ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಯಶಶ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮುಂದುವರೆಸಿ

Posted by Vidyamaana on 2023-06-11 14:59:30 |

Share: | | | | |


ಯಶಶ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮುಂದುವರೆಸಿ

ಪುತ್ತೂರು: ಆರೋಗ್ಯ ತುರ್ತು ಸಂದರ್ಭದಲ್ಲಿ ಬಡವರಿಗೆ ವರದಾನವಾಗಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಹಿಂದಿನ ಸರಕಾರ ನಿಷ್ಕ್ರೀಯಗೊಳಿಸಿದ್ದು ಅದನ್ನು ಮುಂದುವರೆಸುವಂತೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಪುತ್ತೂರು ಶಾಸಕರಾದ ಅಶೋಕ್ ರೈ ಮನವಿ ಮಾಡಿದ್ದಾರೆ.


 ಗ್ರಾಮೀಣ ಪ್ರದೇಶಗಳ ಸಹಾಕಾರಿ ಸಂಘಗಳ ಸದಸ್ಯರು, ಸ್ತ್ರೀ ಶಕ್ತಿ ಗುಂಪು ಸ್ವ-ಸಹಾಯ ಸಂಘ ಸದಸ್ಯರು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಸಹಕಾರಿ ಸಂಘ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣಕಾಸಿನ ವಹಿವಾಟು ಹೊಂದಿರುವ ಸ್ವ-ಸಹಾಯ ಗುಂಪಿನ ಸದಸ್ಯರು ಈ ಯೋಜನೆಗೆ ಒಳಪಡುತ್ತಾರೆ. ಈ ಯೋಜನೆಯಲ್ಲಿ ಹಲವಾರು ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಳು ಒಳಗೊಂಡಿರತ್ತದೆ, ಈ ಹಿಂದೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಗಳಿಗೆ ಸರ್ಕಾರದಿಂದ ಮೊತ್ತ ಪಾವತಿಯಾಗದಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ  ಯೋಜನೆಯನ್ನು ನಿಷ್ಕ್ರೀಯಗೊಳಿಸಿರುತ್ತಾರೆ, ಪುತ್ತೂರು  ತಾಲೂಕಿನ ಯಾವ ಆಸ್ಪತ್ರೆಯು ಈ ಯೋಜನೆಯಲ್ಲಿ ಒಳಗೊಂಡಿರುವುದಿಲ್ಲ. ಯಶಸ್ವಿನಿ ಆರೋಗ್ಯ ಯೋಜನೆಯು ಬಡವರ ಪಾಲಿಗೆ ಅತೀ  ಅಮೂಲ್ಯವಾದ ಉಚಿತ ಆರೋಗ್ಯ ಯೋಜನೆಯಾಗಿರುವುದರಿಂದ ದಕ್ಷಿಣಕನ್ನಡ ಜಿಲ್ಲೆ ಹಾಗೂ ಪುತ್ತೂರಿನ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರಾರಂಭಿಸುವಂತೆ ಉಸ್ತುವಾರಿ ಸಚಿವರ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.

ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಸಿಟಿ ಬಸ್ ಚಾಲಕ

Posted by Vidyamaana on 2023-12-20 09:53:04 |

Share: | | | | |


ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಸಿಟಿ ಬಸ್ ಚಾಲಕ

ಮಂಗಳೂರು : ಸಿಟಿ ಬಸ್ ಚಾಲಕನೊಬ್ಬ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಮೃತರನನ್ನು ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಎಂದು ಗುರುತಿಸಲಾಗಿದೆಇವರು ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಇವರು, ಇಂದು ನಸುಕಿನ ಜಾವ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ ಬೈಕನ್ನು ಇಟ್ಟು ಟವಲೊಂದರಲ್ಲಿ ಬೈಕ್ ಕೀ, ಪರ್ಸ್‌ ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಅವಿವಾಹಿತರಾಗಿರುವ ಜಗದೀಶ್ ಅವರ ಪಸ್೯ನಲ್ಲಿ ಚಿನ್ನ ಅಡವಿಟ್ಟ ಚೀಟಿ, ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ ಚೀಟಿಗಳು ಪತ್ತೆಯಾಗಿವೆ.

ಕೇರಳ : 10 ಕೋಟಿ ರೂ. ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಣ್ಣೂರಿನ ಆಟೋ ಚಾಲಕ ನಾಸರ್

Posted by Vidyamaana on 2024-03-28 08:35:27 |

Share: | | | | |


ಕೇರಳ : 10 ಕೋಟಿ ರೂ. ಲಾಟರಿ ಗೆದ್ದು ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಕಣ್ಣೂರಿನ ಆಟೋ ಚಾಲಕ ನಾಸರ್

ಕೇರಳ:ಅದೃಷ್ಟ ಯಾವಾಗ, ಹೇಗೆ ಒಲಿಯುತ್ತೆ ಅಂತ ಹೇಳೋಕೆ ಆಗೊಲ್ಲ. ಈ ಅದೃಷ್ಟದ ಕಾರಣದಿಂದಲೇ ರಾತ್ರೋರಾತ್ರಿ ಶ್ರೀಮಂತರಾದವರನ್ನು ನೀವು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇದೀಗ ಕೇರಳದ ಆಟೋ ಚಾಲಕರೊಬ್ಬರಿಗೆ ಬಂಪರ್ ಅದೃಷ್ಟ ಒಳಿದಿದ್ದು, ನಿನ್ನೆ ರಾತ್ರಿಯಷ್ಟೇ ಅವರು ಲಾಟರಿ ಟಿಕೆಟ್ ಖರೀದಿಸಿದ್ದು, ಇಂದು 10 ಕೋಟಿ ಬಂಪರ್ ಲಾಟರಿ ಗೆಲ್ಲುವ ಮೂಲಕ ಕೋಟ್ಯಾಧಿಪತಿಯಾಗಿದ್ದಾರೆ.ಕೇರಳದ ಕಣ್ಣೂರಿನ ಆಳಕೋಡ್ ನಿವಾಸಿ ನಾಸರ್ ಅವರು 10 ಕೋಟಿ ರೂ. ಬಂಪರ್ ಲಾಟರಿ ಗೆದ್ದಿದವರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ನಾಸರ್ ಇದೀಗ ಬಂಪರ್ ಲಾಟರಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ.


ಕೇರಳದ ಕಾರ್ತಿಕಪುರದ ರಾರರಾಜೇಶ್ವರಿ ಲಾಟರಿ ಏಜನ್ಸಿಯಿಂದ ನಾಸರ್ ಲಾಟರಿ ಟಿಕೆಟ್ ಖರೀಸಿದ್ದು, ಅವರ ಅದೃಷ್ಟ ಖುಲಾಯಿಸಿ ಈ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಹಣವನ್ನು ಗೆದ್ದಿದ್ದಾರೆ.

ಕಾರ್ತಿಕಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುವ ನಾಸರ್ ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು ಎಂದು ಲಾಟರಿ ಏಜೆಂಟ್ ರಾಜು ಹೇಳಿದ್ದಾರೆ. ಇದೀಗ ಟಿಕೆಟ್ ಖರೀದಿ ಮಾಡಿದ ಮರು ದಿನವೇ ನಾಸರ್ ಅವರಿಗೆ 10. ಕೋಟಿ ರೂ. ಗಳ ಬಂಪರ್ ಲಾಟರಿ ಸಿಕ್ಕಿದ್ದು,  ಈ ಸುದ್ದಿಯನ್ನು ಕೇಳಿ ಅದೃಷ್ಟ ಅಂದ್ರೆ ಇದಪ್ಪಾ ಎಂದು ನೆಟ್ಟಿಗರು ಹೇಳಿದ್ದಾರೆ.

ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವೈದ್ಯಕೀಯ ಶಿಬಿರದ ರೂವಾರಿ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯರಿಗೆ ರಾಷ್ಟ್ರ ಪ್ರಶಸ್ತಿ

Posted by Vidyamaana on 2024-01-26 04:02:27 |

Share: | | | | |


ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವೈದ್ಯಕೀಯ ಶಿಬಿರದ ರೂವಾರಿ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯರಿಗೆ ರಾಷ್ಟ್ರ ಪ್ರಶಸ್ತಿ

ಪುತ್ತೂರು:ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತಿ ತಿಂಗಳು ನಡೆಸುತ್ತಿರುವ ಉಚಿತ ವೈದ್ಯಕೀಯ ಶಿಬಿರವು ಇದೀಗ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ.



ಶಿಬಿರದ ಮೂಲಕ ಮಧುಮೇಹ ತಪಾಸಣೆಯಲ್ಲಿ ನೀಡಿದ ಅದ್ವಿತೀಯ ಸೇವೆ ಹಾಗೂ ಜನರಲ್ಲಿ ಆರೋಗ್ಯ ಜಾಗೃತಿಗಾಗಿ ಈ ಶಿಬಿರದ ರೂವಾರಿಯಾಗಿರುವ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಖ್ಯಾತ ವೈದ್ಯರಾಗಿರುವ ಡಾ.ಸುರೇಶ್ ಪುತ್ತೂರಾಯ ಅವರು ಮಧುಮೇಹ ಜಾಗೃತಿ ಉಪಕ್ರಮ ರಾಷ್ಟ್ರ ಪ್ರಶಸ್ತಿ (Diabetes Awareness Initiative Award- 2024)ಗೆ ಭಾಜನರಾಗಿದ್ದಾರೆ.ಜ.25ರಂದು ಒಡಿಸ್ಸಾದ ಭುವನೇಶ್ವರದಲ್ಲಿ ನಡೆದ ಡಯಾಬಿಟೀಸ್ ಇಂಡಿಯಾ 14ನೇ ವಿಶ್ವ ಸಮ್ಮೇಳನದಲ್ಲಿ ಡಾ.ಸುರೇಶ್ ಪುತ್ತೂರಾಯ ಅವರು ಪ್ರಶಸ್ತಿ ಸ್ವೀಕರಿಸಿದರು.

ಬೆಂಗಳೂರಿನ ಕಾಫಿ ಶಾಪ್ ವಾಶ್ ರೂಂನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್‌: ಆರೋಪಿ ಮನೋಜ್ ಅರೆಸ್ಟ್

Posted by Vidyamaana on 2024-08-11 23:11:23 |

Share: | | | | |


ಬೆಂಗಳೂರಿನ ಕಾಫಿ ಶಾಪ್ ವಾಶ್ ರೂಂನಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್‌: ಆರೋಪಿ ಮನೋಜ್ ಅರೆಸ್ಟ್

ಬೆಂಗಳೂರು: ಕೆಫೆಯ ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಮೊಬೈಲ್ ಇಟ್ಟಿದ್ದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ.

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಸಾವಿಗೆ ಶರಣು

Posted by Vidyamaana on 2023-08-17 05:46:19 |

Share: | | | | |


ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಸಾವಿಗೆ ಶರಣು

ಮಂಗಳೂರು: ಮಗನ ಸಾವಿನಿಂದ ಮನನೊಂದು ಸಮುದ್ರಕ್ಕೆ ಹಾರಿ ಮೃತಪಟ್ಟ ಕಾಸರಗೋಡು ಜಿಲ್ಲೆಯ ಕುಂಬಳೆ ಬಂಬ್ರಾಣ ನಿವಾಸಿಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇವರ ಸಾವಿಗೆ ಪತ್ನಿಯ ಅನೈತಿಕ ಸಂಬಂಧ ಪ್ರಕರಣವೇ ಕಾರಣ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಮೃತ ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ದೂರು ನೀಡಿರುವುದು ಮತ್ತು ಇವರ ಅಣ್ಣ ಸುಧಾಕರ ಉಳ್ಳಾಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  


ಕುಂಬಳೆಯ ಬಂಬ್ರಾಣ ನಿವಾಸಿಯಾಗಿದ್ದ ಲೋಕೇಶ್ ತನ್ನ ಪತ್ನಿ ಪ್ರಭಾವತಿ ಮತ್ತು ಆಕೆಯ ಪ್ರಿಯಕರ ಎನ್ನಲಾದ ಸಂದೀಪ್ ಆರಿಕ್ಕಾಡಿ ಎಂಬಾತನ ವಿರುದ್ಧ ಕಾಸರಗೋಡು ಎಸ್ಪಿ ಕಚೇರಿಗೆ ಆಗಸ್ಟ್ 11ರಂದು ದೂರು ನೀಡಿದ್ದಾರೆ. ತನ್ನ ಮಗ ರಾಜೇಶ್ ಸಾವಿಗೆ ಇವರ ಅಕ್ರಮ ಸಂಬಂಧ ಮತ್ತು ಅದರ ವಿಚಾರದಲ್ಲಿ ನಡೆದಿದ್ದ ಗಲಾಟೆಯೇ ಕಾರಣ. ತಾಯಿ ಜೊತೆಗೆ ಸಂದೀಪ್ ಅಕ್ರಮ ಸಂಬಂಧ ಹೊಂದಿರುವುದನ್ನು ರಾಜೇಶ್ ಆಕ್ಷೇಪಿಸಿದ್ದು, ಅದಕ್ಕೆ ಪ್ರತಿಯಾಗಿ ಸಂದೀಪ್ ಬೆದರಿಕೆ ಹಾಕಿದ್ದ. ಇದರಿಂದ ನೊಂದು ರಾಜೇಶ್ ಉಳ್ಳಾಲಕ್ಕೆ ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿದ್ದ. ಈ ಬಗ್ಗೆ ಪ್ರಭಾವತಿ ಮತ್ತು ಆಕೆಯ ತಂಗಿ ಬೇಬಿ ಹಾಗೂ ಪ್ರಿಯಕರ ಸಂದೀಪ್ ಆರಿಕ್ಕಾಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ನೀಡಿದ್ದ ದೂರಿನಲ್ಲಿ ಒತ್ತಾಯಿಸಿದ್ದರು.


ಜುಲೈ 10ರಂದು ಲೋಕೇಶ್(51) ಅವರ ಮಗ ರಾಜೇಶ್(26) ಉಳ್ಳಾಲ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಶವದ ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆ ಬಳಿಕ ಪ್ರಭಾವತಿ ಗಂಡನ ಮನೆ ತೊರೆದು ತನ್ನ ತಂಗಿಯ ಮನೆಯಲ್ಲಿ ಸೇರಿದ್ದರೆ, ಇತ್ತ ಲೋಕೇಶ್ ತನ್ನ ಸೋದರ ಸುಧಾಕರ್ ಅವರ ತೊಕ್ಕೊಟ್ಟಿನ ಮನೆಯಲ್ಲಿ ವಾಸ ಮಾಡಲಾರಂಭಿಸಿದ್ದರು. ತನ್ನ ಮಗನ ಸಾವಿನಿಂದ ತೀವ್ರ ನೊಂದುಕೊಂಡಿದ್ದ ಲೋಕೇಶ್, ತನ್ನ ಗೆಳೆಯರಿಗೆ ಪತ್ನಿಯ ಕಿರುಕುಳ, ಕೆಟ್ಟ ನಡತೆಯ ಬಗ್ಗೆ ಹೇಳಿಕೊಂಡಿದ್ದರು. ಮೊನ್ನೆ ಆಗಸ್ಟ್ 14ರಂದು ಇಷ್ಟೆಲ್ಲ ಆದಮೇಲೆ ಅಂತಹ ಪತ್ನಿಯೊಂದಿಗೆ ವಾಸ ಮಾಡಲು ಸಾಧ್ಯವಾಗದು. ಆಕೆಯ ಮುಖವನ್ನೂ ನೋಡುವುದಿಲ್ಲ. ನನ್ನ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಸಿಗಬಹುದು ಎಂದು ತನ್ನ ಗೆಳೆಯರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು ಫೋನನ್ನು ಸೋದರನ ತೊಕ್ಕೊಟ್ಟಿನ ಮನೆಯಲ್ಲಿಟ್ಟು ತೆರಳಿದ್ದರು. ವಾಯ್ಸ್ ಕೇಳಿದ ಗೆಳೆಯರು ಕೂಡಲೇ ಫೋನ್ ಮಾಡಿದ್ದು, ಫೋನನ್ನು ಮನೆಯಲ್ಲಿ ಬಿಟ್ಟು ಲೋಕೇಶ್ ತೆರಳಿರುವುದು ಗೊತ್ತಾಗಿತ್ತು.


ಇತ್ತ ಗೆಳೆಯರು ಮತ್ತು ಸೋದರ ಉಳ್ಳಾಲದಲ್ಲಿ ಹುಡುಕಾಡುತ್ತಿದ್ದಂತೆ, ಅದೇ ದಿನವೇ ಲೋಕೇಶ್ ಮೃತದೇಹ ಉಳ್ಳಾಲ ಸಮುದ್ರದಲ್ಲಿ ಪತ್ತೆಯಾಗಿತ್ತು. ಮೃತರ ಸೋದರ ಸುಧಾಕರ ಮತ್ತು ಲೋಕೇಶ್ ಅವರ ಇನ್ನೊಬ್ಬ ಮಗ ಶುಭಂ ತಂದೆಯದ್ದೇ ಶವ ಎಂದು ಗುರುತಿಸಿದ್ದಾರೆ. ಸುಧಾಕರ ಅವರು ಉಳ್ಳಾಲ ಠಾಣೆಗೆ ನೀಡಿರುವ ದೂರಿನಲ್ಲಿ ಪ್ರಭಾವತಿ, ಸಂದೀಪ್ ಆರಿಕ್ಕಾಡಿ, ಶುಭಂ, ಬೇಬಿ ಎಂಬವರ ಹೆಸರನ್ನು ಉಲ್ಲೇಖಿಸಿದ್ದು ಇವರ ಚಿತಾವಣೆಯಿಂದಲೇ ನನ್ನ ತಮ್ಮ ಲೋಕೇಶ್ ಸಾವಿಗೆ ಶರಣಾಗಿದ್ದಾರೆಂದು ತಿಳಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ



Leave a Comment: