - ಡೋರ್ ಆಯ್ಕೆಯಲ್ಲಿ ಸಿಗುವ ಮಹೀಂದ್ರಾ ಥಾರ್, ರೂ.10.54 ಲಕ್ಷದಿಂದ ರೂ.16.78 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಯಲ್ಲಿ ದೊರೆಯಲಿದ್ದು, ಅದಕ್ಕೆ ತಕ್ಕಂತೆ ಕಾರ್ಯಕ್ಷಮತೆಯನ್ನು ಹೊಂದಿದೆ. 4WD (ಫೋರ್ ವೀಲ್ ಡ್ರೈವ್) ಹಾಗೂ RWD (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.


ಮಹೀಂದ್ರಾ ಥಾರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಕೊಂಚ ಕಡಿಮೆ ಇಂಧನ ದಕ್ಷತೆ ಹೊಂದಿದ್ದು, 15.2 kmpl ಮೈಲೇಜ್ ನೀಡುತ್ತದೆ. ಎವರೆಸ್ಟ್ ವೈಟ್, ರೆಡ್ ರೇಜ್, ನಪೋಲಿ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮ್ಯಾನ್ಯುವಲ್ ಎಸಿ ಮತ್ತು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.

ಪತ್ರಕರ್ತೆಯ ಮೃತದೇಹ ಕೆರೆಯಲ್ಲಿ ಪತ್ತೆ

Posted by Vidyamaana on 2024-08-29 06:24:03 |

Share: | | | | |


ಪತ್ರಕರ್ತೆಯ ಮೃತದೇಹ ಕೆರೆಯಲ್ಲಿ ಪತ್ತೆ

ಬಾಂಗ್ಲಾದೇಶದ ಪತ್ರಕರ್ತೆ ಸಾರಾ ರಹನುಮಾ ಅವರ ಮೃತದೇಹ ಬುಧವಾರ ಢಾಕಾದ ಹತಿರ್ಜೀಲ್ ಕೆರೆಯಲ್ಲಿ ಪತ್ತೆಯಾಗಿದೆ.33 ವರ್ಷದ ಸಾರಾ ಬಂಗಾಳಿ ಭಾಷೆಯ ಸುದ್ದಿವಾಹಿನಿಯ ನ್ಯೂಸ್‍ರೂಂ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಚಾರ್ಮಾಡಿ ಘಾಟಿಯಲ್ಲಿ ಮತ್ತೆ 12 ಚಕ್ರದ ಲಾರಿ ಲಾಕ್… ವಾಹನ ಸವಾರರ ಪರದಾಟ

Posted by Vidyamaana on 2024-04-04 11:36:21 |

Share: | | | | |


ಚಾರ್ಮಾಡಿ ಘಾಟಿಯಲ್ಲಿ ಮತ್ತೆ 12 ಚಕ್ರದ ಲಾರಿ ಲಾಕ್… ವಾಹನ ಸವಾರರ ಪರದಾಟ

ಚಿಕ್ಕಮಗಳೂರು :ಕಳೆದ ಮಾರ್ಚ್ 18ರಂದು ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ 16 ಚಕ್ರದ ಸಿಮೆಂಟ್ ಲಾರಿ ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಲಾಕ್ ಆಗಿ ಮಂಗಳೂರು ಹಾಗೂ ಚಿಕ್ಕಮಗಳೂರು ಎರಡೂ ಮಾರ್ಗದಲ್ಲೂ ಮೂರ್ನಾಲ್ಕು ಕಿ.ಮೀ.ನಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು. ಇಂದು ಮತ್ತೆ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ 12 ಚಕ್ರದ ಲಾರಿ ಲಾಕ್ ಆಗಿದೆ. ರಸ್ತೆಯ ತಿರುವಿನಲ್ಲಿ ಲಾರಿ ಟರ್ನ್ ಆಗದೆ ನಿಂತಲ್ಲಿ ನಿಂತಿದೆ. ಬೆಳಗ್ಗೆಯಿಂದಲೂ ಕೂಡ ಚಾರ್ಮಾಡಿ ಘಾಟಿಯಲ್ಲಿ ವಾಹನಗಳು ನಿಂತಲ್ಲೇ ನಿಂತು ಮುಂದೆ ಹೋಗಲಾಗದೆ ಹಿಂದೆಯೂ ಬರಲಾಗದೆ ಪರದಾಡುವಂತೆ ಆಗಿದೆ.

ಮಾದಕ ವ್ಯಸನಿಯಿಂದ ಪೊಲೀಸ್ ಸಿಬ್ಬಂದಿಗೆ ಹಲ್ಲೆ

Posted by Vidyamaana on 2023-11-16 20:37:43 |

Share: | | | | |


ಮಾದಕ ವ್ಯಸನಿಯಿಂದ ಪೊಲೀಸ್ ಸಿಬ್ಬಂದಿಗೆ ಹಲ್ಲೆ

ಪುತ್ತೂರು: ಅಮಲು ಪದಾರ್ಥದ ನಶೆಯಲ್ಲಿದ್ದ ವ್ಯಕ್ತಿಯೋರ್ವ ಪೊಲೀಸರೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ನ.16 ರಂದು ಸಂಜೆ ನಡೆದಿದೆ.

ಹಲ್ಲೆ ನಡೆಸಿದ ವ್ಯಕ್ತಿ ಬಡಗನ್ನೂರು ಮೂಲದ ಹರೀಶ್ ಎಂದು ಗುರುತಿಸಲಾಗಿದೆ.

ಕುಡಿದ ನಶೆಯಲ್ಲಿ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ಬಗ್ಗೆ ಠಾಣೆಗೆ ಮಾಹಿತಿ ನೀಡಲಾಗಿತ್ತು. ಈ ಸಂದರ್ಭ 112 ತುರ್ತು ಸೇವೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ನಶೆಯಲ್ಲಿದ್ದ ವ್ಯಕ್ತಿಯನ್ನು ಸಂಭಾಳಿಸುತ್ತಿದ್ದ ಸಂದರ್ಭ, ವ್ಯಕ್ತಿ ಏಕಾಏಕೀ‌ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ವರ್ಗಾವಣೆಗೊಂಡ ಗಿರೀಶ್ ನಂದನ್

Posted by Vidyamaana on 2023-07-07 14:08:27 |

Share: | | | | |


ವರ್ಗಾವಣೆಗೊಂಡ ಗಿರೀಶ್ ನಂದನ್

ಪುತ್ತೂರು: ಇಲ್ಲಿನ ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್ ವರ್ಗಾವಣೆಗೊಂಡಿದ್ದಾರೆ.

ತೆರವಾಗಲಿರುವ ಪುತ್ತೂರು ಸಹಾಯಕ ಆಯುಕ್ತ ಹುದ್ದೆಗೆ ಮಂಗಳೂರು ಕೆ.ಐ.ಎ.ಡಿ.ಬಿ. ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ್ ಚಂದ್ರ ನೇಮಕಗೊಂಡಿದ್ದಾರೆ.

ಗಿರೀಶ್ ನಂದನ್ ಅವರು ಎತ್ತಿನಹೊಳೆ ಯೋಜನೆಯ ವಿಶೇಷ ಭೂಸ್ವಾಧಿನಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.



Leave a Comment: