ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿ

ಸುದ್ದಿಗಳು News

Posted by vidyamaana on 2023-08-18 08:29:00 |

Share: | | | | |


ಬಂಟ್ವಾಳ : ವಗ್ಗ ಬಳಿ ಅಂಬುಲೆನ್ಸ್  ನಿಯಂತ್ರಣ ತಪ್ಪಿ ಪಲ್ಟಿ

ಬೆಳ್ತಂಗಡಿ: ರೋಗಿಯೊಬ್ಬರನ್ನು  ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.



ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ  ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

 Share: | | | | |


ಕೆಎಸ್‌ಆರ್‌ಟಿಸಿಯಲ್ಲಿ 46 ಮಂದಿ ಚಾಲಕ ಹುದ್ದೆಗೆ ಆಯ್ಕೆ : ಸ್ವಂತ ಖರ್ಚಿನಲ್ಲೇ ತರಬೇತಿ ವ್ಯವಸ್ಥೆ ಮಾಡಿದ್ದ ಪುತ್ತೂರು ಶಾಸಕರು

Posted by Vidyamaana on 2023-08-18 02:52:08 |

Share: | | | | |


ಕೆಎಸ್‌ಆರ್‌ಟಿಸಿಯಲ್ಲಿ 46 ಮಂದಿ ಚಾಲಕ ಹುದ್ದೆಗೆ ಆಯ್ಕೆ : ಸ್ವಂತ ಖರ್ಚಿನಲ್ಲೇ ತರಬೇತಿ ವ್ಯವಸ್ಥೆ ಮಾಡಿದ್ದ ಪುತ್ತೂರು ಶಾಸಕರು

ಪುತ್ತೂರು : ಕೆಎಸ್‌ಆರ್‌ಟಿಸಿ ಯಲ್ಲಿ ಪುತ್ತೂರು ವಿಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಚಾಲಕ ಹುದ್ದೆ ಇರುವುದನ್ನು ಮನಗಂಡು ಈ ಹುದ್ದೆಗೆ ದ ಕ ಜಿಲ್ಲೆಯವರನ್ನೇ ನೇಮಕವಾಗಬೇಕು ಎಂಬ ಉದ್ದೇಶದಿಂದ ಚಾಲಕ ಹುದ್ದೆಗೆ ಸುಮಾರು 70 ಮಂದಿ ಅರ್ಜಿ ಸಲ್ಲಿಸಿದ್ದರು.


ಈ ಪೈಕಿ ತರಬೇತಿಗೆ ಹಾಜರಾಗಿ ಮೊದಲ ಪರೀಕ್ಷೆಯಲ್ಲಿ 55 ಮಂದಿ ತೇರ್ಗಡೆಹೊಂದಿದ್ದರು, ಈ ಪೈಕಿ 49 ಮಂದಿಗೆ ಮೊದಲ ಹಂತದಲ್ಲಿ ಚಾಲಕ ಹುದ್ದೆಗೆ ನೇಮಕವಾಗಿದ್ದು ಶಾಸಕರು ಪಟ್ಟ ಶ್ರಮ ಸಾರ್ಥಕವಾಗಿದೆ.



ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಸಕರು ತನ್ನ ಸ್ವಂತ ಖರ್ಚಿನಿಂದ ಎಲ್ಲಾ ಚಾಲಕ ಆಕಾಂಕ್ಷಿಗಳನ್ನು ಹಾಸನಕ್ಕೆ ಕರೆದೊಯ್ದು ಅಲ್ಲಿ ತರಬೇತಿಯನ್ನು ಕೊಡಿಸಿದ್ದರು. ಮೊದಲ ಹಂತದ ತರಬೇತಿಯಲ್ಲಿ ೨೭ ಮಂದಿ ಮತ್ತು ಎರಡನೆ ತಂಡದಲ್ಲಿ ೨೮ ಮಂದಿಗೆ ತರಬೇತಿಯನ್ನು ನೀಡಲಾಗಿತ್ತು. ಈ ಪೈಕಿ ಕೆಲವು ಮಂದಿ ತರಬೇತಿಯಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ಮುಂದಿನ ತರಬೇತಿ ಅವಧಿಗೆ ಕಾಯ್ದಿರಿಸಲಾಗಿತ್ತು.


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದವರು ಆ.10 ರಂದು ಪ್ರಾದೇಶಿಕ ತರಬೇತಿ ಕೇಂದ್ರ ಹಾಸದಲ್ಲಿ ಚಾಲಕರ ಆಯ್ಕೆ ಯನ್ನು ಮಾಡಿರುತ್ತಾರೆ. ಇದರಲ್ಲಿ ಟ್ರಸ್ಟ್ ಮೂಲಕ ತರಬೇತಿ ಪಡಕೊಂಡ ೪೬ ಮಂದಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಠೆಯ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರಾಗಿ ಆಯ್ಕೆಯಾಗಿರುತ್ತಾರೆ.


ನಮ್ಮ ಜನರಿಗೆ ಕೆಎಸ್‌ಆರ್‌ಟಿಸಿಯಲ್ಲಿ ಹುದ್ದೆ ದೊರೆಯಬೇಕೆಂಬ ಉದ್ದೇಶದಿಂದ ನಾನು ಚಾಲಕ ಹುದ್ದೆಗೆ ಅರ್ಜಿ ಹಾಕುವಂತೆ ಪತ್ರಿಕೆಯಲ್ಲಿ ಜಾಹಿರಾತು ನೀಡಿ, ಹುದ್ದೆ ಆಕಾಂಕ್ಷಿಗಳನ್ನು ಆಯ್ಕೆ ಮಾಡಿ ಅವರನ್ನು ತನ್ನ ಸ್ವಂತ ಖರ್ಚಿನಲ್ಲೇ ಹಾಸಕನಕ್ಕೆ ಕರೆದೊಯ್ದು ಚಾಲನಾ ತರಬೇತಿಯನ್ನು ಕೊಡಿಸಿದ್ದು ಮೊದಲ ಆಯ್ಕೆ ಪ್ರಕ್ರಿಯೆಯಲ್ಲಿ ೪೬ ಮಂದಿ ಚಾಲಕ ಹುದ್ದೆಗೆ ನೇಮಕವಾಗಿದ್ದಾರೆ.


ಸರಕಾರಿ ಹುದ್ದೆಗೆ ಈ ಭಾಗದವರು ಅರ್ಜಿ ಹಾಕುವುದು ಬಹಳ ಕಡಿಮೆ. ನಮ್ಮವರಿಗೂ ಸರಕಾರಿ ಹುದ್ದೆ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ನಾನು ಶಾಸನೆಂಬ ನೆಲೆಯಲ್ಲಿ ಪ್ರಯತ್ನ ಪಟ್ಟಿದ್ದೆ ಅದಕ್ಕೆ ಪೂರಕ ಎಂಬಂತೆ ಚಾಲಕರು ಸಹಕಾರ ನೀಡಿದ್ದು ಇದೀಗ ೪೭ ಮಂದಿಗೆ ಉದ್ಯೋಗ ಲಭಿಸಿದ್ದು ನನಗೆ ಅತೀವ ಸಂತೋಷವನ್ನು ತಂದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಬಿಜೆಪಿ ಎರಡನೇ ಪಟ್ಟಿ ಇಂದೇ ಬಿಡುಗಡೆ- ಯಡಿಯೂರಪ್ಪ

Posted by Vidyamaana on 2023-04-12 11:35:12 |

Share: | | | | |


ಬಿಜೆಪಿ ಎರಡನೇ ಪಟ್ಟಿ ಇಂದೇ ಬಿಡುಗಡೆ- ಯಡಿಯೂರಪ್ಪ

ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಪಕ್ಷ ಟಿಕೆಟ್ ಸಿಗುವುದು ಖಚಿತ ಎಂದು ಮಾಜಿ ಸಿಎಂ ಬಿ.ಎಸ್​​.ಯಡಿಯೂರಪ್ಪ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ಟಿಕೆಟ್​ ಹಂಚಿಕೆಯಲ್ಲಿ 2-3 ಕಡೆ ಗೊಂದಲ ಇದೆ ಅಷ್ಟೇ. ಉಳಿದ ಎಲ್ಲಾ ಕಡೆ ಒಳ್ಳೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೈಕಮಾಂಡ್ ಮಂಗಳವಾರ ಪ್ರಕಟಿಸಿದೆ. ಉಳಿದ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ರಾತ್ರಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಹತ್ತಾರು ಬಾರಿ ಯೋಚನೆ ಮಾಡಿಯೇ ಅಭ್ಯರ್ಥಿಗಳ ಘೋಷಣೆ ಮಾಡಲಾಗಿವುದು.ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿಗೆ ಪಕ್ಷ ಎಲ್ಲ ಸ್ಥಾನಮಾನವೂ ಕೊಟ್ಟರೂ ಈ ರೀತಿ ತೀರ್ಮಾನ ಮಾಡಿದ್ದಾರೆ. ಒಂದಿಬ್ಬರು ಬೇರೆ ಕಡೆ ಹೋಗಬಹುದು. ಆದರೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಈ ಬಾರಿ 125 – 130 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಿಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

Posted by Vidyamaana on 2023-04-17 09:01:08 |

Share: | | | | |


ಬೆಳ್ತಂಗಡಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಬೆಳ್ತಂಗಡಿ: ಬೆಳ್ತಂಗಡಿ ಸಂತೆಕಟ್ಟೆ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಾರಿನ ಗಾಜು ಹುಡಿ ಮಾಡಿದ ಘಟನೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ನಾಮಪತ್ರ ಸಲ್ಲಿಸಿ ತೆರಳುತ್ತಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ನಾಮಪತ್ರ ಸಲ್ಲಿಸಲು ಆಗಮಿಸುತ್ತಿದ್ದರು.ಉಭಯ ತಂಡದಲ್ಲಿಯೂ ಸಾವಿರಾರು ಕಾರ್ಯಕರ್ತರು ಇದ್ದರು.ಈ ವೇಳೆ ಜೈ ಬಿಜೆಪಿ, ಜೈ ಕಾಂಗ್ರೆಸ್ ಘೋಷಣೆ ಮೊಳಗಿದ್ದು ಪರಸ್ಪರ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದು ಬಂದಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ.

ವಿಟ್ಲದಲ್ಲಿ ಇತಿಹಾಸ ನಿರ್ಮಿಸಿದ ರೋಡ್ ಶೋ

Posted by Vidyamaana on 2023-05-04 15:23:10 |

Share: | | | | |


ವಿಟ್ಲದಲ್ಲಿ ಇತಿಹಾಸ ನಿರ್ಮಿಸಿದ ರೋಡ್ ಶೋ

ವಿಟ್ಲ: ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರವಾಗಿ ವಿಟ್ಲದಲ್ಲಿ ಬೃಹತ್ ರೋಡ್ ಶೋ ನಡೆಯಿತು. 

ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹನಟಿ ವಿದ್ಯಾ ಬರ್ಬರ ಕೊಲೆ

Posted by Vidyamaana on 2024-05-21 14:28:01 |

Share: | | | | |


ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಹನಟಿ ವಿದ್ಯಾ ಬರ್ಬರ ಕೊಲೆ

ಮೈಸೂರು: ಪತಿಯೇ ಪತ್ನಿಯನ್ನು (Husband and Wife) ಬರ್ಬರವಾಗಿ ಕೊಲೆ (Murder Case) ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರದ ತುರಗನೂರು ಗ್ರಾಮದಲ್ಲಿ ನಡೆದಿದೆ. ಮೈಸೂರು (Mysuru) ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿದ್ಯಾ ಕೊಲೆಯಾದ ದುರ್ದೈವಿಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಗಂಡನೇ ವಿದ್ಯಾಳ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮೃತ ವಿದ್ಯಾ ಅವರು ಭಜರಂಗಿ, ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲೂ ಸಕ್ರೀಯವಾಗಿದ್ದರು. ಸೋಮವಾರ ರಾತ್ರಿ ಗಂಡ ಹಾಗೂ ಪತ್ನಿ ನಡುವೆ ಜಗಳ ನಡೆದಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿ ಹತ್ಯೆ ಪತಿ ನಂದೀಶ್ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಉಪ್ಪಿನಂಗಡಿ : ಶಿರಾಡಿ ಘಾಟಿಯಲ್ಲಿ ಅಕ್ಕಿ ಸಾಗಟದ ಲಾರಿಗೆ ಬೆಂಕಿ - ಲಕ್ಷಾಂತರ ನಷ್ಟ

Posted by Vidyamaana on 2023-10-21 12:35:31 |

Share: | | | | |


ಉಪ್ಪಿನಂಗಡಿ : ಶಿರಾಡಿ ಘಾಟಿಯಲ್ಲಿ ಅಕ್ಕಿ ಸಾಗಟದ ಲಾರಿಗೆ ಬೆಂಕಿ -  ಲಕ್ಷಾಂತರ  ನಷ್ಟ

ಉಪ್ಪಿನಂಗಡಿ : ಹಾಸನ ಕಡೆಯಿಂದ ಮಂಗಳೂರಿಗೆ ಅಕ್ಕಿಸಾಗಾಟ ಮಾಡುತ್ತಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ (Shir

non

i Ghat) ಸಂಭವಿಸಿದೆ.ಶಿರಾಡಿ ಘಾಟ್ ನ ಡಬಲ್ ಟರ್ನ್ ನಲ್ಲಿ ಟ್ರಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Seemore ವಿಡಿಯೋ ನೋಡಲು ಕ್ಲಿಕ್ ಮಾಡಿ 

ಉಪ್ಪಿನಂಗಡಿ : ಶಿರಾಡಿ ಘಾಟಿಯಲ್ಲಿ ಅಕ್ಕಿ ಸಾಗಟದ ಲಾರಿಗೆ ಬೆಂಕಿ - ಲಕ್ಷಾಂತರ ನಷ್ಟ


ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಲಾರಿ ಚಾಲಕ ಹಾಗೂ ಕ್ಲೀನರ್, ಲಾರಿಯನ್ನು ನಿಲ್ಲಿಸಿ ಕೆಳಗಿಳಿದು ಪಾರಾಗಿದ್ದಾರೆ.ಲಾರಿ ಹಾಗೂ ಅದರಲ್ಲಿದ್ದ ಅಕ್ಕಿ ಸಂಪೂರ್ಣ ಸುಟ್ಟು ಹೋಗಿದೆ. ಹಾಸನದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಆದರೂ ಲಾರಿ ಅಕ್ಕಿ ಸಮೇತ ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಕೆಲ ಹೊತ್ತು ಅಡಚಣೆ

ಉಂಟಾಗಿತ್ತು ಎಂದು ತಿಳಿದುಬಂದಿದೆ.



Leave a Comment: