ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

ಸುದ್ದಿಗಳು News

Posted by vidyamaana on 2024-07-24 22:11:50 |

Share: | | | | |


ಶಿರೂರು ದುರಂತ: ಮಾನವೀಯ ನೆರವು ನೀಡಿದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿ

‌ಮಂಗಳೂರು: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟಿದ್ದ ವೃದ್ಧೆಯ ಅಂತ್ಯ ಸಂಸ್ಕಾರಕ್ಕೆ ಮಾನವೀಯತೆ ನೆಲೆಯಲ್ಲಿ ನೆರವು ನೀಡಿದ್ದ ಮಂಗಳೂರಿನ ಪತ್ರಕರ್ತರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ತಮ್ಮ ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದರು.ಶಿರೂರು ಗುಡ್ಡ ದುರಂತದಲ್ಲಿ ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆಯ ಮೃತದೇಹ 8 ದಿನಗಳ ಬಳಿಕ ಮಂಗಳವಾರ ಸಿಕ್ಕಿದ್ದು ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮನೆಯಿದ್ದ ಜಾಗಕ್ಕೆ ಸಾಗಿಸಿ ಅಂತಿಮ ಸಂಸ್ಕಾರ ನಡೆಸಲು ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್, ಆರಿಫ್ ಯು.ಆರ್. ಗಿರೀಶ್ ಮಳಲಿ ಹಾಗೂ ಶಿವಶಂಕರ್ ನೆರವಾಗಿದ್ದರು

ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಂದ ಪತ್ರಕರ್ತರ ಮಾಹಿತಿ ಪಡೆದು ಕಚೇರಿಯಲ್ಲಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಅವರು ಜಿಲ್ಲಾಧಿಕಾರಿಯವರಿಗೆ ಪತ್ರಕರ್ತರ ಪರಿಚಯ ಮಾಡಿಕೊಟ್ಟರು.


ಬಳಿಕ ಮಾತಾಡಿದ ಜಿಲ್ಲಾಧಿಕಾರಿ ಅವರು, ನಿಮ್ಮ ಈ ಕಾರ್ಯ ಶ್ಲಾಘನೀಯವಾಗಿದೆ. ಇದೊಂದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆ ತರುವಂತಹ ಕಾರ್ಯ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ, ಏನಾದರೂ ಅಗತ್ಯ ನೆರವು ಬೇಕಾದಲ್ಲಿ ಜಿಲ್ಲಾಡಳಿತ ನಿಮ್ಮ ಜೊತೆಗಿದೆ. ನಿಮ್ಮಂತಹ ಉತ್ಸಾಹಿ ತರುಣರ ಅವಶ್ಯಕತೆ ಸಮಾಜಕ್ಕೆ ಇದೆ ಎಂದು ಬೆನ್ನುತಟ್ಟಿದರು. ಅಲ್ಲದೇ ಶಿರೂರು ಮತ್ತು ಉಳುವರೆ ಗ್ರಾಮದ ಸದ್ಯದ ಸ್ಥಿತಿಗತಿಯ ಬಗ್ಗೆ ಪತ್ರಕರ್ತರಿಂದ ಮಾಹಿತಿ ಪಡೆದರು

 Share: | | | | |


ಬಂಟ್ವಾಳ: ಪಲ್ಟಿಯಾಗಿ ಗದ್ದೆಗೆ ಬಿದ್ದ ಖಾಸಗಿ ಬಸ್

Posted by Vidyamaana on 2024-07-16 08:19:28 |

Share: | | | | |


ಬಂಟ್ವಾಳ: ಪಲ್ಟಿಯಾಗಿ ಗದ್ದೆಗೆ ಬಿದ್ದ ಖಾಸಗಿ ಬಸ್

ಬಂಟ್ವಾಳ : ಬಿ.ಸಿ.ರೋಡು - ಸರಪಾಡಿ ಮಧ್ಯೆ ಸಂಚರಿಸುವ ಖಾಸಗಿ ಬಸ್ ಅಜಿಲಮೊಗರು- ಸರಪಾಡಿ ರಸ್ತೆಯ ಮಣಿನಾಲ್ಕೂರು ಗ್ರಾಮದ ಕೊಟ್ಟುಂಜ ಎಂಬಲ್ಲಿ ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ.

ಭಾರೀ ಮಳೆಯಿಂದ ಮುಖ್ಯ ರಸ್ತೆ ಹದಗೆಟ್ಟಿದ್ದು, ಬಸ್‌ ಒಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಭಾರತ್ ಅಕ್ಕಿ ಪಡೆಯಲು ಮುಗಿ ಬಿದ್ದ ಜನರು; ಕೆಲವೇ ಕ್ಷಣಗಳಲ್ಲಿ ಖಾಲಿಯಾದ ಕ್ಯಾಂಟರ್

Posted by Vidyamaana on 2024-02-07 07:21:02 |

Share: | | | | |


ಭಾರತ್ ಅಕ್ಕಿ ಪಡೆಯಲು ಮುಗಿ ಬಿದ್ದ ಜನರು; ಕೆಲವೇ ಕ್ಷಣಗಳಲ್ಲಿ ಖಾಲಿಯಾದ ಕ್ಯಾಂಟರ್

ಕೋಲಾರ, ಫೆ.07: ಭಾರತ್ ಅಕ್ಕಿ(bharat brand rice) ಪಡೆಯಲು ಜನರು ಮುಗಿಬಿದ್ದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ(Bangarapet) ಪಟ್ಟಣದ ಬಸ್ ನಿಲ್ದಾಣದ ಬಳಿ ಕಂಡುಬಂದಿದೆ. ಒಬ್ಬೊಬ್ಬರು ಎರಡು ಮೂರು ಬ್ಯಾಗ್ ಅಕ್ಕಿ ಖರೀದಿ ಮಾಡಿದ್ದಾರೆ. ಹತ್ತು ಕೆ.ಜಿ ತೂಕದ ಬ್ಯಾಗ್​ಗಳನ್ನು ಕ್ಯಾಂಟರ್ ವಾಹನದಲ್ಲಿ ತುಂಬಿಕೊಂಡು ಬಂದು ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ನೋಡ‌ ನೋಡುತ್ತಲೇ ಭಾರತ್ ಅಕ್ಕಿ ಪಡೆಯಲು ಜನರ ನೂಕು ನುಗ್ಗಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಕ್ಯಾಂಟರ್ ಖಾಲಿಯಾಗಿದೆ.

BREAKING NEWS: ಮತ್ತೆ ಹುಚ್ಚಾಟ ಮೆರೆದ ಪೃಥ್ವಿರಾಜ್: ತಾಲೂಕು ಕಚೇರಿ ಬಳಿ ತಹಶೀಲ್ದಾರ್ ಜೀಪ್ ಗೆ ಬೆಂಕಿಯಿಟ್ಟ ಕಿಡಿಗೇಡಿ

Posted by Vidyamaana on 2024-09-05 14:15:21 |

Share: | | | | |


BREAKING NEWS: ಮತ್ತೆ ಹುಚ್ಚಾಟ ಮೆರೆದ ಪೃಥ್ವಿರಾಜ್: ತಾಲೂಕು ಕಚೇರಿ ಬಳಿ ತಹಶೀಲ್ದಾರ್ ಜೀಪ್ ಗೆ ಬೆಂಕಿಯಿಟ್ಟ ಕಿಡಿಗೇಡಿ

ಚಿತ್ರದುರ್ಗ: ಕೆಲ ದಿನಗಳ ಹಿಂದೆ ವಿಡಿಯೋ ಹರಿಬಿಟ್ಟು ಬಾಂಬ್ ಬೆದರಿಕೆ ಹಾಕಿದ್ದ, ವಿಧಾನಸೌಧದ ಬಳಿ ಬೈಕ್ ಗೆ ಬೆಂಕಿ ಇಟ್ಟಿದ್ದ ಕಿಡಿಗೇಡಿ ಪೃಥ್ವಿರಾಜ್ ಇದೀಗ ಮತ್ತೆ ಹುಚ್ಚಾಟ ಮೆರೆದಿದ್ದಾನೆ.ತಹಶೀಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕಚೇರಿ ಬಳಿ ಪೃಥ್ವಿರಾಜ್, ತಹಶೀಲ್ದಾರ್ ಜೀಪ್ ಗೆ ಬೆಂಕಿ ಹಚ್ಚಿದ್ದಾನೆ.

ಬಂಟ್ವಾಳ :ಮಂಚಿಯಲ್ಲಿ ಆ್ಯಕ್ಟೀವಾಗೆ ಹಿಟ್ ಆ್ಯಂಡ್ ರನ್ ಪುತ್ತೂರಿನ ನೆಹರುನಗರ ನಿವಾಸಿ ಚಿದಾನಂದ ಕಾಮತ್ ಸ್ಥಳದಲ್ಲೇ ಮೃತ್ಯು

Posted by Vidyamaana on 2024-05-20 15:33:02 |

Share: | | | | |


ಬಂಟ್ವಾಳ :ಮಂಚಿಯಲ್ಲಿ ಆ್ಯಕ್ಟೀವಾಗೆ ಹಿಟ್ ಆ್ಯಂಡ್ ರನ್  ಪುತ್ತೂರಿನ ನೆಹರುನಗರ ನಿವಾಸಿ ಚಿದಾನಂದ ಕಾಮತ್ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ಕಾರೊಂದು ಆ್ಯಕ್ಟೀವಾಗೆ ಡಿಕ್ಕಿ‌ ಹೊಡೆದು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ ಆ್ಯಕ್ಟೀವಾ ಸವಾರ, ಪುತ್ತೂರಿನ ನೆಹರುನಗರ ರಕ್ತೇಶ್ವರಿ ಗುಡಿಯ ಹಿಂಬದಿ ನಿವಾಸಿ, ನಿವೃತ್ತ ಸೈನಿಕ ಚಿದಾನಂದ್ ಕಾಮತ್ (55) ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ.

ಮಾರ್ಚ್ 24ರಂದು ಆಶ್ಲೇಷ ಬಲಿ, ಧಾರ್ಮಿಕ ಸಭೆ

Posted by Vidyamaana on 2023-03-21 07:26:17 |

Share: | | | | |


ಮಾರ್ಚ್ 24ರಂದು ಆಶ್ಲೇಷ ಬಲಿ, ಧಾರ್ಮಿಕ ಸಭೆ

ಪುತ್ತೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟ ಬೊಳುವಾರಿನ ಸ್ಥಳದಲ್ಲಿ ಮಾರ್ಚ್ 24ರಂದು ಜನಜಾಗೃತಿ ಸಭೆ, ಆಶ್ಲೇಷ ಬಲಿ, ಧಾರ್ಮಿಕ ಸಭೆ, ಅರ್ಧ ಏಕಾಹ ಭಜನೆ ನಡೆಯಲಿದೆ ಎಂದು ಹಿಂಜಾವೇ ಮಂಗಳೂರು ವಿಭಾಗ ಸಹಸಂಚಾಲಕ ಅಜಿತ್ ರೈ ಹೊಸಮನೆ ಹೇಳಿದರು.

ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ೬ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಂಜೆ ೭ಕ್ಕೆ ಜನಜಾಗೃತಿ ಸಭೆ ಆಯೋಜಿಸಲಾಗಿದೆ. ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಕರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ, ಪುತ್ತೂರು ಆದರ್ಶ ಆಸ್ಪತ್ರೆ ವೈದ್ಯ ಡಾ. ಎಂ.ಕೆ. ಪ್ರಸಾದ್ ಭಂಡಾರಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಖಂಡ ವೇದಮೂರ್ತಿ ಕುಂಟಾರು ರವೀಶ ತಂತ್ರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಕಡಬ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾನ್ ಸುಳ್ಳಿ ಮುಖ್ಯ ಅತಿಥಿಯಾಗಿರುವರು ಎಂದರು.

ಮಾರ್ಚ್ 24ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ ನಡೆಯಲಿದೆ. 7 ಗಂಟೆಗೆ ಅರ್ಧ ಏಕಾಹ ಭಜನೆ ಆರಂಭಗೊಳ್ಳಲಿದ್ದು, ಸಂಜೆ 6ಕ್ಕೆ ಆಶ್ಲೇಷ ಬಲಿ ಆರಂಭಗೊಳ್ಳಲಿದೆ. ಸಂಜೆ 7ಕ್ಕೆ ಜನಜಾಗೃತಿ ಸಭೆ ನಡೆಯಲಿದ್ದು, ರಾತ್ರಿ 8ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಲಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಸದಸ್ಯ ಪುಷ್ಪರಾಜ್ ದರ್ಬೆ ಉಪಸ್ಥಿತರಿದ್ದರು.

ಯಾರಾದರೂ ದಯವಿಟ್ಟು ಕಾಪಾಡಿ: ವಯನಾಡಿನಲ್ಲಿ ಮಣ್ಣಿನಡಿ ಸಿಲುಕಿ, ಸಹಾಯಕ್ಕೆ ಅಂಗಲಾಚಿದ ವ್ಯಕ್ತಿ- ವಿಡಿಯೋ ವೈರಲ್

Posted by Vidyamaana on 2024-07-30 17:18:08 |

Share: | | | | |


ಯಾರಾದರೂ ದಯವಿಟ್ಟು ಕಾಪಾಡಿ: ವಯನಾಡಿನಲ್ಲಿ ಮಣ್ಣಿನಡಿ ಸಿಲುಕಿ, ಸಹಾಯಕ್ಕೆ ಅಂಗಲಾಚಿದ ವ್ಯಕ್ತಿ- ವಿಡಿಯೋ ವೈರಲ್

ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ವಯನಾಡ್ ಜಿಲ್ಲೆಯ ಹಲವು ಗ್ರಾಮಗಳು ಭೂಕುಸಿತಕ್ಕೆ ತುತ್ತಾಗಿದ್ದು, ಹಲವರು ಕುಸಿದ ಮನೆಗಳು ಮತ್ತು ಅವಶೇಷಗಳ ರಾಶಿಯಡಿ ಸಿಲುಕಿದ್ದಾರೆ. ನಿವಾಸಿಗಳು ರಕ್ಷಣೆಗಾಗಿ ಮನವಿ ಮಾಡುತ್ತಿದ್ದಂತೆ ಉದ್ರಿಕ್ತ ಫೋನ್ ಕರೆಗಳು ತುರ್ತು ಲೈನ್ ಗಳಲ್ಲಿ ಪ್ರವಾಹದಂತೆ ಹರಿದುಬಂದವು.ವ್ಯಕ್ತಿಯೊಬ್ಬ ಭೂ ಕುಸಿತದ ಪರಿಣಾಮ ಹರಿದುಬಂದ ಮಣ್ಣಿನಡಿ ಸಿಲುಕಿ, ಸಹಾಯಕ್ಕೆ ಅಂಗಲಾಚಿದಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೂರದರ್ಶನ ಪ್ರಸಾರಗಳು ಸಿಕ್ಕಿಬಿದ್ದ ವ್ಯಕ್ತಿಗಳು ಸಹಾಯಕ್ಕಾಗಿ ಅಳುತ್ತಿರುವ ಹೃದಯ ವಿದ್ರಾವಕ ಸಂಭಾಷಣೆಗಳನ್ನು ಪ್ರಸಾರ ಮಾಡಿದವು. ಚೂರಲ್ಮಾಲಾ ಪಟ್ಟಣದ ಮಹಿಳೆಯೊಬ್ಬರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಕುಟುಂಬದ ಸದಸ್ಯರನ್ನು ವಿವರಿಸುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದರು



Leave a Comment: