ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಸುದ್ದಿಗಳು News

Posted by vidyamaana on 2024-03-23 15:52:34 | Last Updated by Vidyamaana on 2024-03-23 15:52:34

Share: | | | | |


ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೊಂದು ರೋಚಕ ಟ್ವಿಸ್ಟ್!

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

*💥Whats App Group ಗೆ ಸೇರಲು ಕ್ಲಿಕ್ ಮಾಡಿ

*ಹಣ ತೆಗೆದುಕೊಂಡು ಹೋದ ವಿಚಾರ*:  ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ‌್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ  ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ  ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.


 Share: | | | | |


ಲಕ್ಷಾಂತರ ರೂಪಾಯಿಯ ಐ ಫೋನ್ ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಜಯಂತ್ ವಿಟ್ಲ

Posted by Vidyamaana on 2023-04-24 23:10:56 |

Share: | | | | |


ಲಕ್ಷಾಂತರ ರೂಪಾಯಿಯ ಐ ಫೋನ್  ಮೊಬೈಲ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ  ಜಯಂತ್ ವಿಟ್ಲ

ಪುತ್ತೂರು: ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ತೌಸೀಫ್ ರವರು ಕಳೆದುಕೊಂಡಿದ್ದ ಸುಮಾರು 1.35 ಲಕ್ಷ ರೂಪಾಯಿ ಬೆಲೆಬಾಳುವ ಮೊಬೈಲ್‌ ಹಿಂತಿರುಗಿಸುವ ಮೂಲಕ ಪತ್ರಿಕೆ ಸಾಗಾಟ ಮಾಡುವ ಜಯಂತ ವಿಟ್ಟ ರವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಕಾರಿನಲ್ಲಿ ಮಂಗಳೂರಿನಿಂದ ಸುಳ್ಯಕ್ಕೆ ದಿ, ಹಿಂದು ಇಂಗ್ಲಿಷ್ ಪತ್ರಿಕೆಯ ಸಾಗಾಟ ಮಾಡುತ್ತಿರುವ ಜಯಂತ ವಿಟ್ಲರವರಿಗೆ ಎ.23ರಂದು ರಾತ್ರಿ ಮಂಗಳೂರಿನ ಕಂಕನಾಡಿ ರಾಧಾ ಮೆಡಿಕಲ್‌ ಬಳಿ ರಸ್ತೆಯಲ್ಲಿ ಐಫೋನ್ ಮೊಬೈಲ್ ಬಿದ್ದು ಸಿಕ್ಕಿತು. ಇದರ ಕುರಿತು ಜಯಂತರವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಎ.24ರಂದು ಮೊಬೈಲ್ ನಲ್ಲಿದ್ದ ನಂಬರ್ ಮೂಲಕ ಸಂಪರ್ಕಿಸಿ ಮೊಬೈಲ್ ವಾರಿಸುದಾರರಾಗಿರುವ ಪುತ್ತೂರಿನ ವಳತ್ತಡ್ಕ ತೌಸೀಫ್ ರವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಮಲ್ಪೆ ಬಂದರಿನಲ್ಲಿ ನದಿಗೆ ಬಿದ್ದಿದ್ದ ಐಫೋನ್ ಮೊಬೈಲ್ ಹುಡುಕಿ ತೆಗೆದ ಮುಳುಗು ತಜ್ಞ ಈಶ್ವರ್ ಮಲ್ಪೆ - ವಿಡಿಯೋ ವೈರಲ್

Posted by Vidyamaana on 2023-08-11 01:46:09 |

Share: | | | | |


ಮಲ್ಪೆ ಬಂದರಿನಲ್ಲಿ ನದಿಗೆ ಬಿದ್ದಿದ್ದ ಐಫೋನ್ ಮೊಬೈಲ್ ಹುಡುಕಿ ತೆಗೆದ ಮುಳುಗು ತಜ್ಞ ಈಶ್ವರ್ ಮಲ್ಪೆ - ವಿಡಿಯೋ ವೈರಲ್

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಅಪಾಯಕಾರಿ ನೀರಿನಲ್ಲಿ ಧುಮುಕಿ 1.5 ಲಕ್ಷ ರೂ. ಮೌಲ್ಯದ ಐಫೋನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ. 


ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ 1.5 ಲಕ್ಷ ರೂ. ಮೌಲ್ಯದ ಐ ಫೋನ್ ಮೊಬೈಲ್ ಜೆಟ್ಟಿ ಬಳಿ ಬೋಟ್ ನಿಲ್ಲುವ ನದಿ ನೀರಿಗೆ ಬಿದ್ದಿತ್ತು. ಮೊಬೈಲ್ ಕಳೆದುಕೊಂಡು ಚಿಂತಿತರಾದ ಅವರು ಬೇರೆಯವರ ಸಹಾಯದಿಂದ ಈಶ್ವ‌ರ್ ಮಲ್ಪೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.ತಕ್ಷಣ ಧಾವಿಸಿ ಬಂದ ಈಶ್ವ‌ರ್  ಮಲ್ಪೆ ನೀರಿನ ಆಳದಲ್ಲಿ ಹುಡುಕಾಟ ನಡೆಸಿದ್ದು ಮೊಬೈಲ್ ಪತ್ತೆ ಹಚ್ಚಿ ಹೊರತೆಗೆದು ವಾರಸುದಾರರಿಗೆ ನೀಡಿದ್ದಾರೆ. ನೆರೆದಿದ್ದ ಜನ ಈಶ್ವರ್ ಅವರ ಚಾಕಚಕ್ಯತೆಯನ್ನು ಕೊಂಡಾಡಿದ್ದಾರೆ. ಎರಡು ದಿನಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ

ಪುತ್ತೂರು: ಕುರಿಯ ಜಾಗದ ತಕರಾರು ಅಕ್ರಮ ಪ್ರವೇಶ ಮನೆ ಧ್ವಂಸ ಲಕ್ಷಾಂತರ ರೂ. ನಷ್ಟ ದೂರು ದಾಖಲು

Posted by Vidyamaana on 2024-03-10 15:42:26 |

Share: | | | | |


ಪುತ್ತೂರು: ಕುರಿಯ ಜಾಗದ ತಕರಾರು ಅಕ್ರಮ ಪ್ರವೇಶ ಮನೆ ಧ್ವಂಸ ಲಕ್ಷಾಂತರ ರೂ. ನಷ್ಟ ದೂರು ದಾಖಲು

ಪುತ್ತೂರು:ಸಂಬಂಧಿಸಿದ ಯಾರೂ ಇಲ್ಲದ ಸಮಯ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆಸಿಬಿಯಿಂದ ಹೆಂಚಿನ ಮಾಡಿನ ಮನೆಯೊಂದನ್ನು ಕೆಡವಿ ನಷ್ಟ ಉಂಟು ಮಾಡಿದ ಘಟನೆ ಮಾ.9ರ ಮಧ್ಯಾಹ್ನ ಕುರಿಯದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಪುತ್ತೂರು ಆದರ್ಶ ಆಸ್ಪತ್ರೆ ಬಳಿಯಿರುವ ಹೊಟೇಲ್ ಶ್ರೀಲಕ್ಷ್ಮೀ ಇದರ ಮಾಲಕ, ಕುರಿಯ ಹೊಸಮಾರು ನಿವಾಸಿ ವಸಂತ ಪೂಜಾರಿ ಎಂಬವರು ಘಟನೆ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಿ. ನಮ್ಮ ಸ್ವಾಧೀನದಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗೆ ಜೆಸಿಬಿ ನುಗ್ಗಿಸಿ ಮನೆಯನ್ನು ಕೆಡವಿ ಮನೆಯ ವಸ್ತುಗಳನ್ನೆಲ್ಲಾ ನಾಶ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.ಶಶಿಕಲಾ ರೈ,ಮತ್ತವರ ಮಗ ಉಜ್ವಲ್ ರೈ ಹಾಗೂ ಜೆಸಿಬಿ ಆಪರೇಟರ್ ವಿರುದ್ಧ ಅವರು ದೂರು ನೀಡಿದ್ದಾರೆ.ಪೊಲೀಸರು ಕಲಂ 447,448,427,34 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು : ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್, ಪ್ರವೀಣ್ ರವರಿಗೆ ಮಾತೃವಿಯೋಗ

Posted by Vidyamaana on 2023-12-16 20:05:14 |

Share: | | | | |


ಪುತ್ತೂರು : ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್, ಪ್ರವೀಣ್ ರವರಿಗೆ ಮಾತೃವಿಯೋಗ

ಪುತ್ತೂರು : ಸೆಲ್ ಝೋನ್ ಮಾಲಕರಾದ ಜಯಪ್ರಕಾಶ್ ಅಮೈ ಮತ್ತು ಪ್ರವೀಣ್ ಅಮೈ ರವರ ತಾಯಿ, ಸಾಲ್ಮರ ನಿವಾಸಿ ವಾರಿಜ ಆಚಾರಿ ರವರು (85)ಡಿ 16 ರಂದು ವಯೋಸಹಜ ಕಾಯಿಲೆಯಿಂದ ಬನ್ನೂರಿನ ತಮ್ಮ ನಿವಾಸದಲ್ಲಿ ನಿಧಾನರಾದರು. ಮೃತರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ : ರಹಿಮಾನ್ ಬಂಧನ

Posted by Vidyamaana on 2023-04-30 15:48:17 |

Share: | | | | |


ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ :  ರಹಿಮಾನ್ ಬಂಧನ

ಪುತ್ತೂರು: ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ ಆರೋಪಿ, ಮುಕ್ವೆ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ಹಾಗೂ ಅಬ್ದುಲ್ ರಹಿಮಾನ್ ಎಂಬಾತ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದರ ನಡುವೆ 2021ರಲ್ಲಿ ಆರೋಪಿಯು ಬಾಲಕಿಯನ್ನು ಬಲವಂತಪಡಿಸಿ, ಮದುವೆಯಾಗುವುದಾಗಿ ನಂಬಿಸಿ, ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿರುತ್ತಾನೆ. ಇದೀಗ ಬಾಲಕಿ ಗರ್ಭವತಿಯಾಗಿದ್ದು, ಮನೆಯವರು ಸಂಶಯಗೊಂಡ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ನೈಜ ವಿಷಯ ಬೆಳಕಿಗೆ ಬಂದಿದೆ.

ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಯುಎಇ ಘಟಕ ಸದಸ್ಯರಿಂದ ಶಾಸಕ ಅಶೋಕ್ ರೈ ಅವರಿಗೆ ಅಭಿನಂದನೆ

Posted by Vidyamaana on 2023-09-18 12:18:06 |

Share: | | | | |


ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಯುಎಇ ಘಟಕ ಸದಸ್ಯರಿಂದ ಶಾಸಕ ಅಶೋಕ್ ರೈ ಅವರಿಗೆ ಅಭಿನಂದನೆ

ದುಬೈ ಪ್ರವಾಸದಲ್ಲಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಇಲ್ಲಿನ ಜುಮೇರಾ ಲೇಕ್ ಟವರ್ ತಾಜ್ ಹೊಟೇಲಿನಲ್ಲಿ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಯುಎಇ ಘಟಕದ ಸದಸ್ಯರಾದ ಪರ್ವೇಝ್ ಜಿ.ಕೆ, ಇಕ್ಬಾಲ್ ಕಣ್ಣೂರು, ಅನ್ವರ್ ಮಾಣಿಲ, ಮೂಸಾ ಪೆರುವಾಯಿ ಭೇಟಿಯಾಗಿ ಸ್ವಾಗತಿಸಿ ಸೌಹಾರ್ದ ಮಾತುಕತೆ ನಡೆಸಿದರು. ಅನಿವಾಸಿ ಭಾರತೀಯರ ಅತ್ಮೀಯತೆ ಮತ್ತು ಚುನಾವಣೆ ಸಂದರ್ಭದಲ್ಲಿ ತಮ್ಮ ಗೆಲುವಿಗೆ ಪರೋಕ್ಷವಾಗಿ ಸಹಕರಿಸಿದ ಈ ತಂಡಕ್ಕೆ ಶಾಸಕ ಅಶೋಕ್ ರೈ ಇದೇ ಸಂದರ್ಭದಲ್ಲಿ ಶುಭ ಹಾರೈಸಿ ಶ್ಲಾಘಿಸಿದರು.



Leave a Comment: